June 3, 2026

ನೇರಳೆ ಹಣ್ಣು

 ನಮ್ಮ ಮನೆಯ ಬಳಿಯ ನಾನು ವಾಕ್ ಹೋಗುವ ಪಾರ್ಕ್ ನಲ್ಲಿ ಮೂರು ನೇರಳೆ ಹಣ್ಣಿನ ಮರಗಳಿವೆ. ದೊಡ್ಡ, ಸಣ್ಣ ಗಾತ್ರದ ನೇರಳೆ ಹಣ್ಣು. ಹಣ್ಣಾಗಿ ನೆಲದ ಮೇಲೆ ಬಿದ್ದಿರ್ತವೆ.  ನಮ್ಮ flat ಎದುರುಗಡೆ ದೊಡ್ಡ ನೇರಳೆ ಹಣ್ಣಿನ ಮರ, ಅದು ಜೂನ್-ಜುಲೈ ನಲ್ಲಿ ಹಣ್ಣು ಆಗ್ತವೆ. ಈಗೀಗ diabetes ಗೆ ಒಳ್ಳೇದು ಅಂತ ಸಿಕ್ಕಾ ಪತ್ತೆ ದುಬಾರಿ. ಇವತ್ತು ದೋಸೆ.ಹುಯ್ತಾ ಮಧ್ಯದಲ್ಲಿ ಇದರದ್ದೊಂದು ಫೋಟೋ ಶೂಟ್ ಮಾಡಿದೆ. ನಿಹಾಗೆ breakfast ಜತೆ ಇವತ್ತು ಜಾಮೂನು ಜ್ಯುಸ್ shot. ಗಾಜಿನ ಗ್ಲಾಸ್ ನ rim ಗೆ ಸ್ವಲ್ಪ ಉಪ್ಪು ಮತ್ತು ಖಾರದ ಪುಡಿ..ಜ್ಯುಸ್ ನಲ್ಲಿ ಸ್ವಲ್ಪ ಕಾಲಾ ನಮಕ್, ಮನೆಯಲ್ಲಿ ಬೆಳೆಸಿದ ಪುದಿನಾ....🙂👍🙏

ಸ್ವಲ್ಪ ಹೆಚ್ಛೆ ಕೆಲಸ ಆಗುತ್ತೆ ಜ್ಯುಸ್ ಮಾಡಲು ಆದರೆ ನನಗೆ ನೇರಳೆ, ದಾಳಿಂಬೆ ಹಣ್ಣಿನ ಜ್ಯುಸ್ ಮಾಡಲು ತುಂಬಾ ಖುಷಿ..🤔




ಶ್ರೀಕಾಂತ್ ಹೀಗೆ ನೇರಳೆ ಹಣ್ಣು/ತರಕಾರಿ  ಮಾರುವವರ ಬಗ್ಗೆ ತುಂಬಾ ಕಾಳಜಿ. ಅವರನ್ನೆಲ್ಲ ಪ್ರೀತಿಯಿಂದ ಮಾತನಾಡಿಸಿ, ಅವರ ಸುಖ ದುಃಖ ಎಲ್ಲ್ಲಾ ಆಲಿಸುವವರು...😏


ಹಾಗೆ ಸುಮ್ಮನೆ ಒಂದು ಮಿನಿ ಮಿನಿ ಲಹರಿ......🙂🙂

May 26, 2026

ಸಂಚಿಯಿಂದ ತೆಗೆದ ನೆನಪು - 25 years

 


ಮೊನ್ನೆ ಒಂದು ವೈರಲ್ ಆದ ಸುದ್ದಿ ಓದ್ತಾ  ಇದ್ದೆ. ಏನಿಲ್ಲ ಯಾರೋ ಮನೆ ಮಾಲೀಕರು ಬಾಡಿಗೆದಾರರ deposit ನಿಂದ 5000/- ಮಾತ್ರ ಕಟ್ ಮಾಡಿ ಉಳಿದ ಹಣವನ್ನು ತಂಟೆ ತಕರಾರಿಲ್ಲದೇ ವಾಪಸ್ ಮಾಡಿದರು ಅಂತ..

ನಾವು ಬೆಂಗಳೂರಿಗೆ ಬಂದು ಈ ತಿಂಗಳ ಕೊನೆಗೆ 25 ವರ್ಷ ಆಗಲಿದೆ. ನಮ್ಮ ಮೊದಲ ಬಾಡಿಗೆ ಮನೆ, ಚಿಕ್ಕದು, 5 ವರ್ಷದ ಲೀಸ್ ಮೇಲೆ ಪಡಕೊಂಡಿದ್ಫು. ಆ ಐದು ವರ್ಷಗಲ್ಲಿ, ನಮ್ಮ ಸಂಸ್ಥೆ ಹುಟ್ಟಿ, ಹಲವಾರು project ಗಳನ್ನು ನಿಭಾಯಿಸುತ್ತ, ಒಳ್ಳೆ ಹೆಸರನ್ನೂ ಸಂಪಾದಿಸಿತು. ಐದು ವರ್ಷಗಳ ನಂತರ ಲೀಸ್ ಮುಗಿದ ಹಾಗೆ, ಸಂಸ್ಥೆಯ ಹಿರಿಕರ ಸಲಹೆಯ ಮೇರೆಗೆ ದೊಡ್ಡ ಮನೆ ಬಾಡಿಗೆ ಪಡೆಯಲು ನಿಶ್ಚಯಿಸಿದೆವು. ಆಗ ಅಕ್ಕ ಪಕ್ಕ ದವರು, ಪರಿಚಯ ಇದ್ದವರು,  ಇಲ್ಲದವರು ಎಲ್ಲರೂ ಸಿಕ್ಕಿದ್ದೆ chance ಅಂತ ಶ್ರೀಕಾಂತ್ ರವರನ್ನು ಹೆದರಿಸಲು ಪ್ರಾರಂಭಿಸಿದರು...ನಿಮ್ಮ owner ತುಂಬಾ ಕಿರಿ ಕಿರಿ, ಹಳೆಯ ಬಾಡಿಗೆ ದಾರರಿಗೆ ದುಡ್ಡು ವಾಪಸ್ ಮಾಡಲು ತುಂಬಾ ಸತಾಯಿಸಿದ್ದಾರೆ ಅಂತ. " ದೊಡ್ಡ ಗಟ್ಟಿಯಾದ ಬೀಗ ಜಡಿದು, ದುಡ್ಡು ಕೊಟ್ಟ ಮೇಲೆ ಮನೆ ಅವರಿಗೆ ವಹಿಸಿ ಕೊಡಿ ಮುಂತಾದ ಸಲಹೆಗಳು...ಆ ಲೀಸ್ ಮೊತ್ತ ದೊಡ್ಡದೇ...ನಮಗೆ ಬೇಕಿತ್ತು. ಶ್ರೀಕಾಂತ್ ಆವಾಗ ಚಿಕ್ಕ ಚಿಕ್ಕ ವಿಷಯಕ್ಕೂ ನನ್ನ ಸಲಹೆ ಕೇಳುವವರು. ಎಲ್ಲರೂ ಹೇಳುವುದು ನಿಜ ಇರಬಹುದಾ? ನಿನಗೇನನ್ನಿಸುತ್ತೆ?
ಆವಾಗ ಸಣ್ಣ ಪ್ರಾಯ, ಏನೋ ಜಿದ್ದು, ಹುಮ್ಮಸ್ಸು, ಏನು ಬೇಕಾದರೂ ಸಾಧಿಸಬಹುದು ಎಂಬ ಹುಂಬ ಧೈರ್ಯ..( ಬ್ಯಾಂಕ್ ಕೆಲಸ ಬಿಡ್ತೇನೆ ಎಂದಾಗ ನಾನು ಹಿಂದೆ ಮುಂದೆ ಆಲೋಚಿಸದೆ, dont worry, manual labour ಬೇಕಾದ್ರು ಮಾಡಲು ನಾನು ರೆಡಿ...- ನಾನು ಮಾಡಿರುವ distance education ಡಿಗ್ರಿ ಗೆ ಒಳ್ಳೆ ಕೆಲಸ ಸಿಗುವ  ಭರವಸೆ ನನಗಿರಲಿಲ್ಲ 😀😀 - ಆದರೂ ಒಂದು ಕಡೆ life style e-magazine ಗೆ content developer  ಹುದ್ದೆಗೆ interview ಗೆ ಹೋಗಿ..ಅವರು 8000 ರೂ ಸಂಬಳ ಕೊಡಲು ರೆಡಿ ಯಾಗಿದ್ದರು. ಆಫಿಸ್ ಮಣಿಪಾಲ್ ಸೆಂಟರ್ ನಲ್ಲಿ. ನಾವಿದ್ದದು ರಾಜಾಜಿನಗರ. ಎರಡು ಬಸ್ ಚೇಂಜ್ ಮಾಡಿ ಹೋಗಬೇಕಿತ್ತು. ನನಗೂ ಒಪ್ಪಿಗೆ ಇತ್ತು. ಆದರೆ ಶ್ರೀಕಾಂತ್ 'ಇಲ್ಲ 10000 ಕೇಳು ಅಂದ್ರು...ಆ.ಆಫಿಸ್ ನವರು ಪಾಪ ನಾವೂ ಇತ್ತೀಚಿಗೆ ನಾವು ಶುರು ಮಾಡಿದ್ದೇವೆ...ಅಷ್ಟೆಲ್ಲ ಸಂಬಳ ಕೊಡಲು ಆಗುವುದಿಲ್ಲ, ಮುಂದೆ ಖಂಡಿತ  ಸಂಬಳ ಹೆಚ್ಚಿಸುವಾ ಅಂದ್ರು ....ಅಷ್ಟರಲ್ಲೇ ನಮಗೆ ಬೇರೆ ಪ್ರೊಜೆಕ್ಟ್ ಸಿಕ್ಕಿ, ನಾನು ಅದರಲ್ಲೇ involve ವಾಗುವುದೆಂದಾಯಿತು. ಅದೇ ಮಹಿಳಾ ಸ್ವ ಉದ್ಯೋಗ ಮಾರ್ಗದರ್ಶನ ಕೇಂದ್ರ...🙏🙏
ಯಾವತ್ತಿನ ಹಾಗೆ ಟ್ರಾಕ್ change ಆಯ್ತು)
ಐದು ವರ್ಷದಲ್ಲಿ ಲೀಸ್ ನ ಮೊತ್ತದಲ್ಲಿ ಎಷ್ಟು ಕಡಿತ ವಾಗುತ್ತದೆ ಅಂತ ಶ್ರೀಕಾಂತ್ ಖುದ್ದು ಲೆಕ್ಕ ಹಾಕಿ owner ಗೆ 'ಸರ್  ಇಷ್ಟು ಹಣ ಬರಬೇಕು'  ಎಂದಿದ್ದರು.. ಅವರೂ ಹೂಂ ಸರಿಯಾಗಿದೆ...ಪೈಂಟಿಂಗ್ ಹಣ ಒಂದು ಸೇರಿಸಿ. ಚೆಕ್ 'ಈ' ತಾರೀಕಿಗೆ  ತಂದು ಕೊಡ್ತೀನಿ' ಅಂದ್ರು
ನಿನ್ನ intution ಏನು ಹೇಳುತ್ತೆ  ಅಂತ ಶ್ರೀಕಾಂತ್  ಕೇಳಿದ್ದರು.
ನಾನು 'ಖಂಡಿತ ಏನೂ ತಕರಾರಿಲ್ಲದೇ ನಮ್ಮ ಹಣ ವಾಪಸ್ ಕೊಡುತ್ತಾರೆ...ಅಷ್ಟಕ್ಕೂ ಈಗಲೇ ಚಿಂತೆ ಯಾಕೆ ಮಾಡ್ತೀರಾ ಅಂದೆ...
ಹೇಳಿದ ತಾರೀಕಿಗೆ ಬೆಳ್ಳಂಬೆಳ್ಳಿಗೆ ಬೆಲ್. ಮನೆ ಮಾಲೀಕರು ಚೆಕ್ ಕೊಟ್ಟು ಹೋದರು..
ಆಮೇಲೆ ಚೆಕ್ bounce ಆಗುತ್ತೆ ಅಂತ ಎಲ್ಲರೂ  ಹೇಳಿದರು. 😀 ಶ್ರೀಕಾಂತ್ ಬ್ಯಾ0ಕ್ open ಆಗಲು ಕಾಯುತ್ತಿದ್ದು, ಬೇಗ ಹೋಗಿ ಚೆಕ್ ಕೊಟ್ಟರು...ಅಲ್ಲೂ ಎನೂ ಕಿರಿಕಿರಿಯಾಗಲಿಲ್ಲ...ದುಡ್ಡು credit ಆಯ್ತು
ಆ ಮೇಲೆ ಜನರು ಅಷ್ಟಕ್ಕೂ ಸುಮ್ಮನಾದರ' ಇಲ್ಲ 'ನಿಮ್ಮ ಗ್ರಹಚಾರ ಒಳ್ಳೆದಿತ್ತು ಅಂದ್ರು 😀😀
ಇದನ್ನು ಮೆಲುಕು ಹಾಕಲು ಶ್ರೀಕಾಂತ್ ಎ ಇಲ್ಲ 🙂



ಮೊನ್ನೆ ವಿಧಾನ ಸೌಧದ ಬಳಿ ನಡೆದುಕೊಂಡು ಹೋಗ್ತಾ ಇದ್ವಿ. 25 ವರ್ಷಗಳಲ್ಲಿ ಹಲವಾರು ಬಾರಿ ಆ ಕಡೆ ಹೋದರೂ ವಿಧಾನ ಸೌಧದ ಒಂದೂ ಚಿತ್ರ ಕೂಡ ತೆಗಿಲಿಲ್ಲ ಅಂದೆ ಅಕ್ಕನಿಗೆ. ಎರಡೂ ಬದಿ ರಸ್ತೆ ಖಾಲಿ ಇತ್ತು. ನಾನು ಬಿಸಿಲಲ್ಲಿ ಮೊಬೈಲ್ ಓಪನ್ ಮಾಡಲು ಪಿನ್ ಎಂಟರ್ ಮಾಡುವಷ್ಟರಲ್ಲಿ ಸಿಗ್ನಲ್ ಬಿಟ್ಟಿತ್ತು...😀 

May 22, 2026

ಕೊರೊನಾ ಕಾಲೇ ಕತೆ

 ಹೊರ ದೇಶದಲ್ಲಿರುವ ತಂಗಿಯ ಜತೆ ಮಾತು ಕತೆ ಮುಗಿಸಿ, ರಾಕಿಂಗ್ ಚೆಯರ್ ಮೇಲೆ ತೂಗುತ್ತ, ಆಫಿಸ್ ಗೆ ಹೋಗಲು ತಯಾರಾಗುತ್ತ ಅಲ್ಲೇ ಕನ್ನಡಿ ಎದುರು ನಿಂತು,ತಲೆ ಎತ್ತಿ, ಮೂಗು ಅರಳಿಸಿ, ಮೂಗಿನ ಹೊಳ್ಳೆಯಲ್ಲಿನ ಕೂದಲನ್ನು ಕಟ್  ಮಾಡುತ್ತಿದ ಗಂಡನ ಕಡೆ ನೋಡುತ್ತಾ 'ಹೇ ಕುಮಾರ್, ಯು ಆರ್ 62,  ಇಟ್ ಇಸ್ ಹೈ ಟೈಮ್ ಯು ರಿಟಯರ್ಡ್ ಅಂದ್ಲು ಹೇಮಾ.

ತಕ್ಷಣ ಅವಳ ಕಡೆ ಜಿಗುಪ್ಸೆಯಿಂದ ನೋಡಿ....ನಿವೃತ್ತಿ ಆದರೆ ನಿನ್ನನ್ನು ಸಾಕೋದು ಹೇಗೆ ಅಂದಾಗ ಹೇಮಾಗೆ ಶಾಕ್. ಒಂದು ಕ್ಷಣ ಮೈ ಎಲ್ಲ ತಣ್ಣಗಾಗಿ, ಬಿಸಿಯಾಯ್ತು.  ಪುನಃ ಅವಳ ಕಡೆ ನೋಡುತ್ತಾ.. ರಿಟೈರ್ ಆಗಿ ಏನು ಮಾಡಲಿ ಅಂದ್ರು ತುಸು ಮೆತ್ತಗಿನ ದನಿಯಲ್ಲಿ.
ಅರೆ ನೀವೊಬ್ಬ ಒಳ್ಳೆಯ ಆರ್ಟಿಸ್ಟ್, ಇತಿಹಾಸದ ಬಗ್ಗೆ ಕುತೂಹಲ, ಆ ಲೈನ್ ನಲ್ಲಿ ನಿಮ್ಮನ್ನು ತೊಡಗಿಸಬಹುದು ಅನ್ನುತ್ತಾ ಆಳವಾದ ಚಿಂತನೆಗೆ ಜಾರಿದಳು ಹೇಮಾ ಎಷ್ಟೆಂದರೆ, ಕಾಲೇಜಲ್ಲಿ ಲೆಕ್ಚರರ್ ಆದ ಮಗಳು, ಮನೆಯಿಂದ ಹೊರಡುವ ಮುನ್ನ 'ಬೈ ಮೊಮ್ಮಿ' ಅಂದದ್ದು ಕೇಳಿಸಲೇ ಇಲ್ಲ. 'ಅಮ್ಮ ಪೆನ್ನಿ ಫಾರ್ ಯುವರ್ ಥಾಟ್ಸ್' ಏನು ಯೋಚಿಸ್ತಾ ಇದ್ದೀಯಾ. ಅಲ್ವೇ ಅಪ್ಪ ಹೀಗಿಗೆ ಅಂದ್ರು ಕಣೆ. ಡಿಡ್ ಹಿ,  ಮೆನ್ !!!!' ಅನ್ನುತ್ತಾ ಚಪ್ಪಲಿ ಮೆಟ್ಟಿ, ಡಾರ್ ಲಾಕ್ ಹಚ್ಚಿ ಹೊರಟು ಬಿಟ್ಲು.
ತುಂಬಾ ಚಿಕ್ಕ ವಯಸ್ದಿಗೆ ಮದುವೆಯಾಗಿ ಕುಮಾರ್ ನ ದೊಡ್ಡ ಕುಟುಂಬ ಸೇರಿದ್ದಳು ಹೇಮಾ. ಇನ್ನು ಓದು ಬಾಕಿಯಿತ್ತು. 'ಇಷ್ಟು ಬೇಗ ಮದುವೆ ಬೇಡಮ್ಮ ಅಂತ ಸಣ್ಣಗಿನ ದನಿಯಲ್ಲಿ ಹೇಳಿದ್ದು, ತಂದೆ ಅವಳ ಸಹಾಯಕ್ಕಾಗಿ ಬಂದಿದ್ಫು, ಅವರನ್ನು ಗದರಿ, ನೀವು ಸುಮ್ನಿರಿ, ಹಾರ್ಟ್ ಪೆಶೆಂಟ್, ಒಳ್ಳೆ ಸಂಬಂಧ , ಅವರೇ ಕೇಳಿಕೊಂಡು ಬಂದಿದ್ದಾರೆ, ಜಾಸ್ತಿ ಮಾತಾಡಿದ್ತೆ, ಮುಂದೆ ಅವಳ ಮದುವೆ ನನ್ನ ಜವಾಬ್ದಾರಿಯಲ್ಲ, ನೀವೇ ನೋಡಿಕೊಳ್ಳಿ ಅಂದು ಜಬರಿಸಿದ್ದಾಗ, ನಿಜಕ್ಕೂ ಸೀಕಾಗಿದ್ದ ತಂದೆ, ಮುಂದೆ ಮಾತು ಮುಂದುವರೆಸಲಿಲ್ಲ. ಕಾಲೇಜಿನ ಪ್ರಿನ್ಸಿಪಾಲ್ ಗೆ ತಂದೆ ಮದುವೆ ಯ ಆಮಂತ್ರಣ ನೀಡಲು ಹೋದಾಗ, ಅವರನ್ನು ಸರಿ ತರಾಟೆಗೆ ತೆಗೊಂಡು, ಏನು ಅರ್ಜೆಂಟ್ ಇತ್ತು, ಕಲಿಯಲು ಹುಷಾರು ನಿಮ್ಮ ಮಗಳು ಅಂದಾಗ, ಸುಮ್ಮನೆ ತಲೆ ತಗ್ಗಿಸಿದ ತಂದೆಗೆ, ಅಟ್ ಲೀಸ್ಟ್ ಅವಳು ಮದುವೆಯಾದ ಮೇಲೆ, ಓದು ಮುಂದುವರೆಸಲಿ ಅಂದು, ಡಿಸ್ಟನ್ಸ್ ಎಜುಕೇಶನ್ ನ ಆಪ್ಲಿಕೇಶನ್ ಫಾರ್ಮ್ ಕೊಟ್ಟಿದ್ದರು. ಅಪ್ಪ ಮಾತು ಕೊಟ್ಟು ಅವಳ graaduation ನ ಜಿಮ್ಮೆದಾರಿ ತೆಗೆದುಕೊಂಡಿದ್ದರು.  ದೊಡ್ಡ ಕುಟುಂಬದ  ಮನೆ ಕೆಲಸಗಳನ್ನು ಮುಗಿಸಿ, ಮಧ್ಯಾಹ್ನ ಒಂದೆರಡು ಗಂಟೆ ಓದಲು ಕುಳಿತಿರುತ್ತಿದ್ದಳು. ಕೊನೆಯ ವರ್ಷದ ಪದವಿ ಪರೀಕ್ಷೆಯ ಸಮಯ ಮನೆಯ ಮೂವರು ಹಿರಿಯ ಸದಸ್ಯರಿಗೆ ಹುಷಾರು ತಪ್ಪಿ, ಮೂವರನ್ನು ಮೂರು ಬೇರೆ ಬೇರೆ ಕಡೆ ಆಸ್ಪ ತ್ರೆಗೆ ಸೇರಿಸಲಾಗಿ, ಮನೆ-ಆಸ್ಪತ್ರೆ ಓಡಾಟದಲ್ಲಿ, ಸಿಕ್ಕಾ ಪಟ್ಟೆ ಕೆಲಸ ಇದ್ದು... ಓದಿದ್ದು ಕಡಿಮೆ, ಆದರೂ ಕೊನೆ ಗಳಿಗೆಯಲ್ಲಿ ಓದಿ ಪಾಸ್ ಮಾಡಿದ್ದಳು. 5 ವರ್ಷದ ಬಳಿಕ  ಕುಮಾರ್ ಗೆ ಪ್ರೊಮೋಷನ್ ಆಗಿ ಬೇರೆ ಊರಿಗೆ  ಬದಲಿ ಆಯ್ತು.. ಈ ಹೊಸ ಜಾಗ ಪಟ್ಟಣ ಪ್ರದೇಶ, ಆದುದರಿಂದ ಅವಳು ಸಣ್ಣದೊಂದು ಕೆಲಸಕ್ಕೆ ಸೇರಿ ಮನೆಯ ಖರ್ಚಿಗೆ ಅವಳ ಸಂಬಳ ಅಲ್ಪ ಸ್ವಲ್ಪ ಸಹಾಯ ಆಗ್ತಿತ್ತು...ಅದಾದ ಮೇಲೆ ಪುನಃ ಹಳ್ಳಿಗೆ ಟ್ರಾನ್ಸ್ಫರ್..ಆಗ ಕೈ ತೋಟ ಎಲ್ಲ ಮಾಡಿ ಗೃಹ ಬಳಕೆಗೆ ಆಗುವಷ್ಟು ತರಕಾರಿಗಳನ್ನು ಬೆಳೆಸಿ, ಅಕ್ಕಪಕ್ಕದ ಮನೆಯವರೊಂದಿಗೆ ಶೇರ್ ಮಾಡಿ ಖುಷಿಯಾಗಿದ್ದಳು. ತುಂಬಾ  ಮಿತವ್ಯಯದ, ಜಾಗರೂಕತೆಯಿಂದ ಖರ್ಚು ಮಾಡುವ ಅಭ್ಯಾಸ ಹೊಂದಿದರಿಂದ ಯಾವುದೇ ವಿಶೇಷವಾದ ಏರು ಪೇರಿಲ್ಲದೆ ಜೀವನ ಸಾಗಿತ್ತು. ಇಬ್ಬರು ಮಕ್ಕಳು ಕಾಲೇಜು ಸೇರುವ ಸಮಯ ಅವರು ಬೆಂಗಳೂರು ಮಹಾನಗರ ತಲುಪಿದರು.
ಆಗ ಬ್ಯಾಂಕ್ ಸ್ವಯಂ ನಿವೃತ್ತಿ ಘೋಷಿಸಿತು.  ಕುಮಾರ್ ಮತ್ತು ಸ್ನೇಹಿತರು ಜಂಟಿಯಾಗಿ ಯಾವುದಾದರೂ ಉದ್ಯಮ ಶುರು ಮಾಡುವುದೆಂದ್ದು, ಮನೆಯಲ್ಲಿ ಹೇಳದೆ ಕೆಲಸಕ್ಕೆ ರಾಜೀನಾಮೆ ಕೊಟ್ಟು ಬಿಟ್ಟರು.  ಸಿಕ್ಕಾಪಟ್ಟೆ ಸಿಟ್ಟು ಬಂದರೂ, ಸಾವರಿಸಿ ಸುಧಾರಿಸಿ ಪುನಃ ಕೆಲಸಕ್ಕೆ ಸೇರಿ ಮನೆಯನ್ನು ಸರಿದೂಗಿಸಿದ್ದಳೂ ಕೂಡ. ಅವರ ಉದ್ಯಮ ಚೆನ್ನಾಗಿ ನಡೆದು ಕೈ ತುಂಬಾ ದುಡ್ಡು ಬರಲು ಆರಂಭಿಸಿದ ಮೇಲೆ, ಹಾಗೂ ದೊಡ್ಡ ಮಗಳ ಮದುವೆಯ ನಂತರ ಅವಳು ಟೆರೇಸ್ ಗಾರ್ಡನ್, ಬಾಲ್ಕನಿ ಗಾರ್ಡನ್ ಅಂತ ಆರಾಮಾಗಿ ಇದ್ಲು.... ಚಿಕ್ಕದಾಗಿ ಹೇಳುವುದಾದರೆ ಆರ್ಥಿಕವಾಗಿ ಅವಳು ಸಣ್ಣ ಮಟ್ಟಿಗಾದರೂ ಸಹಾಯ ಮಾಡಿರುವಾಗ ಕುಮಾರ್ ಮುಖದಲ್ಲಿನ ಅಸಡ್ಡೆ ಅವಳನ್ನು ಸ್ವಲ್ಪ ಹೊತ್ತು ಅಸ್ವಸ್ಥಳನ್ನಾಗಿಸಿತು.
ತಲೆ ಕೊಡವಿ ಮನೆ ಕೆಲಸದತ್ತ ಗಮನ ಹರಿಸಿದಳು.
ಇದಾದ ಮೂರೆ ದಿನಕ್ಕೆ ಲಾಕ್ ಡೌನ್ ಘೋಷಿಸಲಾಯಿತು. ಲಾಕ್ ಡೌನ್ ಮೊದಲ ದಿನ...ಏನು ನಡೀತಾ ಇದೆ ಎನ್ನುವ ಗೊಂದಲ, ಗೊತ್ತಾಗದ ತಳಮಳ...ಮನೆಗೆ  ಬೇಕಾದ ಅಗತ್ಯ ಸಾಮಾನುಗಳನ್ನು ತರುವ ಗಡಿಬಿಡಿ...ಮಾಸ್ಕ್ ಹಾಕಿಕೊಂಡು ಹೊಸ ಜೀವನ... ಆ ರಾತ್ರಿ ಅವಳ ಸೇಲ್ ಫೋನ್  ರಾತ್ರಿ ಇಡೀ ಸದ್ದು ಮಾಡುತ್ತಿತ್ತು. ಅವಳು ಅದರ ಬಗ್ಗೆ ಹೆಚ್ಚು ಗಮನ ಹರಿಸಲಿಲ್ಲ...
ಮರು ದಿನ ಬೆಳಿಗ್ಗೆ ಹೇಗೂ ವಾಕಿಂಗ್ ಇಲ್ಲ, ಅಂತ ಬಾಲ್ಕನಿಯಲ್ಲಿ ಕೂತು ಚಹಾ ಹೀರುತ್ತಾ ಮೊಬೈಲ್ ನಲ್ಲಿ ಯು ಟ್ಯೂಬ್ ಆನ್ ಮಾಡಿದಳು. ಸಿಕ್ಕಾಪಟ್ಟೆ ಮೆಸೇಜ್, ಕಮೆಂಟ್ ಗಳು. ಅವಳು ಹಸಿರು ತರಕಾರಿಗಳನ್ನು ಅತಿ ಹೆಚ್ಚು ದಿನ ಹೇಗೆ ಕಾಪಿಡ ಬೇಕೆಂದು ಹಾಕಿದ ವಿಡಿಯೋ ಒಂದು ವೈರಲ್ ಆಗಿತ್ತು. ಯು ಟ್ಯೂಬ್ ಅದನ್ನು ಟ್ರೆಂಡಿಂಗ್ ಚ್ಯಾನೆಲ್ ಅಂತ ಘೋಷಿಸಿತು. ಇದಾದ ಒಂದೇ ವಾರಕ್ಕೆ ಹಲವು ಲಕ್ಷ ಜನ ಅವಳ ಚ್ಯಾನೆಲ್ subscribe ಮಾಡಿದ್ದಲ್ಲದೆ ಯು ಟ್ಯೂಬ್ ವತಿಯಿಂದ ಸಣ್ಣ ಮೊತ್ತದ ದುಡ್ಡು ಹೇಮಳ ಬ್ಯಾಂಕ್ ಖಾತೆಗೆ ಜಮಾ ಆಯಿತು. ಲಾಕ್ ಡೌನ್ ಅವಧಿಯನ್ನು ಹೇಗೆ ಉಪಯೋಗಿಸುವುದೆಂದು ಅವಳು ವಿಚಾರ ಮಾಡಿ, ಬಾಲ್ಕನಿಯಲ್ಲಿ ಒಂದು ಸಣ್ಣ ಜಾಗ ಮಾಡಿ ಅಲ್ಲೊಂದು ಟೇಬಲ್ ಇಟ್ಟು.... ಸುಲಭವಾದ ಅಡುಗೆ, ಮನೆಯಲ್ಲೇ ಇದ್ದುಕೊಂಡು ವ್ಯಾಯಾಮ, ಕೊತ್ತಂಬರಿ ಸೊಪ್ಪು, ಮೆಂತೆ ಸೊಪ್ಪು ಕುಂಡದಲ್ಲಿ ಬೆಳೆಸುವುದು, ಧ್ಯಾನ, ಯಾವಾಗಲೋ ಕಲಿತ ಯು ಎಸ್  english ಸ್ಪೀಕಿಂಗ್ ಕೋರ್ಸ್ ಮುಂತಾದವುಗಳನ್ನು ಮಾಡುತ್ತಾ ದುಡಿಯಲು ಆರಂಭಿಸಿದಳು.  ಕುಮಾರ್ ನ factory ಬಂದಾಗಿತ್ತು. ಆಲ್ಲಿರುವ ಕೆಲಸಗಾರರಿಗೆ ಎಲ್ಲ ಸ್ವಲ್ಪ ಮಟ್ಟಿಗೆ ಧನ ಸಹಾಯ ಮಾಡಲು ಈ ದುಡ್ಡು ನೆರವಿಗೆ ಬಂತು. ಕುಮಾರ್ ಕೂಡ ಸುಮ್ಮನಿರದೆ ಅವಳಿಗೆ ಮನೆ ಕೆಲಸದಲ್ಲಿ ಆದಷ್ಟು ಸಹಾಯ ಮಾಡಲಾರಂಭಿಸಿದನು.
ಲಾಕ್ ಡೌನ್ ಎಲ್ಲ ಮುಗಿದು ಈಗ ಹಲವಾರು ವರ್ಷಗಳು ಕಳೆದಿವೆ. ಅವನ್ನು ಮೆಲುಕು ಹಾಕುತ್ತ ಇಬ್ಬರೂ ಮೊಮ್ಮಕ್ಕಳೊಂದಿಗೆ ಆಡುತ್ತಾ ನೆಮ್ಮದಿಯ ಜೀವನ ನಡೆಸುತ್ತಾರೆಂಬುವಲ್ಲಿಗೆ ನನ್ನ ಕತೆ .... ಒಪ್ಪಿಸಿಕೊಳ್ಳಿ...🙏🙏🙂🤔

May 20, 2026

5 months you've been gone

 


ಸ್ವಲ್ಪ ಸಮಯ ಅಲೋಪತಿ ಔಷಧಿ ಜತೆ ಆಯುರ್ವೇದ ಔಷಧಿ ಕೂಡ ತೆಗೋತಾ ಇದ್ರು ಶ್ರೀಕಾಂತ್. ಆರೋಗ್ಯದಲ್ಲಿ ಉತ್ತಮ ಸುಧಾರಣೆ ಇತ್ತೆಂದು ನನ್ನ ಅನಿಸಿಕೆ. 

ಒಮ್ಮೆ ಒಂದು ದೊಡ್ಡ ಆಸ್ಪತ್ರೆಗೆ ಹೋದ್ವಿ, ಲೀವರ್ transplant ಬಗ್ಗೆ ಸೆಕೆಂಫ್ opinion ತೆಗೊಳ್ಳಲು....ನನಗೆ ಹೋಮಿಯೋಪತಿ ಔಷಧಿ ಮೇಲೆ ಯಾಕೋ ಅಪಾರವಾದ ನಂಬಿಕೆ...ಶ್ರೀಕಾಂತ್ ಗೆ ಇರಲಿಲ್ಲ. ಡಾ. ಬಳಿ ನಾನು ಸಣ್ಣ ದನಿಯಲ್ಲಿ ಹೋಮಿಯೋಪತಿ ಔಷಧಿ ಅಂದದ್ದೇ ಅವರು ಟೇಬಲ್ ಮೇಲೆ ಬಲವಾಗಿ ಗುದ್ದಿ, ಗಟ್ಟಿ ದನಿಯಲ್ಲಿ...ಲೀವರ್ cirrhosis ಗೆ ಅಲೋಪತಿ ಔಷದಿ ಬಿಟ್ರೆ ಯಾವುದನ್ನೂ ತೆಗೋ ಬಾರದು ಅಂದಿದ್ದ ರಭಸಕ್ಕೆ ಶ್ರೀಕಾಂತ್ ಬಿಡಿ ನನಗೆ ಎಷ್ಟು ಭಯ ಆಯಿತೆಂದು ಹೇಳಲಿಕ್ಕೆ ಆಗದು. 😏😏 ಶ್ರೀಕಾಂತ್ ಮರು ದಿನದಿಂದ ಆಯುರ್ವೇದ ಔಷಧಿ ಬಿಟ್ಟೆ ಬಿಟ್ರು. ಆಮೇಲೆ ಪದೇ ಪದೇ ಆರೋಗ್ಯ ಬಿಗಡಾಯಿಸಲು ಆರಂಭ ವಾದಾಗ ನಾನೂ, ಅಕ್ಕ ಕೂಡ ಪುನಃ ಅದನ್ನು ಶುರು ಮಾಡಲು ಕೇಳಿಕೊಂಡೆವು. ಅವರು ಒಪ್ಪಲೇ ಇಲ್ಲ. 

 ಕಾಕಿ ಸೊಪ್ಪು, ತಂಬಳಿ, ಮಜ್ಜಿಗೆ ಎಲ್ಲ ಒಳ್ಳೇದು ಅಂತ ಅದೆಲ್ಲ ಮಾಡ್ತಿದ್ದೆ. 

ಯಾರೋ ಹೇಳ್ತಿದ್ರು 'ನೀನು ಶ್ರೀಕಾಂತ್ ನನ್ನು ತುಂಬಾ ಚೆನ್ನಾಗಿ ನೋಡಿ ಕೊಂಡೆ ಅಂತ

ಇಲ್ಲ ಹಲವಾರು ಬಾರಿ ನನ್ನ patience ಕೈಕೊಟ್ಟಿದೆ.

ಒಂದು ಸಂದರ್ಭ ಶೇರ್ ಮಾಡ್ತೇನೆ...

ಆ ದಿನ ಏಳುವಾಗ ಲೇಟ್. 11 ಗಂಟೆಗೆ ಡಾಕ್ಟರ್ ಅಪ್ಪೋಯಿಂಟ್ಮೆಮೆಂಟ್ಟ್ನ. ಮಜ್ಜಿಗೆ ಕಡಿತಿದ್ದೆ...ಹಾಲು ಉಕ್ಕಿ ಬಿತ್ತು. ಅದನ್ನು ಕ್ಲೀನ್ ಮಾಡಿದೆ. ಆಮೇಲೆ ಎಣ್ಣೆ ಬಾಟಲಿಯಲ್ಲಿ ತುಂಬಿಸುತ್ತಿದ್ದ ಹಾಗೆ, ಕೈ ಅಲ್ಲಾಡಿ ಅದೂ ಸ್ವಲ್ಪ ನೆಲದ ಮೇಲೆ ಬಿತ್ತು...ಅದನ್ನೂ ಕ್ಲೀನ್ ಮಾಡಿದೆ..ಸುಮಾರು ಹೊತ್ತು ತಗುಲಿತು. ದೋಸೆ ಬೇರೆ. ಕಾಯಿ ತುರಿದು ಚಟ್ನಿ ಮಾಡಲಿಕ್ಕಿತ್ತು. ನಿಹಾ ಗೆ ಒಂದು workshop conduct ಮಾಡಲಿಕ್ಕಿತ್ತು,  ಅವಳೂ ಬೇಗ ಹೊರಡಿಲಿಕ್ಕಿತ್ತು. ಕೇಕ್ ತಯಾರಿಸಿ, ದೊಡ್ಡ ಕೇಕ್ ಆದ್ದರಿಂದ ಅಕ್ಕನಿಗೆ ಅದರ ಡೆಲಿವರಿ ಮಾಡಲಿಕ್ಕಿತ್ತು. ನನಗೆ ತಿಂಡಿ ಪ್ಲಸ್ ಆಸ್ಪತ್ರೆಗೆ ಒಯ್ಯಲು ಉಪ್ಪು ರಹಿತ ಊಟದ ತಯಾರಿ ಇತ್ತು. ಅದರ ಮಧ್ಯೆ ಶ್ರೀಕಾಂತ್ ಮಜ್ಜ8ಗೆ ಕುಡಿಯಲು ಬಂದ್ರು...ಅದರಲ್ಲಿನ ಬೆಣ್ಣೆ ತೆಗೆಯಲು ಪುರುಸೊತ್ತು ಆಗಿರಲಿಲ್ಲ. 'ಸಾರಿ, ನಿಧಾನಕ್ಕೆ ಮಜ್ಜಿಗೆ ಬೆಸೆಯಿರಿ... ಬೆಣ್ಣೆ ತೆಗಿಲಿಲ್ಲ ಅಂದೆ...ಅದಕ್ಕೆ ಅವರು 'ಕೂಡಲೇ ಕೂಡಲೇ ಆ ಕೆಲಸ ಮಾಡಿದ್ರೆ ತಾಪತ್ರಯ ಇರಲ್ಲ ಅಂದ್ರು' ಎಲ್ಲಿತ್ತೋ ಸಿಟ್ಟು...ನಾನು ಕಿರುಚಿ'dont you dare lecture me..ನೀವು ನಾನು ಹೇಳಿದ ಕೂಡಲೇ ಡಾಕ್ಟರ್ ಬಳಿ ಹೋಗಿದಿದ್ರೆ ಈ ತಾಪತ್ರಯ ಇರುತ್ತಿರಲಿಲ್ಲ' ಅಂದೆ...he was so taken aback at my outburst..🤔🤔

ಇನ್ನೊಂದು ದಿನ ಹೀಗೆ...ಒಣಗಿದ ಬಟ್ಟೆಯ ರಾಶಿ ಮಂಚದ ಮೇಲೆ ಬಿದ್ದಿತ್ತು. ಹುಷಾರು ತಪ್ಪಿದ ಮೇಲೆ ಆಫಿಸ್ ಮೀಟಿಂಗ್ ಎಲ್ಲ ನಮ್ಮ ಮನೆಯಲ್ಲಿ. ಅವರಿಗೆ ಟಿ ಎಲ್ಲ ಮಾಡಲಿಕ್ಕೆ ಇರುತ್ತಿತ್ತು. ಯಾಕೋ ಆ ದಿನ ಕೂಡಬ್ತುಂಬಾ ಕೆಲಸ.. ಮಕ್ಕಳಿಬ್ಬರೂ ಮನೆಯಲ್ಲಿ ಇರಲಿಲ್ಲ. ನಾನು ಅಡಿಗೆ ಮನೆ ಚೊಕ್ಕಗೊಳಿಸಿ, ಬಟ್ಟೆ ಮಡೆಚಲು ಹೋದಾಗ....ಬಟ್ಟೆ ಎಲ್ಲ ಶ್ರೀಕಾಂತ್ ನೀಟಾಗಿ ಮಡಚಿ ಇಟ್ಟಿದ್ದರು. ನಾನು ತುಂಬಾ emotional ಆಗಿ thank you srikanth... ಅಂದಿದ್ದಕ್ಕೆ..ಅಯ್ಯೋ ನಿನಗೆ ಹೆಲ್ಪ್ ಆಗೋದಾದರೆ ದಿನಾ ಬಟ್ಟೆ ಮಡಚಿ ಇಡ್ತೇನೆ  ...ಅಂದ್ರು..ಬೇಜಾರಾಯಿತು ಕೇಳಿ....ಬೇಡ ಅಂದೆ...

ಹೀಗೆ i was/am not perfect...ಐದು ತಿಂಗಳಾಯ್ತು ಹೋಗಿ


ನಾಡಿದು ಬಾನುವಾರ ನಮ್ಮ ಮದುವೆಯಾಗಿ 39 ವರ್ಷ. ನಾನು 50 ವರ್ಷ ಜಗಳ ಆಡ್ತಾ, ತಮಾಷೆ ಮಾಡ್ತಾ ಇರಬಹುದೆಂದು ಕೊಂಡಿದ್ದೆ..😭😭. ,ಈ ಫೋಟೋ ಅವರ ಮೊಬೈಲ್ ನಲ್ಲಿತ್ತು

May 8, 2026

My bro - Krishnanand

 



My brother took a break from his packed schedule and came over to help me sort my finances. He gave me sound, practical advice, and as always, I was awed by him. I’m so proud of him. He’s not just smart—he explains things with incredible patience, at least to me.

He’s a self-made man. I still remember him at 18, waking up before dawn for college. If he could, he’d come home for a quick lunch before rushing to his part-time computer job, returning only late at night. (amusedly his boss did not know much about computers and it was my brother who helped and learnt alongside him. His boss who is now his best friend, , has a thriving business related to computers) This was the late 80s, when computers were just making their foray into India.

I’m proud because even then, he gave a portion of whatever little he earned to my mom. That was when Amma finally breathed a small 'financial 'sigh of relief ❤️🙏

He was just 10 when my father had his heart episode. He pedalled his bicycle as fast as he could to find someone with a car to help. I’ll never forget the fear and worry on his little face.

Last year, this time, when Srikanth was diagnosed with liver cirrhosis, he was in complete denial. 'not possible, the doctors are lying. Bhavaji has clean life style unlike us'. He was here with me during transfering of Srikanth's.mortal remains to the hospital for body donation and i am ever grateful for that 🙏

While clearing Srikanth’s files recently, I found a stack of unattended stocks and shares. He had reluctantly invested at my father’s behest for about five years before we lost track of them completely. When I asked my brother for advice, he said he first needed to drive his new car to our Kuldevata temple in Goa with Amma. “I’ll visit mom and then come to you, and we’ll sort it,” he told me.

It was four hectic days, but we managed to finish 75% of the work. The rest, I can handle 👍🙏
Malavika or akka , whom he loving calls  as  akkumbe is his favorite amongst all and he will not listen to my complaints against her, even a small one 😁😁

My only grouse is that he’s a bit lacking in humility. Yet with him, I find I can forgive it 🙂.


             ಯಾರದೇ ಕೆಟ್ಟು ಕಣ್ಣು ತಾಗದಿರಲಿ..🧿


I’m grateful for my family 🙂🙂👍❤️ and i find that i dont essily let any one inside this circle...( i think of ಘಾಚರ್ ಘೋಚರ್)

while other family members look up to me, i look up only to him 
#familymatters

April 28, 2026

ಎಳ್ಳು ಚಿತ್ರಾನ್ನ

 ಮೊನ್ನೆ ಭಾನುವಾರ ಜಯಮಹಲ್ ಪ್ಯಾಲೇಸ್ ನಲ್ಲಿ MTR food ನವರ food fest ಇತ್ತು...ಅಲ್ಲಿತ್ತು ಎಳ್ಳು ಚಿತ್ರಾನ್ನ. ನನಗೆ, ಅಕ್ಕ ಹಾಗೂ ಅವಳ ಸ್ನೇಹಿತೆ ಅನಘಾ ಗೆ ಇದು ತುಂಬಾ ಇಷ್ಟ ಆಯ್ತು. ನಾನು ಅಂದಾಜಲ್ಲೆ ನಿನ್ನೆ ತಯಾರಿಸಿದೆ

amma this is tastier ಅಂದ್ಲು ಮಗಳು. ನಿಹಾ ನಮ್ಮೊಂದಿಗೆ ಆ ದಿನ ಬಂದಿರಲಿಲ್ಲ. ಅವಳೂ ನಾ ಮಾಡಿದ್ದನ್ನು ತಿಂದು ಚೆನ್ನಾಗಿದೆ ಅಂದ್ಲು

ಅದಕ್ಕೂ ಮುಂಚೆ ನನ್ನ ಅಕ್ಕಿ ಹಿಟ್ಟಿನ ಉಬ್ಬು/ಉಕ್ಕರಿಸಿದ ರೊಟ್ಟಿ ಯು ಟ್ಯೂಬ್ ನಲ್ಲಿ 22,000 views ಪಡಿದಿದೆ. ಖುಷಿಯಾಯ್ತು 🙂🙏❤️

ಉಬ್ಬು ರೊಟ್ಟಿ/ಉಕ್ಕರಿಸಿದ ರೊಟ್ಟಿ

ಎಳ್ಳು ಚಿತ್ರಾನ್ನ ನಮ್ಮ ಮಾಮೂಲು ಚಿತ್ರಾನ್ನದ ಹಾಗೆಯೇ...ಕರಿ + ಬಿಳಿ ಎಳ್ಳು ಒಂದು ದೊಡ್ಡ ಚಮಚ, ಘಮ್ ಅನ್ನುವ ವರೆಗೆ ಹುರಿದು, ತಣ್ಣಗಾದ ಮೇಲೆ ಪುಡಿ ಮಾಡಿ,  ಚಿತ್ರಾನ್ನದ ಒಗ್ಗರಣೆಯಲ್ಲಿ ಬೆರೆಸೋದು..ಸ್ವಲ್ಪ ಹುಣಸೆ ಪೇಸ್ಟ್ ಬೆರೆಸೋದು, ಅರಿಶಿನ ಹಾಕ್ಲಿಕ್ಕಿಲ್ಲ..ಅಷ್ಟೇ 😁😁




 ವಿಸ್ತರಿತ recipe ಬೇಕೇ?? 🤔🤔

ಇದನ್ನೂ ನೋಡಿ 👇👇

MTR food festival



April 26, 2026

improvisation

 ಶ್ರೀಕಾಂತ್ ಗೆ  ದೈವಾಧೀನ ರಾಗುವ ಎರಡು ತಿಂಗಳ ಹಿಂದೆ, ಪ್ರತೀ ಮೂರು ದಿನಕ್ಕೊಮ್ಮೆ ಹೋಟಲ್ ಇಡ್ಲಿ ತಿನ್ನುವ ಆಸೆ ಆಗ್ತಿತ್ತು. ಚಟ್ನಿ ಮಾತ್ರ ಮನೆದೇ 😁


ನನ್ನ ಇಷ್ಟದ ಒಂದು ಪುಟ್ಟ ಅಂಗಡಿ  ಇದೆ. ರುಚಿಕರ ಆಹಾರ ಮಾತ್ರವಲ್ಲ, ಬೆಳಿಗ್ಗೆ ನಾಲ್ಕು ಗಂಟೆಗೆ ತೆರೆಯುತ್ತೆ.  ಗ್ಯಾಸ್ ಇಲ್ಲ ಅಂತ ಏನೂ complaint ಇಲ್ಲ. ಮೆನ್ಯು ನಲ್ಲಿ ಯಾವ ಐಟಂ ಕೂಡ ಕಡಿತ ಗೊಳಿಸಿಲ್ಲ. ಮತ್ತೆ ಅವರ ಲಕ್ ಅನ್ನಬಹುದು....ಅಂಗಡಿ ಇರೋ ಜಾಗ ದ ಎದುರು ಅಗಲ ರಸ್ತೆ ಮಾತ್ರವಲ್ಲದೇ ಅಷ್ಟೊಂದು ವಾಹನ ಸಂಚಾರ ಇಲ್ಲ. ವೀಡಿಯೊ ದಲ್ಲಿನ ಹಾಗೆ ರಸ್ತೆ ಪಕ್ಕ ಕಲ್ಲು ಪೇರಿಸಿ ಓಲೆ ಮಾಡಿಕೊಂಡಿದ್ದಾರೆ. ಪಲಾವ್ ರೆಡಿಯಾಗ್ತಿದೆ 😁👍

BTM eatery

ನನಗೆ ಒಂದು ಬೇಜಾರಿದೆ. ಯಾಕೆ ನಮ್ಮ ದೇಶ ಸೌರ ಶಕ್ತಿ ಉಪಯೋಗಿಸುತ್ತಿಲ್ಲ ಎಂದು? ನನ್ನ ತಂಗಿ ಮಗಳು ನಾನು ತುಂಬಾ ಪ್ರಯಾಣ ಕೈಗೊಳ್ಳುತ್ತೇನೆಂದು ನನಗೆ ಪುಟ್ಟದೊಂದು ಸೌರ ಟಾರ್ಚ್ ಕೊಟ್ಟಿದ್ದಳು....ಸ್ವಲ್ಪ ಬೆಳಕಿದ್ದರೂ ಸಾಕು ಅದು ತನ್ನಷ್ಟಕ್ಕೇ ಚಾರ್ಜ್ ಆಗ್ತಾ ಇರ್ತದೆ...(ಕಡೆಗೊಂದು ದಿನ ಅದು ಕಾಣೆಯಾಯ್ತು. ಮನೆಯೆಲ್ಲ ಮೇಲೆ ಕೆಳಗೆ ಮಾಡಿ ಹುಡುಕಿದೆ. ಲಾಸ್ಟ್ ಅದು ಶ್ರೀಕಾಂತ್ ಗೆ ಕೊಟ್ಟಿದ್ದ ನೆನಪು..ಆದರೆ ಅವರು ಬಿಲ್ಕುಲ್ ಅದರ ಬಗ್ಗೆ ಗೊತ್ತಿಲ್ಲ ಅಂದರು..ನಾನೂ ಸುಮ್ಮನಾದೆ. ಕೆಲವೊಂದು ತಿಂಗಳ ನಂತರ ಅವರ ಅಕ್ಕನ ಮನೆಗೆ ಹೋದಾಗ ಅಲ್ಲಿತ್ತು. 'ಓ ಇಲ್ಲ8ದೇ ನನ್ನ ಟಾರ್ಚ್, ಹಿಂದಿನ ಸಲ ಇಲ್ಲಿಗೆ ಬಂದಾಗ ಶ್ರೀಕಾಂತ್ ಬಿಟ್ಟು ಹೋಗಿರಬೇಕು' ಅಂದೆ ನನ್ನ ನಾದಿನಿಯ ಬಳಿ. ಅದಕ್ಕೆ ಅವರು ' ಇಲ್ಲ, ನನಗೆ ಟಾರ್ಚ್  ಇಷ್ಟ ಆಗಿದೆ, ನನಗೆ ಕೊಡು' ಅಂತ ಇಸ್ಕೊಂಡೆ ಅಂದ್ರು...🤔🤔)

ಹಾಗೆ ಸೂರ್ಯ ನಿಗೆ ಏಳುವ ಮೂಡ್ ಇಲ್ಲದಿದ್ದರೆ ಸೌರ battery ಗಳನ್ನು ಮಾಡಿ ಇಡಬಹುದು. ನನ್ನ ದಿವಂಗತ ಸ್ನೇಹಿತೆ ಸೂಸಿ ಮನೆಯಲ್ಲಿ ಇಂತಹ ವ್ಯವಸ್ಥೆ ಇತ್ತು...ಬಾವಿಯಿಂದ ನೀರು.ಕೂಡ ಸೌರ ಶಕ್ತಿಯಿಂದಲೆ ಟ್ಯಾ0ಕೆಗೆ ತುಂಬಿಸುತ್ತಿದ್ದರು. ಮಳೆಗಾಲಕ್ಕೆ ಉಪಯೋಗಿಸಲು  ಸೌರ ಬ್ಯಾಟರಿ ಕೂಡ ಇತ್ತು. ಆದರೆ ಅದು ಹಾಳಾದ ಮೇಲೆ ರಿಪೇರಿ ಆಗಲಿಲ್ಲ ಅಂದ್ರು.

ಆ ನಿಟ್ಟಿನಲ್ಲಿ ಸ್ವಲ್ಪ research ಮಾಡಿದರೆ ಒಳಿತಿತ್ತು ಸಂತ ನನ್ನ ಅನಿಸಿಕೆ..ನೀವೆನ್ನನ್ನುತ್ತೀರಾ?

ತೀರ್ಥಹಳ್ಳಿಯಲ್ಲಿ ನಾವು ತೋಟದ ಮನೆಗೆ ಸೋಲಾರ್ ಹಾಕಿಸುವಾ ಅಂದಿದ್ದೆ..ಅವರೂ ಹೂಂ ಅಂದಿದ್ರು...

ಅಷ್ಟೇ...ಸುಮ್ನೆ....

April 20, 2026

4 months without you

 

                  two years ago...jog falls

ಒಬ್ಬ ಸಂಬಂಧಿಕರ complaint ಇತ್ತು. ನಮಗ್ಯಾರಿಗೂ serious ಅಂತ ಹೇಳೇ ಇಲ್ಲ. ನಾವು ಬರ್ತಿದ್ವಿ ಶ್ರೀಕಾಂತ್ ನನ್ನು ನೋಡಲು ಅಂತ....


20ನೆ dec ರಂದು ಬೆಳಿಗ್ಗೆ  ಡಾಕ್ಟರ್..'ಏನೂ improvement ಇಲ್ಲ. ಹೊಟ್ಟೆಯಲ್ಲಿ ಎದೆಯಲ್ಲಿ clot ಆಗಿದೆ. ಹೆಚ್ಚಂದ್ರೆ 10 ದಿನ. ventilator ನಾನು suggest ಮಾಡಲ್ಲ. ವಾರ್ಡ್ ಗೆ ಶಿಫ್ಟ್ ಮಾಡ್ತೇವೆ...comfortable ಆಗಿರಲಿಕ್ಕೆ ಅಷ್ಟೇ ಔಷಧಿ ಕೊಡ್ತೇವೆ....ಫ್ಯಾಮಿಲಿ ಮೆನ್ಬರ್ಸ್ ಎಲ್ಲ ಬಂದು ನೋಡಲಿಕ್ಕೆ ನಾವು ಅಡ್ಡಿ ಮಾಡಲ್ಲ ಅಂದ್ರು...ನಾನು ಕೆಳಗಡೆ toilet ಗೆ ಹೋಗಿ ಅತ್ತು ಬಂದೆ....ಕೊಪ್ಪ ದಿಂದ ಸ್ನೇಹಿತರು ಬಂದಿದ್ದರು....ವಿಸಿಟಿಂಗ್ ಟೈಮ್ ಅಂತ ಅವರನ್ನು ಕರೆದುಕೊಂಡು ಐಸಿಯು ಗೆ ಲಿಫ್ಟ್ ನಲ್ಲಿ ಹೋಗಬೇಕಾದ್ರೆ ಅಲ್ಲಿಂದ ಕಾಲ್ ಬಂತು...ಬೇಗ ಮೇಲೆ ಬನ್ನಿ cardiac ಅರೆಸ್ಟ್ ಆಗಿದೆ ಅಂತ....ಎಷ್ಟು ಸಡನ್ ಅಂದ್ರೆ ಏನು ಮಾಡಬೇಕೆಂದು ತೋಚಲಿಲ್ಲ..
ವಾರ್ಡ್ ಗೆ ಶಿಘ್ಟ್ ಆದ ಮೇಲೆ ಅವರನ್ನು comfortable ಆಗಿ ಇಡೋದು.. ಅವರ ಇಷ್ಟದ ಅವರಮ್ಮನ ಶಾಲ್ ಅವರಿಗೆ ಹೊದಿಸೋದು, ಅವರ ಇಷ್ಟದ ಸಂಗೀತ / ಹಾಡು...ಪಂಡಿತ್ ವೆಂಕಟೇಶ್ ಕುಮಾರ, ಗಂಗೂಬಾಯಿ ಹಾನಗಲ್, ಕಿಶೋರಿ ಅಮೊಂಕರ್,  ಉಸ್ತಾದ್ ರಶೀದ್ ಖಾನ್ ಸಂಗೀತ ಎಲ್ಲ ಹಾಕಿ ಕೇಳಿಸೋದು, ಯಾವ ಯಾವ ಸಂಬಂಧಿಕರಿಗೆ ಕರೀಬೇಕು ಅಂತೆಲ್ಲ ಪ್ಲಾನ್ ಹಾಕುವಾಗ ಸಡನ್ ಹೋಗಿ ಬಿಟ್ರು....ದಿಕ್ಕು ತೋಚದಂತಾಗಿತ್ತು...ಯಾರ್ ಯಾರ್ ಗೆ ಮೆಸೇಜ್ ಮಾಡಿದೆ ಗೊತ್ತಿಲ್ಲ....automaton mode ನಲ್ಲಿದ್ದೆ..

liver cirrhosis ಪತ್ತೆಯಾದಾಗ ನನ್ನ immediate family members,  ಶ್ರೀಕಾಂತ್ ಒಬ್ಬ ಅಣ್ಣನ ಮಗಳಿಗೆ ಮಾತ್ರ ತಿಳಿಸಿದ್ದೆವು...ಹುಷಾರಾಗುತ್ತಾರೆ ಅನ್ನುವ ಬಲವಾದ ನಂಬಿಕೆಯಿತ್ತು...ಆಗಸ್ಟ್ ರಿಂದ ಆಕ್ಟೊಬರ್ ..ಆರೋಗ್ಯದಲ್ಲಿ ಸುಮಾರು ಬದಲವಾಣೆಯಿತ್ತು...ಮತ್ತೆ  ಒಂದು ಸಲ ammonia ಜಾಸ್ತಿ ಆಗಿ ಈ ಕಡೆಯ ಪರಿವೆಯೇ ಇರಲಿಲ್ಲ. ಡಾ urine infection ನಿಂದ...ಪೂರ್ತಿ ಮೂತ್ರ ಹೊರ ಹೋಗದೆ ಹಾಗಾಗೋದು...ಅಂದ್ರು...
urinary infection ಅಂದಾಗ ನಾನು 'ನಾನು ಖುದ್ದಾಗಿ ಅವರ toilet clean ಮಾಡೋದು...ಅವರೊಬ್ಬರೇ ಅದನ್ನು ಉಪಯೋಗಿಸೋದು' ಅಂತ emotional ಆಗಿ ಹೇಳ್ತಿರಬೇಕಾದ್ರೆ.....
toilet ಗಲೀಜು ಕಾರಣ ಅಲ್ಲ. prostrate enlarge ಆಗಿ bladder ಮೇಲೆ pressure ಬಿದ್ಫು..ಪೂರ್ತಿ ಮೂತ್ರ ಖಾಲಿ ಆಗಲ್ಲ....ಅದ್ದರಿಂದ ಪದೇ ಪದೇ infection ಆಗುತ್ತೆ....liver transplant ಗೇ ಅಂತ ಸಜ್ಜಾದಾಗ ಯಾವುದೇ ಸರ್ಜರಿ ನಾವು ರಿಕಮೆಂಡ್
ಮಾಡಲ್ಲ ಅಂದ್ರು...liver  ಸಿಕ್ಕಿತ್ತು...ನಮ್ಮ ದುರ್ಭಾಗ್ಯ...ಕೊನೆಗೆ urinary infection ನಿಂದ ಕಿಡ್ನಿ ಕೆಲಸ ಮಾಡೋದು ನಿಂತೆ ಹೋಯ್ತು...ಮೂತ್ರದ ಚೀಲ ಅಳವಡಿಸಿದರು, dialysis ಆಯ್ತು.. ಉಹೂಂ....😭😭

ಇವತ್ತಿಗೆ ನಾಲ್ಕು ತಿಂಗಳಾಯ್ತು ಹೋಗಿ...🙏🙏

April 17, 2026

Unfermented Dosa/dose


ನನ್ನ ತಮ್ಮನ ಮಗಳಿಗೆ fermented ತಿಂಡಿಗಳು ಇಷ್ಟ ಆಗಲ್ಲ. ಅವಳಿಗೆ ಉದ್ದು-ಮೈದಾ ದೋಸೆ, ನೀರು ದೋಸೆ ಮತ್ತು ಕೆಳಗೆ ಕೊಟ್ಟಿರುವ ದೋಸೆ ಇಷ್ಟ.

ಕೊಂಕಣಿಯಲ್ಲಿ ಕರ್ ಕರ್ ಮಚಕಟ್ ಅಂತ ಹೆಸರು...ಸ್ವಲ್ಪ ದಪ್ಪ ಹುಯ್ಯಬೇಕು..

2 ಗ್ಲಾಸ್ ಅಕ್ಕಿ, 2 tb sp ಉದ್ದಿನ ಬೇಳೆ, 2 ಟೇಬಲ್ ಚಮಚ ತಾಜಾ ಕಾಯಿ ತುರಿ

ನಾನು ನಾಲ್ಕು ಗಂಟೆಗೆ ಎದ್ದಿರುತ್ತೇನೆ ಅಂತ ಹಲವಾರು ಬಾರಿ ಬ್ಲಾಗ್ ನಲ್ಲಿ ಹಾಕಿದ್ದೇನೆ....so ನಾಲ್ಕು ಗಂಟೆಗೆ ನೀರಲ್ಲಿ ನೆನೆಸ್ತೀನಿ. ಚಹಾ ಕುಡಿದು..ವಾಕ್ ಹೋಗಿ..6 ಗಂಟೆಗೆ ಎರಡು table spoon ತಾಜಾ ತೆಂಗಿನ ಕಾಯಿ ತುರಿ ಹಾಕಿ ತರಿ ತರಿ ಯಾಗಿ ರುಬ್ಬಿ..ಉಪ್ಪು ಬೆರೆಸಿ, regular ದೋಸೆ ಹಿಟ್ಟಿಗಿಂತ ,ಹಿಟ್ಟು ಸ್ವಲ್ಪ ನೀರು ನೀರಾಗಿರಲಿ batter.  ಬಿಸಿ ಬಿಸಿ ದೋಸೆ ಹುಯ್ದು, ಬಿಸಿ ಇರುವಾಗಲೇ ಬೆಣ್ಣೆ ಜತೆ ಜಮಾಯಿಸಿ..ನನಗೆ ಥ್ಯಾಂಕ್ಸ್ ಹೇಳಿ 🙂🙏❤️

ಚಿತ್ರದಲ್ಲಿ salted butter ಮತ್ತು  shadrasa cooking channel  ನಲ್ಲಿರಿವ, ಮಂಜೇಶ್ವರ ದೇವಸ್ಥಾನದಲ್ಲಿ ಊಟಕ್ಕೆ ಬಡಿಸುವ ಟೊಮೆಟೊ ಗೊಜ್ಜು...ನೋ ನೀರುಳ್ಳಿ ನೋ ಬೆಳ್ಳುಳ್ಳಿ...yet yummy

yummy crisp unfermented dosa

unfermented : ಹುದುಗು ಬರದ / ಹುಳಿಯಾಗಿರದ




April 12, 2026

Orchids

 ಹಿಂದಿನ ವಾರ ಎಲ್ಲ ಗಿಡಗಳಿಗೆ ನೀರು ಹಾಕ್ತಾ ಇದ್ದೆ. ಈ ಆರ್ಕಿಡ್ಗ  ಗಿಡ ಗಳಿಗೆ ತುಂಬಾ ನೀರು ಹಾಕಬಾರದು ಅಂತಾರೆ...ಹಾಗೂ ನನ್ನ ಬಳಿ ಈ ಗಿಡಗಳು ಉಳಿಯಲ್ಲ...ನನಗೂ ಅವಕ್ಕೂ ಕೂಡಿ ಬರಲ್ಲ....ಈ ಗಿಡಗಳು ನನ್ನ ಹುಟ್ಟು ಹಬ್ಬಕ್ಕೆ ರಾಧಿಕಾ ಗಂಗಣ್ಣ ಉಡುಗೊರೆಯಾಗಿ ಕಳಿಸಿದ್ದು....ಬಿಟ್ಟ ಹೂ ಮೂರು ತಿಂಗಳು ಇರುತ್ತೆ..ಇತ್ತು...

ಮೊನ್ನೆ ನೋಡಿದಾಗ ಗಿಡ ಎಲ್ಲ ಒಣಗಿದ ಹಾಗೆ ಅನ್ನಿಸಿ....'ಎಷ್ಟೊಂದು ಸೆಕೆ ಇದೆ...ನಿಮಗೆ ನೀರು ಕುಡಿಯಲು ಏನು ಧಾಡಿ' 'ಸುಮ್ನೆ ನಾಟಕ ಆಡಬೇಡಿ' ಅಂತ ಸರಿ ಬೈದು ಮೂರು ಆರ್ಕಿಡ್ ಗಿಡಕ್ಕೂ ಅರ್ಧ ಅರ್ಧ ಗ್ಲಾಸ್ ನೀರು ಸುರಿದೆ.

ನಿಹಾಳ ಸ್ನೇಹಿತೆ (ಖ್ಯಾತ ಬರಹಗಾರರ niece - ಬರಗಾರರು ಶ್ರೀಕಾಂತ್ ಗೆ friend and colleague) ಮನೆಗೆ ಬಂದಾಗ ಗಿಡಗಳ ಬಗ್ಗೆ ಮಾತು ಬಂದಾಗ ನಿಹಾ 'ಅಮ್ಮ ಊರಲ್ಲಿಲ್ಲದಿದ್ದಾಗ ನಾವು ನೀರು ಹಾಕಿದ್ರೂ ಸ್ವಲ್ಪ ದಿನ ಆದ ಮೇಲೆ ಗಿಡ ಡಲ್ ಕಾಣ್ ತಾವೆ, ಅಂದ್ರೆ ಅವಳು ಇದನ್ನು ಅನುಮೋದಿಸಿದಳು.   ನಮ್ಮಲ್ಲೂ ಹಾಗೆ ಅಮ್ಮ, ಅಣ್ಣನ ಮನೆಗೆ ಕೆಲ ದಿನ ಹೋಗಿ ಇದ್ದಾಗ , ನಾನು ಅಪ್ಪ ನೀರೆಲ್ಲ ಹಾಕತೆವೆ...ಸೇಮ್ ಕತೆ ಅಂತ....ಅದಕ್ಕೆ ನಾನು 'ಹೌದು, ನಾನು ಗಿಡಗಳ ಜತೆ ಮಾತು ಕತೆ ಆಡ್ತೀನಿ, ಹಾಡ್ತೀನಿ..i caress the plants ಅಂದೆ...
ಶ್ರೀಕಾಂತ್ ಗೂ ತುಂಬಾ ಇಷ್ಟ ಈ ಹುಡುಗಿ...ಸಮಯ ಹೋದದ್ದೇ ತಿಳಿಯಲ್ಲ..ಅಷ್ಟು ಮಾತು ನಗು, mimicry.. we talk about everything under the sun..🙂🙂 ನಾನು ಮೀನು ಅಡಿಗೆ ಮಾಡಿದಾಗಲೆಲ್ಲ ಅವಳಿಗೆ invite ಇರುತ್ತೆ.

ಇವತ್ತು ಆರ್ಕಿಡ್ ಗಿಡ ನೋಡಿಡ್ರೆ 😁😁❤️❤️ 👇👇


ಶ್ರೀಕಾಂತ್ ಇದ್ದಾಗ ಊಟಕ್ಕೆ ಬಂದಾಗ ಮಾಡಿದ್ಫು 👇👇

ಮೀನು ಊಟದ ಪ್ಲೇಟ್

April 4, 2026

ಒಂದು ಕಪ್ ಚಹಾ

 


ದಸರಾ ದಿನದಂದು, ದೀಪಾವಳಿಗೆ ಬರುವ  ನನ್ನ ಹುಟ್ಟು ಹಬ್ಬದ  ಮುಂಚಿತ ಉಡುಗೊರೆಯಾಗಿ, ಅಕ್ಕ, ಬ್ಯೂಟಿ salon ಅನ್ನೇ ಮನೆಗೆ ಕರೆಸಿದಳು.  8.30 ಗೆ ಬಂದಿದ್ಫು ಎಲ್ಲ ಕೆಲಸ ಮುಗಿಸುವಾಗ 1.00 ಗಂಟೆ. ಹಬ್ಬದ ದಿನ ನನಗೆ ಪಾಪ ಅನ್ನಿಸ್ತು. ಊಟ ಮಾಡಿ ಹೋಗಿ ಅಂದೆ. ಇಲ್ಲ, ಮನೆಯಲ್ಲಿ ಆಕೆಯ ತಂಗಿ ಮೈಸೂರಿನ ಹಳ್ಳಿಯಿಂದ ಇಲ್ಲಿಗೆ ಕಾಲೇಜು ಕಲಿಯಲು ಇವರ ಮನೆಯಲ್ಲೇ ಇದ್ದಾಳೆಂದೂ, 6 ವರ್ಷದ ಮಗಳು ಮನೆಯಲ್ಲಿ.ಇದ್ದಾಳೆಂದು...ತಂಗಿ ಅಡಿಗೆ ಮಾಡುತ್ತಾಳೆ ಅಂದ್ರು...ಅವರ ಗಂಡ factory ಕೆಲಸ, ಇವತ್ತು ರಜೆ ಇಲ್ಲ ಅಂದ್ರು...11.00 ಗಂಟೆಗೆ  ನಾನು ಚಹಾ ಮಾಡಿದಾಗ , ಅವರಿಗೂ ಕೊಟ್ಟು, ನಮಗೆ ಆ ದಿನ ಇಡ್ಲಿ ಸಾಂಬಾರು....ಕೊಡ್ಲಾ ಅಂದ್ರೆ ಬೇಡ ತಿಂಡಿ ಆಗಿ ನೆ ಬಂದಿದ್ಫು ಅಂದ್ರು  ಸ್ವಲ್ಪ ಕುರುಕುಲು ತಿಂಡಿಗಳನ್ನು ಕೊಟ್ಟೆ...ಎಲ್ಲಾ ತಿಂಡಿ ಚೆನ್ನಾಗಿ ತಿಂದ್ರು...ಅವರ ಗಂಡ ಶ್ರೀ0ಗೇರಿ ಯವರು ಅಂದ ಕೂಡಲೇ ಶ್ರೀಕಾಂತ್ ಕಿವಿ ಚುರುಕಾಯಿತು...ಅವರ ಬಗ್ಗೆ ಎಲ್ಲ ಕೇಳಿ ತಿಳಕೊಂಡ್ರು..ದಿನಕ್ಕೆ ಎಷ್ಟು ದುಡಿತಾರೆ, app ಮೂಲಕ ಬಂದ್ರೆ parlour ನವರು ಇವರಿಗೆ. ಎಷ್ಟು ಕೊಡ್ತಾರೆ, insurance ಹಾಗೆ ಹೀಗೆ ಅಂತ.....ನಾನು facial, ಹುಬ್ಬಿನ ಆಕಾರ ಮಾಡಿಸಿದೆ...ಮಕ್ಕಳು ಪೆಡಿಕ್ಯೂರ್.....ಹುಷಾರಿಲ್ಲದ ಶ್ರೀಕಾಂತ್ ಇದನ್ನೆಲ್ಲ ನೋಡಿ ಸಖತ್ impressed ಉ.....

ಮರುದಿನ ಅಕ್ಕನಿಗೆ 'ಅಕ್ಕಾ ನನಗೂ ಮಸಾಜ್ ಎಲ್ಲ ಮಾಡಿಸಬೇಕೆಂದು ಆಸೆ ಆಗಿದೇ ಅಂದ್ರು...ಕೂಡಲೇ ಅಕ್ಕಾ ಆ ಭಾನುವಾರ ಅವರಿಗೋಸ್ಕರ ಹೋಮ್ grooming ಬುಕ್ ಮಾಡಿದಳು....
ಅವನೂ ಕರೆಕ್ಟ್ 8 ಗಂಟೆಗೆ ಆಕಳಿಸುತ್ತಾ ಬಂದ....ನಮ್ಮ ರಾಯರೋ ಸ್ನೇಹ/ಸಂಘ ಜೀವಿ....ವಟವಟ ಮಾತಾಡ್ ಬೇಕು...ಅವನಿಗೋ ಮಾತೇ ಬೇಡ ದ ತರಹ.ಶ್ರೀಕಾಂತ್ ಹತ್ತು ಮಾತಾಡಿದ್ರೆ ಅವನು ಅರ್ಧ ಮಾತಾಡ್ತಿದ್ದ..,😁..ನಾನು ಶ್ರೀಕಾಂತ್ ಗೆ ಕೊಂಕಣಿಯಲ್ಲಿ ಈಗ ಎದ್ದಿರಬಹುದು., ಸಂಡೆ ಬೇರೆ...ಸುಮ್ಮನಿರಿ ಸ್ವಲ್ಪ ಹೊತ್ತು ಅಂದೆ....ಬೇಗ ಬೇಗ ನೆ ಬಿಸಿ ಬಿಸಿ ಟಿ ಮಾಡಿದೆ ಇಬ್ಬರಿಗೂ...ದೋಸೆ ತಿನ್ನುತ್ತಿಯಾ ಬೇಟಾ ಅಂದೆ....ಚುಟುಕಾಗಿ ಬೇಡ ಅಂದ...ಆದರೆ ಚಹಾ ಜತೆ ಮೂರು ನಾಲ್ಕ್ಯ್ ಬಗೆಯ ಬಿಸ್ಕಿಟ್, ಖಾರಿ ಬಿಸ್ಕತ್ತು ಮುಂತಾದು ಇಟ್ಟೆ....ಟೇಬಲ್ ಬಳಿ ಕುರ್ಚಿ ಎಳೆದು ಆರಾಮಾಗಿ ಪವಡಿಸಿ ಎರಡು ಗುಟುಕು ಚಹಾ ಕುಡಿದಿದ್ದೆ  ಹುಡುಗ ಚುರುಕಾಗಿ ಬಿಟ್ಟ....ಮಾ ಜಿ,  ಹಮಾರಿ ಮಾ ಭಿ   ಐಸೆ ಹೀ ಮಜೆದಾರ್ ಚಾಯ್ ಬನಾತಿ ಹೈ...ಮಾ ಕಿ ಯಾದ್ ಆ ಗಯಿ' ಅಂತ ಖುಷ್ ಆಗಿ ಬಿಟ್ಟ..ಪ್ಲೇಟ್ ನಲ್ಲಿ ಇಟ್ಟ ತಿಂಡಿಗಳನ್ನೆಲ್ಲಾ ನೀಟಾಗಿ ತಿಂದು..ಪ್ಲೇಟ್, ಚಹಾ ದ ಕಪ್ , ನಾನು ಬೇಡ ಬೇಡ ಅಂದ್ರು, ಅಡಿಗೆ ಮನೆಗೆ ಬಂದು, ತೊಳೆದು ಇಟ್ಟ..ದೇಖಿಯೇ ಮೇರಿ ಚಾಯ್ ಕಾ ಕಮಾಲ್ ಅಂತ.ಮಕ್ಕಳು ನಾನು ಅಡಿಗೆ ಮನೆಯಲ್ಲಿ ಮುಸು  ಮುಸು ನಗ್ತಾ ಇದ್ವಿ... ಶ್ರೀಕಾಂತ್ ಗೂ ಒಳ್ಳೆ ಮಸಾಜ್, ಹೇಯರ್ ಕಟ್,  ಪೀಡಿಕ್ಯೋರ್ ಎಲ್ಲ ಮಾಡಿ...ಸೈ ಆನಿಸಿಕೊಂಡ...ಉತ್ತರಾಖಂಡ್ ದವನಂತೆ..ಅಪ್ಪ ,ಅಮ್ಮ ತಂಗಿ , ತಮ್ಮ ಎಲ್ಲ ಖೇತಿ ಮಾಡ್ತಾರೆ ಅಂದ...ಜೀವನ ತುಂಬಾ ಕಷ್ಟ...ತಂಗಿಗೆ ಮದುವೆ ಮಾಡಬೇಕು ಅಂತೆಲ್ಲ ಅಂದ...ಯಾವ ಬೇಳೆ, ಅವರ ಆಹಾರ ವಿಧಾನಗಳನ್ನೆಲ್ಲ ಶ್ರೀಕಾಂತ್ ಕೇಳಿ ತಿಳಕೊಂಡ್ರು....ಹಿಂದಿನ ರಾತ್ರಿ ತುಂಬಾ kelasa ಇದ್ದು ರಾತ್ರಿ ಮಲಗುವಾಗ ಲೇಟ್ ಆಗಿ ಬಹುಶಃ ಮೂಡ್ ಹಾಳಾಗಿತ್ತೇನೋ....ಏಕ್ ಕಪ್ ಚಾಯ್ ನೆ ಸಬ್ ಕುಚ್ ಬದಲ್ ದಿಯಾ..😁😁
ಅಕ್ಕ ದಸರಾ ಗೆ ಮಾಡಿದ ಚಾಕೊಲೇಟ್ ಕೊಟ್ಟೆ...ಥಾಂಕ್ you ಮಾಜಿ ಅಂತ ಕಾಲಿಗೆ ಎರಗಿ ಹೋದ  ಹುಡುಗ...😁😁
ಶ್ರೀಕಾಂತ್ ಅವನು ಹಿದ ಮೇಲೆ ಎಷ್ಟು ದುಡ್ಡು ಆಯ್ತು ಅಂತ ಕೇಳಿದ್ರೆ...ಅಕ್ಕ 'ask no questions and you will be told no lies' ಒಲಿವರ್ ಗೋಲ್ಡ್ ಸ್ಮಿತ್ ಅವರ ಗಾದೆ ಉದುರಿಸಿ ನಗಿಸಿದಳು ' 😁😁
 am glad  we got to do these little things for srikanth ..😭😭






March 28, 2026

ಬಣ್ಣ -my ಬಣ್ಣ 😧

 i noticed those  girls while entering the hospital cafe. Both were very pretty..looked alike. Maybe sisters or even twins. Both were engrossed with their cell phones. Niha took turns sitting in the ward with Srikanth and she asked me go and have a leisurely tea. i ordered a tea and a veggie puff and sat in a toasty sunlit corner.  Found a discarded newspaper. opened the crossword part , found a pen in my bag and started solving. 'Auntie' someone called near my ear. i turned towards the voice and found one of the pretty girls. besides me.  'aunty i just wanted to compliment on your beautiful skin colouring', it is amazing. Me, i am not used to nor take easily to praise...arre what does this girl want,  i think..but sensibility/manners made me thank her...she must have seen the confusion/doubt in my face...'my sister thinks so too'....we haven't seen such colouring on anybody....i said this is the 'first time i am hearing of it...and turned to my crossword.....suddenly i realized i was sitting in the sunlight..i smiled at the girl who was still sitting beside me ...haha it is the sunlight...see 😁. she replied 'no aunty we observed you when you entered the cafe and wanted to.let you know...she smlled...i repeated my thank you  i was.a bit embarassed. she said bye and went back to her sibling....after i entered the ward i shared the incident with niha and said..i am so dumb..i forgot to say they were pretty themselves...


ಶ್ರೀಕಾಂತ್ ಹೋದ ಒಂದು ವಾರದ ಮೇಲೆ ಯಾಕೋ ಈ ಮೇಲಿನ ಘಟನೆ ನೆನಪಾಯ್ತು.
ಯಾಕೋ ಹೆದರಿದೆ
ಯಾಕೆಂದರೆ............
ಶ್ರೀಕಾಂತ್ ಗೆ ಲೀವರ್ transplant ಮಾಡಲೇ ಬೇಕಾಗುತ್ತದೆ ಎಂದ ಮೇಲೆ liver workup ಅಂತ ಮಾಡುತ್ತಾರೆ. ಬೇರೆ ಲೀವರ್ ಪಡೀಲಿಕ್ಕೆ ರಕ್ತದ ಗುಂಪು match ಆದ್ರೆ ಮಾತ್ರ ಸಾಕಾಗಲ್ಲ, kidney, heart, lungs ಎಲ್ಲ ಸರಿ ಕೆಲಸ ಮಾಡಿದ್ರೆ ಮಾತ್ರ transplant. ಇದನ್ನು airport ರೋಡ್ ನಲ್ಲಿರೋ Aster CMI ನಲ್ಲಿ ಮಾಡಿಸಿದ್ವಿ. ಎಷ್ಟು ದೂರ...ನಮ್ಮದೇ ವಾಹನ ಇದ್ರೂ it was too tiring..
ಅಲ್ಲಿ 4 ವರ್ಷದ ಮಗುವಿನಿಂದ 50+  ವರೆಗಿನ, ವಿವಿಧ ಸ್ಥರದ / ಹಂತದ/ಬಣ್ಣದ ಲೀವರ್ ಕಾಯಿಲೆ ಯ ಜನರನ್ನು ನೋಡಿದೆ. ಅದರಲ್ಲಿ ಒಬ್ಬ 28- 30 ವರ್ಷದ ಹಡುಗ ನ ಬಣ್ಣ ತುಂಬಾ ನೆ ವಿಚಿತ್ರವಾಗಿತ್ತು....ಲಕ ಲಕ ಹೊಳೆಯುವ ರಕ್ತ ಚಂದನದ ಬಣ್ಣ, ಹಳದಿ - ನೀರು ಭರಿತ ಕಣ್ಣು, ಮೂತ್ರದ ಚೀಲ ಕೈಯಲ್ಲಿ...ಮೂತ್ರದ ಚೀಲ ದ ಸಲುವಾಗಿ ಲುಂಗಿ ತೊಟ್ಟಿದ್ದ...i was fascinated by his colour.... ನಾನು ಕಣ್ಣು ಕೀಳಿಸದೆ ಅವನನ್ನು ನೋಡುತ್ತಿರಬೇಕಾದ್ರೆ ಅಕ್ಕ ನನಗೆ amma stop staring ಅಂತ ಗದರಿದಳು...ಅವನ  ಸಣ್ಣ ಪ್ರಾಯದ ಹೆಂಡತಿ ಕೂಡ ಅವನ ಜತೆ ಇದ್ದಳು....ಅವನೂ transplant ಗಾಗಿ ಕಾಯುತ್ತಿದ್ದ...
ಈ ಹುಡುಗಿಯರು  ಮತ್ತೆ ನೆನಪಾಗಿ , ಮೈ ನಡುಕ ಬಂದು, ನಾನು malathi manipal ನಲ್ಲಿ ಫುಲ್ body ಚೆಕ್ up ಮಾಡಿಸಿದೆ...low haemoglobin ಮತ್ತು pre diabetis ಪತ್ತೆಯಾಗಿದ್ರು ಬಿಟ್ರೆ ಎಲ್ಲ ಸರಿಯಾಗಿದೆ..
ಡೈಬೇಟಿಸ್ control ನಲ್ಲಿದೆ....stress ಇಂದ ಸಕ್ಕರೆ ಅಂಶ ಏರು ಪೇರಾಗ್ತದೆ ಮತ್ತು life style ಬಗ್ಗೆ ಕೇಳಿ...ಅದನ್ನೇ maintain ಮಾಡಿ..ಮೂರು ತಿಂಗಳ ನಂತರ ಪುನಃ ತಪಾಸಣೆ ಮಾಡುವಾ ಅಂದು ಔಷಧಿ ಏನೂ ಬರೆದು ಕೊಟ್ಟಿಲ್ಲ...
ಯಾಕೆ ನೆನಪಾಯ್ತು ಅಂದ್ರೆ ಮೊನ್ನೆ fort ಕೊಚ್ಚಿ ಯಲ್ಲಿ ಹೋಟೆಲ್ ನಲ್ಲಿ ಊಟಕ್ಕೆ ಕಾಯುತ್ತಿದ್ದಾಗ ನಿಹಾ 'ಅಮ್ಮ  you are glowing, let me take a pic ಅಂತ ಫೋಟೋ ತೆಗೆದ್ಲು...🤔🤔 ನಾನೂ ಚಿತ್ರ ನೋಡಿದೆ ನನಗೇನೂ glow ಆಗ್ತಿದ್ದೆನೆ ಅನ್ನಿಸಲಿಲ್ಲ..
ನಾನು ಮೊದಲಿನ ಧೈರ್ಯವಂತೆ ಮಾಲತಿ ಅಲ್ಲವೇ ಅಲ್ಲ...ಆಕ ನಿಂಪಿ ಗೆ ಸ್ವಲ್ಪ cold cough, ಆರೋಗ್ಯ ಏರು ಪೇರಾದ್ರೆ ತುಂಬಾನೇ tense ಆಗ್ತೀನಿ.  ಮೊದಲು ನನ್ನ panic attack ನಂತರ ಶ್ರೀಕಾಂತ್ ರ liver cirrhosis ಮತ್ತುdetect ಆದ 8 ತಿಂಗಳಿಗೆ ಸಾವು ನನ್ನನ್ನು ಕಂಗೆಡಿಸಿಬಿಟ್ಟಿದೆ 😭😭😏


ಶ್ರೀಕಾಂತ್ ಗೆ ಸಿಕ್ಕಾಪಟ್ಟೆ weight loss ಆಗಿ ಸರಿಯಾದ ಸೈಜ್ ಬಟ್ಟೆ ತೆಗೊಂಡ್ರೆ ಹೊಟ್ಟೆ ಮೇಲೆ ಟೈಟ್ ಆಗುತ್ತಿತ್ತು, ಲೂಸ್ ತೆಗೊಂಡ್ರೆ shoulder ಮೇಲಿಂದ ಇಳಿತಿತ್ತು...ಪ್ಲಸ್ ನಾವು ತಂದದ್ದು, online ಆರ್ಡರ್ ಮಾಡಿದ್ದು ಅವರಿಗೆ ಸರಿ ಆಗ್ತಿರಲಿಲ್ಲ..ಅಂತ ನಾನು ಅವರನ್ನು reliance ಗೆ ಕರೆದುಕೊಂಡು ಹೋದಾಗ, ನನಗೂ force ಮಾಡಿ ಮೇಲಿನ ಚಿತ್ರದಲ್ಲಿನ ಡ್ರೆಸ್ ತೆಗೆಸಿಕೊಟ್ರು...ನಮ್ಮ ಲಾಸ್ಟ್ ಶಾಪಿಂಗ್ outing. ತೆಗೆದುಕೊಂಡ ಬಟ್ಟೆ ಹಾಕಲೇ ಇಲ್ಲ, ಆರೋಗ್ಯ ಹದಗೆಡುತ್ತಾ ಹೋಯ್ತು...ಇತ್ತೀಚಿಗೆ ಒಂದು ದೊಡ್ಡ suitcase ತುಂಬಾ ಬಟ್ಟೆ ವೃದ್ಧಾಶ್ರಮಕ್ಕೆ ಕೊಟ್ಟೆ...
ನನ್ನ ಹೊಸ ಚಸ್ಮ ಹಾಕಿ ಚಿತ್ರ ತಮ್ಮ-ಅಮ್ಮ ನಿಗೆ ಕಳಿಸಿದ್ದು ನಿಮಗೂ....ಅವರೊ ಇಲ್ಲಿಗೆ ಬಾ ಬಾ ಅಂತ ಕರೀತಿರ್ತಾರೆ, ನನಗೆ ಎಲ್ಲೂ ಹೋಗಲೂ ಮನಸ್ಸಿಲ್ಲ 😏.

March 23, 2026

Fort Kochi. story in pictures

 ನಿಹಾ ಗೆ ಕೂಡಿಟ್ಟ ರಜೆಗಳಿದ್ವು...ಅದಕ್ಕೆ ಯುಗಾದಿ ರಾತ್ರಿ ಟ್ರೈನ್ ನಲ್ಲಿ ನಮ್ಮ ಸವಾರಿ ಫೋರ್ಟ್ ಕೊಚ್ಚಿ ಕಡೆಗೆ. ಇಲ್ಲಿಂದ ರೈಲು ಎರ್ನಾಕುಲಮ್..ಅಲ್ಲಿಂದ water ಮೆಟ್ರೋ ನಲ್ಲಿ ಫೋರ್ಟ್ kochi. ತಲಾ ಒಬ್ಬರಿಗೆ 50 ರೂ. ಮೊದಲಿ ವೈಪಿನ್ ಗೆ ಸ್ಟಾಪ್..ಅಲ್ಲಿ ಕೆಲವರು ಇಳಿದು ಹತ್ತಿ ಮಾಡಿ ನಾವು ಫೋರ್ಟ್ ಕೊಚ್ಚಿ ಯಲ್ಲಿ ಇಳಿದೆವು. ತಗುಲಿದ ಸಮಯ ಅರ್ಧ ಗಂಟೆ. 




                            water metro


ಅಲ್ಲಿಂದ ಹತ್ತು ನಿಮಿಶದ ನಡಿಗೆಯಲ್ಲಿ ನಾವು ರೂಮ್ ಕಾಯ್ದಿರಿಸಿದ fort house ಹೋಟೆಲ್ ಗೆ. ದಿನಕ್ಕೆ 3000 ರೂ...ನಾವು ಮೂರು ಜನ ಒಂದೇ ರೂಮ್. ಬೇಕಿದ್ದಲ್ಲಿ extra ಹಾಸಿಗೆ  ಕೊಡುತ್ತೇವೆ ಅಂದ್ರು...ಆದರೆ ಮಂಚ ಅಗಲವಿತ್ತು. ಸಾಕಷ್ಟು ಚೆನ್ನಾಗಿತ್ತು ರೂಮ್. ಸಿಬ್ಬಂಧಿ ಎಲ್ಲ ತುಂಬಾ helpful....








ನನಗೆ ಅಷ್ಟೇನೂ ಸೆಕೆ ಅನ್ನಿಸಲಿಲ್ಲ..





 ಆದರೆ ಊಟ ತಿಂಡಿ ಆರ್ಡರ್ ಮಾಡಿದ್ರೆ. ಮೆನ್ಯು ನಲ್ಲಿ ಅದು ಇಲ್ಲ ಇದು ಇಲ್ಲ..ಗ್ಯಾಸ್ ಇಲ್ಲ ಅನ್ನುವ ಸಬೂಬು....ಮತ್ತು ತಿಂಡಿ ಊಟ ಆರ್ಡರ್ ಮಾಡಿದ minimum  45 ನಿಮಿಷ ತಗುಲು ತ್ತಿತ್ತು...ಅಲ್ಲಿ ಮಾತ್ರವಲ್ಲ..ಎಲ್ಲ ಕಡೆ...ನಿನ್ನೆ ಟೀ ಇಲ್ಲ ಅಂದಾಗ ಉರಿದು ಹೋಯ್ತು...ನನ್ನ ಅಸಹನೆ  ಗಮನಿಸಿ... ಇಲ್ಲ ಮ್ಯಾಡಮ್ ಹಾಲು ಬೇರೆ ಯದಾಗಿ  ಕೊಡುತ್ತೇವೆ..ನೀವೇ ಬೆರೆಸಿಕೊಳ್ಳಬೇಕು ಅಂದ ಹುಡುಗ...ಲಾಜಿಕ್ ಗೊತ್ತಾಗಲಿಲ್ಲ...

.


ಒಂದು ನಾಲ್ಕು ದಿನ ಬ್ರೇಕ್  ಬೇಕಿದ್ದಲ್ಲಿ (ನಾಲ್ಕು ದಿನ ಸಾಕಾಗಲ್ಲ) ನೀವು ಹೋಗಿ ಬನ್ನಿ... biennale art ಷೋ ಗಳ ಗಡಿಬಿಡಿ....ಹೊರದೇಶ ದ ಯಾತ್ರಿಕರು ಹೆಚ್ಚು.

ಕೊನೆಯ ದಿನ ಬೆಳಿಗ್ಗೆ ನಾವು ತೈಲ ಮಸಾಜ್ ಗೆ ಹೋದ್ರೆ,. ನಿಹಾ ಆರ್ಟ್ exhibition ಗಳನ್ನೆಲ್ಲಾ ನೋಡಿ ಬ0ದ್ಲು.  ಸಂಜೆ ರಿಕ್ಷಾ ಮಾಡಿಕೊಂಡು ಸ್ವಲ್ಪ ಪೇಟೆ ಕಡೆ ಹೋಗಿ ಬಂದೆವು. ಅಲ್ಲಿನ jew street/ market ತುಂಬಾ ಇಷ್ಟ ಆಯ್ತು...ಶ್ರೀಕಾಂತ್ ಇದ್ದಿದ್ರೆ ತರಕಾರಿ ಮಾರ್ಕೆಟ್ ಕಡ್ಡಾಯ ಇರ್ತಿತ್ತು...ನಾವಂತೂ 'ಅಪ್ಪ ಇದ್ದಿದ್ರೆ ಹೀಗೆ ಮಾಡ್ತಿದ್ರ್ಯ, ಹಾಗೆ ಮಾಡ್ತಿದ್ರು ಅಂತ ನೆನಪು ಮಾಡಿ ನಕಿದ್ದೆ ಹೆಚ್ಚು....1 ಒಂದು ವರ್ಷದ ಮೇಲೆ ಮೂರು ಜನ ಸೇರಿ ಪರ ಊರಿಗೆ outing ಹೋಗಿದ್ದು. ಎಂಜಾಯ್ ಮಾಡಿದ್ವಿ...



    synagogue was closed on account of jewish holiday









ಬರುವಾಗ  flight ನಲ್ಲಿ ಬಂದೆವು. ಕೊಚ್ಚಿ airport ತುಂಬಾನೇ ಚೆನ್ನಾಗಿದೆ.

cochin airport

*weekend ಹೋದ್ರೆ... ಶನಿವಾರ ಬೆಳಿಗ್ಗೆನೇ  ಎಲ್ಲ s8ght-sering  ಮುಗಿಸಿ...ಸಂಜೆ 4 ರ ನಂತರ ನಮಗೆ ಚರ್ಚ್, ಸಿನಾಗೋಗ್, dutch cemetary ಮುಂತಾದ್ದು ನೋಡಲು ಸಿಗಲಿಲ್ಲ. Jewish Market ನಲ್ಲಿ ತುಂಬಾ ಸಮಯ ಕಳೆಯಬಹುದು.



March 21, 2026

Simple Ugadi

 ಶ್ರೀಕಾಂತ್ ಇದ್ದಿಡ್ರೆ ಕೆಳಗಿನ ಎಲೆಯಲ್ಲಿ ಕೊಟ್ಟೆ ಕಡುಬು, ಚಟ್ನಿ, ಮೆಣಸಿನ ನೀರು, ಕಡ್ಲೆ ಬೇಳೆ ಪಾಯಸ ಮತ್ತು ಮೆಣಸಿನ ಕಾಯಿ ಬೋಂಡಾ,  ಸೌತೆಕಾಯಿ ಪಚ್ಚಡಿ ಇರುತ್ತಿತ್ತು. 

can't believe he is no more 😏😏


ಏನೇ ಅನ್ನಿ 'ಪರಾಭವ' ಹೆಸರು ಇಷ್ಟ ಆಗಲಿಲ್ಲ..ಹೌದೌದು ಅನೇಕ ರೀತಿಯ explanation ಬಂದಿವೆ  family whatsapp ಗ್ರೂಪ್ ಗಳಲ್ಲಿ...ಆದರೂ 

ರಾತ್ರಿ ಟ್ರಾವೆಲ್ ಪ್ಲ್ಯಾನ್ಸ್ ಇದ್ದುದರಿಂದ ಎಲ್ಲಾ ಸ್ವಲ್ಪ ಸ್ವಲ್ಪನೆ ಮಾಡಿದ್ದು. ಟ್ರೈನ್ ನಲ್ಲಿ ಊಟಕ್ಕೆ ಮೆಂತೆ ಸೊಪ್ಪಿನ ಚಪಾತಿ, ಮೊಸರನ್ನ ಮತ್ತು ಉಪ್ಪಿನಕಾಯಿ.

ಎಲ್ಲಿಗೆ ಹೋಗಿದ್ದು ಅಂತ ಮುಂದಿನ ಪೋಸ್ಟ್.....

ಉಗಾದಿ 2026


March 13, 2026

AI / ಕೃತ್ರಿಮ ಬುದ್ದಿಮತ್ತೆ!!!

 ವಸುಧೇಂದ್ರ ಅವರು ತಮ್ಮ whatsapp status ನಲ್ಲಿ ಒಂದು ಪುಸ್ತಕ ಬಿಡುಗಡೆಯ invite ಹಾಕಿದ್ದರು. ಸಂಪೂರ್ಣವಾಗಿ AI ಅನುವಾದ ಮಾಡಿದ ಒಂದು ಕೃತಿ.

ಶ್ರೀಕಾಂತ್ ಆಸ್ಪತ್ರೆಯಲ್ಲಿದ್ದಾಗ ಮೊಬೈಲ್ ನಲ್ಲಿ ಒಂದು ಕತೆ ಕುಟ್ಟಿದೆ. ಅರ್ಧಂಬರ್ಧ...ಮಧ್ಯ ಮಧ್ಯ ಅದಕ್ಕೆ addition, deletion, edition ಮಾಡ್ತಾ ಹೋಗ್ತಿದ್ದೆ. ಅವರು ದೈವಾಧೀನರಾದಮೇಲೆ ಅದು ನಿಂತು ಹೋಗಿತ್ತು. ಹೀಗೆ ಒಂದು ನಿದ್ದೆ ಬರದ ರಾತ್ರಿ ಆ ಕತೆಯನ್ನು copy paste ಮಾಡಿ ..Meta AI ಗೆ ಆಂಗ್ಲಕ್ಕೆ ಅನುವಾದ ಮಾಡಲು ನಿರ್ದೇಶಿಸಿದೆ....ಎರಡೇ ಸೆಕೆಂಡ್ ನಲ್ಲಿ ಮಾಡಿ ಬಿಟ್ಟಿತು. ನಿಜಕ್ಕೂ ಅನುವಾದ ಚೆನ್ನಾಗಿತ್ತು. ನಾನು ಕತೆ ಪೂರ್ಣ ಗೊಳಿಸಿರಲಿಲ್ಲ...ಅದರ ಅಂತ್ಯ ನನ್ನ ತಲೆಯೊಳಗಿತ್ತು ಆದರೆ ಯಾಕೋ ಬರೆಯಲು ಮನಸ್ಸೇ ಇಲ್ಲ...Meta ಕೇಳಿತು 'would you like me to  continue' ಅಂತ...yes ಕೊಟ್ಟೆ....ಕತೆಗೊಂದು ಚೆಂದದ ಕೊನೇನೂ ಕಾಣಿಸ್ತು....ನನ್ನ ಎಂಡಿಂಗ್ ಬೇರೇನೇ ಇದೆ....but i was damn impressed 🤔🤔
ಕತೆಯನ್ನು ಮನಸ್ಸಿದ್ದರೆ/ ಕೊನೆಗೊಳಿಸಿದರೆ  ದೀಪಾವಳಿಗೆ ಯಾವುದಾದರೂ ವಿಶೇಷಾಂಕಕ್ಕೆ ಕಳಿಸುವಾ ಅಂತಿದ್ದೇನೆ.....🙂🙏👍
ಸುಮ್ನೆ ಶೇರಿಂಗೂ, not that i am a great story teller or anything

*ಆಸ್ಪತ್ರೆ ವಾಸದಿಂದ ಅಲ್ಲಿನ ದಿಂಬನ್ನು ಉಪಯೋಗುಸಿದ ನಂತರ ತಲೆಗೇನೋ ಅಲರ್ಜಿಯಾಗಿದೆ...ಔಷಧಿ ಉಪಚಾರದಿಂದ ಕೆರೆತ ನಿಂತಿಲ್ಲ  ತಲೆಗೂದಲು ಸಿಕ್ಕಾಪಟ್ಟೆ ಹೋಗ್ತಿದೆ....ಅದಕ್ಕೆ AI ಉಪಯೋಗಿಸಿ ತಲೆಗೂದಲು ಕತ್ತರಿಸಿದರೆ ಯಾವ ಮಾದರಿ ಕಟ್ ನನಗೆ suit ಆಗಬಹುದು ನೋಡಿದೆ 😁
ಹಾಗೆ ಪೂರ್ತಿ ಕೂದಲು ಹೋದ್ರೆ ಯಾವ ಬಣ್ಣ ಮತ್ತು ಮಾದರಿಯ ವಿಗ್/ wig ನನ್ನ ಮುಖಕ್ಕೆ ಸರಿಹೊಂಡಬಹುದು ಅಂತ ಚೆಕ್ ಮಾಡಿದೆ....
*reading glasses ಬಂದಿದೆ.....ನನ್ನ ಕಣ್ಣಿಗೆ ಯಾವ ಮಾದರಿ ಫ್ರೇಮ್ ಮತ್ತು ಬಣ್ಣ ಸರಿ ಕಾಣಬಹುದು ಅಂತ ನೋಡಿದೆ.....😁
ಎಂಜಾಯ್ ಮಾಡಿದೆ....
Interesting!!!!

March 10, 2026

ಠನಕಪುರ್ thanakpur

 

ನಕ್ಪುರ್/ tanakpur

ಲೋಹಾಘಟ್ ನಿಂದ ವಾಪಸ್ ಲಕ್ನೋ ಗೆ ಬರುವಾಗ ಪುನಃ ತನಕ್ಪುರ್ ಮಾರ್ಗವಾಗಿ ಬರಬೇಕಿತ್ತು. ನಮ್ಮ ಬಳಿ ಸ್ವಲ್ಪ ಸಮಯ ಇತ್ತು. ಸಂಜೆ 4 ಗಂಟೆಗೆ ಹೋಟಲ್ ಸಿದ್ಧಾರ್ಥ್ ತಲುಪಿದ್ವಿ. ನಾನು ಆನ್ ಲೈನ್ ನಲ್ಲಿ ರೂಮ್ ಬುಕ್ ಮಾಡಿದ್ದೆ. ಹೊರಗಿನಿಂದ ನೋಡಲು ಹೋಟಲ್ ಚೆನ್ನಾಗಿತ್ತು. ಒಳಗಡೆ ಗಬ್ಬು. ನಮಗೆ ಕೊಟ್ಟ ಕೊಠಡಿ ತೆರೆದರೆ ಅಲ್ಲಿ ಪಬ್ಲಿಕ್ ಲೆವೆಟರಿ ವಾಸನೆ ಮಾತ್ರವಲ್ಲ ಜೋಂಪು ಜೋಂಪು ಸೊಳ್ಳೆಗಳು. ನಮ್ಮ ದುಡ್ಡು ವಾಪಸ್ ತೆಗೊಂಡು, ಶ್ರೀಕಾಂತ್ ವಾಕ್ ಹೋಗಿ ಇನ್ನೊಂದು ಹೋಟಲ್ ಹುಡುಕಿದ್ರು. ಹೊಸದಾಗಿ ಕಟ್ಟಿಸಿದ್ದ. ಈ ಹೋಟೆಲ್ ಚೆನ್ನಾಗಿತ್ತು. ಇಷ್ಟರೊಳಗೆ 5 ಗಂಟೆ ಆಗಿತ್ಯು. ಹೋಟಲ್ ನವ ಅಲ್ಲಿನ  ಹೆಸರಾಂತ ಪೂರ್ಣಾದೇವಿ ಮಂದಿರ ಈಗ ಬಂದ್ ಆಗಿರುತ್ತೆ, ಆದ್ದರಿಂದ ನಮಗೆ ಶಾರದಾ ನದಿಗೆ ಹೋಗಲು ಹೇಳಿದರು. ಅಲ್ಲಿ ಪ್ರತಿ ಸಂಜೆ ಆರತಿ ಆಗುತ್ತೆ... ಕೆಳಗಿನ ಚಿತ್ರದಂತೆ ಊರು ತುಂಬ ಇಂತಹ ಚಿಕ್ಕ ದೊಡ್ಡ ಊರೂಟು ಕಲ್ಲುಗಳು. ಶ್ರೀಕಾಂತ್ ಪುರೋಹಿತರನ್ನು ಮಾತಾಡಿಸುತ್ತಿದ್ರೆ,  ನಾನು ಸಣ್ಣಕ್ಕೆ ಸದ್ದು ಮಾಡುತ್ತಿರುವ ನದಿ ಯ ಸದ್ದು ಆಲಿಸುವುದರಲ್ಲಿ ತನ್ಮಯಳಾದೆ. ವಾಪಸ್ ಬರ್ತಾ ಪೇಟೆಯೊಳಗೆ ಒಂದು ರೌಂಡ್ ಹಾಕಿದ್ವಿ.




ಇದು ನಮ್ಮ ಕೊನೆಯ ಹೊರ ರಾಜ್ಯದ ಪಯಣ...ಇನ್ನೂ ಓರಿಸ್ಸಾ, ಗುಜರಾತ್ ಪ್ಲ್ಯಾನ್ ಮಾಡಿದ್ದೆ ಬಂತು...ತುಂಬಾ ಬೇಜಾರಾಗುತ್ತೆ ಕಣ್ರೀ...😏😏

March 3, 2026

thandayi ನನ್ನ ರೆಸಿಪಿ

why should people with sugar complaints be left out.of the fun?~..have fun snd enjoy with my 'no added sugar' thandai recipe

Ingredients:

- Handful of fox nuts (makhana), lightly fried

- 4-5 cashew nuts

- 10 raisins

- 1/2 tsp  poppy seeds

- Cardamoms (a few)

- Milk

- Pistachios and rose petals for garnish


Instructions:

1. Blend fried fox nuts, cashews, raisins, khuskhus, and cardamoms into a fine powder.

2. Heat milk and add the blended mixture.

3. Boil until it thickens.

4. Garnish with pistachios and rose petals.

5. Serve warm or chilled.

Enjoy! 😊 Happy birthday, Srikanth!



ಕಾವಲಿಯಲ್ಲಿ ಮಖಾನಾ, 4-5 ಗೇರು ಬೀಜ, 10 ಒಣ ದ್ರಾಕ್ಷಿ, 1/2 ಟಿ ಚಮಚೆ ಗಸ್ ಗಸೆ  ಯನ್ನು ಹುರಿಯಿರಿ. ತಣಿದ ನಂತರ ಎಲಕ್ಕಿಯೊಂದಿಗೆ ಮಿಕ್ಸಿ ಯಲ್ಲಿ ನುಣ್ಣಗೆ ಪುಡಿ ಮಾಡಿ. 

ಬಿಡಿ ಹಾಳಲ್ಲಿ ಬೆರೆಸಿ, ಕುಡಿಬಂದು ದಪ್ಪ ಆಗುವವರೆಗೆ ಓಲೆ ಮೇಲೆ 8ಡಿ.  ಗುಲಾಬಿ ಪಕಳೆ, ಪಿಸ್ತಾ ಒಂದಿಗೆ decorate ಮಾಡಿ ಬಿಸಿ ಅಥವಾ ತಣ್ಣಗೆ ಸರ್ವ್ ಮಾಡಿ



March 2, 2026

HBD Shenoy maam

 


ನಮ್ಮ ಅತ್ತೆ ಯಾವಾಗಲೂ ಹೇಳೋರು. 'ಕಾಂತು ಹೋಳಿ ಹಬ್ಬದ ದಿನ ಹುಟ್ಟಿದ್ದು  ಅಂತ. ನಾಳೆ ಹೋಳಿ...ಆಂಗ್ಲ calender ಪ್ರಕಾರ ಇವತ್ತು ಶ್ರೀಕಾಂತ್ ಹುಟ್ಟಿದ ದಿನ.  ಎರಡು ದಿನ celebration

ಅದಕ್ಕೆ ಮುಂಚೆ ಮನೆಯೆಲ್ಲ ಸುಣ್ಣ ಬಡಿದಿದ್ಫು ಆಯ್ತು. ಮೆಟ್ರೋ  construction ಮುಗಿದ ಮೇಲೆ ಮಾಡೋದು ಮಾಡೋದು ಅಂತ ಪ್ಲಾನ್ ಮಾಡಿ...ಆಮೇಲೆ ಶ್ರೀಕಾಂತ್ ಗೆ ಹುಷಾರು ತಪ್ಪಿ ಮುಂದೂಡುತ್ತ ಕೊನೆಗೆ ಮೊನ್ನೆಗೆ ಮನೆ ಫ್ಹುಲ್ ಲಕಲಕ ಅಂತಿದೆ....ಪೈಂಟಿಂಗ್ ಜತೆ chimney, ಗ್ಲಾಸ್ ಬಾಗಿಲು, ನಳ, ಬಾತ್ ರೂಮ್ ಟೈಲ್ಸ್ ಎಲ್ಲ ಸ್ವಚ್ಛ...ಆಶ್ಚರ್ಯ ಅಂದರೆ ಕೆಲಸಕ್ಕಿದ್ದವರೆಲ್ಲ ವಯಸ್ಸಾದವರು. ಸರಿಯಾಗಿ ಒಂಬತ್ತಕ್ಕೆ ಬಂದು ಸಂಜೆ 5 ಕ್ಕೆ ಕ್ಲೋಸ್. ಹೆಚ್ಚು  / ಅನಾವಶ್ಯಕ ಮಾತಿಲ್ಲ, ಕತೆಯಿಲ್ಲ, ಮೊಬೈಲ್ ಬಳಿಸಿಲ್ಲ.... ಟಿ ಕಾಫಿ ಗೆ ಒಂದು 10 ನಿಮಿಷ ,  ಮಧ್ಯಾಹ್ನ ಊಟಕ್ಕೆ ಅರ್ಧ ಗಂಟೆ ಬ್ರೇಕ್ ಅಷ್ಟೇ. ಸೋಮವಾರ ಶುರು ಮಾಡಿ ಶನಿವಾರ ಸಂಜೆ.complete. ಮೂರು ಜನ ಇದ್ರು ಎಲ್ಲ ಸಾಮಾನು ಎಲ್ಲೆಲ್ಲಿತ್ತೋ  ಅಲ್ಲಿ ನೀಟಾಗಿ ಜೋಡಿಸಿ ಕೊಟ್ರು...ನಾನಂತು ಫುಲ್ ಖುಶ್...

ನನ್ನ ತಮ್ಮನ ಮಗಳು ಸ್ಯಾಮಿ ಪೈ ಶ್ರೀಕಾಂತ್ ಗೋಸ್ಕರ ಅವಳೇ compose ಮಾಡಿ, ಹಾಡಿದ ಹುಟ್ಟು ಹಬ್ಬದ ಹಾಡು...ಮತ್ತು ನನ್ನ ತಮ್ಮ ಪಾಂಡು ಈ ದಿನವನ್ನು ಶ್ರೀಕಾಂತ್ ಡೇ ಅಂತ ಹೆಸರಿಸಿದ್ದಾನೆ 🙂❤️🙏🙏



msgs about the  delicacies he taught us 👆👆

February 21, 2026

fansu

 ನಿನ್ನೆ ನನ್ನ ಮುಂಬೈ ಫ್ರೆಂಡ್ಸ್ ಬಂದಿದ್ದರು. ಎಲ್ಲರೂ ಬೆಂಗ್ಳೂರಲ್ಲೇ ಸೆಟ್ಲ್ ಆಗಿದ್ದಾರೆ.  ಒಬ್ಬ ಫ್ರೆಂಡ್ ದುಬೈ ನಲ್ಲಿ ಇದ್ಲು...ಈಗ ಕೆಲವು ತಿಂಗಳಿಂದ ಇಲ್ಲಿಗೆ ಬಂದಿದ್ದಾಳೆ.  ಹಾಗೆ ಮಾತು ಸೋಷಿಯಲ್ ಮೀಡಿಯಾ, ಯು ಟ್ಯೂಬ್, ಇನ್ಸ್ಟಾಗ್ರಾಮ್ , ಆತ್ಮಹತ್ಯೆ, digital ಅರೆಸ್ಟ್, hacking, ಲೀವರ್ ಕಾಯಿಲೆ ಇದೆಲ್ಲದರ ಕಡೆ ಆಯ್ತು. 'ನಿನ್ನ ಎಫ್ಹ್ ಬಿ ಪೋಸ್ಟ್, instagram ರೀಲ್ಸ್ ಎಲ್ಲ ಮಿಸ್ ಮಾಡಿ ಕೊಳ್ತಿದ್ದೆವೆ ಅಂದರು. ನಿನ್ನ ಭೋಪಾಲ್ ಫೋಟೋಸ್ ಎಷ್ಟು ಚೆನ್ನಾಗಿದ್ದವು...ಅಂತೆಲ್ಲ.. ಅದಕ್ಕಿಂತ ಮುಂಚೆ ಹಿಂದಿನ ವಾರ ನನ್ನ ಹೈ ಸ್ಕೂಲ್ ಕ್ಲಾಸ್ಮೇಟ್, ಯು ಎಸ್ ನಲ್ಲಿರೋದು..ಮಾಲವಿಕಾಳಿಗೆ 'ನಿನ್ನ ಅಮ್ಮನ ಎಷ್ಟು ಸೈಲೆಂಟ್..ಆದ್ರೂ ಅಮ್ಮನ  ಪೋಸ್ಟ್ ಗೆ ಎಷ್ಟೆಲ್ಲ ಲೈಕ್ಸ್, ಕಮೆಂಟ್ಸ್ ಬತಿದ್ವು ಗೊತ್ತಾ ಅಂದರೆ....ಅಕ್ಕ'ಅಯ್ಯೋ ಅಮ್ಮನ ಬ್ಲಾಗ್ ಫ್ಯಾನ್ಸ್ ಎಷ್ಟಿದ್ದಾರೆ...ರಸ್ತೆಯಲ್ಲಿ  ಹೋಗುವವರೆಲ್ಲ  ಗುರುತಿಸೋರು..ಅಂದ್ಲು...ಸಿಕ್ಕಾ ಪಟ್ಟೆ ಮುಜುಗರ ಆಯ್ತು...

ಅದೇ ನಾನು insta ದಲ್ಲಿದ್ದಾಗ ನನ್ನ ಪೋಸ್ಟ್ ಗೆ.ಮೊದಲ ಲೈಕ್ ನನ್ನ ತಮ್ಮನ ಮಗಳು ಸ್ಯಾಮಿ...'ಮಾಲ್ತ್ಯಕ್ಕಾ ನನ್ನ ಫ್ರೆಂಡ್ಸ್ ಗೆಲ್ಲ ನಿನ್ನ ಪೋಸ್ಟ್ ಇಷ್ಟ ಆಗುತ್ತೆ 'ನಿನ್ನ ಆಂಟಿ ಎಷ್ಟು ಲವಲವಿಕೆಯಿಂದಿದ್ದಾರೆ....ನನ್ನ ಆಂಟಿಗೆ ಅಷ್ಟೇನೂ ವಯಸ್ಸಾಗಿಲ್ಲ ಆದ್ರೂ ಮುದುಕರ ತರಹ ಆಡ್ತಾರೆ... ಯಾವುದ್ರಲ್ಲೂ ಇಂಟೆರೇಸ್ಟ್

 ಇಲ್ಲ ' ಅಂದಾಗ ಸಿಕ್ಕಾಪಟ್ಟೆ ಜೋರಾಗಿ ನಕ್ಕಿದ್ದು ನೆನಪಾಗಿ...ಈಗ ಅವಳು ನನ್ನ you ಟ್ಯೂಬ್ follow ಮಾಡ್ತಾಳೆ...

hydroponics experiment

ನನ್ನ ತಮ್ಮ ತಂಗಿಯರು ಏನು ಅಡಿಗೆ ಅಂದ್ರೆ ಯು ಟ್ಯೂಬ್  ನೋಡಿ ಅಂತೀನಿ...ಅದರಲ್ಲಿ ಮುಂಬೈ ತಮ್ಮ ನೋಡ್ತಾನೆ ಆದರೆ ಲೈಕ್ ಎಲ್ಲ ಹಾಕಲ್ಲ..ಮಿಲ್ಲೆಟ್ ಗಂಜಿ ತಯಾರಾಗ್ತಿದೆ...ತಿನ್ನುವ ಮುಂಚೆ ಸ್ವಲ್ಪ  ಕೊರೆಯುವ ಅಂತ... 🙂❤️


ಮಿಲ್ಲೆಟ್ಸ್ ಒಂದಿಗೆ ,ತುಪ್ಪ ಬಳಸಿ. ಮೊಸರು ಬಳಸಿ. ನೀರು ಮಜ್ಜಿಗೆ ಸೇವಿಸಿ ತುಂಬಾ ನೀರು ಕುಡಿಯಿರಿ.  ಕೆಲವರಿಗೆ ಹೀಟ್ ಆಗುತ್ತೆ. ನನಗಂತೂ ಮಿಲ್ಲೆಟ್ಸ್ ತುಂಬಾ ಇಷ್ಟ...🙏🙏


February 20, 2026

Two months

 ಪದೇ ಪದೇ ಅದೇ ಅನ್ನಿಸುತ್ತೆ. ಸ್ವಲ್ಪ ಅರೋಗ್ಯದ ಬಗ್ಗೆ ಕಾಳಜಿ ವಹಿಸಿದಿದ್ರೆ?? ಎಲ್ಸರೂ ಟೈಮ್ ಆಗಿತ್ತು, destiny, ಹೋಗಿ ಬಿಟ್ರು ಮುಂತಾದ ಮಾತುಗಳಿಂದ ಸಮಾಧಾನ ಮಾಡುತ್ತಾರಾದ್ರೂ ನನಗೆ ಅದು ಸರಿ ಅನ್ನಿಸಿವುದೇ ಇಲ್ಲ. ಮನಸ್ದು accept ಮಾಡುತ್ತಿಲ್ಲ. ಈಗ retire ಆಗಿ relax ಆಗಿರುವ ಸಮಯದಲ್ಲಿ ಹಾಗೆ ಬಿಟ್ಟು ಹೋಗೋದಾ? 😢 ಕೆಲವೊಮ್ಮೆ ರಾತ್ರಿ ನಿದ್ದೆ ಬರದಿದ್ದಲ್ಲಿ ಮನೆ ತುಂಬಾ ಓಡಾಡುವಾಗ ಸಡನ್ ಆಗಿ 'ಹೌದಾ ಹೋಗಿದ್ದು' ಅಂತ ಪೆಚ್ಚಾಗಿ ಒಂದು ಕ್ಷಣ ಹಾಗೆ ನಿಂತು ಬಿಡ್ತೀನಿ.

insurance, ಬ್ಯಾಂಕ್ ಖಾತೆ ಎಲ್ಲ ನನ್ನ ಹೆಸರಿಗೆ ವರ್ಗಾವಣೆ ಆದವು. ಕೆಲವೆಲ್ಲ ಡಾಕ್ಯುಮೆಂಟ್ಸ್ ಹುಡುಕಲು ಮನೆಯೆಲ್ಲ ತಲೆಕೆಳಗೆ ಮಾಡಿದೆವು. ಹಳೆ ಪತ್ರ ಓದಿ, ಫೋಟೋ ಗಳನ್ನು  ನೋಡಿ ಬೇಜಾರು ಮಾಡಿಕೊಂಡೆವು, ನಕ್ಕೆವು etc..ಇನ್ನೂ ಕೆಲವು ಕೆಲಸಗಳು ಮಾರ್ಚ್ ಅಷ್ಟರಲ್ಲಿ ಮುಗಿಸಿ ನಾವು ಮೂವರು ಎಲ್ಲಾದರೊ ಹೋಗಿ ಬರಬೇಕು..
ಕೂತು ತಿಂದರೆ ಕುಡಿಕೆ ಹಣ ಸಾಲದು ಅಂತ ಒಂದು ಹೇಳಿಕೆ ಇದೆಯಲ್ಲವಾ???
since i would not be working i have to make the money work, invest wisely that lasts me a long time...🤔🤔.  cos i am going to live long...to 106 years. i am not financially ವೆರಿ literate 😏.





ತಬೆಬುವ ಹೂ ಗಳು ಅರಳಿ ಬೆಂಗಳೂರು  ತುಂಬಾ ಚೆಂದ ಕಾಣುತ್ತಿವೆ. ನನಗೆ ಬಾಲ್ಕನಿಯಿಂದ ಹಲವಾರು ಗಿಡಗಳು ಕಾಣುತ್ತಿದ್ದವು, ಈಗ ಮೆಟ್ರೋ ದೆಸೆಯಿಂದ ಅವು ಕಾಣುತ್ತಿಲ್ಲ.
ಹೀಗೆ....... ಮುಂದುವರಿಲೇ ಬೇಕು....🙏🙏. ಅಷ್ಟೇ

February 15, 2026

ಶಿವರಾತ್ರಿ - ನೆನಪು

 

 

ಓಂ ಶಾಂತಿ ಶಾಂತಿ ಶಾಂತಿಃ.... ಬಿಟ್ಟು ಹೋಯ್ತು 👆👆

ಇವತ್ತು ಶಿವರಾತ್ರಿ. ಉಪವಾಸ  ಮಾಡುವಾ ಅಂತಿದ್ದೆ. ಆದರೆ ಏಳುವಾಗಳೇ ಹಸಿವೆ ಅನಿಸ್ತು. ಮುಂಬೈ ಜೀವನ ನೆನಪಾಯ್ತು. ಎಷ್ಟು ಕಟ್ಟುನಿಟ್ಟಾಗಿ ಸಂಕಷ್ಟಿ, ಕೃಷ್ಣಾಷ್ಟಮಿ, ಶಿವರಾತ್ರಿ ಉಪವಾಸ ಮಾಡುತ್ತಿದ್ದೆವು.

ಮೂರು ಜನ ದೊಡ್ಡ ವಾಕ್ ಹೀಗಿ,  ಸಿಂಪಲ್ಲಾಗಿ ಒಂದು ಅವಲಕ್ಕಿ ಉಸ್ಲಿ ಮಾಡಿ ತಿಂದೆವು. ನಮ್ಮ engagement ಆದ ದಿನ ಇವತ್ತು. ಹಳೆ ಕೆಲ ವಿಷಯಗಳು ನೆನಪಾಗಿ  ನಗೆ ಬಂತು. 




ಶ್ರೀಕಾಂತ್ ತಂದೆ ತಾಯಿಗೆ ವಯಸ್ಸಾಗಿತ್ತು, ಮಾತ್ರವಲ್ಲ ಅವರ ತಾಯಿಯವರಿಗೆ  ಕಿವಿ ಕಣ್ಣು ಮಂದವಾಗಿದ್ದವು. ನಾವೇ ಮುಂಬೈ ನಿಂದ ಬೆಂಗಳೂರು, ಅಲ್ಲಿಂದ ಶಿವಮೊಗ್ಗ ಮತ್ತು ಅಲ್ಲಿಂದ ತೀರ್ಥಹಳ್ಳಿ ಗೆ  ಬಂದೆವು...ಆವಾಗಿನ (1987)ದಿನಗಳಲ್ಲಿ ಇದು strange event ಅಂತ ಹೇಳಬಹುದು.

ತುಂಬಾ strict ಆಗಿ ಬೆಳೆಸಿದ ನನಗೆ, ಶ್ರೀಕಾಂತ್ ನನಗೊಬ್ಬಳನ್ನೇ ಅವರ ಜತೆ ಮಾತುಕತೆ ಆಡಲು, ತೀರ್ಥಹಳ್ಳಿಯಲ್ಲ, ಶಿವಮೊಗ್ಗಕ್ಕೆ ಕರೆದು ಕೊಂಡು ಹೋಗುತ್ತೇನೆ ' ಅಂದಾಗ , ಅಪ್ಪ ಅಮ್ಮ ಬೇಡ ಅನ್ನಬಹುದು ಅಂತ ಧೈರ್ಯವಾಗಿದ್ಫೆ...ಆದರೆ ಎಲ್ಲ ಉಲ್ಟಾ ಆಯಿತು. ಅಪ್ಪ, ಮತ್ತು ಮಾವನವರು permisson ಕೊಟ್ಟೆ ಬಿಡುವುದಾ??  ನನಗಿನ್ನೂ ನನ್ನ ಪಿಂಕ್ ಚೂಡಿದಾರ್ ಹಾಕೊಂಡು ಹೋಗಿದ್ದು ನೆನಪಿದೆ...ಶಿವಮೊಗ್ಗದಲ್ಲಿ ಅವರ ಎಲ್ಲ ಪ್ರಶ್ನೆಗೆ ನಾನು 'ಹೌದು' 'ಅಲ್ಲ' ಅಂತಷ್ಟೇ ತಲೆಯಾಡಿಸಿದ್ಫು...ಒಂದೂ ಮಾತಿಲ್ಲ... ಶ್ರೀಕಾಂತ್ ನನಗೆ 'ನೀನು ಬಾಂಬೆ (bombay) ಹುಡಿಗಿ ಹೌದಾ ಅಂತ ನಿರಾಸೆಯಿಂದ ಕೇಳಿ...ಪ್ರತೀ ವರ್ಷ ಮಕ್ಕಳಿಗೆ ಈ ಕತೆ ಕೇಳುವ ಫಜೀತಿ... ಆ ದಿನ ಸಂಜೆ ಮನೆಯ ಹಿರೀಕರ ಎದುರಿಗೆ ಉಂಗುರ ಸಿಹಿ ಹಂಚಿ ನಮ್ಮದೊಂದು engagement ಎನ್ನುವಲ್ಲಿಗೆ....
ಹೀಗೆ ಮಧ್ಯದಲ್ಲಿ ಬಿಟ್ಟು ಹೋಗ್ತಾರೆ ಅಂತ ಅನ್ನಿಸಿರಲಿಲ್ಲ.  anyways we have lots of good/fun memories to recall ಅನ್ನುತ್ತಾ.......🙏🙂