April 16, 2020

ಹೊರಟು ಬಿಟ್ರು ಕೊಟ್ರಪ್ಪ

ತುಂಬಾ ಸಮಾಧಾನಿ ನಮ್ಮ ಕೊಟ್ರಪ್ಪ. ಬೈಕ್ ಬೇಕು ಅಂತ ತುಂಬಾ ಆಸೆ ಪಟ್ಟಿದ್ರು. ಶ್ರೀಕಾಂತ್ ಒಂದು ರಾಜದೂತ್ ಬೈಕ್ ಕೊಡಿಸಿದ್ರು.. ನಮ್ಮ ತೋಟಕ್ಕೆ ಹೋಗುವ ಸಮಾಯ ಬೆಳಿಗ್ಗೆ ೯. ೦೦ ರಿಂದ ಸಂಜೆ ೪ ರವರೆಗೆ. ಶ್ರೀಕಾಂತ್ ಕಸಿನ್ ಅವರದು ಭರ್ಜರಿ ತೋಟ. ಅದಕ್ಕೋಸ್ಕರ ಅವರು ತಮ್ಮ ತೋಟದ ಸಹಾಯಕರಿಗಾಗಿ ಪುಟ್ಟ ಪುಟ್ಟ ಹೆಂಚಿನ ಮನೆಗಳನ್ನು ಕಟ್ಟಿಸಿದ್ದಾರೆ. ಹಾಗೆ ಒಂದರಲ್ಲಿ ಕೊಟ್ರಪ್ಪ ಹಾಗು ಅವರ ದೂರದ ಸಂಬಂಧಿ ಬಿಡಾರ, ನಮ್ಮ ಕೊಟ್ರಪ್ಪನವರು ಲಿಂಗಾಯತ ಧರ್ಮದವರು...ಜೀವನದಲ್ಲಿ ಅಪಾರವಾದ ಕಟ್ಟು ನಿಟ್ಟು, ನೇಮ ನಿಯಮ. ಕೃಷ್ಣನ ಸಹಾಯಕ್ರಿಗೆ ಅಡಿಗೆ ಮಾಡುವವರೊಬ್ಬರಿದ್ದಾರೆ. ಆದರೆ ಕೊಟ್ರಪ್ಪ ಅವರ ಅಡಿಗೆ ಅವರೇ ಮಾಡಿಕೊಳ್ಳೋರು, ಊರಿನಿಂದ ಬರುವಾಗ ಜೋಳದ ಹಿಟ್ಟು ತರುತ್ತಿದ್ದರು. ಪ್ರತಿ ಸೋಮವಾರ ನಡೆಯುವ ತೀರ್ಥಹಳ್ಳಿ ಸಂತೆ ಹೋಗಿ ವಾರಕ್ಕೆ ಬೇಕಾಗುವಷ್ಟು ತರಕಾರಿ,,,ಇಲ್ಲದಿದ್ದರೆ ನೀರುಳ್ಳಿ, ಮೆಣಸಿನಕಾಯಿ ಇದ್ದಾರೆ ಆಯ್ತು. ಬೇರೆಯವರು ಮಾಡಿದ ಟಿ ಸಹಿತ ಕುಡಿಯುತ್ತಿರಲಿಲ್ಲ. ಅಂತದ್ದರಲ್ಲಿ ಅವರ ಸಂಭಂದಿ ಹುಡುಗನಿಗೆ ಕುಡಿತ, ಮಾಂಸಾಹಾರಿ ಅಭ್ಯಾಸ. ಗುಂಡು ತುಂಡು ಮಾಡಿದಾಗ ಅವರಿಗೆ ಮನೆಗೆ ಸೇರಿಸುತ್ತಿರಲಿಲ್ಲ ಕೊಟ್ರಪ್ಪ. ಕೊನೆಗೆ ಸಾಕಾಗಿ 'ತೋಟ ನಾನೇ ನೋಡಿಕೊಳ್ತೇನೆ....ಆತನಿಗೆ ಊರಿಗೆ ಕಳುಹಿಸಿಕೊಡಿ ಅಂತ ಒಂದೇ ವರಾತ.... ಹಾಗೆ ಮಾಡಿದ್ದೂ ಆಯಿತು. ಅವರು ಅಡಿಗೆ ಪಡಿಗೆ ಎಲ್ಲ ಮಾಡಿ ತೋಟಕ್ಕೆ ಬರುವಾಗ ೧೧,೦೦ ಗಂಟೆ ಕಳೆದು ಹೋಗುತ್ತಿದ್ದರೂ ನಾವು ಏನು ಅನ್ನಲಿಲ್ಲ. 
ಯುಗಾದಿಗೆ ಊರಿಗೆ ಹೋದ್ರೆ ಒಂದು ೧೫ ದಿನ ಠಿಕಾಣಿ . ಅದಕ್ಕೊಂದು ತುಂಬಾ ಕಾಯ್ತಿದ್ರು. ಆದರೆ ಹಿಂದಿನ ವರ್ಷ ಅವರ ಊರಲ್ಲಿ ಜೋರು  ಮಳೆಗೆ ಅವರ ಮಗ ಸೊಸೆ ಕೆಲಸ ಮಾಡುವ ಕಡೆ ತುಂಬಾ ನಷ್ಟವಾಗಿ ಫಾಕ್ಟರಿ ಬಂದ್ ಮಾಡಲಾಯಿತು, ಹಾಗಾಗಿ ಮಗ, ಸೊಸೆ, ಮೊಮ್ಮಗ ಕೃಷ್ಣನ ತೋಟಕ್ಕೆ ವಲಸೆ ಬಂದರು. ಸೊಸೆ ಅಡಿಗೆ ಮಾಡ್ತಿದ್ದರಿಂದ ಕೊಟ್ರಪ್ಪ ನಿರಾತಂಕ ವಾಗಿ ತೋಟಕ್ಕೆ ಹೋಗಿ ಬರೋದು ಮಾಡ್ತಿದ್ರು. ಈ ವರ್ಷ ಪಾಪ ಕೊರೋನಾ ವೈರಸ್ ಅಂತ ಯುಗಾದಿಗೆ ಹೋಗಲಾಗಲಿಲ್ಲ.
ನಾನು ತೋಟಕ್ಕೆ ಹೋಗಿ ಏನೇನೋ ಸಾಹಸ ಮಾಡಿದಾಗಲೆಲ್ಲ ಅವರ ಮುಖದಲ್ಲಿ ಕಿರಿದಾದ ಮಂದಹಾಸ. ಸೊಗದೆ ಬೇರು, ಅಮೃತ ಬಳ್ಳಿ ಎಲ್ಲ ಅವರು ಹೇಗೆ ಬಳಸುತ್ತಾರೆಂದು ನನಗೆ ಪಾಠ. 
ಕೆಳಗಿನ ಲೇಖ ಶ್ರೀಕಾಂತ ಬರೆದಿದ್ದು. ಉಳಿದಿದ್ದ ಮಾಯಿತಿ ಅದರಲ್ಲಿದೆ.  

ಹೋಗಿ ಬನ್ನಿ ಕೊಟ್ರಪ್ಪ 🙏


No comments: