July 27, 2011

Miscellany- ಮಿಸಳ್ ಪಾವ್*

ನನ್ನ ತಂಗಿ ತನ್ನ ಮಕ್ಕಳೊಂದಿಗೆ ಎರಡು ವರ್ಷಗಳಿಗೊಮ್ಮೆ ಬರುವುದು. ಅವಳ ಮಕ್ಕಳು ಮಾಲು ಮತ್ತು ನಿಹಾ ಒಂದು ದಿನ ಪೂರ್ತಿ Papier-mâché (ಪಪಿಯರ್ ಮಾಶೆ)ಗೆ ಅಂತಲೇ ಮೀಸಲಿಡುತ್ತಾರೆ. ರದ್ದಿ ಕಾಗದಗಳನ್ನು ಚಿಕ್ಕ ಚಿಕ್ಕ ಚೂರುಗಳನ್ನಾಗಿ ಮಾಡಿ ನೀರಲ್ಲಿ ಅದ್ದಿಡುವುದು.  ಅದು ಸರಿಯಾಗಿ ನೆಂದ ಮೇಲೆ ನನ್ನ ಅಡಿಗೆ ಮನೆಯ ಮಿಕ್ಸಿಯಲ್ಲಿ (grrrr) ಅದನ್ನು ನುಣ್ಣಗೆ ರುಬ್ಬಿ, ಅದಕ್ಕೆ ಗೋಂದು ಬೆರೆಸಿ ,ಆ ಪೇಸ್ಟ್ ನ್ನು ಬೇಕಾದ ಆಕಾರದಲ್ಲಿ mould ಮಾಡುವುದು  Papier-mâché. ಒಣಗಿದ ನಂತರ ಅದಕ್ಕೆ ಬೇಕಾದ ಹಾಗೆ ಬಣ್ಣ ಹಾಕ ಬಹುದು.
ಮನೆಯಂತು ತ್ಸುನಾಮಿ ಬಂದ ಹಾಗೆ ಇರುತ್ತೆ. ಶ್ರೀಕಾಂತ ಪಾಪ ಹೆದರಿ ಆಫಿಸ್ ಟೂರ್ ಹಾಕ್ಕೊಂಡು ಪಟ್ನಾ, ದೆಹಲಿಗೆಲ್ಲ ಹೋಗಿ ಬಂದ್ರು ಹತ್ತು ದಿನ. :-)

ಚೂರ್ ಚೂರ್ ಕರ್ ದಿಯಾ
ನೀರಿನಲ್ಲಿ ನೆನೆಸಿಡುವ ಕಾರ್ಯಕ್ರಮ, ದಮ್ ಲಗಾಕೆ ಐಸಾ...

ಅದೇ part -2

ಮಧ್ಯದಲ್ಲಿ ಒಂದು ಫೋಟೊ ಗೆ smiling ಪೋಸ್: ನಿವೇದಿತ, ಶ್ರೇಯಾ, ರಿಯಾ
ನನಗೆ ಒಂದು ಬಕೆಟ್ ಕಡಿಮೆ ಬಟ್ಟೆ ವಾಶ್ ಮಾಡಲಿಕ್ಕೆ. plus ಮಾಲವಿಕಂದು ’ಅಮ್ಮ ಪ್ಲೀಸ್ ಕಣೆ ಇವತ್ತು ಬಟ್ಟೆ ವಾಶ ಮಾಡೋದು ಬೇಡ ಅನ್ನುವ request ಬೇರೆ :-)

ಅಡಿಗೆ ಮನೆಗೆ no entry. ಅಮ್ಮ ಕಿರುಚ ಬೇಡ್ವೆ!! ನಾನೆಲ್ಲ ಕ್ಲೀನ್ ಮಾಡ್ತೀನಿ: ನಿಹಾರಿಕ ಉವಾಚ. ನನ್ನ ರುಬ್ಬುವ ಕಲ್ಲಿಗೆ ಎಲ್ಲರೂ  hi ಅನ್ನಿ ನೋಡುವ

French plait ನಾನು ಹಾಕಿದ್ದು ನಿವೇದಿತಂಗೆ

Ice cream break
papier mache project. pink colour jelly fish  by Nivedita


ಮಾಲವಿಕ ಗೆ ಕೆಲಸಕ್ಕೆ ಆದಿತ್ಯವಾರ ಮಾತ್ರ ರಜೆ. ಬೆಳಿಗ್ಗೆ ತಲೆ ಸ್ನಾನ ಮಾಡಿ, ಮಧ್ಯಾಹ್ನ ಊಟ- ನಿದ್ದೆ ಮಾಡಿ, ಸಂಜೆ ಈ ತರಹ ಚಿತ್ರ ಬಿಡಿಸುತ್ತಾಳೆ

ನನ್ನ ನಲವತ್ತನೆ ಹುಟ್ಟು ಹಬ್ಬಕ್ಕೆ ನಿಹಾ ಮಾಡಿದ ಕಾರ್ಡ್ . ನನ್ನ favorite.
ಕಾರ್ಡ್ ಒಳಗಣ ಬರಹ. ಕಪಾಟು ಕ್ಲೀನ್ ಮಾಡುವಾಗ ಸಿಕ್ಕಿದ್ದು, ಸ್ಕ್ಯಾನ್ ಮಾಡಿ ಹಾಕಿದೆ.


ನೆಕ್ ಲೇಸ್ ಜಾಹಿರಾತು. ನಿಹಾರಿಕ handiwork
ಈಗ ಮಿಸಳ್ ಪಾವ್ ಬಗ್ಗೆ. ಮಹಾರಾಷ್ಟ್ರದ ಬೆಳಗಿನ ಉಪಹಾರ. ತೊಗರಿ ಕಾಳಿನ ಉಸಲಿ ಮಾಡಿ ಅದಕ್ಕೆ mixture ಬೆರೆಸಿದ್ರೆ ಅದೇ ಮಿಸಳ್ ಪಾವ್, ಜತೆಗೆ ಹಸಿ ನೀರುಳ್ಳಿ, ಕೊತ್ತಂಬರಿ ಸೊಪ್ಪು, ನಿಂಬೆ ಹುಳಿ. (ಉಸಳ್ + ಮಿಕ್ಸರ್ = ಮಿಸಳ್)
ಫೋಟೊ from the net
ಅದೇ ನನ್ನ ಪೋಸ್ಟ್ ನ ಟೈಟಲ್. ಅಂತು ಇಂತು ಯಾವುದಾದರು ತಿಂಡಿಯ reference ಇರಲೇ ಬೇಕು.
:-)

