November 5, 2010

Death by Chocolate

ಇದೇನೋ ಸಸ್ಪೆನ್ಸ್ ಕತೆ ಅನ್ನಕೋಬೇಡಿ.

ನಮ್ಮಲ್ಲಿ ಊಟಕ್ಕೆ ಬಂದಾಗ ವಸುಧೇಂದ್ರ ಅವರು, ತಮ್ಮ ಚಿಕ್ಕಂದಿನಲ್ಲಿ ತಿನ್ನುತ್ತಿದ ಅವಲಕ್ಕಿ, ಮೊಸರು, ಮತ್ತು ಚಟ್ನಿ ಪುಡಿ ಯ terrific combination, ಆಲೂಗಡ್ಡೆ ಫ್ರೈ, ನೆನೆಸಿಕೊಂಡು, ಕಣ್ಣುಗಳನ್ನು ಗಟ್ಟಿಯಾಗಿ ಮುಚ್ಚಿ,ಅಯ್ಯೋssss, (ನೆನಪು ಮಾಡಕೊಂಡ್ರೆ )ಪ್ರಾಣಹೋಗುತ್ತೆ’ ಅಂತ ಹೇಳ್ತಿದ್ದ ಮಾತನ್ನು ನಾನು, ಮಕ್ಕಳು ಬಿಟ್ಟ ಕಣ್ಣಿಂದ, ತೆರೆದ ಬಾಯಿಯಿಂದ ಕೇಳ್ತಾ ಇದ್ವಿ.

ಇವತ್ತು ನಾನು ಹುಟ್ಟಿದ ದಿನ. ಆಂಗ್ಲ ಕ್ಯಾಲೆಂಡರ್ ಪ್ರಕಾರ ಅದು 31 ನೇ ಅಕ್ಟೋಬರ್. ಶ್ರೀಕಾಂತ್ ಆಫೀಸು ಕೆಲಸದ ಮೇಲೆ ಓರಿಸ್ಸಾ ಗೆ ಹೋಗಿದ್ದರಿಂದ, ಅದನ್ನು ಇವತ್ತು ಆಚರಿಸಿದ್ವಿ. ಮಾಲವಿಕ ನನಗೋಸ್ಕರ ಚಾಕೋಲೇಟ್ ಚೀಸ್ ಕೇಕ್ (chocolate cheese cake) ತಂದಿದ್ಲು. ಕೇಕ್ ಕಟ್ ಮಾಡಿ ಬಾಯೊಳಗಿಟ್ಟ ಕೂಡಲೆ, ನನ್ನ ಕಣ್ಣು ತನ್ನಷ್ಟಕ್ಕೆ ಮುಚ್ಚಿಕೊಂಡು, ಅದರ ಸ್ವಾದ ನಾಲಿಗೆ ಮೇಲೆ ಮೆಲ್ಟ್ ಆಗ್ತಾ, ನಾನು ಈ ಲೋಕದಲ್ಲಿರದೇ ತೇಲ್ತಾ, ಸಮಾಧಿ ಸ್ಥಿತಿ ಯಿಂದ, ಇನ್ನೇನು ನಿರ್ವಾಣ ಹೊಂದಬೇಕು.... ಅನ್ನುವಷ್ಟರಲ್ಲಿ, ನನ್ನ ತಮ್ಮ ಫೋನ್ ಮಾಡ್ದ. ಸಹಜ ಸ್ಥಿತಿಗೆ ಮರಳುವಂತೆ ಮಾಡಿದ ಅವನಿಗೆ ಥ್ಯಾಂಕ್ಸ್ ಅಂತೂ ಹೇಳಲಿಲ್ಲ.


ಮಮಮಮಮ್.....what a heavenly taste!!!!ಪ್ರ್ರಾಣ ಹಾಗೆ ಹೋಗಿ, ಹೀಗೆ ಬಂದು ಬಿಡ್ತು. ವಸುಧೇಂದ್ರರ ಮಾತಿನ ಅರ್ಥ ಈಗಾಯ್ತು.

ಅಂದ ಹಾಗೆ ಡೆಥ್ ಬೈ ಚಾಕೋಲೇಟ್ ಐಸ್ ಕ್ರೀಮ್ ಹೆಸರು.

ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು.

:-)

11 comments:

ಅನಂತ್ ರಾಜ್ said...

ಆಶ್ವಯುಜ ಬಹುಳ ಚತುರ್ದಶಿಯ೦ದು ಜನಿಸಿದ ನಿಮಗೆ ಹುಟ್ಟುಹಬ್ಬದ ಶುಭಾಶಯಗಳು. "ಅಧಿಕ" ಬ೦ದದ್ದರಿ೦ದ ಆ೦ಗ್ಲ ಮಾಸದ ದಿನಾ೦ಕದಿ೦ದ ಒ೦ದು ತಿ೦ಗಳು ಮು೦ದೆ ಬ೦ದಿರಬೇಕು. ಡೆಥ್ ಬೈ ಚಾಕೋಲೇಟ್ ಐಸ್ ಕ್ರೀಮ್ ಪರಿಚಯಿಸಿದ್ದಕ್ಕೆ ಧನ್ಯವಾದಗಳು ಹಾಗೂ ತಮಗೂ ದೀಪಾವಳಿಯ ಶುಭಾಶಯಗಳು.

ಅನ೦ತ್

ಮಹೇಶ ಭಟ್ಟ said...

ಹುಟ್ಟು ಹಬ್ಬದ ಶುಭಾಶಯಗಳು. ಚಾಕೋಲೇಟ್ ನ ಸ್ವಾದವೇ ಹಾಗೆ.

Ittigecement said...

ತಡವಾಗಿ ಹೇಳುತ್ತಿರುವೆ "ಜನುಮ ದಿನದ ಶುಭಾಶಯಗಳು"

ಹಬ್ಬ ಆಚರಿಸಿ ಹೇಳುತ್ತಿರುವೆ.."ದೀಪದ ಹಬ್ಬದ ಶುಭಾಶಯಗಳು"

"ನಿನ್ನ
ಪ್ರೀತಿಯ ಅನುಭವ ಸಾವಿನಂತಿತ್ತು"
ಅಂದರೆ...

ಸಾವಲ್ಲೂ ಸಿಹಿ ಇದೆಯಂತಾಯಿತು ಅಲ್ಲವೆ?

Roopa said...

ತಡವಾಗಿ "ಹುಟ್ಟು ಹಬ್ಬದ ಶುಭಾಶಯಗಳು" ಹೇಳುತ್ತಿರುವೆ. Death by choc ನನಗೊ ತುಂಬಾ ಇಷ್ಟ!

Sushrutha Dodderi said...

alele! belated happy birthday akkammaa.... :-)

nenapina sanchy inda said...

@Prakash!! seeing u after a looong time!!thank you
@Putti's amma and Mahesh welcome!!
@ Anantraj : DhanyavaadagaLu!!
@Sushrutha: thank you tammaNNa. akkamma word tumbaa isTa aaytu!
:-)
ms

Badarinath Palavalli said...

ಮಾಲತಿ ಅವರೇ.,

ಡೆತ್ ಬೈ ಚಾಕಲೆಟ್ ನಾವೂ ಟ್ರೈ ಮಾಡ್ತೀವಿ ಮೇಡಂ.. ಬರಹ ಸಿಂಪಲ್ಲಾಗಿ ಬಾಯಿ ಚಪ್ಪರಿಸುವಂತಿದೆ...

ಅಂದ ಹಾಗೇ ನಿಮ್ಮ ಚಿತ್ರಕ್ಕೆಂದೇ ಬರೆದ ಕವನ ಸ್ವಲ್ಪ ಬದಲಾವಣೆಯಾಗಿದೆ. ಓದಿ ಕಮೆಂಟ್ ಹಾಕಿ..
http://badari-poems.blogspot.com/2010/11/blog-post.html

ಜಲನಯನ said...

ಮಾಲತಿ ಹ್ಯಾಪಿ ಬರ್ತ್ ಡೇ (ಬಹಳ ಲೇಟು ನಾನು..ಏನ್ಮಾಡ್ಲಿ ನಿಮ್ಮ ಬಿ,ಡೇ. ಈಗ್ಲೇ ಗೊತ್ತಾಗಿದ್ದು)..ಚಾಕಲೇಟು ಲೇಟಾಗಿ ಸಿಕ್ತಾ,,? ...ಹಹಹ

savitri said...

Dear Madam,
Januma Dinada Hardika Shubhashayagalu. Akkamma haagu Tammannanavara message odi estu khusiyayitendare, adu Death by Bliss...

ಸೀತಾರಾಮ. ಕೆ. / SITARAM.K said...

ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ಸಂತಸದ ದಿನಗಳು ನೂರಾರಾಗಿ ಮರಳಲಿ. ತಡವಾಗಿದ್ದಕ್ಕೆ ಕ್ಷಮೆ ಇರಲಿ.
Better late than never.

Anonymous said...

ತಲೆಬರಹ ನೋಡಿ ಅಗಾಥ ಕ್ರಿಸ್ಟಿ ಕತೆ ಇರಬಹುದೇನೋ ಅಂದ್ಕೊಂಡೆ !

ಚೆನ್ನಾಗಿದೆ !

- Kar