ನಮ್ಮ ಸಂಸ್ಥೆಗಳ ನೋಂದಣಿ ಆಗಿದ್ದಷ್ಟೆ. ನಮ್ಮ ಸಂಸ್ಥೆಯ ಸೀನಿಯರ್, ದೇಶಪಾಂಡೆಯವರ ಹಳೆ ಪರಿಚಯದವರು, ಅವರನ್ನು ಸಂಪರ್ಕಿಸಿ, ಅವರ ಮಿತ್ರರಾದ ರಶ್ಮಿ ಹೆಗ್ಡೆಯವರ ಶಂಕರಾ ಫೌಂಡೇಶನ್ (ಕನಕಪುರ ರಸ್ತೆ) ಸಂಸ್ಥೆಯನ್ನು ಇನ್ನೂ ಚೆನ್ನಾಗಿ ನಿಭಾಯಿಸಲು ಸಲಹೆ/ ಮಾರ್ಗದರ್ಶನ ಬೇಕಾಗಿ,. ’ನಿಮ್ಮಲ್ಲಿ ಯಾರದರೂ ಸಹಾಯ ಮಾಡಬಹುದ” ಅಂತ ಕೇಳಿದಾಗ ನಾವೇ ಅಲ್ಲಿಗೆ ಹೋಗಿದ್ವಿ. ಹೋದಾಗ ಅಲ್ಲಿ ಪರಿಚಯ ಆದವರು ಶ್ರೀ ಡಿ.ಟಿ. ಲೋಹಿತ್ ಅವರು. ಅತ್ಯದ್ಭುತ ಕಾಲಾವಿದರು. ಆದರೆ ನನಗೆ ತುಂಬಾ strike ಆಗಿದ್ದು ಅವರು ಬಿಡಿಸಿದ ಕುದುರೆಗಳ ಚಿತ್ರ. ಈಗ ಪಟದಿಂದ ಹೊರಗೆ ಬರುತ್ತದೇ ಎನೋ ಅನ್ನುವ ಅನುಭೂತಿ. ಅವರಿಗೆ ಹೇಳಿದ್ದೆ ನನ್ನ ಬಳಿ ಸ್ವಂತ ಮನೆ ಹಾಗೂ ಸಾಕಷ್ಟು ದುಡ್ಡು ಕೂಡಿದಾಗ ನಿಮ್ಮ ಕಲಾಕೃತಿ ತೆಗೆದುಕೊಳ್ಳುವವಳಿದ್ದೇನೆ ಅಂತ
ನೆಟ್ ನಿಂದ ಕದ್ದಿದ್ದು...ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದೆ...no response
ಯಾವತ್ತಿನ ಹಾಗೆ ಮೇಲಿನ topic ಗೆ ಪುನ: ಬರುವ ಮುಂಚೆ ನನ್ನ ಮತ್ತು ಒಂದು ಕುದುರೆಯ ಮೈತ್ರಿಯ ಬಗ್ಗೆ ಬರೀತೀನಿ
ಮದುವೆಯಾಗಿ ಸ್ವಲ್ಪ ಸಮಯ ತೀರ್ಥಹಳ್ಳಿಯಲ್ಲಿ ಕಳೆದು, logistic problem ನಿಂದ (ನನ್ನ ಹಳೆ ಪೋಸ್ಟನಲ್ಲಿದೆ) ನಾವು ಕೊಪ್ಪದಲ್ಲಿ ಮನೆ ಮಾಡಬೇಕಾಯಿತು. ಶ್ರೀಕಾಂತ ಬ್ಯಾಂಕ್ ನಲ್ಲಿ ಗ್ರಾಮೀಣ ಅಭಿವೃದ್ಧಿ ಅಧಿಕಾರಿ ಆಗಿದ್ದರು. ಅವರು ಅಲ್ಲಿ ,ಬ್ಯಾಂಕ್ ನ ವತಿಯಿಂದ ರೈತರ ಗುಂಪೊಂದನ್ನು ಮಾಡಿಕೊಂಡಿದ್ದರು. ವಾರ್ಯಾಂತದಲ್ಲಿ ಅವರೆಲ್ಲ ಸೇರಿ ಬೇಸಾಯದಲ್ಲಿನ ಹೊಸ ಪದ್ದತಿ/ಕಷ್ಟ-ಕೋಟಲೇ/ಹಣಕಾಸಿನ ನೆರವು , ಬೇರೆ ಊರಿನಿಂದ, ಪರ್ಯಾಯ ಪದ್ದತಿ ಅಥವ ಬೇಸಾಯದಲ್ಲಿ ಹೊಸದೇನೋ ಸಾಧಿಸಿದವರನ್ನು ಕರೆದು Talks ಮುಂತಾದವುಗಳನ್ನು ಹಮ್ಮಿಕೊಳ್ಳುತ್ತಿದ್ದರು. ಹೀಗೆ ಪರಿಚಯವಾದವರು ಭುಜಂಗರಾಯರು. ಕೊಪ್ಪದಲ್ಲಿ ಗುರ್ಜರ್ ಎಂಬುವರ ಎಸ್ಟೇಟ್ ಇತ್ತು. ಆ ಕುದುರೆ ಅವರದ್ದು. ಭುಜಂಗರಾಯರಿಗೂ, ಗುರ್ಜರ್ ಅವರಿಗು ಏನು ಸಂಬಂಧ ಅಂತ ನನಗೆ ಗೊತ್ತಿಲ್ಲ. ಯಾಕಂದರೆ ನಾನು ಅವರ ಜತೆ ಒಂದು ದಿನ ಕೂಡ ಮಾತಾಡಿಲ್ಲ. ಅವರು ಏನಾದರೂ discuss ಮಾಡಬೇಕಾದರೆ ನಮ್ಮ ಮನೆಗೆ ಬರುತ್ತಿದ್ದರು.ಒಳ್ಳೆ ತೀಡಿದ ದೊಡ್ಡ ದೊಡ್ಡ ಪೊದೆ ಮೀಸೆ ಇತ್ತು ಅವರಿಗೆ. ಕುದುರೆ ಮೇಲೆ ಬರುವುದು ಅವರ ಸವಾರಿ ನಮ್ಮಲ್ಲಿಗೆ. ನಮ್ಮ ಮನೆಯ ಗೇಟಿಗೆ ಕುದುರೆಯನ್ನು ಕಟ್ಟುತ್ತಿದ್ದರು. ನಾನು ನನ್ನ ಕೆಲಸಗಳನ್ನೆಲ್ಲ ಬಿಟ್ಟು ಅದನ್ನು ಮುದ್ದಿಸಲು ಹೋಗುತ್ತಿದ್ದೆ. ಯಾವಾಗಲೋ ಚಿಕ್ಕಂದಿನಂದು ಓದಿದ್ದ black beauty ಕತೆಯಲ್ಲಿ ಕುದುರೆಗಳಿಗೆ ಬೆಲ್ಲ ಇಷ್ಟ ಅಂತ ಓದಿದ ನೆನಪಿನಿಂದ, ನಾನು ಅವರಿಬ್ಬರ ಕಣ್ಣು ತಪ್ಪಿಸಿ, ನನ್ನ ಭಯ್ಯ ನನಗೆ ಪ್ರತೀ ತಿಂಗಳು ಕೊಡುತ್ತಿದ್ದ ಉಂಡೆ ಬೆಲ್ಲ ಅದಕ್ಕೆ ತಿನ್ನಿಸುತ್ತಿದ್ದೆ. ಆ ಮೇಲೆ ಅವರಿಗೆ ಶ್ರೀಕಾಂತ ಹತ್ತಿರ ಏನೂ ಕೆಲಸವಿಲ್ಲದಿದ್ದರೂ ಅವರು ನಮ್ಮ ಮನೆ ಕಡೆಯಿಂದ ಹಾದು ಹೋಗುವಾಗಲೆಲ್ಲ ಆ ಕುದುರೆ ನಮ್ಮ ಮನೆ ಯಿಂದ ಮುಂದೆ ಹೋಗಕ್ಕೆ ಕೇಳದೆ ರಸ್ತೆಯಲ್ಲಿ ಮುಶ್ಕರ ಹೂಡುತ್ತಿತ್ತು. ಅವರಿಗೆ ಆಶ್ಚರ್ಯ. ಆಮೇಲೆ ಅವರಿಗೆ ಗೊತ್ತಾಯಿತು ನನ್ನ ಕಿತಾಪತಿ. ಈ ಪ್ರಕರಣ ಸುಮಾರು ಮೂರು ತಿಂಗಳು ನಡೆಯಿತು. ಅಷ್ಟರಲ್ಲಿ ನನಗೆ ಮೊದಲನೆ ವರ್ಷದ ಬಿ.ಎ. ಪರೀಕ್ಷೆಗೆ ಮುಂಬಯಿಗೆ ಹೋಗ ಬೇಕಾಯಿತು. ನನ್ನ ಪರೀಕ್ಷೆ ಮುಗಿಯುವಷ್ಟರಲ್ಲಿ ಶ್ರೀಕಾಂತ ಗೆ ಬೆಲ್ತಂಗಡಿ ಗೆ ವರ್ಗ ವಾಗಿತ್ತು. ನಾನು ಪರೀಕ್ಷೆ ಮುಗಿಸಿ ಬಂದ ಮೇಲೆ ಬ್ಯಾಂಕನವರಿಗೆ, ಆಪ್ತ ಮಿತ್ರರಿಗೆ ಬೀಳ್ಗೊಡಿಕೆ party , ಸಾಮನು ಪ್ಯಾಕಿಂಗ್ ಮುಂತಾದ ಕೆಲಸದಲ್ಲಿ ನನಗೆ ಕುದುರೆಯ ನೆನಪು ಮರೆತೇ ಹೋಗಿತ್ತು. ನಾವು ಕೊಪ್ಪ ಬಿಟ್ಟು ಬೆಲ್ತಂಗಡಿಗೆ ಬಂದ ಮೇಲೆ ಒಂದು ಸಲ ತಿರುಗಿ ಕೊಪ್ಪಕ್ಕೆ ಒಂದು ಕಾರ್ಯಕ್ರಮಕ್ಕೆ ಹೋದಾಗ ಭುಜಂಗರಾಯರು ಸಿಕ್ಕಿದ್ದರು. ಕುಂಟುತ್ತಿದ್ದರು. ಕುದುರೆ ಬಗ್ಗೆ ಕೇಳಿದಾಗ ಅದಕ್ಕೆ ಹುಚ್ಚು ಹಿಡಿದು, ಅವರನ್ನು ಕೆಳಗೆ ಬೀಳಿಸಿದ ರಭಸಕ್ಕೆ ಅವರ ಕಾಲು ಮೂಳೆ ಮುರಿದದ್ದು, ಕುದುರೆಯನ್ನು ಸಾಯಿಸಿದ್ದು ಎಲ್ಲ ಹೇಳಿದರು. ಬೇಜಾರಾಯಿತು.
