ನೆನಪು-1
ಮದುವೆಯಾಗಿ ಕೆಲ ತಿಂಗಳು ಕಳೆದಿತಷ್ಟೆ. ಅಕ್ಕನಿಗೆ ಅಡಿಗೆಗೆ ನನ್ನ ಪಾಲಿನ ಸಹಾಯ ಅಂದ್ರೆ ಕಾಯಿ ತುರಿದು ಕೊಡೋದು, ತರಕಾರಿ ಕಟ್ ಮಾಡಿ ಕೊಡೋದು ಮುಂತಾದ್ದು ಮುಗಿದ ಮೇಲೆ ನನ್ನ ಪದವಿ ಪರೀಕ್ಷೆಗೆ ಓದುತ್ತಾ, ಕಾಲು ಚಾಚಿ, ಅಡಿಗೆ ಮನೆಯ ಎದುರಿಗೆ ಇರುವ ಚಿಕ್ಕ ಅಂಗಳದಲ್ಲಿ ,ಅದು ಹಳೆಯ ಕಾಲ ಚೌಕದ ಮನೆ. ಮಧ್ಯದ ತುಳಸಿ ಕಟ್ಟೆಯ ಅಂಗಳದ ಸುತ್ತ ನಮ್ಮ ಮನೆಯ ಕೋಣೆಗಳು. ಹಿತವಾದ ಬಿಸಿಲು ಅಂಗಳದಲ್ಲಿ ಬೀಳುತಿತ್ತು. ವಿಜ್ಝಾನ ವಿಷಯವನ್ನು ಬಿಟ್ಟು ಆರ್ಟ್ ಸ್ ಸ್ಟ್ರೀಮ್ ಗೆ ಶಿಫ್ಟ್ ಆಗಿದ್ದನ್ನು ನಾನು ನಿಧಾನಕ್ಕೆ ಎಕ್ಸೆಪ್ಟ್ ಮಾಡಿದ್ದೆ ಅಲ್ಲದೇ ಸೋಶಿಯೋಲಾಜಿ ನನ್ನ ಇಷ್ಟದ ವಿಷಯವಾಗಿ ಪರಿಣಿಮಿಸಿತು. ನಾನು ಕಾಲು ಚಾಚಿಕೊಂಡು ತಲ್ಲೀನತೆಯಿಂದ khaasi-synteng ಬುಡಕಟ್ಟು ಜನಾಂಗದ charasteric feature ಬಗ್ಗೆ ಓದುತ್ತ ಇದ್ದೆ. ಕಾಲಿನ ಬುಡಕ್ಕೆ (ಪಾದಗಳಿಗೆ) ತಣ್ಣನೆಯ ಗಾಳಿಯೊಂದು ಬೀಸಿತು. ಓ ಚೆಂದದ ಗಾಳಿ ಕಾಲಿಗೆ ಮಾತ್ರ ಸೋಕುತ್ತಿದೆ ಅಂದು ಕೊಂಡು ಓದನ್ನು ಮುಂದುವರೆಸಿದೆ. ಕೆಲ ಸಮಯದ ನಂತರ ಪುಣ: ಪಾದಗಳ ಬಳಿ ಗಾಳಿ ಮಾತ್ರವಲ್ಲ ಫುಸ್ ಅನ್ನುವ ಸದ್ದು ಕೂಡ ಕೇಳಿಸಿಕೊಂಡಿತು. ತಲೆ ಎತ್ತಿ ನೋಡುತ್ತೇನೆ, ಕರಿ ನಾಗರವೊಂದು ಹೆಡೆ ಎತ್ತಿ ನಿಂತಿದೆ. ಆಗಿನ್ನು ತೀರ್ಥಹಳ್ಳಿಯಲ್ಲಿ ಟಿ ವಿ ಇರಲಿಲ್ಲ ಹಾಗಾಗಿ ನ್ಯಾಶನಲ್ ಜಿಯೋಗ್ರಾಫಿಕ್ ಚ್ಯಾನೆಲ್ ಕೂಡ ಇರಲಿಲ್ಲ. ನಾಗರ ಹಾವು ಎಂಬ ಜಂತುವನ್ನು, ಮುಂಬೈನಲ್ಲಿ ನಾಗರ ಪಂಚಮಿಯಂದು ಮನೆ ಮನೆಗೆ ಬುಟ್ಟಿಯಲ್ಲಿ ತಂದು, ನಾಗೋಬಾಲಾsssss ದೂssssದ್(ನಾಗಪ್ಪನಿಗೆ ಹಾಲು) ಎನ್ನುತ್ತ ಹಾವಾಡಿಗರು ಮನೆಗೆ ತಂದು,ಮೆಟ್ಟಿಲ ಬಳಿ ನೆಲದ ಮೇಲಿಟ್ಟು ಬುಟ್ಟಿ ಮುಚ್ಚಳ ತೆರೆದು ಅಫೀಮು ಕುಡಿದ ನೀರ್ಜೀವ ಮಲಗಿದಂತ ಅದರ ತಲೆ ಮೇಲೆ ಕುಕ್ಕಿಯೋ, ಬಾಲ ಎಳೆದೋ ಅದು ಹೆಡೆ ಎತ್ತುವಂತೆ ಮಾಡುವುದು, ಅಮ್ಮ ಬಟ್ಟಲಲ್ಲಿ ಹಾಲು ತಂದು ಬುಟ್ಟಿಯ ಎದುರಿಗೆ ಇಡುವುದು, ಹಾವಾಡಿಗಳು ಹಾವಿನ ತಲೆಯನ್ನು ಹಾಲಲ್ಲಿ ಮುಳುಗಿಸಿ ತೆಗೆಯುವುದು, ಆಮೇಲೆ ಅಷ್ಟೆ ಜಬರದಸ್ತಿಯಿಂದ ಹಾವನ್ನು ಬುಟ್ಟಿಗೆ ಸೇರಿಸಿ, ಅಮ್ಮ ಕೊಟ್ಟ ಒಂದು ಶೇರು ಅಕ್ಕಿ, ಕೆಲವು ನಾಣ್ಯ ಪಡೆದುಕೊಂಡು ಹೋಗುವದನ್ನು ನೋಡುವುದಷ್ಟಕ್ಕೆ ಸೀಮಿತಗೊಂಡಿದ್ದು, ಈ ಹಾವು ಪೂತ್ಕರಿಸುವಾಗ ಅದರ ಗಲ್ಲ ನಡುಗುವುದು, ನಾಲಗೆ ಹೊರ ಒಳ ಚಾಚುವುದು, ಮಿರಿ ಮಿರಿ ಮಿಂಚುವ ಅದರ ಮೈ ಮೊದಲ ಬಾರಿಗೆ ಅಪ್ ಕ್ಲೋಸ್ ನೋಡಿದ್ದು. ತನ್ನಷ್ಟಕ್ಕೆ ನನ್ನ ಗಂಟಲಿನಿಂದ ’ಅಕ್ಕ’ ಎನ್ನುವು ಕೂಗು ಹೊರ ಹೊಮ್ಮಿತು. ಸಾಂಬರ್ ಮಾಡಲು ತೊಗರಿ ಬೆಳೆ ತರಲು ಒಳ ಹೋದ ಅಕ್ಕ ನನ್ನ ಕೂಗಿನಿಂದ ಅಂಗಳ ಬಳಿ ಬಂದರು. ಅವರು ’ಯಾಕೋ ನಾಗಪ್ಪ?? ಏನಾಯ್ತು? ಏನಾದರು ಮೈಲಿಗೆ ಆದರೆ ಕ್ಷಮಿಸಬೇಕು. ಇವತ್ತು ಮಧ್ಯಾಹ್ನದ ಪೂಜೆಗೆ ನಿನಗಾಗಿ ವಿಶೇಷ ಆರತಿ ಮತ್ತು ನಾಗನ ಕಲ್ಲಿಗೆ ಹಣ್ಣು ಕಾಯಿ, ಪಂಚಾಮೃತದ ಅಭೀಷೇಕ ಮಾಡಿಸುತ್ತೇವೆ. ಈಗ ನೀನು ಹೋಗು. ಹೀಗೆ ಮನುಷ್ಯರು ಓಡಾಡುವ ಜಾಗದಲ್ಲಿ ನೀನು ಬರಬಾರದು’ ಅಂದಾಗ ಮಹಾ ಹೇಳಿದ್ದು ಗೊತ್ತಾದ ಹಾಗೆ ಹೆಡೆಯನ್ನು ಒಂದು ಸಲ ಹಾಗೆ ಹೀಗೆ ವಾಲಿಸಿ, ಹೆಡೆ ಮುಚ್ಚಿ ಅಲ್ಲಿಂದ ನಿಧಾನಕ್ಕೆ ಹೊರಟು ಹೋಯಿತು. ನಾನು ಬಿಟ್ಟ ಬಾಯಿ (ಸಧ್ಯ ಬೇರೆ ಯಾವುದೇ ಜಂತು ನನ ಬಾಯಿಯೊಳಗೆ ಹೊಕ್ಕಲಿಲ್ಲ) ಬಿಟ್ಟ ಕಣ್ಣುಗಳಿಂದ ಅದರ ಚೂಪು ಬಾಲ ಮರೆಯಾಗುವ ತನಕ ನೋಡುತ್ತಲೆ ಇದ್ದೆ. ಕಾಲು ಮಡಚಲು ಆಗದಷ್ಟು ಮರಗಟ್ಟಿತ್ತು.
