August 28, 2025

ಗಣೇಶ ಹಬ್ಬ - 2025


ತುಂಬಾ ಚಿಕ್ಕವಳಿದ್ದಾಗ ಒಂದೊಮ್ಮೆ ನನ್ನ ಸೋದರತ್ತೆಯ ಕುಟುಂಬದ ಜತೆ ಒಬ್ಬರ ಮನೆಯ ಗಣಪತಿ ಪೂಜೆಗೆ ಹೋಗಿದ್ದೆ. ಒಳ್ಳೆ ಪಂಡಾಲ್ ಹಾಕಿ, ಜಮಖಾನೆ ಹಾಸಿಟ್ಟಿದ್ದರು. ಪೂಜೆಗೆ ಪುರೋಹಿತರು, ಅಡಿಗೆಗೆ ಭಟ್ಟರು...ಮನೆಯ ಒಡತಿ ಭರಪೂರ ಬಂಗಾರ ತೊಟ್ಟು ಆರಾಮಾಗಿ (ಅವರಿಗೆ ಒಂದು ಕಾಲಿಗೆ ಪೋಲಿಯೋ ಇತ್ತು) ಎಲ್ಲರ ಜತೆ ಮಾತಾಡ್ತಾ, ನಗ್ತಾ ಕಾಲ ಹಾಕ್ತಾ ಇದ್ದು...ಊಟದ ಸಮಯಕ್ಕೆ ನಮ್ಮೆಲ್ಲರ ಬಿಸಿ ಅನ್ನದ ಮೇಲೆ ತುಪ್ಪ ಬಡಿಸೋದೊಂದೆ ಕೆಲಸ... ಹಬ್ಬ ಅಂದ್ರೆ ಹಾಗಿರಬೇಕು..ಎಲ್ಲರ ಜತೆ ನಾವು ಎಂಜಾಯ್ ಮಾಡಬೇಕು ಅನ್ನುವ ಒಂದು ಆಲೋಚನೆ  ತಲೆಯಲ್ಲಿ ಹೊಕ್ಕಿ ಬಿಟ್ಟಿತ್ತು.
ನನಗೆ ಮದುವೆ ಮಾಡಿ ಕೊಡುವ ಮನೆಯಲ್ಲಿ ಗೌರಿ-ಗಣಪತಿ ಆಚರಣೆಯಲ್ಲಿದೆ ಎಂದು ಅಮ್ಮನಿಗೆ ಸಂಭ್ರಮ....ನನಗೆ ಅದರಲ್ಲೆಲ್ಲ ಆಸಕ್ತಿನೆ ಇರಲಿಲ್ಲ. ಮನೆಯಲ್ಲಿ  ದೀವಾನ್ ಮತ್ತು ಗೋಡೆ ಎಡೆಯಡಿಯ ಸಂಧಿ ನನ್ನ ಅರಮನೆ...ಅಲ್ಲೇ ನನ್ನ ಪುಸ್ತಕದ ಓದು, ಮೈಕ್ರೋ biologist ಆಗುವ ಕನಸು ಇಷ್ಟರಲ್ಲೇ ನನ್ನ ಖುಷಿ.
ಆದರೆ ತೀರ್ಥಹಳ್ಳಿಯಲ್ಲಿ ಚೌತಿಯ ಮುನ್ನಾ ದಿನದಿಂದಲೇ ಒಂದ್ರಾಶಿ ಕೆಲಸಗಳು. ಗೌರಿ ಪೂಜೆಗೆ ತೆಂಗಿನ ಕಾಯಿ ಒಪ್ಪ ಮಾಡಿ ಪೂಜೆಗೆ ಸಿಂಗರಿಸುವುದು...ರಾತ್ರಿ ಎಲ್ಲಾ ಅಂದ್ರೆ ಎಲ್ಲಾ ಪಾತ್ರೆಗಳನ್ನು ತೊಳೆದು ಹಾಕುವುದು. ಇತ್ತ ಕೂರುವುದು ಇಲ್ಲ, ಪೂರ್ತಾ ನಿಲ್ಲುವುದು ಇಲ್ಲ..ಆ ತರಹ ಬಗ್ಗಿ ದೊಡ್ಡ ಪಾತ್ರೆಗಳನ್ನು ತೊಳೆದು ಹಾಕುವುದು...ಅದರಲ್ಲೂ ಮಳೆ ಸಿಡಿಯುವ ಜಾಗ..ನಾಲ್ಕಂಕಣದ ಮನೆ....ಬಟ್ಟೆ ಎಲ್ಲ ತೊಯ್ದು ಹೋಗಿ...ಒದ್ದೆ ಬಟ್ಟೆಯಲ್ಲೇ ಮಲಗ್ತಿದ್ದೆ...ನನ್ನ ಬಳಿ ಇದ್ದುದ್ದೆ ನಾಲ್ಕು ಸೀರೆ..ಎರಡು ಮನೆಯಲ್ಲಿ ಉಡುವಂತದ್ದು.  ಅಪ್ಪ ಕಷ್ಟ ಪಟ್ಟು ನನ್ನ ಮದುವೆ ಮಾಡಿಸಿದರು. ತುಂಬಾ ಹಣಕಾಸಿನ ತೊಂದರೆ ಇತ್ತು.
ಒಂದು ದಿನ ತಮ್ಮ ನನಗೆ ಪತ್ರ ಬರೆದಿದ್ದ..ನಿನ್ನ ಮದುವೆಯಾದ ಮೇಲೆ  ಇಲ್ಲಿ ನಾವು  ದಿನಾ ಗಂಜಿ ಮತ್ತು ಹುರಿದ ಹಪ್ಪಳ ತಿನ್ನೋದು ಅಂತ....ನಾನು ಎಷ್ಟು ಅಪ್ಸೆಟ್ ಆದೇ ಅಂದ್ರೆ ತಿನ್ನೋದೆ ಬಿಟ್ಟು ಬಿಟ್ಟು  ಮೊದಲೇ ಕೋಲಿ ನಂತಿದ್ದವಳು ಕಡ್ಡಿಯಂತಾದೆ...ಎಷ್ಟೆಂದರೆ  ಮದುವೆಯ ನಂತರದ ಮೊದಲ ಯುಗಾದಿಗೆ ಹೋದಾಗ ನನ್ನ ತಂಗಿ ನನ್ನನ್ನು ನೋಡಿ ಬಾತ್ಬ್ರೂಮ್ ಗೆ ಹೋಗಿ ಅತ್ತು ಬಿಟ್ಟಳಂತೆ...ಆಮೇಲೆ ತಮ್ಮ ತಮಾಷೆಗೆ ಹಾಗೆ ಬರೆದದ್ಫು ಅಂತ ಗೊತ್ತಾಯ್ತು...🤔😧 (ಆವಾಗ ಫೋನ್ ಎಲ್ಲ ಇರಲಿಲ್ಲ.. ಅವನಿಗೆ ಅವನ ತಮಾಷೆ ಮರೆತು ಹೋಗಿತ್ತು.
ಸರಿ ಸ್ವಲ್ಪ track change ಆಯ್ತು 😁.
ಮಾಲವಿಕಾ ಹುಟ್ಟಿದ ಹನ್ನೊಂದನೇ ದಿನ - ಕಿವಿ ಚುಚ್ಚುವುದು ಮತ್ತು ನಾಮಕರಣದ ದಿನ with my parents, brothers and ದೊಡ್ಡಮ್ಮ Aug 1990. the only time i missed ganesh chaturthi pooja. otherwise never missed one in 37years..guess what? did not even miss due to periofs either 🤔🤔😁

ಸಧ್ಯ ಹುಷಾರು ತಪ್ಪಲಿಲ್ಲ. ಆದರೆ ವಯಸ್ದು ಆಗ್ತಿದ್ದ ಹಾಗೆ ಸೊಂಟ ನೋವು ಶುರು ಆಯ್ತು. ದೂರದ ಊರಿನಿಂದ ಎರಡು ಬಸ್ change ಮಾಡಿ, ಮಕ್ಕಳಿಬ್ಬರನ್ನೂ ಕರೆದು ಕೊಂಡು, ಅಲ್ಲಿ ತಲುಪುವಷ್ಟರಲ್ಲಿ ಹೈರಾಣಾಗ್ತಿದ್ದೆ. ನನ್ನ ಅಕ್ಕನಿಗೂ ನನಗೂ 20 ವರ್ಷದ ಅಂತರ. ಅವರಿಗೆಷ್ಟು ಸುಸ್ತಾಗಿತ್ತೋ ಪಾಪ...ಗೌರಿ ಗಣೇಶ ಎರಡನ್ನೂ  ಗಣೇಶ ಚತುರ್ಥಿ ದಿನ ಆಚರಿಸುವ ಪರಿಪಾಠ.. ಆದ್ದರಿಂದ ಇನ್ನಷ್ಟು ಕೆಲಸಗಳು ಜಾಸ್ತಿ...
 ಹಬ್ಬದ ದಿನ ಬೆಳಿಗ್ಗೆ ಬೇಗ ಎದ್ದು, ವಿರಾಮ ಸಿಗದಷ್ಟು ಕೆಲಸದ ರಾಶಿ. ಹಬ್ಬ enjoy ಮಾಡಿದ್ದ ನೆನಪಿಲ್ಲ.  ಆ ಮೇಲೆ ಭಯ್ಯ ನವರಿಗೆ  ಹುಷಾರು ತಪ್ಪಿದ ಮೇಲೆ ನಾವು ಬೆಂಗಳೂರಲ್ಲಿ ಗಣಪತಿ ಕೂರಿಸುವದೆಂದಾಯಿತು. ನನ್ನನ್ನು ಒಂದು ಮಾತು ಕೇಳಲಿಲ್ಲ.  ಸ್ವಂತ ಮನೆಯಾದ ಮೇಲೂ ನಿಲ್ಲಿಸುವ, ನನಗೆ stress ಆಗುತ್ತೆ ಅಂದ್ರು ಇವರು ಕಿವಿಗೆ ಹಾಕಿಕೊಳ್ಳಲಿಲ್ಲ...
ಈಗ ಅವರಿಗೆ ಹುಷಾರಿಲ್ಲ, ಪೂಜೆ ಮಾಡಲು ಕೂರಲು ಆಗುವುದಿಲ್ಲ.  ನಮ್ಮ building ನವರು ಗಣಪತಿ ಪೂಜೆ ಮಾಡುತ್ತಾರೆ. ಅಲ್ಲಿಗೆ ದುಡ್ಡು ಕಟ್ಟಿ, ಮನೆಯಲ್ಲಿ ಸಿಂಪಲ್ಲಾಗಿ ನನಗೆ ಬೇಕಾದ ಹಾಗೆ ಪೂಜೆ ಮಾಡಿದೆ. ಮಕ್ಕಳಿಗೆ ಹೆಚ್ಚಿನ ತಿಂಡಿ ಪದಾರ್ಥ ತಿನ್ನುವ ಮನಸ್ಸು ಇರಲಿಲ್ಲ. ಮೊದಲೆಲ್ಲ ಆಫಿಸ್ ಗೆ ಕಳಿಸ್ತಿದ್ದೆ. ಈಗ ಆಫಿಸ್ ಇಲ್ಲ....ಕೆಲವೆಲ್ಲ ಪ್ರಸಾದಗಳನ್ನು ನಮ್ಮ building ನ ಕ್ಲೀನರ್ಸ್ ಗೆ ಕೊಟ್ಟು ಬಿಟ್ಟೆ.



ನಮ್ಮ minimalist ಗಣಪತಿ ಪೂಜೆ.  It felt really good not to do anything. Instead joined our resident welfare  pooje. ಯಾವಾಗಲೂ ಎರಡು ಗಂಟೆಗೆ ಎದ್ದು, ಮನೆ ಕ್ಲೀನ್ ಮಾಡಿ, ಪೊಜೆಯ ಅಡುಗೆಗೆ ಅಣಿಯಾಗುತ್ತಿದ್ದೆ. ಹಿಂದಿನ ತಿ0ಗಳು ಶ್ರೀಕಾಂತ್ ಗೆ ಹೇಳಿಟ್ಟಿದ್ದೆ಼಼ ಈ ಸಲ ಪೂಜೆ ಇಲ್ಲ ಅಂತ...ಅವರಿಗೆ ಕೆಳಗೆ ತುಂಬಾ ಹೊತ್ತು ಕೂರಲು ಆಗುವುದಿಲ್ಲ,  ಅವರು ಹೇಗೂ ಏನೂ ತಿನ್ನಲಿಕ್ಕೆ ಇಲ್ಲ...ಮಕ್ಕಳಿಗೂ ಉಮ್ಮೆದು ಇರಲಿಲ್ಲ. ಹಾಗಾಗಿ ಬೇಸಿಕ್ ಒಂದು ಅಡಿಗೆ. ನನಗೆ ಈ ಪೂಜೆ ಎಲ್ಲದರಲ್ಲಿ ನಂಬಿಕೆ ಇಲ್ಲ,  ಇಷ್ಟವಿಲ್ಲದಿದ್ದರೂ  ಎಲ್ಲವನ್ನು ನೇಮ ನಿಷ್ಠೆಯಿಂದ ಈ ವರೆಗೆ ಮಾಡಿದ್ದೇನೆ...ಇದೆ ಲಾಸ್ಟ್...ಮುಂದಿನ ವರ್ಷ ಎಲ್ಲಾದರೂ ಟ್ರಾವೆಲ್ ಹೋಗ್ತೇನೆ 👍😊🙏🙏






No comments: