November 1, 2021

ಆಘಾತ

 ಯಾವತ್ತಿನ ಹಾಗೆ ಬೆಳಿಗ್ಗೆ ನಾಲ್ಕು ಗಂಟೆಗೆ  ಎದ್ದು ಪ್ರಾತರ್ವಿಧಿಗಳನ್ನು. ಮುಗಿಸಿ ಚಹಾ ಮಾಡಿದೆ. ಅಕ್ಕನ ರೂಮ್ ನ ಬಾಲ್ಕನಿಯಲ್ಲಿ ನಾ ಕೂರೋದು ಚಹಾ ಕುಡಿಯಲು. ಆ ದಿನ ಬಾಗಿಲಿನ ಹಿಡಿ ಎಷ್ಟು ತಿರುವಿದ್ರು ಬಾಗಿಲು ತೆರೆಯಲಿಲ್ಲ. ಚಿಲಕ ಹಾಕಿತ್ತು. ಕೈ ಕಾಲಲ್ಲಿ ನಡುಕ, ಕಣ್ಣಲ್ಲಿ.ನೀರು...ಇದೇನಾಗಿ ಹೋಯ್ತಪ್ಪ? ಇನ್ನೂ ಕತ್ತಲೆ. ಗದ್ದಲ ಮಾಡೋದು ಬೇಡ ಅನ್ನಿಸ್ತು. ಶ್ರೀಕಾಂತ ತಡ ರಾತ್ರಿ ಸಿನಿಮಾ ನೋಡಿ, ಹಾಲ್ ನಲ್ಲೇ ಮಲಗಿದ್ರು ಗೊರಕೆ ಹೊಡೀತಾ. ಹಾಗೆ ಸಾವರಿಸಿಕೊಂಡು ಕತ್ತಲೇಯಲ್ಲೇ ಮಂಚದ ಮೇಲೆ ಕೂತು ಚಹಾ ಕುಡಿದೆ. 

ಹಿಂದಿನ ದಿನ ಸಂಜೆ ನಾವು, ಸ್ನೇಹಿತರು ಸೇರಿ, ನಮ್ಮ ಆನೆಕಲ್ಲು ಸೈಟ್ ಕಡೆ ಹೋಗಿದ್ವಿ. ಮಳೆಯಲ್ಲಿ ಸಿಕ್ಕಿ ಹಾಕಿ ಕೊಂಡು ಬರುವಾಗ ತಡ ಆಗಿತ್ತು. ಅಕ್ಕ ಬಿಸಿ ಬಿಸಿ ಬ್ರೆಡ್ ಬೋಂಡ ಮಾಡಿ ಕೊಟ್ಟಿದ್ದಳು. ತುಂಬಾ ಸುಸ್ತಾಗಿದ್ದರಿಂದ. ಯಾಕೋ ಬೆನ್ನು ನೋಯುತ್ತಿದ್ದರಿಂದ ರಾತ್ರಿಯ ಪಾತ್ರೆ ಗಳನ್ನು ಬೆಳಿಗ್ಗೆ ತೊಳೆಯುವ ಅಂತ ಇಟ್ಟಿದ್ದೆ.

ಇದ್ದಕ್ಕಿದ್ದಂತೆ ಏನು ಮಾಡಿಕೊಂಡಳು? 'ಅಮ್ಮ ನಾಳೆ ದೊಡ್ಡ ಕೇಕ್ , ನಾನು ಡೆಲಿವರಿ ಮಾಡಿ ಹಾಗೆ ವ್ಯಾಕ್ಸಿನ್ ಎರಡನೇ ಡೋಸ್ ತೆಗೊಂಡು ಬರ್ತೀನಿ ಅಂದವಳು...ಅಮ್ಮ ಈ ವೀಕ್ ಎಂಡ್ healthy ಬ್ರೆಡ್, ಬರ್ಗರ್ ಮತ್ತು ಪಿಝ್ಆ ದ ದೊಡ್ಡ ಆರ್ಡರ್ ಇದೆ ಕಣೆ ಅಂದವಳು...

