ನಮ್ಮ ಅಪಾರ್ಟ್ಮೆಂಟ್ ನ ಪಾರ್ಟಿ ಹಾಲ್ ನಲ್ಲಿ ನಮ್ಮ ರೆಸಿಡೆಂಟ್ ಒಬ್ಬರ ತಂದೆಯವರು ಬರೆದ ಪುಸ್ತಕದ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ನನಗೆ ಪ್ರತ್ಯೇಕವಾಗಿ ಆಹ್ವಾನ ವಿದ್ದರಿಂದ ನಸ್ನು ಹೋಗುವ ಪ್ಲಾನ್ ಹಾಕಿಕೊಂಡೆ. ಅಕ್ಕನಿಗೆ ಬೆಳಿಗ್ಗೆ ಕೇಕ್ ಆರ್ಡರ್ ಇಲ್ಲದ್ದರಿಂದ ಅವಳು ಬರುತ್ತೇನೆ ಎಂದಳು.
ನಾನಿವರೆಗೆ (ಹಲವು ವರ್ಷಗಳು ಸಂದಿವೆ) ವಸುಧೇಂದ್ರ, ಬಿಟ್ಟರೆ ಶ್ರೀವತ್ಸ ಜೋಶಿಯವರ ಪುಸ್ತಕ ಬಿಡುಗಡೆ ಸಮಾರಂಭ ಬಿಟ್ಟರೆ...ಇತ್ತೀಚೀನ ದಿನಗಳಲ್ಲಿ ಈ ಬಿಡುಗಡೆ ಕಾರ್ಯಕ್ರಮಕ್ಕೆ ಎದುರು ನೋಡಿದ್ದು.
ಬೆಳಿಗ್ಗೆ ಉಪ್ಪಿಟ್ಟು, ಶೀರ, ಚಟ್ನಿ, ಕಾಫಿಯಾದ ಮೇಲೆ ಕಾರ್ಯಕ್ರಮ ಶುರು.
ಬರಹಗಾರರ 8 ನೆ ಪುಸ್ತಕವಂತೆ ಇದು. ಹೃದಯಕ್ಕೆ ಸಂಬಂದಿಸಿದ ಶಸ್ತ್ರ ಚಿಕಿತ್ಸೆಗೆ ಒಳಗಾದ ಬರಹಗಾರರು ತುಂಬಾ ಹೆದರಿಕೊಂಡಾಗ, ಪೋರ್ಟಿಸ್ ಆಸ್ಪತ್ರೆಯ ಡಾ. ಸುದರ್ಶನ್ ತುಂಬಾ ಧೈರ್ಯ ನೀಡಿದ್ದರಂತೆ. ಹಾಗೆ ಇವರು ಬರಹಗಾರೆಂದು ತಿಳಿದು, ಚಿಕಿತ್ಸೆಯ ನಂತರ ಇವರ ಒಡನಾಡಿಯಾದರಂತೆ. ಡಾ ಸುದರ್ಶನ್ ಆ ದಿನದ ಮುಖ್ಯ ಅತಿಥಿ.
ಈ ವರ್ಷ ಅವರ 75 ನೆ ಹುಟ್ಟುಹಬ್ಬ, ಹಾಗೂ 50 ನೆ ವಿವಾಹ ಆಚರಿಸಿದ್ದಾರೆ..ಅದಕ್ಕೆ ಅವರಿಗೆ ಪುಟ್ಟದೊಂದು ಸನ್ಮಾನ ಕಾರ್ಯಕ್ರಮ ಅವರ ಸ್ನೇಹಿತ ರಿಂದ....
ಪುಸ್ತಕದ ಹೆಸರು 'ಮಂಥನ - 75' ಬರಹಗಾರರ ಹೆಸರು ಬಿಮಾ ಉಮೇಶ್- ಸಿಹಿ ಕಹಿ ಚಲನಚಿತ್ರದಿಂದ ಖ್ಯಾತರಾದವರು.. ಚಲಚಿತ್ರ, ಕಿರುತೆರೆ ಕಾರ್ಯಕ್ರಮಕ್ಕಾಗಿ ಬರೆದಿದ್ದಾರಂತೆ. ಕಾರ್ಯಕ್ರಮದ ನಿರೂಪಣೆ ಪುನಃ ಕಿರುತೆರೆ ಖ್ಯಾತಿಯ ..ಕೆನರಾ ಬ್ಯಾಂಕ್ ನ ಮಾಜಿ ಬಿ ಎಂ ಸಂಪತ್ ಕುಮಾರ
ಪುಸ್ತಕದ ಕುರಿತು ಮಾತನಾಡಿದರು ಬಿ. ಎಂ ಮಿಥುನ್...
ನನಾಂತೂ ಎಂಜಾಯ್ ಮಾಡಿದೆ. ,🙂❤️.
ಇಲ್ಲಿದೆ ಆಹ್ವಾನ ಪತ್ರಿ



No comments:
Post a Comment