April 29, 2020

ಅಪ್ಪೆ ಸಾರು

ಇನ್ನು ಮಾವಿನಕಾಯಿ ಮಾವಿನ ಹಣ್ಣಿನ season ಶುರು.
ಪರಿಮಳ ಯುಕ್ತ ಮಾವಿನ ಕಾಯಿಯನ್ನು ನೀರಲ್ಲಿ ಬೇಯಿಸಿ. ಇದಕ್ಕೆ ಹಸಿ ಮೆಣಸಿನ ಕಾಯಿ, ಹಿಂಗು ಸೇರಿಸಿ ಎಲ್ಲವನ್ನೂ ನುಣ್ಣಗೆ ರುಬ್ಬಿ.  ತೆಂಗಿನ ಎಣ್ಣೆ ಕೊನೆಯಲ್ಲಿ ಸೇರಿಸಿ. ಅಥವಾ ಸಾಸಿವೆ, ಜೀರಿಗೆ, ಕರಿಬೇವಿನ, ಒಣ ಮೆಣಸಿನ ಒಗ್ಗರಣೆ ಹಾಕಿ. ಸೂಪ್ ತರಹ ಸೇವಿಸಬಹುದು ಅಥವಾ ಅನ್ನಕ್ಕೆ ಕಲಿಸಿ ಉಣ್ಣ ಬಹುದು.
ಅಪ್ಪೆಮಿಡಿ ಉಪ್ಪಿನಕಾಯಿಗೆ ಹಾಕಲು ತಂದಿದ್ದೆವು. ಅದರಲ್ಲಿ ಏಟಾದ ಕೆಲವು ಕಾಯಿ ಇತ್ತು. ಅದನ್ನು ಉಪಯೋಗಿಸಿ ಅಪ್ಪೆ ಸಾರು ಮಾಡಿದ್ದು




April 28, 2020

ಮಳೆ ಮಾರ್ಕೆಟ್ etc

ಇವತ್ತು ಬೆಳ್ ಬೆಳಗ್ಗೆ ಮೋಡ. ಕೆಲವು ದಿನಗಳಿಂದ ತುಂಬಾ ಸೆಕೆ. ಈ ಮಳೆಯಿಂದ ಬೆಂಗಳೂರು ಸ್ವಲ್ಪ ತಣ್ಣಗೆ ಆಗಬಹುದು. ಲಾಕ್ ಡೌನ್ ಕೊನೆ ಗೊಳ್ಳಲು ಇನ್ನು ಕೆಲವು ದಿನಗಳಿವೆ.
ನಿನ್ನೆ ಆಶೀರ್ವಾದ್ ಸೂಪರ್ ಮಾರ್ಕೆಟ್ ಗೆ ಹೋಗಿದ್ದೆ. ವಾಪಸ್ ಬರ್ತಾ ಕ್ಲಿಕ್ಕಿಸಿದ ಕೆಲವು ಚಿತ್ರಗಳು.
ನಿನ್ನೆ ಬಿಲ್ಡಿಂಗ್ ಗೆ ಸ್ವೀಟ್ chariot ಬೇಕರಿಯಿಂದ ಗಾಡಿ ಬಂದಿತ್ತು. ಕೆಲಗಿವೆ ಚಿತ್ರಗಳು
ಹಾಗೆ ಕೊರೊನ ವೈರಸ್ ನ ಪ್ರತಿಕೃತಿ ಮಾಫಿ ಸರ್ಕಲ್ ನಲ್ಲಿ ಹೀಗಿಟ್ಟಿದ್ದ






April 19, 2020

Birthday in the times of social distancing

My niece celebrated her 18th birthday in the US...her friends drove by to wish her like this 👇👇
Kids came up with novel ideas
Cupcakes for the friends to take away
Talking from a safe distance

With permisdion from my sis. Just loved the idea. They all sang the birthday song aloud. A birthday to remember 


April 16, 2020

ಹೊರಟು ಬಿಟ್ರು ಕೊಟ್ರಪ್ಪ

ತುಂಬಾ ಸಮಾಧಾನಿ ನಮ್ಮ ಕೊಟ್ರಪ್ಪ. ಬೈಕ್ ಬೇಕು ಅಂತ ತುಂಬಾ ಆಸೆ ಪಟ್ಟಿದ್ರು. ಶ್ರೀಕಾಂತ್ ಒಂದು ರಾಜದೂತ್ ಬೈಕ್ ಕೊಡಿಸಿದ್ರು.. ನಮ್ಮ ತೋಟಕ್ಕೆ ಹೋಗುವ ಸಮಾಯ ಬೆಳಿಗ್ಗೆ ೯. ೦೦ ರಿಂದ ಸಂಜೆ ೪ ರವರೆಗೆ. ಶ್ರೀಕಾಂತ್ ಕಸಿನ್ ಅವರದು ಭರ್ಜರಿ ತೋಟ. ಅದಕ್ಕೋಸ್ಕರ ಅವರು ತಮ್ಮ ತೋಟದ ಸಹಾಯಕರಿಗಾಗಿ ಪುಟ್ಟ ಪುಟ್ಟ ಹೆಂಚಿನ ಮನೆಗಳನ್ನು ಕಟ್ಟಿಸಿದ್ದಾರೆ. ಹಾಗೆ ಒಂದರಲ್ಲಿ ಕೊಟ್ರಪ್ಪ ಹಾಗು ಅವರ ದೂರದ ಸಂಬಂಧಿ ಬಿಡಾರ, ನಮ್ಮ ಕೊಟ್ರಪ್ಪನವರು ಲಿಂಗಾಯತ ಧರ್ಮದವರು...ಜೀವನದಲ್ಲಿ ಅಪಾರವಾದ ಕಟ್ಟು ನಿಟ್ಟು, ನೇಮ ನಿಯಮ. ಕೃಷ್ಣನ ಸಹಾಯಕ್ರಿಗೆ ಅಡಿಗೆ ಮಾಡುವವರೊಬ್ಬರಿದ್ದಾರೆ. ಆದರೆ ಕೊಟ್ರಪ್ಪ ಅವರ ಅಡಿಗೆ ಅವರೇ ಮಾಡಿಕೊಳ್ಳೋರು, ಊರಿನಿಂದ ಬರುವಾಗ ಜೋಳದ ಹಿಟ್ಟು ತರುತ್ತಿದ್ದರು. ಪ್ರತಿ ಸೋಮವಾರ ನಡೆಯುವ ತೀರ್ಥಹಳ್ಳಿ ಸಂತೆ ಹೋಗಿ ವಾರಕ್ಕೆ ಬೇಕಾಗುವಷ್ಟು ತರಕಾರಿ,,,ಇಲ್ಲದಿದ್ದರೆ ನೀರುಳ್ಳಿ, ಮೆಣಸಿನಕಾಯಿ ಇದ್ದಾರೆ ಆಯ್ತು. ಬೇರೆಯವರು ಮಾಡಿದ ಟಿ ಸಹಿತ ಕುಡಿಯುತ್ತಿರಲಿಲ್ಲ. ಅಂತದ್ದರಲ್ಲಿ ಅವರ ಸಂಭಂದಿ ಹುಡುಗನಿಗೆ ಕುಡಿತ, ಮಾಂಸಾಹಾರಿ ಅಭ್ಯಾಸ. ಗುಂಡು ತುಂಡು ಮಾಡಿದಾಗ ಅವರಿಗೆ ಮನೆಗೆ ಸೇರಿಸುತ್ತಿರಲಿಲ್ಲ ಕೊಟ್ರಪ್ಪ. ಕೊನೆಗೆ ಸಾಕಾಗಿ 'ತೋಟ ನಾನೇ ನೋಡಿಕೊಳ್ತೇನೆ....