ಮುಂಬೈನಲ್ಲಿ, ಗಣಪತಿ ಸ್ಥಾಪಿಸಿದ ಮೂರನೆ ದಿನ ಅಲ್ಲಿನ ಹೆಚ್ಚಿನ ಜನರು ವಿಗ್ರಹಗಳನ್ನು ವಿಸರ್ಜಿಸುತ್ತಾರೆ. ಆ ದಿನ ಎಲ್ಲ ಸ್ಕೂಲು, ಕಛೇರಿ ಅರ್ಧ ದಿನ ಕೆಲಸ ಮಾಡುತ್ತವೆ. ಮಧ್ಯಾನ್ಹ ಮೂರು ಗಂಟೆಗೆ ಒಂದೊಂದೆ ಗಣಪತಿ ಸಮುದ್ರದ ಕಡೆ ಬರುತ್ತವೆ. ನಮ್ಮ ಮನೆ ಸಮುದ್ರದ ಬಹಳ ಹತ್ತಿರ ವಿರುವ ಗೋವಿಂದ ಸಾಗರ್ ಅಪಾರ್ಟ್ ಮೆಂಟ್ ನ 5 ಮಹಡಿಯಲ್ಲಿ. ಅಲ್ಲಿಂದ ಸಮುದ್ರದ ಬಹುಪಾಲು
ವೀಕ್ಷಣೆಗೆ ಸಿಗುತ್ತಿತ್ತು. ಅಮ್ಮ ತುಂಬ ಕುರುಕಲು ತಿಂಡಿಯ ಸ್ಟಾಕ್ ready ಇಡುತ್ತಿದ್ದರು. ನನ್ನ ಗೆಳತಿಯರೆಲ್ಲ ಆ ದಿನ ನಮ್ಮ ಮನೆಯಲ್ಲೇ. ಮೂರು ಗಂಟೆಗೆ ಕಿಟಕಿಯಿಂದ ತಲೆ ಹೊರಗೆ ಹಾಕಿದರೆ, ರಾತ್ರಿ 12.00 ಗಂಟೆವರೆಗೆ ನಮಗೇ ಇದೇ ಕೆಲಸ.
ವೀಕ್ಷಣೆಗೆ ಸಿಗುತ್ತಿತ್ತು. ಅಮ್ಮ ತುಂಬ ಕುರುಕಲು ತಿಂಡಿಯ ಸ್ಟಾಕ್ ready ಇಡುತ್ತಿದ್ದರು. ನನ್ನ ಗೆಳತಿಯರೆಲ್ಲ ಆ ದಿನ ನಮ್ಮ ಮನೆಯಲ್ಲೇ. ಮೂರು ಗಂಟೆಗೆ ಕಿಟಕಿಯಿಂದ ತಲೆ ಹೊರಗೆ ಹಾಕಿದರೆ, ರಾತ್ರಿ 12.00 ಗಂಟೆವರೆಗೆ ನಮಗೇ ಇದೇ ಕೆಲಸ.
ದೊಡ್ಡ ಗಾತ್ರದ,ವಿವಿಧ ಭಂಗಿಯ, ಬಣ್ಣ ಬಣ್ಣದ ಗಣಪತಿ ವಿಗ್ರಹಗಳನ್ನು ಟ್ರಕ್ ಮೇಲೆ, ಚಿಕ್ಕ ಮೂರ್ತಿಗಳನ್ನು ಮಣೆ ಮೇಲೆ ಇಟ್ಟುಕೊಂಡು ಕೈಯಲ್ಲಿ ಹಿಡಿದುಕೊಂಡು, ಅಥವ ಬೀದಿಯವರೆಲ್ಲ ಸೇರಿ ತಮ್ಮ ತಮ್ಮ ಮನೆಯ ಗಣಪನನ್ನು ತಳ್ಳುವ ಗಾಡಿಯಲ್ಲಿ ಒಟ್ಟಾಗಿ ಇಟ್ಟುಕೊಂಡು ಸಮುದ್ರ ದ ಬಳಿಗೆ, ಕುಣಿದು, ಕುಪ್ಪಳಿಸಿ, ಬಣ್ಣ ಎರಚುತ್ತ, ಲೇಜಿಮ್ ಆಡುತ್ತ, ಕೋಲಾಟ , ಗಣಪತಿ ಭಜನೆ ಹೇಳುತ್ತ , ಗಣಪತಿ ಬಪ್ಪಾ ಮೋರಯ, ಫುಡ್ಚಾ ವರ್ಷೀ ಲೌಕರ್ ಯಾ ಘೋಷದೊಂದಿಗೆ, ಜನರು ಹೋಗುವುದನ್ನು ನೋಡುವುದು ಗಮ್ಮತ್ತು. ಥೀಮ್ ಗಣಪತಿ ನೋಡುವುದು ಕೂತುಹಲಕಾರಿಯಾಗಿರುತ್ತಿತ್ತು. ಜುರಾಸಿಕ್ ಪಾರ್ಕ್ ಸಿನಿಮಾ ಬಂದಾಗ ಗಣಪತಿ ವಿಗ್ರಹದ ಆಜು ಬಾಜು ಡಿನಾಸೌರ್ ಇಡಲಾಗಿತ್ತು, ಕರೆಂಟ್ ನಿಂದ ಓಡಿಸುವ ಈ ಡಿನಾಸೌರ್ ಗಳು ಗಳಿಗೆಗೊಂದು ಸಲ ಬಾಯಿ open & close, ಕುತ್ತಿಗೆ ಅಲ್ಲಾಡಿಸುತ್ತಿದ್ದರೆ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರಿಗೂ ರೋಮಾಂಚನ. ಅಥವಾ ಯಾವುದಾದ್ರು ಪೌರಾಣಿಕ ಕಥೆಯಾಧಾರಿತ,ಯಾ ಜೋಳ ಬೀಸುವ / ಭಾಕ್ಕರಿ ಬಡಿಯುವ ಮಹಿಳೆಯರು, ಜೋಡೆತ್ತನ್ನು ಓಡಿಸುವ ರೈತ ಮುಂತಾದ tableau ಇರುತ್ತಿತ್ತು.
5 ನೆ ಮಹಡಿಯಲ್ಲಿನ ನಮ್ಮ flat ನಿಂದ ಸಮುದ್ರ ತೀರದಲ್ಲಿ ಸೇರಿದ ಅಪಾರ ಜನಸ್ತೋಮ ಇರುವೆಗಳಂತೆ ಕಾಣುತ್ತಾರೆ.ಎಷ್ಟೋ ಮಕ್ಕಳು ಕಾಣೆಯಾಗಿದ್ದಾರೆ. ಕೆಲವರು ಜಖಂ ಗೊಂಡಿದ್ದಾರೆ. ಆದರೂ ಜನರಲ್ಲಿನ ಉತ್ಸಾಹ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ.
ಲೋಕಮಾನ್ಯ ಠಳಕ್ (balagangadhar Tilak) ಗಣೇಶ ಚತುರ್ಥಿಯನ್ನು national Festival ನ ಮನ್ನಣೆ ಕೊಟ್ಟರು. ಸಮಾಜದ ಎಲ್ಲ ಬಂಧು ಬಾಂಧವರು ಜಾತಿ-ಮತ ಲೆಕ್ಕಿಸದೆ ಇದರಲ್ಲಿ ಪಾಲ್ಗೊಳ್ಳಲು ಹುರಿದುಂಬಿಸಿದರು. ಹಾಗೇ ಈಗಲೂ ಅದು ಚಾಲ್ತಿಯಲ್ಲಿದೆ.ಗಲಿ ಗಲಿ ಗಳಲ್ಲಿ ಚೆನ್ನಾಗಿ ಅಲಂಕರಿಸಲ್ಪಡುವ ರುವ ಪಂಡಾಲ್ ಗೆ ಸ್ಪರ್ಧೆ ಏರ್ಪಡಿಸಲಾಗುತ್ತದೆ.
ಇದೆಲ್ಲ ಸುಮಾರು ವರ್ಷಗಳ ಹಿಂದಿನ ಮುಂಬಯಿನ ಗಣೇಶ ಚತುರ್ಥಿ ಆಚರಣೆ ವಿಷಯವಾಯಿತು.
ನಾನು ಮದುವೆ ಯಾಗಿ ಮಹಾನಗರಿ ಮುಂಬೈ ನಿಂದ ಪುಟ್ಟ ತೀರ್ಥಹಳ್ಳಿಗೆ ಬಂದೆ. ಇಲ್ಲಿ ನಾವು ಮನೆಯಲ್ಲೇ ಗಣೇಶನ ವಿಗ್ರಹ ಮಂಡಿಸಿ ಒಂದು ದಿನ ಪೂಜಿಸಿ, ಸಂಜೆ ತುಂಗೆಯಲ್ಲಿ ವಿಸರ್ಜಿಸುತ್ತ ಬಂದಿದ್ದೇವೆ. ನಮ್ಮದು ದೊಡ್ಡ ಕುಟುಂಬ ಆದುದರಿಂದ ಉಸಿರಾಡಲು ಪುರುಸೊತ್ತು ಸಿಗುವುದಿಲ್ಲ. ಮೋದಕ, ಪತ್ರೊಡೆ ಮತ್ತು ಸೆಪ್ಪೆ ಖೀರಿ (Recipe given below) ಇವುಗಳನ್ನು ತಯಾರಿಸುವುದು ಯಾವತ್ತೂ ನನ್ನ Department.
ಬಂದ ನೆಂಟರಿಷ್ಟರು, ಸ್ನೇಹಿತರು ಎಲ್ಲರೂ ಅಡುಗೆ ರುಚಿಯಾಗಿದೆ ಎಂದು ಉಣ್ಣುವಾಗ ಖುಶಿಯಾಗುತ್ತೆ. ಆದರೆ ಒಂದು ದಿನನೂ ಗಣಪ ನಿನ್ನ ಅಡುಗೆ ಚೆನ್ನಗಿದೆ ಅಂತ ಹೇಳಲೇ ಇಲ್ಲ ಅಂತ ಬೇಜಾರು
ತೀರ್ಥಹಳ್ಳಿಯಲ್ಲಿ ,ನಾನು ಮದುವೆಯಾಗಿ ಬಂದ ಹಾಗೆ ಇಡಿ ಊರಿಗೆ ಎರಡೆ- ಟೌನ್ ಹಾಲ್ ಹಾಗೂ ಒಂದು ಕುರುವಳ್ಳಿಯಲ್ಲಿ -ಸಾರ್ವಜನಿಕ ಗಣಪತಿ ಇಡುತ್ತಿದ್ದರು. ಸಾಯಂಕಾಲ ಒಳ್ಳೆಯ ಸಂಗೀತ ಕಾರ್ಯಕ್ರಮಗಳು, ಹರಿ
ಕಥೆ, ಶಾಸ್ತ್ರೀಯ ನೃತ್ಯಗಳು, ಇರುತ್ತಿದ್ದವು. ಒಂದು ಒಗ್ಗಟ್ಟಿತ್ತು. ಗಮ್ಮತ್ತಿತ್ತು. ನಾವು ನಮ್ಮ ಗಣಪನನ್ನು ವಿಸರ್ಜಿಸಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದೆವು. ಅಂಧ ಮಕ್ಕಳು ಮಾಡಿದ ಯಕ್ಷಗಾನ ಇನ್ನೂ ನನ್ನ ಕಣ್ಣ ಮುಂದಿದೆ.ಮೈ ಎಲ್ಲ ಝಂ ಎಂದಿತ್ತು ಆಗ. ಅಂಧ ಮಕ್ಕಳು ಅಂತ ಮೊದಲೇ announce ಮಾಡಿರದಿದ್ದರೆ ಗೊತ್ತೇ ಆಗುತ್ತಿರಲಿಲ್ಲ ಹಾಗಿತ್ತು ಅವರ ಯಕ್ಷಗಾನ ಪ್ರದರ್ಶನ. ಕಹಾಂ ಗಯೇ ಓ ದಿನ್

ಆದರೆ ಇತ್ತೀಚಿಗೆ ಗಲ್ಲಿಗೊಂದು ಗಣಪತಿ, ಮತ್ತು orchestra ದಲ್ಲಿ ಸಿನಿಮಾ ಹಾಡುಗಳದ್ದೆ ಅಬ್ಬರ. ಗಣೇಶನ ಹೆಸರಿನಲ್ಲಿ ದುಡ್ಡು ಒಟ್ಟು ಮಾಡಿ, ಸ್ವಲ್ಪವನ್ನು ಮಾತ್ರ ಹಬ್ಬಕ್ಕೆ ವಿನಿಯೋಗಿಸಿ ಉಳಿದ ದುಡ್ಡಿನಿಂದ ಕುಡಿತಕ್ಕೆ ತೊಡಗುತ್ತಾರೆ.