July 22, 2011

A fan of Art of Living

ಉಜಿರೆ 1998.ಆ ದಿನ ಮಕ್ಕಳ ದಿನಾಚರಣೆ. ಬೆಳಿಗ್ಗೆ ಮಕ್ಕಳಿಗೆ ಶಿಕ್ಷಕ ವೃಂದದಿಂದ ವಿವಿಧ ವಿನೋದಾವಳಿ ಕಾರ್ಯಕ್ರಮಗಳು ಮಕ್ಕಳಿಗೆ ಛದ್ಮ ವೇಷ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. 12.00 ಗಂಟೆಗೆ ಮಕ್ಕಳನ್ನು ಸ್ಕೂಲ್ ವ್ಯಾನ್ ವಾಪಸ್ ಮನೆಗೆ ಕರೆದುಕೊಂಡು ಬಂತು. ಮಕ್ಕಳಿಗೆ ಬೇಗ ಬೇಗ ಊಟ ಮಾಡಿಸಿ ನಾನು ಪುನಃ ಅವರನ್ನು ಶಾಲೆಗೆ ಕರೆದುಕೊಂಡು ಹೋಗಬೇಕಿತ್ತು. ಸಂಜೆ parents ಡೇ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಮಾಲವಿಕ ಮತ್ತು ಇನ್ನೂ 7 ಮಕ್ಕಳು ಸೇರಿ ಒಂದು ಗಂಟೆಯ ಯಕ್ಷಗಾನದ ಆಟ ಮಾಡುವುದಿತ್ತು. ಅದಕ್ಕೆ ರೆಡಿಯಾಗಲು ತುಂಬ ಸಮಯ ಬೇಕಿತ್ತಂತ ನಮಗೆ ಮೂರು ಗಂಟೆಗೆ ಬರಲು ಹೇಳಿದ್ದರು. ಬೆಳಿಗ್ಗೆ ಮಕ್ಕಳಿಗೆ ಸಮೋಸ, ಒಂದು ಸ್ವೀಟ್, ಒಂದು ಖಾರ ಮತ್ತು ಒಂದು fruity ಜ್ಯೂಸ್ ಪ್ಯಾಕೆಟ್ ಕೊಟ್ಟಿದ್ದರಂತೆ. ಅದರಲ್ಲಿ ನಿಹಾರಿಕ ಒಂದು ಕಾಗದದ ಹಾಳೆಯಲ್ಲಿ ನನಗೋಸ್ಕರ ಸಮೋಸ ಕಟ್ಟಿಕೊಂಡು ತಂದಿದ್ದಳು-’ಅಮ್ಮ ನಿನಗೆ ಸಮೋಸ ಅಂದರೆ ಇಷ್ಟ ಅಲ್ಲವಾ, ಅದಕ್ಕೆ ನಿನಗೆ ಅಂತ ತಂದೆ’ ಅಂತ. ನನಗಂತು ಖುಶಿಯಾಗಿ ಆಗಲೆ ಅದನ್ನು ತಿಂದು ಬಿಟ್ಟೆ. ಮಕ್ಕಳಿಗೆ ಊಟ ಬಡಿಸಿದೆ. ಕೆಲವೇ ನಿಮಿಷದಲ್ಲಿ ಹೊಟ್ಟೆಯಲ್ಲಿ ಕತ್ತಿಯಿಂದ ತಿರುಚಿದಂತಾಗಿ ಮೈ ಯೆಲ್ಲ ಬೆವರಲು ಶುರು ಅಯಿತು. ಸಮಯ ಹೋಗ್ತಾ ಹೊಟ್ಟೆ ನೋವು ಜಾಸ್ತಿಯಾಗ್ತಾ ಹೋಯ್ತು. ನನಗೆ ಯಾವುದೇ ಸಾಮನ್ಯ ಕಾಯಿಲೆಗಳಾದ ಕೆಮ್ಮು, ಜ್ವರ, ಶೀತ, ತಲೆ ನೋವು, ಹೊಟ್ಟೆ ನೋವು ಇತ್ಯಾದಿ ಯಾವತ್ತೂ ಬಂದಿದ್ದೆ ಇಲ್ಲ. ಇದ್ಯಾಕಪ್ಪ ಹೀಗೆ ಆಗ್ತಾ ಇದೆ ಅಂತ ಆಲೋಚಿಸುವಾಗ, ಆಗ ತಿಂದ ಸಮೋಸ ನೆನಪಿಗೆ ಬಂತು. ನನ್ನ ಪರಿಸ್ಥಿತಿ ತುಂಬ ಹಾಳಾಗಿ ಹೋಗ್ತಾ ಇತ್ತು. ಮನೆಯಲ್ಲಿದ್ದ ಕುಟಜಾರಿಷ್ಠ ಕುಡಿದೆ. ಶ್ರೀಕಾಂತ ಆ ದಿನ ಬಂಗಾಡಿಗೆ field visit ಗೆ ಹೋಗಿದ್ದರು. ಅವರು ಬರುವುದು ಸಂಜೆ ಆಗ್ತಿತ್ತು ಹಾಗೂ ಅವರು ಸೀದ ಶಾಲೆಯ ಕಾರ್ಯಕ್ರಮಕ್ಕೆ ಬರುವವರಿದ್ದರು. ಖ್ಯಾತ ಬರಹಗಾರರಾದ ಕೆ.ಟಿ. ಗಟ್ಟಿ ಯವರ ಮನೆಯ ಮಹಡಿಯಲ್ಲಿ ನಾವು ಬಾಡಿಗೆಗೆ ಇದ್ದೆವು. ಅವರ ಕಿರಿಯ ಮಗಳು, ಪುನೆಯಲ್ಲಿ ಓದುತಿದ್ದವರಿಗೆ ಹುಷಾರಿಲ್ಲ ಅಂತ ಮನೆಯವರೆಲ್ಲ ಪುಣೆಗೆ ಹೋಗಿದ್ದರು. ಆಫಿಸ್ ಗೆ ಫೋನ್ ಮಾಡುವ ಅಂತ ನೋಡಿದ್ರೆ ಫೋನ್ dead. ನಿಧಾನವಾಗಿ ಕಾಲೆಳೆದುಕೊಂಡು ಮೆಟ್ಟಿಲಿಳಿದು ಮನೆಯ ಗೇಟ್ ಹತ್ತಿರ ಬಂದೆ. ಗೇಟ್  ಎದುರಿನವರು ಬಾಡಿಗೆಗೆ ರಿಕ್ಷಾ ಓಡಿಸುತ್ತಿದ್ದರು. ಅವರು ಸಾಮನ್ಯವಾಗಿ ಮಧ್ಯಾಹ್ನ ಊಟಕ್ಕೆ ಬರುತ್ತಿದ್ದರು. ಅವರ ರಿಕ್ಷಾದಲ್ಲಿ ಹೋಗಿ ಡಾಕ್ಟರ್ ಶೆಣೈ ಮಾಮನ ಮನೆಗೆ ಹೋಗಿ ಅಲ್ಲಿಂದಲೇ ಮಕ್ಕಳನ್ನು ಶಾಲೆಗೆ ಕರೆದುಕೊಂಡುವ ಯೋಜನೆ ನನ್ನದು. ಅಲ್ಲಿ ಹೋಗಿ ನೋಡಿದರೆ ಮನೆಗೆ ಬೀಗ ಹಾಕಿತ್ತು. ಅವರು ಯಾವತ್ತೂ ಎಲ್ಲಿಗೂ ಬೀಗ ಹಾಕಿ ಹೋಗಿದ್ದೆ ಇಲ್ಲ. ಪುನ: ಕಷ್ಟಪಟ್ಟು ಮನೆಗೆ ಬಂದೆ. ಮಕ್ಕಳಿಗೆ ಶಾಲೆಗೆ ಹೋಗುವುದು ಬೇಡ ಅನ್ನುವ ಅಂದುಕೊಂಡಿದ್ದೆ, ಆದರೆ ಅವರ ಮುಖದಲ್ಲಿನ ಸಂತಸ ಸಂಭ್ರಮ ನೋಡಿ ನನಗೆ ಏನೂ ಹೇಳಲು ತೋಚಲಿಲ್ಲ. ಇಬ್ಬರ ಹತ್ತಿರ ಪುಟ್ಟ ಬ್ಯಾಗ ಹಾಗೂ ಎರಡು ಚೀಟಿಯಲ್ಲಿ ಮನೆಯ ವಿಳಾಸ, ಆಫಿಸ್ ನಂಬರು ಬರೆದು ಚೀಲದಲ್ಲಿಟ್ಟು, ’ಅಮ್ಮನಿಗೆ ಏನಾದರೂ ಆದರೆ, ಈ ಚೀಟಿ ಯಾರಿಗಾದರೂ ತೋರಿಸಬೇಕು’ ಅಂತ instructions ಕೊಟ್ಟೆ. ನಮ್ಮ ಮನೆಯಿದ್ದದ್ದು ಧರ್ಮಸ್ಥಳದ ದಾರಿಯಲ್ಲಿ, ಉಜಿರೆ ಪೇಟೆಯಿಂದ ಸುಮಾರು ದೂರ-outskirts. ಪೇಟೆಗೆ ಬರಬೇಕಾದರೆ ನಾವು ಧರ್ಮಸ್ಥಳದಿಂದ ಬೆಳ್ತಂಗಡಿಗೆ ಹೋಗುವ ಟೆಂಪೋ ಮೇಲೆ ಹೋಗಬೇಕಿತ್ತು. ಸರಿ ಟೆಂಪೊ ಗೆ ಕಾಯುವಾಗ ನನ್ನ ಎಡ ಕಣ್ಣಿನ ದೃಷ್ಟಿ ಮಂಜಾಯಿತು, breathing problem ಶುರು ಆಯಿತು. ಟೆಂಪೊದಲ್ಲಿ ಬೇರೆ ರಶ್. ಉಜಿರೆ ಸರ್ಕಲ್ ನಲ್ಲಿ ಇಳಿದು ಅಲ್ಲಿಂದ ರಿಕ್ಷಾ ಮಾಡಿ ಶಾಲೆಗೆ ಬಂದೆವು. ಅಲ್ಲಿ ನೋಡಿದರೆ ಒಬ್ಬ ಟೀಚರ್ ಮತ್ತು ಮಕ್ಕಳಿಗೆ ಬಣ್ಣ ಹಚ್ಚಿ ರೆಡಿ ಮಾಡಲು ಒಬ್ಬರು ಮಾತ್ರ ಯಕ್ಷಗಾನದ ಕಲಾವಿದರು -ಮಕ್ಕಳಿಗೆ ಯಕ್ಷಗಾನ ಕಲಿಸಿದವರು   ಇದ್ದರು. ನನ್ನನ್ನು ನೋಡಿ ಟೀಚರ್ ಗೆ ಖುಶಿ. ಬನ್ನಿ ಬಣ್ಣ ಹಚ್ಚಲು ನೀವು ಸಹಾಯ ಮಾಡಿ ,ಇನ್ನಿಬ್ಬರು ಬರಬೇಕಿತ್ತು ಯಾಕೋ ಹೊಟ್ಟೆ ನೋವು ವಾಂತಿ ಶುರು ಆಗಿ ಅವರು ಬರ್ತಾ ಇಲ್ಲ. ನಾವೇ ಮೂವರು ಈ 8 ಮಕ್ಕಳನ್ನು ರೆಡಿ ಮಾಡಬೇಕು. ಸರಿ ಆ ಹಿರಿಯರು ಬಣ್ಣ ಬಳಿದ ಹಾಗೆ ನಾನು ಕಷ್ಟ ಪಟ್ಟು ಒಂದೆ ಕಣ್ಣಿನ ದೃಷ್ಟಿಯಿಂದ,  ಬಣ್ಣ ಹಚ್ಚಿದೆ, ಯಾಕೆಂದರೆ ನಾಜೂಕಿನ ಕೆಲಸಗಳು ನನ್ನಿಂದ ಸ್ವಲ್ಪ ದೂರ. ಅದರ ಮೇಲೆ ಅಸಾಧ್ಯವಾದ ಹೊಟ್ಟೆ ನೋವು. ಅಷ್ಟಾದ ಮೇಲೆ ಇನ್ನಿಬ್ಬರು ಹುಡುಗಿಯರು, ’ಆಂಟಿ ಪ್ಲೀಸ್ ಸೀರೆ ಉಡಿಸಿ’ ಅಂತ ಬಂದರು, ಅದನ್ನು ಮಾಡಿ ಉಶ್ಶಪ್ಪ ಅಂತ ಹೊರಗಡೆ ಫಂಕ್ಷನ್ ನಡೆಯುವ ಸ್ಥಳಕ್ಕೆ ಬಂದು ಎದುರುಗಡೆ ಕುರ್ಚಿಯಲ್ಲಿ ಕುಳಿತೆ.ಗಾಳಿ ಬೀಸುತ್ತ ಇದ್ದಿದರಿಂದ ಸ್ವಲ್ಪ ಹಾಯೆನಿಸಿತು. ಎಷ್ಟು ಹೊತ್ತು ಹಾಗೆ ಕೂತಿದ್ದೆ ನೆನಪಿಲ್ಲ. ಡಾ. ಶೆಣೈ ಮಾಮ ಬಂದು ’ಮಗು’ ಅಂತ ಕರೆದಾಗಲೆ ಒಂದು ತರಹ ಎಚ್ಚರ. ಹೀಗೆ ಹೀಗೆ ಆಗ್ತ ಇದೆ ಅಂದಾಗ, ಏನು ತಿಂದೆ ಮಗು ಅಂತ ಕೇಳಿದರು. ಇತ್ತೀಚಿಗೆ ಡಾ. ಶೈಣೈ ಮಾಮ ನನಗೆ art of living ಆಶ್ರಮದಲ್ಲಿ ಸಿಕ್ಕಾಗ ಕೂಡ ’ಮಗು’ ಅಂತ ಸಂಭೋಧಿಸಿದ್ದು ಎಷ್ಟು ಖುಶಿಯಾಯ್ತು ಗೊತ್ತ?) :-) ನಿಹಾರಿಕ ತಂದ ಸಮೋಸ ಬಗ್ಗೆ ಹೇಳಿದೆ. ಅದಕ್ಕೆ ಅವರು ’ಹೌದು ಶಾಲೆಯಿಂದ ಸುಮಾರು ಮಕ್ಕಳು ಇವತ್ತಿನ ತಿಂಡಿ ತಿಂದು food poisoning ಆಗಿ ನನ್ನ ಕ್ಲಿನಿಕ್ ಗೆ ಬಂದಿದ್ದರು. -ಬಾ ನಿನಗೆ ಇಂಜೆಕ್ಷನ್ ಕೊಡ್ತೇನೆ ಅಂದಾಗ ನನಗೆ ನನ್ನ ಹೊಟ್ಟೆ ನೋವು ನಿಂತಿದ್ದು ಗಮನಕ್ಕೆ ಬಂತು. ಕಣ್ಣು ಕಾಣಿಸುತ್ತಿತ್ತು. ಈಗ ಬೇಡ ಮಾಮ, ಸರಿ ಯಿದ್ದೆನೆ ಅನ್ನಿಸುತ್ತೆ. ರಾತ್ರಿ ಎಲ್ಲ ಕಾರ್ಯಕ್ರಮ ಮುಗಿದ ಮೇಲೆ ನೋಡುವ ಅಂದೆ. ಸ್ವಲ್ಪ ಹೊತ್ತಿನಲ್ಲಿ ಶ್ರೀಕಾಂತ್ ಅವರ ಮಿತ್ರರನ್ನು ಕರೆದುಕೊಂಡು ಶಾಲೆಗೆ ಬಂದರು. ರಾತ್ರಿ ಆ ಮಿತ್ರರು ನಮ್ಮ ಮನೆಯಲ್ಲಿ ಊಟಕ್ಕೆ ಬರುವವರಿದ್ದರು.ನಂತರ ನನ್ನ attention ಎಲ್ಲ ರಾತ್ರಿಗೆ ಏನು ಮಾಡುವುದಪ್ಪ ಅಂತ ಆ ಕಡೆ ಹೋಯ್ತು. ಯಾಕೆ ಅಂದರೆ ಏನಾದರೂ grocery ಬೇಕಿದ್ದರೆ ನಾನು ಶಾಲೆಯಿಂದ ಮನೆಗೆ ಹೋಗುವಾಗಲೇ ಖರೀದಿಸಬೇಕಿತ್ತು. ಯಕ್ಷಗಾನ ಕಾರ್ಯಕ್ರಮ ತುಂಬ ಚೆನ್ನಾಗಿ  ಮೂಡಿಬಂತು.8.00 ಗಂಟೆಗೆ ಕಾರ್ಯಕ್ರಮ ಮುಗಿದು ನಾವೆಲ್ಲ ಮನೆಗೆ ಬಂದು, ಆಮೇಲೆ ನಾನು ಪುನ: ಅಡಿಗೆ ಮಾಡಿ, ಮಿತ್ರರು  late night ಬಸ್ ನಲ್ಲಿ ಹೊರಟ ನಂತರ ಶ್ರೀಕಾಂತ್ ಗೆ ಹೀಗ್ ಹೀಗೆ ಆಯ್ತು ಇವತ್ತು ಅಂದೆ. ಅಂತು ಸತ್ತು ಬದುಕಿದೆ ಆದಿನ. ಆ ತರಹ ನೋವು, ಹಿಂಸೆ ಅನುಭವಿಸುದ್ದು ಅದೇ first and last. TOUCHWOOD!!! ಬಹುಶಃ ಆವಾಗ ನಾನು ಆರ್ಟ್ ಆಫ್ ಲಿವಿಂಗ್ ನ ಸುದರ್ಶನ ಕ್ರಿಯಾ ಯೋಗ ಮಾಡುತ್ತಿದ್ದೆ. ಆದ್ದರಿಂದ food poisoning ಆಗಿದ್ದು ತನ್ನಿಂದ ತಾನೆ ಸರಿಹೋಯ್ತು ಅಂತ ನನ್ನ ಅನಿಸಿಕೆ. ಶ್ರೀ ಶ್ರೀ ಅವರು ಹೇಳಿದ್ದನ್ನೆಲ್ಲ ನಾನು ನಂಬಲ್ಲ. ಆದರೆ ಅವರ breathing exercises ನಿಜಕ್ಕೂ ಪರಿಣಾಮಕಾರಿಯಾಗಿವೆ. ಹಲವಾರು ಜನರ ಹಲವು ಕಾಯಿಲೆಗಳು ಗುಣಮುಖವಾಗಿದೆ. ಶ್ರೀಕಾಂತ ಅವರಿಗೆ ಬಹು ಬೇಗ dust allergey ಆಗುತ್ತಿತ್ತು. ಸುದರ್ಶನ ಕ್ರ್ರಿಯೆಗೆ ಒಳಪಟ್ಟಮೇಲೆ ಅದು ಸಂಪೂರ್ಣ ಮಾಯವಾಗಿದೆ, ಹಾಗೆ ನಿಹಾರಿಕಳ ದಮ್ಮು (wheezing) ಕೂಡ. ನಾನಂತು ದಿನಾ ಸುದರ್ಶನ ಕ್ರಿಯೆಯನ್ನು ಮಾಡುತ್ತೇನೆ. It keeps me healthy!!


