April 12, 2020

ಬಿಟ್ಟಿ ಸಲಹೆಗಳು

ಲಾಕ್ ಡೌನ್ 30 ರ ತನಕ ವಿಸ್ತರಿಸಲಾಗಿದೆ.
ಅಡಿಗೆ ಬಗ್ಗೆ ಬರೆದಿದ್ದೇನೆ ಆದರೆ ಸೌಂದರ್ಯ, ಮುಖ ಕಾಂತಿ, ಕೂದಲಿನ ಆರೈಕೆ ಬಗ್ಗೆ ಬರೆದಿಲ್ಲ..ಯಾಕಂದ್ರೆ ನಾ ಸೌಂದರ್ಯದ ಬಗ್ಗೆ ಯಾವತ್ತೂ ತಲೆ ಕೆಡಿಸಿ ಕೊಂಡಿಲ್ಲ 😀😀

ಹಾಲಂತೂ ಸಿಗುತ್ತಿದೆ. ಕೆನೆಗೆ ಸ್ವಲ್ಪ ಅರಿಶಿನ, ಗುಲಾಬ್ ಜಲ್ ಬೆರೆಸಿ ಮುಖಕ್ಕೆ ಹಚ್ಚಿ, ಐದು ನಿಮಿಷ ಹಾಗೆ ಇಡಿ. ಆಮೇಲೆ ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ. ಸ್ನಾನ ಮಾಡುವಾಗ ನಿಮ್ಮ regular ಬಳಸುವ ಸಾಬೂನಿನಿಂದ ಮುಖ ತೊಳೆಯಿರಿ.

ಮುಖದ ಜಿಡ್ಡು ತೆಗೆಯಲು : ರಾಗಿ ಹಿಟ್ಟಿಗೆ ಸ್ವಲ್ಪ ನೀರು ಬೆರೆಸಿ ಪೇಸ್ಟ್ ಮಾಡಿಕೊಳ್ಳಿ..ಮುಖಕ್ಕೆ ಚೆನ್ನಾಗಿ ತಿಕ್ಕಿ..ಕೂಡಲೇ ತಣ್ಣೀರಿನಿಂದ ತೊಳೆಯಿರಿ. ಜಿಡ್ಡು ಹೋಗುವುದು ಮಾತ್ರವಲ್ಲ ಮುಖದ ಚರ್ಮ ಕೋಮಲವಾಗುತ್ತೆ.

ಕೂದಲಿಗೆ : ತೆಂಗಿನ ಎಣ್ಣೆ ಬಿಸಿ ಮಾಡಿ. ಅದಕ್ಕೆ ಕರಿಬೇವಿನ ಎಲೆ, ಮೆಂತೆ ಹಾಕಿಡಿ. ತಣ್ಣಗಾದ ನಂತರ ,ಇದ್ದತೆ ನಿಂಬೆ ರಸ ಬೆರೆಸಿ. ಕೂದಲಿನ ಬುಡಕ್ಕೆ ಹಚ್ಚಿ ಹಗೂರವಾಗಿ ಮಾಲಿಶ್ ಮಾಡಿ. ಅರ್ಧ ಗಂಟೆ ಬಿಟ್ಟು ಬಿಸಿ ನೀರಿನಿಂದ ಸ್ವಚ್ಛ ಮಾಡಿ. ಕೂದಲು ನುಣುಪು ಹಾಗೂ ಶೈನ್ ಪಡೆಯುತ್ತೆ.
Warning : try at your own risk 😀😀

ಮನೆಯಲ್ಲಿ ಸೊಳ್ಳೆ ಇವೆಯೇ? 
ತೆಂಗಿನ ಚರಟಕ್ಕೆ ಬೆಂಕಿ ಹಾಕಿ, ಇದ್ದಿಲ ಕೆಂಡ ಮಾಡಿ ಕೊಳ್ಳಿ. ಕೈ ಸುಡದ ಹಾಗೆ ಒಂದು ಪಾತ್ರೆಯಾಗಲಿ,ಅಥವಾ ಸೌಟು ಇದರಲ್ಲಿ ಹಾಕಿ, ಪೂಜೆಗೆ ಬಳಸುವ ಕರ್ಪೂರ ಹಾಕಿ. ಹೊಗೆ ಬರುತ್ತಿದ್ದಾಗಲೇ ಪಾತ್ರೆಯ ಜತೆ ಮನೆಯೆಲ್ಲಾ ತಿರುಗಿ... ಸೊಳ್ಳೆಗಳೂ ಹೋಗುತ್ತೆ, ವ್ಯಾಯಾಮವೂ ಆಗುತ್ತೆ. 😀😀


2 comments:

ವಿ.ರಾ.ಹೆ. said...

ಲಾಕ್ ಡೌನ್ 30 ರ ತನಕ ವಿಸ್ತರಿಸಲ್ಪಟ್ಟಿದೆ.

extend = ವಿಸ್ತರಣೆ ,
extending = ವಿಸ್ತರಿಸುವುದು.

has been extended = ವಿಸ್ತರಿಸಲ್ಪಟ್ಟಿದೆ, ವಿಸ್ತರಿಸಲಾಗಿದೆ

Happy lock down days to you :)

nenapina sanchy inda said...

ವಿಕಾಸ ಧನ್ಯವಾದಗಳು...ಸರಿಪಡಿಸಲಾಗಿದೆ
😊

ಮಾಲತಿ ಎಸ್