ನಾವು ಕನಕಪುರ ರಸ್ತೆಗೆ ತೆರಳಿ ರಶ್ಮಿ ಹೆಗ್ಡೆ ಜತೆ ಮಾತು ಕತೆ ಎಲ್ಲ ಮುಗಿದು ಕೆಲ ಸಮಯದ ನಂತರ ನಮ್ಮ ಸಂಪರ್ಕ ತಪ್ಪಿತು. ನಮ್ಮ ಸಂಸ್ಥೆ ಹೆಚ್ಚಾಗಿ ಹಳ್ಳಿ ಗಳಲ್ಲಿ ಕೆಲಸ ಮಾಡುವುದು. ಹಳ್ಳಿಯ ಜನತೆಗೆ ಒದಗಿಸುವ ಪಠ್ಯಪುಸ್ತಕ (training manual) ಇತ್ಯಾದಿಯಲ್ಲಿ ನಾವು , ಅವರಿಗೆ ಸುಲಭವಾಗಿ ಅರ್ಥವಾಗುವಂತೆ, ಅವರಿಗೆ ತಿಳಿಸಬೇಕಾದುದನ್ನು ರೇಖಾಚಿತ್ರ (illustration) ಮೂಲಕ ತಿಳಿ ಹೇಳುತ್ತೇವೆ. ಪಠ್ಯಪುಸ್ತ್ಕಕಗಳಲ್ಲಿ ನಾವು ಆಗಾಗ ಅಗತ್ಯಗನುಗುಣವಾಗಿ ಬದಲಾವಣೆಗಳನ್ನೂ ಮಾಡುತ್ತಿರುತ್ತೇವೆ. ಹಾಗೂ ಹೊಸ ಹೊಸ ರೇಖಾಚಿತ್ರಕಾರರಿಗೆ ಹುಡುಕಾಟ ನಡೆಸುತ್ತಿರುತ್ತೇವೆ. ಪಾಂಡುರಂಗ ರಾಯರು,
ಶ್ರೀ ಲೋಹಿತ್ ಅವರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕನ್ನು ಕ್ಲಿಕ್ಕಿಸಿ
http://www.khanstudiointernational.com/lohithbio.htm
ಸರಿ, ಅವರಿಗೆ ಮಾತು ಕತೆಯಾಡಲು ಬಿಟ್ಟು ನಾನು ಮುಂದೆ ಆಫಿಸ್ ಕಡೆ ಹೋದೆ. ಅವರು ನಮ್ಮ ಮನೆಯಿಂದಲೆ ವಾಪಸ್ ಹೊರಟು ಹೋದರು. ಶ್ರೀಕಾಂತ ಬಳಿ ಅವರು ಊಟ enjoy ಮಾಡಿದ್ದರ ಬಗ್ಗೆ ಹಾಗೂ ಥ್ಯಾಂಕ್ಸ್ ಕೂಡ ಹೇಳಿ ಕಳಿಹಿಸಿದ್ದರು.
ಕೆಲ ಸಮಯದ ನಂತರ ಶ್ರೀಕಾಂತ ಅವರ ಮನೆಗೆ ಹೋದಾಗ ಅವರ ಪತ್ನಿ ಗೀತಾ ಅವರು ಅವರ ಅಜ್ಜಿ ಬರೆದ ಅಡುಗೆ ಪುಸ್ತಕವನ್ನು -limited edition- ನನಗೋಸ್ಕರ ಕಳುಹಿಸಿಕೊಟ್ಟರು. ನನಗಂತು ಯಾರಾದರು ಪುಸ್ತಕ ಕೊಟ್ಟರೆ ತುಂಬ ಖುಶಿ. ಮಕ್ಕಳು ಮಾತ್ರ ನನಗೆ ಗೇಲಿ ಮಾಡಿದರು, ’ಬಹುಶಃ ನಿನ್ನ ಅಡಿಗೆ ಅಷ್ಟು ಚೆನ್ನಾಗಿರಲಿಲ್ಲವೇನೋ, ಅದಕ್ಕೆ ನೀನು ಅಡಿಗೆ ಕಲಿಯಲಿ ಅಂತ ಆ ಪುಸ್ತಕ ಕಳಿಸಿದ್ದಾರೆ’ ತುಂಬ ಹಳೆಯ ಪುಸ್ತಕ...scan ಮಾಡಿ ಹಾಕುತ್ತಿದ್ದೇನೆ, ಹಾಗೂ bachelor ಓದುಗರಿಗೆ ಬಾಯಲ್ಲಿ ನೀರು ಬರೆಸಲು ಒಂದು recipe ಸಹ ಸ್ಕ್ಯಾನ್ ಮಾಡಿ ಹಾಕಿದ್ದೇನೆ. ಡಿ.ಟಿ. ಲೋಹಿತ್ ಅಂತ ಗೂಗಲ್ search ಮಾಡಿದರೆ, ಅವರ ಕಲಾಕೃತಿ, ಅವರಿಗೆ ಸಂಧ ಗೌರವ ಎಲ್ಲ ನಿಮಗೆ ಕಾಣ ಸಿಗುತ್ತದೆ.
ಈ ಸಂಗತಿ ನಡೆದ ಕೆಲ ಸಮಯದ ನಂತರ ಅವರು , ಅವರ ಅರವತ್ತನೆ ವರ್ಷ ವಯಸ್ಸಿನಲ್ಲಿ, ಅವಕಾಶವನ್ನು ಹುಡುಕಿಕೊಂಡು, ಅಮೇರಿಕಕ್ಕೆ ತೆರಳಿದರು. ಈಗ ಅವರು ಅಲ್ಲಿ ತುಂಬ Demand ನಲ್ಲಿರುವ ಕಲಾವಿದರು. ಅವರ ಧೈರ್ಯವನ್ನು ಖಂಡಿತ ಮೆಚ್ಚತಕ್ಕದ್ದು.
ಇಲ್ಲಿದೆ ಪುಸ್ತಕದ ಮುಖಪುಟ
:-) ಪದೇ ಪದೇ ನಾನು ಅಡುಗೆ ವಿಷಯಕ್ಕೆ ಯಾಕೆ ಬರುತ್ತೀನಿ ಅಂತ ನಿಮಗೆ ಹೇಳ್ತೇನೆ. ತೀರ್ಥಹಳ್ಳಿಯಲ್ಲಿ ನಮಗೆ ಜಮೀನಿದೆ. ಮಾಲವಿಕ ಕಲಿತಿದ್ದು bachelors degree in Hospitality Industry (Hotel Management)..ಅಂದರೆ ಹೋಟಲ್ ಉದ್ಯಮ ನಡೆಸುವ ಅರ್ಹತೆ ಇದೆ ಅವಳಿಗೆ. ನಮ್ಮ ತೋಟದಲ್ಲಿ ಹೊಸತೇನಾದರೂ ಮಾಡಬೇಕೆಂದು ನಮ್ಮೆಲ್ಲರ ಅಭಿಲಾಷೆ. ದುಬೈ ನಲ್ಲಿರುವ ತಮ್ಮ ಇನ್ನು ಆರು ತಿಂಗಳಲ್ಲಿ ಪುನ: ಭಾರತಕ್ಕೆ ಬರುತ್ತಿದ್ದಾನೆ. ಅವನಿಗೆ ಹೋಟಲ್ ಉದ್ಯಮ ನಡೆಸುವ ಉಮ್ಮೇದು ಬಂದಿದೆ, ಹಾಗೆ ನನ್ನ ಬ್ರದರ್ -ಇನ್-ಲಾ ಕೂಡ ಇದರಲ್ಲಿ ತುಂಬ ಆಸಕ್ತಿ ತೋರಿಸುತ್ತಿದ್ದಾರೆ. ತೀರ್ಥಹಳ್ಳಿ ಸುಂದರವಾದ ಪ್ರದೇಶ ಮಾತ್ರವಲ್ಲದೆ ಹತ್ತಿರದಲ್ಲಿ ಟೂರಿಸ್ಟ್ interest ತಾಣಗಳು ಸಾಕಷ್ಟಿವೆ. ಕಳೆದ ಐದು ವರ್ಷದಿಂದ ನಾವು ತೀರ್ಥಹಳ್ಳಿಗೆ ಹೋದಾಗಲೆಲ್ಲ ಅಲ್ಲಿ ಅಕ್ಕ ಪಕ್ಕ ಇರುವ ದೇವಸ್ಥಾನ, ಕೋಟೆ, ಗುಡ್ಡ ಗಳನ್ನು ನೋಡಿಕೊಂಡು ಬರುತ್ತ ಇದ್ದೇವೆ. ನಾವು ecotel/eco tourism ಪ್ರಾರಂಭ ಮಾಡುವ ಹುನ್ನಾರದಲ್ಲಿದ್ದೇವೆ. ಮಾಲವಿಕ ಬೇರೆ ಕಡೆ ಕೆಲಸಕ್ಕೆ ಹೋಗುವ ಇಷ್ಟ ನಮಗಿಲ್ಲ. ಸಧ್ಯಕ್ಕೆ to understand the trick of the trade' ಅವಳು ಕೆಲಸಕ್ಕೆ ಸೇರಿದ್ದಾಳೆ. ನಮ್ಮದು ಡಿಫರೆಂಟ್ ಆಗಿರುತ್ತೆ. ನಿಧಾನವಾಗಿ ಯೋಜನೆಗಳನ್ನೆಲ್ಲ ಹಮ್ಮಿಕೊಳುತ್ತಾ ಇದ್ದೇವೆ. ಎಲ್ಲರೂ ತುಂಬ excite ಆಗಿದ್ದೇವೆ. ಎಷ್ಟೆಲ್ಲ ತಯಾರಿ ನಡೆಸಬೇಕು...ಹಣಕಾಸು ವ್ಯವಸ್ಥೆ. project proposal, ಚಂದದ ಹೆಸರು, unique selling propostition (USP),brochure, interior decoration... ಸೃಜನಾತ್ಮಕ ಕೆಲಸಗಳು ಶ್ರೀಕಾಂತ, -ಮಾಲವಿಕ ಮತ್ತು ನೀಹಾ ಪಾಲು, ತಲೆ ನನ್ನ ತಮ್ಮ ಹಾಗೂ ಶ್ರೀಕಾಂತ, ಹಣಕಾಸು ಸ್ವಲ್ಪ ಮಟ್ಟಿಗೆ ನನ್ನ brother-in-law. ಮತ್ತೆ ನಂದು..ಕೇವಲ moral support. ನನ್ನ ಅಮ್ಮ ಕೂಡ ಇದರಲ್ಲಿ involve ಆಗುತ್ತಿದ್ದಾರೆ. skype ನಲ್ಲಿ ನಾವೆಲ್ಲರೂ ಸೇರಿ ಮಾತಾಡುವಾಗ ಇದೆ ನಮ್ಮ ಡಿಸ್ಕಷನ್..
ನಗರದ ಕೋಟೆಯ ಚಿತ್ರಗಳ ನಂತರ ಒಂದು ಸಣ್ಣ ಜೋಕ್
ಶ್ರೀಕಾಂತ ದೇಶ-ವಿದೇಶಗಳ ಟೂರ್ ಹೋದಾಗಲೆಲ್ಲ ಬೇರೆ ಬೇರೆ ಹೋಟಲ್ ಗಳಿಗೆ ಗೆ ಹೋಗಿ ಅಲ್ಲಿ ಏನು special ಇದೆ ಅಂತ ನೋಡಿ, ಕೇಳಿ ಅವರ kitchen ಗೆ ಎಲ್ಲ ಭೇಟಿ ನೀಡಿ , ಹೊಸ ಹೊಸ ಐಡಿಯ ಗಳನ್ನೆಲ ಕಲೆತು ಹಾಕುತ್ತಿದ್ದಾರೆ....
Its always exciting to have something to look forward to ಅಲ್ವಾ?? ನಿಮ್ಮೆಲ್ಲರ ಶುಭ ಹಾರೈಕೆ ಖಂಡಿತ ಬೇಕು
ಎಲ್ಲಿಂದಲೋ ಶುರು ಮಾಡಿ ಎಲ್ಲಿಗೋ ಬಂತು ವಿಷಯ ಯಾವತ್ತಿನ ಹಾಗೆ........
:-)
ನಾವು ಕನಕಪುರ ರಸ್ತೆಗೆ ತೆರಳಿ ರಶ್ಮಿ ಹೆಗ್ಡೆ ಜತೆ ಮಾತು ಕತೆ ಎಲ್ಲ ಮುಗಿದು ಕೆಲ ಸಮಯದ ನಂತರ ನಮ್ಮ ಸಂಪರ್ಕ ತಪ್ಪಿತು. ನಮ್ಮ ಸಂಸ್ಥೆ ಹೆಚ್ಚಾಗಿ ಹಳ್ಳಿ ಗಳಲ್ಲಿ ಕೆಲಸ ಮಾಡುವುದು. ಹಳ್ಳಿಯ ಜನತೆಗೆ ಒದಗಿಸುವ ಪಠ್ಯಪುಸ್ತಕ (training manual) ಇತ್ಯಾದಿಯಲ್ಲಿ ನಾವು , ಅವರಿಗೆ ಸುಲಭವಾಗಿ ಅರ್ಥವಾಗುವಂತೆ, ಅವರಿಗೆ ತಿಳಿಸಬೇಕಾದುದನ್ನು ರೇಖಾಚಿತ್ರ (illustration) ಮೂಲಕ ತಿಳಿ ಹೇಳುತ್ತೇವೆ. ಪಠ್ಯಪುಸ್ತ್ಕಕಗಳಲ್ಲಿ ನಾವು ಆಗಾಗ ಅಗತ್ಯಗನುಗುಣವಾಗಿ ಬದಲಾವಣೆಗಳನ್ನೂ ಮಾಡುತ್ತಿರುತ್ತೇವೆ. ಹಾಗೂ ಹೊಸ ಹೊಸ ರೇಖಾಚಿತ್ರಕಾರರಿಗೆ ಹುಡುಕಾಟ ನಡೆಸುತ್ತಿರುತ್ತೇವೆ. ಪಾಂಡುರಂಗ ರಾಯರು,
a tiny demonstration of one of the artist at the interview, illustration for a new book
ಭೂಪತಿ ಮುಂತಾದವರೆಲ್ಲ ಒಂದು ಕಾಲಕ್ಕೆ ನಮಗೆ ಸಹಾಯ ಮಾಡಿದ್ದಾರೆ. ಒಂದು ಸಲ ಇಂತಹ ಒಂದು ಪುಸ್ತಕದ ಬಗ್ಗೆ ಮಾತನಾಡಲು ಶ್ರೀ ಡಿ.ಟಿ. ಲೋಹಿತ್ ರು ನಮ್ಮ ಕಛೇರಿಗೆ ಬಂದಿದ್ದರು. ಮಾತುಕತೆ, ನಮ್ಮ ಅವಶ್ಯಕತೆಗಳನ್ನು ಅವರಿಗೆ ತಿಳಿಹೇಳಿಸುವಷ್ಟರಲ್ಲಿ ಮಧ್ಯಾಹ್ನ ಊಟದ ಹೊತ್ತು. ಶ್ರೀಕಾಂತ ಅವರಿಗೆ, ’ಬನ್ನಿ ಸರ್, ನಮ್ಮ ಮನೆಯಲ್ಲಿ ಊಟ ಮಾಡುವ ’ಅಂದಾಗ ಅವರು ತಕ್ಷಣ ಒಪ್ಪಿದರು. ಅಲ್ಲೆ ಇದ್ದು ಕೇಳಿಸಿಕೊಂಡ ನಾನು, ’ಶ್ರೀಕಾಂತ, ನಾನು ಬಸ್ ನಲ್ಲಿ ಮುಂದೆ ಹೋಗಿರ್ತೀನಿ. ನೀವು ಅವರನ್ನು ಸ್ವ್ಲಲ್ಪ ಹೊತ್ತು ಬಿಟ್ಟು ಕರೆದುಕೊಂಡು ಬನ್ನಿ’ ಅಂದೆ. ನಾನು ಬೆಳಿಗ್ಗೆ ಆಫಿಸ್ ಗೆ ಬರುವ ಮುನ್ನ ಅನ್ನ, ಸಾರು, ಬೀನ್ಸ್ ಪಲ್ಯ ಮಾಡಿದ್ದೆ. ಆಫಿಸ್ ಗೆ ನಾನು ಚಪಾತಿ ಬೀನ್ಸ್ ಪಲ್ಯ ತಂದಿದ್ದೆ. ನನ್ನ ಡಬ್ಬಿ ಆಫಿಸ್ ನವರಿಗೆ ಶೇರ್ ಮಾಡಲಿಕ್ಕೆ ಹೇಳಿ, ನಾನು ಬೇಗ ಬೇಗ ಮನೆಗೆ ಬಂದು ದೊಡ್ಡಮೆಣಸಿನಕಾಯಿ ಬೋಂಡ, ಹಪ್ಪಳ-ಸಂಡಿಗೆ ಕರೆದಿಟ್ಟೆ, ಮತ್ತು ಮಸಾಲೆ ಮಜ್ಜಿಗೆ ಮಾಡಿದೆ. ಆ ಮೇಲೆ ನಾವು ಮಾತಾಡುತ್ತ ಆರಾಮಾಗಿ ಊಟ ಮಾಡಿದ್ವಿ. ಅವರು ವೃತ್ತಿಯಿಂದ ಇಂಜಿನಿಯರ್. ಆದರೆ ಕಲೆಯ ಬಗ್ಗೆ ಒಲವು ಹೆಚ್ಚಾಗಿ ಕೈ ತುಂಬ ಸಂಬಳ ಬರುವ ಇಂಜಿನಿಯರಿಂಗ ನೌಕರಿ ತ್ಯಜಿಸಿ, ಅವರ ಪತ್ನಿಯ ಸಲಹೆಯ ಮೇರೆಗೆ-(ಅವರು ಬ್ಯಾಂಕನಲ್ಲಿದ್ದರು) ಕಲೆಯನ್ನೇ ಮುಂದುವರೆಸಿದರು. ಹಳ್ಳಿಯ ಚಿತ್ರಣಗಳನ್ನು ತುಂಬ ಚೆನ್ನಾಗಿ ಚಿತ್ರಿಸುತ್ತಾರೆ ಅವರು. ಮಾತ್ರವಲ್ಲ ಶಂಕರ ಫೌಂಡೇಶನ್ ಸಹಯೋಗದಲ್ಲಿ ಹಳ್ಳಿಯ ಮಕ್ಕಳಿಗೆ ಉಚಿತವಾಗಿ ಚಿತ್ರಕಲೆಯನ್ನೂ ಹೇಳಿಕೊಡುತ್ತಿದ್ದರು. ಅಂಚೆ ಮೂಲಕ ಕಲಾ ಶಿಕ್ಷಣದ ಸೌಲಬ್ಯವೂ ಇನ್ನೋರ್ವ ಮಿತ್ರರೊಡಗೂಡಿ ಒದಗಿಸುತ್ತಿದ್ದರು. ಮಾಲವಿಕ ಅದನ್ನು ಉಪಯೋಗಿಸಿಕೊಂಡಿದ್ದಾಳೆ. ಮತ್ತು ಖ್ಯಾತ ಭರತನಾಟ್ಯ ಕಲಾವಿದೆ ರಶ್ಮಿ ಹೆಗಡೆಯವರು ಅಕ್ಕ ಪಕ್ಕದ ಹಳ್ಳಿ ಹೆಣ್ಣುಮಕ್ಕಳಿಗೆ ಪ್ರತೀ ವರ್ಷ ಉಚಿತವಾಗಿ ನೃತ್ಯ ತರಬೇತಿ ನೀಡಿ, ವರ್ಷಕ್ಕೆರಡು ಸಲ ಶಂಕರಾ ಫೌಂಡೇಶನ್ ನಲ್ಲಿ ಆ ಮಕ್ಕಳಿಂದ ಕಾರ್ಯಕ್ರಮ ನಡೆಸುತ್ತಾರೆ. ಎಲ್ಲರೂ ಅಲ್ಲಿ ಒಂದು ಸಲ ಭೇಟಿ ನೀಡಲೇ ಬೇಕು.ಶ್ರೀ ಲೋಹಿತ್ ಅವರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕನ್ನು ಕ್ಲಿಕ್ಕಿಸಿ
http://www.khanstudiointernational.com/lohithbio.htm
ಸರಿ, ಅವರಿಗೆ ಮಾತು ಕತೆಯಾಡಲು ಬಿಟ್ಟು ನಾನು ಮುಂದೆ ಆಫಿಸ್ ಕಡೆ ಹೋದೆ. ಅವರು ನಮ್ಮ ಮನೆಯಿಂದಲೆ ವಾಪಸ್ ಹೊರಟು ಹೋದರು. ಶ್ರೀಕಾಂತ ಬಳಿ ಅವರು ಊಟ enjoy ಮಾಡಿದ್ದರ ಬಗ್ಗೆ ಹಾಗೂ ಥ್ಯಾಂಕ್ಸ್ ಕೂಡ ಹೇಳಿ ಕಳಿಹಿಸಿದ್ದರು.