ಶ್ರೀಕಾಂತ, ನಾನು, ಮಗು ಕೃಷ್ಣ, ಡಾ. ಶೆಣೈ ಮಾಮ, ಮಿತ್ರ ಆಂಟಿ (ಡಾ. ಮಾಮನ ಹೆಂಡತಿ) ವಿವೇಕಾನಂದ ಸಾಲಿಮಠ, ಶೋಭ ಸಾಲಿಮಠ- Art of Living ನ ಕನಕಪುರ ಆಶ್ರಮದಲ್ಲಿ. ಮಗುವಿಗೆ ನಾನು 'ಏನು ಪುಟ್ಟಿ ನಿನ್ನ ಹೆಸರು' ಅಂತ ಕೇಳಿದಾಗ ಅವಳು ಮುದ್ದಾಗಿ 'ಕೃಷ್ಣ' ಅಂದ ಕ್ಷಣ ತೆಗೆದ ಚಿತ್ರ. ಕೃಷ್ಣ ,ಶೆಣೈ ಮಾಮಿಯ ತಮ್ಮನ ಮಗಳು.

ಶ್ರೀ ಶ್ರೀ ಶ್ರೀ ರವಿಶಂಕರ್ ಗುರೂಜಿ :-)

July 15, 2011

ಮರಕೆಸುವಿನ ಎಲೆ ಫೋಡಿ- colocasia crispies

this is a rare delicacy almost becoming extinct. but it is a delicious snack/side dish.

ಈ ಚಿತ್ರದ ಕೃಪೆ : ಫೇಸ್ಬುಕ್ ಮೂಲಕ  ಪರಿಚಿತರಾದ ದಾಕ್ಷಾಯಿಣಿ , ಅವರು ಸುರೇಶ ಬಸವಾನಿ ಯವರ ಫೋಟೋವನ್ನು ಬಳಸಿಕೊಂಡಿದ್ದಾರೆ. ಇಬ್ಬರಿಗೂ ಧನ್ಯವಾದಗಳು :-)

ಮರಕೆಸು ಮಳೆಗಾಲ ಅಥವಾ  ಹೆಚ್ಚು ನಿಖರವಾಗಿ ಹೇಳಬೇಕಾದರೆ ಚೌತಿ ಹಬ್ಬದ ಆಸು ಪಾಸು ಮರದ ಪೊಟರೆ ಅಥವಾ ಕಲ್ಲು ಸಂಧಿಯಲ್ಲಿ ಬೆಳೆಯುತ್ತದೆ. ಪತ್ರೋಡೆ ಮಾಡುವುದಕ್ಕಿಂತ ಸ್ವಲ್ಪ ಕೆಲಸ ಜಾಸ್ತಿ ಇದರಲ್ಲಿ. ಮಸಾಲೆ ಹಚ್ಚಿ ಸುರುಳಿ ಸುತ್ತಿ, ಕತ್ತಿಯಿಂದ ಚಿಕ್ಕ ಚಿಕ್ಕ slices ಗಳನ್ನಾಗಿ ಮಾಡಿ,ದಾರದಿಂದ ಕಟ್ಟಿ ಎಣ್ಣೆಯಲ್ಲಿ ಸಣ್ಣ ಉರಿಯಲ್ಲಿ crisp ಆಗುವ ತನಕ ಕರಿಬೇಕು ( deep fry) 
ಇವಳಿಗೇನಪ್ಪ ಮನೆಯಲ್ಲೇ ಇರುತ್ತಾಳೆ, ಮರಕೆಸುವಿನ ಫೋಡಿ ಮಾಡಲು ಏನು ಧಾಡಿ ಅನ್ನಕೋ ಬಹುದು ನೀವೆಲ್ಲ, ಆದರೆ ನಾನು ಆಫಿಸ್ ಗೆ ಹೋಗುವಾಗ ಇಂತಹ ಸ್ಪೆಶಲ್ ತಿಂಡಿಗಳನ್ನು ಮಾಡಿ ನನ್ನ ಸಹೋದ್ಯೋಗಿಗಳಿಗೆ ತೆಗೆದು ಕೊಂಡು ಹೋಗುತ್ತಿದ್ದೆ. ಬಹುಪಾಲು ಜನರು ತುಂಬ ಊರು ಸುತ್ತಿದ್ದರಿಂದ, ನಾನು ಮಾಡುವ ತಿಂಡಿ experiment ಗಳನ್ನೆಲ್ಲ ಅವರು ಎಂಜಾಯ್ ಮಾಡುತ್ತಿದ್ದರು.  ಜೋರು ಮಳೆಯಿದ್ದಾಗ ಅಥವಾ ಅಫಿಸ್ ನಲ್ಲಿ ತುರ್ತು ಪರಿಸ್ಥಿತಿ ಇದ್ದು ಲೇಟ್ ಆಗಿ ಕೆಲಸ ಮಾಡುವವರಿದ್ದಾಗ ಕರಿದ ಹಲಸಿನ ಹಪ್ಪಳ, ಕಾಡು ಪೀರೆ (ಮಾಡ ಹಾಗಲಕಾಯಿ) ಫೋಡಿ, ಆಲು ಬೋಂಡ, ಗೋಳಿ ಬಜೆ, ನೀರುಳ್ಳಿ ಪಕೋಡ ವಗೈರೆ ಮಾಡಿ ಕಳುಹಿಸುತ್ತಿರುತ್ತೇನೆ. ಆಫಿಸ್ ಮಂಜಣ್ಣಂಗೆ ’ಮಂಜು ಆಫಿಸ್ ನಲ್ಲಿ ಎಷ್ಟು ಜನರಿದ್ದಾರೆ’ ಅಂದ ಕೇಳಿದ್ರೆ, ’ತಿಂಡಿ ಕಳಿಸ್ತಿದ್ದಿರಾ ಮ್ಯಾಡಂ ಅಂತ ಕೇಳುತ್ತಾನೆ. :-) ತಿಂದು ಎಂಜಾಯ್ ಮಾಡುವವರಿದ್ದರೆ ಮಾಡಲು ಹುಮ್ಮಸ್ಸು ಬರುತ್ತದೆ. 
ಮರಕೆಸುವಿನ ಫೋಡಿ ಮಾಡುವ ಬಗೆ. ಇದು exclusively ಕೊಂಕಣಿ  preparation.
ಸಾಧಾರಣ ಕೆಸುವಿನ ಎಲೆಗಿಂತ ಇದರ ಗಾತ್ರ ಚಿಕ್ಕದು ಹಾಗೂ thick texture. underneath light purple coloured

ಹತ್ತು ಮರಕೆಸುವಿನ ಎಲೆ, ಚೆನ್ನಾಗಿ ತೊಳೆದು, ಒರೆಸಿಡಿ.
1 ಗ್ಲಾಸ್ ಉದ್ದಿನ ಬೇಳೆ, 1 ಗ್ಲಾಸ್ ಅಕ್ಕಿ. ಉದ್ದಿನ ಬೆಳೆಯನ್ನು ಬಾಣಲೆಯಲ್ಲಿ ಎಣ್ಣೆ ಹಾಕದೆ ಹುರಿದು ಅಕ್ಕಿ ಜತೆಗೆ ಅರ್ಧ ಗಂಟೆ ನೀರಲ್ಲಿ ನೆನೆಸಿಡಿ . ನಂತರ ನೀರು ಪೂರ್ತಿ ಬಸಿದು ಕೆಂಪು ಮೆಣಸು, ಹುಣಸೆ ಹುಳಿ, ಹಿಂಗು ಮತ್ತು ಉಪ್ಪು ಹಾಕಿ ತರಿತರಿಯಾಗಿ ರುಬ್ಬಿ.
ಎಲೆ ಹಿಂಭಾಗಕ್ಕೆ ಮಸಾಲೆಯನ್ನು  ಹೀಗೆ ಸವರಿ:
ಹೀಗೆ ಎಲೆಯನ್ನು ಉಲ್ಟಾ ಮಾಡಿ
ಮಾಸಾಲೆ ಹಚ್ಚುವ  ಬಗೆ
ಒಂದರ ಮೇಲೆ ಒಂದು ಎಲೆಗಳನ್ನು ಇಡುತ್ತ ಮಸಾಲೆ ಯನ್ನು ಹಚ್ಚಿ

ಮಧ್ಯದಲ್ಲಿ ಫೋಲ್ಡ್ ಮಾಡಿ  ಹೀಗೆ:
ಹಾಸಿಗೆ ಸುತ್ತಿದ ಹಾಗೆ ಸುರುಳಿ ಸುತ್ತುವುದು
ಹೀಗೆ ಕಟ್ ಮಾಡಿ
ಅಕ್ಕಿ ಹಿಟ್ಟಲ್ಲಿ ಫೋಡಿಗಳನ್ನು ಹೊರಳಿಸಿ, ಬಿಸಿ ಎಣ್ಣೆಯಲ್ಲಿ, ಸಣ್ಣ ಉರಿಯಲ್ಲಿ  fry ಮಾಡಿ


ಡಾ. ರಹಮತ್ ತರಿಕೆರೆಯವರ ಬರಹ ’ಹಿಮನದಿಯ ದಡಗಳಲ್ಲಿ ನಡೆದ ನೆನಪು’ ಓದುತ್ತ ತಿಂದ ಪರಿ :-) ನಾನು ದಾರ ಗಿರ ಹಾಕಲ್ಲ. ಸುಮ್ಮನೆ ಅಕ್ಕಿ ಹಿಟ್ಟಿನಲ್ಲಿ ಹೊರಳಿಸಿ, ಕೈನಿಂದ ಗಟ್ಟಿ ಪ್ರೆಸ್ ಮಾಡಿ deep fry ಮಾಡುತ್ತೇನೆ. ಇಲ್ಲದಿದ್ದರೆ ತಿನ್ನುವಾಗ ಕಿರಿ ಕಿರಿ. ದಾರ ತೆಗಿಲಿಕ್ಕೆ 5 ನಿಮಿಷ ಹೋಗುತ್ತೆ. ಪೂರ್ವಜರೆಲ್ಲ ಬಾಳೆ ನಾರಿನಿಂದ ಫೋಡಿಯನ್ನು ಕಟ್ಟುತ್ತಿದ್ದರಂತೆ.
actually ಈ ಫೋಡಿಗಳನ್ನ ಧುಂಪದ ಎಣ್ಣೆಯಲ್ಲಿ ಕರಿ ಬೇಕಂತೆ. dont know what is dhoomp. ಅದಕ್ಕೆ ನಾವು ರಿಫೈನ್ಡ್ ಎಣ್ಣೆ ಉಪಯೋಗಿಸುವುದು. ಮತ್ತು ಮುಂಬೈನಲ್ಲಿ ನಮಗೆ ಈ ತಿಂಡಿಯ ಬಗ್ಗೆ ಗೊತ್ತಿರಲಿಲ್ಲ. ನಾನು ಮದುವೆಯಾಗಿ ತೀರ್ಥಹಳ್ಳಿಗೆ ಬಂದ ಮೇಲೆ ಅಲ್ಲಿ ಮಾಡಿದ್ದನ್ನು ನೋಡಿದ್ದು, ತಿಂದಿದ್ದು etc. ಮೊನ್ನೆ ಶ್ರೀಕಾಂತ ತೀರ್ಥಹಳ್ಳಿಗೆ ಹೋಗಿದ್ರು ಆಗ ಮರಕೆಸುವಿನ ಎಲೆ ತಂದಿದ್ರು. ಮಾಡಿ ನಾವು ತಿಂದು, ನಿಮಗೋಸ್ಕರ ಚಿತ್ರಗಳನ್ನು ಹಾಕಿದ್ದೇನೆ. :-)
ಕೊನೆಯ ಎರಡು ಫೋಟೊ ನಾನು ತೆಗೆದಿದ್ದು. settings change ಆಗಿ ಆ ತರಹ ಕಾಣುತ್ತ ಇದೆ. ಪುನ: ಫೋಟೊ ತೆಗೆಯುವ ಅಂದ್ರೆ ಫೋಡಿ ಖಲ್ಲಾಸ್.
topmost photo of Colocasia leaves c/o the internet- google images
old post with new images. thanks to Dakshyayini and Suresh basavani 

July 9, 2011

ಸುಮ್ನೆ ಒಂದಿಷ್ಟು..........


