ಇತ್ತೀಚಿನ ಟ್ರೈನ್ ಪ್ರಯಾಣದ ಸಮಯ ನಡೆದಿದ್ದು. :
ನಮ್ಮ ಬೋಗಿಯಲ್ಲಿ ಒಬ್ಬ ಪ್ರಯಾಣಿಕರು ಬಂದು ತಮ್ಮ ಸೀಟ್ ಹುಡುಕ್ತಾ ಇದ್ರು. ಅವರ ಸ್ಲೀಪರ್ ಸೀಟ್ ಮೇಲೆ ಆಗಲೇ ಯಾರೋ ಮಲಗಿದ್ದರು. ನಾವೂ observe ಮಾಡಿರಲಿಲ್ಲ.
ಬಂದವರು: Hello ! Gentleman ಅಂತ ಮೇಲಿನ ಬರ್ತ ಮೇಲೆ ಮಲಗಿದ್ದ ಆ ವ್ಯಕ್ತಿಯನ್ನು ಕೂಗಿದ್ರು. ಅಲ್ಲಿಂದ ಯಾವುದೇ ಪ್ರತಿಕ್ರಿಯೆ ಬರದ ಸಂದರ್ಭ ಅವನ ಕಾಲುಗಳನ್ನು ಹಿಡಿದು ಅಲ್ಲಾಡಿಸಿದರು. ಅವನು ಬೆದರಿ ದಬಕ್ಕನೆ ಎದ್ದು ನನ್ನ ಕಿಸಿಯಿಂದ ಟಿಕೆಟ್ ತೆಗೆದ, ಬಹುಶ: ಅವನನ್ನು ಎಬ್ಬಿಸಿದವರು ಟಿಸಿ ಅಂದುಕೊಂಡು.
ಹೊಸಬರು : hello young man! you seem like an educated person. But you should confirm your seat number before you occupy your place ಅಂದರು ತುಸು ಧಿಮಾಕು ಪ್ಲಸ್ ಸಿಟ್ಟಿನಿಂದ
ಆ ಹುಡುಗ (ಹೌದು ಅವನು ಚಿಕ್ಕ ಪ್ರಾಯದವನು) ಕೂಲ್ ಆಗಿ ಅವರ ಬಳಿಯಿಂದ ಟಿಕೆಟ್ ಪಡೆದು Yes same train, same compartment, same time but the ticket is dated for tomorrow ಅಂತ ಹೇಳಿ ಪುನ: ಮೇಲಿನ ಬರ್ತ ಏರಿ ನಿದ್ದೆಗೆ ಶರಣಾದ.
ಬಂದವರ ಮುಖ 'ಇಂಗು ತಿಂದ ಮಂಗ'ನ ಮುಖದ ತರಹ ಆಗಿತ್ತು. ಮಕ್ಕಳಿಗೆ ಇಂಗು ತಿಂದ ಮಂಗ ಅನ್ನುವ padada ಎಕ್ಸಾಂಪಲ್ ಇದೇ ಅಂತ ಹೇಳಿದೆ ಅವರು ನಮ್ಮ ಬಳಿಯಿಂದ ಹೋದ ಮೇಲೆ. :-) hope i am right.
ಸ್ವಲ್ಪBusy . ಈ ತಿಂಗಳು ನನ್ನ ಬ್ಲಾಗ್ ತುಂಬ ಅಪ್ದೇಟ್ ಆಗುವ ತರಹ ಕಾಣಲ್ಲ. ಕಾರಣ ನಂತರ ನಿಮ್ಮ ಜತೆ ಶೇರ್ ಮಾಡ್ತೀನಿ. :-)
ಎಂಜಾಯ್