ಇತ್ತೀಚಿಗಿನ ನಾಲ್ಕೈದು ವರುಷಗಳಿಂದ ನಮ್ಮ ಮನೆಯಲ್ಲಿ ಮಣ್ಣಿನ ಗಣಪ. ಹಲವಾರು ವರ್ಷಗಳಿಂದ ನಮಗಾಗಿ ಗಣಪತಿ ವಿಗ್ರಹ ಮಾಡುತ್ತಿದ್ದ ಒಂದು ಕುಟುಂಬವಿತ್ತು. ಅವರಿಗೆ ಬಣ್ಣ ಹಾಕದೇ ಇರುವ ಗಣಪ ಮಾಡಿಕೊಡ್ರಿ ಅಂದ್ರೆ ಅವರು ಮಾಡಿ ಕೊಡಲೇ ಇಲ್ಲ. ಬೇರೆಯವರ ಬಳಿ ಹೋಗಲು ನಮಗೂ ಮುಜು
ಗರ. ಆದ್ರೆ ಐದು ವರ್ಷಗಳ ಹಿಂದೆ ಆ ಶಿಲ್ಪಿ ತೀರಿ ಕೊಂಡು ಅವರ ಮನೆಯಲ್ಲಿ ಈಗ ವಿಗ್ರಹ ಮಾಡುವವರು ಯಾರೂ ಇಲ್ಲ. ಇದ್ದ ಇಬ್ಬರು ಮಕ್ಕಳು ಬೆಂಗಳೂರಿನ ಥಳುಕು ಬೆಳಕಿಗೆ ಮರುಳಾಗಿ ಹೋಟೆಲ್ ನಲ್ಲಿ ಸಪ್ಲಾಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಒಂದು ಚೂರು harmful ರಾಸಾಯನಿಕ ಬಣ್ಣ ಬಳಸದೆ.....ಶುದ್ದ ಮಣ್ಣಿನಿಂದ ಮಾಡಿದ ನಮ್ಮ ಮುದ್ದು ಗಣಪ (in pic)

ಸೆಪ್ಪೆ ಖೀರಿ:
ಎರಡು ಅರಸಿನ ಎಲೆ ತೊಳೆದು ಒರೆಸಿದ್ದು.
1 ಪಾವು ಅಕ್ಕಿ , ಎರಡು ತೆಂಗಿನ ಕಾಯಿಯಿಂದ ತೆಗೆದ ಹಾಲು
ಅಕ್ಕಿಯನ್ನು 3 ಗ್ಲಾಸ್ ನೀರಿನಿಲ್ಲಿ ಮೆತ್ತಗಾಗುವರೆಗೆ ಬೇಯಿಸಿ. ಬೇಯುವಾಗ ಅರಸಿನ ಎಲೆ ಹಾಕಿ. ತೆಂಗಿನಕಾಯಿ ಹೆರೆದು ಅದಕ್ಕೆ ಸ್ವಲ್ಪ ನೀರು ಬೆರೆಸಿ ಮಿಕ್ಸಿಯಲ್ಲಿ ಹಾಕಿ. ಆಮೇಲೆ strainer ನಲ್ಲಿ ಸೋಸಿ ತೆಂಗಿನ ಹಾಲು ತೆಗೆಯಿರಿ. ಬಡಿಸುವ ಮುನ್ನ ಬೆಂದ ಅನ್ನಕ್ಕೆ ತೆಂಗಿನ ಹಾಲು ಬೆರೆಸಬೇಕು. ಸೆಪ್ಪೆ ಖೀರಿ ನಮ್ಮಲ್ಲಿ ಗೌರಿಗೆ ನೈವೈದ್ಯವನ್ನಾಗಿ ಮಾಡುತ್ತೇವೆ. ಉಣ್ಣುವಾಗ ಸ್ವಲ್ಪ ಉಪ್ಪು, ಉಪ್ಪಿನಕಾಯಿ ಹಾಕಿಕೊಳ್ಳಿ.
ಅರಸಿನ ಎಲೆಯ antiseptic property ದೇಹಕ್ಕೆ ಒಳ್ಳೆಯದು. ರುಚಿಕರವಾಗಿಯೂ ಇರುತ್ತದೆ.