ಬೆಳಿಗ್ಗೆ 6.45 ಅನ್ನುವಷ್ಟರಲ್ಲಿ ನನ್ನ breakfast ಕೆಲಸ ಹಾಗೂ ಅರ್ಧ ಅಡಿಗೆ ಮುಗಿದಿರುತ್ತೆ. ನಿಹಾರಿಕ ಕಾಲೇಜ್ ಗೆ ಬೆಳಗಿನ ತಿಂಡಿ ಹಾಗೂ ಮಧ್ಯಾಹ್ನ ಊಟಕ್ಕೆ ಬುತ್ತಿ ಕಟ್ಟಿಕೊಂಡು ಹೋಗುತ್ತಾಳೆ. ಆ ಮೇಲೆ ನಾನು ಮಂಚದ ಮೇಲೆಬಿದ್ದುಕೊಂಡು ಮಾಲವಿಕಾ ತನ್ನ ಕೆಲಸಕ್ಕೆ ರೆಡಿಯಾಗುವುದನ್ನು ನೋಡುತ್ತೇನೆ. ಅದು ನನಗೆ ಯಾವತ್ತೂ ಇಷ್ಟವಾದ ಕೆಲಸ. ಮೊದಲಿಗೆ ಅವಳ ಉದ್ದ ಕೂದಲನ್ನು ಸಪಾಟಾಗಿ ಬಾಚಿ ಒಂದೂ ಕೂದಲು ಹೊರಗೆ ಬರದಂತೆ 10-15 ಕ್ಲಿಪ್ ಗಳನ್ನು ಹಾಕಿ ಕೊಳ್ಳುತ್ತಾಳೆ. ಅವಳದು ಗುಂಗರು ಕೂದಲು, ಎಷ್ಟು ಕಷ್ಟ ಪಟ್ಟರು ಕೆಲವು ಕೂದಲು ಹಿಡಿತಕ್ಕೆ ಬರುವುದಿಲ್ಲ. ದಿನಾ ಕೂದಲು ಬಾಚುವಾಗ ಅವಳು ಅಮ್ಮ hair straightener ತೆಗೆಸಿಕೊಡು ಅನ್ನುವುದು ನಾನು ಹೂಂ ಅನ್ನುವುದು ನಡೆಯುತ್ತ ಇತ್ತು. ಅವಳಿಗೆ ಕಾಲೇಜ್ ನಲ್ಲಿ ಅವಳ ಸಹಪಾಠಿಗಳು ’ಸೂರ್ಯಕಾಂತಿ’ ಅಂತ ಕರೆಯುತ್ತಿದ್ದರು. ಯಾಕೆಂದರೆ ಸಂಜೆಯಾದ ಕೂಡಲೆ ಅವಳ ಕ್ಲಿಪ್ ಗೆ ಸೇರಿಸಿದ ಕೂದಲೆಲ್ಲ ಹೊರಬಂದು ಅವಳ  ಮುಖದ ಸುತ್ತಲೂ ಹರಡಿಕೊಂಡಿರುತ್ತದೆ.ಇವತ್ತೂ ಅವಳು ಕೇಳಿದಾಗ, ಹೇ ಹೇಗೂ ನಾಳೆ ನಿನಗೆ  ಸಂಬಳ ಬರುತ್ತೆ. ಅದರಿಂದಲೆ ತೆಕ್ಕೋ ಅಂದೆ.
ಹೌದು, ಹುಟ್ಟಿದ ಕೂಡಲೆ ಹುಬ್ಬುಗಂಟಕ್ಕಿ ಅತ್ತ ಹುಡುಗಿ ಇವಳು ಈಗ ಕೆಲಸಕ್ಕೂ ಸೇರಿಯಾಯ್ತೆ ಅನ್ನುವ ಸೋಜಿಗ ನನಗೆ.

ಅವಳಷ್ಟು ವಯಸ್ಸಿಗೆ ನನಗೆ ಮದುವೆಯಾಗಿ, ಮಾಲವಿಕ ಹುಟ್ಟಿದ್ದಳು :-) ನಾನು ಕಾಲೇಜ್ ಗೆ ಹೋಗದಿದ್ದರೇನಾಯಿತು?? ಮಾಲವಿಕ-ನಿಹಾರಿಕ ಅವರ ಕಾಲೇಜಿನ ಅನುಭವಗಳನ್ನು ಕೇಳಿದರೆ ನಾನೇ ಕಾಲೇಜ್ ಗೆ ಹೋಗಿ ಬಂದಷ್ಟೇ ಖುಶಿಯಾಗುತ್ತಿತ್ತು. ಇಬ್ಬರದ್ದೂ ಮಿಮಿಕ್ರಿ ಬೇರೆ. 

(ಸಿಂಗಾರ ಮಾಡುವವರನ್ನು ನೋಡುವುದು ನನಗೆ ಅತ್ಯಂತ ಮೋಜಿನ ವಿಷಯ. ಇದನ್ನು ಓದಿ first

http://malathisanchiyinda.blogspot.com/2010/02/blog-post.html

ನಾನು ತುಂಬ ಚಿಕ್ಕವಳಾಗಿರುವಾಗ ಮುಂಬೈನಲ್ಲಿ ಅಜ್ಜನ ಮನೆಯಿಂದ ಅಮ್ಮನ ಮನೆಗೆ ವಾರಕ್ಕೊಮ್ಮೆ  ಅಥವ ರಜೆ ದಿನಗಳಲ್ಲಿ ಹೋಗಿರುತ್ತಿದೆ. ಪ್ರತಿ ದಿನ ಬೆಳಿಗ್ಗೆ ಅಪ್ಪ ಕೆಲಸಕ್ಕೆ ಹೋದ ಮೇಲೆ ಅಮ್ಮನ best friend ವಿಜಯ ಆಂಟಿ ಬರುತ್ತಿದ್ದರು. ಅಪ್ಪ ನ ಬ್ಯಾಂಕ್ ಹಾಗೂ ವಿಜಯ ಆಂಟಿಯ ಗಂಡನ ಆಫಿಸ್ ತುಂಬ ದೂರ ಇರುವುದರಿಂದ ಇಬ್ಬರೂ ಬೆಳಿಗ್ಗೆ 7.00 ಗಂಟೆ ಸುಮಾರಿಗೆ ಮನೆ ಬಿಡುತ್ತಿದ್ದರು. ಅಮ್ಮ ಬೇಗ ಬೇಗ ಮನೆ ಕೆಲಸಗಳನ್ನು ಮುಗಿಸುತ್ತಿದ್ದಳು. 10.00 ಗಂಟೆಗೆ ಮೇಲಿನ ಮನೆಯ ವಿಜಯ ಆಂಟಿ ನಮ್ಮ ಮನೆಗೆ ಬರುತ್ತಿದ್ದರು. ಅವರಿಗೆ ಇನ್ನೂ ಮಕ್ಕಳಾಗಿರಲಿಲ್ಲ. ಹೆಚ್ಚಿನ ಪಾಲು ಬಳಿಯಲ್ಲೆ ಸಿಗುವ ಮೀನು ಮಾರ್ಕೆಟ್ ಅಥವಾ ತರಕಾರಿ ಮಾರುಕಟ್ಟೆಗೆ ಹೋಗುವ ಪರಿಪಾಠ. ಅಂದಿನ ದಿನಗಳಲ್ಲಿ ಫ್ರಿಜ್ ಇನ್ನೂ ನಮ್ಮ ಮನೆಗೆ ಬಂದಿರಲಿಲ್ಲ. ನಮ್ಮ ಮನೆಯ godrej ಕಪಾಟ್ ಗೆ full length  ಕನ್ನಡಿ ಇದ್ದರಿಂದ, ವಿಜಯ ಆಂಟಿ ಸೀರೆ ಉಡುವುದು, ಜಡೆ ಹಾಕುವುದು ಮುಂತಾದ ಕೆಲಸಗಳೆಲ್ಲ ನಮ್ಮ ಮನೆಯಲ್ಲೇ ಮಾಡುತ್ತಿದ್ದರು. ನನ್ನ ಅಮ್ಮನಿಗಂತೂ ಮೊಣಕಾಲು ತನಕ ಕೂದಲು. ವಿಜಯ ಆಂಟಿದೂ ಗುಂಗುರು ದಪ್ಪ ಕೂದಲು. ನಾನು ಅವರ ಮುಖಗಳನ್ನು ಕನ್ನಡಿಯಲ್ಲೆ  ನೋಡುತ್ತಿದೆ. ಅಮ್ಮ ವಿಜಯ ಆಂಟಿಗೆ ಅರ್ಧ ಜಡೆ ಹಾಕಿ ಕೊಡುತ್ತಿದ್ದರು, ಉಳಿದರ್ಧ ಜಡೆಯನ್ನು ಅವರೇ ಹಾಕಿ ಮುಗಿಸುತ್ತಿದ್ದರು. ಮಾತಂತೂ ನಿರಂತರವಾಗಿ ಸಾಗುತ್ತಿತ್ತು. ಆಮೇಲೆ ಅವರು ಸೀರೆ ಉಟ್ಟುಕೊಳ್ಳುವುದು, ಮುಖ ತೊಳೆದು, vanishing cream ಹಚ್ಚಿಕೊಂಡು, ಅದಕ್ಕೆ Ponds talcum powder ಹಚ್ಚಿಕೊಳ್ಳುತ್ತಿದರು. ಆ ಮೇಲೆ ಕೆಂಪು ಬಣ್ಣ liquid ಶ್ರೀಂಗಾರ್ ಕುಂ ಕುಂ ದುಂಡಗೆ ದೊಡ್ಡದಾಗಿ ಹಚ್ಚಿಕೊಳ್ಳುತ್ತಿದ್ದರು. ಆಗ ನಮ್ಮಮ್ಮನಿಗೆ ಕೇವಲ 20 ವರ್ಷ ವಯಸ್ಸು. ನಾನು ನನ್ನ ತಮ್ಮ ಇಬ್ಬರೂ ಹುಟ್ಟಿಯಾಗಿತ್ತು. ಅವರು ಆಮೇಲೆ ನಮ್ಮಿಬ್ಬರಿಗೂ ಮನೆಯಲ್ಲಿ ಕೂಡಿ ಹಾಕಿ ಹೊರಗಿನಿಂದ ಬೀಗ ಹಾಕಿ ಹೋಗುತ್ತಿದ್ದರು. ಅಮ್ಮ ಬಿಚ್ಚಿಟ್ಟ ಸೀರೆ ನಾನು ಉಡಲು ಪ್ರಯತ್ನಿಸುತ್ತಿದ್ದೆ. voile ಸೀರೆಯಾದ್ದರಿಂದ ಅದು ಜಾರುತ್ತಿದ್ದುದೆ ಹೆಚ್ಚು. )
ಪುನಃ ಮಾಲವಿಕ ವಿಷಯಕ್ಕೆ ಬರುತ್ತೇನೆ: ಆಮೇಲೆ ಮುಖಕ್ಕೆ ಲೈಟ್ ಆಗಿ ಫೌಂಡೇಶನ್ ಹಚ್ಚಿ, lakme compact talc ಹಚ್ಚಿ, ಕಣ್ಣ ರೆಪ್ಪೆ ಮೇಲೆ ಕೆಳಗೆ ಕಪ್ಪು ಐ ಲೈನರ್ ನಿಂದ ಕಾಡಿಗೆ ಹಚ್ಚಿಕೊಳ್ಳುತ್ತಾಳೆ. ನಂತರ ತುಟಿಗೆ ಲೈಟಾಗಿ ಲಿಪ್ಸ್ಟಿಖ್. ಪ್ಯಾಂಟ್ ಶರ್ಟ್ ಕೋಟ್ ಹಾಕ್ಕೊಂಡು ಕೆಲಸಕ್ಕೆ ಹೋಗಲು ತೈಯಾರ್. ನಾನು ಮಂಚದ ಮೇಲೆ ಬಿದ್ದುಕೊಂಡಿರುವುದನ್ನು ನೋಡಿ ಶ್ರೀಕಾಂತ, ಹೇ ಒಳ್ಳೆ ಸೋಂಬೇರಿ ತರಹ ಬಿದ್ದುಕೊಂಡಿದ್ದಿಯಾ, ನನಗೆ ಆಫಿಸ್ ಕೆಲಸನಾದ್ರೂ ಮಾಡಿ ಕೊಡು ಅಂತಿರುತ್ತಾರೆ.  ನಾವು  ನಮ್ಮ ಸಂಸ್ಥೆಗಳನ್ನು ಪ್ರಾರಂಭಿಸಿದಾಗ ನಾಲ್ಕೆ ಜನ. ಆಗ ನಾನೆಲ್ಲ ತುಂಬ ಕೆಲಸ ಮಾಡಿ ಕೊಡುತ್ತಿದ್ದೆ. ಈಗ 700 ಕ್ಕಿಂತ ಜಾಸ್ತಿ ಜನರಿರುವುದರಿಂದ ನಾನು ಕೆಲವು ತಿಂಗಳಿಂದ ಅಫಿಸ್ ಕೆಲಸಕ್ಕೆ ವಿರಾಮ. ಈಗ ಓದುವುದು ಅಷ್ಟೆ ಮಾಡುವುದು. 
ಆಫೀಸ್ ಸದಸ್ಯರ ಸಂಖ್ಯೆ 700 ದಾಟಿದ್ದಷ್ಟೆ ಅಲ್ಲ ಈಗ ಯಾರು, ಯಾವ ಪ್ರಾಜೆಕ್ಟ್ ,ಹೆಸರೆಲ್ಲ ನೆನಪಲ್ಲಿಡಕ್ಕೆ ಆಗಲ್ಲ. ಒಂದು ಮೋಜಿನ ಪ್ರಸಂಗ ಕೇಳಿ. ಇತ್ತೀಚಿಗೆ ನಾನು ಕುಣಿಗಲ್ ನಲ್ಲಿ ನಡೆದ ಬೃಹತ್ ಸ್ವ ಸಹಾಯ ಸಂಘದ ಸಮ್ಮೇಳಕ್ಕೆ ಹೋಗಿದ್ದೆ. ೫೦೦೦ ಕ್ಕೂ ಹೆಚ್ಚು ಜನರು ಸೇರಿದ್ದರು. ಕೆಲವು ಪ್ರಾಜೆಕ್ಟ್ ಹೆಡ್ ಗಳನ್ನ ಶ್ರೀಕಾಂತ ನನಗೆ ಪರಿಚಯಿಸಿ ಕೊಡುತ್ತ ಇದ್ದರು. ಒಬ್ಬ ಮುಂದೆ ಬಂದು ಮ್ಯಾಡಂ ನೆನಪಿದೆಯಾ ಅಂದ. ಅದಕ್ಕೆ ನಾನು ’ನೋಡಿ ಅಪ್ಪ ನನಗೆ ಮರೆವು ಜಾಸ್ತಿ. ನಿಮ್ಮನ್ನು ನೋಡಿದ ನೆನಪಿಲ್ಲ ನಂಗೆ ಅಂದೆ’ ಅದಕ್ಕೆ ಅವನು ’ನಾನು ಮಂಜುನಾಥ ಮ್ಯಾಡಂ” ಅಂದ. ನಮ್ಮ ಆಫಿಸ್ ನಲ್ಲಿ ಸಾಕಷ್ಟು ಜನ ರಾಘವೇಂದ್ರರು ಮಂಜುನಾಥರು ಇದ್ದರಿಂದ, ಅವರನ್ನು ಆಯ ಪ್ರಾಜೆಕ್ಟ ಹೆಸರು ಸೇರಿಸಿ ಅವರನ್ನು ಕರೆಯುವುದು ವಾಡಿಕೆ, ಸುಜೀವನ ಮಂಜುನಾಥ, ಹೆಡ್ ಆಫಿಸ್ ಮಂಜುನಾಥ, ಕುಣಿಗಲ್ ಮಂಜುನಾಥ.. ವಗೈರೆ. ನಮ್ಮನ್ನು ಪರಿಚಯಿಸಿದಾರೇನ್ರಿ ಅಂದೆ. ಅದಕ್ಕೆ ಅವನ್ನು ನಸು ನಗುತ್ತ ’ಇಲ್ಲ ಮ್ಯಾಡಂ’ ಅಂದ. ಹೋ ಮತ್ತೆ ಹೇಗ್ರಿ ನಮಗೆ ಪರಿಚಯ ಅಂದಿದಕ್ಕೆ,. ಹಿಂದಿನ ತಿಂಗಳು ಆಕ್ಸಿಡೆಂಟ್ ಆಗಿ ತಲೆಗೆ ಪೆಟ್ಟಾಗಿತಲ್ವ ಮ್ಯಾಡಂ?? ನಾನು ಆ ಮಂಜುನಾಥ ಅಂದು ಬಿಟ್ಟ.
ಹೆಲ್ಮೆಟ್ ಹಾಕದೇ ಮಂಜುನಾಥ ಮಹಾರಾಯರು, ಬೈಕ್ ರಸ್ತೆ ಮೇಲೆ ಸ್ಕಿಡ್ ಆಗಿ, ತಲೆ pavement ನ ಬದಿಗೆ ತಾಗಿ ಎಲ್ಲರೂ ಅವನ ಆಸೆ ಬಿಟ್ಟಿದ್ದರು. ಕುಣಿಗಲ್ ನಿಂದ ತುಮಕೂರು ಆಸ್ಪತ್ರೆ ಮತ್ತಲ್ಲಿಂದ ಬೆಂಗಳೂರಿನ NIMHANS ಗೆ ಸೇರಿಸ ಬೇಕೆಂದು ಹೇಳಿದಾಗ ಅಲ್ಲಿನ ಪ್ರಾಜೆಕ್ಟ್ ಹೆಡ್ ಕೆಂಪೆಗೌಡರು ನಮ್ಮ ಮನೆಗೆ ಫೋನ್ ಮಾಡಿದ್ದರು. NIMHANS ನಲ್ಲಿ ಪರಿಚಯದ ಡಾಕ್ಟರ್ ಯಾರಾದ್ರೂ ಇದ್ದರಾ ಅಂತ. patient ಪರಿಸ್ಥಿತಿ ಹೇಗಿದೆ ಅಂದಿದ್ದಕ್ಕೆ, ಮಾತಾಡ್ತಾ ಇಲ್ಲ ಸರ್, ಕಿವಿಯಿಂದನೂ ರಕ್ತ ಸೋರತಾ ಇದೆ ಅಂದ. ಆಗಲೇ ಸಮಯ ರಾತ್ರಿಯ10.00  ದಾಟಿತ್ತು. ಅವರು ತಲುಪಲು ಕನಿಷ್ಠ ಎರಡು ತಾಸಾದರೂ ಬೇಕಿತ್ತು. ಎಂಬುಲನ್ಸ್ ನಲ್ಲಿ ಕರೆದುಕೊಂಡು ಬರುತ್ತ ಇದ್ದರು ಅವರನ್ನು. ಶ್ರೀಕಾಂತ್ ಯಾಕೋ ಊಟ ಮಾಡಿದ್ದಿರಾ ಹುಡುಗರಾ ಅಂತ ಕೇಳಿದರು. ಇಲ್ಲ ಸರ ಮಧ್ಯಾಹ್ನ ಮೂರು ಗಂಟೆಗೆ ಆಕ್ಸಿಡೆಂಟ್ ಆಗಿದ್ದು, ಮಧ್ಯಾಹ್ನ  ಕೂಡ ಊಟ ಮಾಡಿಲ್ಲ ಅಂದರು. ಶ್ರೀಕಾಂತ ನನಗೆ ಅವರ ಊಟಕ್ಕೆ ಏನು ಮಾಡುವ? ಈಗ ಎಲ್ಲೂ ಊಟ ಸಿಗುವ ಹಾಗಿಲ್ಲ ಅಂದರು.ಅನ್ನ ಮಾಡುವಷ್ಟು ಟೈಮ್ ಇರಲಿಲ್ಲ, ಯಾಕಂದ್ರೆ ಶ್ರೀಕಾಂತ ಇಲ್ಲಿಂದ ಅಲ್ಲಿಗೆ ಹೊರಡಬೇಕಿತ್ತು. ನಮ್ಮ ಮನೆಯಿಂದ NIMHANS ಸಾಕಷ್ಟು ದೂರ ಇದೆ. ಚಪಾತಿ ಮಾಡಿ ಕೊಡುತ್ತೇನೆ ಅಂದೆ. ಆದರೆ ಪಲ್ಯಕ್ಕೆ ಆಲೂಗಡ್ಡೆ ಬೇಯಸುವಷ್ಟೂ ಪುರುಸತ್ತು ಇರಲಿಲ್ಲ. ಆಗ ನಾನು ಸ್ಕೂಲ್ ಗೆ /ಆಫಿಸ್ ಗೆ/ ಮಕ್ಕಳ ಡಬ್ಬಿಗೆ ಅಂತ ಮಾಡುತ್ತಿದ್ದ  ಚಟ್ನಿ ಚಪಾತಿ ನೆನಪಿಗೆ ಬಂತು. ಚಪಾತಿ ಹಿಟ್ಟು ಕಲೆಸಿ, ಬೇಗ ತೆಂಗಿನ ಕಾಯಿ ಒಡೆದು, ತುರಿದು, ಮೆಣಸು ಹುಣಸೆ ಹುಳಿ , ಹಸಿ ಶುಂಠಿ ಉಪ್ಪು ಹಾಕಿ ರುಬ್ಬಿದೆ. ಬಿಸಿ ಬಿಸಿ ಚಪಾತಿ ಮಾಡಿ ಒಳಗೆ ಚಟ್ನಿ ಹಚ್ಚಿ ಹೀಗೆ fold ಮಾಡಿ casserole ನಲ್ಲಿ ಹಾಕಿಟ್ಟೆ.

ಮನೆಯಲ್ಲಿ ಬಾಳೆಹಣ್ಣು ಸಾಕಷ್ಟು ಇತ್ತು. ಅದರ ಜತೆ ಬಿಸ್ಕಿಟ್ ಪೊಟ್ಟಣ ಎಲ್ಲವನ್ನೂ ಹಾಕಿ, ಬಾಟಲಿಯಲ್ಲಿ ನೀರು ತುಂಬಿಸಿ ಕೊಟ್ಟೆ. ಟೀ  ಮಾಡುವ ಅಂದ್ರೆ ಹಾಲು ಅಷ್ಟಿರಲಿಲ್ಲ. ಹಾಗೂ ಅಂಗಡಿಗಳೆಲ್ಲ ಬಾಗಿಲು ಹಾಕಿ ಆಗಿತ್ತು ಆಗಲೇ. ಆಸ್ಪತ್ರೆಯಲ್ಲಿ tea/coffee ಸಿಗಬಹುದು ಅಂತ ದೂರದ ಆಸೆ ಇತ್ತು ನನಗೆ. ತಿಂಡಿಯನ್ನೆಲ್ಲ ಕಟ್ಟಿಕೊಂಡು ಶ್ರೀಕಾಂತ, ಶರ್ಮ ಸರ್  ಅವರ ಕಾರಿನಲ್ಲಿ NIMHANS ಗೆ ಹೋದರು. ಅಲ್ಲೆಲ್ಲ formalities ಮುಗಿಸಿ ಬರುವಾಗ ಬೆಳಗ್ಗಿನ ಮೂರು ಗಂಟೆ. ಬಂದ ಕೂಡಲೆ ಅವರು ಹೇಳಿದ್ದು - ನೀನು ಕಳುಹಿಸಿದ್ದ ತಿಂಡಿ ಮೂರೆ ನಿಮಿಷಕ್ಕೆ ದ್ವಂಸ. ಅವರಿಗೆಲ್ಲ ಖುಶಿಯಾಗಿ ನಿನಗೆ ಥ್ಯಾಂಕ್ಸ್ ಕಳಿಸಿದ್ದಾರೆ ಅಂದು, ಇನ್ನಷ್ಟು ಇದ್ದರೂ ಅವರು ತಿನ್ನುತ್ತಿದ್ದರು ಅಂತಲೂ ಹೇಳಿ ಕಳುಹಿಸಿದ್ದರು.
ಮಂಜುನಾಥ ಗೆ ಈಗ ಎಲ್ಲ ಸರಿಯಿದೆಯಾ? ಹೇಗಿದ್ದೀರಿ?? ಅ ದಿನ ನಮಗೆಲ್ಲ ತುಂಬ ಗಾಬರಿಯಾಯ್ತು ಅಂತ ನಾನು ಅನ್ನಬೇಕಾದರೆ ಇಂವ ’ಮ್ಯಾಡಂ ಆದಿನ ಇವರೆಲ್ಲ ಸೇರಿ ಡಬ್ಬಿ ಮುಚ್ಚಳ ತೆಗೆದ ಕೂಡಲೆ ಘಂ ಎನ್ನುವ ಪರಿಮಳ ಬಂತು ಮ್ಯಾಡಂ. ನನಗೆ ಕೊಡದೆ ತಿಂದು ಬಿಟ್ಟಿದ್ದಾರೆ ಇವರೆಲ್ಲ ಅಂದಾಗ ನಮಗೆಲ್ಲ ನಗು.
ಯಾವತ್ತಿನ ಹಾಗೆ ವಿಷಯ ಎಲ್ಲಿಗೋ ಹೋಯಿತು....
ಈ ವಾರಾಂತ್ಯದಲ್ಲಿ ನಮಗೆ ಮಾಲವಿಕ ಪರವಾಗಿ ಮೊದಲ ಸಂಬಳದ treat. ನಿಹಾರಿಕ ಗೆ ಡಬಲ್ ಟ್ರೀಟ್..ಯಾಕಂದ್ರೆ ಇನ್ನು ಮುಂದೆ ಮಾಲವಿಕ ಕೂಡ ಅವಳಿಗೆ pocket money ಕೊಡುತ್ತಾಳಂತೆ. how sweet!!!
:-)

