June 28, 2013

ಸುಮ್ನೆ ಓದಿ ಬಿಟ್ಹಾಕಿ

:-) ಕನ್ನಡ ಕಲೀತಿದ್ದ ಹಾಗೆ ಗೀಚಿದ ಭಂಕಸ್ ಸಾಲುಗಳು. 6 ವರ್ಷಗಳ ಹಿಂದೆ ಬರೆದಿದ್ದು ಈಗ ಯಾವುದೋ ಫೈಲ್ ಹುಡುಕುತ್ತಿದ್ದಾಗ ಸಿಕ್ಕಿತು. ಎರಡು ಸಲ ಸಿಸ್ಟಮ್ ಕ್ರ್ಯಾಶ್ ಆದ್ರೂ ಇವು ಉಳುಕೊಂಡಿವೆ ಅಂದ್ರೆ..........ಅದಕ್ಕೆ ನಿಮಗೀಗ ಓದುವ ಶಿಕ್ಷೆ:-)

...............1................
ಕುಡಿದಾಗ ಒನ್ ಫುಲ್ ಬಾಟಲ್
ಅವನು ಎರಿಸ್ಟೋಟಲ್- ಪ್ರಕಾಂಡ ಪಂಡಿತ
ನಶೆ ಇಳಿದು ಮನೆಗೆ ಸುಳಿದಾಗ
ಮಡದಿಯ ಬೈಗುಳು ಖಂಡಿತ

..............2......................
ಮಹಾ ಪೌರುಷ ಒಳಗಿದ್ದಾಗ ರಮ್
ಮಾತೂ ಗರಂ
ನಶೆ ಇಳಿದಾಗ ಇಲ್ಲ ಅವನಿಗೆ ದಮ್
ಟೋಟಲ್ ಸೈಲೆನ್ಸ್ ಏಕ್ ದಮ್

...........3.....................
ಆಗಬೇಕಿಲ್ಲ ಇಂಜಿನಿಯರ್
ಗಾಳಿಯಲ್ಲಿ ಗೋಪುರ ಕಟ್ಟಲು
ತಾಜಮಹಲ್ ಕೂಡ ಕಟ್ಟಬಹುದು
ಖಾಲಿಯಾದ ಮೇಲೆ ಮದಿರೆಯ ಬಟ್ಟಲು

ನಮ್ಮ ತಂದೆಗೆ ಬ್ಯಾಂಕ್ ನಲ್ಲಿ ದೊಡ್ಡ ಪೋಸ್ಟ್. ಹದಿನೈದು ದಿನಕ್ಕೊಮ್ಮೆ ಮನೆಯಲ್ಲಿ ಡ್ರಿಂಕ್ಸ್ ಪಾರ್ಟಿ ನಮ್ಮ ತಾಯಿ ನಾನ್ ವೆಜ್ ತಿನ್ನದಿದ್ದರೂ ಒಳ್ಳೆಯ ಚಿಕನ್ ಕರಿ ಮಾಡುತ್ತಿದ್ದರು. 15 - 20 ಜನ ಊಟಕ್ಕೆ ಇರುತ್ತಿದ್ದರು. ತಮ್ಮಂದಿರಿಗೆ ಸಂಭ್ರಮ. ಐಸ್ ರೆಡಿ ಮಾಡುವುದು, ಗ್ಲಾಸ್ ರೆಡಿ ಮಾಡುವುದು, ಬೀರ್ ನ ಮುಚ್ಚಳ ತೆಗೆದು ಅದನ್ನು ಗ್ಲಾಸ್ ಗೆ ನೊರೆ ಮೇಲೆ ಬರದಂತೆ ಸುರಿಯುವುದು ವಗೈರೆ . ನನಗೆ ಮಾತ್ರ ಅಮ್ಮ ಎಲ್ಲರಿಗೂ ಚಪಾತಿ ಲಟ್ಟಿಸುತ್ತ, ಬೆವರು ಸುರಿಸುತ್ತ ಅಡಿಗೆ ಮಾಡುವುದು, ಅವರೆಲ್ಲ ಹೋಗುವ ಮುಂಚೆ 'ಭಾಭಿ ಫಸ್ಟ್ ಕ್ಲಾಸ್ ಥಾ ಖಾನಾ' ಅಂತ ಹೊಗಳಿದಾಗ ಅಮ್ಮನ ಮುಖ ಸಂತಸದಿಂದ ಅರಳುವುದು ನೋಡುವುದರಲ್ಲಿ ಮಾತ್ರ ಖುಶಿ.

ಅಜ್ಜನ ಮನೆಯಲ್ಲಿ ಬೆಳೆದ ನನಗೆ ಇದೆಲ್ಲ ಮೊದ ಮೊದಲು ಈ ಪಾರ್ಟಿ ಗೀರ್ಟಿ ಎಲ್ಲ ವಿಚಿತ್ರ ಅನ್ನಿಸುತ್ತಿತ್ತು, ಆಮೇಲೆ ಅಭ್ಯಾಸ ಆಗಿ ಹೋಯ್ತು

ಅದೇ ಅಪ್ಪನಿಗೆ ಹೃದಯ ಸಂಬಂಧಿ ಕಾಯಿಲೆಯಾದಾಗ ಈ 'ಬಾಟಲ್' ಮಿತ್ರರು ಯಾರೊಬ್ಬರೂ ಮನೆಕಡೆ ಸುಳಿದಿದ್ದರೆ ಹೇಳಿ. ಆಗ ಅಪ್ಪನಿಗೆ ಯಾರ್ಯಾರು ಹೇಗೆ ಅಂತ ಗೊತ್ತಾಗಿ ಪಾರ್ಟಿ ಗೀರ್ಟಿ ಎಲ್ಲ ಫುಲ್ ಸ್ಟಾಪ್....

ಯಾಕೋ ನೆನಪಾಯ್ತು ಶೇರ್ ಮಾಡ್ತಿದ್ದೇನೆ

:-)

12 comments:

Badarinath Palavalli said...

3ಕ್ಕೆ 3ಊ ಹನಿಗಳು ಫುಲ್ ಟೈಟ್ ಮಾಡಿದವು ಮಾಲತಿಯವರೇ, :-D
ಸುಖಕ್ಕೆ ಆಗುವ ಗೆಳೆಯರ ಪಡೆ, ನೋವಿಗೆ ಸ್ಪಂದಿಸದಾಗ ನೋವಾಗುತ್ತದೆ ಗೆಳೆತನಕ್ಕಾಗಿ ಸಕಲವನ್ನು ಧಾರೆ ಎರೆದ ಮನ. :(

Srikanth Manjunath said...

ಅಕ್ಷರಗಳು ಅದರ ಜೋಡಣೆ ಎಲ್ಲಾವು ಮತ್ತಿನ ಲೋಕವನ್ನು ಮತ್ತು ನಿಜವಾದ ಪ್ರಪಂಚವನ್ನು ವಿವರಿಸುತ್ತಾ ಇವೆ. ಹೌದು "ನಗುವಾಗ ಎಲ್ಲಾ ನೆಂಟರು ಅಳುವಾಗಾ ಮಾತ್ರ ಇಲ್ಲ ಎನ್ನುವ" ಹಾಡಿನಂತೆ..
ಹನಿ ಹಳೆಯದಾದರೇನು ಅದು ಕೊಡುವ ಕಿಕ್ ಮಾತ್ರ !!!!

Anonymous said...

Madam, ee saalugaLanna udupili iddaga bardida ?! Adyaro " bibbo" maarvonanna nodi! Or u just got inspired of pankaj udas?

nenapina sanchy inda said...

Badari bhaiyya and Srikanth: :-) :-)

Anonymous ji: ಅಲ್ಲ ನನ್ನ ಮಿತ್ರರು ಅಪಾರ ರಘು ಅಂತ ಅವರು ಅವರ ಬ್ಲಾಗ್ ನಲ್ಲಿ 'ಮದ್ಯಸಾರ' ಅಂತ ಬರೀತಿದ್ರು....ಅದರಿಂದ inspiration U should read it, It is wonderful...the book was publised later and u can find it in most of the book shops....i can gift one to you....Interested?? ;-) :-)

Anonymous said...

Madam, gift sikkashTu khushi aaytu... Nimde ondu book print aagli... Amele gift togotini... :)

nenapina sanchy inda said...

oh u mean book with a 'kick'?? that will never happen or for that matter any book....
thanks anyways.........
:-)
ms

neelesh said...

wah wah waha kudida mathinalle idannu odidare innu majaviruthithu,kudithada mathigu gaurava viruthithu,mathondu peg hakalu karana siguthithu

nenapina sanchy inda said...

hey neelesh!!
nice shayari tamma!!
:-)
ms

Radhika said...

Yes. situations like this bring out the true friends from the false ones. Have experienced it.

Anonymous said...

@neelesh: henDti kaiyalli laToni barutittu ;)
Enteera madam, I just rhymed!!

ವಿ.ರಾ.ಹೆ. said...

:-) ;-)

nenapina sanchy inda said...

Anonymous : Neelesh should answer ur question :-)

Vikas ;-) :-)
ms