November 15, 2010

work is worship

ಕಾಯಕವೇ ಕೈಲಾಸ


ಈಗ ಮಧ್ಯಾಹ್ನ ನೆನಪಾಯಿತು. ಇವತ್ತು ನಮ್ಮ ಸಂಸ್ಥೆಯ 10 ನೆ ಹುಟ್ಟುಹಬ್ಬ (foundation day) .ಕೆಲಸದಲ್ಲಿ ಎಲ್ಲರೂ ಎಷ್ಟು ವ್ಯಸ್ತರಾಗಿದ್ದಾರೆಂದರೆ, celebration ಇರಲಿ, ನೆನಪಿಸಿಕೊಳ್ಳೋದಕ್ಕೂ ಯಾರಿಗೂ ಪುರುಸೊತ್ತಿಲ್ಲ. ಈ ವರ್ಷ ಒಂದು ದೊಡ್ಡ ಸಮಾರಂಭ ಏರ್ಪಡಿಸಿ ನಮಗೆ ಸಹಕಾರ ನೀಡಿ, ನಾವು ಈ ೧೦ ವರ್ಷಗಳಲ್ಲಿ ರಾಷ್ತ್ರೀಯ-ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಲು ಪ್ರತ್ಯಕ್ಷ, ಪರೋಕ್ಷವಾಗಿ ಬೆನ್ನು ತಟ್ಟಿದವರಿಗೆಲ್ಲ ಖಂಡಿತ ಧನ್ಯವಾದ ಅರ್ಪಿಸಬೇಕೆಂದು ನಿರ್ಧರಿಸಿದ್ದೇವೆ.
ಐದನೆ ವರ್ಷದ ಸಂಸ್ಥಾಪನಾ ದಿನಾಚರಣೆ ಸಂಭ್ರಮದಲ್ಲಿ ನಮ್ಮೊಂದಿಗೆ ಮ್ಯಾಗಸೆಸ್ಸೆ ಪ್ರಶಸ್ತಿ ವಿಜೇತರಾದ ಪದ್ಮಶ್ರೀ ಡಾ. ಎಚ್. ಸುದರ್ಶನ್ ಹಾಗೂ ಭಾರತೀಯ ಸ್ಟೇಟ್ ಬ್ಯಾಂಕ್ ನ ವರಿಷ್ಠ ಅಧಿಕಾರಿ, ಶ್ರೀಮತಿ ಮಹಪರಾ ಅಲಿ ನಮ್ಮೊಂದಿಗಿದ್ದರು.


ಶ್ರೀಮತಿ ಮಹಪರಾ ಅಲಿ, ದೀಪ ಬೆಳಗಿಸುತ್ತಿರುವವರು ಡಾ. ಎಚ್. ಸುದರ್ಶನ್. ಇವರಿಬ್ಬರ ಮಧ್ಯದಲ್ಲಿರುವವರು ಡಾ. ಸೋಮಶೇಖರ್. ದುರದೃಷ್ಟವಶಾತ್ ಅವರು ಈಗ ನಮ್ಮೊಂದಿಗಿಲ್ಲ. ಐದು ವರ್ಷಗಳ ಕಾಲ ಧೈರ್ಯದಿಂದ ಕ್ಯಾನ್ಸರ್ ಕಾಹಿಲೆ ಎದುರು ಹೋರಾಡಿ,  ಮೂರು ತಿಂಗಳಹಿಂದೆ ಅವರು ದೈವಾಧೀನರಾದರು. ನಮ್ಮ well wisher , ನಮ್ಮ ಸಂಸ್ಥೆಯ ಬಗ್ಗೆ ತುಂಬಾ ಆಸ್ಥೆ ವಹಿಸುತ್ತಿದ್ದವರು ಇಲ್ಲದ್ದು ನಮಗೆ ತುಂಬಲಾರದ ನಷ್ಟ. 

ಡಾ. ಸುದರ್ಶನ್ ಅವರು , ಎಲ್ಲರಿಗೂ ಮಾದರಿಯಾಗುವಂತ ಕರುಣಾ ಟ್ರಸ್ಟ್ ಹಾಗೂ ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರವನ್ನು ಕಳೆದ 25 ವರ್ಷಗಳಿಂದ ಬಿ.ಆರ್.ಹಿಲ್ಲ್ಸ್ ನಲ್ಲಿ ನಡೆಸ್ತಾ ಇದ್ದಾರೆ.

10 comments:

apara said...

congrats! all the best for road ahead.
~apara

ಸೀತಾರಾಮ. ಕೆ. / SITARAM.K said...

ಹತ್ತು ತುಂಬಿದ ತಮ್ಮ ಸಂಸ್ಥೆಗೆ ಹೆಮ್ಮರವಾಗಿ ಬೆಳೆಯಲೆಂದು ತುಂಬು ಮನದೀ ಹಾರೈಸುತ್ತೇನೆ.

ಸೀತಾರಾಮ. ಕೆ. / SITARAM.K said...

ಹತ್ತು ತುಂಬಿದ ತಮ್ಮ ಸಂಸ್ಥೆಗೆ ಹೆಮ್ಮರವಾಗಿ ಬೆಳೆಯಲೆಂದು ತುಂಬು ಮನದೀ ಹಾರೈಸುತ್ತೇನೆ.

Badarinath Palavalli said...

Malathi avare. You have lived Great 10 years mam. Wish u and ur organization 10th anniversary wishes. Dreaming such a rewardless social organization was it self great. Pl. Call us for celebrations. Media should appreciate u and give good coverage. All the best to u, Srikanth sir and all ur staff.

ಸವಿಗನಸು said...

Dear Malathi,
Congratulations.....Great Job...

Wish U all the best...

nenapina sanchy inda said...

Thank You Raghu, Sitaram, Badari and Mahesh!!!

Satheesh Gowda said...

ಮಾಲತಿಯವರೆ ಸದ್ದಿಲ್ಲದೆ ಈ ೧೦ ವರ್ಷಗಳಲ್ಲಿ ಸಾಕಷ್ಟು ಕೆಲಸ ಮಾಡಿದ್ದೀರಿ.... ನಿಜಕ್ಕು ನಿಮ್ಮ ಕೆಲಸವನ್ನು ಮೆಚ್ಚಬೇಕು.... ನಿಮ್ಮ ಸಂಸ್ಥೆ ಇನ್ನೂ ಹೆಮ್ಮರವಾಗಿ ಬೆಳೆದು ಸಾಕಷ್ಟು ಜನರಿಗೆ ಇನ್ನು ಅನೇಕ ಅನುಕೂಲಗಳನ್ನು ಮಾಡಲಿ ಹೀಗೆ ಬೆಳೆಯುತ್ತಾ ಹೋಗಲಿ. ಒಳಿತಾಗಲಿ :)

ದೀಪಸ್ಮಿತಾ said...

ಅಭಿಂದನೆಗಳು ಮೇಡಮ್. ಇನ್ನೂ ಅನೇಕ ವರ್ಷ ನಿಮ್ಮ ಸಂಸ್ಥೆ ಕಾರ್ಯನಿರ್ವಹಿಸಲಿ

nenapina sanchy inda said...

Aviratha Sateesh and Deepasmitha!!
dhanyavaadagaLu
:-)

Gubbachchi Sathish said...

ನೀವೂ ಪ್ರಾಸ್ಟ್ ಅಭಿಮಾನಿ! ಥ್ಯಾಂಕ್ ಗಾಡ್ ನನಗೊಬ್ಬರು ನನ್ನ ಗುರುವಿನ ಅಭಿಮಾನಿ ಸಿಕ್ಕರು. ಒಳ್ಳೆಯ ಕೆಲಸ ಮಾಡುತ್ತಿದ್ದೀರಿ. ಅಭಿನಂದನೆಗಳು.