Showing posts with label ಕೊಪ್ಪ. Show all posts
Showing posts with label ಕೊಪ್ಪ. Show all posts

February 28, 2012

ABC , ದೇಶಕಾಲ ...ಮತ್ತಿನ್ನೆನೋ....

Tea and book any time!!

ನಾವು ತೀರ್ಥಹಳ್ಳಿ ಕೊಪ್ಪ ದಲ್ಲಿದ್ದಾಗ ತಪ್ಪದೆ ವಾರಾಂತ್ಯದಲ್ಲಿ ಬೈಕ್ ನಲ್ಲಿ ಎಲ್ಲಾದರೂ ಹೋಗುತ್ತಿದ್ದೆವು.. ಶ್ರೀಕಾಂತ್ ಶನಿವಾರ ಬೆಳಿಗ್ಗೆ ಅವರ ಬುಲೆಟ್ ಬೈಕ್ ನ್ನು ಸರ್ವಿಸಿಂಗ್ ಗೆ ಕೊಟ್ಟು ಬರುತ್ತಿದ್ದರು. ಶನಿವಾರ ಮಧ್ಯಾಹ್ನ (ಈಗಿನ ಹಾಗೆ ಕೆಲಸದ ಒತ್ತಡ ಇರುತ್ತಿರಲಿಲ್ಲ) ಬೈಕ್ ಇರುವ ಫ್ರೆಂಡ್ಸ್ ಎಲ್ಲ ಸೇರಿ ಬೈಕಿಂಕ್, ಹೈಕಿಂಗ್/ ಚಾರಣ ಅಂತೆಲ್ಲ ಹೋಗಿ ಬಿಡ್ತಿದ್ವಿ. ಶ್ರೀಕಾಂತ ಸ್ನೇಹಿತರ ವರ್ಗದಲ್ಲಿ ಮದುವೆಯಾದ ಜೋಡಿ ಅಂದ್ರೆ ನಾನು-ಶ್ರೀಕಾಂತ. ನಾವು ಒಟ್ಟಿಗೆ 8 ಮಂದಿ ಅಂದ್ರೆ ನಾಲ್ಕು ಬೈಕ್....
ಎಲ್ಲರ ತಿಂಡಿ/ಊಟದ ಜವಾಬ್ದಾರಿ ನಂದು. ಬೆಳಿಗ್ಗೆ ಎರಡು ಗಂಟೆಗೆಲ್ಲ ಎದ್ದು ನಾನು ಅಡಿಗೆ / ತಿಂಡಿ ಮಾಡುತ್ತಿದ್ದೆ. ಈಗಿನ ಹಾಗೆ ಮಿಕ್ಸಿ ಇರಲಿಲ್ಲ. ಎಲ್ಲದಕ್ಕೂ ರುಬ್ಬೋ ಕಲ್ಲೇ ಗತಿ. ಕೆಲ ಸಮಯದ ನಂತರ ಮಿಕ್ಸಿ ತೆಗೆದುಕೊಂಡೆ ಯಾದರೂ ಕರೆಂಟ್ ಇರುತ್ತಿರಲಿಲ್ಲ. ಇಲ್ಲಿ ಬೆಂಗಳೂರಿಗೂ ಬಂದಿದೆ ನನ್ನ ಸಾಥಿ ರುಬ್ಬುವ ಕಲ್ಲು. :-) ನಾನು ಹೆಚ್ಚಾಗಿ ಕೊಟ್ಟೆ ಕಡುಬು ಮಾಡುತ್ತಿದ್ದೆ. ಅದು ಬಿಟ್ಟರೆ ಬಾಳೆ ಎಲೆ ಕಡುಬು.( ಅಪರೂಪಕ್ಕೆ ಚಪಾತಿ, ಚಿತ್ರ್ರಾನ್ನ)...ಅದಕ್ಕೆ ಗಟ್ಟಿ ಚಟ್ನಿ., ಅದರ ಜತೆ ಬ್ರೆಡ್ ಜ್ಯಾಮ್, ಬಿಸ್ಕತ್- ಬೆಣ್ಣೆ..ಉಪ್ಪಿನಕಾಯಿ, ಸಾಕಷ್ಟು ಕುಡಿಯುವ ನೀರು...ಪ್ರಥಮ ಚಿಕಿತ್ಸಾಡಬ್ಬಿ ಟಾರ್ಚ್ ಗೆ ಸೆಲ್ಲ್ (ದೊಡ್ಡ hunting torch ಇತ್ತು. ಸಕಥ್ powerful..) , ಜಮಖಾನೆ, ಹಳೆಯ ವಾರ್ತಾಪತ್ರಿಕೆಗಳು..etc etc.ಮುಂತಾದವು ಎಲ್ಲ ನನ್ನ ಡಿಪಾರ್ಟ್ಮೆಂಟ್.  ದೊಡ್ಡದೊಂದು ಆರ್ಮಿ ರಕ್ ಸ್ಯಾಕ್ ಒಂದಿತ್ತು. bachelor ಹುಡುಗರೆಲ್ಲ ಆರಾಮಾಗಿ ಕೈ ಬೀಸಿ ಬರುತ್ತಾ ಇದ್ದರು.:-) 
ನನ್ನದಿನ್ನೂ ಡಿಗ್ರಿ ಪರೀಕ್ಷೆ ಮುಗಿದಿರಲಿಲ್ಲ. ಆದುದರಿಂದ ನನ್ನ ವಾರದ ದಿನಚರಿ ಹೀಗಿರುತ್ತಿತ್ತು. ಶ್ರೀಕಾಂತ್ ಬೆಳೆಗ್ಗೆ 10.00 ಗಂಟೆಗೆಲ್ಲ ಮನೆ ಬಿಟ್ಟರೆ ಬರುತ್ತಿದ್ದಿದ್ದೆ ರಾತ್ರಿ 9.00 ರ ನಂತರ, ಬ್ಯಾಂಕಿನ field officer ಹುದ್ದೆಯಲ್ಲಿದ್ದರಿಂದ ವಾರದಲ್ಲಿ ಮೂರು ದಿನ ಹಳ್ಳಿಗಳಿಗೆ visit. ಆಗ ಬರುವುದು ರಾತ್ರಿ ಎರಡು ಗಂಟೆ ಆಗಿದ್ದೂ ಇದೆ.
ನಾನೋ ಮುಂಬೈನಿಂದ direct ತೀರ್ಥಹಳ್ಳಿಗೆ ಬಂದಿದ್ದು. ಸ್ವಲ್ಪ ಸಮಯ ಕೂಡು ಕುಟುಂಬದ ಜತೆ ಇದ್ದುದರಿಂದ ನನಗೆ ಅಷ್ಟೊಂದು ಕಷ್ಟ ಅನಿಸಿರಲಿಲ್ಲ. ಆದರೆ ಕೊಪ್ಪಕ್ಕೆ ಹೋದ ಮೇಲೆ ನಾವಿಬ್ಬರೆ. ಮನೆ ಪೇಟೆಯಿಂದ ಸುಮಾರು ದೂರ. ಬೆಳಿಗ್ಗೆ ಶ್ರೀಕಾಂತ ಹೋದ ನಂತರ ಮನೆಯ ಸಾಫ್ ಸಫಾಯಾ...ಕನ್ನಡ ಬರುತ್ತಿರಲಿಲ್ಲವಾದ್ದರಿಂದ ನಾನು ಮನೆಯಿಂದ ಹೊರಗೂ ಹೋಗುತ್ತಿರಲಿಲ್ಲ. ಮಧ್ಯಾಹ್ನ ಅಡಿಗೆ ಮಾಡುತ್ತಿರಲಿಲ್ಲ. ರಾತ್ರಿನೆ  ಅಡುಗೆ.ಕ್ಯಾಸೆಟ್ ಪ್ಲೇಯರ್ ನಲ್ಲಿ ಹಳೆಯ ಹಿಂದಿ ಹಾಡುಗಳನ್ನು ಹಾಕಿಕೊಂಡು ನನ್ನ ಮನೆ ಕೆಲಸ ಎಲ್ಲ ಪೋರೈಸಿ, ನಾನು ಓದಲು ಕುಳಿತುಕೊಳ್ಳುತ್ತಿದೆ. ಆಗಾಗ ಕರೆಂಟ್ ಹೋಗುತ್ತಿತ್ತು. ಮಳೆಗಾಲದಲ್ಲಂತೂ ಒಂದು ಸಲ 15  ದಿನ ಕರೆಂಟ್ ಇರಲಿಲ್ಲ. ಆಗಲೇ ನಾನು ಬಾವಿಯಿಂದ ನೀರು ಸೇದಲು ಕಲಿತಿದ್ದು. ಮುಂಬೈ ನಲ್ಲಿ ರಾತ್ರಿ ಅನ್ನುವುದೇ ಇರುತ್ತಿರಲಿಲ್ಲ. ಎರಡು ಗಂಟೆ ತನಕ ವಾಹನಗಳು ಓಡಾಡುತ್ತಲೇ ಇರುತ್ತಿದವು , ಆಮೇಲೆ ಬಿಲ್ಡಿಂಗ್ ಕೆಳಗಡೆ ಇರುವ ಹೋಟಲ್ ನ ಸದ್ದು ಗದ್ದಲ್...ರಸ್ತೆಯ ಬೀದಿ ದೀಪ ಗಳಿಂದ ಮನೆಯೊಳಗೆ ರಾತ್ರಿಯೂ ಬೆಳಕು ಕಂಡು  ಬೆಳೆದಿದ್ದ ನಾನು,ಕೊಪ್ಪದ ಕತ್ತಲೆಗೆ  ಹೆದರಿದ್ದೆ. ಕರೆಂಟ್ ಹೋದರಂತೂ ಮುಗಿಯಿತು. ಮೊದಲು ಕೆಲವು ದಿನ ಬಾಗಿಲ ಬಳಿ ಕೂತು ಅತ್ತಿದ್ದೆ. ಕರೆಂಟ್ ಹೋದಾಗ ಕ್ಯಾಂಡಲ್ ಹಚ್ಚಿಟ್ಟು, ಟಾರ್ಚ್ ಬಗಲಲ್ಲಿಟ್ಟು ಒಂದು ಕೋಲು ಹಿಡಿದುಕೊಂಡು ರಾತ್ರಿಯ ಗವ್ ಎನ್ನುವ silence ಗೆ ಶ್ರೀಕಾಂತ ಬುಲೆಟ್ ಬೈಕ್ ನ ಡಗ್ ಡಗ್ ಸದ್ದಿಗೆ ನನ್ನ ಕಿವಿ tuned ಆಗಿರುತ್ತಿತ್ತು, ಅಷ್ಟರವರೆಗೆ ಕ್ರೀಮಿಕೀಟಗಳು ಹೊರಡಿಸುವ ಸದ್ದು, ನನ್ನ ಹೃದಯದ ಲಬ್ ಡಬ್ ಕೇಳುತ್ತ ಕೂರುತ್ತಿದ್ದೆ..ಅದರ ಮಧ್ಯೆ ಬಳಿಯಲ್ಲೆ ಇರುವ ಕಬ್ಬಿನ ತೋಟದಿಂದ ಊಳಿಡುವ ನರಿ ನನ್ನ ಅಳುವನ್ನು ಹೆಚ್ಚಿಸುತ್ತಿದ್ದುವು...ಕ್ರಮೇಣ ನನಗೆ ನಾನೆ ಸಮಾಧಾನ ಧೈರ್ಯ ಹೇಳಿಕೊಂಡೆ...ಹೆದರಿದರೆ ಏನೂ ಉಪಯೋಗವಿಲ್ಲ. ಏನಾಗುತ್ತೆ ಮಹಾ ಅಂತ...
ವಾರಾಂತ್ಯಕ್ಕೆ ಜೀವ ಹಾತೊರೆಯುತ್ತಿತ್ತು. ಕೊಪ್ಪದಲ್ಲ್ಲಿದ್ದ ಐದು ವರ್ಷ ಪ್ರತೀ ಶನಿವಾರ ಭಾನುವಾರ ನಾವು ಬೈಕ್ ನಲ್ಲಿ ಹೋಗುತ್ತಿದ್ದೆವು. ಹೀಗೆ ಒಂದುಸಲ ನ್ಯೂಸ್ ಪೇಪರ್ ನಲ್ಲಿ ಜಿ.ಎನ್. ಅಶೋಕವರ್ಧನ್ ಬರೆದ  ’ಚಕ್ರವರ್ತಿಗಳು’ ಅನ್ನುವ ಪುಸ್ತಕದ ವಿಮರ್ಶೆ ಬಂದಿತ್ತು. ನಾನು ಫೈನಲ್ ಯಿಯರ್ ಪದವಿ ಪರೀಕ್ಷೆ  ಕೊಟ್ಟು ಮುಂಬೈನಿಂದ ಬಂದಿದ್ದಷ್ಟೆ.. ಅರೇ ನಮ್ಮ ಹಾಗೆ ಬೈಕರ್ಸ್ ಈ ಪುಸ್ತಕ ನಾವು ಕೊಳ್ಳಲೇ ಬೇಕು. ಈ ಸಲ ಮಂಗಳೂರು-ಉಡುಪಿ ಪ್ರಯಾಣ ಎಂದು ಫಿಕ್ಸ್ ಆಯಿತು. ಸರಿ ನನ್ನ ಯಥಾ ಪ್ರಕಾರ ಟ್ರಾವೆಲ್ ಪ್ಲ್ಯಾನ್ಸ್ ಶುರು. 
ಬೆಳಿಗ್ಗೆ 6.00 ಗಂಟೆಗೆ ಮನೆ ಬಿಟ್ಟೆವು. ಟ್ರಾಫಿಕ್ ಅನ್ನುವುದೇ ಇರುತ್ತಿರಲಿಲ್ಲವಾದ್ದರಿಂದ ಸ್ವಲ್ಪ ವೇಗವಾಗೆ ಹೊರಟು ಬೇಗ ಮಂಗಳೂರು ತಲುಪಿದೆವು. ಮಧ್ಯದಲ್ಲಿ ಸ್ವಲ್ಪ ಹೊತ್ತು  ಆಗುಂಬೆಯಲ್ಲಿ ಬ್ರೇಕ್ ಕೂಡ ತೆಗೆದುಕೊಂಡೆವು. ಅತ್ರಿ ಬುಕ್ ಸೆಂಟರ್  (ABC)ಬಳಿ ಹೋದಾಗ ಅದು ಇನ್ನೂ ತೆರೆದಿರಲಿಲ್ಲ. ನಾವು ಅಲ್ಲೆ ಕಾಯುತ್ತ ನಿಂತುಕೊಂಡೆವು. ಪುಸ್ತಕದ ಅಂಗಡಿ ಓಪನ್ ಆದ ಕೂಡಲೆ ನಾವು ಅಷ್ಟೂ ಜನ ಒಳಗೆ. ನನಗೆ ಬೇಕಾದ ಪುಸ್ತಕಗಳನ್ನೆಲ್ಲ ನಾನು ಮುಂಬೈ ನ Strand ಬುಕ್ಸ್ ನಿಂದ ಹೊತ್ತು ತರುತ್ತಿದ್ದೆ. ಕನ್ನಡ ನನಗೆ ಬರುತ್ತಿರಲಿಲ್ಲವಾದ್ದರಿಂದ ನಾನು ಸುಮ್ಮನೆ ಕೈ ಗೆ ಸಿಕ್ಕ ಪುಸ್ತಕ ತಿರುವಿ ಹಾಕುತ್ತ ಇದ್ದೆ. ಹಸಿವೆ, ಪ್ರಯಾಣದ ಆಯಾಸ ಅಷ್ಟು ಮಾತ್ರವಲ್ಲ i was pregnant ಕೂಡ. ಅಷ್ಟರಲ್ಲಿ ಕೋಮಾರ್ ಎಂಬ ಮಿತ್ರರು...ಬಲು joker ಅವರು ನಾನು ಸುಮ್ಮನಿದ್ದುದನ್ನು ನೋಡಿ ಏನೊ ಜೋಕ್ ಮಾಡಿದರು.  ನನಗೆ ನಗು ಬಂದು ನಾನು ಜೋರಾಗಿ ನಕ್ಕಿದ್ದೆ. ಆಗ ಪುಸ್ತಕದ  ಅಂಗಡಿಯ ಮಾಲೀಕ ಸಿಡುಕಿ ಜೋರಾಗಿ serious ಇದ್ದರೆ ಮಾತ್ರ ಇಲ್ಲಿ ಬರಬೇಕು..ಅಂತ ಬೈದರು. ನಾನೋ ಕಕ್ಕಾಬಿಕ್ಕಿ. ನನ್ನ 19 ವರ್ಷದಲ್ಲಿ ಯಾರೂ ನನಗೆ ಗದರಿದವರೇ ಇಲ್ಲ. ಆಗಲೇ ಸರಿಯಾಗಿ ಅವರ ಮುಖ ನೋಡಿದ್ದು ನಾನು. ನಮ್ಮ ರಾಯರು ಎಲ್ಲೋ ಪುಸ್ತಕಗಳ ಮಧ್ಯ ಹುದುಗಿಹೋಗಿದ್ದರು. ಅವರು ಬೈದಿದಕ್ಕೆ ನನಗೆ ಸಿಟ್ಟು ಬಂದು ನಾನು ಹೊರಗೆ ಬಂದು ನಿಂತೆ. ಈ rude ಮೀಸೆ ಮಾಮನ ಹತ್ತಿರ ಯಾರು ಪುಸ್ತಕ ತೆಗೋತಾರೆ ಅಂತ ಅನ್ನಿಸಿತ್ತು. ಅಷ್ಟರಲ್ಲೇ ಶ್ರೀಕಾಂತ ಅವರು ಬರೆದಿದ್ದ ಪುಸ್ತಕ ಜತೆ ಇನ್ನೂ ಹಲವಾರು ಪುಸ್ತಕಗಳನ್ನು ಕೊಂಡು ಅವರ ಬಳಿ ಲೋಕಾಭಿರಾಮವಾಗಿ ಮಾತನಾಡುತ್ತ, ನಮ್ಮನ್ನು ಇನ್ನೂ ಸ್ವಲ್ಪ ಹೊತ್ತು ಕಾಯಿಸಿದರು. ನಾನು ಹೊರಗಡೆ ನಿಂತು ಇನ್ನು ಈ ಅಂಗಡಿಗೆ ಕಾಲಿಡಲ್ಲ ಅಂತ promise ಮಾಡಿದೆ. ಆ ಮೇಲೆ ನಾವು ಉಡುಪಿ, ದೇವಸ್ಥಾನ,St. Marys  ಸಮುದ್ರ ಅಂತೆಲ್ಲ ಹೋಗಿ ವಾಪಸ್ ಭಾನುವಾರ ಸಂಜೆ ಮನೆಗೆ ಬಂದ್ವಿ.
ಅಷ್ಟರಲ್ಲೇ ನಮಗೆ ಬೆಳ್ತಂಗಡಿಗೆ ವರ್ಗವಾಯಿತು. ಅಲ್ಲಿಂದ ನಾವು ಪ್ರತಿ ವಾರಾಂತ್ಯ ಮಂಗಳೂರಿಗೆ ಹೋಗಿ ಬರುವುದು ಶುರುವಾಯಿತು. ನಮ್ಮ ನೆಂಟರ ಮನೆಗೆ ಹೋಗುವಾಗಲೆಲ್ಲ ಅತ್ರಿ ಬುಕ್ ಸೆಂಟರ್ ಕಾಣಿಸುತ್ತಿತ್ತು. ಅದರಲ್ಲಿ ಪುಸ್ತಕದ ಅಟ್ಟಿ ಬೆಳೆಯುವುದು ಕಾಣಿಸುತ್ತಿತ್ತು. ನಾನು ಮಾತ್ರ ಪುನ: ಆ ಶಾಪ್ ಗೆ ಕಾಲಿಡಲಿಲ್ಲ.  ಈಗ childish ಅನ್ನಿಸಿ ನಗು ಬರುತ್ತಿದೆ. ಅದು ಮುಚ್ಚುತ್ತಿದೆ ಅಂದಾಗ ಎಲ್ಲ ನೆನಪು ಬಂತು. ಅಶೋಕವರ್ಧನ್ ಅವರ ತಂದೆಯವರು GTN ಅವರು ಬರೆದ ಎರಡು ಪುಸ್ತಕ ನನ್ನ ಬಳಿ ಇವೆ. ಅದರಲ್ಲಿ NCC ದಿನಗಳು ನನಗೆ ತುಂಬ ಇಷ್ಟ. ನನ್ನ ಲೈಬ್ರರಿಯಲ್ಲಿವೆ. ಮತ್ತು ಅಷೋಕವರ್ಧನ್ ಅವರು ಬರೆದ ’ಚಕ್ರವರ್ತಿಗಳು’ ಕಪಾಟಿನಲ್ಲಿ ಎದುರಿಗೇ ಇದೆ. ಹಾಗಾಗಿ ಯಾವತ್ತು ಅವರನ್ನ ಅವರ ಮುಖವನ್ನು ಮರೆತಿಲ್ಲ. :-)
ಪ್ಲಾಸ್ಟಿಕ್ ಚೀಲ ಬಳಸದೇ ಪೇಪರ್ ನಲ್ಲಿ ಪುಸ್ತಕ ಕಟ್ಟಿ ಕೊಡುತ್ತಿದ್ದಾರೆ ಅಂತ ಕೇಳಿದಾಗ ಅವರ ಬಗ್ಗೆ ಒಂದುತರಹ ಹೆಮ್ಮೆ ಎನಿಸಿದ್ದು ನಿಜ....ಅವರ ಬಗ್ಗೆ ಅವರ ಪುಸ್ತ್ಕಕ ದ collection ಬಗ್ಗೆ ಜನರು ಒಳ್ಳೆಯ ಮಾತನಾಡಿದ್ದಾಗಲೆಲ್ಲ...ಹೂಂ ಬಹುಶ: ಆ ದಿನ ನನ್ನ ಟೈಮ್ ಸರಿಯಿರಲಿಲ್ಲ ಅಂದುಕೊಳ್ಳುತ್ತಿದ್ದೆ. ಹಾಗೂ ಆಗುತ್ತೆಯಲ್ಲವಾ ಕೆಲವೊಮ್ಮೆ?  ಅಬ್ಬಾ ಎಷ್ಟೊಂದು ವರ್ಷಗಳೆ ಕಳೆದುಹೋದವು. ಈಗ ನನ್ನ 42 ವಯಸ್ಸಿನಲ್ಲಿ ಇದನ್ನೆಲ್ಲ ನೆನಪು ಮಾಡಿಕೊಳ್ತಾ ಶ್ರೀಕಾಂತ ಜತೆ  ನಿಮ್ಮ ಜತೆ ಶೇರ್ ಮಾಡಿಕೊಳ್ಳ್ಳುತ್ತ  ಇದ್ದೇನೆ.


ಇನ್ನೂ ದೇಶಕಾಲ ಪುಸ್ತಕದ ಬಗ್ಗೆ ನನಗೆ ತಿಳಿದದ್ದೆ ಅದರ ಐದನೇ ವರ್ಷದ ಹುಟ್ಟಿದ ಹಬ್ಬ ಆಚರಿಸಿದಾಗ. ಮಿತ್ರ ಅಪಾರ (ರಘು) ನನಗೆ ಆ ಪುಸ್ತಕ ಕೊಟ್ಟಿದ್ದು. ಎಷ್ಟು ಇಷ್ಟ ಆಯಿತೆಂದರೆ ಹಳೆಯ ಕೆಲವು ಪ್ರತಿಗಳು ಸಪ್ನಾ ಹಾಗು ಅಂಕಿತದಲ್ಲಿ ಸಿಕ್ಕಿದ್ದು ಎಲ್ಲ ತೆಗೆದುಕೊಂಡು ಬಂದಿದ್ದೆ. ಉಳಿದದ್ದು  ನಾಗರಾಜ ರಾವ್ ಜವಳಿಯವರ ಬಳಿ borrow ಮಾಡಿ ಓದುವುದೆಂದು ಆಯಿತು. ಹೊಸ ಪುಸ್ತ್ಕಕ ತಂದಾಗಲೆಲ್ಲ ಮೊದಲು ನಾನು ಆ ಪುಸ್ತಕದ ಮುಖಪುಟ ನೇವರಿಸುತ್ತೇನೆ. ಆಮೇಲೆ ಹಿಂಬದಿ ಪುಟ ಓದುತ್ತೇನೆ. ಆ ಮೇಲೆ ಮೊದಲಿನಿಂದ ಕೊನೆಯ ತನಕ ಒಂದೂ ಅಕ್ಷ ರ ಬಿಡದೆ ಓದುತ್ತೇನೆ.  ವಿವೇಕ ಶಾನುಭಾಗ್ ಅವರ ಆಪ್ತ ಮುನ್ನುಡಿ ಓದಿಯೇ ನನಗೆ ಅವರು ಆತ್ಮೀಯ ರಾಗಿಬಿಟ್ಟಿದ್ದಾರೆ.ಅವರ ಪ್ರತೀ ಪುಸ್ತಕ ವಿಶೇಷವಾಗಿವೆ...ಮುಖಪುಟದಿಂದ ಹಿಡಿದು, ವಿಷಯದ ವೈವಿಧ್ಯತೆ, ಒಳಗಿನ illustrations, ಪುಟಗಳ (pages) quality...etc ಈಗ ಅವರು ಕೆಲ ಸಮಯದ ಬ್ರೇಕ್ ಅಂದಾಗ ಸಿಕ್ಕಾಪಟ್ಟೆ ಬೇಜಾರಾಗಿದೆ.:-(
ದೇಶಕಾಲ 28 ನೆ ಸಂಚಿಕೆಯಲ್ಲಿ ನನಗೆ ಇಷ್ಟವಾದ ಕತೆಗಳು in the order of my liking i have numbered them 1 to 8
1.ಮೋಹನ ಸ್ವಾಮಿ – ಷಣ್ಮುಖ ಎಸ್
2.ಫೋಟೋ ದೊಳಗೆ ಸಿಕ್ಕಿಹಾಕಿಕೊಂಡ ಮುಖ – ಮೌನೇಶ ಬಡಿಗೇರ್
3.ಒಳಾಂಗಣ – ಜಯಂತ ಕಾಯ್ಕಿಣಿ
4.ಮತ್ತೆ ಹರಿದ ದೇವರು – ಎಚ್ ಎಸ್ ನಾಗವೇಣಿ
5.ಬೆಳಗೂ ಅದೆ, ಕತ್ತಲೆಯೂ ಅದೆ – ಅಮರೇಶ ನುಗಡೋಣಿ
6.ಸಂಪೂರ್ಣ ಪಾರಿಜಾತ – ಅಬ್ದುಲ್ ರಶೀದ್
7.ವಿಚಿತ್ರಕತೆ – ವಿವೇಕ ಶಾನಭಾಗ
8.ಮುಂದುವರೆಯುವುದು – ಎಮ್. ಎಸ್. ಶ್ರೀರಾಮ್. 

ಈ ಕತೆಗಳು ಈ order ನಲ್ಲಿ ಯಾಕಿಷ್ಟ ವಾದವು ಎನ್ನುವ elaboration , ಮುಂದಿನ ಪೋಸ್ಟ್ ನಲ್ಲಿ.........
ಪ್ರತಿ ಸಲ ದೇಶಕಾಲದ ಬಗ್ಗೆ ಬ್ಲಾಗ್ ಅಥವ ಫೇಸ್ ಬುಕ್ ನಲ್ಲಿ ಹಾಕಿದ್ದಾಗಲೆಲ್ಲ ನನಗೆ ಕೆಲವು ಮೈಲ್ ಗಳು ,’ಏನು ನೀವು ದೇಶಕಾಲ advertisement ನ ಹೊಣೆ ಹೊತ್ತಿದ್ದೀರಾ’ ಅಂತ...ಇನ್ನೂ ಕೆಲವರು ಅವರು ಕೊಂಕಣಿಯವರು ಅಂತ ಅದಕ್ಕೆpartiality  ಎಂದು ಅಪಾದಿಸಿದವರು ಇದ್ದಾರೆ.
ಅವರಿಗೆ ನನ್ನ ಉತ್ತರ : ಪುಸ್ತಕ ಚೆನ್ನಾಗಿದ್ದರೆ ಅದರ advertisement ಮಾಡಲು ನನಗೆ ಎಲ್ಲ ಹಕ್ಕು ಇದೆ, ಮತ್ತು ಕೊಂಕಣಿಯವರು ಅಂದಿದಕ್ಕೆ, ಯು.ಆರ್ ಅನಂತಮೂರ್ತಿ, ಎಸ್. ಎಲ್ ಭೈರಪ್ಪ, ಶ್ರೀನಿವಾಸ ವೈದ್ಯ, ವಸುಧೇಂದ್ರ, ವೈದೇಹಿ ಅವರ ಬರಹ ಕೂಡ ಇಷ್ಟ ಆಗುತ್ತೆ ಅಂತ ಹಾಕಿದ್ದೇನಲ್ಲವಾ? ಅಂತಲೂ ಕೇಳಿದ್ದೇನೆ. -’ಅದು ನಿಜಕ್ಕೂ ನನ್ನ ತಲೆಗೆ ಹೊಳಿಲೇ ಇಲ್ಲ..:-( ಹಾಗೆ ನೋಡಿದ್ರೆ ಜಯಂತ ಕಾಯ್ಕಿಣಿ, ಯಶವಂತ ಚಿತ್ತಾಲರು ಹಾಗೂ ಇತ್ತಿಚಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಗೋಪಾಲಕೃಷ್ಣ ಪೈ ಯವರೆಲ್ಲ ಕೊಂಕಣಿಯವರು ಅಂತ ನೀವು ಹೇಳಿದ್ದ ಮೇಲೆ realise ಆಯ್ತು..ನನಗೆ ಹೆಮ್ಮೆ ಅಂತ ಉತ್ತರ ಕಳಿಸಿದ್ದೆ..:-) ನನ್ನ fav ಬರಹಗಾರರು ಎಸ್. ಎಲ್ ಭೈರಪ್ಪ ಮತ್ತು ಯಶವಂತ ಚಿತ್ತಾಲರು. ಅವರು ಬರೆದ ಎಲ್ಲ ಪುಸ್ತಕಗಳು ನನ್ನಲ್ಲಿವೆ ಮತ್ತು ಅವನ್ನು ಓದಿದ್ದೇನೆ.
ಅಂದ ಹಾಗೆ ಗೋಪಾಲಕೃಷ್ಣ ಪೈ ಮಾಮ ಮುಂಬೈನಲ್ಲಿ  ನಮ್ಮ ಬಿಲ್ಡಿಂಗ್ ನಲ್ಲೆ ಇದ್ದಿದ್ದು. ಅವರ ಬಗ್ಗೆ ನನಗೆಲ್ಲ ಗೊತ್ತು ಆದರೆ ಅವರಿಗೆ ನಾನು ಗೊತ್ತಿಲ್ಲ. ಅವರಿಗೆ ನನ್ನ ತಮ್ಮ ಕೃಷ್ಣಾನಂದ, ಪಾಂಡುರಂಗ ಮತ್ತು ತಂಗಿ ಜ್ಯೋತಿ ಖಂಡಿತ ಗೊತ್ತು..:-))) ಶ್ರೀಕಾಂತ ರಾತ್ರಿ ಬೆಳಗೂ ಕೂತು ಅವರ ಸ್ವಪ್ನ ಸಾರಸ್ವತ’ ಓದಿದಾಗ ನನಗೆ ಹೊಟ್ಟೆಕಿಚ್ಚಾಗಿತ್ತು. ಅವರು ಯಾವ ಪುಸ್ತಕ ಹೀಗೆ at a stretch ಓದಿದ್ದು ನಾನು ನೋಡೆ ಇರಲಿಲ್ಲ. ನಾನಿನ್ನು ಪುಸ್ತಕ ಓದಿಲ್ಲ. ಅದರ ಗಾತ್ರ ನೋಡಿ ನನಗೆ ಗಾಬರಿ ಮತ್ತೀಗ ಅದು ತೀರ್ಥಹಳ್ಳಿ ಯಲ್ಲಿ ನೆಂಟರಿಷ್ಟರಲ್ಲಿ rounds ಹಾಕ್ತಾ ಇದೆ. :-)
dont know why i prefer books to human beings...i feel safe with them.ತುಂಬ ಚಿಕ್ಕ ಪ್ರಾಯಕ್ಕೆ ಓದುವ habits ಬೆಳೆಸಿಕೊಂಡಿದ್ದೆ. ನನ್ನ 6 ನೆ ವರ್ಷದಿಂದಲೆ....ನನ್ನ ಅಜ್ಜ ನನಗಾಗಿ ತುಂಬ ಪುಸ್ತಕ ಖರೀದಿಸುತ್ತಿದ್ದರು. ನನ್ನ ಸುತ್ತ ಮುತ್ತಲೂ ಯಾವಾಗಲೂ ಪುಸ್ತಕ comics ಗಳು ಸುತ್ತುವರೆದಿರುತ್ತಿದ್ದವು. ಗೊಂಬೆ ಎಲ್ಲ ಇಟ್ಟುಕೊಂಡು ಆಡಿದ್ದು ನೆನಪೆ ಇಲ್ಲ. ಮಾಲವಿಕ ಹುಟ್ಟಿದ ಮೇಲೆ ಅಮ್ಮನ ಪತ್ರ ಹೀಗೆ ಇರುತ್ತಿದ್ದವು ’ನೀವು ಇಬ್ಬರೂ ಹಾಗೆ ಓದುತ್ತ ಕೂತರೆ ಮಾಲವಿಕ ಭಾಷೆ ಕಲಿಯುವುದು ಹೇಗೆ ’ ಅಂತ...ನಿಜ ಹೇಳಬೇಕೆಂದರೆ ಮಾಲವಿಕ ಮಾತು ಕಲಿತಿದ್ದು ಶ್ರೀಕಾಂತರ ಹಲವಾರು ಮಿತ್ರರಿಂದಲೆ. ದಿನ ಸಂಜೆ ಅವರು ಬಂದು ಮಾಲವಿಕ ಳನ್ನು ಮಾತನಾಡ್ಸಿ ಅವಳ ಜತೆ ಆಡುತ್ತಿದ್ದರು. ನಾನು ಅವರಿಗೋಸ್ಕರ ಅಡಿಗೆ ಮಾಡ್ತಿದ್ದೆ. :-) ಮಾಲವಿಕ ನಿಹಾರಿಕ  ಕೂಡ  ಓದುವ ಹವ್ಯಾಸ ಬೆಳಸಿಕೊಂಡಿದ್ದಾರೆ.  i do find Televisions a detriment to reading habits....ನಿಹಾ ಳ ಬರಹ ಕೂಡ ಚೆನ್ನಾಗಿದೆ. ಈಗ ಹಿಂದಿ ಕನ್ನಡದಲ್ಲಿ ಬರೆಯುವ  ಪ್ರಯತ್ನ ನಡೆಸಿದ್ದಾಳೆ. ಕಾಲೇಜಿನ ಸಹಪಾಠಿಗಳ ಜತೆ ಸೇರಿ ಒಂದು magazine ನನ್ನು revive ಮಾಡುತ್ತಿದ್ದಾಳೆ. ಶ್ರೀಕಾಂತ ಮತ್ತು ಮಾಲವಿಕ ಕೂಡ ಚೆನ್ನಾಗಿ ಬರೆಯುತ್ತಾರೆ ಆದರೆ ಅವರಿಗೆ ಪುರುಸೊತ್ತು ಇಲ್ಲ....:-)
 ನನ್ನ ಪುಸ್ತಕ ಓದುವ ಹವ್ಯಾಸ ತಿಳಿದಿರುವ ಆತ್ಮೀಯರೆಲ್ಲ e-ಬುಕ್, ಕಿಂಡಲ್ ಬಗ್ಗೆ ಎಲ್ಲ ಸಲಹೆ ಕೊಡುತ್ತಿರುತ್ತಾರೆ.ಎಲ್ಲ ಕ್ಲಾಸಿಕ್ಸ್ ನ ಪಿಡಿಎಫ್ ನನ್ನ ಸಿಸ್ಟಮ್ ನಲ್ಲಿದೆ . ಆದರೂ ಪುಸ್ತ್ಕಕ ಕೈಯಲ್ಲಿ ಹಿಡಿದು, feel ಮಾಡಿಕೊಂಡು , ಮಲಗಿ..ಒಂದು ಪ್ಲೇಟ್ ಕುರುಕುಲು ತಿಂಡಿ ಜತೆ ...ಓದುವುದೇ ಹೆಚ್ಚು ಇಷ್ಟ. ಅಥವ ನನ್ನ ಝೂಲಾದ ಮೇಲೆ ಕೂತು ಓದುವುದು, ಟೀ ಜತೆ ಓದುವುದು ಇವೆಲ್ಲ ತುಂಬಾ ಇಷ್ಟ....
ಶ್ರೀಕಾಂತ ಮೊದಲೆಲ್ಲ ಎಷ್ಟೊಂದು ಓದ್ತಿಯ..ಬರೀ ಬರೀ..ಅನ್ನುತ್ತಿದ್ದರು..ಈಗ ಅಲ್ಪ್ಸ ಸ್ವಲ್ಪ ಬರೆಯುತ್ತೇನಾದರು...ಬರಹದಲ್ಲಿ depth ಇಲ್ಲ ಅನ್ನುತ್ತಿರುತ್ತಾರೆ...its not necessary that everybody who read a  lot should also be able to write well...my blog is full of my idle jottings ಅಷ್ಟೆ writing is not my forte......:-( ಇದು ಶ್ರೀಕಾಂತ ಒಬ್ಬರ ಅಭಿಪ್ರಾಯ ಅಲ್ಲ. ಹಲವಾರು ಓದುಗರು ಇದನ್ನು ನನಗೆ ಹೇಳಿದಾರೆ. ನನ್ನ ಬ್ಲಾಗ್ ನಲ್ಲಿ ನನ್ನ ಕನ್ನಡದ practice ಮಾಡುತ್ತೇನೆಯೆ ಹೊರತು ನನ್ನ ಬರಹಗಳ ಬಗ್ಗೆ ನನಗೆ ಹೇಳಿಕೊಳ್ಳುವ ಅಭಿಮಾನವೇನು ಇಲ್ಲ. :-) ಆಗಲೇ ಇದು ನನ್ನ 150 ನೇ ಪೋಸ್ಟ್...not bad at all, all things considered!!
ಇನ್ನು ನನಗೆ ನಿಮಗೂ ಬ್ರೇಕ್..ನಮ್ಮ ಸಂಸ್ಥೆಯ 10 ನೆ ಹುಟ್ಟುಹಬ್ಬದ (ಅದು ಇದ್ದದ್ದು ನವೆಂಬರ್ 15 ರಂದು...ಯಾರಿಗೂ ಪುರುಸೊತ್ತಿರಲಿಲ್ಲ..ಈಗಲೂ ಸಡನ್ ಆಗಿ) ಸಮಾರಂಭಕ್ಕೆ ನಾವೆಲ್ಲ ರೆಡಿ ಯಾಗ್ತಿದ್ದೇವೆ .ಈ ವರ್ಷ ಕೂಡ ನಮಗೆ ನಬಾರ್ಡ್ ನಿಂದ best NGO ಪ್ರಶಸ್ತಿ ಸಿಕ್ಕಿದೆ.awards mean we have to work harder. ಕಾರ್ಯಕ್ರಮದ ನಂತರ ನನ್ನದು ಒಂದು ಚಿಕ್ಕ ಟೂರ್....yes as usual books are accompanying me.....ವ್ಯಾಸರಾಯ ಬಲ್ಲಾಳರ ಉತ್ತರಾಯಣ, The Crimson Throne by Sudhir Kakar ಮತ್ತು tales told by Mystics by Manoj Das....
ನಾನು ವಾಪಸ್ ಬರುವ ತನಕ... ತನಕ....ಬೈ ಬೈ....take care!!
:-)

October 13, 2011

ಕಲೆ...ಸ್ಪೂರ್ತಿ ಸೆಲೆ...ನಮ್ಮ ನೆಲೆ

ನಮ್ಮ ಸಂಸ್ಥೆಗಳ ನೋಂದಣಿ ಆಗಿದ್ದಷ್ಟೆ. ನಮ್ಮ ಸಂಸ್ಥೆಯ ಸೀನಿಯರ್, ದೇಶಪಾಂಡೆಯವರ  ಹಳೆ ಪರಿಚಯದವರು, ಅವರನ್ನು ಸಂಪರ್ಕಿಸಿ, ಅವರ ಮಿತ್ರರಾದ ರಶ್ಮಿ ಹೆಗ್ಡೆಯವರ ಶಂಕರಾ ಫೌಂಡೇಶನ್ (ಕನಕಪುರ ರಸ್ತೆ) ಸಂಸ್ಥೆಯನ್ನು ಇನ್ನೂ ಚೆನ್ನಾಗಿ ನಿಭಾಯಿಸಲು ಸಲಹೆ/ ಮಾರ್ಗದರ್ಶನ ಬೇಕಾಗಿ,. ’ನಿಮ್ಮಲ್ಲಿ ಯಾರದರೂ ಸಹಾಯ ಮಾಡಬಹುದ” ಅಂತ ಕೇಳಿದಾಗ ನಾವೇ ಅಲ್ಲಿಗೆ ಹೋಗಿದ್ವಿ. ಹೋದಾಗ ಅಲ್ಲಿ ಪರಿಚಯ ಆದವರು ಶ್ರೀ ಡಿ.ಟಿ. ಲೋಹಿತ್ ಅವರು. ಅತ್ಯದ್ಭುತ ಕಾಲಾವಿದರು. ಆದರೆ ನನಗೆ ತುಂಬಾ strike ಆಗಿದ್ದು ಅವರು ಬಿಡಿಸಿದ ಕುದುರೆಗಳ ಚಿತ್ರ. ಈಗ ಪಟದಿಂದ ಹೊರಗೆ ಬರುತ್ತದೇ ಎನೋ ಅನ್ನುವ ಅನುಭೂತಿ. ಅವರಿಗೆ ಹೇಳಿದ್ದೆ ನನ್ನ ಬಳಿ ಸ್ವಂತ ಮನೆ ಹಾಗೂ ಸಾಕಷ್ಟು ದುಡ್ಡು ಕೂಡಿದಾಗ ನಿಮ್ಮ ಕಲಾಕೃತಿ ತೆಗೆದುಕೊಳ್ಳುವವಳಿದ್ದೇನೆ  ಅಂತ
ನೆಟ್ ನಿಂದ ಕದ್ದಿದ್ದು...ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದೆ...no response

ಯಾವತ್ತಿನ ಹಾಗೆ ಮೇಲಿನ topic ಗೆ ಪುನ: ಬರುವ ಮುಂಚೆ ನನ್ನ ಮತ್ತು ಒಂದು ಕುದುರೆಯ ಮೈತ್ರಿಯ ಬಗ್ಗೆ ಬರೀತೀನಿ
ಮದುವೆಯಾಗಿ ಸ್ವಲ್ಪ ಸಮಯ ತೀರ್ಥಹಳ್ಳಿಯಲ್ಲಿ ಕಳೆದು, logistic problem ನಿಂದ (ನನ್ನ ಹಳೆ ಪೋಸ್ಟನಲ್ಲಿದೆ) ನಾವು ಕೊಪ್ಪದಲ್ಲಿ ಮನೆ ಮಾಡಬೇಕಾಯಿತು. ಶ್ರೀಕಾಂತ ಬ್ಯಾಂಕ್ ನಲ್ಲಿ ಗ್ರಾಮೀಣ ಅಭಿವೃದ್ಧಿ ಅಧಿಕಾರಿ ಆಗಿದ್ದರು. ಅವರು ಅಲ್ಲಿ ,ಬ್ಯಾಂಕ್ ನ ವತಿಯಿಂದ ರೈತರ ಗುಂಪೊಂದನ್ನು ಮಾಡಿಕೊಂಡಿದ್ದರು. ವಾರ್ಯಾಂತದಲ್ಲಿ ಅವರೆಲ್ಲ ಸೇರಿ ಬೇಸಾಯದಲ್ಲಿನ ಹೊಸ ಪದ್ದತಿ/ಕಷ್ಟ-ಕೋಟಲೇ/ಹಣಕಾಸಿನ ನೆರವು , ಬೇರೆ ಊರಿನಿಂದ, ಪರ್ಯಾಯ ಪದ್ದತಿ ಅಥವ ಬೇಸಾಯದಲ್ಲಿ ಹೊಸದೇನೋ ಸಾಧಿಸಿದವರನ್ನು ಕರೆದು Talks ಮುಂತಾದವುಗಳನ್ನು ಹಮ್ಮಿಕೊಳ್ಳುತ್ತಿದ್ದರು. ಹೀಗೆ ಪರಿಚಯವಾದವರು ಭುಜಂಗರಾಯರು. ಕೊಪ್ಪದಲ್ಲಿ ಗುರ್ಜರ್ ಎಂಬುವರ ಎಸ್ಟೇಟ್ ಇತ್ತು. ಆ ಕುದುರೆ ಅವರದ್ದು. ಭುಜಂಗರಾಯರಿಗೂ, ಗುರ್ಜರ್ ಅವರಿಗು ಏನು ಸಂಬಂಧ ಅಂತ ನನಗೆ ಗೊತ್ತಿಲ್ಲ. ಯಾಕಂದರೆ ನಾನು ಅವರ ಜತೆ ಒಂದು ದಿನ ಕೂಡ ಮಾತಾಡಿಲ್ಲ. ಅವರು ಏನಾದರೂ discuss ಮಾಡಬೇಕಾದರೆ ನಮ್ಮ ಮನೆಗೆ ಬರುತ್ತಿದ್ದರು.ಒಳ್ಳೆ ತೀಡಿದ ದೊಡ್ಡ ದೊಡ್ಡ ಪೊದೆ ಮೀಸೆ ಇತ್ತು ಅವರಿಗೆ. ಕುದುರೆ ಮೇಲೆ ಬರುವುದು ಅವರ ಸವಾರಿ ನಮ್ಮಲ್ಲಿಗೆ. ನಮ್ಮ ಮನೆಯ ಗೇಟಿಗೆ ಕುದುರೆಯನ್ನು ಕಟ್ಟುತ್ತಿದ್ದರು. ನಾನು ನನ್ನ ಕೆಲಸಗಳನ್ನೆಲ್ಲ ಬಿಟ್ಟು ಅದನ್ನು ಮುದ್ದಿಸಲು ಹೋಗುತ್ತಿದ್ದೆ. ಯಾವಾಗಲೋ ಚಿಕ್ಕಂದಿನಂದು ಓದಿದ್ದ black beauty ಕತೆಯಲ್ಲಿ  ಕುದುರೆಗಳಿಗೆ ಬೆಲ್ಲ ಇಷ್ಟ ಅಂತ ಓದಿದ ನೆನಪಿನಿಂದ, ನಾನು ಅವರಿಬ್ಬರ ಕಣ್ಣು ತಪ್ಪಿಸಿ, ನನ್ನ ಭಯ್ಯ ನನಗೆ ಪ್ರತೀ ತಿಂಗಳು ಕೊಡುತ್ತಿದ್ದ ಉಂಡೆ ಬೆಲ್ಲ ಅದಕ್ಕೆ ತಿನ್ನಿಸುತ್ತಿದ್ದೆ. ಆ ಮೇಲೆ ಅವರಿಗೆ ಶ್ರೀಕಾಂತ ಹತ್ತಿರ ಏನೂ ಕೆಲಸವಿಲ್ಲದಿದ್ದರೂ ಅವರು ನಮ್ಮ ಮನೆ ಕಡೆಯಿಂದ ಹಾದು ಹೋಗುವಾಗಲೆಲ್ಲ ಆ ಕುದುರೆ ನಮ್ಮ ಮನೆ ಯಿಂದ ಮುಂದೆ ಹೋಗಕ್ಕೆ ಕೇಳದೆ ರಸ್ತೆಯಲ್ಲಿ ಮುಶ್ಕರ ಹೂಡುತ್ತಿತ್ತು. ಅವರಿಗೆ ಆಶ್ಚರ್ಯ. ಆಮೇಲೆ ಅವರಿಗೆ ಗೊತ್ತಾಯಿತು ನನ್ನ ಕಿತಾಪತಿ. ಈ ಪ್ರಕರಣ ಸುಮಾರು ಮೂರು ತಿಂಗಳು ನಡೆಯಿತು. ಅಷ್ಟರಲ್ಲಿ ನನಗೆ ಮೊದಲನೆ ವರ್ಷದ ಬಿ.ಎ. ಪರೀಕ್ಷೆಗೆ ಮುಂಬಯಿಗೆ ಹೋಗ ಬೇಕಾಯಿತು. ನನ್ನ ಪರೀಕ್ಷೆ ಮುಗಿಯುವಷ್ಟರಲ್ಲಿ ಶ್ರೀಕಾಂತ ಗೆ ಬೆಲ್ತಂಗಡಿ ಗೆ ವರ್ಗ ವಾಗಿತ್ತು. ನಾನು ಪರೀಕ್ಷೆ ಮುಗಿಸಿ ಬಂದ ಮೇಲೆ ಬ್ಯಾಂಕನವರಿಗೆ, ಆಪ್ತ ಮಿತ್ರರಿಗೆ ಬೀಳ್ಗೊಡಿಕೆ party , ಸಾಮನು ಪ್ಯಾಕಿಂಗ್ ಮುಂತಾದ ಕೆಲಸದಲ್ಲಿ ನನಗೆ ಕುದುರೆಯ ನೆನಪು ಮರೆತೇ ಹೋಗಿತ್ತು. ನಾವು ಕೊಪ್ಪ ಬಿಟ್ಟು ಬೆಲ್ತಂಗಡಿಗೆ ಬಂದ ಮೇಲೆ ಒಂದು ಸಲ ತಿರುಗಿ ಕೊಪ್ಪಕ್ಕೆ ಒಂದು ಕಾರ್ಯಕ್ರಮಕ್ಕೆ ಹೋದಾಗ ಭುಜಂಗರಾಯರು ಸಿಕ್ಕಿದ್ದರು. ಕುಂಟುತ್ತಿದ್ದರು. ಕುದುರೆ ಬಗ್ಗೆ ಕೇಳಿದಾಗ ಅದಕ್ಕೆ ಹುಚ್ಚು ಹಿಡಿದು, ಅವರನ್ನು ಕೆಳಗೆ ಬೀಳಿಸಿದ ರಭಸಕ್ಕೆ ಅವರ ಕಾಲು ಮೂಳೆ ಮುರಿದದ್ದು, ಕುದುರೆಯನ್ನು ಸಾಯಿಸಿದ್ದು ಎಲ್ಲ ಹೇಳಿದರು. ಬೇಜಾರಾಯಿತು.
ನಾವು ಕನಕಪುರ ರಸ್ತೆಗೆ ತೆರಳಿ ರಶ್ಮಿ ಹೆಗ್ಡೆ ಜತೆ ಮಾತು ಕತೆ ಎಲ್ಲ ಮುಗಿದು ಕೆಲ ಸಮಯದ ನಂತರ ನಮ್ಮ ಸಂಪರ್ಕ ತಪ್ಪಿತು. ನಮ್ಮ ಸಂಸ್ಥೆ ಹೆಚ್ಚಾಗಿ ಹಳ್ಳಿ ಗಳಲ್ಲಿ ಕೆಲಸ ಮಾಡುವುದು. ಹಳ್ಳಿಯ ಜನತೆಗೆ ಒದಗಿಸುವ ಪಠ್ಯಪುಸ್ತಕ (training manual) ಇತ್ಯಾದಿಯಲ್ಲಿ ನಾವು , ಅವರಿಗೆ ಸುಲಭವಾಗಿ ಅರ್ಥವಾಗುವಂತೆ, ಅವರಿಗೆ ತಿಳಿಸಬೇಕಾದುದನ್ನು ರೇಖಾಚಿತ್ರ (illustration) ಮೂಲಕ ತಿಳಿ ಹೇಳುತ್ತೇವೆ. ಪಠ್ಯಪುಸ್ತ್ಕಕಗಳಲ್ಲಿ ನಾವು ಆಗಾಗ ಅಗತ್ಯಗನುಗುಣವಾಗಿ ಬದಲಾವಣೆಗಳನ್ನೂ ಮಾಡುತ್ತಿರುತ್ತೇವೆ. ಹಾಗೂ ಹೊಸ ಹೊಸ ರೇಖಾಚಿತ್ರಕಾರರಿಗೆ ಹುಡುಕಾಟ ನಡೆಸುತ್ತಿರುತ್ತೇವೆ. ಪಾಂಡುರಂಗ ರಾಯರು,