 ಪಾತ್ರೆ ತೊಳೆಯುತ್ತ ನಿನ್ನೆ ಏನಾದ್ರೂ ಹೆಚ್ಚು ಕಡಿಮೆ ಮಾತಾಡಿಡ್ನಾ? ಸಿಟ್ಟಾಗಿದ್ದೆನಾ? ಅಂತ ಯೋಚನೆ ಮಾಡಿದೆ. ಬಂದವರಿಗೆಲ್ಲ ಏನು ಹೇಳೋದು? FB ನಲ್ಲಿ ಹೇಗೆ ಈ ಸುದ್ದಿ ಶೇರ್ ಮಾಡಲಿ? ಎಲ್ಲರಿಗೂ counselling ಮಾಡುವವಳ ಮನೆಯಲ್ಲೇ ಈ ಕಥೆನಾ? ಬಾಗಿಲು ಮುರಿಬೇಕಾದ್ರೆ ಪೊಲೀಸರು ಬರ್ಬೇಕಾ...ಮುಂತಾದ ಯೋಚನೆ. ಪಾತ್ರೆ ಎಲ್ಲ ತೊಳೆದಿಟ್ಟು... ಅಡಿಗೆ ಮನೆ ಕ್ಲೀನ್ ಮಾಡಿಟ್ಟು, ಸಮಯ ನೋಡಿದ್ರೆ ಇನ್ನೂ 4.45...ಕತ್ತಲೆಯಲ್ಲೇ ಹಾಲ್ ಅನ್ನು ಸ್ವಲ್ಪ ಒಪ್ಪ ಒರಣ ಮಾಡಿದೆ.. ಬಂದ ಜನ ಏನು ಅನ್ನುತ್ತಾರೋ??..

ಬೆಳಕಾಗುವ ತನಕ ಸ್ವಲ್ಪ ಬೆನ್ನು ಒರಗಿಸಿ ಮಂಚದ ಮೇಲೆ ಆನಿಸುವ ಅಂತ ಹೋದೆ...ಕಣ್ಣಲ್ಲಿ ನೀರು ಮಾತ್ರ ಒಂದೇ ಸಮನೆ ಜಾರುತ್ತಲಿತ್ತು. ಅದು ಯಾವಾಗಲೋ ನಿದ್ದೆಗೆ ಜಾರಿದೆ. ಯಾರೋ 'ಮಾಲ್ತಿ ಮಾಲ್ತಿ' ಅಂದ ಹಾಗೆ....ಕಣ್ಣು ತೆರೆದ್ರೆ ಅಕ್ಕ ನಗುತ್ತ 'ಏನೇ breakfast ಗೆ ಅರ್ಧಂಬರ್ಧ ರೆಡಿ ಮಾಡಿಟ್ಟಿದ್ದಿಯಾ...ಏನು ಅಂತ ಹೇಳಿದ್ರೆ ನಾನು ತಯಾರಿಸ್ತೀನಿ..ನೀನು ಮಲಗು ಅಂದ್ಲು...ಮೈ ಮನಸ್ಸು , ದುಗೂಡವನ್ನು ಜಾಡಿಸಿ ಎದ್ದೆ...

ಆದದ್ದು ಇಷ್ಟು ವಾರದ ಹಿಂದೆ ಇವರ ತಂಗಿ ಮಗ..ಅಕ್ಕನಿಗಿಂತ ಕೆಲ ತಿಂಗಳು ದೊಡ್ಡವನು...ಆರಾಮಾಗಿದ್ದವನು..ಏಕಾಏಕಿ ಸಂಜೆ ಹೊತ್ತು suicide ಮಾಡಿಕೊಂಡಿದ್ದ...ಆ ನೋವು ಇತ್ತು..ಇಲ್ಲಿ ಜೋರು ಮಳೆ...ಕೆಲ ಒದ್ದೆ ಬಟ್ಟೆ ಬಾಗಿಲಿನ ಮೇಲೆ ಒಣ ಹಾಕಿದ್ದೆ, ಅದು ಬಾಗಿಲು ಹಾಕುವಾಗ ಸಿಕ್ಕಿ ಹಾಕಿ ಕೊಂಡು ಬಾಗಿಲು ತೆಗಿಲಿಕ್ಕೆ ಬಂದಿರಲಿಲ್ಲ...ಇಲ್ಲದಿದ್ದರೆ ಬಾಗಿಲು ಹಾಕುತ್ತೇವೆಯೇ ಹೊರತು ಚಿಲಕ ಹಾಕಿ ಮಲಗುವ ಅಭ್ಯಾಸ ಇಲ್ಲ..ಮನಸ್ಸಲ್ಲಿ ಕೆಟ್ಟ ಆಲೋಚನೆ..

ಕಾಲ್ಪನಿಕ/ಕನಸಿನಲ್ಲಿಯೇ ಆದ ಈ ಅನುಭವದಿಂದ ಚೇತರಿಸಿಕೊಳ್ಳಲು ಎರಡು ದಿನ ಬೇಕಾಯ್ತು ನನಗೆ...ನಿಜವಾಗಿ ಇದೆಲ್ಲ ನಡೆದಿರುವ ಮನೆಯವರ ಗತಿ ಏನು??? 😢😢

ಆತ್ಮಹತ್ಯೆ ಮಾಡಿಕೊಂಡ ಹುಡುಗನಿಗೆ ಇಬ್ಬರು ಪುಟ್ಟ ಮಕ್ಕಳು. ಈಗಲೂ ಗೇಟ್ ಬಳಿ ಅಪ್ಪ ಬರುವುದನ್ನು ಕಾಯುತ್ತಾರಂತೆ. ಹೊಟ್ಟೆಯಲ್ಲಿ ಚೂರಿ ಹಾಕಿ ತಿರುವಿದ ಅನುಭವ..ಯಾಕೋ ಮನಸ್ಸನ್ನು ಹಿಡಿದುಕೊಂಡು ಬಿಟ್ಟಿದೆ 😭😭

ಕೆಲವೊಮ್ಮೆ ಅವನ ಮೇಲೆ ಅಸಾಧ್ಯ ಸಿಟ್ಟು ಬರುತ್ತೆ..ಆಮೇಲೆ ಛೆ ಏನಾಗಿಹೋಯ್ತು ಅನ್ನಿಸುತ್ತೆ....

ಹೋದವರು ಹೋಗಿ ಬಿಡುತ್ತಾರೆ..ಇದ್ದವರಿಗೆ ನೋವು..

October 28, 2021

COVID ಕತೆಗಳು

1. ಕೋವಿಡ್ ನಿಂದಾಗಿ ಆಕೆ ಸಾವನ್ನು ಅಪ್ಪಿರಿವುದಾಗಿ ಡಾಕ್ಟರ್ ಹೇಳಿದ್ರು. ಬೇರೆ ಊರಿನಲ್ಲಿರುವ ಗಂಡನಿಗೆ ತಿಳಿಸಿದಾಗ, ದೇಹವನ್ನು ಇಟ್ಟಿರಿ, ನಾನು ಬಂದ ಮೇಲೆಯೇ ದಹನ ಅಂತ ಹೇಳಿಟ್ಟರು. ದೂರದ ಊರಿನಿಂದ ಮನೆ ತಲುಪಿದಾಗ ಮೂರು ದಿನ. ಅಂತ್ಯ ಕ್ರಿಯೆಗೆ ಮೊದಲು ಸ್ನಾನಕ್ಕೆ ಅಕೆಯ ದೇಹವನ್ನು ಬಚ್ಚಲು ಕೋಣೆಗೆ ಒಯ್ದಾಗ ಕ್ಷೀಣವಾಗಿ ಉಸಿರಾಡುತ್ತಿರುವ ಅನುಮಾನ..ಕೂಡಲೇ ಆಸ್ಪತ್ರೆಗೆ ಸೇರಿಸಿದರಿಂದ ಆಕೆ ಚೇತರಿಸಿಕೊಂಡಳು...


2. ಆಕೆಗೆ ಜನರೇಂದರೆ ಜೀವ. ಮನೆಯಲಿನ್ ಯಾವಾಗಲೂ ಗಲಗಳ, ಮಾತು ನಗು...ಅಂತಹ ಮಹಿಳೆಗೆ ಕೊರೊನ ಕಾಲದಲ್ಲಿ ತುಂಬಾ ಮನಸ್ಸು ಕುಗ್ಗಿತು. ವಯಸ್ಸಾಗಿದ್ದರಿಂದ ಹೊರ ಬೀಳುತ್ತಿರಲಿಲ್ಲ. ಮಾತ್ರವಲ್ಲ ಮಕ್ಕಳು ಮನೆಗೆ ಬೇಕಾದ ಸಾಮಾನು ಸರಂಜಾಮು ಆನ್ ಲೈನ್ ನಲ್ಲಿ ಅವರಿಗೆ ತಲುಪುವಂತೆ ಮಾಡುತ್ತಿದ್ದರು. ಹಾಗಿದ್ದರೂ ಮನೆಯಲ್ಲಿರುವ ಗಂಡ ಹೆಂಡತಿ ಇಬ್ಬರಿಗೂ ಕೋವಿಡ್ ಪಾಸಿಟಿವ್. ತೀವ್ರ ವಾದರಿಂದ ಆಸ್ಪತ್ರೆಗೆ ಸೇರಿಸಲಾಯಿತು. ಗಂಡ ಚೇತರಿಸಿದರು....ಹೆಂಡತಿ ಅಸುನೀಗಿದರು. ಡಾಕ್ಟರ್ ಪರಿಚಿತರಾದರಿಂದ..ಮನೆಯ ಮಕ್ಕಳಿಗೆ ವಿಡಿಯೋ ಮೂಲಕ ಅವರ ಕೊನೆಯ ದರ್ಶನ ವಾಯಿತು... ದೇಹವನ್ನು ಅಲ್ಲಿಂದಲೇ ಬಿಳಿ ಬಟ್ಟೆಯಲ್ಲಿ ಸುತ್ತಿ, ನಿರ್ಭಾವುಕರಾದ ಕರ್ಮಚಾರಿಗಳಿಂದ ಆಕೆಯ ದೇಹವನ್ನು ವ್ಯಾನ್ ನಲ್ಲಿ, ಇತರೆ ದೇಹದೊಂದಿಗೆ ಬಿಸಾಕುವ ದೃಶ್ಯ ಮನೆ ಮಂದಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ...ಎಷ್ಟೊಂದು ಜನರಿಗೆ ಬೇಕಾದವರು..ಅನಾಥರಾಗಿ ಸ್ಮಶಾನಕ್ಕೆ ಸಾಗಿಸಲ್ಪಟ್ಟರು....

☹️☹️

October 26, 2021

A crash

 Was having my morning cuppa chai & watching a beautiful sunrise..when the metro construction aiding bridge (yellow) fell off with a resounding crash. Waking up everybody , in their dunday beauty sleep and every one ran to the balcony and i could see the construction workers running for their dear life. Hoping there r no casualties..ಪಾಪ ಎಲ್ಲೆಲ್ಲಿಂದಲೋ ಬರ್ತಾರೆ ಕೆಲಸಕ್ಕೆ..that was scary ☹️

P.s: no loss of life and properties. This happened on Sunday. Thete are five cranes brought to the site..yet no signs of the bridge moving...🤔🤔








September 13, 2021

Why??!!


 Just two days into suicide prevention day, i am devastated with the news of  suicide by srikanth's nephew.

Outgoing, happy, responsible helpful always smiling, my favorite boy. They stay in a temple town where religious events happen all the time followed by lunch most times...when the entire family was away he has taken this drastic step. Wish he could have approached somebody for help. Cant imagine his mindset, where he has left his two young girls fatherless. I am not able to come to grips with his death. It is like a cold hand holding my heart in its vice like grip. Cannot imagine the state his young wife, two kids who can not fathom yet  what loss is, aged parents, a brother a sister whom he loved so much..

When ever i watched him, i would feel ...i would have liked to have a son like him

Be in peace, child, go in peace.. 

This is one pain that will never go away...😭😭


July 30, 2021

Credit

 She had just received the man booker prize for her novel

Her husband asks her 'how come you have not given credit to your family, not acknowlegded them?

I never lie, why should i now? Asks the wife?

I have done my cooking cleaning, going out to work, did all the other chores like paying the bills, going to childrens' school etc. I have sacrificed my sleep and worked on my book during weekends without troubling you all, without making you sacrifice anything!! So why lie with credit?

After all, what have you done to deserve credit, but tease me about my writing?

You are into research. I respect that!! But when your funds were late in coming, it was with my money that took care of finances/expenditures. I have never troubled you with anything. I have even hosted dinner parties for your friends and colleagues. Have you ever given credit to me in your thesis? 

Come to think of it have you ever made me a cup of tea?

Please forget about me giving you credit

July 6, 2021

00.00

 


ಮೊನ್ನೆ  00.00 ಗೆ...ಅನಿಸಿದ್ದು...

ಅವನೊಬ್ಬನಿದ್ದ

ಮಲಗಿದ್ದ

ಎದ್ದ

ಹೊರಬಿದ್ದ

ಅವನೇ ಬುದ್ಧ

ನಾನು ಕಿಟಕಿ ಬಳಿ ನಿಂತೆ

ಯಾರ ಮನೆಲೂ ಬೆಳಕಿರಲಿಲ್ಲ

ಆಯ್ತು ಚಿಂತೆ

ಇನ್ನೊಂದು ಕಿಟಕಿ ಬಳಿ ನಿಂತೆ

ಆ ಒಂದು ಮನೆ ಬೆಳಗಿತ್ತು ದೀಪಾವಳಿಯಂತೆ

July 3, 2021

FB ಪೋಸ್ಟ್

 ಮೊದಲೆಲ್ಲ ಒಂದು ಡಿಗ್ರಿ ಅಂತ ಆದ ಮೇಲೆ, ಇನ್ನು ಓದು ಮುಗೀತು, ಮದ್ವೆ ಮಾಡಿ ಬಿಡೋದು ಅಂತ ಮಾತಾಡಿಕೊಳ್ಳುದ್ದರು. (ನನ್ನ ಡಿಗ್ರಿ ಮುಗಿಯೋ ಮುಂಚೆನೇ ಮದುವೆ ಮಾಡಿ ಬಿಟ್ರು).ಇನ್ನು ಕೆಲವರ ಮನೆಯಲ್ಲಿ...ನೀನೇನು ಕೆಲಸಕ್ಕೆ ಹೋಗಬೇಕಾ? ಒಂದು ಆರ್ಟ್ಸ್ ಅಲ್ಲಿ ಬಿ ಎ ಮಾಡಿದ್ರೆ ಸಾಕು ಅನ್ನೋವ್ರು.

ಓದು ಮುಗಿಯುವುದುಂಟಾ? ನಮ್ಮ ತಂದೆ ಅವರ 40 ನೆ ವಯಸ್ದಿಗೆ ಹಿಂದಿ M A ಮಾಡಿದ್ದರು (ಅಮ್ಮ ಏನಾದರೂ ಅರ್ಥವಾಗದ ಹಿಂದಿ ಪದಕ್ಕೆ ಅರ್ಥ ಕೇಳಿದರೆ ನನಗೊತ್ತಿಲ್ಲ ಎನ್ನುತ್ತಿದ್ದರು. ಆಗ ಅಮ್ಮ ಅದೇನು ಹಿಂದಿ ಎಮ್ಮೆ ನೋ ಕೋಣನೊ ಮಾಡಿ ಏನು ಪ್ರಯೋಜನ ಅಂತಿದ್ದರು 😃)

ನನ್ನ ಮಕ್ಕಳಿಗೆ ನಾನು ಹೇಳಿದ್ದೆ...ಎಲ್ಲ ಟ್ರೈ ಮಾಡಿ.. ವಿಜ್ನ್ಯಾನ , commerce, arts ಎಲ್ಲ ಟ್ರೈ ಮಾಡಿ ಅಂದಿದ್ದೆ...ಸಮಯ ತೆಗೊಳ್ಳಿ, ಅಮೇಲೆ ಆಯ್ಕೆ ಮಾಡಿ ಅಂತ. ನಿಹಾ ಹಾಗಾಗಿ ಎರಡು ಸಲ gap year ತೆಗೊಂಡಳು.  ಪಿ ಯು ಆದ ಮೇಲೆ. ಮತ್ತು graduation ಆದ ಮೇಲೆ ಕೆಲಸ ಮಾಡಿದ್ಲು, ಸೋಲೊ ಟ್ರಾವೆಲ್ ಮಾಡಿದ್ಲು...ಆಮೇಲೆ ಮಕ್ಕಳ ಪುಸ್ತಕಕ್ಕೆ illustrator ಆಗೋದು ಅಂತ decide ಮಾಡಿ ಜೀವನ ಸಾಗಿಸುತ್ತಿದ್ದಾಳೆ.

ಅವಳ ಸ್ನೇಹಿತರೆಲ್ಲ ನನಗೆ cool mom ಬಿರುದು ಕೊಟ್ಟಿದ್ದಾರೆ. But it has nothing to do with being a cool mom...this is way it should be alwaa? 

ಅವಳು ಆರ್ಟ್ಸ್ ತೆಗೊಂಡಳು 10th ಆದಮೇಲೆ, ಅದಕ್ಕೆ

ಎಷ್ಟೋ ಜನ 10th ಅಲ್ಲಿ ಎಷ್ಟು ಮಾರ್ಕ್ಸ್ ಅಂತಲೂ ಕೇಳ್ತಾರೆ...ಅವಳು 8 ನೆ ಕ್ಲಾಸ್ ನಲ್ಲಿದ್ದಾಗಲೇ ಆರ್ಟ್ಸ್ stream ನಲ್ಲಿ ಓದೋದು ಅಂತ ನಿರ್ಧರಿಸಿದ್ದಳು.

ಇಲ್ಲಿ ಒಂದು ಪ್ರಸಂಗ ಶೇರ್ ಮಾಡ್ಲೆ ಬೇಕು

ಪ್ರತಿಷ್ಠಿತ ಕಾಲೇಜು ಒಂದರಲ್ಲಿ admission ಗಾಗಿ ನಿಂತಿದ್ವಿ...ದೊಡ್ಡ ಸಾಲು. ಹಳೆ ವಿದ್ಯಾರ್ಥಿಗಳೇ volunteers ಆಗಿ ಫಾರ್ಮ್ ಎಲ್ಲ ಸರಿಯಾಗಿ fill ಮಾಡಿದಾರಾ ಇಲ್ವಾ ಅಂತ ಚೆಕ್ ಮಾಡಿ ಮುಂದಿನ ಲೆವೆಲ್ ಗೆ ಕಳಿಸ್ತಾ ಇದ್ರು. ಸಡನ್ ಆಗಿ anybody here who has scored more than 80 ℅ please raise your hands ಅಂದ್ರು. ನಿಹಾ ಕೈ ಎತ್ತಿದ್ಲು. ಹತ್ತಿರಕ್ಕೆ ಬಂದು ಚೆಕ್ ಮಾಡಿ  she has more than 90 ℅ ...ದೊಡ್ಡದಾಗಿ ಹೇಳಿ...why are you standing in this line, science section is in that direction ಅಂದ್ರು. ನಿಹಾ ' ನನಗೆ ಆರ್ಟ್ಸ್ stream ಬೇಕು..ಅದಕ್ಕೆ ಇಲ್ಲಿ ನಿಂತಿದ್ದೇನೆ ಅಂದ್ಲು. ಮಕ್ಕಳಿಗೆ ಏನು ಅನ್ನಿಸ್ತೋ ಏನೋ, ನಿಹಾಳ form ತೆಗೆದುಕೊಂಡು ಹೋಗಿ, ಬರುವಾಗ principal ಅವರನ್ನು ಕರೆದು.ಕೊಂಡು ಬಂದ್ರು. ಅವರೂ ತುಂಬಾ ಆಗ್ರಹ ಪಡಿಸಿದರು science ತೆಗೋ ಅಂತ...ಆಮೇಲೆ ಆರ್ಟ್ಸ್ ಯಾಕೆ ಅಂತ ಕೇಳಿದ್ರು...ನನಗೆ economics ಇಷ್ಟ ಅಂತಲೂ . ಕೊನೆಗೆ ಸುಮಾರು ಮಾತುಕತೆಯಾದ ನಂತರ ಒಪ್ಪಿ ಅಂತೂ admission ಆಯ್ತು.ಅಲ್ಲಿದ್ದ ಎರಡು ವರ್ಷ ಅವಳು first three position ನಲ್ಲಿ ಇದ್ಲು. French mattu psychology centum  scorer. 

Now she is a busy children's book illustrator and happy with her choice of profession.

ಇದರ ಜತೆ ಹಾಡು, japanese ಓದು, ಮಧ್ಯ ಮಧ್ತ ಅದು ಇದು workshop ಅಂತ ಆರಾಮಾಗಿದ್ದಾಳೆ. 

ಇನ್ನು ಅಕ್ಕ..ಅವಳೂ distinction ಸ್ಟೂಡೆಂಟ್. 10 ನೆ ಆದ ಮೇಲೆ science ತೆಗೊಂಡಿದ್ದು. Space ಸೈಂಟಿಸ್ಟ್ ಆಗುವ ಅಂದಾಜು.ಆಮೇಲೆ ಅವಳ ಕಾಲೇಜ್ ನಲ್ಲಿ career counselling ಅಂತ ಹಮ್ಮ್8ಕೊಂಡಿದ್ದರು. ಅಲ್ಲಿ ಹೋಟಲ್ ಮ್ಯಾನೇಜ್ ಮೆಂಟ್ ಬಗ್ಗೆ ಕೇಳಿ ಅದನ್ನು ಆಯ್ಕೆ ಮಾಡಿಕೊಂಡಳು. Entrance ಪರೀಕ್ಷೆಯಲ್ಲಿನೊಳ್ಳೆ rank ಬಂದಿದ್ದಕ್ಕೆ ಒಟ್ಟು 1 ವರೆ ಲಕ್ಶದಲ್ಲಿ 3 ವರ್ಷದ ಹೋಟೆಲ್ management ಕೋರ್ಸ್ ಮುಗಿಸಿ ಕೆಲವು ಸಮಯ ಕೆಲಸಕ್ಕೆ ಸೇರಿ..ಈಗ ಅವಳ ಸ್ವಂತದ್ದು biscoot factory ಮಾಡಿ ಕೇಕ್, ಕುಕ್ಕಿಸ್, ಚಾಕೋಲೇಟ್ ಎಲ್ಲ ಮಾಡ್ತಾಳೆ, ಮಾತ್ರವಲ್ಲ ಕೆಲವು ಡಾಕ್ಟರ್/nutritionist ಗಳುಗೆಲ್ಲ recipe develop ಮಾಡಿ ಕೊಡೋದು, review ಬರೆಯೋದು, ಫುಡ್ photography ಅಂತೆಲ್ಲ ಮಾಡಿಕೊಂಡು ಆರಾಮಾಗಿದ್ದಾಳೆ..

Let the kids be ಅಂತಷ್ಟೇ ಹೇಳಲಿಕ್ಕೆ ಹೊರಟಿದ್ದು. ಮೊನ್ನೆ ಯಾರೋ ನನಗೆ counselling ಬೇಕು.i want to bring up my teenage daughter in a good way...you are a good mom  ಅಂತ ಮೆಸೇಜ್ ಕಳಿಸಿದ್ರು. ನನ್ನ ಎಫ್ ಬಿ ಪೋಸ್ಟ್ ಗಳನ್ನು ನೋಡಿ decide ಮಾಡಿದ್ದಾರೆ ಬಹುಶ . ಅವರಿಗೆ ತಜ್ಞ ಸಲಹಾಗಾರರ ನಂಬರ್ ಕೊಟ್ಟೆ...

Both my daughters are gems. ಯಾವುದೇ ತೊಂದ್ರೆ ಕಿರಿಕಿರಿ ಮಾಡದೆ ಯಾವಾಗ ಬೆಳೆದು ಬಿಟ್ರೋ..❤️❤️🤔

ನನಗೆ ಚಿಕ್ಕವಳಿದ್ದಾಗ ತುಂಬಾ ದುಡ್ಡು,  ಕಾರು, ಬಂಗಲೆ, ಆಳು ಕಾಳು ಇಂತದ್ದೆಲ್ಲ್ಲ ಬೇಕು ಅಂತ ಆದೆಗಳಿದ್ದವು. ನನ್ನ ಇಬ್ಬರೂ ಮಕ್ಕಳಿಗೂ ಅಂತಹ expectations ಇಲ್ಲ. ನಿಜ ಹೇಳಬೇಕೆಂದರೆ ಅವರನ್ನು ನೋಡಿ ನಾನು ಕಲಿತಿದ್ದೇನೆ ಅನ್ನಲು ನನಗೆ ಯಾವ ನಾಚಿಕೇನೂ ಇಲ್ಲ 


ವೀಣಾ ಶಿವಣ್ಣ ಅವರ ಒಂದು ಪೋಸ್ಟ ನಲ್ಲಿ ವಿದ್ಯಾಭ್ಯಾಸದ ಬಗ್ಗೆ ಇತ್ತು...ಇವೆಲ್ಲ ನೆನಪಾಯ್ತು ಅಷ್ಟೇ.