ಆತನಿಗೆ ಊರಿಗೆ ಕಳುಹಿಸಿಕೊಡಿ ಅಂತ ಒಂದೇ ವರಾತ.... ಹಾಗೆ ಮಾಡಿದ್ದೂ ಆಯಿತು. ಅವರು ಅಡಿಗೆ ಪಡಿಗೆ ಎಲ್ಲ ಮಾಡಿ ತೋಟಕ್ಕೆ ಬರುವಾಗ ೧೧,೦೦ ಗಂಟೆ ಕಳೆದು ಹೋಗುತ್ತಿದ್ದರೂ ನಾವು ಏನು ಅನ್ನಲಿಲ್ಲ. 
ಯುಗಾದಿಗೆ ಊರಿಗೆ ಹೋದ್ರೆ ಒಂದು ೧೫ ದಿನ ಠಿಕಾಣಿ . ಅದಕ್ಕೊಂದು ತುಂಬಾ ಕಾಯ್ತಿದ್ರು. ಆದರೆ ಹಿಂದಿನ ವರ್ಷ ಅವರ ಊರಲ್ಲಿ ಜೋರು  ಮಳೆಗೆ ಅವರ ಮಗ ಸೊಸೆ ಕೆಲಸ ಮಾಡುವ ಕಡೆ ತುಂಬಾ ನಷ್ಟವಾಗಿ ಫಾಕ್ಟರಿ ಬಂದ್ ಮಾಡಲಾಯಿತು, ಹಾಗಾಗಿ ಮಗ, ಸೊಸೆ, ಮೊಮ್ಮಗ ಕೃಷ್ಣನ ತೋಟಕ್ಕೆ ವಲಸೆ ಬಂದರು. ಸೊಸೆ ಅಡಿಗೆ ಮಾಡ್ತಿದ್ದರಿಂದ ಕೊಟ್ರಪ್ಪ ನಿರಾತಂಕ ವಾಗಿ ತೋಟಕ್ಕೆ ಹೋಗಿ ಬರೋದು ಮಾಡ್ತಿದ್ರು. ಈ ವರ್ಷ ಪಾಪ ಕೊರೋನಾ ವೈರಸ್ ಅಂತ ಯುಗಾದಿಗೆ ಹೋಗಲಾಗಲಿಲ್ಲ.
ನಾನು ತೋಟಕ್ಕೆ ಹೋಗಿ ಏನೇನೋ ಸಾಹಸ ಮಾಡಿದಾಗಲೆಲ್ಲ ಅವರ ಮುಖದಲ್ಲಿ ಕಿರಿದಾದ ಮಂದಹಾಸ. ಸೊಗದೆ ಬೇರು, ಅಮೃತ ಬಳ್ಳಿ ಎಲ್ಲ ಅವರು ಹೇಗೆ ಬಳಸುತ್ತಾರೆಂದು ನನಗೆ ಪಾಠ. 
ಕೆಳಗಿನ ಲೇಖ ಶ್ರೀಕಾಂತ ಬರೆದಿದ್ದು. ಉಳಿದಿದ್ದ ಮಾಯಿತಿ ಅದರಲ್ಲಿದೆ.  

ಹೋಗಿ ಬನ್ನಿ ಕೊಟ್ರಪ್ಪ 🙏


April 14, 2020

21 days


I frown
On the lockdown 😗🙄😎


Of course i love my family
Yet at times i feel suffocated, claustrophobic
Irritated with a capital I
Went to fetch milk...guess what? The milk crates were in front of the shop, the owner had not turned up..then the daily milk supplier to the apartment, called him..In the mean time the elastic of my mask came off...there were a few elderly people waiting for the milk, all without mask 🤔For want of something to do, i  removed my hairclip and attached the elastic to my hair with the clip and was smiling to myself like mad...😁😁

No shortage of essential stuffs. Reliance van coming on alternate days..Namadhari's taking online orders, lady vegetable vendor coming alternate days with her entire family...sister, husband, son and daughter in law...each selling fruits, vegetables, flowers, coconuts etc







The cake that went day before yesterday


And some pastries



April 12, 2020

ಬಿಟ್ಟಿ ಸಲಹೆಗಳು

ಲಾಕ್ ಡೌನ್ 30 ರ ತನಕ ವಿಸ್ತರಿಸಲಾಗಿದೆ.
ಅಡಿಗೆ ಬಗ್ಗೆ ಬರೆದಿದ್ದೇನೆ ಆದರೆ ಸೌಂದರ್ಯ, ಮುಖ ಕಾಂತಿ, ಕೂದಲಿನ ಆರೈಕೆ ಬಗ್ಗೆ ಬರೆದಿಲ್ಲ..ಯಾಕಂದ್ರೆ ನಾ ಸೌಂದರ್ಯದ ಬಗ್ಗೆ ಯಾವತ್ತೂ ತಲೆ ಕೆಡಿಸಿ ಕೊಂಡಿಲ್ಲ 😀😀

ಹಾಲಂತೂ ಸಿಗುತ್ತಿದೆ. ಕೆನೆಗೆ ಸ್ವಲ್ಪ ಅರಿಶಿನ, ಗುಲಾಬ್ ಜಲ್ ಬೆರೆಸಿ ಮುಖಕ್ಕೆ ಹಚ್ಚಿ, ಐದು ನಿಮಿಷ ಹಾಗೆ ಇಡಿ. ಆಮೇಲೆ ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ. ಸ್ನಾನ ಮಾಡುವಾಗ ನಿಮ್ಮ regular ಬಳಸುವ ಸಾಬೂನಿನಿಂದ ಮುಖ ತೊಳೆಯಿರಿ.

ಮುಖದ ಜಿಡ್ಡು ತೆಗೆಯಲು : ರಾಗಿ ಹಿಟ್ಟಿಗೆ ಸ್ವಲ್ಪ ನೀರು ಬೆರೆಸಿ ಪೇಸ್ಟ್ ಮಾಡಿಕೊಳ್ಳಿ..ಮುಖಕ್ಕೆ ಚೆನ್ನಾಗಿ ತಿಕ್ಕಿ..ಕೂಡಲೇ ತಣ್ಣೀರಿನಿಂದ ತೊಳೆಯಿರಿ. ಜಿಡ್ಡು ಹೋಗುವುದು ಮಾತ್ರವಲ್ಲ ಮುಖದ ಚರ್ಮ ಕೋಮಲವಾಗುತ್ತೆ.

ಕೂದಲಿಗೆ : ತೆಂಗಿನ ಎಣ್ಣೆ ಬಿಸಿ ಮಾಡಿ. ಅದಕ್ಕೆ ಕರಿಬೇವಿನ ಎಲೆ, ಮೆಂತೆ ಹಾಕಿಡಿ. ತಣ್ಣಗಾದ ನಂತರ ,ಇದ್ದತೆ ನಿಂಬೆ ರಸ ಬೆರೆಸಿ. ಕೂದಲಿನ ಬುಡಕ್ಕೆ ಹಚ್ಚಿ ಹಗೂರವಾಗಿ ಮಾಲಿಶ್ ಮಾಡಿ. ಅರ್ಧ ಗಂಟೆ ಬಿಟ್ಟು ಬಿಸಿ ನೀರಿನಿಂದ ಸ್ವಚ್ಛ ಮಾಡಿ. ಕೂದಲು ನುಣುಪು ಹಾಗೂ ಶೈನ್ ಪಡೆಯುತ್ತೆ.
Warning : try at your own risk 😀😀

ಮನೆಯಲ್ಲಿ ಸೊಳ್ಳೆ ಇವೆಯೇ? 
ತೆಂಗಿನ ಚರಟಕ್ಕೆ ಬೆಂಕಿ ಹಾಕಿ, ಇದ್ದಿಲ ಕೆಂಡ ಮಾಡಿ ಕೊಳ್ಳಿ. ಕೈ ಸುಡದ ಹಾಗೆ ಒಂದು ಪಾತ್ರೆಯಾಗಲಿ,ಅಥವಾ ಸೌಟು ಇದರಲ್ಲಿ ಹಾಕಿ, ಪೂಜೆಗೆ ಬಳಸುವ ಕರ್ಪೂರ ಹಾಕಿ. ಹೊಗೆ ಬರುತ್ತಿದ್ದಾಗಲೇ ಪಾತ್ರೆಯ ಜತೆ ಮನೆಯೆಲ್ಲಾ ತಿರುಗಿ... ಸೊಳ್ಳೆಗಳೂ ಹೋಗುತ್ತೆ, ವ್ಯಾಯಾಮವೂ ಆಗುತ್ತೆ. 😀😀


April 11, 2020

ದ್ರಾಕ್ಷಿ




ದ್ರಾಕ್ಷಿ - ಅನಾನಸು ಸಾಸಿವೆ

ಇವತ್ತು ದ್ರಾಕ್ಷಿ ಬೆಳೆಸುವ ರೈತರು ಅಪಾರ್ಟ್ಮೆಂಟ್ ಗೆ ಬಂದಿದ್ದರು. ಕೆಜಿ ಒಂದಕ್ಕೆ 55₹. ತುಂಬಾ ಕಡಿಮೆಯಾಯ್ತು ಅಅನ್ನಿಸ್ತು.  ಶರದ್ variety. ಇನ್ನೊಂದು variety ಕೂಡ ಇದೆ ಆದ್ರೆ, harvest ಮಾಡಲು ಅವರಿಗೆ ಜನ ಸಿಗಲಿಲ್ಲವಂತೆ. ಸುಮಾರು ಜನ ತೆಗೊಂಡ್ರು. ಕೆಲವರು ಒಂದು ಕೆ ಜಿ ತೆಗೊಂದು, ರುಚಿ ನೋಡಿ ಇನ್ನಷ್ಟು ದ್ರಾಕ್ಷಿ ಖರೀದಿಸಿದರು
ನಮ್ಮ ಬಿಲ್ಡಿಂಗ್ ನಲ್ಲಿರೋ ಅನುಪಮ ಅನ್ನುವವರು 2 ಕೆ ಜಿ ದ್ರಸ್ಕಿ, ನಾಲ್ಕು ಸೆಕ್ಯೂರಿತಿಯವರಿಗೆ ಕೊಟ್ಟರು...ಶ್ರೀಕಾಂತ ಮತ್ತು ಅವರ ಪರಿಚಯದವರು ಲಿಂಗಣ್ಣ ಅವರು ಕೆಲವು ಕೆ ಜಿ ದ್ರಾಕ್ಷಿ ಖರೀದಿಸಿ ಬಿ ಬಿ ಎಂ ಸಿ ಹೌಸ್ ಕೀಪಿಂಗ್ ನವರಿಗೆ ಕೊಟ್ಟರು. Nice ಅಲ್ವಾ?
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೇಸಿಗೆಯಲ್ಲಿ ಮದುವೆ, ಮುಂಜಿ ಮುಂತಾದ ಸಮಾರಂಭಕ್ಕೆ ಕಡ್ಡಾಯವಾಗಿ ಮಾವು , ಅನಾನಸು, ಗೇರು ಹಣ್ಣು, ದ್ರಾಕ್ಷಿ ಮುಂತಾದು ಹಾಕಿ ಸಾಸಿವೆ ಮಾಡುತ್ತಾರೆ. ಕೇಕ್ ಆರ್ಡರ್ ಇತ್ತು. ಅದಕ್ಕಾಗಿ ಅನಾನಸು ತರಿಸಿದ್ದು, ಕೆಲವು ಹೋಳು ಉಳಿದಿತ್ತು. ಇವತ್ತು ದ್ರಾಕ್ಷಿ ಕೂಡ ಸಿಕ್ಕಿದ್ದರಿಂದ ದ್ರಾಕ್ಷಿ -  ಅನಾನಸಿನ ಸಾಸಿವೆ ನಮ್ಮನೇಲಿ
#ಲಾಕ್ ಡೌನ್..