January 11, 2026

ಆಶಾ ರಘು

 

ಇತ್ತೀಚೆಗೆ ರಾತ್ರಿ ಎಚ್ಚರವಾಗಿ 'ಛೆ ,ಇವ್ಸ್ರಿಗೆ ಶ್ರೀಕಾಂತ್ ನಿಧನದ ಬಗ್ಗೆ ಹೇಳಿಲ್ಲ' ಅಂತ ಹಲವು ಜನರನ್ನು ನೆನೆಸಿಕೊಳ್ಳುತ್ತೇನೆ. ಅವರ ಸೇಲ್ ಫೋನ್ ಲಿಸ್ಟ್ ನಲ್ಲಿ ಹೆಸರಿಲ್ಲದಿದ್ದರೆ ಅವರನ್ನು ಫೇಸ್ ಬುಕ್ ನಲ್ಲಿ ಹುಡುಕುತ್ತೇನೆ. ನಿನ್ನೆ ಇಬ್ಬರ ನೆನಪಾಗಿ ಶ್ರೀಕಾಂತ್ ಫೇಸ್ ಬುಕ್ ಪೇಜ್ ಒಪೆನ್ ಮಾಡಿದ್ದೇ.. ದೀಪದ ಮಲ್ಲಿ ಯವರು 'ಅಕ್ಕ ಹೊರಟೆ ಬಿಟ್ರು' ಅಂತ ಆಶಾ ಅವರ ಭಾವ ಚಿತ್ರ- ಶ್ರದ್ಧಾಂಜಲಿ ಪೋಸ್ಟ್ ನೋಡಿ, ಕೈ ಕಾಲು ತಣ್ಣಗಾಗಿ ಅಲ್ಲೇ ಇರುವ ಕುರ್ಚಿ ಮೇಲೆ ಕುಸಿದು ಕುಳಿತೆ. ಆತ್ಮಹತ್ಯೆ ಎಂದು ತಿಳಿದು ಹುಷಾರು ತಪ್ಪಿದಂತಾಯ್ತು....ತಕ್ಷಣಕ್ಕೆ ನನಗೆ ನೆನಪಾಗಿದ್ದು ಅವರ ಪುಟ್ಟ ಮಗಳು ಉಪಾಸನಾ. 

ನನಗೂ ಅವರಿಗೂ ವೈಯಕ್ತಿಕ ಪರುಚಯ ಏನಿಲ್ಲ. ಅವರ ನಗು ಮುಖದ ಫೋಟೋಗಳು ನನಗೆ ತುಂಬಾ ಇಷ್ಟವಾಗುತ್ತಿತ್ತು....ಯಾವಾಗಲೂ ಬರಹ ಸಾಹಿತ್ಯ ಅಂತ ಬ್ಯುಸಿ ಆಗಿರೋದು ನೋಡುತ್ತಿದ್ದೆ

ನಾನು ಅವರ  ' ಗತ' ಕಾದಂಬರಿ ಓದಿ ಅದರ ಬಗ್ಗೆ ನಾಲ್ಕು ಸಾಲು ಬರೆದು ಫೇಸ್ ಬುಕ್ ನಲ್ಲಿ ಹಾಕಿದ್ದೆ. ಕಿರಿಯ ಮಿತ್ರರು ಅದನ್ನು ಆಶಾ ಜತೆ ಶೇರ್ ಮಾಡಿ ಅವರು ನನ್ನಎಫ್ ಬಿ ಪುಟಕ್ಕೆ ಬಂದು ಧನ್ಯವಾದ ಹೇಳಿದ್ದರು. ಆಮೇಲೆ ನಾನು fb ಗೀಳಾಯಿತು ಅಂತ ಅಲ್ಲಿಂದ ಹೊರ ಬಂದು, ಅಕ್ಕ ಹೇಳಿದ್ದಕ್ಕೆ instagram ಸೇರಿದೆ. ಅಲ್ಲಿ ಆಶಾ ರಘು ಅವರನ್ನು follow ಮಾಡ್ತಿದ್ದೆ. ರಘು ಅವರು ತೀರಿಕೊಂಡಾಗ, ಶ್ರೀಕಾಂತ್ ಮತ್ತು ರಘು ಒಟ್ಟಿಗೆ ಟ್ರೈನ್ ನಲ್ಲಿ.ಪ್ರಯಾಣಿಸಿ, ಪರಿಚಯವಾಗಿದ್ದು, ಅವರ ಮಾತು ಕತೆ, ಶ್ರೀಕಾಂತ್ ಗ್ ರಘು ಅವರ ಮೇಲಿನ ಅಭಿಮಾನ ಎಲ್ಲ ಶೇರ್ ಮಾಡಿದಕ್ಕೆ, 'ಉಪಾಸನಾ' ನನ್ನ ಕಾಮೆಂಟ್ ಗೆ like ಹಾಕಿದ್ದು, ಆ ಚೆಂದದ ಹೆಸರಿನ ಜಾಡು ಹುಡುಕಿ ಹೋದಾಗ ಅವರು ಆಶಾ ರಘು ಮಗಳು ಎಂದು ಗೊತ್ತಾಯಿತು..ಮುದ್ದು ಮುಖದ ಪುಟ್ಟ ಹುಡುಗಿ.
instagram ನಲ್ಲಿ 500 followers... ಕೆಲವರಿಗೆ, ನನಗೆ ಕಿರಿಕಿರಿ ಅನಿಸುವಷ್ಟು ನನ್ನ ಮೇಲೆ ಕಳ ಕಳಿ/ ಕಾಳಜಿ.... ನಾಲ್ಕು ದಿನ ಏನೂ ಪೋಸ್ಟ್ ಮಾಡದಿದ್ದರೆ ಏನು ಎತ್ತ ಅಂತ ಮೆಸೇಜ್ ಗಳು. ಅದಕ್ಕೆ ತೋಟದಲ್ಲಿ ಮನೆ -ನನ್ನ ಇಷ್ಟದಂತೆ  ಕೊಟ್ಟಿಗೆ -ಅಂತ ಕಟ್ಟುವುದು, ಅಲ್ಲೇ settle ಎಂದು ಡಿಸೈಡ್ ಮಾಡಿದಾಗ ತೋಟದ ಕೆಲಸದಲ್ಲಿ ಬ್ಯುಸಿ ಆಗಿರುತ್ತೇನೆ ಅಂತ instagram ನಲ್ಲಿ ಎಲ್ಲರಿಗೂ ವಿದಾಯ ಹೇಳಿ...ಯಾವಾದಕ್ಕೂ ಯು ಟ್ಯೂಬ್ ನಲ್ಲಿ ಇರುತ್ತೇನೆ ಅಂತ ಹೇಳಿ instagram ನಿಂದ ಹೊರ ಬಂದೆ.
ಶ್ರೀಕಾಂತ್ ಗೆ ಅವರ 'ಆವರ್ತ' ಕಾದಂಬರಿ ಇಷ್ಟವಾಗಿತ್ತು. ಆಸ್ಪತ್ರೆಯಲ್ಲಿ ಓದಲು ನಾನು ಅವರು ಸಂಕಲಿಸಿದ 'ನೂತನ ಜಗದ ಬಾಗಿಲು' ತಂದು ಇನ್ನೂ ಓದುತ್ತಾ ಇದ್ದೇನೆ. ಶ್ರೀಕಾಂತ್ ಸಾವಿನ ಜತೆ ಆಶಾ ರಘು ಅವರ ಸಾವು ನನ್ನನ್ನು ತುಂಬಾ ಕಂಗೆಡಿಸಿದೆ
ಈಗ ಮೂವರೂ - ಶ್ರೀಕಾಂತ್, ಎಸ್ ಎಲ್ ಭೈರಪ್ಪ , ಆಶಾ ರಘು ಅಲ್ಲಿ ಮೇಲೆ ಫಿಲ್ಟರ್ ಕಾಪಿಯೊಂದಿಗೆ ಸಾಹಿತ್ಯಿಕ ಚಿಂತನೆಗಳಲ್ಲಿ ತೊಡಕಿಕೊಂಡಿರಲಿ...ಅಲ್ವಾ??!!

No comments: