July 22, 2011

A fan of Art of Living

ಉಜಿರೆ 1998.ಆ ದಿನ ಮಕ್ಕಳ ದಿನಾಚರಣೆ. ಬೆಳಿಗ್ಗೆ ಮಕ್ಕಳಿಗೆ ಶಿಕ್ಷಕ ವೃಂದದಿಂದ ವಿವಿಧ ವಿನೋದಾವಳಿ ಕಾರ್ಯಕ್ರಮಗಳು ಮಕ್ಕಳಿಗೆ ಛದ್ಮ ವೇಷ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. 12.00 ಗಂಟೆಗೆ ಮಕ್ಕಳನ್ನು ಸ್ಕೂಲ್ ವ್ಯಾನ್ ವಾಪಸ್ ಮನೆಗೆ ಕರೆದುಕೊಂಡು ಬಂತು. ಮಕ್ಕಳಿಗೆ ಬೇಗ ಬೇಗ ಊಟ ಮಾಡಿಸಿ ನಾನು ಪುನಃ ಅವರನ್ನು ಶಾಲೆಗೆ ಕರೆದುಕೊಂಡು ಹೋಗಬೇಕಿತ್ತು. ಸಂಜೆ parents ಡೇ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಮಾಲವಿಕ ಮತ್ತು ಇನ್ನೂ 7 ಮಕ್ಕಳು ಸೇರಿ ಒಂದು ಗಂಟೆಯ ಯಕ್ಷಗಾನದ ಆಟ ಮಾಡುವುದಿತ್ತು. ಅದಕ್ಕೆ ರೆಡಿಯಾಗಲು ತುಂಬ ಸಮಯ ಬೇಕಿತ್ತಂತ ನಮಗೆ ಮೂರು ಗಂಟೆಗೆ ಬರಲು ಹೇಳಿದ್ದರು. ಬೆಳಿಗ್ಗೆ ಮಕ್ಕಳಿಗೆ ಸಮೋಸ, ಒಂದು ಸ್ವೀಟ್, ಒಂದು ಖಾರ ಮತ್ತು ಒಂದು fruity ಜ್ಯೂಸ್ ಪ್ಯಾಕೆಟ್ ಕೊಟ್ಟಿದ್ದರಂತೆ. ಅದರಲ್ಲಿ ನಿಹಾರಿಕ ಒಂದು ಕಾಗದದ ಹಾಳೆಯಲ್ಲಿ ನನಗೋಸ್ಕರ ಸಮೋಸ ಕಟ್ಟಿಕೊಂಡು ತಂದಿದ್ದಳು-’ಅಮ್ಮ ನಿನಗೆ ಸಮೋಸ ಅಂದರೆ ಇಷ್ಟ ಅಲ್ಲವಾ, ಅದಕ್ಕೆ ನಿನಗೆ ಅಂತ ತಂದೆ’ ಅಂತ. ನನಗಂತು ಖುಶಿಯಾಗಿ ಆಗಲೆ ಅದನ್ನು ತಿಂದು ಬಿಟ್ಟೆ. ಮಕ್ಕಳಿಗೆ ಊಟ ಬಡಿಸಿದೆ. ಕೆಲವೇ ನಿಮಿಷದಲ್ಲಿ ಹೊಟ್ಟೆಯಲ್ಲಿ ಕತ್ತಿಯಿಂದ ತಿರುಚಿದಂತಾಗಿ ಮೈ ಯೆಲ್ಲ ಬೆವರಲು ಶುರು ಅಯಿತು. ಸಮಯ ಹೋಗ್ತಾ ಹೊಟ್ಟೆ ನೋವು ಜಾಸ್ತಿಯಾಗ್ತಾ ಹೋಯ್ತು. ನನಗೆ ಯಾವುದೇ ಸಾಮನ್ಯ ಕಾಯಿಲೆಗಳಾದ ಕೆಮ್ಮು, ಜ್ವರ, ಶೀತ, ತಲೆ ನೋವು, ಹೊಟ್ಟೆ ನೋವು ಇತ್ಯಾದಿ ಯಾವತ್ತೂ ಬಂದಿದ್ದೆ ಇಲ್ಲ. ಇದ್ಯಾಕಪ್ಪ ಹೀಗೆ ಆಗ್ತಾ ಇದೆ ಅಂತ ಆಲೋಚಿಸುವಾಗ, ಆಗ ತಿಂದ ಸಮೋಸ ನೆನಪಿಗೆ ಬಂತು. ನನ್ನ ಪರಿಸ್ಥಿತಿ ತುಂಬ ಹಾಳಾಗಿ ಹೋಗ್ತಾ ಇತ್ತು. ಮನೆಯಲ್ಲಿದ್ದ ಕುಟಜಾರಿಷ್ಠ ಕುಡಿದೆ. ಶ್ರೀಕಾಂತ ಆ ದಿನ ಬಂಗಾಡಿಗೆ field visit ಗೆ ಹೋಗಿದ್ದರು. ಅವರು ಬರುವುದು ಸಂಜೆ ಆಗ್ತಿತ್ತು ಹಾಗೂ ಅವರು ಸೀದ ಶಾಲೆಯ ಕಾರ್ಯಕ್ರಮಕ್ಕೆ ಬರುವವರಿದ್ದರು. ಖ್ಯಾತ ಬರಹಗಾರರಾದ ಕೆ.ಟಿ. ಗಟ್ಟಿ ಯವರ ಮನೆಯ ಮಹಡಿಯಲ್ಲಿ ನಾವು ಬಾಡಿಗೆಗೆ ಇದ್ದೆವು. ಅವರ ಕಿರಿಯ ಮಗಳು, ಪುನೆಯಲ್ಲಿ ಓದುತಿದ್ದವರಿಗೆ ಹುಷಾರಿಲ್ಲ ಅಂತ ಮನೆಯವರೆಲ್ಲ ಪುಣೆಗೆ ಹೋಗಿದ್ದರು. ಆಫಿಸ್ ಗೆ ಫೋನ್ ಮಾಡುವ ಅಂತ ನೋಡಿದ್ರೆ ಫೋನ್ dead. ನಿಧಾನವಾಗಿ ಕಾಲೆಳೆದುಕೊಂಡು ಮೆಟ್ಟಿಲಿಳಿದು ಮನೆಯ ಗೇಟ್ ಹತ್ತಿರ ಬಂದೆ. ಗೇಟ್  ಎದುರಿನವರು ಬಾಡಿಗೆಗೆ ರಿಕ್ಷಾ ಓಡಿಸುತ್ತಿದ್ದರು. ಅವರು ಸಾಮನ್ಯವಾಗಿ ಮಧ್ಯಾಹ್ನ ಊಟಕ್ಕೆ ಬರುತ್ತಿದ್ದರು. ಅವರ ರಿಕ್ಷಾದಲ್ಲಿ ಹೋಗಿ ಡಾಕ್ಟರ್ ಶೆಣೈ ಮಾಮನ ಮನೆಗೆ ಹೋಗಿ ಅಲ್ಲಿಂದಲೇ ಮಕ್ಕಳನ್ನು ಶಾಲೆಗೆ ಕರೆದುಕೊಂಡುವ ಯೋಜನೆ ನನ್ನದು. ಅಲ್ಲಿ ಹೋಗಿ ನೋಡಿದರೆ ಮನೆಗೆ ಬೀಗ ಹಾಕಿತ್ತು. ಅವರು ಯಾವತ್ತೂ ಎಲ್ಲಿಗೂ ಬೀಗ ಹಾಕಿ ಹೋಗಿದ್ದೆ ಇಲ್ಲ. ಪುನ: ಕಷ್ಟಪಟ್ಟು ಮನೆಗೆ ಬಂದೆ. ಮಕ್ಕಳಿಗೆ ಶಾಲೆಗೆ ಹೋಗುವುದು ಬೇಡ ಅನ್ನುವ ಅಂದುಕೊಂಡಿದ್ದೆ, ಆದರೆ ಅವರ ಮುಖದಲ್ಲಿನ ಸಂತಸ ಸಂಭ್ರಮ ನೋಡಿ ನನಗೆ ಏನೂ ಹೇಳಲು ತೋಚಲಿಲ್ಲ. ಇಬ್ಬರ ಹತ್ತಿರ ಪುಟ್ಟ ಬ್ಯಾಗ ಹಾಗೂ ಎರಡು ಚೀಟಿಯಲ್ಲಿ ಮನೆಯ ವಿಳಾಸ, ಆಫಿಸ್ ನಂಬರು ಬರೆದು ಚೀಲದಲ್ಲಿಟ್ಟು, ’ಅಮ್ಮನಿಗೆ ಏನಾದರೂ ಆದರೆ, ಈ ಚೀಟಿ ಯಾರಿಗಾದರೂ ತೋರಿಸಬೇಕು’ ಅಂತ instructions ಕೊಟ್ಟೆ. ನಮ್ಮ ಮನೆಯಿದ್ದದ್ದು ಧರ್ಮಸ್ಥಳದ ದಾರಿಯಲ್ಲಿ, ಉಜಿರೆ ಪೇಟೆಯಿಂದ ಸುಮಾರು ದೂರ-outskirts. ಪೇಟೆಗೆ ಬರಬೇಕಾದರೆ ನಾವು ಧರ್ಮಸ್ಥಳದಿಂದ ಬೆಳ್ತಂಗಡಿಗೆ ಹೋಗುವ ಟೆಂಪೋ ಮೇಲೆ ಹೋಗಬೇಕಿತ್ತು. ಸರಿ ಟೆಂಪೊ ಗೆ ಕಾಯುವಾಗ ನನ್ನ ಎಡ ಕಣ್ಣಿನ ದೃಷ್ಟಿ ಮಂಜಾಯಿತು, breathing problem ಶುರು ಆಯಿತು. ಟೆಂಪೊದಲ್ಲಿ ಬೇರೆ ರಶ್. ಉಜಿರೆ ಸರ್ಕಲ್ ನಲ್ಲಿ ಇಳಿದು ಅಲ್ಲಿಂದ ರಿಕ್ಷಾ ಮಾಡಿ ಶಾಲೆಗೆ ಬಂದೆವು. ಅಲ್ಲಿ ನೋಡಿದರೆ ಒಬ್ಬ ಟೀಚರ್ ಮತ್ತು ಮಕ್ಕಳಿಗೆ ಬಣ್ಣ ಹಚ್ಚಿ ರೆಡಿ ಮಾಡಲು ಒಬ್ಬರು ಮಾತ್ರ ಯಕ್ಷಗಾನದ ಕಲಾವಿದರು -ಮಕ್ಕಳಿಗೆ ಯಕ್ಷಗಾನ ಕಲಿಸಿದವರು   ಇದ್ದರು. ನನ್ನನ್ನು ನೋಡಿ ಟೀಚರ್ ಗೆ ಖುಶಿ. ಬನ್ನಿ ಬಣ್ಣ ಹಚ್ಚಲು ನೀವು ಸಹಾಯ ಮಾಡಿ ,ಇನ್ನಿಬ್ಬರು ಬರಬೇಕಿತ್ತು ಯಾಕೋ ಹೊಟ್ಟೆ ನೋವು ವಾಂತಿ ಶುರು ಆಗಿ ಅವರು ಬರ್ತಾ ಇಲ್ಲ. ನಾವೇ ಮೂವರು ಈ 8 ಮಕ್ಕಳನ್ನು ರೆಡಿ ಮಾಡಬೇಕು. ಸರಿ ಆ ಹಿರಿಯರು ಬಣ್ಣ ಬಳಿದ ಹಾಗೆ ನಾನು ಕಷ್ಟ ಪಟ್ಟು ಒಂದೆ ಕಣ್ಣಿನ ದೃಷ್ಟಿಯಿಂದ,  ಬಣ್ಣ ಹಚ್ಚಿದೆ, ಯಾಕೆಂದರೆ ನಾಜೂಕಿನ ಕೆಲಸಗಳು ನನ್ನಿಂದ ಸ್ವಲ್ಪ ದೂರ. ಅದರ ಮೇಲೆ ಅಸಾಧ್ಯವಾದ ಹೊಟ್ಟೆ ನೋವು. ಅಷ್ಟಾದ ಮೇಲೆ ಇನ್ನಿಬ್ಬರು ಹುಡುಗಿಯರು, ’ಆಂಟಿ ಪ್ಲೀಸ್ ಸೀರೆ ಉಡಿಸಿ’ ಅಂತ ಬಂದರು, ಅದನ್ನು ಮಾಡಿ ಉಶ್ಶಪ್ಪ ಅಂತ ಹೊರಗಡೆ ಫಂಕ್ಷನ್ ನಡೆಯುವ ಸ್ಥಳಕ್ಕೆ ಬಂದು ಎದುರುಗಡೆ ಕುರ್ಚಿಯಲ್ಲಿ ಕುಳಿತೆ.ಗಾಳಿ ಬೀಸುತ್ತ ಇದ್ದಿದರಿಂದ ಸ್ವಲ್ಪ ಹಾಯೆನಿಸಿತು. ಎಷ್ಟು ಹೊತ್ತು ಹಾಗೆ ಕೂತಿದ್ದೆ ನೆನಪಿಲ್ಲ. ಡಾ. ಶೆಣೈ ಮಾಮ ಬಂದು ’ಮಗು’ ಅಂತ ಕರೆದಾಗಲೆ ಒಂದು ತರಹ ಎಚ್ಚರ. ಹೀಗೆ ಹೀಗೆ ಆಗ್ತ ಇದೆ ಅಂದಾಗ, ಏನು ತಿಂದೆ ಮಗು ಅಂತ ಕೇಳಿದರು. ಇತ್ತೀಚಿಗೆ ಡಾ. ಶೈಣೈ ಮಾಮ ನನಗೆ art of living ಆಶ್ರಮದಲ್ಲಿ ಸಿಕ್ಕಾಗ ಕೂಡ ’ಮಗು’ ಅಂತ ಸಂಭೋಧಿಸಿದ್ದು ಎಷ್ಟು ಖುಶಿಯಾಯ್ತು ಗೊತ್ತ?) :-) ನಿಹಾರಿಕ ತಂದ ಸಮೋಸ ಬಗ್ಗೆ ಹೇಳಿದೆ. ಅದಕ್ಕೆ ಅವರು ’ಹೌದು ಶಾಲೆಯಿಂದ ಸುಮಾರು ಮಕ್ಕಳು ಇವತ್ತಿನ ತಿಂಡಿ ತಿಂದು food poisoning ಆಗಿ ನನ್ನ ಕ್ಲಿನಿಕ್ ಗೆ ಬಂದಿದ್ದರು. -ಬಾ ನಿನಗೆ ಇಂಜೆಕ್ಷನ್ ಕೊಡ್ತೇನೆ ಅಂದಾಗ ನನಗೆ ನನ್ನ ಹೊಟ್ಟೆ ನೋವು ನಿಂತಿದ್ದು ಗಮನಕ್ಕೆ ಬಂತು. ಕಣ್ಣು ಕಾಣಿಸುತ್ತಿತ್ತು. ಈಗ ಬೇಡ ಮಾಮ, ಸರಿ ಯಿದ್ದೆನೆ ಅನ್ನಿಸುತ್ತೆ. ರಾತ್ರಿ ಎಲ್ಲ ಕಾರ್ಯಕ್ರಮ ಮುಗಿದ ಮೇಲೆ ನೋಡುವ ಅಂದೆ. ಸ್ವಲ್ಪ ಹೊತ್ತಿನಲ್ಲಿ ಶ್ರೀಕಾಂತ್ ಅವರ ಮಿತ್ರರನ್ನು ಕರೆದುಕೊಂಡು ಶಾಲೆಗೆ ಬಂದರು. ರಾತ್ರಿ ಆ ಮಿತ್ರರು ನಮ್ಮ ಮನೆಯಲ್ಲಿ ಊಟಕ್ಕೆ ಬರುವವರಿದ್ದರು.ನಂತರ ನನ್ನ attention ಎಲ್ಲ ರಾತ್ರಿಗೆ ಏನು ಮಾಡುವುದಪ್ಪ ಅಂತ ಆ ಕಡೆ ಹೋಯ್ತು. ಯಾಕೆ ಅಂದರೆ ಏನಾದರೂ grocery ಬೇಕಿದ್ದರೆ ನಾನು ಶಾಲೆಯಿಂದ ಮನೆಗೆ ಹೋಗುವಾಗಲೇ ಖರೀದಿಸಬೇಕಿತ್ತು. ಯಕ್ಷಗಾನ ಕಾರ್ಯಕ್ರಮ ತುಂಬ ಚೆನ್ನಾಗಿ  ಮೂಡಿಬಂತು.8.00 ಗಂಟೆಗೆ ಕಾರ್ಯಕ್ರಮ ಮುಗಿದು ನಾವೆಲ್ಲ ಮನೆಗೆ ಬಂದು, ಆಮೇಲೆ ನಾನು ಪುನ: ಅಡಿಗೆ ಮಾಡಿ, ಮಿತ್ರರು  late night ಬಸ್ ನಲ್ಲಿ ಹೊರಟ ನಂತರ ಶ್ರೀಕಾಂತ್ ಗೆ ಹೀಗ್ ಹೀಗೆ ಆಯ್ತು ಇವತ್ತು ಅಂದೆ. ಅಂತು ಸತ್ತು ಬದುಕಿದೆ ಆದಿನ. ಆ ತರಹ ನೋವು, ಹಿಂಸೆ ಅನುಭವಿಸುದ್ದು ಅದೇ first and last. TOUCHWOOD!!! ಬಹುಶಃ ಆವಾಗ ನಾನು ಆರ್ಟ್ ಆಫ್ ಲಿವಿಂಗ್ ನ ಸುದರ್ಶನ ಕ್ರಿಯಾ ಯೋಗ ಮಾಡುತ್ತಿದ್ದೆ. ಆದ್ದರಿಂದ food poisoning ಆಗಿದ್ದು ತನ್ನಿಂದ ತಾನೆ ಸರಿಹೋಯ್ತು ಅಂತ ನನ್ನ ಅನಿಸಿಕೆ. ಶ್ರೀ ಶ್ರೀ ಅವರು ಹೇಳಿದ್ದನ್ನೆಲ್ಲ ನಾನು ನಂಬಲ್ಲ. ಆದರೆ ಅವರ breathing exercises ನಿಜಕ್ಕೂ ಪರಿಣಾಮಕಾರಿಯಾಗಿವೆ. ಹಲವಾರು ಜನರ ಹಲವು ಕಾಯಿಲೆಗಳು ಗುಣಮುಖವಾಗಿದೆ. ಶ್ರೀಕಾಂತ ಅವರಿಗೆ ಬಹು ಬೇಗ dust allergey ಆಗುತ್ತಿತ್ತು. ಸುದರ್ಶನ ಕ್ರ್ರಿಯೆಗೆ ಒಳಪಟ್ಟಮೇಲೆ ಅದು ಸಂಪೂರ್ಣ ಮಾಯವಾಗಿದೆ, ಹಾಗೆ ನಿಹಾರಿಕಳ ದಮ್ಮು (wheezing) ಕೂಡ. ನಾನಂತು ದಿನಾ ಸುದರ್ಶನ ಕ್ರಿಯೆಯನ್ನು ಮಾಡುತ್ತೇನೆ. It keeps me healthy!!


ಶ್ರೀಕಾಂತ, ನಾನು, ಮಗು ಕೃಷ್ಣ, ಡಾ. ಶೆಣೈ ಮಾಮ, ಮಿತ್ರ ಆಂಟಿ (ಡಾ. ಮಾಮನ ಹೆಂಡತಿ) ವಿವೇಕಾನಂದ ಸಾಲಿಮಠ, ಶೋಭ ಸಾಲಿಮಠ- Art of Living ನ ಕನಕಪುರ ಆಶ್ರಮದಲ್ಲಿ. ಮಗುವಿಗೆ ನಾನು 'ಏನು ಪುಟ್ಟಿ ನಿನ್ನ ಹೆಸರು' ಅಂತ ಕೇಳಿದಾಗ ಅವಳು ಮುದ್ದಾಗಿ 'ಕೃಷ್ಣ' ಅಂದ ಕ್ಷಣ ತೆಗೆದ ಚಿತ್ರ. ಕೃಷ್ಣ ,ಶೆಣೈ ಮಾಮಿಯ ತಮ್ಮನ ಮಗಳು.

ಶ್ರೀ ಶ್ರೀ ಶ್ರೀ ರವಿಶಂಕರ್ ಗುರೂಜಿ :-)

12 comments:

Anonymous said...

Nice post Madam.
What I like about you is, you are positive in most of the situations and it makes the readers also feel the same way.

We visited Gramya and liked it.
Warm Regards
Swarna

nenapina sanchy inda said...

thank you Swarna!! how are you??
i am real glad you visited gramya! what do you think about our products and their pricing. i would really like to know your feedback.
hers's mail id:
malathi.shenoy@gmail.com
:-)

prabhamani nagaraja said...

ನಿಮ್ಮ ಹೊಟ್ಟೆ ನೋವಿನ ಅನುಭವ ಹಾಗೂ breathing exercisesನಿ೦ದ ಗುಣವಾದದ್ದು ನಿಜಕ್ಕೂ ಮಾರ್ಗದರ್ಶಕವಾಗಿದೆ. ಉತ್ತಮ ವಿಚಾರ ತಿಳಿಸಿದ್ದೀರಿ. ಸ್ವರ್ಣ ಅವರು ಹೇಳಿರುವ೦ತೆ ನಿಮ್ಮ ಧನಾತ್ಮಕ ನೋಟ ಅಭಿನ೦ದನೀಯ. ಧನ್ಯವಾದಗಳು.

ಜಲನಯನ said...

ಮಾಲತಿ ತಿನ್ನೋವಾಗ ಈ ಸಮಸ್ಯೆಯ ಸ್ವಲ್ಪವೇ ಸುಳಿವಿದ್ರೂ ನೀವು ...ಅಷ್ಟೇಕೆ ನಾವೂ ತಿನ್ನೊಲ್ಲ ....ಸಮೋಸ-ಏನು ನಿನ್ನಯ ಮೋಸಾ ..?? ಅನ್ನಿಸ್ತಾ??? ಹೌದು ಬ್ರೀಥಿಂಗ್ ಹಲವಾರು ಸಣ್ಣ ಪುಟ್ಟ ಸಮಸ್ಯೆಗಳಿಗೆ ಉತ್ತರ ಆಗಬಹುದು ಯಾಕಂದ್ರೆ ನಮ್ಮ ಮಾಮೂಲಿ ವಿಧಿ ವಿಧಾನಗಳಿಂದ ವಿವಿಧ ಅಂಗಗಳಿಗೆ ಸಾಕಷ್ಟು ಆಮ್ಲಜನಕದ ಪೂರೈಕೆ ಆಗುವುದಿಲ್ಲ...ನಿದರ್ಶನ ನಿಮ್ಮದಾದ್ರೂ ನಮಗೂ ಆಗಿರಬಹುದು ಆಗಬಹುದು ಮತ್ತು ಉಪಶಮನ ಮಾರ್ಗ ತೋರಿದ್ದೀರಿ,,,ಸುಲಭ...ಲಾಭದಾಯಕ

Badarinath Palavalli said...

ನಿಜಕ್ಕೂ ಅರ್ಥಪೂರ್ಣ ಲೇಖನ, ಒಳ್ಳೆಯ ಚಿತ್ರಗಳು.

ನಾನು ಸುಮಾರು ೩ ವರ್ಷ ಶ್ರೀ ಶ್ರೀ ರವಿಶಂಕರ್ ಆಶ್ರಮದ ಎಲ್ಲಾ ಕಾರ್ಯಕ್ರಮಗಳನ್ನು ಹೊರ ಗುತ್ತಿಗೆ ಛಾಯಾಗ್ರಾಹಕನಾಗಿ ಭೇಟಿ ಕೊಟ್ಟಿದ್ದೇನೆ. ಅಲ್ಲಿನ ಎಲ್ಲಾ ವಿಚಾರಗಳು ನನಗೆ ಮೆಚ್ಚುಗೆ. ಜೊತೆಗೆ ಅಲ್ಲಿನ ಭೋಜನ ಶಾಲೆಯಲ್ಲಿ ನಮ್ಮ ತಟ್ಟೆಗಳನ್ನು ನಾವೇ ತೊಳೆದುಕೊಳ್ಳುವ ವಿಧಾನವೂ ಚೆನ್ನಾಗಿದೆ.

ಮನಸು said...

breathing exercises it helps lot...

ಸೀತಾರಾಮ. ಕೆ. / SITARAM.K said...

ಸುದರ್ಶನ ಕ್ರಿಯೆ ಮನಸ್ಸನ್ನು ಮಲಗಿಸಿ ಉಲ್ಲಸಿತವಾಗಿಡುವಲ್ಲಿ ತುಂಬಾ ಪರಿಣಾಮಕಾರಿ. ನಾನು ಇದರ ಉಪಯೋಗ ಪಡೆಯುತ್ತಿರುತ್ತೇನೆ. ಗುರುಜಿ ದ್ವನಿ ಕೇಳಿದರೆ ಮನಸ್ಸು ಮಗುವಾಗುತ್ತದೆ.

nenapina sanchy inda said...

thank you all
:-)
malathi S

Swathy said...

Hi malathi akka,
I went through your blog and your articles makes me feel very close to home.
As i was reading I suddenly remebered that I had met 2 kids named malavika and niharika somewhere in late nineties when I had gone to get my grandma from the advance course of art of living in Ujire.
I was in school then and whenw esat for lunch, I mentioned to my grandma that I found the 2 girls very cute and also thier names.
I was not very sure if you are their mum, but reading this article seems to have confirmed this. I had indeed met you and its funny how I remembered the 2 cute sisters.
:)
small world..isint it?
regards,
Swathy.

nenapina sanchy inda said...

Yes Dear Swathy!!
it was at charmaDi temple. thanks for remembering....
so many years gone by.....now we r placed in Bangalore.
love
:-)
malathi akka

Swathy said...

oh wow.. you remember as well.. :)
yes, it was charmadi temple..:)
such a beautiful place..
keep writing more,
I really enjoy reading it..
Swathy.

nenapina sanchy inda said...

Dear Swathy!!
could not get to ur blog. i think u have one?? pls send me the link.
my mail id is malathi.shenoy@gmail.com
thank you
malathi S