ನನ್ನ ಸೂಸಿಯ ಸ್ನೇಹ ಒಂದು ಸುಂದರ- ವಿಚಿತ್ರ. ಅವರು ನನ್ನ ಅಮ್ಮನಿಗಿಂತ ಹಿರಿಯರು...ಅದು ನನ್ನ ಅಮ್ಮನೇ ನನಗೆ ಮನದಟ್ಟು ಮಾಡಿದ್ದು...ನನಗೆ ನಮ್ಮ ವಯಸ್ಸಿನ ಅಂತರ ಗೊತ್ತಾಗಲೇ ಇಲ್ಲ ಯಾವತ್ತೂ. ಶಾಂತ ಸ್ವಭಾವದ ನನ್ನ ಸೂಸಿ ನಮ್ಮನ್ನೆಲ ಬಿಟ್ಟು ನಿನ್ನೆ ಹೊರಟು ಬಿಟ್ಟರು...ಅವರಿಗೆ ಸುಮಾರು ಜನ ಸೋದರ ಸೋದರಿಯರು ಇದ್ದಾರೆ.
ಅವರಿಗೆ ಫೋಟೋ ಎಲ್ಲ ಅಷ್ಟು ಹಿಡಿಸುತ್ತಿರಲಿಲ್ಲ. ಆದರೂ ನಾನು ಒಂದೆರಡು ಫೋಟೋ ತೆಗೆಯುತ್ತೇನೆ ಅಂದಾಗ ನಾಚಿ ಹೂಂ ಎಂದಿದ್ದರು.
ಕೆಳಗಡೆ ಕೆಲವು ಲಿಂಕ್ ನಲ್ಲಿ ಸೂಸಿ ಬಗ್ಗೆ ನೀವು ಓದಬಹುದು...
ನಮ್ಮ ಕೊನೆಯ ಭೇಟಿ 2022 ನಲ್ಲಿ....ಆ ಮೇಲೆ ಫೋನ್ ಸಂಪರ್ಕದಲ್ಲಿ ಇದ್ದೆವು. ಆಮೇಲೆ ಅವರು ಹೊಸ ಫೋನ್ ತೆಗೊಳ್ಳಲು ಹೋದಾಗ ಅಂಗಡಿಯಿಂದ ಫೋನ್ ಮಾಡಿದ್ದೆ ಕೊನೆ. ಹೊಸ ಫೋನ್ ನಲ್ಲಿ ನನ್ನ ನಂಬರ್ ಬಹುಷ್ಯ ಸೇವ್ ಆಗಿಲ್ಲ...ನಾನು ಫೋನ್ ಮಾಡಿದ್ರೆ ಬೀಫ್ ಬರ್ತಿತ್ತು...ಹೇಗೂ ಅವರ ಬಳಿ ಹೋಗಲಿಕ್ಕಿತ್ತು ಅಂತ ಸುಮ್ಮನಾದೆ...ನಮ್ಮ travel ಪ್ಲೇನ್ಸ್ reschedule ಆಗ್ತಾ ಆಗ್ತಾ ಅಲ್ಲಿಗೆ ಹೋಗಲು ಆಗಿಲ್ಲ....


