ಆ ದಿನ ಅವರೆ ಕಾಳು ಉಪ್ಪಿಟ್ಟು ಮಾಡಿದ್ದೆ. ಅದಕ್ಕೆ ಪುದೀನಾ ಚಟ್ನಿ. ಕ್ಯಾಲಿಫೋರ್ನಿಯ ದಿಂದ ಶ್ರೀಕಾಂತ್ ರ ಆಪ್ತ ಗೆಳೆಯರು ಬಂದಿದ್ದರು. ನೆಟ್ ನಲ್ಲೆಲ್ಲ ಅವರು ಅವರೆ ಕಾಳು ಉಪ್ಪಿಟ್ಟ್ ಬಗ್ಗೆ ಓದಿದ್ರಂತೆ. ಫೋನ್ ಮಾಡಿದ್ದಾಗ ಅವರ ಫರ್ಮಾಯಿಶ್ ತಿಳಿಸಿದ್ರು. ಅವರಿಗೆಲ್ಲ ನನ್ನ ಅವರೆ ಕಾಳು ಉಪ್ಪಿಟ್ಟು ತಿನ್ನಿಸಿ ಭೇಶ್ ಅನ್ನಿಸಿ ಕೊಂಡಿದ್ದೆ. ಅವರ ಹೊಗಳಿಕೆಯ ಮಾತಿನಿಂದಲೇ ನನ್ನ ಹೊಟ್ಟೆ ಅರೆ ತುಂಬಿತ್ತು ಖುಶಿಯಿಂದ.ಆತುರಾತುರವಾಗಿ ನನ್ನ ಕೆಲಸ ಮುಗಿಸ್ತಾ ಇದ್ದೆ. ಯಾಕೇ ಅಂದರೆ ಪ್ರತೀ ವರ್ಷ ನಾವು ಆಗಸ್ಟ್ 15 ರಂದು ರಕ್ತ ದಾನ ಮಾಡುತ್ತ ಬಂದಿದ್ದೇವೆ.
ಶ್ರೀಕಾಂತ ಕೂಡ ತುಂಬಾ ಆತುರ ಪಡಿಸ್ತಾ ಇದ್ರು. ನಿನ್ನ breakfast ಬೇಗ ಮುಗಿಸು. ಗಾಡಿ ಬರುವಷ್ಟರಲ್ಲಿ ನಾವು ರೆಡಿ ಯಾಗ ಬೇಕು.
ಉಪ್ಪಿಟ್ಟು ಉಳಿದದ್ದೆ ಕಡಿಮೆ. (ರಜೆ ಇದ್ದಾಗ ಮಕ್ಕಳ ಹೊಟ್ಟೆಯಲ್ಲಿ ಜಾಸ್ತಿ ಜಾಗ ಇರುತ್ತೆ. ಕಾಲೇಜು ಇದ್ದಾಗ ಎರಡು ದೋಸೆ ತಿಂದ್ರೆ, ರಜೆಯಲ್ಲಿ 4-5 ದೋಸೆನಾದ್ರು ಕಬಳಿಸ್ತಾರೆ. ಇದರ logic ನನಗೆ ಖಂಡಿತ ಇನ್ನೂ ಗೊತ್ತಾಗಿಲ್ಲ :-))ಅದನ್ನು ಪ್ಲೇಟ್ ನಲ್ಲಿ ಹಾಕಿ, spoon ತರಲು ಒಳಗೆ ಹೋದಾಗ, ಬಾಗಿಲ ಬಳಿ ’ಅಮ್ಮಾssss' ಎನ್ನುವ ಹೃದಯವಿದ್ರಾವಕ ಕೂಗು ಕೇಳಿಸ್ತು. ಆ ಕರೆ ಯಿಂದ ನನ್ನ ಮೈ ಮೇಲಿನ ರೋಮಗಳೆಲ್ಲ ನಿಮಿರಿ ನಿಂತವು. ಯಾರಪ್ಪ ಅಂತ ನೋಡಲು ಹೊರಗೆ ಹೋಗಿ ನೋಡಿದರೆ ಚಿಂದಿ ಆಯುವ ಹುಡುಗ. ಸ್ನಾನ ಕಾಣದೆ ಎಷ್ಟೋ ದಿನಗಳಾಗಿರಬೇಕು. ನನ್ನ ಕಂಡೊಡನೆ....’ಅಮ್ಮ 3 ದಿನದಿಂದ ಏನೂ ತಿಂದಿಲ್ಲ...ಏನಾದ್ರೂ ಕೊಡಿ ಅಂದ’
ಸರಿ. ಉಪ್ಪಿಟ್ಟು ತಿನ್ತಿಯಾ ಅಂತ ಕೇಳಿದೆ. ಅವನಿಗೆ ಗೋಣು ಅಲ್ಲಾಡಿಸುವಷ್ಟೂ ಶಕ್ತಿ ಇರಲಿಲ್ಲ. ನನ್ನ ಪ್ಲೇಟಿನ ತಿಂಡಿಯನ್ನೆಲ್ಲ ಬಾಳೆ ಎಲೆಗೆ ರವಾನಿಸಿ. ಅದರ ಜತೆ ಒಂದಿಷ್ಟು ಖಾರ ಹಾಕಿ ಅವನಿಗೆ ಕೊಡಲು ಹೋದೆ. ಕೈ ನಿಂದ ಎಳೆದು ಕೊಳ್ಳುವ ಹಾಗೆ ಕಾಣ್ತಿದ್ದ. ಅವನ ಕೈಗಳು ಕೊಳೆಯಾಗಿದ್ದವು. ಉಗುರಿನಲ್ಲೆಲ್ಲ ಕಪ್ಪು ಗಲೀಜು. ನನ್ನ ಕೈಯನ್ನು ಹಿಂದಕ್ಕೆಳೆದು...’ಸೋಪ್ ಕೊಡ್ತೇನೆ, ಮೊದಲು ಕೈ ತೊಳೆದು ಆ ಮೇಲೆ ತಿಂಡಿ ತೆಗೊ ಅಂದೆ. ಅವನು ಅಳುವುದೊಂದು ಬಾಕಿ. ಆದರೂ ಹೊರಗೆ ಗರಾಜ್ ನಲ್ಲಿದ್ದ ನಲ್ಲಿ ಬಳಿ ಹೋಗಿ ಕೈ ತೊಳೆದು ಬಂದು, ಗಬ ಗಬ ನೆ ತಿನ್ನಲಿಕ್ಕೆ ಶುರು ಮಾಡಿದ. ನಾನು ’ನಿಧಾನ...ಎದೆಯಲ್ಲಿ ಸಿಕ್ಕ ಹಾಕೊಳ್ಳುತ್ತೆ. ತಡಿ ನೀರು ತರ್ತೆನೆ ಅಂದೆ. ನೀರು ಕೊಟ್ಟು ಟಿ ಮಾಡಲಾ ಅಂದೆ. ಗೋಣು ಅಲ್ಲಾಡಿಸಿದ.
ಪಾಪ ಹಸಿದಿದ್ದಂತು ಹೌದು. ಟಿ ಜತೆ ಇನ್ನಷ್ಟು ಬಿಸ್ಕತ್, ಕೋಡುಬಳೆ ಎಲ್ಲ ಪ್ಯಾಕ್ ಮಾಡಿ ಕೊಟ್ಟೆ.
ನನಗಂತು ಶ್ರೀಕಾಂತ್ ದು 'big hug' ಸಿಕ್ತು, ಅವರ ಕಣ್ಣಲ್ಲಿ ಕಂಡೂ ಕಾಣದಂತ ನೀರಿನ ಪಸೆ.
ಆದರೆ ನನಗನಿಸಿದ್ದು. ಸ್ವಾತಂತ್ರ್ಯ ಬಂದು 61 ವರ್ಷಗಳಾದ್ವು. ಒಬ್ಬ ಮನುಷ್ಯ ಇಷ್ಟು ಹಸಿವೆಯಿಂದಿರ್ತಾನಂದ್ರೆ...ಇದು ನಾಚಿಕೆ - ಕಾಳಜಿ ಪಡುವ ವಿಷಯ ತಾನೆ? ಮತ್ತು ಇದೇ ಮನುಷ್ಯ ನಾಳೆ ದುರ್ಮಾರ್ಗಕ್ಕೆ ಇಳಿಯಲ್ಲ ಅಂತ ಏನು ಖಾತ್ರಿ. ಆ ಹುಡುಗನ ವಯಸ್ಸು ಅಂದಾಜು 10 ರಿಂದ 12 ಇದ್ದಿರಬಹುದು. ಅವನೂ ನಮ್ಮ ಮಕ್ಕಳ ಹಾಗೆ ನಾಳಿನ ಪ್ರಜೆ ಅಲ್ಲವೇ?
ಹುಡುಗ ಮಾತ್ರ ಪಾಪ ’ಅಮ್ಮ ಏನಾದ್ರು ಕೆಲಸ ಇದ್ರೆ ಹೇಳಿ ಮಾಡ್ತೇನೆ’ ಅಂದ. ಇನ್ನೊಮ್ಮೆ ಬಾಪ್ಪ , ಈಗ ಮನೆಯಲ್ಲಿರಲ್ಲ ಅಂದೆ. ಅದೇ ನಾವು ಮದುವೆ, ಮುಂತಾದ ಸಭೆ-ಸಮಾರಂಭದಲ್ಲಿ ಎಷ್ಟೊಂದು ಆಹಾರ ಚೆಲ್ಲಿ ಬಿಡ್ತೇವೆ.
ಮೊದಲೆಲ್ಲ ಹೋಟಲ್ ನಲ್ಲಿ ಪಾರ್ಟಿ ಎಲ್ಲ ಇದ್ದಾಗ ಉಳಿದಿದ್ದ ಊಟ-ತಿಂಡಿಯನ್ನು ಅನಾಥಾಶ್ರಮಕ್ಕೆ ಕಳಿಸ್ತಾ ಇದ್ರು. ಆದ್ರೆ ಒಂದು ಸಲ ಇಂತಹ ತಿಂಡಿ ತಿಂದು ಅನಾಥಾಶ್ರಮದ ಮಕ್ಕಳೆಲ್ಲ ಅಸ್ವಸ್ಥರಾಗಿದ್ದರಂತೆ, ಇನ್ನುಳಿದಂತೆ ಕೆಲವೊಮ್ಮೆ ಈ function ಗಳಿಂದ ಬಂದ ತಿಂಡಿಗಳೆಲ್ಲ್ಲ ಅಲ್ಲಿನ ಸಿಬ್ಬಂದಿಗಳು ತಮ್ಮ ಮನೆಗೆ ಒಯ್ಯುತ್ತಾರಂತೆ.
ಒಟ್ಟಿನಲ್ಲಿ disturbing situations ಗಳು. ಏನಿದಕ್ಕೆ ಉಪಾಯ?ನಿಟ್ಟುಸಿರು ಬಿಡುವುದು ಅಷ್ಟೆ.
HAPPY INDEPENDENCE DAY ಎಲ್ಲರಿಗೂ

7 comments:
ಹುಡುಗನ ಹಸಿವು ನಿಗಿಸಿದ್ದು ನಿಮ್ಮ ದೊಡ್ಡ ಗುಣ....ನಿಮ್ಮ ಸಹಾಯ ನೇರ ತಲುಪಿದೆ....ಬಸ್ ನಿಲ್ದಾಣದ ಮರಾಠಿ ಹೆಂಗಸಿನಂತವರೂ ಇರ್ತಾರೆ..
ಚೆನ್ನಾಗಿ ಬರೆದ್ದಿದೀರಾ....ಹೀಗೆ ಬರೆಯುತ್ತೀರಿ....
tumba oLLeya lekana.. naavella ariyuvanta baraha..
@ saviganansu-
:-)
Thank you
@ manasu
Liked your poem immensely but your blog is not accepting my comment.
Thanks to you too.
:-)
malathi S
ಮಿ-ಅವರೇ, ಯಾಕ್ರೀ ಈ ಮುಜುಗರ...ಸರಿ ಬಿಡಿ..
ನಿಮ್ಮ ಲೇಖನ ಸಾಮಾನ್ಯ ಘಟನಾವಳಿಯನ್ನು ಹೇಗೆ ಆಪ್ಯಾಯಗೊಳಿಸಬಹುದು ಎಂಬುದನ್ನು ತೋರಿಸುತ್ತೆ, ಚನ್ನಾಗಿದೆ. ರೂಪಶ್ರೀ ಮೂಲಕ ನಿಮ್ಮ ಪರಿಚಯ. ನನ್ನ ಬ್ಲಾಗ್ ಗೂ ಭೇಟಿ ನೀಡಿ. ಜಲನಯನ, ಭಾವಮಂಥನ ಮತ್ತು scince & share ನನ್ನ ಬ್ಲಾಗ್ ಗಳು.
>>> "ಒಟ್ಟಿನಲ್ಲಿ disturbing situations ಗಳು. ಏನಿದಕ್ಕೆ ಉಪಾಯ?ನಿಟ್ಟುಸಿರು ಬಿಡುವುದು ಅಷ್ಟೆ "
ಮನ ಕರಗಿಸುವ ಕತೆ ಹೇಳಿ ಅದೇ ಉಸಿರಲ್ಲಿ ಹ್ಯಾಪಿ ಇಂಡಿಪೆಂಡೆನ್ಸ್ ಎಂದಿದ್ದೀರಲ್ಲ!
ಹತಾಶರಾಗಬೇಡಿ.
ಕೆಲ ವರ್ಷ ಗಳ ಹಿಂದೆ ದಯನೀಯ ಪರಿಸ್ಥಿತಿ ಇದ್ದದ್ದು ಹೌದು.
ಆದರೆ ಈಗ ಕೆಲಸಮಾಡುವವರ ತೀವ್ರ ಅಭಾವವಿದೆ.
ಬಡವನ ಹಸಿದ ಹೊಟ್ಟೆಗೆ ಮೀನುಪಲ್ಯ ಹಾಕಿ ಹಸಿವೆ ಹಿಂಗಿಸಿ ಕಳಿಸಿಕೊಟ್ಟರೆ ಆತನ ಒಂದು ಹೊತ್ತಿನ ಹಸಿವೆಯನ್ನು ನೀಗಿಸಬಹುದು. ಆದರೆ ಅದರ ಬದಲಿಗೆ ಮೀನು ಹಿಡಿಯುವ ವಿದ್ಯೆಯನ್ನು ಕಲಿಸಿಕೊಟ್ಟರೆ ಜೀವಮಾನ ಪೂರ್ತಿ ತನ್ನ ಹಸಿವೆಗೆ ತಾನೇ ಉಪಾಯ ಕಂಡು ಹುಡುಕುವ ಯೋಗ್ಯತೆಯನ್ನು ಬೆಳೆಸಿದಂತಾಗುತ್ತದೆ ಎಂದು ಇ-ಮೆಯಿಲ್ ಕತೆ ಓದಿದ ನೆನಪು.
ಕೆಲಸದವರ ಅಭಾವ ಎಷ್ಟಿದೆ ಅನ್ನುವುದಕ್ಕೆ ಒಂದು ಉದಾಹರಣೆ.
ನೂರು ತೆಂಗಿನಮರದ ಎರಡೆಕರೆ ತೋಟ, ಸಮ್ರದ್ಧ ನೀರಿನ ಸೆಲೆ, ಇರಲು ತೋಟದಲ್ಲೇ ಮನೆ ಮಣಿಪಾಲದಲ್ಲಿ.
ಇವಿಷ್ಟನ್ನೂ ಮಾಲೀಕರು ಪುಕ್ಕಟೆಯಾಗಿ ಕ್ರಷಿ ಕೂಲಿ ದಂಪತಿಗಳಿಗೆ ಕೊಟ್ಟು ಗಂಡನಿಗೆ ತಮ್ಮ ಗಿಡಗಳ ನರ್ಸರಿಯಲ್ಲಿ ಹತ್ತು ಸಾವಿರ ಸಂಬಳವನ್ನೂ ಕೊಡಲು ತಯಾರಿದ್ದಾರೆ -ಕ್ರಷಿ ಕೆಲಸದಲ್ಲಿ ಆಸಕ್ತಿ ಯಾ ಅನುಭವ ಇರುವಂಥಹವರಿಗೆ! ಎರಡೆಕರೆ ತೋಟದಲ್ಲಿ ತರಕಾರಿ, ಹೂವುಗಳನ್ನೂ ಬೆಳೆದು ಮಾರಿ ಇನ್ನೂ ಹೆಚ್ಚಿನ ಗಳಿಕೆ ಮಾಡುವದಕ್ಕೆ ಅನುಮತಿಯೂ ಇದೆ.
ನಿಮ್ಮ ಆ ಹಸಿದ ಹುಡುಗನನ್ನು ಅಥವಾ ಇನ್ಯಾರಾದರೂ ಯೋಗ್ಯರು ಕಂಡುಬಂದಲ್ಲಿ ಕಳಿಸಿಕೊಡಬಹುದು.
ಉಜಿರೆಯಲ್ಲಿ ಹಲವರ್ಷ ಕಳೆದ ನಿಮಗೆ ನನಗಿಂತಲೂ ಹೆಚ್ಚು ಗೊತ್ತಿರಬಹುದು - ಧರ್ಮಸ್ಥಳದಲ್ಲಿ ಯಾರೇ ಬಂದರೂ ಎರಡು ಹೊತ್ತಿನ ಊಟ ಹಾಕುತ್ತಾರೆ.
Dear Anon!!
Its veerendra Heggade's fav quote "Give a man a fish and you feed him for a day. Teach a man to fish and you feed him for a lifetime"..its a chinese proverb..we have been associated with Dr.D. V. heggade for 6 and half years....
but i dont excatly agree with you...most of them want to be in cities....we tried to help such needy people by asking them to help in our teerthahalli tOta....but both ran away ....:-)may be the lure of the city is too much for them...most of them also shy away from hard work....anyways this is our experience....
ms
Post a Comment