June 16, 2013

ನೋಟ (ಮಿನಿ ಮಿನಿ ಕತೆ)

ಅವರಿಬ್ಬರಿಗೂ ಮಕ್ಕಳಿರಲಿಲ್ಲ. ಡಾಕ್ಟರ್ ರಿಪೋರ್ಟ್ ನಲ್ಲಿ ತೊಂದರೆ ಅವನಲ್ಲಿದೆಯಂತ ಅಂತ ಅಂವ ಬೇಜಾರಿನಿಂದ ಹೇಳಿದಾಗ, ತಾನು ಮಹಾ ತ್ಯಾಗಮಯಿಯ ಪೋಸ್ ಕೊಟ್ಟು ಅವನ ತಲೆ ಸವರಿ, 'ಇರಲಿ ಬಿಡಿ ನಾನು ನಿಮಗೆ ಮಗು ನೀವು ನನಗೆ ಮಗುವಾಗಿರೋಣ. ಈ ವಿಷಯ ಯಾರಿಗೂ ಹೇಳುವುದು ಬೇಡ' ಅಂತ ಅವಳು ಉಸುರಿದಾಗ ಅವನ ಮುಖದಲ್ಲಿ ನಿರಾಳ.
ಆಮೇಲೆ ಕುಟುಂಬದವರು ಆಪ್ತೇಷ್ಟರು ಮಕ್ಕಳ ಬಗ್ಗೆ ಕೇಳಿದಾಗ 'ಇಲ್ಲ ಆಗಿಲ್ಲ' ಅಂತ ಸುಮ್ಮನೆ ಹೇಳ್ತಾ ಮನಸ್ಸಿನಲ್ಲಿ ತ್ಯಾಗದ ಬಗ್ಗೆ ಅಹಂಕಾರ ಪಟ್ಟುಕೊಳ್ಳುವ ಅಭ್ಯಾಸ ಆಕೆಗೆ ಆಯಿತು.
ಕೆಲವೊಮ್ಮೆ ಅವಳಿಗೆ ಎಲ್ಲರಿಗೂ ಹೇಳಿ ಬಿಡಲಾ ಅಂತ ಅನ್ನಿಸ್ತಿತ್ತು. ಆದರೆ ಅವಳು ಅವನ ಮುಖವನ್ನು ಕನಿಕರದಿಂದ ನೋಡುವಾಗ ಅವಳ ಮುಖವನ್ನೇ ನೋಡುತ್ತಿರುವ ಅವನು ತಟ್ಟನೆ ತಲೆಕೆಳಗೆ ಹಾಕುತ್ತಿದ್ದ
ಒಂದು ದಿನ ಅವನು ತೀರಿಕೊಂಡ
ಯಾವುದೋ ಕಾಗದ ಪತ್ರ ಫೈಲ್ ನಲ್ಲಿಡ ಬೇಕಾದ್ರೆ infertility clinic ನ ರಿಪೋರ್ಟ್ ಅವಳ ಕೈಗೆ ಹತ್ತಿತು. ಅದನ್ನು ತೆರೆದು ನೋಡಿದ್ರೆ ಅದರಲ್ಲಿ ಸ್ಪಷ್ಟವಾಗಿ ನಮೂದಿಸಲಾಗಿತ್ತು 'ತೊಂದರೆ ಇದ್ದದ್ದು ಅವಳಲ್ಲಿ'
ಅವನ ಕಣ್ಣೋಟದ ಅರ್ಥ ಈಗ ತಿಳಿದು, ಕುಸಿದು ಕೂತು ಅಳಲು ಶುರು ಮಾಡಿದಳಾಕೆ..
:-)

10 comments:

Anonymous said...

Madam nimma kathe bariyo style sudden aagi change Agta ide... Nimma diet change agidya?! Aagide antadre... Ade diet continue maadi plz.... I am loving this new stories better :)

ravindra said...

chandavide....

Badarinath Palavalli said...

ತನ್ನನ್ನೇ ಬಳಿಕೊಟ್ಟು ಮಡದಿ ಮನಗೆದ್ದ ಅವನು ಶ್ರೇಷ್ಟ.

nenapina sanchy inda said...

Anonymous
ನನ್ನ ತಂಗಿ ಬರುವ ತನಕ ಈ ತರಹ ಏನಾದರೂ ಚುಟುಕಾಗಿ ಬರೀತಿನಿ...
ಡಯಟ್ ಚೆಂಜ್ ಆಗಿಲ್ಲ ತಿನ್ನೋದು ಜಾಸ್ತಿ ಆಗಿದೆ.
ನಿಮಗೆ ಇಷ್ಟ ಆದ್ರೆ ಸೈ...
ಥ್ಯಾಂಕ್ಯೂ
thank you Ravindra and Badari bhaiyya
:-)

Radhika said...

Hmmm. haLE film story tharaa ide. It would have made sense to go through reports, try for alternatives like adopting a child alvaa?

nenapina sanchy inda said...

Radhika
it might happen in real life da..this is just a story...
:-)
ms

ಮನಸು said...

tumba chennagide akka kate...

Srikanth Manjunath said...

ಕರ್ಣ ಕವಚ ಧರಿಸಿದ್ದಾಗ ಶ್ರೇಷ್ಠ ಅನ್ನಿಸಿದ್ದಕ್ಕಿಂತ ರಣರಂಗದಲ್ಲಿ ಕವಚ ಬಿಚ್ಚಿ ದಾನ ಮಾಡಿ ಶ್ರೇಷ್ಠ ಎನಿಸಿಕೊಂಡ. ಈ ಸಂದೇಶ ನಿಮ್ಮ ಕಥೆಯಲ್ಲಿ ಕಂಡಿತು. ಸೊಗಸಾಗಿದೆ ಮೇಡಂ

nenapina sanchy inda said...

thank you Suguna and Srikanth Manjunath :-)

Anonymous said...

Best hani kate.
Liked the twist in the tale.

-- Shreekar