ಕೆಲ ಸಮಯದ ನಂತರ ಶ್ರೀಕಾಂತ ಅವರ ಮನೆಗೆ ಹೋದಾಗ ಅವರ ಪತ್ನಿ ಗೀತಾ ಅವರು ಅವರ ಅಜ್ಜಿ ಬರೆದ ಅಡುಗೆ ಪುಸ್ತಕವನ್ನು -limited edition- ನನಗೋಸ್ಕರ ಕಳುಹಿಸಿಕೊಟ್ಟರು. ನನಗಂತು ಯಾರಾದರು ಪುಸ್ತಕ ಕೊಟ್ಟರೆ ತುಂಬ ಖುಶಿ. ಮಕ್ಕಳು ಮಾತ್ರ ನನಗೆ ಗೇಲಿ ಮಾಡಿದರು, ’ಬಹುಶಃ ನಿನ್ನ ಅಡಿಗೆ ಅಷ್ಟು ಚೆನ್ನಾಗಿರಲಿಲ್ಲವೇನೋ, ಅದಕ್ಕೆ ನೀನು ಅಡಿಗೆ ಕಲಿಯಲಿ ಅಂತ ಆ ಪುಸ್ತಕ ಕಳಿಸಿದ್ದಾರೆ’ ತುಂಬ ಹಳೆಯ ಪುಸ್ತಕ...scan ಮಾಡಿ ಹಾಕುತ್ತಿದ್ದೇನೆ, ಹಾಗೂ bachelor ಓದುಗರಿಗೆ ಬಾಯಲ್ಲಿ ನೀರು ಬರೆಸಲು ಒಂದು recipe ಸಹ ಸ್ಕ್ಯಾನ್ ಮಾಡಿ ಹಾಕಿದ್ದೇನೆ. ಡಿ.ಟಿ. ಲೋಹಿತ್ ಅಂತ ಗೂಗಲ್ search ಮಾಡಿದರೆ, ಅವರ ಕಲಾಕೃತಿ, ಅವರಿಗೆ ಸಂಧ ಗೌರವ ಎಲ್ಲ ನಿಮಗೆ ಕಾಣ ಸಿಗುತ್ತದೆ.
ಈ ಸಂಗತಿ ನಡೆದ ಕೆಲ ಸಮಯದ ನಂತರ ಅವರು , ಅವರ ಅರವತ್ತನೆ ವರ್ಷ ವಯಸ್ಸಿನಲ್ಲಿ, ಅವಕಾಶವನ್ನು ಹುಡುಕಿಕೊಂಡು, ಅಮೇರಿಕಕ್ಕೆ ತೆರಳಿದರು. ಈಗ ಅವರು ಅಲ್ಲಿ ತುಂಬ Demand ನಲ್ಲಿರುವ ಕಲಾವಿದರು. ಅವರ ಧೈರ್ಯವನ್ನು ಖಂಡಿತ ಮೆಚ್ಚತಕ್ಕದ್ದು.
ಇಲ್ಲಿದೆ ಪುಸ್ತಕದ ಮುಖಪುಟ
:-) ಪದೇ ಪದೇ ನಾನು ಅಡುಗೆ ವಿಷಯಕ್ಕೆ ಯಾಕೆ ಬರುತ್ತೀನಿ ಅಂತ ನಿಮಗೆ ಹೇಳ್ತೇನೆ. ತೀರ್ಥಹಳ್ಳಿಯಲ್ಲಿ ನಮಗೆ ಜಮೀನಿದೆ. ಮಾಲವಿಕ ಕಲಿತಿದ್ದು bachelors degree in Hospitality Industry (Hotel Management)..ಅಂದರೆ ಹೋಟಲ್ ಉದ್ಯಮ ನಡೆಸುವ ಅರ್ಹತೆ ಇದೆ ಅವಳಿಗೆ. ನಮ್ಮ ತೋಟದಲ್ಲಿ ಹೊಸತೇನಾದರೂ ಮಾಡಬೇಕೆಂದು ನಮ್ಮೆಲ್ಲರ ಅಭಿಲಾಷೆ. ದುಬೈ ನಲ್ಲಿರುವ ತಮ್ಮ ಇನ್ನು ಆರು ತಿಂಗಳಲ್ಲಿ ಪುನ: ಭಾರತಕ್ಕೆ ಬರುತ್ತಿದ್ದಾನೆ. ಅವನಿಗೆ ಹೋಟಲ್ ಉದ್ಯಮ ನಡೆಸುವ ಉಮ್ಮೇದು ಬಂದಿದೆ, ಹಾಗೆ ನನ್ನ ಬ್ರದರ್ -ಇನ್-ಲಾ ಕೂಡ ಇದರಲ್ಲಿ ತುಂಬ ಆಸಕ್ತಿ ತೋರಿಸುತ್ತಿದ್ದಾರೆ. ತೀರ್ಥಹಳ್ಳಿ ಸುಂದರವಾದ ಪ್ರದೇಶ ಮಾತ್ರವಲ್ಲದೆ ಹತ್ತಿರದಲ್ಲಿ ಟೂರಿಸ್ಟ್ interest ತಾಣಗಳು ಸಾಕಷ್ಟಿವೆ. ಕಳೆದ ಐದು ವರ್ಷದಿಂದ ನಾವು ತೀರ್ಥಹಳ್ಳಿಗೆ ಹೋದಾಗಲೆಲ್ಲ ಅಲ್ಲಿ ಅಕ್ಕ ಪಕ್ಕ ಇರುವ ದೇವಸ್ಥಾನ, ಕೋಟೆ, ಗುಡ್ಡ ಗಳನ್ನು ನೋಡಿಕೊಂಡು ಬರುತ್ತ ಇದ್ದೇವೆ. ನಾವು ecotel/eco tourism ಪ್ರಾರಂಭ ಮಾಡುವ ಹುನ್ನಾರದಲ್ಲಿದ್ದೇವೆ. ಮಾಲವಿಕ ಬೇರೆ ಕಡೆ ಕೆಲಸಕ್ಕೆ ಹೋಗುವ ಇಷ್ಟ ನಮಗಿಲ್ಲ. ಸಧ್ಯಕ್ಕೆ to understand the trick of the trade' ಅವಳು ಕೆಲಸಕ್ಕೆ ಸೇರಿದ್ದಾಳೆ. ನಮ್ಮದು ಡಿಫರೆಂಟ್ ಆಗಿರುತ್ತೆ. ನಿಧಾನವಾಗಿ ಯೋಜನೆಗಳನ್ನೆಲ್ಲ ಹಮ್ಮಿಕೊಳುತ್ತಾ ಇದ್ದೇವೆ. ಎಲ್ಲರೂ ತುಂಬ excite ಆಗಿದ್ದೇವೆ. ಎಷ್ಟೆಲ್ಲ ತಯಾರಿ ನಡೆಸಬೇಕು...ಹಣಕಾಸು ವ್ಯವಸ್ಥೆ. project proposal, ಚಂದದ ಹೆಸರು, unique selling propostition (USP),brochure, interior decoration... ಸೃಜನಾತ್ಮಕ ಕೆಲಸಗಳು ಶ್ರೀಕಾಂತ, -ಮಾಲವಿಕ ಮತ್ತು ನೀಹಾ ಪಾಲು, ತಲೆ ನನ್ನ ತಮ್ಮ ಹಾಗೂ ಶ್ರೀಕಾಂತ, ಹಣಕಾಸು ಸ್ವಲ್ಪ ಮಟ್ಟಿಗೆ ನನ್ನ brother-in-law. ಮತ್ತೆ ನಂದು..ಕೇವಲ moral support. ನನ್ನ ಅಮ್ಮ ಕೂಡ ಇದರಲ್ಲಿ involve ಆಗುತ್ತಿದ್ದಾರೆ. skype ನಲ್ಲಿ ನಾವೆಲ್ಲರೂ ಸೇರಿ ಮಾತಾಡುವಾಗ ಇದೆ ನಮ್ಮ ಡಿಸ್ಕಷನ್..
ನಗರದ ಕೋಟೆಯ ಚಿತ್ರಗಳ ನಂತರ ಒಂದು ಸಣ್ಣ ಜೋಕ್
ಸೆಲ್ ಫೋನ್ ನಲ್ಲಿ ತೆಗೆದದ್ದು. ಪುರಾತತ್ವ ಇಲಾಖೆ ಈಗ ಕೋಟೆಯನ್ನು ಇನ್ನಷ್ಟು ಚೆಂದವಾಗಿಸಿದೆ
ತೀರ್ಥಹಳ್ಳಿ ಬಳಿಯ ನಗರದಲ್ಲಿರುವ ಕೋಟೆಗೆ (Nagara Fort) ಹೋಗಿದ್ವಿ . ವಾಪಸ್ ಬರ್ತಾ ಅಲ್ಲಿ ಚಿಕ್ಕದೊಂದು ಹೋಟಲ್ ಗೆ ಹೋದ್ವಿ. ಟೀ -ಬೋಂಡಾ order ಮಾಡಿದ್ವಿ. ಅವರು ಕೊಂಕಣಿಯವರು ಹಾಗಾಗಿ ನಮ್ಮ ಲೋಕಾಭಿರಾಮ ಮಾತು ಶುರು ಆಯ್ತು. ಅವರ ಹೆಂಡ್ತಿ ಮಾಲವಿಕಳಿಗೆ ಏನು ಓದ್ತಾ ಇದ್ದೀಯಾ ಅಮ್ಮ ಅಂತ ಕೇಳಿದ್ರು, ಅದಕ್ಕೆ ಮಾಲವಿಕ- Hotel Management ಮಾಡ್ತಾ ಇದ್ದೀನಿ ಆಂಟಿ’ ಅಂದ್ಲು. ಅದಕ್ಕೆ ಅವರಿಬ್ಬರೂ ನಾವು ಹೋಟಲ್ ಮ್ಯಾನೆಜ್ ಮಾಡ್ತಾ ಇದ್ದೇವಲ್ಲವಾ?? ಅದರಲ್ಲಿ ಕಲೀಲಿಕ್ಕೆ ಏನಿದೆ ಅಂದಾಗ ನಮಗೆಲ್ಲ ನಗು....ಶ್ರೀಕಾಂತ ದೇಶ-ವಿದೇಶಗಳ ಟೂರ್ ಹೋದಾಗಲೆಲ್ಲ ಬೇರೆ ಬೇರೆ ಹೋಟಲ್ ಗಳಿಗೆ ಗೆ ಹೋಗಿ ಅಲ್ಲಿ ಏನು special ಇದೆ ಅಂತ ನೋಡಿ, ಕೇಳಿ ಅವರ kitchen ಗೆ ಎಲ್ಲ ಭೇಟಿ ನೀಡಿ , ಹೊಸ ಹೊಸ ಐಡಿಯ ಗಳನ್ನೆಲ ಕಲೆತು ಹಾಕುತ್ತಿದ್ದಾರೆ....
Its always exciting to have something to look forward to ಅಲ್ವಾ?? ನಿಮ್ಮೆಲ್ಲರ ಶುಭ ಹಾರೈಕೆ ಖಂಡಿತ ಬೇಕು
ಎಲ್ಲಿಂದಲೋ ಶುರು ಮಾಡಿ ಎಲ್ಲಿಗೋ ಬಂತು ವಿಷಯ ಯಾವತ್ತಿನ ಹಾಗೆ........
:-)