July 3, 2011

ಸಂಡೆ ಸ್ಪೆಷಲ್ ವಡಾ-ಪಾವ್

ಮುಂಬೈ ನಲ್ಲಿ ಸಿಗುವಂತಹ ಪಾವ್ ಇಲ್ಲಿ ಸಿಗಲ್ಲ. ಆದರೆ ವಾರಿಯರ್ ಬೇಕರಿ ಪಾವ್ ಚೆನ್ನಾಗಿದೆ.
ಆಲುಗಡ್ಡೆಯಿಂದ ವಡಾ ಮಾಡಿಕೊಂಡಿಟ್ಟಿರಿ
ಕೆಂಪು ಚಟ್ನಿ : ಬಿಸಿ ನೀರಿನಲ್ಲಿ ಹಾಕಿಟ್ಟ ಖರಜೂರ, ಸ್ವಲ್ಪ ಹುಣಸೆ ಹಣ್ಣು, ಕೆಂಪು ಮೆಣಸು. ಉಪ್ಪು ಹಾಕಿ ರುಬ್ಬುವುದು
ಹಸಿರು/green ಚಟ್ನಿ: ಕೊತ್ತಂಬರಿ ಸೊಪ್ಪು, ಹಸಿ ಮೆಣಸು, ಒಂದೆರಡು ಹಿಳುಕು ಬೆಳ್ಳುಳ್ಳಿ (Optional),ಉಪ್ಪು ಹಾಕಿ ರುಬ್ಬಿ
ಒಂದೆರಡು ಹಸಿ ಮೆಣಸಿನಕಾಯಿಯನ್ನು ಮಧ್ಯಕ್ಕೆ ಉದ್ದುದ್ದ ಸೀಳಿ, ಬೀಜ ತೆಗೆದು, ಉಪ್ಪು ಹಚ್ಚಿ ಎಣ್ಣೆಯಲ್ಲಿ ಹುರಿದಿಡಿ
ಆಮೇಲೆ ವಡಾ ಪಾವ್ ಹೀಗೆ  ತಯಾರಿಸಿ. 


:-)

June 26, 2011

ಉಪ್ಪಿಟ್ಟು ಮತ್ತೊಂದಿಷ್ಟು potpourri



ನನ್ನ ’ladies only' ಪೋಸ್ಟ್ ನಲ್ಲಿ ನೈನಿತಾಲಗೆ ಹೋಗುತ್ತಿರುವುದನ್ನು ಬರೆದಿದ್ದೆನಷ್ಟೆ?? ಆದರೆ  ಮೂರು ಕಾರಣಗಳಿಂದ ಅದು ರದ್ದಾಯಿತು. ಒಂದು ತಂಗಿ ಹಾಗೂ ಮಕ್ಕಳ ಜೆಟ್ ಲ್ಯಾಗ್ ಹೋಗಿರಲಿಲ್ಲ, ನಿಹಾರಿಕ IIT-madras ನ entrance ಕ್ಲಿಯರ್ ಮಾಡದೆ ಇದ್ದರಿಂದ,ಅವಳ ಇನ್ನೊಂದು option ಆದ NMKRV ಕಾಲೇಜು ಸೇರಿದಳು. ಅದು ಜೂನ್ 6 ಕ್ಕೆ ಶುರು ಆಗುವುದರಲ್ಲಿತ್ತು ಮತ್ತು ಮಾಲವಿಕ 15 ನೇ ತಾರೀಕಿಗೆ ಕೆಲಸಕ್ಕೆ ಸೇರ ಬೇಕಾದವಳಿಗೆ 5 ನೇ ತಾರಿಕಿಗೆ ಜಾಯಿನ್ ಆಗಲು ತಿಳಿಸಿದ್ದರು. ಮಾಲವಿಕ ನಿಹಾರಿಕ ರನ್ನು ಬಿಟ್ಟು ನನಗೆ ತಂಗಿಗೆ ನೈನಿತಾಲ್ ಗೆ ಹೋಗುವ ಮನಸ್ಸು ಬರಲಿಲ್ಲ. ಹಾಗಾಗಿ ladies only ಗಳುweekend ನಲ್ಲಿ ಹತ್ತಿರದ ಕೆಲವು ಪ್ರೇಕ್ಷಣಿಯ ಸ್ಥಳಗಳು ಹಾಗು ವಂಡರ್ ಲಾ ಹಾಗೂ ಆದಷ್ಟು ಸುಮಾರು ಹೋಟಲ್ ಗಳಿಗೆ ಭೆಟ್ಟಿ  ನೀಡಿದೆವು. ಶ್ರೀಕಾಂತ ಹೈದರಾಬಾದ್, ಪಟ್ನಾ ಗೆ ಟೂರ್ ಹೋಗಿದ್ದರು. ತಂಗಿ ಆಗಷ್ಟ ಎರಡನೆ ವಾರ ವಾಪಸ್ ಯು ಎಸ್ ಗೆ ಹೋಗೋದು, ಮತ್ತು ನನ್ನ ತಮ್ಮ UAE ನಿಂದ ಜುಲೈ ಎರಡನೇ ವಾರ   ಬರುತ್ತಿದ್ದಾನೆ.ಇನ್ನಷ್ಟು ಚಿಕ್ಕ ಪುಟ್ಟ ಪ್ಲಾನ್ ಗಳಿವೆ ಸುತ್ತಾಡುವುದು. ಸೊ ಇನ್ನಷ್ಟು fun on its way :-)
*****************************************************************************************************************************************
ಇತ್ತೀಚೆಗೆ ನ್ಯು ಯಾರ್ಕ್ ನಲ್ಲಿ ನಡೆದ ಅಡಿಗೆ contest ನಲ್ಲಿ ಉಪ್ಪಿಟ್ಟಿಗೆ $ 100,000 ಬಂದಿದ್ದು ಓದಿದಿರಷ್ಟೆ.
ನಮ್ಮ ಮನೆಯಲ್ಲಿ ಶ್ರೀಕಾಂತ್ ಹಾಗೂ ಮಾಲವಿಕ ಉಪ್ಪಿಟ್ಟು ಪ್ರಿಯರು. ನನ್ನ ಆಸಕ್ತಿ ಅದನ್ನು ಮಾಡಿ ಬಡಿಸುವದರಲ್ಲಿ ಮಾತ್ರ ಸೀಮಿತ. ತಿಂದರೆ ತಿಂದೆ ಇಲ್ಲದಿದ್ದರೆ ಇಲ್ಲ. ಅದು ತಿನ್ನಲೂ ಬೇರೆ ಬೇರೆ style ಗಳಿವೆ. ನಮ್ಮ ಮನೆಯಲ್ಲಿ ಎಲ್ಲರೂ ಅಡಿಗೆ ಮನೆಯಲ್ಲಿ ವಿರಾಜಮಾನರಾದ ಮೇಲೆ ನೆ ನಾನು ಹುರಿದಿಟ್ಟ ಉಪ್ಪಿಟ್ಟಿಗೆ ನೀರು ಹಾಕಿ ರೆಡಿ ಮಾಡುವುದು. ಬಾಣಲೆ ಒಲೆಮೇಲಿಂದ ಇಳಿದ ಕೂಡಲೆ ಬಿಸಿ ಬಿಸಿಯಾದ ಉಪ್ಪಿಟ್ಟನ್ನು ತಿನ್ನಲು ಮಾಲವಿಕ ಇಷ್ಟ ಪಡುತ್ತಾಳೆ. ಕೆಲವೊಮ್ಮೆ ಹಬೆಯಾಡುವ ಉಪ್ಪಿಟ್ಟಿಗೆ ತುಪ್ಪಹಾಕಿ ತಿನ್ನುತ್ತಾಳೆ. ಇಲ್ಲದಿದ್ದಲಿ ಮಿಕ್ಸರ್(ಚೂಡಾ) ಜತೆ, ಇಲ್ಲದಿದ್ದರೆ ಕರಿಬೇವಿನ ಚಟ್ನೀ ಪುಡಿ ಮತ್ತು ಮೊಸರು. ನಾನು ಗೋಡಂಬಿ ಹಾಕಿದರೆ ಅದು deluxe ಅಥವ a-classಉಪ್ಪಿಟ್ಟ್ ಆಗಿ ರೂಪಾಂತರ ಗೊಳ್ಳುತ್ತೆ. ಶ್ರೀಕಾಂತ ಗೆ ಉಪ್ಪಿಟ್ಟಿನ ಜತೆ ಕಲಿಸಿದ ಅವಲಕ್ಕಿ ಇದ್ದರೆ ಸಂತೋಷ- ಅದನ್ನು ಸಿಮೆಂಟ್-ಕಾಂಕ್ರೀಟ್ ಅನ್ನುವ ಬಿರುದು ಬೇರೆ. ಉಪ್ಪಿಟ್ಟಿನ ಜತೆ ಅವಲಕ್ಕಿ ತಿಂದರೆ ಬೇಗ ಹಸಿವೆ ಯಾಗುವುದಿಲ್ಲ ಅಂತ ಅವರೇನೋ ಅನ್ನುತ್ತಾರೆ, ಆದರೆ ನನಗಂತೂ ಉಪ್ಪಿಟ್ಟು ಮಾಡಿದ ದಿನ ಜಾಸ್ತಿ ಹಸಿವು.  ಕೆಲವೊಮ್ಮ ಉಪ್ಪಿಟ್ಟಿಗೆ side dish ಆಗೆ ಪೈನ್ ಆಪಲ್ ಪುಡ್ಡಿಂಗ್ ಅಥ್ವಾ ಶಿರಾ  ಮಾಡುತ್ತೇನೆ. ಅಂತೂ ನಮ್ಮ ಮನೆಯಲ್ಲಿ ವಾರಕ್ಕೆರಡು ದಿನ ಉಪ್ಪಿಟ್ಟು ಕಟ್ಟಿಟ್ಟ ಬುತ್ತಿ :-)
ಅಮ್ಮ ಕೆಲ ಸಮಯದ ಹಿಂದೆ 6 ತಿಂಗಳ ಮಟ್ಟಿಗೆ ನನ್ನ ತಂಗಿಯ ಬಳಿಗೆ ಅಮೆರಿಕ ಕ್ಕೆ ಹೋಗಿದ್ದರು. ಆಗ ತಂದೆಯವರನ್ನು ನಾನು ಬೆಂಗಳೂರಿಗೆ ಮತ್ತು ನನ್ನ ತಮ್ಮ ಮುಂಬೈಗೆ ಕರೆದರೂ ಅವರು ಎಲ್ಲೂ ಬರಲು ಒಪ್ಪಲಿಲ್ಲ. ನಮ್ಮ ತಂದೆಗಂತು ಅಡಿಗೆ ಮನೆಗೆ ಹೋಗಿ ಗೊತ್ತೇ ಇರಲಿಲ್ಲ. ಅಮ್ಮ ಕೆಲದಿನಗಳಿಗಾಗುವಷ್ಟು ಪಲ್ಯ ಸಾಂಬಾರ ರೆಡಿ ಮಾಡಿ ಫ್ರಿಜ್ ನಲ್ಲಿ ಹಾಕಿಟ್ಟಿದ್ದರೂ ಅದು ಎಷ್ಟು ದಿನ ನಡೆಯುತ್ತೆ. ಅವರಿರೋದು ಬೆಳಗಾವಿಯಲ್ಲಿ.  ಯಾವಾಗ ನೋಡಿದರೂ ಪವರ್ ಕಟ್. ಮನೆಯ ರೂಮು ಗಳಿಗೆ ಇನ್ವರ್ಟರ್  ಸೌಲಭ್ಯವಿದ್ದರು,  ಫ್ರೀಜ್ ಗೆ , ಮಿಕ್ಸಿಗೆ ಅದನ್ನು ಅಳವಡಿಸಿರಲಿಲ್ಲ.  ಅಮ್ಮ ಅವರಿಗೆ ಕುಕ್ಕರ್ ನಲ್ಲಿ ಅನ್ನ ಬೇಯಿಸುವುದನ್ನು ಕಲಿಸಿ ಕೊಟ್ಟರು. ಮೈಕ್ರೋ ವೇವ್ ನಲ್ಲಿ ಅಡಿಗೆ ಬಿಸಿ ಮಾಡುವುದನ್ನು ಹೇಳಿ ಕೊಟ್ಟರು. ಬೆಳಿಗ್ಗೆ ಅಪ್ಪ ದಿನಾ ಬ್ರೆಡ್ ತಿನ್ನುತ್ತಿದ್ದರು. ಅಮ್ಮನ ಪಲ್ಯ ಸಾಂಬಾರ್ ಮುಗಿದ ಮೇಲೆ ಅಪ್ಪ ಅನ್ನ ಬೇಯಿಸಿ ಅದಕ್ಕೆ ಹಾಲು ಹಾಕ್ಕೊಂಡು ಉಣ್ಣುತ್ತಿದ್ದರು. ಮದ್ಯ ಮಧ್ಯ ಪುರುಸೊತ್ತು ಮಾಡಿಕೊಂಡು ನಾನು ಹೋಗಿ ಬರುತಿದ್ದೆ. ಆಗ ನನಗೆ ಉಪ್ಪಿಟ್ಟಿನ ರಡಿ ಮಿಕ್ಸ್ ಮಾಡಿ ಕೊಡುವ idea ಹೋಳೀತು. ಎಣ್ಣೆಯಲ್ಲಿ ಸಾಸಿವೆ, ಕರಿಬೇವು, ಸಣ್ಣಕ್ಕೆ ಕತ್ತರಿಸಿದ ಹಸಿಮೆಣಸಿನಕಾಯಿ, ಗೋಡಂಬಿ ಚೂರು ಒಗ್ಗರಣೆಗಿಟ್ಟು, ಅದರಲ್ಲಿ ಬಾಂಬೆರವೆಯನ್ನು ಹಾಕಿ, ಸಣ್ಣ ಉರಿ ಮೇಲೆ ಹುರಿದು, ಅದು ಗಮ್ಮೆನ್ನುವ ಪರಿಮಳ ಬೀರಿದಾಗ ಉಪ್ಪು ಸಕ್ಕರೆ ಕೊತ್ತಂಬರಿ ಸೊಪ್ಪು ಹಾಕಿ ಇನ್ನೂ ಸ್ವಲ್ಪ ಹೊತ್ತು ಬಾಣಲೆಯಲ್ಲಿ ಹುರಿದೆ. ಪೂರ್ತಿ ತಣ್ಣಗಾದ ಮೇಲೆ ಅದನ್ನು ಡಬ್ಬಿಯೊಳಗೆ ಹಾಕಿಟ್ಟು. ಅಪ್ಪನಿಗೆ ಒಂದು ಗ್ಲಾಸ್ ಉಪ್ಪಿಟ್ಟಿನ ರೆಡಿ ಮಿಕ್ಸ್ ಗೆ ಮೂರು ಗ್ಲಾಸ್ ನೀರು ಕುದಿಸಿ ಹಾಕಲು ಹೇಳಿದೆ. ಅಪ್ಪನಿಗಂತೂ ತುಂಬ ಖುಶಿ. ಎರಡು ದಿನಕ್ಕೊಂದು ಸಲ ಅದನ್ನೆ ಮಾಡಿ ತಿನ್ನುತ್ತಿದ್ದರು. ನನಗೆ ಬೇಜಾರು ಬಂತು. ಅಮ್ಮ ಸೀಸನ್ ನಲ್ಲಿ ಬಟಾಣಿ ಕಾಳನ್ನು (green peas) ನ್ನು freeze ಮಾಡಿಡುತ್ತಾರೆ. ಸ್ವಲ್ಪ ನೀರುಳ್ಳಿ ಟೊಮೇಟೊ, ತುರಿದ ಕ್ಯಾರೆಟ್ ಹಾಕಿ vegetable ಉಪ್ಪಿಟ್ಟು ಹೇಳಿಕೊಟ್ಟೆ. ಅದಾದ ಮೇಲೆ ರೆಡಿ ಮಿಕ್ಸ್ ಗೆ ತರಕಾರಿ ಚೂರು ಬೆರೆಸಿ, ಮೊಸರನ್ನು ಬೆರೆಸಿ, ಒಂಚೂರು ಸೋಡಾ ಪುಡಿ ಬೆರೆಸಿ ರವಾ ಇಡ್ಲಿ ಮಾಡಲು ಕಲಿಸಿದೆ. ಮುಂದೊಮ್ಮೆ ಹೋದಾಗ ಉದ್ದು ಮೈದಾ ದೋಸೆ ಹಿಟ್ಟು ಮಾಡಿ ಕೊಂಡು ಹೋದೆ. ಆ ದೋಸೆ ಬಗ್ಗೆ ಅಂತೂ ಅಪ್ಪ totally mesmerized. ಪೇಪರ್ ತರಹ ತೆಳುವಾದ crisp ದೋಸೆ ಹುಯ್ಯಬಹುದು. ಹಿಂಗಿನ ಚಟ್ನಿ ಇದ್ದರಂತೂ........ಅಪ್ಪ ನನಗೆ ಫೋನ್ ಮಾಡಿ ಅದನ್ನು ಮಾಡುವ ವಿಧಾನದ ಬಗ್ಗೆ ಕೇಳಿ ತಿಳಿದುಕೊಂಡರು. (ಅದು ನನ್ನ top secret recipe) ಅದರ ರೆಸಿಪಿ ಇಲ್ಲಿ ಬರೆಯಲ್ಲ. ಮುಂದೊಮ್ಮೆ ನಾನು ಮಾಲವಿಕ ಸೇರಿ ಒಂದು restaurant ತೆರೆಯುವವರಿದ್ದೇವೆ. ಆಗ ನೀವೆಲ್ಲ ಬಂದು ಆ ದೋಸೆಯನ್ನು ಸವಿಯಬಹುದು.) ನನ್ನ ಅಮ್ಮ ಮಾಡುವುದಕ್ಕಿಂತ ಚೆನ್ನಾಗಾಗುತ್ತದೆಂದು ಅಪ್ಪನ ಶಿಫಾರಸ್ಸು ಬೇರೆ ಇದೆ ಈ ದೋಸೆಗೆ).ಹೀಗೆ ಆರು ತಿಂಗಳು ಅಪ್ಪನದು ಮಿಕ್ಸ್ ಅನ್ಡ್ ಮ್ಯಾಚ್ ಅಡುಗೆ.
ಅಕ್ಕನ (ಮಾಲವಿಕ) ಕಾಲೇಜು ಮೇಟ್ ಗಳು ಹೆಚ್ಚಾಗಿ northies. ಗೌರವ್ ಮತ್ತು ಹರ್ಷ್ ,  ಒಂದು ಸಂಜೆ ಹಸಿವೆಯಾದಾಗ ಹೋಟೆಲ್ ಗೆ ಹೋಗಿ ಮೆನ್ಯು ನಲ್ಲಿದ್ದ ಚೌ ಚೌ ಭಾತ್ ಗೆ ಆರ್ಡರ್ ಕೊಟ್ಟರಂತೆ. ನಂತರ ಮಾಲವಿಕನಿಗೆ ಫೋನ್ ಮಾಡಿ ’ಕ್ಯಾ ಯಾರ್! ಹಮ್ ನೆ ಸಮಝಾ ಚೌ ಚೌ ಭಾತ್ ಯಾನೆ ಕೊಯಿ ಚೈನೀಸ್ ಡಿಶ್ ಮಿಲೆಗಾ ಖಾನೆ ಕೆ ಲಿಯೆ, ಯೆ ಕ್ಯಾ ಯೆ ತೊ ಉಪ್ಮಾ, ಸುಜಿ ಕಾ ಸ್ವೀಟ್ ಔರ್ ಮಿಕ್ಸರ್ ದಿಯಾ ಹೈ...
*****************************************************************************************************************************************
ತಂಗಿಗೆ ಮನೆಯಲ್ಲಿದ್ದಾಗಲೆಲ್ಲ ಅವಳ ಇಷ್ಟವಾದ ಅಪರೂಪದ ಅಡುಗೆಗಳನ್ನು ಮಾಡಿ ಕೊಡುತ್ತಿದ್ದೆ.
ಅದರಲ್ಲಿ ,ಮಾವಿನಹಣ್ಣಿನ ಹುಮ್ಮಣ (a konkani Recipe) ಒಂದು. ಅದರ ಚಿತ್ರ ಕೆಳಗಿದೆ
ಸಿಪ್ಪೆ ಸುಲಿದ 4-5 ಸಿಹಿ ಹುಳಿ ಜಾತಿಯ ಚಿಕ್ಕ ಮಾವಿನ ಹಣ್ಣು, ಹಸಿ ಮೆಣಸು, ಬೇಯಿಸಲು ನೀರು , ಉಪ್ಪು , ಬೆಲ್ಲ. ಚೆನ್ನಾಗಿ ಕುದಿ ಬಂದ ನಂತರ ಅರ್ಧ ಟೀ ಸ್ಪೂನ್ ಮೈದಾವನ್ನುಕಾಲು ಗ್ಲಾಸ್ ನೀರಿನಲ್ಲಿ ಕದಡಿ, ಗುಳ್ಳೆಗಳಾಗದಂತೆ ತಯಾರಿಸಿ, ಕುದಿಯುತ್ತಿರುವ ಮಿಶ್ರಣಕ್ಕೆ ಹಾಕಿ. ಇನ್ನೊಂದು ಕುದಿ ಬಂದ ನಂತರ ಒಲೆಯಿಂದ ಕೆಳಗಿಳಿಸಿ, ಉದ್ದು ಸಾಸಿವೆ,ಕರಿಬೇವು, ಹಿಂಗು, ಒಣ ಮೆಣಸಿನ ಒಗ್ಗರಣೆ ಕೊಡಿ. ಈಗಂತೂ ಅದರ ಸೀಸನ್ ಮುಗೀತು. ಚಿತ್ರ ನೋಡಿ ಯೆಂಜಾಯ್ ಮಾಡಿ  :-)


ವಂಡರ್ ಲಾ ಗೆ ಹೋದಾಗ ಒಂದು ದೊಡ್ಡ ಮುಸ್ಲಿಮ್ ಕುಟುಂಬ ಬಂದಿತ್ತು. ವೇವ್ ಪೂಲ್ ಅನ್ನುವ ಆಟ ಒಂದಿದೆ. ಅಲ್ಲಿ ಕೃತಕವಾಗಿ ಸಮುದ್ರ ದ ಅಲೆಗಳನ್ನು ನಿರ್ಮಿಸಲಾಗಿದೆ. ಎಲ್ಲ ಮುಸ್ಲಿಮ್ ಹೆಣ್ಣುಮಕ್ಕಳು, ಬುರ್ಖಾ ಹಾಕಿಕೊಂಡೆ enjoy ಮಾಡಿದರು. ನಾನು ನೀರಿಗಿಳಿದಿರಲಿಲ್ಲ. ಅವರನ್ನು ನೋಡಿ ನಾನೂ ಖುಶಿ ಪಟ್ಟೆ.

****************************************************************************************************************************************
ಶ್ರವಣಬೆಳಗೊಳ
ಕಷ್ಟಪಟ್ಟು ಹತ್ತುತ್ತಿರುವ ನಾನು

ಮೆಟ್ಟಿಲುಗಳನ್ನು ನೋಡಿ ನಾನಂತು ಹತ್ತಲು ತಯಾರಿರಲಿಲ್ಲ. ಶ್ರೀಕಾಂತ ಮತ್ತೆಲ್ಲರೂ ಗಾಳಿ ಹಾಕಿದ್ದೆ ಹಾಕಿದ್ದು. ’you can do it malathi’ . ಹತ್ತತ್ತೆ ಮೆಟ್ಟಿಲು ಹತ್ತು ಅಮೇಲೆ ರೆಸ್ಟ್, ಅಂಥೇಳಿ ಹತ್ತಿ ಗೊಮ್ಮಟ ಮೂರ್ತಿಯನ್ನು ನೋಡಿದೆ. ಇಳಿಯುವಾಗ ಮಾತ್ರ ಎರಡೆ ನಿಮಿಷಕ್ಕೆ ನಾನು ಕೆಳಗೆ. ಪುಟ್ಟ ಶ್ರೇಯ ತನ್ನ ಅಕ್ಕ ಹಾಗೂ ನಮ್ಮ ಮಾಲವಿಕನ ಜತೆ ಯಾರು ಮೊದಲು ಕೆಳಗೆ ಇಳಿಯುವುದು ಸ್ಪರ್ಧೆಯಲ್ಲಿ, ನನ್ನ ಕೈ ದರದರನೆ ಎಳೆದು ಇಳಿಸಿದಳು. ಇಳಿಯೋದೇನೋ ಮಾಡಿದೆ. ಆದರೆ ಕೆಳಗೆ ಕೂತ ಮೇಲೆ ಕಾಲು ತರತರನೆ ಕಂಪಿಸಿ ಹೊರಡಲು ಮುಷ್ಕರ ಬೀರಿದವು. ಈಗಲು ನನ್ನ ಬಲಗಾಲು ಹೆಜ್ಜೆ ಹಾಕುವಾಗ ಟಕಟಕ ಅನ್ನುತ್ತಿದೆ.

ಗೊಮ್ಮಟ ಮೂರ್ತಿ
ಅಲ್ಲಿಂದ ಬೇಲೂರು ಹಳೆಬೀಡು ಹೋಗಿದ್ದೆವು. ಅದರ ಬಗ್ಗೆ ಇನ್ನೊಮ್ಮೆ ಬರೆಬಹುದು ಅನ್ನಿಸುತ್ತೆ!!
***************************************************************************************************************************************
ಒಂದು ಗುಡ್ ನ್ಯೂಸ್ : ಪ್ಲ್ಯಾಸ್ಟಿಕ್ ಬಳಕೆ ನಿಜಕ್ಕೂ ಕಡಿಮೆಯಾಗಿದೆ. ತರಕಾರಿ ಅಂಗಡಿಯವರು ಪೇಪರ್ ಬ್ಯಾಗ್ ಗಳನ್ನು ಬಳಸುವಲ್ಲಿ ಬದ್ದರಾಗಿದ್ದಾರೆ. ಪ್ಲ್ಯಾಸ್ಟಿಕ್ ದರ ಜಾಸ್ತಿಯಾಗಿದೆ, ಅಲ್ಲದೆ ಬೇರೆ ಕಡಿಮೆ ದರದ ಪ್ಲ್ಯಾಸ್ಟಿಕ್ ಬಳಸಿದ ನಮ್ಮ ತರಕಾರಿ ಅಂಗಡಿಯವನಿಗೆ ಈಗಾಗಲೇ 1000 ರೂ ನ ದಂಡ ವಿಧಿಸಲಾಗಿದೆ. ನಾನು ಮೊದಲೆಲ್ಲ ಯಾಕ್ರಿ ಗಿರಾಕಿಗಳಿಗೆ ಪ್ಲ್ಯಾಸ್ಟಿಕ್ ಕೊಡ್ತೀರಿ, ಮನೆಯಿಂದ ಚೀಲ ತರಲಿಕ್ಕೆ ಹೇಳಿ ಅಂದರೆ, ಅವನು ಮ್ಯಾಡಂ ನಾನು ಹಾಗಂದ್ರೆ ನನಗೆ ವ್ಯಾಪಾರ ಆಗೋದು ಬೇಡ್ವಾ? ನಾನು ಕೋಡಲ್ಲ ಅಂದ್ರೆ ಅವರು ಬೇರೆ ಅಂಗಡಿಗೆ ಹೋಗ್ತಾರೆ ಅಷ್ಟೆ, ಅಂತ ನನಗೇ ಪ್ರಶ್ನೆ ಹಾಕುತ್ತಿದ್ದ. ಈಗ ನನಗೆ ’ನಿಮ್ಮ ಬಳಿ ಇರುವ ಚೀಲ ಎಲ್ಲಿ ಸಿಗುತ್ತೆ ಮ್ಯಾಡಂ? ನಾನು ಅದನ್ನೆ ಇಲ್ಲಿ ಮಾರುತ್ತೇನೆ ಅಂತಿದ್ದಾನೆ. ಅಂದ ಹಾಗೆ ನನ್ನ ಪುಟ್ಟ foldable ಬಟ್ಟೆ ಚೀಲ ಕೇವಲ 15 ರೂ. 5 ಕೆ.ಜಿಯಷ್ಟು ವಜನ್ ತಾಳುತ್ತದೆ. ಮುಂಬೈನಲ್ಲಿ ಸಿಗುತ್ತದೆ. ವಾಶ್ ಮಾಡಿದ್ರೆ ಬೇಗ ಒಣಗುತ್ತದೆ ಕೂಡ. ಈಗ ಆ ಬ್ಯಾಗ್ ಗೆ ತುಂಬ ಡಿಮಾಂಡ್ ಇದೆ. ಎಲ್ಲರೂ ನನಗೆ ಆ ತರಹ ಬ್ಯಾಗ್ ತಂದು ಕೊಡಿ ಮ್ಯಾಡಂ ಅನ್ನುತ್ತಾರೆ.
ನನಗೆ ವಸುಧೇಂದ್ರರ ಬಗ್ಗೆ ತುಂಬ ಹೆಮ್ಮೆ. ಅವರು ಪುಸ್ತಕ ಬಿಡುಗಡೆಯ ದಿನ ಅವರ ಪುಸ್ತಕಗಳನ್ನು ನೀಟಾಗಿ ಮುದ್ದಾದ, ಅವರ ಛಂದ ಪ್ರಕಾಶನದ ಲೋಗೊ ಇರುವ ಪೇಪರ್  ಬ್ಯಾಗ ನಲ್ಲಿ ಕೊಡುತ್ತಾರೆ. ಎಲ್ಲರೂ ನಮ್ಮ ಪರಿಸರ ಉಳಿಸುವುದಲ್ಲಿ ಚಿಕ್ಕ ಚಿಕ್ಕ ಪ್ರಯತ್ನ ಮಾಡಿದರೆ ನಮ್ಮ ಮುಂದಿನ ಪೀಳಿಗೆಗೆ ಒಳ್ಳೆಯ ಪರಿಸರವನ್ನು(environment) ಒದಗಿಸಬಹುದು. ಜನರು ಎಚ್ಚೆತ್ತುಕೊಳ್ಳಬೇಕಾದ ತುರ್ತು ಅವ್ಶ್ಯಕತೆ ಇದೆ. ಈಗಾಗಲೇ ಮಳೆ ಕಡಿಮೆಯಾಗಿದೆ. ನಾವು ಬೆಂಗಳೂರಿಗೆ ಬಂದ 11  ವರ್ಷದಲ್ಲಿ  ಮಳೆಯ ಪ್ರಮಾಣ ಕಡಿಮೆಯಾಗುತ್ತ ಬಂದಿದೆ. ಅಷ್ಟೆ ಅಲ್ಲ ಇತ್ತೀಚೆಗೆ ನಮಗೆ ಕುಡಿಯುವ ನೀರು ಎರಡು ದಿನಕ್ಕೊಮ್ಮೆ ಬರುತ್ತಿದೆ. ಇವೆಲ್ಲ ಆತಂಕಕಾರಿ ಬೆಳವಣಿಗೆಗಳು. ನಮ್ಮ ಪಕ್ಕದ ಮನೆಯವ environmental engineer ಅಂತೆ. ಆದರೆ ಅವರು ಬಳಸುವಷ್ಟು ಪ್ಲ್ಯಾಸ್ಟಿಕ್, ಅಥ್ವಾ ಕಾರು ತೊಳೆಯಲು ಬಳಸುವ ನೀರನ್ನು ಕಂಡು ಅಥವಾ ದೀಪವಾಳಿಗೆ ಅವನು ಸುಡುವ ಪಟಾಕಿಗಳನ್ನು ಕಂಡರೆ ನನಗೆ ನಿಜಕ್ಕೂ ಸೋಜಿಗ.
ಇಷ್ಟೆಲ್ಲದರ ನಡುವೆ ದೇಶಕಾಲ -25 ಓದಿ ಮುಗಿಸಿದೆ. V.S. Ramachandran ಅವರ ’ಟೆಲ್ ಟೇಲ್ ಬ್ರೈನ್’ ಇನ್ನು ಓದಲು ಶುರು ಮಾಡಬೇಕಷ್ಟೆ.
ಇಲ್ಲಿಗೆ ನನ್ನ potpourri ಪ್ರವರ ನಿಲ್ಲಿಸುತ್ತೇನೆ.

:-)

June 20, 2011

ತೀರ್ಥಹಳ್ಳಿ Reloaded

Road expansion work is going on full steam at Teerthahalli- Azad Road. Azad Road would be widened up to 12 meters on either sides from the middle. 

we are completely razing the structure to the ground.
A few pictures of our old house. Our house and general store is located very near to the koppa circle. 


The road will be widened up to the  yellow arrow mark. that means our shop, five rooms above it and portion of the steps leading to the attic -my favorite place of all times- will be demolished. Since it is a 100 year old house and not very strong we are razing the entire structure and building something new in that place. Meanwhile new home will be constructed in the farmland, 5 miles away from town.
When i married and came to teerthahalli 25 years a go it was nothing but a simple sleepy temple town, but with sudden shoot in prices of areca and then Vanilla quite a number of farmers became economically sound  leading to related commercial growth like banks etc and rise in advanced economic acitivity and hence a  floating population.


some materials in the attic
a few old trunks. found lot many black & white photographs
attic




An old basket i found in the attic. It used to hold coins for choukabaara!!

Of course it is saddening, but a good road is the necessity of the time since it connects Mangalore to Shimoga. why just during my last visit a bus rammed into the rear of an auto. though there were no injury to passengers..in the process it  held up the traffic for quite a bit.  my favorite place the attic will no more be there!!!!

Last week of May we spent some time at Teerthahalli. here are some pictures of the tunga river. The time is between 4.30 pm and 6.00 pm
the Ram mantapa is visible in the distance. When there is a heavy rainfall the the mantapa dissappears into the water. many a people come by to watch this spectacle.
the soft golden sands on the bank of the river
delightfully warm and toasty feel to the sand at 4.30 in the evening.
part of the bridge built by Sir M. Vishweshwariah, can be seen in this pic
Rock pathway
natural slide (jaarubanDe)
Kids love playing here
When Ram is in the vicinity can  Hanuman/anjaneya be far behind??This section of the river near the etching is considered holy!
A fine way to unravel after a hard days work

Sand castles anyone??!!may 31st end of school vacations for these tiny tots.
cool and warm at the same time. Kids cooling off 


and suddenly it is dusk
Time for the sun to say alvidaa


the lovely burst of colour at the fag end of the day

Some pictures of our farm follows:
our banana plants - 600 in all. thriving!!

The tender Areca flower covering.  makes for a nice hat
Makes for a nice plate too! Srikanth said he enjoyed when he was once served hot rice ,saar and ghee on this haaLe and it made my mouth water.
The lotus pond. but only white ones this time !!
The bamboo with flowers and tiny bird perched on its branch

the bamboo flowers
dawn
A few birds relaxing by the pond
Its just a log, not an alligator :-)