February 11, 2025

Annual Day 2025

ಪ್ರತಿ ವರ್ಷ ಜನವರಿ 26 ರಂದು ನಮ್ಮ ಬ್ಯಾಂಕ್ ಆಫಿಸರ್ಸ್ ಕಾಲೋನಿ ಯವರು annual ಡೇ ಆಚರಿಸುತ್ತೇವೆ. ಅದಕ್ಕಿಂತ ಮುಂಚೆ ವಿವಿಧ ಕ್ರೀಡೆ, ಕಲೆ , ಪುಟ್ಟ ಮಕ್ಕಳಿಗೆ ಆಟದ ಸ್ಪರ್ಧೆ ಎಲ್ಲ ನಡೆದು ಬಹುಮಾನವನ್ನು 26 ರಂದು ಕೊಡುತ್ತಾರೆ. ಅಪಾರ್ಟ್ಮೆಂಟ್ ನವರದ್ದು ಸ್ಟಾಲ್ ಗಳನ್ನು ಇಡುತ್ತಾರೆ..ತಿಂಡಿ, ಬಟ್ಟೆ-ಬರೆ ಮುಂತಾದ್ದು. ಅಕ್ಕ ಈ event ಗೆ ಯಾವಾಗಲೂ ಕಾತುರದಿಂದ ಎದುರು ನೋಡುತ್ತಾಳೆ. ಈ ವರ್ಷ ಕೇಕ್ ಜತೆ ಗೇಮ್ ಸ್ಟಾಲ್ ಕೂಡ ಹಾಕಿದ್ದಳು. ನಾನು ಕೇಕ್ ಮಾರುವ ಬಗ್ಗೆ ನಿಗಾ ವಹಿಸಿದೆ. ಒಂದೇ ಸಲಕ್ಕೆ ಮಕ್ಕಳು ದೊಡ್ಡವರು ನಮ್ಮ ಸ್ಟಾಲ್ ಗೆ ಲಗ್ಗೆ ಇಟ್ಟರು...ನಿಹಾಗೆ ಬರಲಿಕ್ಕೆ ಆಗಲಿಲ್ಲ, ಶ್ರೀಕಾಂತ್ ಆಫಿಸ್ ನಲ್ಲಿನ ಯಾವುದೋ crises ಬಗ್ಗೆ ಗಮನ ಇದ್ರಿಂದ ನಂಗೆ ಸ್ಟಾಲ್ ನಿಭಾಯಿಸಲು ಸ್ವಲ್ಪ ಕಷ್ಟ ಆಯ್ತು. ಇದರ ಮಧ್ಯೆ ನನ್ನ ಮೊಬೈಲ್ ಕಾಣದೆ ಸ್ವಲ್ಪ ಹೈರಾಣಾದೆ  .ಕೊನೆಗೆ ಅದು ಮನೆಯಲ್ಲೇ ಇತ್ತು. ಅಕ್ಕ ಕೆಲ ಕಪ್ ಕೇಕ್ ಮೇಲೆ ಚೆಂದದ ಚಿಟ್ಟೆ ಅಂಟಿಸಿದ್ದಳು. ಅವೆಲ್ಲ ಖರ್ಚಾದ ಮೇಲೆ ಇಬ್ಬರು ಮಕ್ಕಳಿಗೆ ಚಿಟ್ಟೆ ಇದ್ದ ಕೇಕ್ ಬೇಕೆಂದು ತುಂಬಾ ರಂಪ ಮಾಡಿ ಅಳಲಿಕ್ಕೆ ಶುರು ಮಾಡಿದರು. ಅಕ್ಕನ ಆಟದ ಸ್ಟಾಲ್ ಚಿತ್ರ ತೆಗೆಲಿಕ್ಕೂ ಪುರುಸೊತ್ತಾಗಲಿಲ್ಲ. ತುಂಬಾ ಅಡ್ಡಿಕ್ಟಿವ್ ಆಗಿತ್ತು. 

ಅಕ್ಕನ ಮೆಕ್ಸಿಕನ್ ರೈಸ್ ಕೂಡ ರುಚಿಯಾಗಿದೆ ಅಂತ ಪುನಃ ಪುನಃ ಬಂದು ತಿಂದವರು ಹೆಚ್ಚು. ಹೊಸ ರುಚಿ ಈ ಸಲದ್ದು ಮಿಲ್ಲೆಟ್ ಮಂಡಕ್ಕಿ ಬಾರ್...ತುಪ್ಪ ಎಣ್ಣೆ/ಜಿಡ್ಡು ಹಾಕದ ಬಾರ್ ತುಂಬಾ ರುಚಿ ಅನಿಸ್ತು ನನಗೆ. ಉಳಿದದ್ದನ್ನು ಸ್ಯಾಂಪಲ್ ಆಗಿ ಆಫಿಸ್ ಗೆ ಕಳಿಸಿದೆ. ಎಲ್ಲರೂ ರುಚಿಯಾಗಿದೆ ಅಂದ್ರು ಅಂತ ಶ್ರೀಕಾಂತ್ ತಿಳಿಸಿದರು. 🙏❤️

ಕೇಕ್ ಗಳನ್ನು ಕೆಳಗಿನ ಲಿಂಕ್ ನಲ್ಲಿ ಕಾಣಬಹುದು 🙏🙏❤️

https://youtube.com/shorts/mze3SimLZME?si=i8RoobiqrqGx3u5R

pc : anagha Bhat

No comments: