( ಇತ್ತೀಚಿಗೆ ಆಫಿಸ್ ಗೆ ಹೋಗಿದ್ದೆ. ಶ್ರೀಕಾಂತ ಆಫಿಸ್ ಗೆ ಯಾವುದೋ ಸಹಿ ಮಾಡಿದ ದಾಖಲೆ ಪತ್ರ ಅರ್ಜೆಂಟ್ ತಲುಪಿಸಬೇಕಿತ್ತು. ಅವರು ಸಹಿ ಮಾಡಿಟ್ಟು ಊರಿಗೆ ಹೋಗಿದ್ದರಿಂದ ನಾನು ಆಫಿಸ್ ಗೆ ಅದನ್ನು ತಲುಪಿಸಬೇಕಾಯ್ತು. ಆಗ ಆಫಿಸ್ ನಲ್ಲಿದ್ದವರು ಯಾಕೆ ಮ್ಯಾಡಂ ಬ್ಲಾಗ್ ಬರೀತಾ ಇಲ್ಲ. ಬಿಸಿ ನಾ ಅಂತ. ಅವರು ನನ್ನ ಬ್ಲಾಗ್ ಓದ್ತಾರೆ ಅಂತ ಖಂಡಿತ ಗೊತ್ತಿರಲಿಲ್ಲ. :-(. ಮೊದಲು ನನ್ನ ಬಳಿ ಕಂಪ್ಯೂಟರ್ ಇರಲಿಲ್ಲ ಅಂತ ನೆವ ಇತ್ತು. ಈಗ ಶ್ರೀಕಾಂತ ನನಗೆ ಒಂದು ಸಿಸ್ಟಮ್ ಕೊಡಿಸಿದ್ದೆ ಅಲ್ಲದೆ ಬರಹ ಕೂಡ ಅಳವಡಿಸಿಕೊಟ್ಟಿದ್ದಾರೆ. ಅದಲ್ಲದೆ. ವಾಟ್ಸ್ ಅಪ್ ನಲ್ಲಿ ಯಂಗ್ ಡೈರೆಕ್ಟರ್ ಸ್ ಅವಾರ್ಡ್ ಗೆ ಮಾಡಿದ ಎಡ್ ಗೆ ಮಾಡಿದ ಯೂ ಟ್ಯೂಬ್ ವಿಡಿಯೋ ಓಡ್ತಾಡ್ತಾ ಇದೆ. ತರಲೆ ಮಕ್ಕಳದ್ದು. ಈ ವಿಷಯ ನೆನಪಾಗಿ ಅದನ್ನು ಬರೆಯುವಾ ಅಂತ ಬಂದೆ.....) ಮೊದಲು ಈ ವಿಡಿಯೋ ನೋಡಿ,
ಶ್ರೀಕಾಂತ ಫ್ರೆಂಡ್ ಮಗ ಅವನು. ಮುಂಬೈನಲ್ಲಿದ್ದಾಗ ನಾನು ಶ್ರೀಕಾಂತ ಶನಿವಾರ/ಭಾನುವಾರ ಅವರ ಜತೆ ಸ್ಪೆಂಡ್ ಮಾಡ್ತಿದ್ದ್ವಿ. ನಾನು ನೋಡಿದಾಗಲೆಲ್ಲ ಅವನ ಅಮ್ಮ ಸ್ಕೇಲ್ ಹಿಡಿದುಕೊಂಡು ಅವನಿಗೆ ಓದಿಸಲಿಕ್ಕೆ ಕೂತಿರುತ್ತಿದ್ದರು. ಅಪ್ಪ ಅಮ್ಮ ಇಬ್ಬರೂ ಬ್ಯಾಂಕರ್ಸ್. ಇವನು ನೋಡಲು ಮುದ್ದು ಮುದ್ದು ಗೊಂಬೆ ತರಹ. ಬಿಳಿ ಬಣ್ಣ, ಕೆಂಪು ಕೆಂಪು ಕದಪು, ಚೆಂದದ ಕಣ್ಣುಗಳಿಗೆ ಚಾಮರದಂತ, ಉದ್ದ ಉದ್ದ ರೆಪ್ಪೆ ಅದರ ಮೇಲೆ ಗುಳಿ ಬಿಳುವ ಕೆನ್ನೆ. ನಾನಂತು ಅವರ ಮನೆಗೆ ಹೋದರೆ ಅವನನ್ನು ರೆಪ್ಪೆ ಮಿಟುಕಿಸದೆ ನೋಡುತ್ತಿದ್ದೆ. ಚೂಟಿ ಚುರುಕು ಎಲ್ಲಾ ಹೌದು. ಆದರೆ ಓದುವುದೆಂದರೆ ಎಲರ್ಜಿ, ಅದರಲ್ಲೂ ಹೋಮ್ ವರ್ಕ್ ಮಾಡುವುದೆಂದರೆ ಶತ ಎಲರ್ಜಿ. ಅವನ ಅಮ್ಮನಿಗೆ ಸಾಕು ಸಾಕಾಗಿ ಹೋಗುತ್ತಿತ್ತು. ಇಂತದರಲ್ಲೆ ಒಂದು ದಿನ ಶಾಲೆಯಿಂದ ಪೋಷಕರಿಗೆ ಕರೆ ಬಂದಿತಂತೆ. ಅವನ ಅಮ್ಮ ಅಲ್ಲಿಗೆ ಹೋದರೆ ಅವನ ಶಾಲೆಯ ಸಿಸ್ಟರ್, "ಏನಮ್ಮ ನಿಮಗೆ ಮಗು ಸಾಕುವುದು ಕಷ್ಟ ಆಗುತ್ತಿದ್ದರೆ ಜನ್ಮ ಯಾಕೆ ನೀಡುತ್ತೀರಾ" ಅಂತ ಕೇಳಿದರಂತೆ, ಇವರ ಮಾತು ಕೇಳಲು ತಯಾರಿಲಿಲ್ಲವಂತೆ. ಅವನು ಆ ದಿನ ಹೋಮ್ ವರ್ಕ್ ಮಾಡಿರಲಿಲ್ಲವಂತೆ. ಅದಕ್ಕೆ ಮಿಸ್ ಬೈದಾಗ ಅವನು ಅಳುತ್ತಾ, ’ಅಪ್ಪ ಅಮ್ಮ ಇಬ್ಬರೂ ಕೆಲಸಕ್ಕೆ ಹೊಗುತ್ತಾರೆ. ಸಂಜೆ ಅಲ್ಲಿಂದ ಇಬ್ಬರೂ ಕ್ಲಬ್ ಗೆ ಹೋಗುತ್ತಾರೆ. ನಾನು, ಅವರು ಮನೆಗೆ ಬರುವ ತನಕ ಮೆಟ್ಟಿಲ ಮೇಲೆ ಕುಳಿತಿರುತ್ತೇನೆ. ಲೇಟ್ ಆಗಿ ಬರ್ತಾರಾದ್ದರಿಂದ ನಾನು ಮಲಗಿ ಬಿಡ್ತೇನೆ, ಅಪ್ಪ ಅಮ್ಮ ಹೋಡಿತಾರೆ, ಅಂತೆಲ್ಲ ಕತೆ ಕಟ್ಟಿ ಹೇಳಿದ್ದನಂತೆ. ಆಗ ಅವನು ಇನ್ನೂ ಪ್ರೀ ಸ್ಕೂಲ್... ಅವನ ಅಮ್ಮ ಇಲ್ಲ ಸಿಸ್ಟರ್ ಸುಳ್ಳು ಸುಳ್ಳೇ ಹೇಳ್ತಾನೆ. ನಿನ್ನೆ ಹೋಮ್ ವರ್ಕ್ ಇದೆಯಾ ಅಂತ ಕೇಳಿದರೆ ಇಲ್ಲ ಅಂದ...ಅಂತ ಹೇಳೋವಷ್ಟರಲ್ಲಿ ಅವನ ಪ್ರಿನ್ಸಿಪಲ್-ಅದೇ ಸಿಸ್ಟರ್.." ಅವನ ಮುಖ ನೋಡಿ ಅವನು ಸುಳ್ಳು ಹೇಳ್ತಾನಾ? ನೀವೇ ಸುಳ್ಳು ಹೇಳ್ತಿದ್ದೀರಿ ಅಂತ ಜೋರಿನಿಂದ ಇವರ ಬಾಯಿ ಮುಚ್ಚಿಸಿದರಂತೆ. ಇದೆಲ್ಲ ನಡೆಯುವಾಗ ಅವನು ತಣ್ಣಗೆ ಮುಗ್ದ ಕಣ್ಣುಗಳನ್ನು ಪಿಟಿಕಿಸ್ತಾ ಇದ್ನಂತೆ. ಆಮೇಲೆ ನಮಗೆ ಹೇಳಿದಾಗ ನಾವು ನಕ್ಕಿದ್ದೆ ನಕ್ಕಿದ್ದು. ಅಂತೂ ಅವನು ಓದು ಪೂರ್ಣ ಗೊಳಿಸಲಿಲ್ಲ. ಫ್ರೆಂಡ್ ಗರಾಜ್ ನಲ್ಲಿ ಕೆಲಸ ಮಾಡಿ, ಅದರ ಜತೆ ಜಿಮ್ ಗೆ ಹೋಗಿ ಬಾಡಿ ಬಿಲ್ಡಿಂಗ್ ಎಲ್ಲಾ ಮಾಡಿ..ಈಗ ಅವನು ಆಸ್ಟೇಲಿಯಾದಲ್ಲಿ ಎರಡು ಗರಾಜ್ ಒಂದು ಜಿಮ್ ನಡೆಸ್ತಿದಾನೆ. ಭಾರತೀಯ ಮೂಲದ ಬಟ್ ಅಲ್ಲೇ ಹುಟ್ಟಿ ಬೆಳೆದ ಗುಜರಾತಿ ಹುಡುಗಿಯನ್ನು , ಇಲ್ಲೇ ಬೆಂಗಳೂರಿನಲ್ಲೇ ಮದುವೆಯಾಗಿ ಈಗ ಒಂದು ಮಗುವಿನ ತಂದೆ....ವಿಡಿಯೋ ನೋಡಿ ಅವನ ನೆನಪಾಯ್ತು.
ನನ್ನ ತಮ್ಮನ ಮಗಳು ಸ್ಯಾಮಿ
ಅವಳೂ ಪ್ರಿ ಸ್ಕೂಲ್. ಆಗಲೇ ಹಿಂದುಸ್ತಾನಿ ಸಂಗೀತದಲ್ಲಿ ಅವಳ ವಯಸ್ಸಿಗೆ ಮೀರಿ ಪರಿಣಿತಿ ಹೊಂದಿದ್ದಾಳೆ. ನಮ್ಮ ಮಾತೃ ಭಾಷೆ ಕೊಂಕಣಿ ಜತೆ ಕನ್ನಡ, ಇಂಗ್ಲಿಶ್, ಹಿಂದಿ ಅರಳು ಹುರಿದಂತೆ ಮಾತಾಡ್ತಾಳೆ. ಓದಿನಲ್ಲೂ ತುಂಬಾ ಮುಂದೆ. ಇದರ ಜತೆ ವೆಸ್ಟರ್ನ್ ಡ್ಯಾನ್ಸ್ ಕೂಡ ಕಲಿತಿದ್ದಾಳೆ. ಪನ್ ಕೂಡ ಮಾಡ್ತಾಳೆ. ಎಲ್ಲಾ ಹೌದು ಆದರೆ ಊಟ ತಿಂಡಿ ವಿಷಯದಲ್ಲಿ ಮಾತ್ರ ರಗಳೆ. ತಿನ್ನೋದೇ ಇಲ್ಲ. ಅವರ ಶಾಲೆಯಲ್ಲಿ ಮಧ್ಯಾಹ್ನದ ಊಟ ಕ್ಲಾಸ್ ರೂಮ್ ನಲ್ಲೇ ಟೀಚರ್ ಎದುರಿಗೆ ಮಾಡಬೇಕು. ಟಿಫಿನ್ ಎಲ್ಲ ಖಾಲಿ ಮಾಡದಿದ್ದರೆ ಟೀಚರ್ ಫನಿಶ್ ಮೆಂಟ್ ಕೊಡುತ್ತಾರೆ. ಆದ್ದರಿಂದ ಮಕ್ಕಳು ಟಿಫನ್ ಬಾಕ್ಸ್ ನಲ್ಲಿದ್ದದ್ದು ತಿಂದೇ ಬರುತ್ತಾರೆ. ಇಂತದ್ದರಲ್ಲಿ ಸ್ಯಾಮಿ ಯ ಕಂಡಿಷನ್...ನನಗೆ ಇಷ್ಟ ಆಗೋ ತಿಂಡಿ ಮಾತ್ರ ಹಾಕಬೇಕು ಅಂತ. ಅವಳಿಗೆ ಇಷ್ಟ ಆಗೋ ತಿಂಡಿ ಅಂದ್ರೆ ನೀರು ದೋಸೆ, ಚಪಾತಿ,ಪೂರಿ ಮತ್ತು ಉದ್ದು ಮೈದಾ ದೋಸೆ, ಅದೂ ಒಂದೇ ಅಂದ್ರೆ ಒಂದು ದೋಸೆ, ಒಂದು ಚಪಾತಿ ಹಾಗೆ. (ಹುಳಿ ಬರಿಸಿದ್ದು for eg ಇಡ್ಲಿ, ದೋಸೆ...ಅದೆಲ್ಲ ತಿನ್ನಲ್ಲ) ನಾವು ಹೋದಾಗ ಒಂದು ದಿನ ಒಂದು ಎಕ್ಸ್ಟ್ರಾ ಚಪಾತಿ ಹಾಕಿದ್ದಳು ಬಾಕ್ಸ್ ನಲ್ಲಿ ಅವಳ ಅಮ್ಮ. ಅವಳು ಬಂದಮೇಲೆ ಅವಳ ಅಮ್ಮ ಅವಳ ಟಿಫಿನ್ ಬಾಕ್ಸ್ ಚೆಕ್ ಮಾಡಿ ವಾಹ್ ಎಲ್ಲಾ ತಿಂದು ಬಂದಿದ್ದಾಳೆ ಅಂತ ಖುಶಿಯಲ್ಲಿದ್ದಳು. ನಾನು- ತಿಂದ್ಯೇನೆ ಅಂತ ಕೇಳಿದರೆ..ಇಲ್ಲ ಮಾಲ್ತ್ಯಕ್ಕ, ಸ್ಕೂಲ್ ಯುನಿಫರ್ಮ್ ಪಾಕೆಟ್ ನಿಂದ ಒಂದು ಚಪಾತಿ ತೆಗೆದು ತೋರಿಸಿ ಅವಳು ನಕ್ಕ ಪರಿಯಿದೆಯಲ್ಲ...priceless and unforgettable.. ಬ್ಲ್ಯಾಕ್ ಮೈಲ್ ಮಾಡುವುದರಲ್ಲಿ ಎತ್ತಿದ ಕೈ. ಅವಳಿಗೆ ಏನಾದರೂ ಕೇಳಿದರೆ ಕೊಡಿಸದಿದ್ದಲ್ಲಿ, ಸಿರಿಯಲ್ ನಲ್ಲಿ ತೋರಿಸೋ ಕ್ಯಾರಕ್ಟರ್ ತರಾ ಅಳ್ತಾ, ’ಗೊತ್ತು ಗೊತ್ತು ನಿಮಗೀಗ ಹೊಸ ಪಾಪು ಬಂದಿದೆಯಲ್ಲಾ? ಅದೂ ಬಿಳಿ ಬಿಳಿ ಬಣ್ಣ ಕೂಡ ಇದೆ ಅದಕ್ಕೆ, ನಾನು ಅಂದರೆ ಅಸಡ್ಡೆ ಎನ್ನುವ ದೊಡ್ಡ ದೊಡ್ಡ ಪದಗಳನ್ನು ಬಳಸ್ತಾಳೆ...ಆಗ ಪೆಚ್ಚು ಮುಖ ಮಾಡಿಕೊಂಡು ನನ್ನ ಬಳಿ ಕಂಪ್ಲೈನ್ ಮಾಡುವ ಸರದಿ ಅವಳ ಅಮ್ಮನದು, ’ನೋಡಿದ್ಯಾ ಮಾಲ್ತಕ್ಕಾ ಹೆಂಗೆ ಮಾತಾಡ್ತಾಳೆ? ಎಲ್ಲಿ ಕಲಿತಾಳೆ ಇದೆಲ್ಲ ನನಗೂ ಗೊತ್ತಿಲ್ಲ..ಅಂತ....
........................................................................................................................................................
ನನಗಂತೂ ಅವಳು, ಅವಳ ನೌಟಂಕಿಗಳು ತುಂಬಾ ಇಷ್ಟ. ಅದೂ ಅವಳಿಗೆ ಗೊತ್ತು..ಆದ್ದರಿಂದ ನಾನಿದ್ದಾಗ ಸ್ವಲ್ಪ ಎಕ್ಸ್ಟ್ರಾ ನೇ ಮಾಡ್ತಾಳೆ.
ಲವ್ ಯು ಸ್ಯಾಮಿ. ಇವತ್ತು ಅವಳು ಶಾಲೆಯಲ್ಲಿ ಬರ್ತ್ ಡೇ ಸೆಲೆಬ್ರೇಟ್ ಮಾಡ್ತಿದ್ದಾಳೆ....

ಮಾಲತಿ ಅಕ್ಕ, ನಿನಗೆ ಗೊತ್ತಾ? ನನಗೆ cooking ಅಂದ್ರೆ ಇಷ್ಟ. ನಾಳೆ ನಿನಗೆ ಸ್ಪೆಷಲ್ ಪರಾಠಾ ಮಾಡಿ ತಿನ್ನಿಸ್ತೇನೆ ಅಂತ ನನ್ನ ತಮ್ಮನ ಐದು ವರೆ ವರ್ಷದ ಮಗಳು ಸ್ಯಾಮಿ ಅಂದಾಗ, ಎನೋ ಮುದ್ದು ಮುದ್ದಾಗಿ ಹೇಳ್ತಿದ್ದಾಳೆ ಅಂತ, ಆಯ್ತು ಮಗು' ಅಂದೆ. ಆದ್ರೆ ಮರುದಿನ ಅವಳು ಕೊತ್ತಂಬರಿ ಸೊಪ್ಪು stuffed ಪರಾಠಾ ಮಾಡಿ ನಮಗೆ ಕೊಟ್ಟಾಗ ನಿಜಕ್ಕೂ ಬೆರಗಾದೆ.
ಹಿಟ್ಟು ಮಾತ್ರ ಅಮ್ಮ ಕಲಿಸಿಕೊಟ್ಟಿದ್ದು ಮತ್ತು ಗ್ಯಾಸ್ ಆನ್ ಮಾಡಿ ತವಾ ಇಟ್ಟಿದ್ದು. ಉಳಿದದ್ದೆಲ್ಲಾ ಆಕೆನೆ ಮಾಡಿದ್ದಾಳೆ. ಹಿಟ್ಟಿನಲ್ಲಿ ಕೊತ್ತಂಬರಿ ಸೊಪ್ಪು ಹಾಕಿ, ಅದಕ್ಕಿಂತ ಮುಂಚೆ ಅದನ್ನು ಚೆನ್ನಾಗಿ ತೊಳೆದು, ಪರಾಠಾವನ್ನು almost ಉರುಟಾಗಿ ಲಟ್ಟಿಸಿ, (ನಾನು ಉರುಟು ಚಪಾತಿ ಮಾಡಲು ಕಲಿಯುವಷ್ಟರಲ್ಲಿ ನನಗೆ ಕತ್ತೆಯ ವಯಸ್ಸು ಆಗಿತ್ತು :-)) ತುಪ್ಪ ಹಾಕಿ (ಅಜ್ಜಿ ಎಣ್ಣೆ ಬೇಡ ತುಪ್ಪ ಕೊಡು ಅದರಿಂದಲೇ Taste ಬರುವುದು. ) ಚೆನ್ನಾಗಿ ರುಚಿ ರುಚಿಯಾದ ಪರಾಠಾ ತಿನ್ನುವ ಭಾಗ್ಯ ನಮ್ಮದು. ನನ್ನ ಪಾಲಿಂದು ನಾನು ಗಬ ಗಬ ತಿಂದೆ. ಇದು ನಿಹಾರಿಕಾ ತಿನ್ನುವ ಮುಂಚೆ, whatsapp ನ ಫ್ಯಾಮಿಲಿ ಮೆಂಬರ್ಸ್ ಗೆ ಕಳುಹಿಸಲು ತೆಗೆದ ಚಿತ್ರ.
ಸ್ವಲ್ಪ ಹೊತ್ತು ಬಿಟ್ಟು ಸ್ಯಾಮಿ , ಮಾಲತಿ ಅಕ್ಕ ಹೇಗಾಗಿತ್ತು ಪರಾಠಾ' ಅಂತ ಕೇಳಿದಳು. ನಾನು ತುಂಬಾ ಚೆನ್ನಾಗಿತ್ತು ಅಂದೆ. ಸುಮ್ನೆ ಹೇಳ್ತಿದ್ದಿಯಾ ನಿಜ ಹೇಳಿತ್ತಿದ್ದಿಯಾ?
'ನಿಜ'.
pinky promise
ಎಸ್ ಪಿಂಕಿ ಪ್ರಾಮಿಸ್ ನಾನಂದೆ.
ಅಷ್ಟೆ ಯಾಕೆ ನಾ whatsapp ನಲ್ಲಿ ಎಲ್ಲರಿಗೂ ಕಳಿಸಿ ಆಯ್ತು.
'ಹೌದಾ'ಎಲ್ಲಿ ತೋರಿಸು', ಏನು comments ಹಾಕಿದಾರೆ ಅಂತ ಕೇಳ್ತಾಳೆ ಪುಟ್ಟಿ... ಈಗೀನಾ ಮಕ್ಕಳಾ?? ಅಬ್ಬಾ??
...............................................................................................................
ನಮ್ಮ ಮನೆ ಗೃಹ ಪ್ರವೇಶಕ್ಕೆ ಇಲ್ಲಿ ಬೆಂಗಳೂರಿಗೆ ಬಂದಾಗ, ’ಸ್ಯಾಮಿ ನನಗೆ ಎರಡು ಬೆಸ್ಟ್ ಫ್ರೆಂಡ್ಸ್ ಇದ್ದಾರೆ. ಅವರು ಇವತ್ತು ಬರುತ್ತಿದ್ದಾರೆ, ಅವರಿಗೆ ’ಚಂದಿರ ನಮಗೆ, ದೇವರು ಕೊಟ್ಟ ಪೆಪ್ಪರಮಿಂಟೇನಮ್ಮ" ಹಾಡು ಹೇಳ್ತೀಯಾ ಅಂತ ಕೇಳಿದೆ. ಆಯ್ತು ಹಾಡ್ತೀನಿ ಅಂತ ಒಪ್ಪಿ ಅದರ ಜತೆಗೆ ನಾನು ಅವರಿಗೋಸ್ಕರ ಗ್ರೀಟಿಂಗ್ ಕಾರ್ಡ್ ಕೂಡ ಮಾಡ್ತೇನೆ’ ಅಂದ್ಲು. ಆಯ್ತು ಅಂತಂದೆ. ಆಮೇಲೆ ಗ್ರೀಟಿಂಗ್ ಕಾರ್ಡ್ ಹಿಡಿದುಕೊಂಡು ಬಂದು ಅವರ ಹೆಸರು ಹೇಳು ಇದರ ಮೇಲೆ ಬರೀತೀನಿ ಅಂದ್ಲು. ನಾನು ಎರಡು ಹೆಸರು ಹೇಳಿದೆ. ಅದಕ್ಕೆ ಅವಳು ಕಣ್ಣುಗಳನ್ನು ಇಷ್ಟು ದೊಡ್ಡ ದೊಡ್ಡ ಬಿಟ್ಟುಕೊಂಡು, ಗಟ್ಟಿ ದನಿಯಿಂದ ’ನಿನ್ನ ಫ್ರೆಂಡ್ಸ್ ಬಾಯ್ಸಾ?? (boysಆ) ಅಂತ ಕೇಳಿದ್ದು ನನಗೆ ಒಂದು ಕ್ಷಣ ಶಾಕ್.....ಆಮೇಲ್ ಮಹಾ ನನ್ನ ಮೇಲೆ ಉಪಕಾರ ಮಾಡಿದ ಹಾಗೆ, ’ಹಾಂ ಇರಲಿ ಬಿಡು ಅವರ ಹೆಸರು ಬರೀತೇನೆ’ ಅಂತ ಬರೆದು ಇಟ್ಟು ಕೊಂಡಿದ್ದಳು. ಆದರೆ ನನ್ನ ಬೆಸ್ಟ್ ಫ್ರೆಂಡ್ಸ್ ಬಂದಾಗ ಅವಳು ಊಟ ಮಾಡ್ತಾ ಇದ್ದಳು, ಆಮೇಲೆ ಅವರೆಲ್ಲ ಅವಳ ಚಿಕ್ಕಮ್ಮನ ಮನೆಗೆ ವಿಸಿಟ್ ಕೊಡಲು ಹೋದರು. ರಾತ್ರಿ ಮನೆಗೆ ಬಂದು, ’ಎಲ್ಲಿ ನಿನ್ನ ಫ್ರೆಂಡ್ಸ್? ಹೊರಟು ಹೋದ್ರಾ ಅಂದ್ಲು’. ನಾನು ಹೌದೆಂದೆ....ತುಂಬಾ ಬೇಸರದ ಪೋಸ್ ಕೊಟ್ಟು, ಇರಲಿ ಬಿಡು ಈ ಗ್ರೀಟಿಂಗ್ ಕಾರ್ಡ್ ನಾದ್ರೂ ತಲುಪಿಸು ಅಂತ ಕೊಟ್ಲು.ನನಗಂತೂ ಅವಳು, ಅವಳ ನೌಟಂಕಿಗಳು ತುಂಬಾ ಇಷ್ಟ. ಅದೂ ಅವಳಿಗೆ ಗೊತ್ತು..ಆದ್ದರಿಂದ ನಾನಿದ್ದಾಗ ಸ್ವಲ್ಪ ಎಕ್ಸ್ಟ್ರಾ ನೇ ಮಾಡ್ತಾಳೆ.
ಲವ್ ಯು ಸ್ಯಾಮಿ. ಇವತ್ತು ಅವಳು ಶಾಲೆಯಲ್ಲಿ ಬರ್ತ್ ಡೇ ಸೆಲೆಬ್ರೇಟ್ ಮಾಡ್ತಿದ್ದಾಳೆ....

2 comments:
Glad to see your post after a long time.
Ananya is poor eater too. In our recent visit to doctor, he said she is undernurished. I was shocked to hear that as I make it a point to pack nuts, fruits etc to school. When I checked with Ananya what she does with snacks and lunch box, she said my friends like my snacks and some of the items in my lunch box like chitraanna, dOse, so I shares the box with them!
I've started packing extra for her friends now :-)
ಸ್ಯಾನ್ವಿಯ ನೌಟಂಕಿಗಳು ನಮ್ಮ ನಾದಿನಿ ಪಾಪು ಧೃತಿಯ ಆಟಗಳನು ನೆನಪಿಸಿತು.
Post a Comment