Showing posts with label ದೊಡ್ಡಪತ್ರೆ/ ಸಾಂಬಾರಬಳ್ಳಿ ತಂಬುಳಿ. Show all posts
Showing posts with label ದೊಡ್ಡಪತ್ರೆ/ ಸಾಂಬಾರಬಳ್ಳಿ ತಂಬುಳಿ. Show all posts

September 23, 2023

ದೊಡ್ಡ ಪತ್ರೆ / ಸಾಂಬಾರ್ಬಳ್ಳಿ / indian borage bajji/ ಬಜ್ಜಿ

ಗಿಡಗಳ ಜತೆ ಸಮಯ ಕಳೆಯುವುದು ತುಂಬಾ ಉಲ್ಲಾಸದಾಯಕ. ಮನಸ್ಸಿಗೆ ಸಮಾಧಾನ ನೀಡುವ ಕಾಯಕ. ಗಿಡಗಳನ್ನು ಸವರುವುದು, ಕಳೆ ಕೀಳುವುದು, ಮರುಪಾತಿ (repotting)ಮಾಡುವುದು...ಸಮಯ ಸರಿದದ್ದೇ ಗೊತ್ತಾಗುವುದಿಲ್ಲ.


ಹೀಗೆ ನಿನ್ನೆ pot ಗಳನ್ನೆಲ್ಲ ವ ಸಲ್ಪ  set ಮಾಡ್ತಾ ಇದ್ದೆ. ಈ ಸಾಂಬಾರಬಳ್ಳಿ ಹೇಗೆ ಅಡ್ಡಾದಿಡ್ಡಿ ಬೆಳೆದಿದೆ ನೋಡಿ. 🙂. ಮೂರು ನಾಲ್ಕು ಪಾಟ್ ಗಳಲ್ಲಿ ಬೆಳೆದಿದ್ದೇನೆ ಈ ಗಿಡವನ್ನು.


ಕೆಮ್ಮು, ನೆಗಡಿ ಯಾದಲ್ಲಿ ಇದರ ಕಷಾಯ, ಹೊಟ್ಟೆ ಬೇನೆಗೆ ಇದರ ತಂಬ್ಳಿ, ಚಟ್ನಿ, ಚಿಕ್ಕ ಮಕ್ಕಳ ಎದೆಯ ಕಫ ಕರಗಿಸಲು ಇದರ ಎಲೆಯ ಶಾಖ., ಇದರ ರಸ ಹಿಂಡಿ , ಜೇನು ತುಪ್ಪ ಸೇರಿಸಿ ಶೀತ ಆದ ಪುಟ್ಟ ಮಕ್ಕಳಿಗೆ ನೀಡಲು,.ಹೀಗೆ ಗೃಹ/ಮನೆ ಮದ್ದಿಗೆ ಸದಾ ಬೇಕಾಗುವಂತಹ ಎಲೆ ಇದು.


ಅದರಲ್ಲಿ ನನಗೆ ಬಜ್ಜಿ ತುಂಬಾ ಇಷ್ಟ. ಆರೋಗ್ಯಕ್ಕೆ ಉತ್ತಮವೋ ಗೊತ್ತಿಲ್ಲ. ನಾಲಿಗೆಗೆ ಸಖತ್ ರುಚಿ.. ಮನೆಯ ಇತರರಿಗೆ ಬಜ್ಜಿ ಕರಿದಾದ ಮೇಲೆ ನಾನು ಹಿಟ್ಟಿಗೆ ಸ್ವಲ್ಪ ಅಡುಗೆ ಸೋಡಾ ಬೆರೆಸಿ ಬಜ್ಜಿ ಮಾಡಿ ತಿನ್ನುತ್ತೇನೆ. 😀
ಕಡಲೆ ಹಿಟ್ಟು, ಅಕ್ಕಿ ಹಿಟ್ಟು, ಜೋಳದ ಹಿಟ್ಟು, ಕೆಂಪು ಮೆಣಸಿನ ಪುಡಿ, ಜೀರಿಗೆ, ಹಿಂಗು, ಉಪ್ಪು..ಇಷ್ಟೇ ಬೇಕಾಗಿರೋದು ಬಜ್ಜಿ ಮಾಡಲು 👍👍❤️

November 12, 2014

ದೊಡ್ಡಪತ್ರೆ/ ಸಾಂಬಾರಬಳ್ಳಿ ತಂಬುಳಿ


ಮಧ್ಯಾಹ್ನ ಊಟಕ್ಕೆ ಅಚಾನಕ್ಕ್ ಆಗಿ ಗೆಸ್ಟ್ ಇದ್ರು. ಹೊಟ್ಟೆ ಸರಿಯಿಲ್ಲದ್ದರಿಂದ ಮೊಸರನ್ನ ಊಟ ಮಾಡಲು ಬಂದವರು. ಈ ತಂಬುಳಿ ಬಗ್ಗೆ , ಅದರ ಔಷಧಿಯ ಗುಣಗಳ ಬಗ್ಗೆ ಹೇಳಿ' ಅಜ್ವಾಯಿನ್ ಪತ್ತೆ ಕಾ ಚಟ್ನಿ' ಅಂದೆ. ಅದಕ್ಕೆ ಬಂದವರು 'ಅರೇ  ಏ ತೋ ಸೇಹತ್ ಕೆ ಲಿಯೇ ಬಹುತ್ ಅಚ್ಚಾ ಹೈ ' ಅಂದಿದಲ್ಲದೆ ನಾನು ಮಾಡಿದ ೫-೬ ಬಗೆಯ ಅಡಿಗೆಯನ್ನು ಊಟ ಮಾಡಿ ಬಾಳೆ ಹಣ್ಣು ತಿನ್ನಲು ಜಾಗ ವಿಲ್ಲಾ ಅಂತ ಪೇಚಾಡಿಕೊಂಡು ಹೋದರು. ( ಇವತ್ತು ಬೆಳಿಗ್ಗೆ ಯಾರಾದರೂ ಊಟಕ್ಕೆ ಬರಬಹುದು ಅನ್ನಿಸಿತ್ತು ಯಾಕೋ ................) :-)

ಬೇಕಾಗುವ ಸಾಮಗ್ರಿ:

4-5 ದೊಡ್ಡಪತ್ರೆ ಎಲೆಗಳು, 8-10 ಕಾಳುಮೆಣಸು, 2 ಟೇಬಲ್ ಸ್ಪೂನ್ ಕಾಯಿ ತುರಿ ,  ಅರ್ಧ ಟೀ ಸ್ಪೂನ್ ಜೀರಿಗೆ, ಸ್ವಲ್ಪ ತುಪ್ಪ, ಹುಣಸೆ ಹುಳಿ , ಉಪ್ಪು, ಮಜ್ಜಿಗೆ.

ಎಲೆಗಳನ್ನು ಚೆನ್ನಾಗಿ ತೊಳೆಯಿರಿ. ತುಪ್ಪದಲ್ಲಿ ಕಾಳುಮೆಣಸು-ಜೀರಿಗೆ ಹುರಿಯಿರಿ. ಕಾಯಿತುರಿಯಿಂದಿಗೆ ಎಲ್ಲವನ್ನೂ ಸೇರಿಸಿ ನುಣ್ಣಗೆ ರುಬ್ಬಿ. ಇದು ಚಟ್ನಿ ಯಾಯಿತು.



ತಂಬುಳಿಗೆ: ಮೇಲಿನ ಮಿಶ್ರಣಕ್ಕೆ ಮಜ್ಜಿಗೆ / ಮೊಸರು ಬೆರೆಸಿ ತಂಬುಳಿ ಮಾಡಿ. ಬೇಕಿದ್ದಲ್ಲಿ ಸಾಸಿವೆ ಜೀರಿಗೆ ಒಗ್ಗರಣೆ ಕೊಡಬಹುದು. ದೇಹಕ್ಕೆ ತಂಪು. ನೆಗಡಿ ಎಲ್ಲ ಆಗಲ್ಲ. ಹಸಿಮೆಣಸಿನ ಕಾಯಿಯ ಬಳಕೆಯಿಲ್ಲದ್ದರಿಂದ ಎಸಿಡಿಟಿ ಇದ್ದವರಿಗೆ ಇದು ಒಳ್ಳೆಯ ಔಷಧಿ
ಟ್ರೈ ಮಾಡ್ತೀರಾ??
:-)
Vikas Hegde ಎಂಬೋ ತಮ್ಮ ಬ್ಲಾಗ್ ಬರಹಗಾರರಿಗೆ ಧಮಕಿ ಹಾಕ್ತಿದ್ದಾನೆ . ಅದಕ್ಕೆ ಅವನ ಗೂಂಡಾಗಿರಿಗೆ ಹೆದರಿ ಈ ಝಟ್ ಪಟ್  but healthy post
( ನನ್ನ ಬ್ಲಾಗ್ ನ ೬ ನೇ ಹುಟ್ಟುಹಬ್ಬ ಕೂಡ ಆಗಿ ಹೋಯ್ತೇ?? ನನಗೆ ಮರತೇ ಹೋಯ್ತು !!! ಛೆ ಒಂದು ಟ್ರೀಟ್ ಮಿಸ್ ಆಗಿ ಹೋಯ್ತು :-)