ನೆನಪು-2
ಆಗ ನಾವು ಬಸವೇಶ್ವರನಗರದಲ್ಲಿದ್ದೆವು. ಯಾವತ್ತಿನಂತೆ ಬೆಳಿಗ್ಗೆ ನಾಲ್ಕು ಗಂಟೆ ಅಡಿಗೆಮನೆಯಲ್ಲಿ ನಿಂತು ಚಹಾ ತಯಾರಿಸುತ್ತ ಇದ್ದೆ. ಅಡಿಗೆ ಮನೆ ಕಟ್ಟೆ ಎದುರಿಗೆ ದೊಡ್ಡ ಕಿಟಕಿ. ಒಂಚೂರು ಸದ್ದಿರಲಿಲ್ಲ. ಚಹಾಗೆ ನೀರು ಮರಳುತ್ತಿದ್ದ ಹಾಗೆ, ಮೂಂಜಾವಿನ ನೀರವತೆಯಲ್ಲಿ, ನಾನು ಬುಕ್ ಹಿಡಿದುಕೊಂಡು ಓದ್ತಾ ಇದ್ದೆ. ಸಡನ್ ಆಗಿ ಕಿಟಕಿ ಬಳಿಯಿಂದ ಅಕ್ಕೋಯ್ ಅನ್ನುವ ಕೂಗು ಕೇಳಿ ನಾಲ್ಕ್ ಇಂಚ್ ಮೇಲೆ ಹಾರಿದೆ. ’ಹೆದರಿ ಬಿಟ್ರಾ ಅಕ್ಕಾ, ನಾನು ನೈಟ್ ಬೀಟಿನ ಪೋಲಿಸಪ್ಪ. ಯಾರಾದರೂ ಏಳ್ತಾರಾ ಅಂತ ಕಾಯ್ತ ಇದ್ದೆ. ಇಲ್ಲಿ ಲೈಟ್ ಕಾಣಿಸಿ ಇಲ್ಲಿಗೆ ಬಂದೆ. ಏನಿಲ್ಲ, ನನ್ನ ಬೈಕ್ ನಲ್ಲಿ ಪೆಟ್ರೋಲ್ ಖಾಲಿಯಾಗಿದೆ. ಹೊಸ ಬೈಕ್ ಒಂದು ಕಣ್ಣಿಡಿ ಅಂತಷ್ಟೆ ಹೇಳೋದಿತ್ತು’ ಅಂದ. ನಾನು ಸರಿ ಅಂದೆ. ಅಡಿಗೆ ಮನೆಯ ಕಿಟಕಿಯ ಮುಂದಿನ ರಸ್ತೆಯ ಆಚೆ ಬದಿಯ ಲೈಟ್ ಕಂಬದ ಕೆಳಗೆ ಬೈಕ್ ನಿಲ್ಲಿಸಿದ್ದ. ನಿಜಕ್ಕೂ ಹೊಸ ಬೈಕ್, ಅದರ ಮೇಲೊಂದು ಕೆಂಪು ಬಣ್ನದಿಂದ ಬರೆದ ಹುಲಿಯ ಚಿತ್ರ ನಿಚ್ಚಳವಾಗಿ ಕಾಣುತ್ತಿತ್ತು. ಆಯ್ತಪ್ಪ ಅಂದೆ. ಅವನು ಹೋಗಿ ಬಿಟ್ಟ. ನನಗೆ ಆ ದಿನ ಆಫಿಸ್ ಗೆ ಹೋಗುವುದಿತ್ತು. ಪಕ್ಕದ ಮನೆಯ ರಾಮಮೂರ್ತಿಗೆ ಬೈಕ್ ಬಗ್ಗೆ ಹೇಳಿ ಹೋಗ ಬೇಕು ಅಂತ್ಂದುಕೊಂಡಿದ್ದೆ. ಆದರೆ ಅಡಿಗೆ ಕೆಲಸ ಮನೆ ಕೆಲಸ ಮುಗಿಸಿವುದರಲ್ಲಿ ನನಗೆ ಮರೆತೆ ಹೋಯ್ತು. ಸಂಜೆ ಮನೆಗೆ ಬರುವಾಗ ಎಂದಿಗಿಂತ ತಡವಾಗಿತ್ತು. ಆಗಲೇ ಸ್ಟ್ರೀಟ್ ಲೈಟ್ ಎಲ್ಲ ಹೊತ್ತಿಕೊಂಡಿತ್ತು. ಮನೆಯ ಆ ಕಡೆ ಏನೋ ಗೌಜು. ಅಡಿಗೆ ಮನೆಯೆ ಕಿಟಕಿಯಿಂದ ನೋಡಿದರೆ ಬೆಳಿಗ್ಗೆ ಪಾರ್ಕ್ ಮಾಡಿದ್ದ ಬೈಕ್ ಸುತ್ತಲೂ ಜನ, ಪೋಲಿಸ್ ನಾಯಿ ಹಿಡಕೊಂಡು ಬಂದ ಪೋಲಿಸರು. ಬೆಳಿಗ್ಗೆ ಬೈ ಕ್ ಪಾರ್ಕ್ ಮಾಡಿ ಹೋದ ಪೋಲಿಸಪ್ಪ ನೆನಪು ನನಗೆ ಆಗ ಆಗಿದ್ದು. ನಾನೇ ಅಲ್ಲಿ ಹೋದೆ. ಹೀಗೆ ಹೀಗೆ ಅಂದೆ. ಅಷ್ಟೊತ್ತಿಗೆ ಪೋಲಿಸಪ್ಪನ ಮಗ ಪ್ಲಾಸ್ಟಿಕ್ ಕ್ಯಾನ್ ನಲ್ಲಿ ಪೆಟ್ರೋಲ್ ಹಿಡುದು ಕೊಂಡು ಬಂದ.
ಆದದಿಷ್ಟೆ: ರಾಮಮೂರ್ತಿ (ಇದ್ದ ಕೆಲಸ ಬಿಟ್ಟು ಇನ್ನೊಂದನ್ನು ಹುಡುಕುತ್ತಿದ್ದ , ಮನೆಯಲ್ಲೇ ಇದ್ದ ಅವರು), ಬೆಳಿಗ್ಗೆ ಇಂದ ಅಲ್ಲಿ ಪಾರ್ಕ್ ಆಗಿದ್ದ ಹೊಚ್ಚ ಹೊಸ ಬೈಕ್ ಸಂಜೆ ತನಕ ಅಲ್ಲೇ ಇದ್ದದ್ದು ನೋಡಿ ಬಾಂಬ್ /ಅಥವಾ ಕಳ್ಳತನದಲ್ಲಿ ಇನ್ವಾಲ್ವ್ ಆಗಿದೆ ಬೈಕ್ ಅಂದುಕೊಂಡು ಪೋಲಿಸರಿಗೆ ಕರೆ ಮಾಡಿದಾರೆ. ಪೋಲಿಸರು ಎಲ್ಲರ ಹೇಳಿಕೆಯನ್ನು ಆಲಿಸುತ್ತ ಇದ್ದರು. ನಾನು ಹೋಗಿ ಬೆಳಿಗ್ಗೆ ಏನಾಯಿತು ಅಂತ ವಿವರಿಸಿದೆ. ಮುಂದಿನದನ್ನು ಪೋಲಿಸಪ್ಪನ ಮಗ ವಿವರಿಸಿದ: ಅಪ್ಪ ಎರಡು ದಿನದಿಂದ ನೈಟ್ ಡ್ಯೂಟಿ, ನಿನ್ನೆ ಬೆಳಿಗ್ಗೆ ಹತ್ತಿರದ ಸಂಬಂಧಿಯೊಬ್ಬರ ಸಾವು, ಮತ್ತು ಪುನ: ನೈಟ್ ಶಿಫ್ಟ್, ಅದ್ದರಿಂದ ಸರಿ ನಿದ್ದೆಯಾಗಿರಲಿಲ್ಲ. ಬೆಳಿಗ್ಗೆ ನನ್ನನ್ನು ಎಬ್ಬಿಸಿ ಬೈಕ್ ಎಲ್ಲಿ ಪಾರ್ಕ್ ಮಾಡಿದ್ದೇನೆ, ಪೆಟ್ರೋಲ್ ತುಂಬಿಸಬೇಕೆಂದು ಹೇಳಿ ಮಲಗಿದರು. ನನಗೆ ಬೇರೆ ತುರ್ತು ಕೆಲಸಗಳ ಒತ್ತಡದಿಂದ ಈಗಷ್ಟೆ ಇತ್ತಕಡೆ ಬರಲಾಯಿತು ಎಂದು ಹೇಳಿದ
ಮೇಲೇನ ಎರಡು ನೆನಪಿಗೆ ಕಾರಣ ಯಶವಂತ ಚಿತ್ತಾಲರ ’ನಾಗರ ಪಂಚಮಿ’ ಮತ್ತು ’ಬೆಳಗು ಜಾವದ ಕನಸು’ ಕತೆಗಳು
:-)
1 comment:
nimma nenapina buTTiyalli eshTella interesting incidents ide Malathi! nangantoo Odakke tumbaa khushi. haavina incident svalpa bhaya anstu.
Post a Comment