October 1, 2013

ಕವನಗಳು ನೆವನಗಳು

ಮೊನ್ನೆ ನನ್ನ ಕಿರಿಯ ಮಿತ್ರರೊಬ್ಬರು ಮೈಲ್ ನಲ್ಲಿ ಕಳುಹಿಸಿದ ಪದ್ಯವನ್ನು ಓದುತ್ತಿರಬೇಕಾದ್ರೆ, ಇನ್ನೋರ್ವ ಮಿತ್ರರು ಫೋನ್ ಮಾಡಿದರು. ಅವರು ನನಗೆ ಕವನಗಳನ್ನು ಓದಿ ಹೇಳಿದರು. ಅವರು ಫೋನ್ ಇಟ್ಟ ಮೇಲೆ ಅನ್ನಿಸ್ತು ಛೆ! ಅವರು ಕವನ ಓದುತ್ತಿರುವಾಗ ಮಧ್ಯ ಮಧ್ಯ ನಾನು ಎಷ್ಟು ಮಾತಾಡ್ತೀನಿ ಅಂತ. ಯಾಕೋ ಇತ್ತೀಚಿಗೆ ತುಂಬ ಜನ ಕವನಗಳನ್ನು ಕಳಿಸೋರು. ಒಬ್ಬಮಹಾನುಭಾವರಂತು ಒಂದು ಹೆಜ್ಜೆ ಮುಂದೆ, ಯಾರಯಾರದ್ದೋ ಕವನಗಳನ್ನು copy paste ಮಾಡಿ ಕಳಿಸ್ತಾರೆ ಆದರೆ ಬರೆದವರ ಹೆಸರು ಹಾಕಲ್ಲ. ಅವರಿಗೆ ಹೇಳಿ ಹೇಳಿ ಸಾಕಾಯ್ತು 'credit should go to the writer/poet please mention his name' ಅಂತ. ನನ್ನ ಬೆಸ್ಟ್ ಫ್ರೆಂಡ್ ಒಬ್ಬರ ಕವನ ಅಂತ ಹೇಳಿ ಅವರು ಈಗಲೂ ಕವನಗಳನ್ನು ಹೆಸರಿಲ್ಲದೇ ಕಳುಹಿಸುತ್ತಿದ್ದಾರೆ. ಈಗ ನಾನು ಪ್ರತಿಕ್ರಯಿಸಲು ಹೋಗಲ್ಲ.

ಮೊದಲೆಲ್ಲ rhyming ಇದ್ರೆ ಮಾತ್ರ ಕವನ ಅಂದುಕೊಂಡಿದ್ದೆ.  ಈಗಂತೂ ಗದ್ಯವನ್ನು ಒಂದರಕೆಳಗೆ ಒಂದು ಸಾಲಾಗಿ ಬರೆದರೆ ಅದೇ ಪದ್ಯ. ಕೆಲವು ಪದ್ಯ/ಕವನಗಳ ತಲೆ ಬುಡ ಅರ್ಥ ಆಗಲ್ಲ. ಆಗ ನಾನು very interesting ಅಂತ ಅವರ ಇ ಮೈಲ್ ಗಳಿಗೆ ಉತ್ತರ ಕಳಿಸಿಬಿಡುವುದು. ಬಹುಶ: ಈ ಪೋಸ್ಟ್ ಓದಿದ ಮೇಲೆ ಕೆಲವರು ಕವನಗಳನ್ನು ಕಳುಹಿಸಲಿಕ್ಕೆ ಇಲ್ಲ ಅನ್ನಿಸುತ್ತೆ.

ನಾನು ಒಂದು ಕೈ ನೋಡಿಯೇ ಬಿಡ್ತೀನಿ ಅಂತ ಈ ಕೆಲವು ಕೀಟಲೆ ಗದ್ಯದಂತಾ ಪದ್ಯ ಬರೆದಿದ್ದೇನೆ.. ನಿಹಾ ಓದಿ ನಗ್ತಾ ಇದ್ದಳು. ಈಗ ನೀವು ಓದಿ.

ಎಚ್ಚರಿಕೆ: ಓದಿ ಮೈ ಮೇಲಿನ್ ಸ್ಥಿಮಿತ ಕಳೆದುಕೊಳ್ಳುವ ಸಾಧ್ಯತೆಯಿರುವುದರಿಂದ ದಯವಿಟ್ಟು ಕಂಪ್ಯೂಟರ್ ಸ್ಕ್ರೀನ್ ಬಳಿ ಯಾವುದೇ ಗಟ್ಟಿ ಸಾಮಾನನ್ನು ಇಡಬೇಡಿ. ಸಿಟ್ಟಿನಿಂದ ಸ್ಕ್ರೀನ್ ಗೆ ಬೀಸಿ ಒಗೆದು ಗ್ಲಾಸ್ ಚಿಂದಿ ಚೂರಾದರೆ ನಾನು ಜವಾಬ್ದಾರಳಲ್ಲಾ:

........೧...............
ಅದೇ ದಾರಿ, ಮರ ಆಕಾಶ
ನಿನ್ನ ಪರಿಚಯ ಆದ ಮೇಲೆ
ಈಗ ಮರಗಳಲ್ಲಿ ಹೂ, ಅದರ ಬಣ್ಣ, ಅದಕ್ಕೆ ತುಂಬಿರುವ ದುಂಬಿ
ದಾರಿಯೊಳಗಣ ಕಲ್ಲು ಮುಳ್ಳು ಸೂಕ್ಷ್ಮ ಜೀವ- ಜಂತುಗಳು
ಸೂರ್ಯೋದಯ, ಸೂರ್ಯಾಸ್ಥ, ಮಳೆಗೆ ತೊಯ್ದ ದಾರಿ ಮಣ್ಣು 
ಎಲ್ಲ ಸ್ಪುಟವಾಗಿ ಗೋಚರಿಸುತ್ತಿವೆಯಲ್ಲ
ಥ್ಯಾಂಕ್ಸ್ ಕಣೊ
ಆ ಕಣ್ಣಿನ ವೈದ್ಯರನ್ನು suggest ಮಾಡಿದ್ದಕ್ಕೆ

..........೨...................
ಮರುಭೂಮಿಯಂತೆ ಇದ್ದ ನನ್ನ ಜೀವನದಲ್ಲಿ
ಧುಮ್ಮಿಕ್ಕುವ ಜಲಧಾರೆಯಂತೆ ನೀನು ಬಂದೆ 
ಈಗ ನೀನು ನನ್ನ ಬಿಟ್ಟು ಹೊರಟಿರುವಿ
ನಾ ಏನೂ ನಿನ್ನ
ಬಿಟ್ಟು ಹೋಗಬೇಡ ನನ್ನ
ಹೇಳುತ್ತೇನೆ ಅಂತ ಭ್ರಮೆಯಲ್ಲಿರಬೇಡ
ನಾಳೆ ಬಾವಿ ತೋಡಿಸುವವಳಿದ್ದೇನೆ

..............೩................
ನಿನ್ನ ಬಿಸಿ ಉಸಿರು ಸೋಕಿ
ನನ್ನ ದಿನ ರಾತ್ರಿಗಳು ಪರಿಮಳಯುಕ್ತವಾಗಿವೆ
ನಿನ್ನ ನವಿರಾದ ಉಸಿರು ತಾಕಿ
ನನ್ನ ಕಾಲಕೆಳಗಿಂದ ಭುವಿ ಜಾರುತ್ತಿದೆ
ನಿನ್ನ ಟೂಥ್ ಪೇಸ್ಟ್ ಯಾವುದು ಚಿನ್ನಾ??
ನನ್ನ ಹೆಂಡತಿಗೂ ಅದನ್ನೆ ತರ್ತೀನಿ

............೪..................
ಇದು ಸ್ವಲ್ಪ ಸೀರಿಯಸ್ ಆಗಿದೆ) :-)
kaise bayaan kare hum per kya gujarti hai..aapka najm padhke
saas lete rehte hai per marne ka ehsaas  hota hai

(ಇಲ್ಲಿಗೆ ನನ್ನ ಕವನಗಳ ಪ್ರವರ ಮುಕ್ತಾಯವಾಯಿತು)

ಹಿಂದೆ ಒಂದೆರಡು ಬಾರಿ ಕವನ ಬರೆಯಲು ಪ್ರಯತ್ನಿಸಿದ್ದೇನೆ. ಅದರ ಕೊಂಡಿ ನನ್ನ ಹೊಸ ಓದುಗರಿಗೆ

1. ಹೂವಿನ ಅಭಿಲಾಷೆ

 2. ಅನನ್ಯಳಿಗೆ ಪ್ರೀಯಿಂದ

 3. ಗೀಚಿದ್ದು ಸುಮ್ಮ ಸುಮ್ಮನೆ 
**********************************************************************************************************************************
ಇದು ನಿಹಾರಿಕಾ ಬರೆದ ಕವನ (ನಮ್ಮ ಕಣ್ಣಿನ ಡಾಕ್ಟರ್ ಒಬ್ಬರಿಗೆ ಡಾಕ್ಟರ್ ಆಗಲಿಕ್ಕೆ ಇಷ್ಟ ಇರಲಿಲ್ಲ ಅಂತ ಅವರ ಕತೆ ಎಲ್ಲ ನಮ್ಮ ಶೇರ್ ಮಾಡಿಕೊಂಡಿದ್ರು. ಅದನ್ನು ಕೇಳಿ ನಿಹಾ ಹೀಗೆ ಬರೆದಿದ್ದಾಳೆ.)
Ah,what can I say,
Of my ordeals
My fate was sealed right the day,
I was born.

Never asking what I wanted to be,
Father dumped all his dreams and hopes on me
Not knowing that I didn’t want the power and prestige
That he so craved and lusted for.

I tried to be bold,really,I tried to speak,
However,all that emerged was a measly squeak!
Ah !what can I say,
My fate was sealed,right that day.

Got a seat with lady luck smiling
Slogging all day,no music no leisure
With teachers adding to good measure
“study,study and study,
Your book is your only buddy”
Goodness!how  had I fallen to such a rut,
With no time even to scratch my butt?

To cut a long story short,I’m finally a doctor
My parents say they’re proud
They proclaim it clear and loud
In front of guests,relatives and
   Even complete strangers,
That their son has finally become a doctor.

A lesson be learnt,my friend
To never succumb to your parents’ wishes,
If they are against your own
Lest you rot in a clinic like me
being someone,u don’t really want to be.
Trying to hide your frown
And replace it with an ingratiating smile
Because,after all,it is my job
To cure the weak and the terminally ill!
:-)

September 26, 2013

ಲಂಚ್ ಬಾಕ್ಸ್ / lunch box

Kabhi kabhi galat train bhi sahi jagah pahuncha deti hai” (Sometimes even a wrong train can get you to the right destination). ಕೆಲವೊಮ್ಮೆ ತಪ್ಪು ಟ್ರೈನ್ ಕೂಡ ನಮ್ಮನ್ನು ಸರಿಯಾದ ಸ್ಥಳಕ್ಕೆ ಕರೆದೊಯ್ಯುವುದು. ಇದು ಲಂಚ್ ಬಾಕ್ಸ್ ಸಿನಿಮಾದ tag ಲೈನ್.
ಏನಿದು ಲಂಚ್ ಬಾಕ್ಸ್ ಅಂದು ಕೊಂಡಿರಾ?? ಹೌದು ನಾನು ಬ್ಲಾಗ್ ನಲ್ಲಿ ಆವಾಗಾವಾಗ ನಿಹಾಳ ಲಂಚ್ ಬಾಕ್ಸ್ ಬಗ್ಗೆ ಕೊರಿತಾ ಇರ್ತೀನಿ. ಆದರೆ ಇದು ಸಧ್ಯಕ್ಕೆ ಹೆಸರು ಮಾಡ್ತಾ ಇರುವ ಸಿನಿಮಾ ಲಂಚ್ ಬಾಕ್ಸ್ ಬಗ್ಗೆ.
ಸರಳ ಸುಂದರ, ಅಚಾನಕ್ಕಾದ ತಿರುವು ಮುರುವುಗಳಿಲ್ಲದ ಸಿನಿಮಾ, ನಿಮ್ಮನ್ನು ಎರಡು ಚಿಲ್ಲರೆ ಗಂಟೆ ಹಿಡಿತದಲ್ಲಿರಿಸುವ ಕಥಾನಕ ಇದರಲ್ಲಿದೆ. ಇಲ್ಲಿ ಸಿನಿಮಾದ ಪೂರ್ಣ ಕತೆ ಹೇಳಲ್ಲ. ಯಾಕಂದ್ರೆ ನೀವೆಲ್ಲ ಇದನ್ನು ನೋಡ ಬೇಕು. ಮುಖ್ಯವಾಗಿ ಇದರಲ್ಲಿ ಹಾಡಿಲ್ಲ.  mushy mushy ಲವ್ ಸ್ಟೋರಿ ಇಲ್ಲ. 
ಗಂಡನ ಹೃದಯಕ್ಕೆ ಹೊಟ್ಟೆಯೇ ದಾರಿ ಅಂದುಕೊಂಡು ರುಚಿರುಚಿಯಾದ ಅಡಿಗೆ ಮಾಡಿ ಕಳಿಸುವ ಇಳಾ. ಆದರೆ ಡಬ್ಬ್ಬಾವಾಲಾನ (ಮುಂಬೈ ಮತ್ತು ಡಬ್ಬಾವಾಲ ಬಗ್ಗೆ ಗೊತ್ತಿಲ್ಲದವರಿಗೆ- ಡಬ್ಬಾವಾಲ ಅಂತ ಸರ್ಚ್ ಕೊಟ್ಟರೆ ಇವರ ಬಗ್ಗೆ ನಿಮಗೆ ಗೂಗಲ್ ನಲ್ಲಿ ಧಾರಾಳವಾದ ಮಾಹಿತಿ ಸಿಗುತ್ತೆ) ಕೃಪೆ ಅದು ತಪ್ಪು ಮನುಷ್ಯನಿಗೆ ತಲುಪುತ್ತದೆ. ಅವನ ಹೆಸರು ಸಾಜನ್ ಫರ್ನಾಂಡಿಸ್.  ಆ ಸಂಸ್ಥೆಯಲ್ಲಿ 35 ವರ್ಷಗಳ ಸೇವೆ ಸಲ್ಲಿಸಿ, ರಿಟೈರ್ ಮೆಂಟ್ ಗೆ ಕೆಲವೇ ತಿಂಗಳು ಇರುವ ವಿದುರ. ಇವರ ಮಧ್ಯೆ ಶುರುವಾಗುವ ಪತ್ರವ್ಯವಹಾರವೆ ಸಿನಿಮಾದ ತಿರುಳು.ಈ ಪತ್ರವನ್ನು ಲಂಚ್ ಬಾಕ್ಸ್ ಮೂಲಕ ಆ ಕಡೆಯಿಂದ ಈ ಕಡೆ and vice versa ರವಾನಿಸಲ್ಪಡುತ್ತದೆ. ಏಕತಾನತೆಯಿಂದ ಕೂಡಿದ ಬದುಕಿನಲ್ಲಿ ಸ್ವಲ್ಪ ರಂಗು ಬರಿಸುತ್ತದೆ ಈ ಪತ್ರವ್ಯವಹಾರ. ಇದೆಲ್ಲದರ ಮಧ್ಯೆ ಒಂದು ಇಂಟೆರೆಸ್ಟಿಂಗ್ ಪಾತ್ರ ಅಸ್ಲಮ್ ಶೇಕ್ ಮತ್ತು ಕೇವಲ ದನಿಮಾತ್ರದಿಂದ ಪರಿಚಯವಾಗುವ ಇಳಾನ ಮೇಲಿನ ಮನೆ flat ನಿವಾಸಿ ಶ್ರೀಮತಿ ದೇಶಪಾಂಡೆಯವರದ್ದು. ಸಿನಿಮಾದ ಮುಕ್ತಾಯವನ್ನು ನಮ್ಮ ನಿಮ್ಮ ಊಹೆಗೆ  imagination ಗೆ ಬಿಟ್ಟಿದ್ದಾರೆ. :-)
ನಂಗಿಷ್ಟ ಆಯಿತು. review ಎಲ್ಲ ಬರೆಯುವ ಕಲೆ ನನಗಿಲ್ಲ. ನೀವೆ ನೋಡಿ ಬಂದು ಹೇಗಿತ್ತು ಅಂತ ಹೇಳಿ.
ಈ ವೀಕ್ ಎಂಡ್ ನೀವು ನೋಡಿ ಬರಬಹುದು ಅಂತ ಇಲ್ಲಿ ಹಾಕ್ತಿದ್ದೇನೆ. ಏನೂ expectations ಇಟ್ಟುಕೊಳ್ಳದೇ ಹೋಗಿ
ಎಂಜಾಯ್.
ನನಗಿಷ್ಟವಾದ ಪೋಸ್ಟರ್

P.S: the lunch looked absolutely delicious........mmmmm
:-)

September 24, 2013

ನಿನ್ನೆ ಏನಾಯ್ತು ಗೊತ್ತಾ??

ಆಫಿಸ್ ನ ಸ್ವಲ್ಪ ಕೆಲಸ ಮತ್ತು ಮಿತ್ರರೊಬ್ಬರು ಹೇಳಿದ editing ಕೆಲಸ ಮುಗಿಸಿದಾಗ ಮಧ್ಯಾಹ್ನದ 3.30 ಗಂಟೆ. ಏನಾದರೂ ಓದುವ ಅಂದರೆ ಸಿಕ್ಕಿದ್ದು ತೀರ್ಥರಾಮ ವಳಲಂಬೆಯವರ 'ಮೃತ ಸಂಜೀವಿನಿ'. ನಮ್ಮ ರಾಯರು ತೀರ್ಥರಾಮ ಅವರ ಫ್ಯಾನ್. ಅವರ ಎಲ್ಲ ಪುಸ್ತಕಗಳು ನಮ್ಮಲ್ಲಿದೆ. (ಒಂದನ್ನು ಮಾತ್ರ ಸ್ನೇಹಿತೆಯ ಮೂಲಕ ಚಕ್ರವರ್ತಿ ಸೂಲಿಬೆಲೆ ಯವರಿಗೆ ಕೊಟ್ಟಿದ್ದು ಅವರಿಗೆ ತುಂಬಾ ಇಷ್ಟ ಆಗಿದ್ದಕ್ಕೆ ಅವರಿಗೇ ಅದನ್ನು ಉಡುಗೊರೆ  ಆಗಿ ಕೊಟ್ಟು ಬಿಟ್ಟೆ- ಇದನ್ನು ಬರೆಯುವಾಗ ನೆನಪಾಯ್ತು. ಇನ್ನೊಂದು ಪ್ರತಿಯನ್ನು  ತಂದು replace ಮಾಡಬೇಕು :-)) ಮೊನ್ನೆ ಅಂಕಿತಾಗೆ ಹೋದಾಗ ಇನ್ನೊಂದಿಷ್ಟು ಪುಸ್ತಕ ತಂದಿದ್ವಿ. ಅದರಲ್ಲೊಂದು ಈ ಪುಸ್ತಕ.
ತೀರ್ಥರಾಮ ಅವರ ಪುಸ್ತಕ ತಂದ ಕೂಡಲೆ ನಾನು ಅದರ ಹಿಂಪುಟ ಓದಿ, ಅದರೊಳಗಿನ ಚಿತ್ರಗಳನ್ನು ನೋಡಿ ಇಡುವುದು ಮಾಮೂಲು.ಅವರ ಬರಹಗಳಿಗೆ ಅವರೇ ರೇಖಾಚಿತ್ರ, ಮುಖಪುಟ ಎಲ್ಲ ಸಿದ್ದಪಡಿಸುತ್ತಾರೆ. ಸಿಕ್ಕಾಪಟ್ಟೆ ಟ್ಯಾಲೆಂಟಡ್ ಮಾತ್ರ ಅಲ್ಲ ಬರಹದ ಕಲೆ ತುಂಬಾ ಚೆನ್ನಾಗಿ ಸಾಧಿಸಿದೆ. ಸುಮ್ನೆ diagonal reading ಮಾಡಿ impress ಆಗಿದ್ದೇನೆ. ಅವರ ಪುಸ್ತ್ಕಕಗಳನ್ನೆಲ್ಲ ನನಗೆ 45 ಆದ ನಂತರ ಓದಲು ಪ್ರಾರಂಭಿಸುತ್ತೇನೆಂದುಕೊಂಡಿದ್ದೇನೆ . ಆದರೆ ಈ ಪುಸ್ತಕ ಓದಿಸಿಕೊಂಡು ಹೋಯ್ತು. ಓದ್ತಾ ಮಧ್ಯದಲ್ಲಿ ಮಕ್ಕಳಿಗೆ ಬಾಸುಂದಿ ಮಾಡಿಕೊಡುತ್ತೇನೆಂದು ಪ್ರಾಮಿಸ್ ಮಾಡಿದ್ದು ನೆನಪಾಗಿ ದಪ್ಪ ತಳದ ಪಾತ್ರೆಯಲ್ಲಿ ಹಾಲನ್ನು ಹಾಕಿ ಗ್ಯಾಸ್ ಮೇಲಿಟ್ಟು ಬಂದೆ. ಇನ್ನು ಕೆಲವು ಪುಟಗಳನ್ನು ಓದುವಷ್ಟರಲ್ಲಿ ಅಲ್ಲೆ ಕುಳಿತಿದ್ದ ನಿಹಾ, 'ಅಮ್ಮ, ನನಗೆ ಪೆಡಿಕ್ಯೂರ್ ಮಾಡ್ತೀಯಾ ಅಂತ ಕೇಳಿದ್ಲು. ನನಗೆ ಇಷ್ಟ ನನ್ನ ಮನೆಯವರಿಗೆಲ್ಲ ಪೆಡಿಕ್ಯೂರ್ ಮಾಡೋದು. ಸರಿ  ಟಬ್ ನ ಉಗುರುಬೆಚ್ಚಗಿನ ನೀರಿನಲ್ಲಿ ಸ್ವಲ್ಪ ಶ್ಯಾಂಪು ಹಾಕಿ ಅದರಲ್ಲಿ ಸ್ವಲ್ಪ ಬಾತ್ salt ಬೆರೆಸಿ ನಿಹಾಗೆ ಅದರಲ್ಲಿ ಕಾಲು ಇಳಿಬಿಡಲು ಹೇಳಿದೆ. ಸಿಸ್ಟಮ್ ನಲ್ಲಿ ಕಿಶೋರಿ ಅಮೋನ್ಕರ್ ಅವರ 'ಸಹೆಲಾ ರೆ' ಹಾಕ್ಕೊಂಡಿದ್ದೆ.
"ಅಮ್ಮ, ನಿನಗೆ ಕಿಶೋರಿ ಅಮೋನ್ಕರ್ ಇಷ್ಟ ಆಗುತ್ತಾರಾ?"
ನಾನು - ಹೂಂ. ನಿನಗೆ??
"ಅವರದ್ದು nasal ವಾಯ್ಸ್. ನನಗದು ಅಷ್ಟು ಇಷ್ಟ ಆಗಲ್ಲ'
ನಾನು- 'ನೀಹಾ ಮೊನ್ನೆ ಅಶ್ವಿನಿ ಭಿಡೆ ಕಾರ್ಯಕ್ರಮ ಚೆನ್ನಾಗಿತ್ತಂತೆ, ರವೀಂದ್ರ ಫೋನ್ ಮಾಡಿದ್ರು. ನಾವು ಆ ಬಂಡಲ್ ನಾಟಕಕ್ಕೆ ಹೋಗುವುದಕ್ಕಿಂತ ಅಶ್ವಿನಿ ಭಿಡೆ ಕಾನ್ ಸರ್ಟ್ ಎಟೆಂಡ್ ಮಾಡಬಹುದಿತ್ತು ನೋಡು."
ನಿಹಾ ತನ್ನ economics assignment ಮಾಡ್ತಾ ಕೂತಳು.
ನಾವು ಹೋಗಿದ್ದು the gossips of 47 ಎನ್ನುವ ಹಿಂದಿ ನಾಟಕಕ್ಕೆ. ಸದತ್ ಹಸನ್ ಮಾಂಟೋ ರವರ ಸಣ್ಣ ಕತೆಗಳನ್ನು ಆಧರಿಸಿದ ನಾಟಕ. ಆದರೆ ಕತೆಗಳಲ್ಲಿನ ಪಂಚ್ ನಾಟಕದ ಮುಖೇನ ನೀಡುವಲ್ಲಿ ಆ ತಂಡ ವಿಫಲವಾಯಿತು. ಯಾವುದೇ ಹಿಂದಿ ಶೋ ನಾವು ರಂಗಶಂಕರದಲ್ಲಿ ಈ ಹಿಂದೆ ನೋಡಿರಲಿಲ್ಲ. ಅದಕ್ಕೆ ಹೋಗಿದ್ವಿ. ಪ್ಲಸ್, ನಿಹಾಳ ಫ್ರೆಂಡ್ ಮತ್ತು ತಂದೆ ತಾಯಿ ಕೂಡ ಬರುವವರಿದ್ದರು. ಖುಶಿಯಾಯ್ತು ನನಗೆ ಅವರ ಜತೆ ಹಿಂದಿಯಲ್ಲಿ ಸಂಭಾಷಿಸಲು. ಫ್ರೆಂಡ್ ತಂದೆಗೆ Geological survey of India ದಲ್ಲಿ  ಕೆಲಸ. ಕುಮಾರಕೄಪಾ ರೋಡ್ ನಲ್ಲಿ ಮನೆಯಂತೆ. ಹಿಂದಿನ ಸಲ ಅವರು 'ಬಿಖರೆ ಬಿಂಬ್' ನಾಟಕಕ್ಕೆ ಬಂದು ಟಿಕೆಟ್ ಸಿಗದೆ, ಮಳೆರಾಯನ ಕೃಪೆಯಿಂದಾಗಿ, ನಾಟಕ ನೋಡುವವರು ನಾಟಕ ನೋಡಿ ಹೊರಗೆ ಬಂದರೂ, ಇವರು ಅಲ್ಲೇ ಸಿಕ್ಕಿ ಹಾಕಿಕೊಂಡಿದ್ದನ್ನು ಶೇರ್ ಮಾಡಿದರು.
'ಆಪನೆ 'ಪಾ' ಫಿಲ್ಮ್ ದೇಖಿ ಹೈ? ಉಸ್ಮೆ ಜೋ ಮಾ ಕಾ ರೋಲ್ ಕಿಯಾ ಹೈ ನಾ, ಮೈನೆ ಉನ್ಹೆ ಯಹಾಂ ದೇಖಾ' ಅಂತ ತುಂಬ excite ಆಗಿ ನಿಹಾ ನ ಫ್ರೆಂಡ್ ಅಮ್ಮ ಹೇಳಿದರು. ಅವರು ಮಾತು ಮುಗಿಸಿದ ಮೇಲೆ, ರಂಗ ಶಂಕರ ಅವರದ್ದೆ ಸಂಸ್ಥೆ ,ಅವರ ದಿವಗಂತ ಪತಿಯ ಹೆಸರಿನಲ್ಲಿ ಸಂಸ್ಥಾಪಿಸಿದ್ದು ರಂಗ ಶಂಕರ ಅಂತ ಹೇಳಿದೆ. ಅವರು ತೀರಾ ಇತ್ತೀಚಿಗೆ ಜೈಪುರ್ ದಿಂದ ಬೆಂಗಳೂರಿಗೆ ವರ್ಗವಾಗಿ ಬಂದಿದ್ದಾರೆ. 
 ಅದರಲ್ಲಿನ ಪಾತ್ರ ಮಾಡಿದ ಒಬ್ಬ ಹುಡುಗನ ಮಿಮಿಕ್ರಿ ಮಾಡಿ ನಿಹಾ ನ ನಗಿಸಿದೆ. ಪೆಡಿಕ್ಯೂರ್ ಮುಗಿಸಿ, ಕಿಶೋರಿ ತಾಯಿ ಯ ಇನ್ನೊಂದೆರಡು ಹಾಡು- ಅವಘಾ ರಂಗ್ ಎಕ್ ಝಾಲಾ', ಆಯಿ ರೆ ಬದರಿಯಾ ಕಾರಿ ಕಾರಿ, ಕೇಳುವಷ್ಟರಲ್ಲಿ , ಹಸಿವೆಯಿಂದ ಹೊಟ್ಟೆ ತಾಳ ಹಾಕಲಾರಂಭಿಸಿತು. ಸಮಯ ನೋಡಿದ್ರೆ 9.15. ಬಾಸುಂದಿ ರೆಡಿಯಾಗಿತ್ತು. ಅದಕ್ಕೆ ಸಕ್ಕರೆ ಬೆರೆಸಿ, ಸ್ತ್ಟವ್ ಆಫ್ ಮಾಡಿ, ಏಲಕ್ಕಿ ಕುಟ್ಟಿ, ದ್ರಾಕ್ಷಿ ಗೋಡಂಬಿ ಮೈಕ್ರೋವೇವಿಸಿ ಹಾಕಿ, ಫೋಟೊ ತೆಗೆದು, ಮಕ್ಕಳು ಊಟದ ನಂತರ ಅದನ್ನು ತಿನ್ನುವ ಹಾಗೆ ಫ್ರಿಜ್ ನಲ್ಲಿಟ್ಟೆ. ಅನ್ನದ ಪಾತ್ರೆ ಬಿಸಿ ಮಾಡಲು ತೆರೆದರೆ ಅದರಲ್ಲಿ ತುಂಬ ಕಡಿಮೆ ಅನ್ನ ಇತ್ತು. ಅನ್ನ ಮಾಡಿಕೊಳ್ಳುವಷ್ಟು ವ್ಯವಧಾನ ಇರಲಿಲ್ಲ.

ಆಗ ಆಪತ್ಬಾಂಧವ ಮ್ಯಾಗಿಯ ನೆನಪಾಯ್ತು. ಕೂಡಲೆ ಒಂದು ಚಿಕ್ಕ ನೀರುಳ್ಳಿ ಕಚಕಚನೆ ಚಕಚಕನೆ ಕಟ್ ಮಾಡಿದೆ, ಎರಡು ಬೆಳ್ಳುಳ್ಳಿ ಜಜ್ಜಿದೆ, ಫ್ರಿಜ್ ನಲ್ಲಿ ಫ್ರೋಜನ್ ಸ್ವೀಟ್ ಕಾರ್ನ್ ನೋಡಿದೆ. ಅದನ್ನು ಹೊರ ತೆಗೆದೆ. ಎಣ್ಣೆ ಬಿಸಿ ಮಾಡಿ ನೀರುಳ್ಳಿ - ಬೆಳ್ಳುಳ್ಳಿ ಹಾಕಿ ಕೈ ಆಡಿಸಿದೆ. ನಾಲ್ಕು ಹಸಿಮೆಣಸು ಹಾಕಿದೆ. ಅದಕ್ಕೆ ಒಂದು ಹಿಡಿ ಸ್ವೀಟ್ ಕಾರ್ನ್ ಬೆರೆಸಿ ಘಂ ಅನ್ನುವ ಪರಿಮಳ ಬರುತ್ತಿದ್ದ ಹಾಗೆ ನೀರು ಹಾಕಿದೆ. ಇಂಡಕ್ಷನ್ ಸ್ಟವ್ ಆದ್ದರಿಂದ ಅರ್ಧ ನಿಮಿಷಕ್ಕೆ ನೀರು ಕುದಿಯಲು ಶುರು. ಅದಕ್ಕೆ ಮ್ಯಾಗಿ ಮಸಲಾ ಪ್ಯಾಕ್ ನಿಂದ ಮಸಾಲೆ ಹಾಕಿದೆ. ಆಮೇಲೆ ನೂಡಲ್ಸ್ ಸೇರಿಸಿದೆ. ಫೋಟೊಗೋಸ್ಕರ ಕೊತ್ತಂಬರಿ ಸೊಪ್ಪಿನ ಶೋ off ಮಾಡಿದೆ. ತುಂಬಾ ಟೇಸ್ಟೀಯಾಗಿತ್ತು. ನನ್ನ ಬ್ಯಾಚಲರ್ ಬ್ಲಾಗ್ ಓದುಗ ತಮ್ಮಗೋಳ್ ಇದನ್ನು ಆರಾಮಾಗಿ ತಯಾರಿಸಿ ತಿನ್ನಬಹುದು.
ರಾಯರಂತು ಎರೆಡೆರಡು ಸಲ ಹಾಕಿಸಿಕೊಂಡು ತಿಂದ್ರು. ಎಷ್ಟು ಎಂಜಾಯ್ ಮಾಡಿದ್ವಿ ನಿನ್ನೆಯ ಡಿನ್ನರ್.

ರಾತ್ರಿ ನಿದ್ರೆ ಇಲ್ಲದೆ ಒಂದು ನ್ಯಾನೋ ಕತೆ ಹುಟ್ಟಿಕೊಂಡಿತು :
ಮಿತ್ರರಿಬ್ಬರು ಮಾತುಕತೆ ಆಡುತ್ತ ನಗುತ್ತ ಇದ್ದ ಹಾಗೆ ಬಾಗಿಲು ದಡದಡ ಸದ್ದು ಮಾಡಿತು. ಇವರ ರೂಂ ಗೆ ಆವಾಗಾವಾಗ ಮಿತ್ರರು ಭೇಟಿ ನೀಡುತ್ತಿದ್ದರಾದ್ದರಿಂದ ಆ ರಾತ್ರಿ ಅವರು ಯಾವತ್ತಿನ ಹಾಗೆ ಬಾಗಿಲು ತೆರೆದರು. ಬಂದೂಕು ಧಾರಿಯೊಬ್ಬ ಬಾಗಿಲು ತೆಗೆದವನನ್ನು ನೂಕಿ ಒಳಗೆ ಬಂದ
"ನಿನ್ನ ಹೆಸರೇನು?'
"ಪದ್ಮನಾಭ"
" ಸರಿ. ಆ ಕಡೆ ಸರಿ"
ಇನ್ನೊಬ್ಬ ರೂಂ ಮೇಟ್ ನನ್ನು ಉದ್ದೇಶಿಸಿ
'ನಿನ್ನ ಹೆಸರು'?
"ಸಾಹಿಲ್ ಖುರ್ಶೀದ್"
ಆಗ ಪದ್ಮನಾಭ "ಏನಲೇ ನೀನು ಮುಸ್ಲಿಮ್ ಆ? ಐದು ವರ್ಷ ಒಟ್ಟಿಗಿದ್ದರೂ ಇವತ್ತೆ ಗೊತ್ತಾಗಿದ್ದು ಅಂತ ಆಶ್ಚರ್ಯದಿಂದ ಕೇಳಿದ
ಬಂದೂಕುಧಾರಿ ಸಾಹಿಲ್ ನ ಎದೆಗೆ ಬಂದೂಕು ಗುರುಯಿಟ್ಟ. ಕೂಡಲೆ ಪದ್ಮನಾಭ ಸಾಹಿಲ್ ಗೆ ಎದುರಾಗಿ ನಿಂತು ನನ್ನ ಸ್ನೇಹಿತನನ್ನು ಕೊಲ್ಲುವ ಮೊದಲು ನಾನು ಸಾಯಬೇಕು
ಬಂದೂಕುಧಾರಿ ಗುಂಡಿ ಒತ್ತಿಯೇ ಬಿಟ್ಟ. ಒಂದೆ ಬುಲೆಟ್ ಇಬ್ಬರ ಹೃದಯ ಸೀಳಿ ಹಿಂದಿನ ಗೋಡೆಗೆ ಬಡಿಯಿತು. ಮಿತ್ರರಿಬ್ಬರೂ ಕುಸಿದರು. ಇಬ್ಬರ ರಕ್ತ ಕೂಡಿ ಕೋಡಿಯಾಗಿ ಹರಿಯಿತು, ಯಾವ್ ರಕ್ತ ಯಾರದ್ದು ಅನ್ನುವುದರ ಪರಿವೆಯೇ ಇಲ್ಲದೆ.
moral of the story is: ರಾತ್ರಿ ಮ್ಯಾಗಿಯಲ್ಲಿನ ಹಸಿಮೆಣಸು ತಿಂದು ಹೊಟ್ಟೆ ಉರಿದು ಇಂತಹ ಕತೆಗಳು ಹುಟ್ಟುವ ಸಂಭವವಿದೆ ಆದ್ದರಿಂದ ಹಸಿಮೆಣಸು ತಿನ್ನಬಾರದು.
ಅಷ್ಟೆ ಕಣ್ರೀssss........ನನ್ನ ಬ್ಲಾಗ್ ಗೊಂದು ಹೂರಣ ಕೂಡ ಸಿಕ್ಕಿತ್ತು
ನಿನ್ನೆಯ ದಿನಚರಿ

September 21, 2013

ನನಗಿಷ್ಟವಾದ ಕೆಲ ಮಾರಾಠಿ ಸಿನಿಮಾಗಳ ಪಟ್ಟಿ

ಗಂಧ (the Smell) ಇದನ್ನು ಮೊದಲಿಗೆ ನೋಡಬಹುದು. ಮೂರು ಕತೆಗಳು ಸೇರಿ ಒಂದು ಸಿನಿಮಾ. ಮೂರು ಕತೆಗಳಿಗೆ common factor (ಸು)-ವಾಸನೆ ಇದಕ್ಕೆ English ಸಬ್ ಟೈಟಲ್ ಇದೆ
http://www.youtube.com/watch?v=3HtsY7kAjoE

ಏಕ ಕಪ್ ಚ್ಯಾ (ಒಂದು ಕಪ್ ಚಹಾ)- ಮಾಹಿತಿ ಹಕ್ಕು ಕಾಯ್ದೆ (Right to Information Act)ವಿಷಯವನ್ನು ನೆಯ್ದು ಕೊಂಡು ಹಣೆದ ಒಂದು ಚೆಂದದ ಕತೆ.
http://www.youtube.com/watch?v=6fR0ZW9Z2lk

ನಿಜಕ್ಕೂ ಒಂದು ಫೀಲ್ ಗುಡ್ ಮೂವಿ - ಮಸಾಲಾ. ಮನಸ್ಸಿದ್ದರೆ ಮಾರ್ಗ ಅಥವಾ try until you succeed ಎಂಬ ನಾನ್ನುಡಿಯನ್ನು ನಿಜವಾಗಿಸುತ್ತದೆ 'ಮಸಾಲಾ'. ಸ್ವಲ್ಪ ಕನ್ನಡ ಕೂಡ ಇದೆ ಇದರಲ್ಲಿ
http://www.youtube.com/watch?v=sluLNpgJmSU

ಆಜ್ ಚಾ ದಿವಸ್ ಮಾಝಾ: (ಇವತ್ತಿನ ದಿನ ನನ್ನದು). ಮುಖ್ಯ ಮಂತ್ರಿಯ ಜೀವನದಲ್ಲಿ ನಡೆದ ಒಂದು ದಿನದ ಘಟನೆ.
http://www.youtube.com/watch?v=Rm7Iy_gauig

ಮಾಟಿಚ್ಯಾ ಚುಲಿ (ಮಣ್ಣಿನ ಒಲೆ) ಅತ್ತೆ ಸೊಸೆಯ ಕಹಾನಿ ಬಟ್ with a twist........100% enjoyment, ಸಖತ್ ಸಂಭಾಷಣೆಗಳು :-)
http://www.youtube.com/watch?v=o6JIxBJdXR0

ಮುಂಬೈ-ಪುಣೆ-ಮುಂಬೈ (mumbai-pune-mumbai) ಅಂಥ ಇಂಥ ಲವ್ ಸ್ಟೋರಿ ಅಲ್ಲ ಇದು :( just an idea: Bangalore-Mysore-Bangalore ಅನ್ನುವ ಸಿನಿಮಾ ಮಾಡಬಹುದು ಅನ್ನಿಸುತ್ತೆ)
http://www.youtube.com/watch?v=jblvKuq_a_k

ಪ್ರೇಮಾಚಿ ಗೋಶ್ಟ್ (ಒಂದು ಪ್ರೇಮದ ಕತೆ) ಇನ್ನೊಂದು ಲವ್ ಸ್ಟೋರಿ ನೇ but zara haT ke: dekho to jano:
http://www.youtube.com/watch?v=jTa0UTbbI0U

ಮೊದಲೆಲ್ಲ ತಮ್ಮಂದಿರಿಗೆ ಮರಾಠಿ ಸಿನಿಮಾಗಳ ಸಿಡಿ/ಡಿವಿಡಿ ಕಳಿಸಲು ಪೀಡಿಸುತ್ತಿದ್ದೆ. ಬೆಂಗಳೂರು ಅಂತರ್ ರಾಷ್ಟ್ರೀಯ ಸಿನಿಮಹೋತ್ಸವದಲ್ಲಿ ನನಗೆ ನಿಹಾ ಗೆ 'ಸಂಹಿತಾ' ಎನ್ನುವ ಸಿನಿಮಾ ನೋಡುವುದು ಮಿಸ್ ಆಗಿತ್ತು. ಆ ಸಿನಿಮಾ ಬಗ್ಗೆ ಗೂಗಲ್ ಸರ್ಚ್ ನಲ್ಲಿ ಹುಡುಕುತ್ತಿದ್ದಾಗ ನನಗೆ you-tube ನಲ್ಲಿ ಈ ಸಿನಿಮಾಗಳ online ಕೊಂಡಿ ಸಿಕ್ಕಿತು. ಆಮೇಲೆ ನಿಹಾ ಕಾಲೇಜ್ ಹೋಗುವ ಮುನ್ನ 'ಅಮ್ಮ ಎಂಜಾಯ್ ಯುವರ್ ಮರಾಠಿ ಫಿಲ್ಮ್ ಫೆಸ್ಟಿವಲ್' ಅಂತ ಹಾರೈಸಿ ಹೋಗುತ್ತಿದ್ದಳು. ಮರಾಠಿ ಸಿನಿಮಾ has grown in recent times.   ರಜೆಯನ್ನು ಎಂಜಾಯ್ ಮಾಡಿ. ದಸರಾ- ದೀಪಾವಳಿ ರಜೆಯಲ್ಲಿ ನೋಡಬಹುದು. ಮೇಲೆ ಕೊಟ್ಟಿರುವ ಎಲ್ಲ ಸಿನಿಮಾ happy ending ಗಳೇ......
:-)

September 15, 2013

ಆಲೂ ಪರಾಠಾ

ನೀರುಳ್ಳಿ price rise ಇದ್ದಾಗ ಮಾತ್ರವಲ್ಲ, ಯಾವಾಗ ಬೇಕು ಆವಾಗ ಮಾಡಬಹುದು. ಲಂಚ್ ಬಾಕ್ಸ್, ಟ್ರಿಪ್/ಪಿಕ್ ನಿಕ್ ಗಳಿಗೆಲ್ಲ ಮಾಡಿ ಒಯ್ಯಬಹುದು. 
ನೀರುಳ್ಳಿ ಅಂದಾಗ ನನಗೆ ನೆನಪಿಗೆ ಬರುವುದು: ನಾನು ಮುದುವೆಯಾಗಿ ಮುಂಬೈನಿಂದ ತೀರ್ಥಹಳ್ಳಿಗೆ ಬಂದಾಗ, ತೀರ್ಥಹಳ್ಳಿಯಲ್ಲಿ ನೀರುಳ್ಳಿ ಬೆಳ್ಳುಳ್ಳಿ ತಿನ್ನಲ್ಲ ಅಂದಾಗ ನಾನು ಫುಲ್ ಟೆನ್ಸ್. 365 ದಿನ , ದಿನದ ಮೂರು ಮೀಲ್ಸ್ (ತೀರ್ಥಹಳ್ಳಿಯಲ್ಲಿ ಸಂಜೆ ತಿಂಡಿಯ ಪರೀಪಾಠ ಕೂಡ ಇತ್ತು) without ನೀರುಳ್ಳಿ ಬೆಳ್ಳುಳ್ಳಿ, ಹೇಗೆ ಮಾಡ್ತಾರಪ್ಪ, ಹೇಗೆ ಇರ್ತಾರಪ್ಪ ಅಂದುಕೊಂಡಿದ್ದೆ. ಪ್ಲಸ್ ಮನೆಯಲ್ಲಿ ಖಾರ ಬಳಸುವುದು ಕಡಿಮೆ. ನನಗೆ ಮುಂಬೈನಲ್ಲಿ ಅಮ್ಮ ಅಡಿಗೆ ಖಾರ ಮಾಡಿದ್ದಷ್ಟು ಸಾಕಾಗ್ತಿರಲಿಲ್ಲ. ಕಿವಿಯಿಂದ ಹೊಗೆ ಬರಬೇಕು ಅಷ್ಟು ಖಾರದ ಪದಾರ್ಥತಿನ್ನುವ ನನಗೆ, ಪೂರ್ತಿ ಮೂರು ನಾಲ್ಕು ತಿಂಗಳು ಹಿಡಿತು ಶ್ರೀಕಾಂತರ ಮನೆ ಅಡಿಗೆಗೆ ಹೊಂದಿಕೊಳ್ಳಲು. ಸುಮ್ಮನೆ ಶೇರ್ ಮಾಡಿದೆ.ಈಗ ಈರುಳ್ಳಿ ಬೆಳ್ಳುಳ್ಳಿ ಹಾಕದೆ ಅಡಿಗೆ ಮಾಡುವುದರಲ್ಲಿ ನಾನು 'ಎತ್ತಿದ ಕೈ'....:-)
ಆಲೂ ಪರಾಠಾ ಮಾಡಲು:
ಬೇಯಿಸಿದ್ದ ಆಲೂಗಡ್ಡೆ- 4
ಸಣ್ಣಕ್ಕೆ ಕೊಚ್ಚಿದ ಹಸಿಮೆಣಸಿನಕಾಯಿ, ಕರಿಬೇವು, ಕೊತ್ತಂಬರಿ ಸೊಪ್ಪು, 
ಒಗ್ಗರಣೆಗೆ: ಎಣ್ಣೆ, ಸಾಸಿವೆ, ಮೇಲಿನ ಕೊಚ್ಚಲು, ಅರಿಸಿನ ಪುಡಿ ಮತ್ತು ಹಿಂಗು ಪುಡಿ

ಮಾಡುವ ವಿಧಾನ:
ಆಲುಗಡ್ದೆಯ ಸಿಪ್ಪೆ ಸುಲಿದು, ತುರಿದಿಟ್ಟು ಕೊಳ್ಳಿ.
ಎಣ್ಣೆ ಒಗ್ಗರಣೆಗೆ ಇಟ್ಟು, ಅದಕ್ಕೆ ಸಾಸಿವೆ ಕರಿಬೇವು+ಹಸಿಮೆಣಸಿಕಾಯಿ+ ಕರಿಬೇವು ಕೊಚ್ಚಲು ಸೇರಿಸಿ, ಆಮೇಲೆ ಹಿಂಗಿನ ಪುಡಿ, ಅರಿಸಿನ ಪುಡಿ ಬೆರೆಸಿ.

ಇದನ್ನು ತುರಿದಿಟ್ಟ ಆಲೂಗಡ್ಡೆಗೆ , ಉಪ್ಪಿನ ಜತೆ ಬೆರೆಸಿಟ್ಟುಕೊಂಡು stuffing ತಯಾರಿಸಿಟ್ಟುಕೊಳ್ಳಿ.

ಗೋದಿ ಹಿಟ್ಟಿನಿಂದ ಮೃದುವಾದ ಹಿಟ್ಟು ಕಲಸಿಟ್ಟುಕೊಳ್ಳಿ.
ಚಪಾತಿಯನ್ನು ಚಿಕ್ಕದಾಗಿ ಲಟ್ಟಿಸಿ, ಒಂದು ಸ್ಪೂನ್ ಸ್ಟಫಿಂಗ್ ಇಟ್ಟು ಪುನ: ಉರುಟು ಮಾಡಿ, ಚಪಾತಿ ಲಟ್ಟಿಸಿದ ಹಾಗೆ ಲಟ್ಟಿಸಿ, ಎಣ್ಣೆ ಹಾಕಿ ಎರಡೂ ಬದಿ ಕೆಂಪಗಾಗುವ ತರಹ ಬೇಯಿಸಿ.

ಇದನ್ನು ಬಿಸಿಯಿದ್ದಾಗಲೇ ಯಾವುದೇ ಸೈಡ್ ಸ ಇಲ್ಲದೇ ತಿನ್ನಬಬಹುದು. or ಇದಕ್ಕೆ ಬೆಣ್ಣೆ, ಲಿಂಬೆ ಹಣ್ಣಿನ ಉಪ್ಪಿನ ಕಾಯಿ ಚೆನ್ನಾಗಿರುತ್ತೆ.
ನಾನು ಕೊತ್ತಂಬರಿ ಸೊಪ್ಪು+ ಪುದಿನಾ ಸೊಪ್ಪಿನ ಡಿಪ್ ತಯಾರಿಸಿದೆ
ಇದನ್ನು ಮಾಡುವ ವಿಧಾನ:
ಸ್ವಲ್ಪ ಮೊಸರನ್ನು ಮಲ್ ಬಟ್ಟೆಯಲ್ಲಿ ಕಟ್ಟಿಡಿ. ನೀರೆಲ್ಲ ಬಸಿದು ಹೋಗಲಿ.
ಮಿಕ್ಸಿಯಲ್ಲಿ ಕೊತ್ತಂಬರಿ ಸೊಪ್ಪು, ಪುದೀನಾ ಸೊಪ್ಪು ಮತ್ತು ಹಸಿಮೆಣಸಿನಕಾಯಿಯನ್ನು ನೈಸ್ ಆಗಿ ರುಬ್ಬಿ, ಇದಕ್ಕೆ ಗಟ್ಟಿಯಾದ ಮೊಸರು(ಕಟ್ಟಿಟ್ಟ ಮೊಸರು) ಬೆರೆಸಿ ಇನ್ನೊಂದು ಸುತ್ತು ರುಬ್ಬಿ. ಉಪ್ಪು ಸಕ್ಕರೆ ಬೆರೆಸಿ. ನಿಮ್ಮ ಡಿಪ್ ತಯಾರ್.
ಎಂಜಾಯ್
:-)

September 12, 2013

ಜೀವನ (ವೈ) ಚಿತ್ರಗಳು


ಚಿತ್ರ- 1
ಊರಲ್ಲಿ ಕುಟುಂಬದಲ್ಲಿ ಮದುವೆ. 'ಅಮ್ಮ ನೀನು, ಅಪ್ಪ ತಂಗಿ ಎರಡು ದಿನ ಮೊದಲೇ ಹೋಗಿರಿ. ನಾನು ಮದುವೆ ದಿನ ತಲುಪುತ್ತೀನಿ. ನನಗೆ ಹೆಚ್ಚಿನ ರಜೆಯಿಲ್ಲ' ಅಂದ ಹುಡುಗ. ಅಲ್ಲಿ ಮದುವೆಯಮೂಹೂರ್ತದ ಸಮಯದಲ್ಲೂ ಮಗ ನಾಪತ್ತೆ. ಬಂದಿದ್ದು ಬೆಂಗಳೂರಿನಿಂದ ಕರೆ 'ನಿಮ್ಮ ಮಗ ಸೀಮೆ ಎಣ್ಣೆ ಸುರಿದು ಬೆಂಕಿಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ' ಅಂತ. ಪ್ರೇಮ ವೈಫಲ್ಯ ಕಾರಣವಂತೆ. ಅವನು ಸತ್ತು ಯಾರಿಗೆ ಎನು ಉಪಯೋಗ ವಾಯ್ತು. ಜೀವದಿಂದಿದ್ದು ತನಗೋಸ್ಕರ ಅಲ್ಲದಿದ್ದರೂ ಇತರರಿಗೆ ಉಪಯೋಗವಾಗುವಂತಹದ್ದು ಏನಾದರೂ ಮಾಡಿ ಬದುಕಬಹುದಿತ್ತು. ಛೆ.

ಚಿತ್ರ-2
ಅವರಿಬ್ಬರಿಗೂ ಒಬ್ಬರಿಗೊಬ್ಬರ ಮೇಲೆ ಅತ್ಯಂತ ಪ್ರೇಮ. ಆಗಲೇ ಒಂದು ದಿನ ಅವನಿಗೆ ಮಾರಣಾಂತಿಕ ಹೃದಯ ಸಂಬಂಧಿ ಕಾಯಿಲೆ ಅಂತ ಗೊತ್ತಾಗಿದ್ದು. ಟಿಕ್ಕಿಂಗ್ (ticking) ಟೈಮ್ ಬಾಂಬ್ ತರಹ ಹೃದಯ ಯಾವಾಗ ಸ್ಪೋಟಗೊಳ್ಳುತ್ತೋ ಗೊತ್ತಿಲ್ಲ ಅಂತ ಹೇಳಿದರು ಡಾಕ್ಟರ್. ವಿಷಯ ತಿಳಿದ ಅವಳ ಅಪ್ಪ'ಅವನಿಗೆ ನಿನ್ನನ್ನ ಮದುವೆ ಮಾಡಿ ಕೊಡುವುದರ ಬದಲು ನಿನ್ನ ಕುತ್ತಿಗೆ ಹಿಚುಕಿ ಕೊಲ್ಲುವುದು ಲೇಸು, ಅಂತ ಅಬ್ಬರಿಸಿದ. ಇವಳಿಗೀಗ ನಿದ್ದೆಯಿಲ್ಲ ಅಂತ ಅವನಿಗೆ ಚಿಂತೆ, ಅವಳಿಗೆ ಅವನು ಮಲಗಿ ಇನ್ನು ಏಳದಿದ್ದರೆ ಎನ್ನುವ ಚಿಂತೆಯಿಂದ ಇಬ್ಬರೂ ಹೈರಾಣು.

ಚಿತ್ರ-3
ನಾವು ಆ ಊರಲ್ಲಿ 5 ವರ್ಷಗಳ ಕಾಲ ಇದ್ದೆವು. ಅವರು ದಿನಾ ಸಂಜೆ ನಮ್ಮ ಮನೆಗೆ. ಬಂದು ಮಾಲವಿಕಾಳ ಜತೆ ಆಟ. ಅವರ ಮನೆ ಮಾತು ತುಳು ಆದರೂ ಅವರಿಗೆ ಗೊತ್ತಿದ್ದ ಕೊಂಕಣಿಯಲ್ಲಿ ಮಾಲವಿಕ ಜತೆ ಮಾತಾಡಿ ಮಾತಾಡಿ ಮಾಲವಿಕ ಕೊಂಕಣಿ ಕಲಿಯುವ ಹಾಗಾಯ್ತು. ಆಫಿಸ್ ಬಿಟ್ಟ ಕೂಡಲೆ (ಅವರು ಶ್ರೀಕಾಂತ ಕಲೀಗ್) ಅವರು ನಮ್ಮ ಮನೆಗೆ ಬಂದು ಮಾಲು ಜತೆ ಕಿಚ ಪಿಚ ಮಾತು ನಡೆಸ್ತಿದ್ದರೆ ನಾನು ನನ್ನ ಬ್ಯಾಚುಲರ್ಸ್ ಡಿಗ್ರೀ (?) ಪರೀಕ್ಷೆಗೆ ಓದುತ್ತಿದ್ದೆ. ಮಾಲವಿಕಾಗೆ ಅವರ ಹೆಸರು ಪೂರ್ತಿ ಹೇಳಲು ಬಾರದೆ ಅವರಿಗೆ ಪೇ ಆಂಟಿ ಅಂತ ಸಂಭೋಧಿಸುತ್ತಿದ್ದಳು. ಅವರು ಅವಳಿಗೆ 'ಪುಟ್ಟಮ್ಮ' ಅಂತ ಕರೆಯುವರು. 5.30 - 6.00 ಆಗುತ್ತಿದ್ದಂತೆ ಶ್ರೀಕಾಂತ ಮತ್ತು ಅವರ ಹಲವಾರು ಮಿತ್ರರು ನಮ್ಮ ಮನೆಗೆ. ನನಗೆ ಓದಿನಿಂದ ಬ್ರೇಕ್. ಅವರೆಲ್ಲರ ರಾತ್ರಿ ಊಟ ಹೆಚ್ಚು ಕಡಿಮೆ ನಮ್ಮ ಮನೆಯಲ್ಲೇ. ನನಗೆ ಅವರೆಲ್ಲ ಮೇಲೆ ನನ್ನ ಅಡಿಗೆ ಪ್ರಯೋಗಗಳಿಗೆ ಬಲಿಪಶು ಮಾಡುವುದರಲ್ಲಿ ಇನ್ನಿಲ್ಲದ ಖುಶಿ. ಆಮೇಲೆ ಮಾತು, ಕತೆ, ನಗು ಅಂತ ಹತ್ತು ಗಂಟೆಯವರೆಗೆ ಅವರೆಲ್ಲ ನಮ್ಮ ಮನೆಯಲ್ಲೆ. ಇದೇ ದಿನಚರಿಯಾಗಿತ್ತು. 5 ವರ್ಷದ ನಂತರ ನಮಗೆ ಅಲ್ಲಿಂದ ಟ್ರಾನ್ಸಫರ್ ಆಯ್ತು. ನಾವು ಹೊರಡುವ ಒಂದು ದಿನ ಮುಂಚೆ ಪೇ ಆಂಟಿ ಮಾಲವಿಕಾಳನ್ನು ತಬ್ಬಿ ಅತ್ತಿದ್ದೆ ಅತ್ತಿದ್ದು. 'ಮಾಲತಿ, 5 ವರ್ಷದಿಂದ ನಾನು ದಿನಾ ನಿಮ್ಮ ಮನೆಗೆ ಬರ್ತಿದ್ದೇನೆ. ಆದರೂ ಒಂದು ಸಲವೂ ಕುತೂಹಲಗೋಸ್ಕರ ನನ್ನ ಬಗ್ಗೆ ನೀವು ಕೇಳಲೆ ಇಲ್ಲ'? ಎಲ್ಲರಿಗೂ ಎಷ್ಟೊಂದು ಕೂತುಹಲ ನನ್ನ ಬಗ್ಗೆ. ಇಷ್ಟು ವಯಸ್ಸಾದರೂ ಒಬ್ಬಳೆ ಇದ್ದೀನಿ, ಮತ್ತು ನನ್ನ ಬಗ್ಗೆ ಚಿತ್ರ ವಿಚಿತ್ರವಾಗಿ ಮಾತನಾಡುತ್ತಾರೆಂದೂ ಗೊತ್ತಿದೆ. ನೀವೊಬ್ಬರು ಬೇರೆ ತರಹ ಪಾ".
ನನಗೊಂದು ಅಭ್ಯಾಸ. ಯಾರಾದರೂ ನನಗೆ ಇಷ್ಟ ಆದರೆ ಅವರು ಹೇಗಿರುತ್ತಾರೆ ಅವರನ್ನು ಹಾಗೇ (accept) ಸ್ವೀಕರಿಸುವುದು. ಅವರನ್ನು ಬದಲಾಯಿಸುವ ಪ್ರಯತ್ನ, ಅವರ ಬಗ್ಗೆ ವಿಶೇಷ ಕುತೂಹಲ, ಅನಾವ್ಯಶಕ ಉಪದೇಶ ಮಾಡುವುದು ಇತ್ಯಾದಿಗಳು ನನಗಿಲ್ಲ. ಅವರೇನಾದರೂ ಹೇಳಿದ್ದಲ್ಲಿ ಸುಮ್ಮನೆ ಕೇಳಿಸಿಕೊಳ್ಳುತ್ತೇನೆ. ಹಾಗೆ ಅವರು ಈ ಕತೆ ಹೇಳಿದರು.
ಪೇ ಅವರದ್ದು ಚಿಕ್ಕಂದಿನಲ್ಲಿ ಅಂದರೆ ತೊಟ್ಟಿಲಲ್ಲೆ ಮದುವೆ ಆಗಿತ್ತಂತೆ. ಆ ಹುಡುಗನ ಫ್ಯಾಮಿಲಿ ಸಿಕ್ಕಾಪಟ್ಟೆ rich . ಅವನು ಇಂಜಿನೀಯರಿಂಗ್ ಓದುತ್ತಿದ್ದಾಗ ಓದುವುದಕ್ಕಿಂತ ಬರೀ ದುಂದುವೆಚ್ಚ ಮಾಡುವುದೇ ಹೆಚ್ಚಿತ್ತಂತೆ. ಹಾಗೇ ಒಂದು ಸಲ ದುಡ್ಡು ಬೇಕೆಂದಾಗ ಮನೆಯವರು ಕೊಡಲು ಒಪ್ಪಲಿಲ್ಲ ಅಂತ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡನಂತೆ. ಆಗ ಪೇ ಗೆ ಕೇವಲ 10 ರ ವಯಸ್ಸಂತೆ. ಆಗಲೇ ಅವಳಿಗೆ ವಿಧವೆಯ ಪಟ್ಟ ಕಟ್ಟಿದರು. ಬ್ಯಾಂಕ್ ನಲ್ಲಿ ಉದ್ಯೋಗ ಏನೋ ಇದೆ. ಆದರೆ ಅವರು ಒಂಟಿ. ಅವರಿಗೆ ಹಲವಾರು ಅಕ್ಕ ಅಣ್ಣಂದಿರು, ಓದಿ, ಎಲ್ಲ ದೇಶ ವಿದೇಶದಲ್ಲಿಕೆಲಸದಲ್ಲಿದ್ದಾರೆ. ಯಾರಿಗೂ ಅವಳಿಗೆ ಮರು ಮದುವೆ ಮಾಡಿಕೋ ಅನ್ನಲು  ತೋಚಲಿಲ್ಲವೇ? ಅವರ ಮಕ್ಕಳ ಬಾಣಂತನ, ಅವರಿಗೆ ಬೇಕಾದಾಗ ಅವರ ಕೆಲಸಗಳು , ಊರಲ್ಲಿ ಕಟ್ಟಿದ ದೊಡ್ಡ ಮನೆಯ ಉಸ್ತುವಾರಿ ನೋಡಿಕೊಳ್ಳಲು ಅವರು ಬೇಕು. ಈಗೀಗ ಅವರು ತುಂಬ ಒಂಟಿ.

ಚಿತ್ರ-4
ಆತನಿಗೆ ಆ ಮಾರಣಾಂತಿಕ ಕಾಯಿಲೆಯಿದೆಯೆಂದು ಆತನ 15 ವರ್ಷ ವಯಸ್ಸಿದ್ದಾಗ ಗೊತ್ತಾಗಿತ್ತು. 19 ರ ತನಕ ಜೀವನದಿಂದುಳುವುದು ಕಷ್ಟ ಅಂದಿದ್ದರು ವೈದ್ಯರು. ಆದರೂ ಆ ವಿಷಯವನ್ನು ಮುಚ್ಚಿಟ್ಟು ಒಂದು ಬಡಕುಟುಂಬದ ಹೆಣ್ಣನ್ನು ಆತನಿಗೆ ಕಟ್ಟಿದರು. ಇಬ್ಬರು ನಾದಿನಿಯರಿಗೆ ಅಂವ ಜೀವದಿಂದಿರುವುದಕ್ಕಿಂತ ,ಅವನು ಹೇಗೂ ಬೆಕ್ಕಿನ ತಲೆ ಮೇಲೆ ಇಟ್ಟ ದೀಪ- ಅವನು ಸತ್ತ ಮೇಲೆ ಅವನ ಹೆಂಡತಿಯನ್ನು ಮನೆಕೆಲಸಕ್ಕೆ ಇಡಬಹುದು' ಅನ್ನುವಂತಹ ದುರಾಲೋಚನೆ. ಆ ಹೃದಯಸಂಬಂಧಿ ಕಾಯಿಲೆ ಎಷ್ಟೊ ಲಕ್ಷ ಜನರಲ್ಲಿ ಒಬ್ಬರಿಗೆ ಬರುವುದಂತ ಇತ್ತೀಚಿಗಿನ ಮೆಡಿಕಲ್ ಶೋಧ. ಆಗ ಇದು ಗೊತ್ತಿರಲಿಲ್ಲ. ಅವರ ಮಾತನ್ನು ಕೇಳಿದ ಹೆಣ್ಣು ಕಂಗಾಲು. ನಿಟ್ಟುಸಿರು ಬಿಟ್ಟು ನನ್ನ ತಾಳಿಭಾಗ್ಯ ಇದ್ದಂತೆ ಆಗುವುದು ಎಂದುಕೊಂಡಳು.
ಆದರೆ ಅವನು ನಾಲ್ಕು ಮಕ್ಕಳ ತಂದೆ, 7 ಜನ ಮೊಮ್ಮಕ್ಕಳು ಆತನಿಗೆ ಮತ್ತು ಮೊನ್ನೆಯಷ್ಟೆ 73 ರ ಹುಟ್ಟಿದ ಹಬ್ಬ ಆಚರಿಸಿದ ಹೇಗಿದೆ? ಇದು miracle ಅಲ್ಲದೇ ಮತ್ತೇನು? ಡಾಕ್ಟರ್ ಕೂಡ ಹುಬ್ಬೇರಿಸಿದ್ದಾರೆ. :-)

( Painting by me:i tried to paint using ArtRage. Friend said its nice so putting it up here)
:-)

September 10, 2013

ಗಣಪ 2013 etc in pictures only

ನಮ್ಮ ಪರಿಸರ ಪ್ರೇಮಿ ಗಣಪ. ಈ ವರ್ಷ ಸಮರ್ಪಣ ಟ್ರಸ್ಟ್ ನಿಂದ ದುಪ್ಪಟ್ಟು ದುಡ್ಡು ಕೊಟ್ಟು ತಂದಿದ್ದು. ಕಳೆದ ನಾಲ್ಕು ವರ್ಷಗಳಿಂದ ನಾವು ಒಬ್ಬ ತಮಿಳು ಮಹಿಳೆಯಿಂದ ಮಣ್ಣಿನ ಗಣಪ ತರುತ್ತಿದ್ದದ್ದು. ನಮಸ್ಗೋಸ್ಕರ ಅವಳು ಮಾಡಿ ತರುತ್ತಿದ್ದಳು. ಯಾಕೋ ನನಗೆ ಬೇಸರ ಆಯ್ತು ಅವಳ ನೆನಪು ಆಗಿ. ಆ ಮೂರ್ತಿ ಕೂಡ ತರಬಹುದಿತ್ತ್ತು
ಕ್ಲಾಸ್ ರೂಮ್ ನಲ್ಲಿ ಪಾಠ ಕೇಳ್ತಾ ಕೇಳ್ತಾ ನಿಹಾ ಪುಸ್ತಕದಲ್ಲಿ ಮೂಡಿದ note-book ಗಣಪ. ಅವಳ ಎಲ್ಲ ನೋಟ್ ಪುಸ್ತಕಗಳಲ್ಲಿ ಇಂತದ್ದೆ ಡೂಡಲ್ಸ್.
Modern ಗಣಪ
copy-cat ಗಣಪ, ಅಂದ್ರೆ copy-cat ನಾನು. ಮದುವೆಯ ಆಮಂತ್ರಣ ಪತ್ರದಲ್ಲಿದ್ದುದ್ದನ್ನು ನೋಡಿಕೊಂಡು ನಾನು ಬಿಡಿಸಿದ್ದು

ಕ್ಲಾಸ್ ರೂಂ ಗಣಪ. ಪಾಠ ಕೇಳುವಾಗ ಇಂತದ್ದು ಮಾಡುತ್ತಾಳಾದ್ರೂ ಕ್ಲಾಸಿಗೆ ಮೊದಲ rank ಅವಳಿಗೇ. ಎಲ್ಲಾ ಆ ಗಣಪನ ಕೃಪೆ
ನೈವೇದ್ಯಂ ಸಮರ್ಪಯಾಮೀ......:-) ಅಲ್ಲಿಂದ ಇಲ್ಲೀವರೆಗೆ. ನಮ್ಮಲ್ಲ್ಲಿ ಇಡೀ ತಪ್ಪಲೆಯನ್ನೇ ದೇವರಿದಿರಿಗೆ ಇಟ್ಟು ನೈವೇದ್ಯ. ನಮ್ಮ ರಾಯರು ಇನ್ ಪುರೋಹಿತರ get-up..:-)

ಒಂದು ಪೂಜಾ ಪೋಸ್
ಮಿತ್ರ ಶ್ರೀವತ್ಸ ಜೋಶಿಯವರು Washington D C ಯಿಂದ ಕಳುಹಿಸಿದ ಪರಿಸರ ಪ್ರೇಮಿ ಗಣಪ. ಉಡುಪಿಯ ಹರಿದಾಸ ಲಹರಿಯವರು ಜೋಳದ ಹುಲ್ಲು , ಗೋಣಿಚೀಲ ಮತ್ತು ಜೇಡಿಮಣ್ಣು (clay) ಉಪಯೋಗಿಸಿ ಮಿತ್ರರೊಂದಿಗೆ ಸೇರಿ ಮಾಡಿದಂತಹ 100% eco friendly ಗಣಪನ ಚಿತ್ರಗಳು ಕೆಳಗಿವೆ. ಎಷ್ಟು ಚೆನ್ನಾಗಿ ಮೂಡಿಬಂದಿದೆ Ganesha's features. ನನಂತೂ ಟೋಟಲೀ ಫೀದಾ........ನೀವು ನೋಡಿ



ಒಂದು ವಾರ ಪೂಜೆ ಸಲ್ಲಿಸಿ ವಿಸರ್ಜನೆ ನಡೆಸಿ , ಮೆರವಣಿಗೆಯಲ್ಲಿ ಗಣಪನನ್ನು ಅಲ್ಲಿನ ದೊಡ್ಡ ಲೇಕ್ ಗೆ ಕರೆದೊಯ್ದು ಬಿಡಲಾಗುವುದಂತೆ.
:-)