ಹಠಾತ್ತನೆ ಗಾಳಿಗೆ ತೇಲಿ ಬರುವ after-shave ನ ಪರಿಮಳ, ಅಥವಾ ಯಾರದ್ದೋ ಕಾಲುಚೀಲದ ಕೆಟ್ಟ ವಾಸನೆ, ಬಸ್ಸ್ ನಿಲ್ದಾಣದಿಂ
ದ ಹೊರಟಾಗ ಕಿಟಕಿಯಿಂದ ಒಂದೇ ಕ್ಷಣ ಕಂಡ ಯಾರದ್ದೊ ನಗು ಮುಖ, ಹಾಡಿನ ತುಣುಕು ಪಲ್ಲವಿ ಕೇಳಿ.... ಎನೋ ನೆನಪಾಗಿ ನಾವು flash-back ಗೆ ಜಾರುವ ಹಾಗೆ.....ನನ್ನ ನೆನಪಿನ ಸಂಚಿ. ಸಂಚಿ ಚೀಲ ಕ್ಕೆ drawstring bag ಅಂತಾರೆ. ಪಗಡೆ ಕಾಯಿಗಳನ್ನು ಹಾಕಿಡಲು ನನ್ನ ಮಗಳು ಪುಟ್ಟದಾದ ಒಂದು ಸಂಚಿಯನ್ನು ಹೊಲಿಯುತ್ತಿರುವಾಗ ನನ್ನ ಬ್ಲಾಗ್ ಗೆ ಇದೇ ಹೆಸರು ಯಾಕಿಡಬಾರದೆಂದು ಹೊಳೆಯಿತು.
ದ ಹೊರಟಾಗ ಕಿಟಕಿಯಿಂದ ಒಂದೇ ಕ್ಷಣ ಕಂಡ ಯಾರದ್ದೊ ನಗು ಮುಖ, ಹಾಡಿನ ತುಣುಕು ಪಲ್ಲವಿ ಕೇಳಿ.... ಎನೋ ನೆನಪಾಗಿ ನಾವು flash-back ಗೆ ಜಾರುವ ಹಾಗೆ.....ನನ್ನ ನೆನಪಿನ ಸಂಚಿ. ಸಂಚಿ ಚೀಲ ಕ್ಕೆ drawstring bag ಅಂತಾರೆ. ಪಗಡೆ ಕಾಯಿಗಳನ್ನು ಹಾಕಿಡಲು ನನ್ನ ಮಗಳು ಪುಟ್ಟದಾದ ಒಂದು ಸಂಚಿಯನ್ನು ಹೊಲಿಯುತ್ತಿರುವಾಗ ನನ್ನ ಬ್ಲಾಗ್ ಗೆ ಇದೇ ಹೆಸರು ಯಾಕಿಡಬಾರದೆಂದು ಹೊಳೆಯಿತು.ಶ್ರೀಕಾಂತ್ ಗೆ ಕೇಳಿದಾಗ ಅವರು wow ಅಂದ್ರು.ಸೋ ನನ್ನ ಬ್ಲಾಗ್ ನೆನಪಿನ ಸಂಚಿಯಿಂದ...................
ಸಂಚಿ...........
ನಮ್ಮಲ್ಲಿ ಕೆಲಸಕ್ಕೆ ಬರುವ ರಾಜೀವಿಯ ನೆನಪು....
ಕೆಲಸ ಶುರು ಮಾಡುವ ಮುಂಚೆ ಅವಳು ಒಂದು ಕಪ್ ಚಹಾ ಕುಡಿದು, ಅವಳ ಕಚ್ಚೆ ಹಾಕಿ ಉಟ್ಟ ಸೀರೆಯ ನೆರಿಗೆಯಲ್ಲಿ ಸಿಕ್ಕಿಸಿದ ಸಂಚಿಯನ್ನು ತೆಗೆದು ನೆಲದ ಮೇಲಿಡುತ್ತಿದ್ದಳು. ಅದರೊಳಗಿನಿಂದ ನಿಧಾನವಾಗಿ ಪ್ಲ್ಯಾಸ್ಟಿಕ್ ನಲ್ಲಿ ಕಟ್ಟಿದ ವೀಳ್ಯದ ಎಲೆ, ಪುಟ್ಟ ಡಬ್ಬಿಯಲ್ಲಿದ್ದ ಸುಣ್ಣ, ಹೊಗೆಸೊಪ್ಪಿನ ಸುರುಳಿ, ಅಡಿಕೆ
ಗೋಟು, ಚೂರು..ಹೀಗೆ ಒಂದೊಂದಾಗಿ ನೆಲದ ಮೇಲೆ ತೆಗೆದಿಟ್ಟು, ಎಲೆಯನ್ನು ಸೆರಗಿಗೆ ಗಸ ಗಸ ಉಜ್ಜಿ, ಬಲಗೈ ತೋರು ಬೆರಳಿನಿಂದ ಗುಲಾಬಿ ಬಣ್ಣದ ಸುಣ್ಣ ಎಲೆಗೆ ಹಚ್ಚಿ, ಹಿಂದಿನ ದಿನ ಪುಡಿ ಮಾಡಿಟ್ಟುಕೊಂಡ ಅಡಿಕೆ ಚೂರು ಹಾಕಿ, ಎಲೆಯನ್ನು ಸುರುಳಿ ಮಾಡಿ ಬಾಯಿಗೆ ಇಟ್ಟು ಕೊಳ್ಳುತ್ತಿದ್ದಳು. ಕೆಲ ಸೆಕೆಂಡು ಬಿಟ್ಟು ಹೊಗೆಸೊಪ್ಪಿನ ಪುಟ್ಟ ತುಣುಕೊಂದು ಬಾಯಲ್ಲಿ ಹಾಕಿ ಕೊಂಡು...ಬಾಯಿಯಿಂದ ರಸ ತುಳುಕದ ಹಾಗೆ ಬಾಯಿಯನ್ನು ಒಂದು ತರಹ ಓರೆ ಮಾಡಿ...ಆ ದಿನದ gossip ಶುರು. :-)..........................ಅಮ್ಮಾ ಇವತ್ತು ಏನಾಯ್ತು ಗೊತ್ತಾ.................ಅಥವ ನನ್ನ ಉದ್ದ ಜಡೆಗೆ ಎಣ್ಣೆ ಹಚ್ಚಿ, ಗಟ್ಟಿಯಾಗಿ ಹೆಣೆಯುತ್ತ........ಪುಟ್ಟಮ್ಮ...ಹೀಗೆ ದಿನ ಗಟ್ಟಿಯಾಗಿ ಜಡೆ ಹಾಕ್ಕೊಂಡ್ರೆ ಒಂದು ದಿನ ಕೂದಲು ಕಾಲಿನ ತನಕ ಬರುತ್ತೇ, ನೋಡ್ತಾ ಇರು.ಆ ಮೇಲೆ ರಾಜಕುಮಾರ ಕುದುರೆ ಮೇಲೆ ಬಂದು ನಿನ್ನನ್ನು ಎತ್ಕೊಂಡ್ ಹೋಗ್ತಾನೆ..ಅಂತೇನೋ.....ಅಥವ ಅವರ ಮನೆಯ ಹತ್ತಿರ ಇರುವ ಟಾಕೀಸ್ ಗೆ ಬಂದ ಕುಡುಕರ ಗಲಾಟೆ ಬಗ್ಗೆಯೋ..ಹೇಳ್ತಾ, ಯಾವಾಗ ಜಡೆ ಹಾಕೋದು ನಿಲ್ಲಿಸುತ್ತಿದ್ದಳು ಎಂದೇ ತಿಳಿಯುತ್ತಿರಲಿಲ್ಲ..ನಾನು ಅವಳ ಮಾತಿನಲ್ಲಿ ಕಳೆದು ಹೋಗಿರ್ತಿದ್ದೆ....ಅವಳು ’ಇನ್ನು ಏಳಿ ಪುಟ್ಟಮ್ಮ’ ಅನ್ನುವ ತನಕ.
ಗೋಟು, ಚೂರು..ಹೀಗೆ ಒಂದೊಂದಾಗಿ ನೆಲದ ಮೇಲೆ ತೆಗೆದಿಟ್ಟು, ಎಲೆಯನ್ನು ಸೆರಗಿಗೆ ಗಸ ಗಸ ಉಜ್ಜಿ, ಬಲಗೈ ತೋರು ಬೆರಳಿನಿಂದ ಗುಲಾಬಿ ಬಣ್ಣದ ಸುಣ್ಣ ಎಲೆಗೆ ಹಚ್ಚಿ, ಹಿಂದಿನ ದಿನ ಪುಡಿ ಮಾಡಿಟ್ಟುಕೊಂಡ ಅಡಿಕೆ ಚೂರು ಹಾಕಿ, ಎಲೆಯನ್ನು ಸುರುಳಿ ಮಾಡಿ ಬಾಯಿಗೆ ಇಟ್ಟು ಕೊಳ್ಳುತ್ತಿದ್ದಳು. ಕೆಲ ಸೆಕೆಂಡು ಬಿಟ್ಟು ಹೊಗೆಸೊಪ್ಪಿನ ಪುಟ್ಟ ತುಣುಕೊಂದು ಬಾಯಲ್ಲಿ ಹಾಕಿ ಕೊಂಡು...ಬಾಯಿಯಿಂದ ರಸ ತುಳುಕದ ಹಾಗೆ ಬಾಯಿಯನ್ನು ಒಂದು ತರಹ ಓರೆ ಮಾಡಿ...ಆ ದಿನದ gossip ಶುರು. :-)..........................ಅಮ್ಮಾ ಇವತ್ತು ಏನಾಯ್ತು ಗೊತ್ತಾ.................ಅಥವ ನನ್ನ ಉದ್ದ ಜಡೆಗೆ ಎಣ್ಣೆ ಹಚ್ಚಿ, ಗಟ್ಟಿಯಾಗಿ ಹೆಣೆಯುತ್ತ........ಪುಟ್ಟಮ್ಮ...ಹೀಗೆ ದಿನ ಗಟ್ಟಿಯಾಗಿ ಜಡೆ ಹಾಕ್ಕೊಂಡ್ರೆ ಒಂದು ದಿನ ಕೂದಲು ಕಾಲಿನ ತನಕ ಬರುತ್ತೇ, ನೋಡ್ತಾ ಇರು.ಆ ಮೇಲೆ ರಾಜಕುಮಾರ ಕುದುರೆ ಮೇಲೆ ಬಂದು ನಿನ್ನನ್ನು ಎತ್ಕೊಂಡ್ ಹೋಗ್ತಾನೆ..ಅಂತೇನೋ.....ಅಥವ ಅವರ ಮನೆಯ ಹತ್ತಿರ ಇರುವ ಟಾಕೀಸ್ ಗೆ ಬಂದ ಕುಡುಕರ ಗಲಾಟೆ ಬಗ್ಗೆಯೋ..ಹೇಳ್ತಾ, ಯಾವಾಗ ಜಡೆ ಹಾಕೋದು ನಿಲ್ಲಿಸುತ್ತಿದ್ದಳು ಎಂದೇ ತಿಳಿಯುತ್ತಿರಲಿಲ್ಲ..ನಾನು ಅವಳ ಮಾತಿನಲ್ಲಿ ಕಳೆದು ಹೋಗಿರ್ತಿದ್ದೆ....ಅವಳು ’ಇನ್ನು ಏಳಿ ಪುಟ್ಟಮ್ಮ’ ಅನ್ನುವ ತನಕ.illustrations: Srikanth
11 comments:
ನಾನು ಕೂಡ ಶ್ರೀಕಾಂತ್ ಹೇಳಿದ ರೀತೀನೇ ಹೇಳ್ತೀನಿ...ವಾವ್!
ಚೆನ್ನಾಗಿದೆ ಬರಹ. ಜಾಸ್ತಿ ಜಾಸ್ತಿ ಬರೆದರೆ ಜಾಸ್ತಿ ಜಾಸ್ತಿ ಓದ್ತೀವಿ.
~ಅಪಾರ
@ apara
ನಿಮ್ಮಅಭಿಮಾನಕ್ಕೆ ಅಪಾರ ಧನ್ಯವಾದಗಳು
:-)
ms
ಚೆನ್ನಾಗಿದೆ ರೀ ಬ್ಲಾಗ್ ಹೆಸರು....ಹಾಗೆ ನಿಮ್ಮ ಬರಹ ಸಹ....ರಾಜೀವಿಯ ತರಹ ಇನ್ನು ಅನೇಕ ನೆನಪುಗಳನ್ನು ಹಂಚುತ್ತಲಿರಿ...
ನಾನಂತೂ ಮೊದಲ ಬಾರಿ ನಿಮ್ಮ ಬರಹ ಓದುತ್ತಿರುವೆ...
ಎಷ್ಟು ಆಪ್ತವಾಗಿ ಬರೆಯುತ್ತೀರಿ...
ನಮ್ಮದೇ ಅನುಭವಗಳು ಅನ್ನುವಷ್ಟು...
ಅಪಾರ ಹೇಳಿದ ಹಾಗೆ ಇನ್ನಷ್ಟು ಬರೆಯಿರಿ...
ನಮಗೆ ಓದಲು ಖುಷಿಯಾಗುತ್ತದೆ...
@ Mahesh & ಸಿಮೆಂಟು ಮರಳಿನ ಮಧ್ಯೆ
Thanks for the kind words of appreciation.
I am not only new to the blog world, but my romance with kannada language began 7 years ago
so i am just like a toddler with faltering steps. bear with me please
:-)
malathi S
ನೀವು ಹೇಳಿರೋದೆಲ್ಲ ನಿಜವಾ ಅಂತ ಕೇಳೋ generation ಗೆ ಸೇರಿದವಳು ನಾನು.. :) ಎಣ್ಣೆ ಹಚ್ಚಿ ಜಡೆ ಹೆಣೆಸಿಕೊಳ್ಳೋದು school ಬಿಟ್ಟ ನಂತರ ತೀರಾ ಅಪರೂಪವಾಗಿದೆ!! ನಾನು ನೋಡಿರುವ ಮನೆಗಳಲ್ಲಿ ಅಟ್ಟದ ಮೇಲೆ ಹೋಗುವುದಕ್ಕೆ, ಕುಳಿತುಕೊಳ್ಳುವುದಕ್ಕೆ ಸಾಧ್ಯವೇ ಇರುವುದಿಲ್ಲ..
ಹೀಗೆ ನಿಮ್ಮ ಸಂಚಿಯಿಂದ ಇನ್ನಷ್ಟು ಹೊರತೆಗೆದು ಕೊಡಿ.. ಓದೋದಕ್ಕೆ ತುಂಬಾ ಖುಷಿಯಾಗಿತ್ತು.. :)
ನಿಮ್ಮ blog follow ಮಾಡೋದು ಹೇಗೆ???!!
Rupashree!
:-)
questioning is everyones birthright. Our attic at thirthahalli is very huge but as u mentioned no standing space. at best u can bend. but we sit on old trunks. There is junk collected from over 80 years. IMAGINE !!! it is a veritable treasure trove for me and my girls.
As regards 'koodalu' puaraNa, i will post another write up soon
this blog is still under 'trial & error'
:-)
ms
Ma'am, your writing makes a happy read.. Sweet nothings drive to foods for thought.. :)
(i) nellikayi jothe hunase huli haakidare huli jaasti aagalwa? (ii) jotege togari bele haakabahuda? -Doubts from my mom :)
Thanks da!
my namaste to your mom
While vitamin 'c'/ascorbic acid gives the flavor for nellikaayi, the huli of tamarind is composed of tartaric acid, which gives a unique flavor to food. you just have to add a tiny piece.
with togari beLe, i have not yet experimented.
:-)
malathi S
Sanchiya "Puttamma,"
I have started with your first post, though my reading is largely superficial.
You have explained about sanchi.
The word is an old Kannada word and reminds me of Sanchiya Honnamma who lived more than 330 years ago and wrote the classic Hadibadeya Dharma ( hadibade = pativrate; The Duties of a Faithful Wife).
http://www.classicalkannada.org/DataBase/KannwordHTMLS/CLASSICAL%20KANNADA%20LITERATURE%20HTML/HADIBADEYA%20DHARMA%20(SANCHIYA%20HONNAMMA)%20HTML.htm
This site describes her as Sarasasahityada Varadevate.
Let me go through all the posts to confirm that this title fits Sanchiya Puttamma also. Till then I shall restrain myself from overpraising.
-- Shree Kar
goodness Shree kar!!
u r serious , right!! let me warn u earlier kannada is text bookish!! anyways before long u will be bored....
:-)
ms
Post a Comment