August 12, 2009

ಒಂದು ಘಟನೆ

ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ನಡೆದ ಘಟನೆ. ಆ ದಿನ ತುಂಬ ಮೋಡ ಇತ್ತು. ನಮ್ಮನ್ನು ಮನೆಗೆ ಒಯ್ಯುವ ಬಸ್ಸ್ ನಿಲ್ಲುವ ತಾಣದತ್ತ ನಮ್ಮ ಕುಟುಂಬದವರ ಜತೆ ಬಿರುಸಿನ ಹೆಜ್ಜೆ ಹಾಕುತ್ತಿದ್ದೆ. ಅಷ್ಟರಲ್ಲಿ ’ಮರಾಠಿ ಮಾತನಾಡುವವರು (ಮರಾಠಿ ಭಾಷೆಯಲ್ಲಿ) ಯಾರಾದರೂ ಇದ್ದಿರ” ಅನ್ನುವ ದನಿ ಕೇಳಿಸಿತು. ಜತೆಯಲ್ಲಿ ಬೊಬ್ಬಿಡುವ ಚಿಕ್ಕ ಮಗು ಬೇರೆ. ನಾನೋ ಹುಟ್ಟಿ ಬೆಳೆದದ್ದು ಮಹಾರಾಷ್ಟ್ರದ ಮುಂಬಯಿಯಲ್ಲಿ. ವಿವಾಹಾನಂತರ ಕರ್ನಾಟಕಕ್ಕೆ ಬಂದ್ದದು. ನನ್ನ ಹುಟ್ಟಿದೂರಿನ ಭಾಷೆಯ ಅಭಿಮಾನ ಜಾಗೃತವಾಯಿತು.
ಹೇಳಮ್ಮ ನನಗೆ ಮರಾಠಿ ಬರುತ್ತದೆ ಎಂದೆ.
ಅದಕ್ಕೆ ಅವಳು ನಿನ್ನೆ ರಾತ್ರಿ ನಾವು ಮಹಾರಾಷ್ಟ್ರದಿಂದ ಬೆಂಗಳೂರಿಗೆ ಬಂದೆವು. ರಾತ್ರಿ ಯಾರೋ ನಮ್ಮ ಸಾಮಾನುಗಳನ್ನು ಕದ್ದಿದ್ದಾರೆ. ಮಗು ಬೇರೆ ಹಸಿವಿನಿಂದ ಅಳ್ತಾ ಇದೆ. ಸ್ವಲ್ಪ ಹಣ ಸಹಾಯ ಮಾಡಿದರೆ ನಮ್ಮ ಊರಿಗೆ ಹೋಗಬಹುದು ಎಂತಲೂ ಹೇಳಿದಳು. ಬಸ್ಸ್ ಪಾಸ ಹಾಗೂ ಕ್ರೆಡಿಟ್ ಕಾರ್ಡ್ ಗಳಿರುವುದರಿಂದ ನನ್ನ ಪರ್ಸ್ ನಲ್ಲಿ ಹಣ ಇರುವುದು ಕಡಿಮೆ. ಪರ್ಸ್ ತೆರೆದಾಗ ಅಲ್ಲಿದ್ದುದು ಕೇವಲ ಹತ್ತು ರೂಪಾಯಿಯ ನೋಟು. ನನ್ನ ಪತಿ ಹಾಗೂ ಮಕ್ಕಳು ಆಗಲೇ ಸಾಕಷ್ಟು ದೂರ ನಡೆದಿದ್ದರು. ಬೇರೆ ವಿಧಿ ಇಲ್ಲದೇ ಹತ್ತು ರೂಪಾಯಿಯ ನೋಟನ್ನೆ ನೀಡಿದೆ.
ಇದೆಲ್ಲಿ ಸಾಕಾಗುತ್ತದೆ ಎಂದಳು? ನನ್ನಲ್ಲಿರುವುದೇ ಅಷ್ಟೇ ಅಂತ ಪರ್ಸ್ ಅವಳಿಗೇ ತೋರಿಸಿದೆ. ಸಧ್ಯಕ್ಕೆ ಮಗು ಗೋಸ್ಕರ ಏನಾದರೂ ತೆಗೆದುಕೋ ಅಂತ ಹೇಳಿ ನಿಟ್ಟುಸಿರು ಬಿಡುತ್ತಾ ನಮ್ಮವರನ್ನು ಸೇರಿಕೊಂಡೆ.
ಸುಮಾರು ಒಂದು ತಿಂಗಳ ನಂತರ ಪುನ: ಆ ಮಹಿಳೆಯನ್ನು ನೋಡಿದೆ. ಕನ್ನಡದಲ್ಲಿ ಯಾರೊಂದಿಗೋ ಮಾತನಾಡುತ್ತಿದ್ದಳು. ಅವಳ ಜತೆ ಇನ್ನ್ನೊಂದಿಷ್ಟು ಮಂದಿ ಇದ್ದರು. ಅದೇ ಹಳೇ ರಾಗ ಮತ್ತು ಈ ಬಾರಿ ಮಗುನೂ ಬೇರೆ. ಅವರ ಹತ್ತಿರ ಹೋಗಿ ಇದೇನಿದು ಅಂತ ಪ್ರಶ್ನೆ ಕೇಳಿದೆ, ಅಷ್ಟೇ, ಅವಳು ಅಲ್ಲಿಂದ ಓಡಿ ಜಾಗ ಖಾಲಿ ಮಾಡಿದಳು. ನನ್ನ ಮನೆಯವರಿಗೆಲ್ಲ ಹೇಳಿದಾಗ ನಗು ಅಂದ್ರೆ ನಗು.
ಇದು ಹೊಸ ಪರಿ ಬಿಕ್ಷೆ ಬೇಡುವ ಪದ್ದತಿ ಎಂದು ಆಮೇಲೆ ತಿಳಿಯಿತು.

4 comments:

ಸವಿಗನಸು said...

ಬೆಂಗಳೂರಮ್ಮ ಇದು..ಈ ತರಹ ನೂರಾರು ಜನ ಇರ್ತಾರೆ ಇಲ್ಲಿ...ಹುಷಾರಗಿರಬೇಕು ಅಷ್ಟೇ....ಸದ್ಯ ಮನೆಗೆ ಕರೆದೊಯಲಿಲ್ಲವಲ್ಲ ಪುಣ್ಯ.....

Anomalyka said...

"ನನ್ನ ಮನೆಯವರಿಗೆಲ್ಲ ಹೇಳಿದಾಗ ನಗು ಅಂದ್ರೆ ನಗು"

Nice that you could all laugh so much at being conned by a beggar.

Aren't you a daughter and a wife of bankers?

Banks never give cash to the borrowers taking loan to buy things or house. Banks give the money to the vendors or sellers directly. That is because it is not just the beggars but the borrowers too utilize money begged and borrowed to a different purpose.

And did you know about BBMP stealing from the beggars?

BBMP collects beggary cess from Bangalore's citizens. The money so collected ran into crores. Instead of spending the money for the purpose for which it was levied, BBMP cleverly diverted the money to some other purpose.

nenapina sanchy inda said...

Dear Anonymous malyika!!
what a coincidence..we both read this post almost at the same time!!i was wondering who was reading this (tracker)

malathi S

Anonymous said...

Shenoy Maayi,

For someone born and brought up in Mumbai and who came to Karnataka only after marriage with no knowledge of Kannada at all,
your Kannada writing is so perfect.

I wish you would write a post narrating how you learnt the language. What impresses me is the faultless spelling, the absence of any grammar errors, the immaculate style. Was there any Kannada writer amongst your forefathers?

-- Shree Kar