Showing posts with label Death by chocolate. Show all posts
Showing posts with label Death by chocolate. Show all posts

November 5, 2010

Death by Chocolate

ಇದೇನೋ ಸಸ್ಪೆನ್ಸ್ ಕತೆ ಅನ್ನಕೋಬೇಡಿ.

ನಮ್ಮಲ್ಲಿ ಊಟಕ್ಕೆ ಬಂದಾಗ ವಸುಧೇಂದ್ರ ಅವರು, ತಮ್ಮ ಚಿಕ್ಕಂದಿನಲ್ಲಿ ತಿನ್ನುತ್ತಿದ ಅವಲಕ್ಕಿ, ಮೊಸರು, ಮತ್ತು ಚಟ್ನಿ ಪುಡಿ ಯ terrific combination, ಆಲೂಗಡ್ಡೆ ಫ್ರೈ, ನೆನೆಸಿಕೊಂಡು, ಕಣ್ಣುಗಳನ್ನು ಗಟ್ಟಿಯಾಗಿ ಮುಚ್ಚಿ,ಅಯ್ಯೋssss, (ನೆನಪು ಮಾಡಕೊಂಡ್ರೆ )ಪ್ರಾಣಹೋಗುತ್ತೆ’ ಅಂತ ಹೇಳ್ತಿದ್ದ ಮಾತನ್ನು ನಾನು, ಮಕ್ಕಳು ಬಿಟ್ಟ ಕಣ್ಣಿಂದ, ತೆರೆದ ಬಾಯಿಯಿಂದ ಕೇಳ್ತಾ ಇದ್ವಿ.

ಇವತ್ತು ನಾನು ಹುಟ್ಟಿದ ದಿನ. ಆಂಗ್ಲ ಕ್ಯಾಲೆಂಡರ್ ಪ್ರಕಾರ ಅದು 31 ನೇ ಅಕ್ಟೋಬರ್. ಶ್ರೀಕಾಂತ್ ಆಫೀಸು ಕೆಲಸದ ಮೇಲೆ ಓರಿಸ್ಸಾ ಗೆ ಹೋಗಿದ್ದರಿಂದ, ಅದನ್ನು ಇವತ್ತು ಆಚರಿಸಿದ್ವಿ. ಮಾಲವಿಕ ನನಗೋಸ್ಕರ ಚಾಕೋಲೇಟ್ ಚೀಸ್ ಕೇಕ್ (chocolate cheese cake) ತಂದಿದ್ಲು. ಕೇಕ್ ಕಟ್ ಮಾಡಿ ಬಾಯೊಳಗಿಟ್ಟ ಕೂಡಲೆ, ನನ್ನ ಕಣ್ಣು ತನ್ನಷ್ಟಕ್ಕೆ ಮುಚ್ಚಿಕೊಂಡು, ಅದರ ಸ್ವಾದ ನಾಲಿಗೆ ಮೇಲೆ ಮೆಲ್ಟ್ ಆಗ್ತಾ, ನಾನು ಈ ಲೋಕದಲ್ಲಿರದೇ ತೇಲ್ತಾ, ಸಮಾಧಿ ಸ್ಥಿತಿ ಯಿಂದ, ಇನ್ನೇನು ನಿರ್ವಾಣ ಹೊಂದಬೇಕು.... ಅನ್ನುವಷ್ಟರಲ್ಲಿ, ನನ್ನ ತಮ್ಮ ಫೋನ್ ಮಾಡ್ದ. ಸಹಜ ಸ್ಥಿತಿಗೆ ಮರಳುವಂತೆ ಮಾಡಿದ ಅವನಿಗೆ ಥ್ಯಾಂಕ್ಸ್ ಅಂತೂ ಹೇಳಲಿಲ್ಲ.


ಮಮಮಮಮ್.....what a heavenly taste!!!!ಪ್ರ್ರಾಣ ಹಾಗೆ ಹೋಗಿ, ಹೀಗೆ ಬಂದು ಬಿಡ್ತು. ವಸುಧೇಂದ್ರರ ಮಾತಿನ ಅರ್ಥ ಈಗಾಯ್ತು.

ಅಂದ ಹಾಗೆ ಡೆಥ್ ಬೈ ಚಾಕೋಲೇಟ್ ಐಸ್ ಕ್ರೀಮ್ ಹೆಸರು.

ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು.

:-)