ಶ್ರೀವತ್ಸ ಜೋಶಿಯವರ ಪರಿಚಯ ಹಲವಾರು ವರ್ಷ ಹಿಂದಿನದ್ದು. ಹೇಳಬೇಕಂದ್ರೆ ಅವರು ನನ್ನ very first male friend*. ಅದೇನಾಯ್ತು ಅಂದ್ರೆ ...ಅರೇ ಫ್ಲ್ಯಾಶ್ ಬ್ಯಾಕ್ ಇಲ್ಲದೆ ನನ್ನ ಪೋಸ್ಟ್ ಯಾವತ್ತಾದ್ರೂ ಮುಂದೆ ಹೋಗಿದ್ಯ್ಯಾ?? ಹೇಳಿ ಕೇಳಿ ಇದು ನೆನಪಿನ ಸಂಚಿ. :-)
ನಾವು ಹೊಸ ಮನೆಗೆ ಶಿಫ್ಟ್ ಆಗಿದ್ವಿ. ಶಿಫ್ಟ್ ಮಾಡಿದ್ದ ದಿನದ ರಾತ್ರಿನೇ ಶ್ರೀಕಾಂತ 15 ದಿವಸಗಳ ಮಟ್ಟಿಗೆ ಓಡಿಶಾ ಗೆ ಆಫಿಸ್ ಟೂರ್ ಮೇಲೆ ಹೊರಡಬೇಕಾಯ್ತು. ನಾ ಒಬ್ಬಳೆ ಮನೆಯ ಸಾಮಾನುಗಳನ್ನು ಜೋಡಿಸ್ತಾ ಇದ್ದೆ. ಸುಮಾರು ರಾತ್ರಿ ತನಕ ಈ ಕೆಲಸ ಮಾಡಿದೆ. ಮಕ್ಕಳಾಗಲೇ ನಿದ್ದೆ ಹೋಗಿದ್ರು. ಆಗ ಮಡಚಿದ ಸ್ಥಿತಿಯಲ್ಲಿ ನನಗೆ ಸಿಕ್ಕಿದ್ದು ಒಂದು ಹಳೆಯ ವಿಜಯಕರ್ನಾಟಕ ಪೇಪರ್. ಮಡಚಿದ ಒಂದು ಬದಿಯಲ್ಲಿ ಇತ್ತು ಶ್ರೀವತ್ಸ ಜೋಶಿಯವರ ಕಾಲಂ. ಶ್ರೀಕಾಂತ ನನಗೆ ಯಾವತ್ತೋ ಒಂದು ದಿನ ಅದನ್ನು ಓದು ಅಂತ ಕೊಟ್ಟಿದ್ದು ನಾನು ಆ ಮೇಲೆ ಓದಿದ್ರಾಯ್ತು. ಕನ್ನಡದಲ್ಲಿ ಏನು ಓದೋದು ಅಂತ ಒಂದು ಉಢಾಫೆ ಕೂಡ ಸೇರಿದ್ದಿರಬಹುದು. ಮನೆಗೆ ತಲುಪಿದ ನಂತರ ಮಾಡಿದ ಮೊದಲ ಕೆಲಸ ನಾನು ಕಂಪ್ಯೂಟರ್ ಸಿಸ್ಟಮ್ ಅನ್ನು ಎಸೆಂಬಲ್ ಮಾಡಿದ್ದು. ಮಾರನೇ ದಿನವೇ BSNL ನವರು ಬಂದು ಫೋನ್ ಹಾಗೂ ಇಂಟರ್ ನೆಟ್ ಕನೆಕ್ಷನ್ ಕೊಟ್ಟದ್ದು ನನಗೆ ಅತ್ಯಂತ ಆಶ್ಚರ್ಯಕರ ಸಂಗತಿ. ನನಗಂತೂ ಅವರನ್ನು ಎಷ್ಟು ಹೊಗಳಿದರೂ ಸಾಲದು. ಈ ಹನ್ನೊಂದು ವರ್ಷಗಳಲ್ಲಿ ಅವರಿಂದ ನಮಗೆ ಯಾವುದೇ ತೊಂದರೆ ಆಗಿಲ್ಲ. ರಿಪೇರಿ ಎಲ್ಲ ಇದ್ರೂ ಕಂಪ್ಲೈನ್ ಲಾಜ್ ಮಾಡಿದ ದಿನಾನೆ ಸರಿ ಮಾಡಿ ಹೋಗ್ತಾರೆ. ನಾನಂತು BSNL ನವರ advertisement ಯಾವಾಗ್ಲೂ ಮಾಡ್ತಿರ್ತೀನಿ.
ಶ್ರೀವತ್ಸ ಜೋಶಿಯವರ ಅಂಕಣದ ತಲೆಬರಹ 'Monday busy ಇಲ್ಲ, ಮಂಡೆ ಬಿಸಿಯೂ ಇಲ್ಲ' ಅಂತ ಇತ್ತು. ಅದನ್ನು ಓದಿ ಅವರಿಗೊಂದು ಮೈಲ್ ಕಳಿಸಿದೆ. ನನಗೆ 'ಮಂಡೆ'/monday ಅನ್ನುವ ಪದದಿಂದ ಆ ಲೇಖನ atrract ಆಗಿದ್ದು. ಯಾಕೆಂದರೆ ದಕ್ಷಿಣ ಕನ್ನಡ ಜಿಲ್ಲೆ ಯಲ್ಲಿ ನಾವು ಕೆಲವು ವರ್ಷ ಇದ್ದೆವು ಅಲ್ಲಿ ತಲೆ ಗೆ ಮಂಡೆ ಅಂತ ಹೆಚ್ಚು ಬಳಸುತ್ತಾರೆ, 'ಮಂಡೆ ಸಮಾ ಇಜ್ಜಿಯಾ' ಮಂಡೆ ಬೆಚ್ಚ ಮಾರಾಯ್ರೆ etc etc...ಆ ಲೇಖನದಲ್ಲಿ perfect blend of ಹ್ಯೂಮರ್, ಇನ್ಫೋ ಮುಂತಾದವು ಇದ್ದವು. ಅಲ್ಲೇ ಕೆಳಗೆ ಕೊಟ್ಟಿದ್ದ ಇ ಮೈಲ್ ಐಡಿಗೆ ಒಂದು ಮೈಲ್ ಕಳಿಸಿದೆ. ಏನಾಶ್ಚರ್ಯ ಐದೇ ನಿಮಿಷದಲ್ಲಿ ಉತ್ತರ ಹಾಜಿರ್. ಆಮೇಲೆ ಸಿಕ್ಕಾಪಟ್ಟೆ ಇಷ್ಟ ಆಗಿದ್ದು ' ವೃಷಭ ವಿಸರ್ಜಿತ' (ಬುಲ್ಲ್ ಶಿಟ್) ಎಂಬ ಟಾಪಿಕ್ ಓದಿ ಅಂತೂ, ಸಿಂಪಲ್ಲಾಗಿ ಇಷ್ಟೊಂದು ಯಾರಾದರೂ ನಗಿಸಬಹುದಾ ಅಂತ ಎಣಿಸಿ ಅವರಿಗೆ ಉದ್ದುದ್ದ ಮೈಲ್ ಕಳಿಸಲು ಶುರು. ಆಗ ದ್ಯಾಟ್ಸ್ ಕನ್ನಡ ದಲ್ಲಿ ಪ್ರತೀ ಮಂಗಳವಾರ ಅದು ಮೊದಲಿಗೆ ಬರುವುದು ಎಂದು ಎಸ್ ಜೆ ಹೇಳಿದರು. ಸರಿ ಮಂಗಳವಾರ ಮಧ್ಯಾಹ್ನ ನನ್ನ ಆಫಿಸ್ ನ್ ಕೆಲಸ ಮಾಡ್ತಾ thatskannada ದ ಕೊಂಡಿ ಓಪನ್ ಇರ್ತಿತ್ತು. ಅವರ ಅಂಕಣ ಬಿಸಿ ಬಿಸಿಯಿದ್ದಾಗಲೇ ಓದಿ ಅವರೊಂದಿಗೆ ಚ್ಯಾಟ್ ಮಾಡ್ತಿದ್ದೆ. ಅವರಿಂದ ಕಲಿತದ್ದು ಕನ್ನಡವೆಷ್ಟೋ' ನನಗೆ ಗೊತ್ತಾಗದ ಪದಗಳೇನಾದರೂ ಇದ್ದಲ್ಲಿ ಅವರಿಗೆ ತಲೆ ತಿನ್ನುತ್ತಿದ್ದೆ. ಚ್ಯಾಟ್ ಮಾಡೋದಕ್ಕೂ ಕಲಿಸಿದ್ದು ಅವರೇ..:-) ಹೇಳಬೇಕಾದದನ್ನು ಅಚ್ಚುಕಟ್ಟಾಗಿ, ನಮ್ಮ ಮೆದುಳಿಗೆ ಹೆಚ್ಚು ಪ್ರಯಾಸವಾಗದಂತೆ ಬರಹದ ಮೂಲಕ ನಮಗೆ ಉಣಬಡಿಸುತ್ತಾರೆ. ಅದಕ್ಕೆ ಅವರ ಅಂಕಣ ಅಷ್ಟು ಫೇಮಸ್. ಅವರೇ ಹೇಳುವ ಹಾಗೆ infotainmentನಿಂದ ಭರಪೂರ. ಇತ್ತೀಚಿಗಿನ ಕೆಲ ತಿಂಗಳಿಂದ ಬರಹಕ್ಕೆ ಬ್ರೇಕ್ ಅಂದರೂ ಬೇರೆಬೇರೆ ವೃತ್ತಪತ್ರಿಕೆಗಳಲ್ಲಿ ಕಾಣಿಸಿಕೊಂಡ stray ಬರಹಗಳನ್ನು ನಮ್ಮ ಗುಂಪಿಗೆ ಇ-ಮೈಲ್ ಮೂಲಕ ಕಳುಹಿಸುತ್ತಿರುತ್ತಾರೆ.
ಇಲ್ಲಿಗೆ flash back ಎಂಡ್
ಒಟ್ಟಾರೆ ನಮ್ಮದೊಂದು special ಆತ್ಮೀಯ ಬಂಧ. ಸೀರಿಯಸ್ ಆಗಿರುತ್ತಿದ್ದ ನಾನು ನಗಲು ಕಲಿತದ್ದು ಅವರಿಂದ. ನಮ್ಮ ಮನೆಯಲ್ಲಿ ಬೇಕಾದರೆ proof ಕೇಳ ಬಹುದು. ಕನ್ನಡ ದ ಪನ್ ಗಳನ್ನು ಕಲಿತಿದ್ದು ಅವರಿಂದ.
ಅವರಿಂದಲೇ ಚುಲ್ ಬುಲಿ ಜ್ಯೋತಿ ಕಡ್ಲಾಡಿ, ಸಂಧ್ಯಾ ಅವರ ಪರಿಚಯ ಆಗಿದ್ದು. ವೇದ ಮತ್ತು ನಾಗಮಣಿ ನನಗೆ ನನ್ನ ಬ್ಲಾಗ್ ಮೂಲಕ ಪರಿಚಯ ಇತ್ತಿಚಿನ ಎರಡು ವರ್ಷದ ಪರಿಚಯ ಆದ್ರೂ ಹಳೇಪರಿಚಯದಂತೆ ನಮ್ಮೊಂದಿಗೆ ಬೆರೆತು ಹೋಗಿದ್ದಾರೆ. ಒಂದಿನ ಹೇಗೋ ಶ್ರೀವತ್ಸ್ ಜೋಶಿಯವರ ಬರಹದ ಬಗ್ಗೆ ಮಾತು ಬಂದಾಗ ನಮ್ಮೆಲ್ಲರನೂ ಲಿಂಕಿಸುವ ಮೈಲ್ ಕಳುಹಿಸಿ ಹೀಗೆ ಆಯ್ತು ನಾವು ಪಂಚ ನಾರಿಯರು ಮತ್ತು ಶ್ರೀ (ಕೃಷ್ಣ)ವತ್ಸ್ ಜೋಶಿಯವರ ಗ್ಯಾಂಗ್. ನಾವು ದಿನಕ್ಕೆ ಎಷ್ತೊಂದು ಮೈಲ್ ಗಳನ್ನು ವಿನಿಮಯ ಮಾಡಿಕೊಳ್ಳುತ್ತೇವೆ. ಅದರಲ್ಲೂ ನಾನು ಆಶ್ಚರ್ಯ ಪಡುವ ಸಂಗತಿಯೆಂದರೆ ಎಸ್ ಜೆ ಯವರಿಗೆ ಸಾವಿರಾರು ಮಿತ್ರರು. ಎಲ್ಲರ ಜತೆಯಲ್ಲೂ ಸಂಪರ್ಕದಲ್ಲಿರುತ್ತಾರೆ. ಅವರ ಪುಸ್ತಕಗಳ ಬಿಡುಗಡೆ ಎಂದರೆ ಹಾಲ್ ಕಿಕ್ಕಿರಿದು ತುಂಬಿರುತ್ತದೆ. ಸಾಧ್ಯವಾದಷ್ಟು ಎಲ್ಲರ ಬಳಿಯಲ್ಲು ಮಾತಾಡುವ ಪರಿಚಯ ಮಾಡಿಕೊಳ್ಳುವ ಪರಿಪಾಠ ಇಟ್ಟುಕೊಂಡಿದ್ದಾರೆ. ಇನ್ನು face book ನಲ್ಲಂತೂ 5000 ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಇವರಿಗೆ ಫ್ರೆಂಡ್ಸ್ ಇದ್ದಾರೆ. ಆದರೂ ಈ ನಮ್ಮ ಗ್ಯಾಂಗ್ ಗೋಸ್ಕರ ಯಾವತ್ತೂ ಅವರ ಬಳಿ ಸಮಯ ಇದೆ.
ಪ್ರತೀ ಸಲ ಭಾರತಕ್ಕೆ ಬಂದಾಗ ನಮ್ಮ ಭೇಟಿ ಹೊರಗಡೆ. ಎಲ್ಲರಿಗೂ convenient ಅನಿಸುವ ಜಾಗದಲ್ಲಿ ಹೆಚ್ಚಾಗಿ ಅಂಕಿತ ಪುಸ್ತಕ ಬಿಟ್ಟರೆ ಅವರ ಪುಸ್ತಕ ಬಿಡುಗಡೆ ಸಮಾರಂಬದಲ್ಲಿ ಆಗುತ್ತಿತ್ತು. ಹಿಂದಿನ ವರ್ಷ ನಮ್ಮ ಮನೆಗೆ ಊಟಕ್ಕೆ ಕರೆದಿದ್ದೆ, ಆದರೆ ನಮ್ಮ ಭೈಯ್ಯನವರು ತೀರಿಕೊಂಡಿದ್ದರಿಂದ ಅದು ರದ್ದಾಯಿತು. ಈ ವರ್ಷ ನಾವು ವೇದಾ ಅವರ ಮನೆಯಲ್ಲಿ ಊಟಕ್ಕೆಂದು ಸೇರಿದ್ದು. ಇದಕ್ಕೊಂದು ಆತ್ಮೀಯ ವಾತಾವರಣ ಒದಗಿಸಿದ್ದು ವೇದಾ ಅವರ ಮನೆ. (your home has great positive vibes, Veda). ಆರಾಮಾಗಿ ಊಟ, ಹರಟೆ, ಚರ್ಚೆ,what makes SJ tick, ಅಲ್ಲೊಂದು ಮಿನಿ ಸಂಗೀತದ ಬೈಠಕ್ಕ್. ನನಗಂತೂ ಅಲ್ಲಿಂದ ಹೊರಡಲೂ ಮನಸ್ಸು ಬರಲಿಲ್ಲ. ಆದರೆ ರಾತ್ರಿ ಆಫಿಸ್ ನವರು ಹಾಗೂ ಕುಟುಂಬದವರೊಂದಿಗೆ 'ಮಲೆಗಳಲ್ಲಿ ಮದುಮಗಳು' ನಾಟಕ ನೋಡಲು ಹೋಗಬೇಕಾದ್ದರಿಂದ ಅಲ್ಲಿಂದ ಹೊರಟು ಬರಬೇಕಾಯಿತು. ಇದಕ್ಕೆ ತಕ್ಕ ಸಾಥ್ ನೀಡಿದ್ದು ಸಹನಾ ಜೋಶಿ, ಎಸ್ ಜೆ ಯವರ ಮಡದಿ.
ಯು ಎಸ್ ನಲ್ಲಿ ಪ್ರತಿಷ್ಠಿತ ಕಂಪನಿಯ ಜವಾಬ್ದಾರಿಯುತ ಹುದ್ದೆಯಲ್ಲಿದ್ದರೂ ಯಾವುದೇ ಅಹಂಭಾವವಿಲ್ಲದ ಸಿಂಪಲ್, down to earth ವ್ಯಕ್ತಿತ್ವ.
ಜ್ಯೋತಿಯ ಹುಟ್ಟಿದ ಹಬ್ಬ ಆ ದಿನ. ಶ್ರೀವತ್ಸ ಜೋಶಿ 'ಪಂಕಜ ನೇತ್ರಿ' ಹಾಡನ್ನು ಸೊಗಸಾಗಿ ಹಾಡ್ತಾ, ಜ್ಯೋತಿ ಅವರಿಗೆ ಸಾಥ್ ನೀಡ್ತಾ ಇದ್ರೆ ನಾನಂತೂ ಕೇಳಿರದ ಈ ಚಂದದ ಹಾಡನ್ನು ಕೇಳಿ clean blowled.. hats off SJ...
ಸಂಭ್ರಮಕ್ಕೆ ಇನ್ನೊಂದು ಕಾರಣವೆಂದರೆ ಡಾ ನಾಗಮಣಿ ಮಧ್ಯಪ್ರದೇಶದಿಂದ ನಮ್ಮೊಂದಿಗಿದ್ದದ್ದು. soft spoken ನಾಗಮಣಿ ಒಳ್ಳೆಯ ಡಾಕ್ಟರ್ ಮಾತ್ರವಲ್ಲ ಒಳ್ಳೆಯ ಬರಹಗಾರರೂ ಕೂಡ. ಬಹುಶ: ಮಿದುಮಾತಿನಿಂದ ತಮ್ಮ ಪೇಶೆಂಟ್ಸ್ ಗಳ ಕಾಯಿಲೆ ಅರ್ಧ ವಾಸಿಮಾಡುತ್ತಾರೆ ಅನ್ನಿಸುತ್ತೆ. ಒಳ್ಳೆ ಸಂಗೀತ ಉಲಿದಂತೆ ಚೆಂದದ ಅಳೆದು ಸುರಿದು ತೂಕದ ಮಾತಾಡುವಾಗ ಕೇಳುತ್ತಲೇ ಇರೋಣ ಅನ್ನಿಸುತ್ತೆ.
ಇನ್ನು ಜ್ಯೋತಿ..ನಿಜಕ್ಕ್ಕೂ ಬೆಳಕು. ತಟ್ಟನೆ ರೂಮ್ ಎಲ್ಲ ಬೆಳಕಾದ ಅನುಭವ. ನಮ್ಮ ಗ್ಯಾಂಗ್ ನ bubbly. ಆಹ್ಲಾದದಿಂದ
ಚಟುವಟಿಕೆಯಿಂದ ಚುರುಕುತನದಿಂದ ಕೂಡಿದ ವ್ಯಕ್ತಿತ್ವ, ಉಲ್ಲಾಸದ ಬುಗ್ಗೆ, ಲವಲವಿಕೆಯ ಜ್ಯೋ. ಎಷ್ಟು superlatives ಬಳಸಿದ್ರೂ ಅದು ಕಡಿಮೆನೆ. ಒಳ್ಳೆಯ ಹಾಡುಗಾರ್ತಿ, ಮಾತ್ರವಲ್ಲ ಅವರ ಆಫಿಸ್ ನ magazine ಕೂಡ ನಡೆಸಿದವರು. ಆಗಾಗ ಅವರ ಕಿರು ಬರಹ ಪುರುವಣಿಗಳಲ್ಲಿ ಕಾಣಸಿಗುತ್ತವೆ. ಸ್ಪಟಿಕ ದಂತ ಮನಸ್ಸು. ಅನಿಸಿದ್ದನ್ನು ತಟ್ಟಂತ ಏನೂ ಮುಚ್ಚುಮರೆಯಿಲ್ಲದೆ ನೇರ ನುಡಿ. ಇಂತಹ ವ್ಯಕ್ತಿತ್ವದವರು ಅತೀ ವಿರಳವೆಂದೇ ಹೇಳಬಹುದು.
ವೇದ: ಬ್ಲಾಗ್ ನಲ್ಲಿ ನಾಟಿ naughty ಕಮೆಂಟ್ಸ್ ನಿಂದ ನನ್ನ ಗಮನ ಸೆಳೆದವರು. ಅತ್ಯಲ್ಪ ಸಮಯದಲ್ಲಿ ಚುಟುಕುಗಳನ್ನು ತ ಯಾರಿಸುವುದು, ನಮಗೆಲ್ಲರಿಗೂ ನಿಕ್ ನೇಮಗಳನ್ನು ಇಡುವುದರಲ್ಲಿ ಎತ್ತಿದ ಕೈ. ಆಫಿಸ್ ನ ಕೆಲಸ ಮ್ಯಾನೇಜ್ ಮಾಡ್ತಾನೆ ನಮ್ಮ ಮೈಲ್ ಗಳಿಗೆಲ್ಲ ಇಂಟರೆಸ್ಟಿಂಗ್ funny punny ರಿಪ್ಲೈ ಕೊಡುವವರು.
ವೇದಾ ಅವರ ಮನೆಯವರದ್ದೆಲ್ಲ ಪರಿಚಯ ಆಗಿದ್ದು ನಿಜಕ್ಕೂ ಸಂತೋಷ. ನಮ್ಮೆಲ್ಲ ಮಾತು ಕತೆಗಳಲ್ಲಿ ಅವರ ತಾಯಿ ಕೂಡ ಸಕ್ರೀಯವಾಗಿ ಭಾಗವಹಿಸಿ ಅವರದ್ದೆ ಜೀವನಾನುಭವದ ಇಂಟರೆಸ್ಟಿಂಗ್ episodes ಗಳನ್ನು ಶೇರ್ ಮಾಡಿಕೊಂಡರು.
ಮಿಸ್ ಮಾಡಿಕೊಂಡಿದ್ದು ಸಂಧ್ಯಾ ಅವರನ್ನು. ಅವರಿಗೆ ಹೈದರಾಬಾದಿನಿಂದ ಬರಲಾಗಲಿಲ್ಲ. ಆದರೂ ವೇದ ಮನೆಯಿಂದಲೇ ಅವರೊಂದಿಗೆ ಫೋನ್ ನಲ್ಲಿ ಮಾತುಕತೆ.
ನಮ್ಮ ಈ ಗ್ಯಾಂಗ್ ಯಾವಾಗಲೂ ಹೀಗೇ ಚಟ್ ಪಟಾ ಆಗಿರಲಿ ಎಂದು ಹಾರೈಸುತ್ತ... I am maha proud to have you all as my friends...ನಮ್ಮನೆಲ್ಲ ಒಂದು ಚಂದದ ಬಂಧನದಲ್ಲಿ ಪೋಣಿಸಿದ email ಗೂ ಒಂದು ದೊಡ್ಡ ಥ್ಯಾಂಕ್ಸ್.
ಇದು ನನ್ನ 250 ನೇ ಪೋಸ್ಟ್ ಅಂತ ಹೇಳಲೂ ನಿಜಕ್ಕೂ ಖುಶಿಯಾಗುತ್ತಿದ್ದೆ. thanks to all (there are so many) who made it possible
love
* my very first male friend: by default ಶ್ರೀಕಾಂತ ಫ್ರೆಂಡ್ಸ್ ಎಲ್ಲ ನನ್ನ ಸ್ನೇಹಿತರು. ಶ್ರೀವತ್ಸ ಜೋಶಿಯವರ ಸ್ನೇಹ ನಾನೇ initiative ತೆಗೊಂಡು ಮಾಡಿದ್ದು ಅಂತ ಅಷ್ಟೆ...
:-)
ಇಲ್ಲಿಗೆ flash back ಎಂಡ್
ಒಟ್ಟಾರೆ ನಮ್ಮದೊಂದು special ಆತ್ಮೀಯ ಬಂಧ. ಸೀರಿಯಸ್ ಆಗಿರುತ್ತಿದ್ದ ನಾನು ನಗಲು ಕಲಿತದ್ದು ಅವರಿಂದ. ನಮ್ಮ ಮನೆಯಲ್ಲಿ ಬೇಕಾದರೆ proof ಕೇಳ ಬಹುದು. ಕನ್ನಡ ದ ಪನ್ ಗಳನ್ನು ಕಲಿತಿದ್ದು ಅವರಿಂದ.
ಅವರಿಂದಲೇ ಚುಲ್ ಬುಲಿ ಜ್ಯೋತಿ ಕಡ್ಲಾಡಿ, ಸಂಧ್ಯಾ ಅವರ ಪರಿಚಯ ಆಗಿದ್ದು. ವೇದ ಮತ್ತು ನಾಗಮಣಿ ನನಗೆ ನನ್ನ ಬ್ಲಾಗ್ ಮೂಲಕ ಪರಿಚಯ ಇತ್ತಿಚಿನ ಎರಡು ವರ್ಷದ ಪರಿಚಯ ಆದ್ರೂ ಹಳೇಪರಿಚಯದಂತೆ ನಮ್ಮೊಂದಿಗೆ ಬೆರೆತು ಹೋಗಿದ್ದಾರೆ. ಒಂದಿನ ಹೇಗೋ ಶ್ರೀವತ್ಸ್ ಜೋಶಿಯವರ ಬರಹದ ಬಗ್ಗೆ ಮಾತು ಬಂದಾಗ ನಮ್ಮೆಲ್ಲರನೂ ಲಿಂಕಿಸುವ ಮೈಲ್ ಕಳುಹಿಸಿ ಹೀಗೆ ಆಯ್ತು ನಾವು ಪಂಚ ನಾರಿಯರು ಮತ್ತು ಶ್ರೀ (ಕೃಷ್ಣ)ವತ್ಸ್ ಜೋಶಿಯವರ ಗ್ಯಾಂಗ್. ನಾವು ದಿನಕ್ಕೆ ಎಷ್ತೊಂದು ಮೈಲ್ ಗಳನ್ನು ವಿನಿಮಯ ಮಾಡಿಕೊಳ್ಳುತ್ತೇವೆ. ಅದರಲ್ಲೂ ನಾನು ಆಶ್ಚರ್ಯ ಪಡುವ ಸಂಗತಿಯೆಂದರೆ ಎಸ್ ಜೆ ಯವರಿಗೆ ಸಾವಿರಾರು ಮಿತ್ರರು. ಎಲ್ಲರ ಜತೆಯಲ್ಲೂ ಸಂಪರ್ಕದಲ್ಲಿರುತ್ತಾರೆ. ಅವರ ಪುಸ್ತಕಗಳ ಬಿಡುಗಡೆ ಎಂದರೆ ಹಾಲ್ ಕಿಕ್ಕಿರಿದು ತುಂಬಿರುತ್ತದೆ. ಸಾಧ್ಯವಾದಷ್ಟು ಎಲ್ಲರ ಬಳಿಯಲ್ಲು ಮಾತಾಡುವ ಪರಿಚಯ ಮಾಡಿಕೊಳ್ಳುವ ಪರಿಪಾಠ ಇಟ್ಟುಕೊಂಡಿದ್ದಾರೆ. ಇನ್ನು face book ನಲ್ಲಂತೂ 5000 ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಇವರಿಗೆ ಫ್ರೆಂಡ್ಸ್ ಇದ್ದಾರೆ. ಆದರೂ ಈ ನಮ್ಮ ಗ್ಯಾಂಗ್ ಗೋಸ್ಕರ ಯಾವತ್ತೂ ಅವರ ಬಳಿ ಸಮಯ ಇದೆ.
ಪ್ರತೀ ಸಲ ಭಾರತಕ್ಕೆ ಬಂದಾಗ ನಮ್ಮ ಭೇಟಿ ಹೊರಗಡೆ. ಎಲ್ಲರಿಗೂ convenient ಅನಿಸುವ ಜಾಗದಲ್ಲಿ ಹೆಚ್ಚಾಗಿ ಅಂಕಿತ ಪುಸ್ತಕ ಬಿಟ್ಟರೆ ಅವರ ಪುಸ್ತಕ ಬಿಡುಗಡೆ ಸಮಾರಂಬದಲ್ಲಿ ಆಗುತ್ತಿತ್ತು. ಹಿಂದಿನ ವರ್ಷ ನಮ್ಮ ಮನೆಗೆ ಊಟಕ್ಕೆ ಕರೆದಿದ್ದೆ, ಆದರೆ ನಮ್ಮ ಭೈಯ್ಯನವರು ತೀರಿಕೊಂಡಿದ್ದರಿಂದ ಅದು ರದ್ದಾಯಿತು. ಈ ವರ್ಷ ನಾವು ವೇದಾ ಅವರ ಮನೆಯಲ್ಲಿ ಊಟಕ್ಕೆಂದು ಸೇರಿದ್ದು. ಇದಕ್ಕೊಂದು ಆತ್ಮೀಯ ವಾತಾವರಣ ಒದಗಿಸಿದ್ದು ವೇದಾ ಅವರ ಮನೆ. (your home has great positive vibes, Veda). ಆರಾಮಾಗಿ ಊಟ, ಹರಟೆ, ಚರ್ಚೆ,what makes SJ tick, ಅಲ್ಲೊಂದು ಮಿನಿ ಸಂಗೀತದ ಬೈಠಕ್ಕ್. ನನಗಂತೂ ಅಲ್ಲಿಂದ ಹೊರಡಲೂ ಮನಸ್ಸು ಬರಲಿಲ್ಲ. ಆದರೆ ರಾತ್ರಿ ಆಫಿಸ್ ನವರು ಹಾಗೂ ಕುಟುಂಬದವರೊಂದಿಗೆ 'ಮಲೆಗಳಲ್ಲಿ ಮದುಮಗಳು' ನಾಟಕ ನೋಡಲು ಹೋಗಬೇಕಾದ್ದರಿಂದ ಅಲ್ಲಿಂದ ಹೊರಟು ಬರಬೇಕಾಯಿತು. ಇದಕ್ಕೆ ತಕ್ಕ ಸಾಥ್ ನೀಡಿದ್ದು ಸಹನಾ ಜೋಶಿ, ಎಸ್ ಜೆ ಯವರ ಮಡದಿ.
SJ singing majhe mahera Pandhari a popular marathi abhang
ಯು ಎಸ್ ನಲ್ಲಿ ಪ್ರತಿಷ್ಠಿತ ಕಂಪನಿಯ ಜವಾಬ್ದಾರಿಯುತ ಹುದ್ದೆಯಲ್ಲಿದ್ದರೂ ಯಾವುದೇ ಅಹಂಭಾವವಿಲ್ಲದ ಸಿಂಪಲ್, down to earth ವ್ಯಕ್ತಿತ್ವ.
ಜ್ಯೋತಿಯ ಹುಟ್ಟಿದ ಹಬ್ಬ ಆ ದಿನ. ಶ್ರೀವತ್ಸ ಜೋಶಿ 'ಪಂಕಜ ನೇತ್ರಿ' ಹಾಡನ್ನು ಸೊಗಸಾಗಿ ಹಾಡ್ತಾ, ಜ್ಯೋತಿ ಅವರಿಗೆ ಸಾಥ್ ನೀಡ್ತಾ ಇದ್ರೆ ನಾನಂತೂ ಕೇಳಿರದ ಈ ಚಂದದ ಹಾಡನ್ನು ಕೇಳಿ clean blowled.. hats off SJ...
ಸಂಭ್ರಮಕ್ಕೆ ಇನ್ನೊಂದು ಕಾರಣವೆಂದರೆ ಡಾ ನಾಗಮಣಿ ಮಧ್ಯಪ್ರದೇಶದಿಂದ ನಮ್ಮೊಂದಿಗಿದ್ದದ್ದು. soft spoken ನಾಗಮಣಿ ಒಳ್ಳೆಯ ಡಾಕ್ಟರ್ ಮಾತ್ರವಲ್ಲ ಒಳ್ಳೆಯ ಬರಹಗಾರರೂ ಕೂಡ. ಬಹುಶ: ಮಿದುಮಾತಿನಿಂದ ತಮ್ಮ ಪೇಶೆಂಟ್ಸ್ ಗಳ ಕಾಯಿಲೆ ಅರ್ಧ ವಾಸಿಮಾಡುತ್ತಾರೆ ಅನ್ನಿಸುತ್ತೆ. ಒಳ್ಳೆ ಸಂಗೀತ ಉಲಿದಂತೆ ಚೆಂದದ ಅಳೆದು ಸುರಿದು ತೂಕದ ಮಾತಾಡುವಾಗ ಕೇಳುತ್ತಲೇ ಇರೋಣ ಅನ್ನಿಸುತ್ತೆ.
'ಅಮ್ಮಾ ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನುsss'- ಸುಶ್ರಾವ್ಯವಾಗಿ ಹಾಡಿದ ನಮ್ಮೆಲ್ಲರ ಪ್ರೀತಿಯ ಜ್ಯೋ
ಇನ್ನು ಜ್ಯೋತಿ..ನಿಜಕ್ಕ್ಕೂ ಬೆಳಕು. ತಟ್ಟನೆ ರೂಮ್ ಎಲ್ಲ ಬೆಳಕಾದ ಅನುಭವ. ನಮ್ಮ ಗ್ಯಾಂಗ್ ನ bubbly. ಆಹ್ಲಾದದಿಂದ
ಚಟುವಟಿಕೆಯಿಂದ ಚುರುಕುತನದಿಂದ ಕೂಡಿದ ವ್ಯಕ್ತಿತ್ವ, ಉಲ್ಲಾಸದ ಬುಗ್ಗೆ, ಲವಲವಿಕೆಯ ಜ್ಯೋ. ಎಷ್ಟು superlatives ಬಳಸಿದ್ರೂ ಅದು ಕಡಿಮೆನೆ. ಒಳ್ಳೆಯ ಹಾಡುಗಾರ್ತಿ, ಮಾತ್ರವಲ್ಲ ಅವರ ಆಫಿಸ್ ನ magazine ಕೂಡ ನಡೆಸಿದವರು. ಆಗಾಗ ಅವರ ಕಿರು ಬರಹ ಪುರುವಣಿಗಳಲ್ಲಿ ಕಾಣಸಿಗುತ್ತವೆ. ಸ್ಪಟಿಕ ದಂತ ಮನಸ್ಸು. ಅನಿಸಿದ್ದನ್ನು ತಟ್ಟಂತ ಏನೂ ಮುಚ್ಚುಮರೆಯಿಲ್ಲದೆ ನೇರ ನುಡಿ. ಇಂತಹ ವ್ಯಕ್ತಿತ್ವದವರು ಅತೀ ವಿರಳವೆಂದೇ ಹೇಳಬಹುದು.
ಬಂದೇ ಬರುತ್ತಾವ ಕಾಲ - ಎಂದು ಹಾಡುತ್ತಿರುವ ವೇದಾ...
ದೂರಾ ಬಹು ದೂರ ಹೋಗುವ ಬಾರ ಅಲ್ಲಿಹುದೆಮ್ಮ ಊರ ತೀರ- ನಾಗಮಣಿಯವರ ಹಾಡು, ಪಕ್ಕದಲ್ಲಿ ಸಹನಾ ಜೋಶಿ
ವೇದಾ ಅವರ ಮನೆಯವರದ್ದೆಲ್ಲ ಪರಿಚಯ ಆಗಿದ್ದು ನಿಜಕ್ಕೂ ಸಂತೋಷ. ನಮ್ಮೆಲ್ಲ ಮಾತು ಕತೆಗಳಲ್ಲಿ ಅವರ ತಾಯಿ ಕೂಡ ಸಕ್ರೀಯವಾಗಿ ಭಾಗವಹಿಸಿ ಅವರದ್ದೆ ಜೀವನಾನುಭವದ ಇಂಟರೆಸ್ಟಿಂಗ್ episodes ಗಳನ್ನು ಶೇರ್ ಮಾಡಿಕೊಂಡರು.
ವೇದಾ ಅವರ ತಾಯಿಯೊಂದಿಗೆ ಒಂದು ಫೋಟೋ
ಸಂಧ್ಯಾ ಜತೆ ಮಾತಾಡ್ತಾ ಇದ್ದಾಗ ಒಂದು ಪೋಸ್- thanks to sweet Mukesh for the click
cake from sweet chariot
ರಾತ್ರಿ 'ಮಲೆಗಳಲ್ಲಿ ಮದುಮಗಳ' ಮೇಲೆ ಮನಸ್ಸು ಹೆಚ್ಚು ಕೇಂದ್ರಿಕರಿಸಲಾಗಲಿಲ್ಲ. ಮನಸ್ಸು ನಮ್ಮ ಮೀಟ್ ಬಗ್ಗೆಯೆ ಗಿರ್ಕಿ ಹೋಡಿತಾ ಇತ್ತು. ಆ ದಿನ ಮಾತ್ರವಲ್ಲ ಒಂದು ವಾರದ ತನಕ ಈ ಭೇಟಿಯ ಸವಿ ನೆನಪಿನ ಗುಂಗು...ನಮ್ಮ ಮನೆಯವರಿಗೆಲ್ಲ ಹೊಟ್ಟೆಕಿಚ್ಚಾಗುವಷ್ಟು.ನಮ್ಮ ಈ ಗ್ಯಾಂಗ್ ಯಾವಾಗಲೂ ಹೀಗೇ ಚಟ್ ಪಟಾ ಆಗಿರಲಿ ಎಂದು ಹಾರೈಸುತ್ತ... I am maha proud to have you all as my friends...ನಮ್ಮನೆಲ್ಲ ಒಂದು ಚಂದದ ಬಂಧನದಲ್ಲಿ ಪೋಣಿಸಿದ email ಗೂ ಒಂದು ದೊಡ್ಡ ಥ್ಯಾಂಕ್ಸ್.
ಇದು ನನ್ನ 250 ನೇ ಪೋಸ್ಟ್ ಅಂತ ಹೇಳಲೂ ನಿಜಕ್ಕೂ ಖುಶಿಯಾಗುತ್ತಿದ್ದೆ. thanks to all (there are so many) who made it possible
love
* my very first male friend: by default ಶ್ರೀಕಾಂತ ಫ್ರೆಂಡ್ಸ್ ಎಲ್ಲ ನನ್ನ ಸ್ನೇಹಿತರು. ಶ್ರೀವತ್ಸ ಜೋಶಿಯವರ ಸ್ನೇಹ ನಾನೇ initiative ತೆಗೊಂಡು ಮಾಡಿದ್ದು ಅಂತ ಅಷ್ಟೆ...
:-)
9 comments:
ನಾನು ಅಪಾರ ಅಚ್ಚರಿಯಿಂದ ನಿಟ್ಟಿಸುವ ಮೇರುಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿರುವವರು ಶ್ರೀಯುತ ಶ್ರೀವತ್ಸ ಜೋಶಿಯವರು.
ಕಳೆದ ಬಾರಿ ಅವರು ಭಾರತ ಪ್ರವಾಸದಲ್ಲಿದ್ದಾಗ ನಮ್ಮ ಕಛೇರಿಗೆ ಶ್ರೀಯುತ ವಿಶ್ವೇಶ್ವರ ಭಟ್ಟರನ್ನೂ ಇನ್ನಿತರ ಗೆಳೆಯರನ್ನೂ ಭೇಟಿಯಾಗಲು ಬಂದಿದ್ದರು. ಅವರೇ ನನ್ನಂತಹ ಚಿಕ್ಕವನನ್ನು ನೆನೆಸಿಕೊಂಡು ಹೇಳಿ ಕಳಿಸಿ ಭೇಟಿಯಾದರೂ. ಭೇಟಿಯಾದದ್ದು ಕೆಲವೇ ನಿಮಿಷಗಾದರೂ ಅದು ಛಾಯಾಚಿತ್ರದಂತಹ ಪರಿಣಾಮ ನನ್ನ ಮೇಲಾಯಿತು.
ಮೇರುಗಳ ಸಂಗಮದಲ್ಲಿ ಇನ್ನೊಬ್ಬ ಮೇರು ನಮ್ಮ ಶ್ರೀಮತಿ ಮಾಲತಿಯವರು. ಧನ್ಯನಾದೇನು.
That's lovely Malathi that the e-friendship has turned to real friendship. It's surprising as many such friendships get lost in the course of time. Best wishes always.
I am also following Mr. Shrivatsa Joshi sir in FB. I like his pun very much. nice pics too... :)
Totally agree :) ..He (Mr Srivasta Joshi) responds to each and every mail or comment..nice post Akka..
Nice pics and a sweet writeup. Congratulations.
ಮಾತೆಮಾಲತಿ,
ಅವತ್ತಿನ ಗೆಟ್ಟುಗೆದರ್ ಮತ್ತೊಮ್ಮೆ ಕಣ್ಮುಂದೆಬರುವಂತೆ ಸೊಗಸಾಗಿ ಬರೆದಿದ್ದೀರಿ. ಹಾಗೆಯೇ ನಮ್ಮ ’ಗ್ಯಾಂಗ್’ನ ಸ್ಪೆಷಾಲಿಟಿ ಬಗ್ಗೆಯೂ. ಹೊಗಳಿಕೆ ಚಿಮುಕಿಸಿದ್ದು ತುಸು ಜಾಸ್ತಿಯೇ ಆಯ್ತು ಎಂದು (ನನಗಂತೂ) ಅನಿಸಿತು. ಆದರೆ ಅದನ್ನು ನಿಮ್ಮ ’ಜೀವನಪ್ರೀತಿ ಮತ್ತು ಲವಲವಿಕೆಯರೀತಿ’ ಎಂದುಕೊಂಡು ಸುಮ್ಮನಾದೆ. ಹೌದು, ನೀವು ಹೇಳಿದಂತೆಯೇ "ಈ ಗ್ಯಾಂಗ್ ಯಾವಾಗಲೂ ಹೀಗೇ ಚಟ್ ಪಟಾ ಆಗಿರಲಿ"
ಸ್ನೇಹಿತ ಬದರಿನಾಥ ಅವರ ಪ್ರತಿಕ್ರಿಯೆಗೆ ಉತ್ತರ:
ಅವತ್ತು ಸುವರ್ಣನ್ಯೂಸ್ & ಕನ್ನಡಪ್ರಭ ಕಛೇರಿಗಳಿಗೆ ಭೇಟಿಯಲ್ಲಿ ನನಗೆ ಇ-ಪರಿಚಯವಿರುವವರನ್ನೆಲ್ಲ ಖುದ್ದಾಗಿ ನೋಡಿ ಮಾತನಾಡಿಸಬೇಕು ಎಂಬ ಅಜೆಂಡಾ ಇಟ್ಟುಕೊಂಡೇ ಬಂದಿದ್ದೆ. ನಿಮ್ಮನ್ನು ಭೇಟಿಯಾದದ್ದು ನನಗೂ ಸಂತೋಷವೇ. ಇನ್ನು, ನಿಮ್ಮ ’ಮೇರು’ ಪದಪ್ರಯೋಗದ ಬಗ್ಗೆ, ಇದೀಗ ಚಾಲ್ತಿಯಿರುವ ನಗೆಹನಿಗಳ ಶೈಲಿಯಲ್ಲಿ ಹೇಳುವುದಾದರೆ-
"ಇನ್ಸಾನ್ ಸ್ವಲ್ಪ ’ಜೋರು’ ಹೋನಾಚಾಹಿಯೇ. ’ಮೇರು’ ತೊ ಬ್ಯಾಂಗ್ಲೋರ್ ಮೇ ಟಾಕ್ಸಿ ಭೀ ಹೋ ಸಕ್ತಾ ಹೈ" :-) :-)
thank you all for comments/good wishes
:-)
malathi S
Dear SJ
wanted to add our special form of addressing each other
Vathsa and maate malathi
:-):-)
ಒಂದು ಸುಂದರ ಮನಸ್ಸಿನ ಗೆಳೆಯರ ಬಳಗದ ಬಗ್ಗೆ ಬರೆದ ಲೇಖನ ಮನಸ್ಸಿಗೆ ಹಾಯ್ ಎನ್ನಿಸುವಂತೆ ಮಾಡುತ್ತದೆ. ಹೀಗೆ ಮುಂದುವರೆಯಲಿ ಗೆಳೆಯರ ಬಳಗ ಸದಾ ಹೀಗೆ ಚಟ್ ಪಟಾ ಮಾತುಗಾರಿಕೆ, ಹಾಸ್ಯ ಮುಂದುವರೆಯಲಿ.
ನಿಮ್ಮ ೨೫೦ನೆ ಮೈಲಿಗಲ್ಲು ಮುಟ್ಟಿದ್ದು ಸಂತಸವಾಯಿತು. ಅಭಿನಂದನೆಗಳು
nimma chendada commentgaLu nannannu tumbaa hedarisuttave. nimge ondu smiley :-) mattondu thanks Srikanth Manjunath
:-)
malathi S
Post a Comment