April 3, 2020

Lock Down Day 11



ಬೆಳಿಗ್ಗೆ ಶ್ರೀಕಾಂತ ರ conference call ಕಿರುಚಾಟ, ನನ್ನ ಮನೆ ಕೆಲಸ ಅಡುಗೆ...ಊಟದ ನಂತರ ಶ್ರೀಕಾಂತ್ ಮಧ್ಯಾನ್ಹದ ಸಣ್ಣ ನಿದ್ದೆ, ಅಕ್ಕ ಕಿವಿಗೆ ಹಾಕ್ಕೊಂಡು ಮೊಬೈಲ್ ನಲ್ಲಿ ಕೊರಿಯನ್ ಡ್ರಾಮ..ಆದ್ರೆ, ನಾನು ಇನ್ಸ್ಟಾಗ್ರಾಮ್ ವಿಡಿಯೊ ನೋಡ್ತಿರ್ತೇನೆ.

ಕತ್ರಿನಾ ಕೈಫ್ ಪಾತ್ರೆ ತೊಳೆಯೋದು, ದೀಪಿಕಾ ಪಡುಕೋಣೆ ಗಂಡನ ಜತೆ ಚೇಷ್ಟೆ ಮಾಡೋದು, ತಬಸ್ಸುಮ್ (ತಬು) ಕವನ ಬರೆದು ಹಾಕೋದು, ಸುಧಾಮೂರ್ತಿ ತಮ್ಮ ಸಾಕುನಾಯಿ ಜತೆ ಆಡೋದು, ಶಿಲ್ಪ ಶೆಟ್ಟಿ ಗಂಡನಿಗೆ exercise ಮಾಡಲು ಪ್ರೇರೇಪಿಸೋದು, ಅಂಗಳ ಗುಡಿಸಿ, ಗಿಡಗಳಿಗೆ ನೀರು ಹಾಕೋದು, ಮಗನ ಜತೆ ಪೇಪರ್ ಕ್ರಾಫ್ಟ್ ಮಾಡೋದು..ಇಂತವೆಲ್ಲ ನೋಡೋದ್ರಲ್ಲಿ ಟೈಂ ಹೋದದ್ದೇ ತಿಳಿಯೋದಿಲ್ಲ. 😊
ಇವತ್ತು ಮಲಯಾಳಂ ಸಿನಿಮಾ 'ಟ್ರಾನ್ಸ್' ನೋಡಿದೆ. ಕೆಲವು ಚೆನ್ನಾಗಿರೋ stills ಗಳಿವೆ. ಚೆಂದದ ಸಿನಿಮಾ
ಇವತ್ತಿನ ಪೇಪರ್ ನಲ್ಲಿ ಇವರಲ್ಲಿ ಒಬ್ಬರಾದ ಲೂಯಿಸ್ ನಿಧನದ ವಾರ್ತೆ ಇತ್ತು..ಈಗ ಈ ಹಳೆಯ ತುಷಾರದಲ್ಲಿ ಅವರ ಬಗ್ಗೆ ಇನ್ನಷ್ಟು ಮಾಹಿತಿ ಸಿಕ್ಕಿತು

ಇವತ್ತಿಗಿಷ್ಟೇ....
😊

No comments: