ಆಸ್ಪತ್ರೆಯಲ್ಲಿ ಬೆಳಿಗ್ಗೆ ಒಂದು ದಿನ ಗೋದಿ ದೋಸೆ ಕೊಟ್ಟಿದ್ರು ಶ್ರೀಕಾಂತ್ ಗೆ. ಎರಡು ದೋಸೆಯಲ್ಲಿ ಒಂದೂವರೆ ತಿಂದ್ರು. ನಾನು ವೆಸ್ಟ್ ಮಾಡುವ ಪೈಕಿ ಅಲ್ಲ. ಅರ್ಧ ನಾನು ತಿಂದೆ. ತುಂಬಾ ಸಾಫ್ಟ್ ಆಗಿ ರುಚಿಯಾಗಿತ್ತು.
ಇವತ್ತು ನಾನು ಅಂದಾಜಿನಲ್ಲೇ ಗೋದಿ ಬಳಸಿ ಮಸಾಲೆ ದೋಸೆ ಮಾಡಿದೆ. ತುಂಬಾ ಕಿರಿ ಕಿರಿಯೂ ಇಲ್ಲ.
ರಾತ್ರಿ ಎರಡು ಕಪ್ ಸದಕಾ ರವೆ (broken wheat) ಮತ್ತು ಒಂದು table ಸ್ಪೂನ್ ಉದ್ದಿನ ಬೇಳೆ ನೆನೆಸಿದೆ. ಬೆಳಿಗ್ಗೆ ಅವನ್ನು ಚೆನ್ನಾಗಿ ತೊಳೆದು, ಮಿಕ್ಸಿ ಯಲ್ಲಿ ,ಉಪ್ಪು ಬೆರೆಸಿ , ಒಂದು ಸಣ್ಣ ಶುಂಠಿ ತುಂಡು ಹಾಕಿ ರುಬ್ಬಿದೆ. ತೆಳುವಾಗಿ ದೋಸೆ ಹುಯ್ದಲ್ಲಿ ಕುರುಮ್ ಕುರುಮ್ ಮಸಾಲೆ ದೋಸೆ ರೆಡಿ...ದಪ್ಪ ಹುಯ್ದು ತುಪ್ಪದಲ್ಲಿ ಬೇಯಿಸಿದರೆ ಇನ್ನೂ ರುಚಿ. ಟ್ರೈ ಮಾಡಿ ಹೇಳಿ ನನಗೆ.
ಒಳಗಡೆ ಕೆಂಪು ಚಟ್ನಿ ಮತ್ತು ಆಲೂ ಗಡ್ಡೆ ಪಲ್ಯ ಇದೆ. ಕ್ಲಿಕ್ ಮಾಡಲು ಮರೆತೆ...😊❤️
ಅಕ್ಕಿಗಿಂತ ಉತ್ತಮ ತಿನಿಸು ಮತ್ತು ಮನೆ ಮಂದಿಗೆಲ್ಲ ತುಂಬಾ ಇಷ್ಟ ಆಯ್ತು.
ಮರುದಿನ ಪೋಡಿ ದೋಸೆ ಮತ್ತು ಸಾಂಬಾರ್ ಜತೆ
ನಿನ್ನೆ 12.02 ಗೆ ಚಂದ್ರ ಗ್ರಹಣ ದ ಕೊನೆಯ ಕ್ಷಣಗಳು 👍❤️😊





No comments:
Post a Comment