ಆದರೆ ನಾಯಿ ಇದ್ದ ಮನೆಯವರು ಅವರ ಮನೆ ಬಿಟ್ಟು ಬೇರೆಯವರ ಮನೆಯ...ಅದೂ ಗೇಟ್ ಎದುರುಗಡೆ ಇಸ್ಸಿ ಮಾಡಿಸುವುದು ಯಾಕೇಂತ ಗೊತ್ತಾಗಲಿಲ್ಲಪ್ಪ. ಎಷ್ಟೆ ಹೇಳಿದರೂ ಕೆಲವರು ಕೋಳೊಲ್ಲ. ನಮ್ಮ ಮನೆಯ ಗೇಟ್ ಎದುರು ಈ ತರಹ ಸುಮಾರು ಸಲ ಆಯಿತು. ಅವರು ಯಾರಂತಲೂ ನನಗೊತ್ತಿತ್ತು. ಬೆಳಿಗ್ಗೆ 4 ಗಂಟೆಗೆ ನಾನು ಝೂಲಾ ಮೇಲೆ ಚಹಾ ಕುಡಿಯುತ್ತ ಇರುವಾಗ ಅಲ್ಲಿ ಇಸ್ಸಿ ಮಾಡಿಸಿಕೊಂಡು ಹೋಗುತ್ತಿದ್ದರು. ನನಗಂತೂ ಬೆಳಿಗ್ಗೆ ಬೆಳಿಗ್ಗೆ ಯಾರ ಜತೆನೂ ವಾದ ಮಾಡಲಿಕ್ಕೆ ಇಷ್ಟ ಆಗಲ್ಲ.
ಅದಕ್ಕೆ ಶ್ರೀಕಾಂತ್ ಒಂದು ದಿನ ಬೇಗನೆ ಎದ್ದು ಕಾಯುತ್ತ ಇದ್ದರು. ಅವರು ನಮ್ಮ ಮನೆ ಬಳಿ ಬಂದ ಕೂಡಲೆ..’ಹಲ್ಲೋ, ನಿಮ್ಮ ನಾಯಿ ಮುದ್ದಾಗಿದೆ, ಏನು ಹೆಸರು?’ ಅದಕ್ಕೆ ಅವರು ಮಹಾ ಜಂಬದಿಂದ ಅದರ ಬ್ರೀಡ್(ಲ್ಯಾಬ್ರಾಡೋರ್), ಮತ್ತೆ ನಾಯಿಯ ಹೆಸರು ’ರೋವರ” ಅಂತ ಹೇಳಿದರು. ಶ್ರಿಕಾಂತ್ ಉವಾಚ್- ನಿಮಗೆ ನಾಯಿ ಅಷ್ಟು ಪ್ರೀತಿಯಾದರೆ ಅದರ ಇಸ್ಸಿಯನ್ನು ಪ್ಯಾಕ್ ಮಾಡಿಕೊಂಡು ಫ್ರಿಡ್ಜ್ ನಲ್ಲಿಡಬಹುದಲ್ಲವಾ ಅಂದರು ಕೂಲಾಗಿ. ಅವರು ಕಕ್ಕಾಬಿಕ್ಕಿ. ಮುಖ ನೋಡಬೇಕಿತ್ತು. ಅಷ್ಟರೊಳಗೆ ನಾಯಿ ಒಂದು ಗುಡ್ಡೇ ಇಸ್ಸಿ ಮಾಡಿಯಾಗಿತ್ತು.
ಅಮೇರಿಕೆಯಲ್ಲಿರುವ ನನ್ನ ತಂಗಿ 5 ವರ್ಷ ಆದಮೇಲೆ ನನ್ನ ಮನೆಗೆ -ಬೆಂಗಳೂರಿಗೆ ಬಂದಿದ್ದಳು. ಅವರು ಬರುವ ಹೊತ್ತಿನಲ್ಲಿ ನಾನು ಅಡಿಗೆ ಮನೆಯಲ್ಲಿದ್ದೆ. ಗಾಡಿ ಬಂದ ಸದ್ದಾಗಿ ಗ್ಯಾಸ್ ಆಫ್ ಮಾಡಿ ಬರುವಷ್ಟರಲ್ಲಿ ನನ್ನ ತಂಗಿ ಗಟ್ಟಿ ದನಿಯಲ್ಲಿ ’ಏನೇ ಇದು? ಐದು ವರ್ಷ ಆದ ಮೇಲೆ ಬರ್ತಾ ಇದ್ದೇನೆ. ಪೂರ್ಣ ಕುಂಭ ಸ್ವಾಗತ ಇರ್ಲಿ, ತುಪ್ಪದ ಆರತಿ ಬಿಟ್ಟು. ಹೀಗಾ ಸ್ವಾಗತಿಸುವುದು? ಎನಪ್ಪ ಇವಳ ಗಲಾಟೆ ಅಂತ ಹೋಗಿ ನೋಡಿದ್ರೆ, ಗಾಡಿಯ ಬಾಗಿಲ ತೆಗೆದ ಕೂಡಲೇ, ಗೇಟ್ ಎದುರಿಗೇನೆ ಅವಳಿಗೆ ಕಂಡಿದ್ದು -dog crap- ಹಿ ಹಿ ಹಿ. ಮತ್ತೆ ಗಾಡಿ ಸ್ವಲ್ಪ ಮುಂದೆ ಮಾಡಿ ಅವಳ ದೊಡ್ಡ ದೊಡ್ಡ suitcase ಗಳನ್ನು ಒಳಗೆ ಸಾಗಿಸ ಬೇಕಾದರೆ ಶ್ರೀಕಾಂತ್ ಮತ್ತು ನನ್ನ ತಮ್ಮನಿಗೆ ಬೆವರು...ಯಕೆಂದರೆ ನಾವು ಹೊರಗೆ ನಿಂತು---ಇಸ್ಸಿ ಮೇಲೆ ಕಾಲು, ಬ್ಯಾಗ್ ತಾಗದ ಹಾಗೆ watch it watch it ಅಂತ ಕೂಗಾಡ್ತಾ ಇದ್ವಿ.ಶ್ರೀಕಾಂತ ’ಥೂ ನಾಯಿ’ ಅನ್ನಬೇಕಾದರೆ ನಾನು ಹೇಳಿದೆ..ನಾಯಿಗಳನ್ನು ಬೈ ಬೇಡಿ. ಅವಕ್ಕೇನು ಗೊತ್ತಾಗುತ್ತೆ, ನಾಯಿ ಮಾಲಿಕರಿಗೆ ಫೈನ್ ಹಾಕಿಸ ಬೇಕು ಅಂತ’ ಸಧ್ಯ ನನ್ನ ಮಕ್ಕಳಿಬ್ಬರು ಸ್ಕೂಲು-ಕಾಲೀಜಿಗೆ ಹೋಗಿದ್ರು. ಇಲ್ಲದಿದ್ದರೆ ಇನ್ನಷ್ಟು ಗಮ್ಮತ್ತು. ತಂಗಿಯ ಪುಟಾಣಿ ಮಕ್ಕಳಿಗೆ ಅಂತೂ ಇದು ಮೋಜಿನ ವಿಷಯವಾಗಿತ್ತು.
ಈಗ ನಾವು ಬೇರೆ ಮನೆಯಲ್ಲಿರುವುದು. ಇಲ್ಲಿ ಹತ್ತಿರದಲ್ಲಿ ಯಾರ ಮನೆಯಲ್ಲೂ ನಾಯಿಗಳನ್ನು ಸಾಕಿಲ್ಲ. ಆದರೆ 7 ಬೀದಿ ನಾಯಿಗಳಿದ್ದಾವೆ. ತುಂಬ ಒಳ್ಳೆಯವು. ಹೊಸಬರನ್ನು ಕಂಡರೆ ತುಂಬಾ ಬೊಗಳುತ್ತವೆ...ನಾವು ’ಸುಮ್ಮನಿರಿ. ಇವರು ನಮ್ಮವರು’ ಅನ್ನುವ ತನಕ. ಆದರೆ ಯಾವತ್ತು ಯಾರ ಮನೆಯ ಎದುರಿಗೂ ಇಸ್ಸಿ ಮಾಡಿಲ್ಲ. ನಾನು ಅವರ ಜತೆ ಕೊಂಕಣಿಯಲ್ಲಿ ಸಂಬಾಷಿಸುತ್ತೇನೆ. ನಾನು ಎಲ್ಲಿಗಾದರೂ ಹೊರಟರೆ, ಬಾಲ ಅಲ್ಲಾಡಿಸಿ ನನಗೆ ಒಂದಷ್ಟು ದೂರ ಕಂಪನಿ ಕೊಟ್ಟು ವಾಪಸ್ ನಮ್ಮ ಬೀದಿಗೆ ಬಂದು ವಿರಮಿಸುತ್ತವೆ. ನಮ್ಮ ಮನೆಯ ಎದುರುಗಡೆ ಸಾಲಿನ ಮನೆಯವರು ಅವರ ಊಟ ತಿಂಡಿ ಬಗ್ಗೆ ನೋಡಿಕೊಳ್ಳುತ್ತಾರೆ. ಅವರು ಆಕಸ್ಮಾತ್ ಊರಲಿಲ್ಲ ಅಂದರೆ ಬೇರೆಯವರಿಗೆ ಹೇಳಿ ಹೋಗುತ್ತಾರೆ. ಯಾರಾದರೊಬ್ಬರು ಅದರ ದೇಖಿ ರೇಖಿ ಮಾಡಿತ್ತಾರೆ. ಎಲ್ಲರೂ ಊಟ ಹಾಕುವುದು, ಅಥವಾ ಉಳಿದಿದೆ ಅಂತ ಊಟ ಹಾಕುವುದು ಇದೆಲ್ಲ ನಾವ್ಯಾರೂ ಮಾಡುವುದಿಲ್ಲ.
ಮತ್ತೆ ಮುನಿಸಿಪಾಲಿಟಿಯವರು ನಾಯಿ ಹಿಡಿಯಲು ಬಂದರೆ ಅವಕ್ಕೆ ಗೊತ್ತಾಗಿ ಅವರು ಚಪ್ಪಡಿ ಇರುವ ಚರಂಡಿಯೊಳಗೆ ಅವಿತುಕೊಳ್ಳುತ್ತವೆ. ನಾವ್ಯಾರೂ ಅವರಿಗೆ ಹೇಳಲು ಹೋಗುವುದಿಲ್ಲ.
:-)


ಒಗ್ಗರಣೆಯನ್ನು ಮಿಕ್ಸ್ ಮಾಡಿ. ಬಿಸಿ ಕಾವಲಿ ಮೇಲೆ ಹಾಕಿ (ಅಕ್ಕಿ ರೊಟ್ಟಿ ಮಾಡಿದ ಹಾಗೆ: ಹಳೆಯ ಪೋಸ್ಟ್) ಒದ್ದೆ ಬೆರಳಿನಿಂದ , ಎಷ್ಟು ತೆಳು ಬೇಕೋ ಅಷ್ಟು ತಟ್ಟಿ. ಎರಡು ಬದಿ ಕೆಂಪಾಗುವಂತೆ ಕಾಯಿಸಿ.
ಇತ್ತೀಚಿಗೆ ಅಮ್ಮ ನನ್ನಲ್ಲಿ ಬಂದಾಗ ನನಗೆ ಮಾಡಿ ಕೊಟ್ಟಿದ್ದರು. ನಮಗೆಲ್ಲ ತುಂಬ ಇಷ್ಟ ಆಯ್ತು. ನೀವು ಮಾಡಿ taste ಹೇಗಿತ್ತು ಅಂತ ಹೇಳಿ

ಕಣಕ ತಯಾರಿಸಿ. ಬಾಳೆ ಎಲೆಗೆ ಸ್ವಲ್ಪ ಎಣ್ಣೆ ಹಚ್ಚಿ. ಬಾಳೆ ಎಲೆ ಮೇಲೆ ಕಣಕದ ಗೋಲವನ್ನು ಇಟ್ಟು ಬೆರಳಿನಿಂದ ತಟ್ಟಿ. ಒದ್ದೆ ಕೈ ಬೆರಳಿನಿಂದ ತಟ್ಟಿ. ಎಲೆಯನ್ನು ನಿಧಾನವಾಗಿ ಎತ್ತಿ ಕಾವಲಿ ಮೇಲೆ ಕವಚಿ.ಸ್ವಲ್ಪ ಎಣ್ಣೆ ಹಾಕಿ ಎರಡೂ ಬದಿ ಕೆಂಪಾಗುವಂತೆ ಕಾಯಿಸಿ
ಅವರೆ ಕಾಳು season ನಲ್ಲಿ ಬೇಯಿಸಿ mash ಮಾಡಿದ ಅವರೆ ಬೇಳೆಯನ್ನು ಬೆರೆಸಬಹುದು.