a tiny demonstration of one of the artist at the interview,  illustration for a new book 
 ಭೂಪತಿ ಮುಂತಾದವರೆಲ್ಲ ಒಂದು ಕಾಲಕ್ಕೆ ನಮಗೆ ಸಹಾಯ ಮಾಡಿದ್ದಾರೆ. ಒಂದು ಸಲ ಇಂತಹ ಒಂದು ಪುಸ್ತಕದ ಬಗ್ಗೆ ಮಾತನಾಡಲು ಶ್ರೀ ಡಿ.ಟಿ. ಲೋಹಿತ್ ರು ನಮ್ಮ ಕಛೇರಿಗೆ ಬಂದಿದ್ದರು. ಮಾತುಕತೆ, ನಮ್ಮ ಅವಶ್ಯಕತೆಗಳನ್ನು ಅವರಿಗೆ ತಿಳಿಹೇಳಿಸುವಷ್ಟರಲ್ಲಿ ಮಧ್ಯಾಹ್ನ ಊಟದ ಹೊತ್ತು. ಶ್ರೀಕಾಂತ ಅವರಿಗೆ, ’ಬನ್ನಿ ಸರ್, ನಮ್ಮ ಮನೆಯಲ್ಲಿ ಊಟ ಮಾಡುವ ’ಅಂದಾಗ ಅವರು ತಕ್ಷಣ ಒಪ್ಪಿದರು. ಅಲ್ಲೆ ಇದ್ದು ಕೇಳಿಸಿಕೊಂಡ ನಾನು, ’ಶ್ರೀಕಾಂತ, ನಾನು ಬಸ್ ನಲ್ಲಿ ಮುಂದೆ ಹೋಗಿರ್ತೀನಿ. ನೀವು ಅವರನ್ನು ಸ್ವ್ಲಲ್ಪ ಹೊತ್ತು ಬಿಟ್ಟು ಕರೆದುಕೊಂಡು ಬನ್ನಿ’ ಅಂದೆ. ನಾನು ಬೆಳಿಗ್ಗೆ ಆಫಿಸ್ ಗೆ ಬರುವ ಮುನ್ನ ಅನ್ನ, ಸಾರು, ಬೀನ್ಸ್ ಪಲ್ಯ ಮಾಡಿದ್ದೆ. ಆಫಿಸ್ ಗೆ ನಾನು ಚಪಾತಿ ಬೀನ್ಸ್ ಪಲ್ಯ ತಂದಿದ್ದೆ. ನನ್ನ ಡಬ್ಬಿ ಆಫಿಸ್ ನವರಿಗೆ ಶೇರ್ ಮಾಡಲಿಕ್ಕೆ ಹೇಳಿ, ನಾನು ಬೇಗ ಬೇಗ ಮನೆಗೆ ಬಂದು ದೊಡ್ಡಮೆಣಸಿನಕಾಯಿ ಬೋಂಡ, ಹಪ್ಪಳ-ಸಂಡಿಗೆ ಕರೆದಿಟ್ಟೆ, ಮತ್ತು ಮಸಾಲೆ ಮಜ್ಜಿಗೆ ಮಾಡಿದೆ. ಆ ಮೇಲೆ ನಾವು ಮಾತಾಡುತ್ತ  ಆರಾಮಾಗಿ ಊಟ ಮಾಡಿದ್ವಿ.  ಅವರು ವೃತ್ತಿಯಿಂದ ಇಂಜಿನಿಯರ್. ಆದರೆ ಕಲೆಯ ಬಗ್ಗೆ ಒಲವು ಹೆಚ್ಚಾಗಿ ಕೈ ತುಂಬ ಸಂಬಳ ಬರುವ ಇಂಜಿನಿಯರಿಂಗ ನೌಕರಿ ತ್ಯಜಿಸಿ, ಅವರ ಪತ್ನಿಯ ಸಲಹೆಯ ಮೇರೆಗೆ-(ಅವರು ಬ್ಯಾಂಕನಲ್ಲಿದ್ದರು) ಕಲೆಯನ್ನೇ ಮುಂದುವರೆಸಿದರು. ಹಳ್ಳಿಯ ಚಿತ್ರಣಗಳನ್ನು ತುಂಬ ಚೆನ್ನಾಗಿ ಚಿತ್ರಿಸುತ್ತಾರೆ ಅವರು. ಮಾತ್ರವಲ್ಲ ಶಂಕರ ಫೌಂಡೇಶನ್ ಸಹಯೋಗದಲ್ಲಿ ಹಳ್ಳಿಯ ಮಕ್ಕಳಿಗೆ ಉಚಿತವಾಗಿ ಚಿತ್ರಕಲೆಯನ್ನೂ ಹೇಳಿಕೊಡುತ್ತಿದ್ದರು. ಅಂಚೆ ಮೂಲಕ ಕಲಾ ಶಿಕ್ಷಣದ ಸೌಲಬ್ಯವೂ ಇನ್ನೋರ್ವ ಮಿತ್ರರೊಡಗೂಡಿ ಒದಗಿಸುತ್ತಿದ್ದರು. ಮಾಲವಿಕ ಅದನ್ನು ಉಪಯೋಗಿಸಿಕೊಂಡಿದ್ದಾಳೆ. ಮತ್ತು ಖ್ಯಾತ ಭರತನಾಟ್ಯ ಕಲಾವಿದೆ ರಶ್ಮಿ ಹೆಗಡೆಯವರು ಅಕ್ಕ ಪಕ್ಕದ ಹಳ್ಳಿ ಹೆಣ್ಣುಮಕ್ಕಳಿಗೆ ಪ್ರತೀ ವರ್ಷ  ಉಚಿತವಾಗಿ ನೃತ್ಯ ತರಬೇತಿ ನೀಡಿ, ವರ್ಷಕ್ಕೆರಡು ಸಲ ಶಂಕರಾ ಫೌಂಡೇಶನ್ ನಲ್ಲಿ ಆ ಮಕ್ಕಳಿಂದ ಕಾರ್ಯಕ್ರಮ ನಡೆಸುತ್ತಾರೆ. ಎಲ್ಲರೂ ಅಲ್ಲಿ ಒಂದು ಸಲ ಭೇಟಿ ನೀಡಲೇ ಬೇಕು.
ಶ್ರೀ ಲೋಹಿತ್ ಅವರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕನ್ನು ಕ್ಲಿಕ್ಕಿಸಿ
http://www.khanstudiointernational.com/lohithbio.htm
ಸರಿ, ಅವರಿಗೆ ಮಾತು ಕತೆಯಾಡಲು ಬಿಟ್ಟು ನಾನು ಮುಂದೆ ಆಫಿಸ್ ಕಡೆ ಹೋದೆ. ಅವರು ನಮ್ಮ ಮನೆಯಿಂದಲೆ ವಾಪಸ್ ಹೊರಟು ಹೋದರು. ಶ್ರೀಕಾಂತ ಬಳಿ ಅವರು ಊಟ enjoy ಮಾಡಿದ್ದರ ಬಗ್ಗೆ ಹಾಗೂ ಥ್ಯಾಂಕ್ಸ್ ಕೂಡ ಹೇಳಿ ಕಳಿಹಿಸಿದ್ದರು.
ಕೆಲ ಸಮಯದ ನಂತರ ಶ್ರೀಕಾಂತ ಅವರ ಮನೆಗೆ ಹೋದಾಗ ಅವರ ಪತ್ನಿ ಗೀತಾ ಅವರು ಅವರ ಅಜ್ಜಿ ಬರೆದ ಅಡುಗೆ ಪುಸ್ತಕವನ್ನು -limited edition- ನನಗೋಸ್ಕರ ಕಳುಹಿಸಿಕೊಟ್ಟರು. ನನಗಂತು ಯಾರಾದರು ಪುಸ್ತಕ ಕೊಟ್ಟರೆ ತುಂಬ ಖುಶಿ. ಮಕ್ಕಳು ಮಾತ್ರ ನನಗೆ ಗೇಲಿ ಮಾಡಿದರು, ’ಬಹುಶಃ ನಿನ್ನ ಅಡಿಗೆ ಅಷ್ಟು ಚೆನ್ನಾಗಿರಲಿಲ್ಲವೇನೋ, ಅದಕ್ಕೆ ನೀನು ಅಡಿಗೆ ಕಲಿಯಲಿ ಅಂತ ಆ ಪುಸ್ತಕ ಕಳಿಸಿದ್ದಾರೆ’ ತುಂಬ ಹಳೆಯ ಪುಸ್ತಕ...scan ಮಾಡಿ ಹಾಕುತ್ತಿದ್ದೇನೆ, ಹಾಗೂ bachelor ಓದುಗರಿಗೆ ಬಾಯಲ್ಲಿ ನೀರು ಬರೆಸಲು ಒಂದು recipe ಸಹ ಸ್ಕ್ಯಾನ್ ಮಾಡಿ ಹಾಕಿದ್ದೇನೆ. ಡಿ.ಟಿ. ಲೋಹಿತ್ ಅಂತ ಗೂಗಲ್ search ಮಾಡಿದರೆ, ಅವರ ಕಲಾಕೃತಿ, ಅವರಿಗೆ ಸಂಧ ಗೌರವ ಎಲ್ಲ ನಿಮಗೆ ಕಾಣ ಸಿಗುತ್ತದೆ.
ಈ ಸಂಗತಿ ನಡೆದ ಕೆಲ ಸಮಯದ ನಂತರ ಅವರು , ಅವರ ಅರವತ್ತನೆ ವರ್ಷ ವಯಸ್ಸಿನಲ್ಲಿ, ಅವಕಾಶವನ್ನು ಹುಡುಕಿಕೊಂಡು, ಅಮೇರಿಕಕ್ಕೆ ತೆರಳಿದರು. ಈಗ ಅವರು ಅಲ್ಲಿ ತುಂಬ Demand ನಲ್ಲಿರುವ ಕಲಾವಿದರು. ಅವರ ಧೈರ್ಯವನ್ನು ಖಂಡಿತ ಮೆಚ್ಚತಕ್ಕದ್ದು.
ಇಲ್ಲಿದೆ ಪುಸ್ತಕದ ಮುಖಪುಟ




:-) ಪದೇ ಪದೇ ನಾನು ಅಡುಗೆ ವಿಷಯಕ್ಕೆ ಯಾಕೆ ಬರುತ್ತೀನಿ ಅಂತ ನಿಮಗೆ ಹೇಳ್ತೇನೆ. ತೀರ್ಥಹಳ್ಳಿಯಲ್ಲಿ ನಮಗೆ ಜಮೀನಿದೆ. ಮಾಲವಿಕ ಕಲಿತಿದ್ದು bachelors degree in Hospitality Industry (Hotel Management)..ಅಂದರೆ ಹೋಟಲ್ ಉದ್ಯಮ ನಡೆಸುವ ಅರ್ಹತೆ  ಇದೆ ಅವಳಿಗೆ. ನಮ್ಮ ತೋಟದಲ್ಲಿ ಹೊಸತೇನಾದರೂ ಮಾಡಬೇಕೆಂದು ನಮ್ಮೆಲ್ಲರ ಅಭಿಲಾಷೆ. ದುಬೈ ನಲ್ಲಿರುವ ತಮ್ಮ ಇನ್ನು ಆರು ತಿಂಗಳಲ್ಲಿ ಪುನ: ಭಾರತಕ್ಕೆ ಬರುತ್ತಿದ್ದಾನೆ. ಅವನಿಗೆ ಹೋಟಲ್ ಉದ್ಯಮ ನಡೆಸುವ ಉಮ್ಮೇದು ಬಂದಿದೆ, ಹಾಗೆ ನನ್ನ ಬ್ರದರ್ -ಇನ್-ಲಾ ಕೂಡ ಇದರಲ್ಲಿ ತುಂಬ ಆಸಕ್ತಿ ತೋರಿಸುತ್ತಿದ್ದಾರೆ. ತೀರ್ಥಹಳ್ಳಿ ಸುಂದರವಾದ ಪ್ರದೇಶ ಮಾತ್ರವಲ್ಲದೆ ಹತ್ತಿರದಲ್ಲಿ  ಟೂರಿಸ್ಟ್ interest ತಾಣಗಳು ಸಾಕಷ್ಟಿವೆ. ಕಳೆದ ಐದು ವರ್ಷದಿಂದ ನಾವು ತೀರ್ಥಹಳ್ಳಿಗೆ ಹೋದಾಗಲೆಲ್ಲ ಅಲ್ಲಿ ಅಕ್ಕ ಪಕ್ಕ ಇರುವ ದೇವಸ್ಥಾನ, ಕೋಟೆ, ಗುಡ್ಡ ಗಳನ್ನು ನೋಡಿಕೊಂಡು ಬರುತ್ತ ಇದ್ದೇವೆ. ನಾವು ecotel/eco tourism ಪ್ರಾರಂಭ ಮಾಡುವ ಹುನ್ನಾರದಲ್ಲಿದ್ದೇವೆ. ಮಾಲವಿಕ ಬೇರೆ ಕಡೆ ಕೆಲಸಕ್ಕೆ ಹೋಗುವ ಇಷ್ಟ ನಮಗಿಲ್ಲ. ಸಧ್ಯಕ್ಕೆ to understand the trick of the trade' ಅವಳು ಕೆಲಸಕ್ಕೆ ಸೇರಿದ್ದಾಳೆ. ನಮ್ಮದು ಡಿಫರೆಂಟ್ ಆಗಿರುತ್ತೆ. ನಿಧಾನವಾಗಿ ಯೋಜನೆಗಳನ್ನೆಲ್ಲ ಹಮ್ಮಿಕೊಳುತ್ತಾ ಇದ್ದೇವೆ. ಎಲ್ಲರೂ ತುಂಬ excite ಆಗಿದ್ದೇವೆ. ಎಷ್ಟೆಲ್ಲ ತಯಾರಿ ನಡೆಸಬೇಕು...ಹಣಕಾಸು ವ್ಯವಸ್ಥೆ. project proposal, ಚಂದದ ಹೆಸರು, unique selling propostition (USP),brochure, interior decoration... ಸೃಜನಾತ್ಮಕ ಕೆಲಸಗಳು ಶ್ರೀಕಾಂತ, -ಮಾಲವಿಕ ಮತ್ತು ನೀಹಾ ಪಾಲು, ತಲೆ ನನ್ನ ತಮ್ಮ ಹಾಗೂ ಶ್ರೀಕಾಂತ, ಹಣಕಾಸು ಸ್ವಲ್ಪ ಮಟ್ಟಿಗೆ ನನ್ನ brother-in-law. ಮತ್ತೆ ನಂದು..ಕೇವಲ moral support. ನನ್ನ ಅಮ್ಮ ಕೂಡ ಇದರಲ್ಲಿ involve ಆಗುತ್ತಿದ್ದಾರೆ. skype ನಲ್ಲಿ ನಾವೆಲ್ಲರೂ ಸೇರಿ ಮಾತಾಡುವಾಗ ಇದೆ ನಮ್ಮ ಡಿಸ್ಕಷನ್..

ನಗರದ ಕೋಟೆಯ ಚಿತ್ರಗಳ ನಂತರ ಒಂದು ಸಣ್ಣ ಜೋಕ್


ಸೆಲ್ ಫೋನ್ ನಲ್ಲಿ ತೆಗೆದದ್ದು. ಪುರಾತತ್ವ ಇಲಾಖೆ ಈಗ ಕೋಟೆಯನ್ನು ಇನ್ನಷ್ಟು ಚೆಂದವಾಗಿಸಿದೆ
ತೀರ್ಥಹಳ್ಳಿ ಬಳಿಯ ನಗರದಲ್ಲಿರುವ ಕೋಟೆಗೆ (Nagara Fort) ಹೋಗಿದ್ವಿ . ವಾಪಸ್ ಬರ್ತಾ ಅಲ್ಲಿ ಚಿಕ್ಕದೊಂದು ಹೋಟಲ್ ಗೆ ಹೋದ್ವಿ. ಟೀ -ಬೋಂಡಾ order ಮಾಡಿದ್ವಿ. ಅವರು ಕೊಂಕಣಿಯವರು ಹಾಗಾಗಿ ನಮ್ಮ ಲೋಕಾಭಿರಾಮ ಮಾತು ಶುರು ಆಯ್ತು. ಅವರ ಹೆಂಡ್ತಿ ಮಾಲವಿಕಳಿಗೆ ಏನು ಓದ್ತಾ ಇದ್ದೀಯಾ ಅಮ್ಮ ಅಂತ ಕೇಳಿದ್ರು, ಅದಕ್ಕೆ ಮಾಲವಿಕ- Hotel Management ಮಾಡ್ತಾ ಇದ್ದೀನಿ ಆಂಟಿ’ ಅಂದ್ಲು. ಅದಕ್ಕೆ ಅವರಿಬ್ಬರೂ ನಾವು ಹೋಟಲ್ ಮ್ಯಾನೆಜ್ ಮಾಡ್ತಾ ಇದ್ದೇವಲ್ಲವಾ?? ಅದರಲ್ಲಿ ಕಲೀಲಿಕ್ಕೆ ಏನಿದೆ ಅಂದಾಗ ನಮಗೆಲ್ಲ ನಗು....
ಶ್ರೀಕಾಂತ ದೇಶ-ವಿದೇಶಗಳ ಟೂರ್ ಹೋದಾಗಲೆಲ್ಲ ಬೇರೆ ಬೇರೆ ಹೋಟಲ್ ಗಳಿಗೆ ಗೆ ಹೋಗಿ ಅಲ್ಲಿ ಏನು special ಇದೆ ಅಂತ ನೋಡಿ, ಕೇಳಿ ಅವರ kitchen ಗೆ ಎಲ್ಲ ಭೇಟಿ ನೀಡಿ , ಹೊಸ ಹೊಸ ಐಡಿಯ ಗಳನ್ನೆಲ ಕಲೆತು ಹಾಕುತ್ತಿದ್ದಾರೆ....

Its always exciting to have something to look forward to  ಅಲ್ವಾ?? ನಿಮ್ಮೆಲ್ಲರ ಶುಭ ಹಾರೈಕೆ ಖಂಡಿತ ಬೇಕು
ಎಲ್ಲಿಂದಲೋ ಶುರು ಮಾಡಿ ಎಲ್ಲಿಗೋ ಬಂತು ವಿಷಯ ಯಾವತ್ತಿನ ಹಾಗೆ........

:-)