expect ಎ ಮಾಡಿರಲಿಲ್ಲ ಈ ಜನ್ಮದಲ್ಲಿ ಕಾರ್ ತೆಗೆದುಕೊಳ್ಳುತ್ತೇವೆಂದು. ನಾನು ಚಿಕ್ಕವಳಿದ್ದಾಗ ಅಜ್ಜ ಅಜ್ಜಿಯೊಂದಿಗೆ ಇದ್ದೆ ಸುಮಾರು ವರ್ಷ. ಅಜ್ಜನ ಬಳಿ ಕಾರು, ಕೆಲಸಕ್ಕೆ ಆಳು ಕಾಳು.. ಹೀಗೆ ರಾಣಿಯಂತೆ ಬೆಳೆದಿದ್ದೆ.
ಮದುವೆಯ ನಂತರ ಇವರು, ಕಾರ್ ಎಲ್ಲ ತೆಗೆದುಕೊಳ್ಳುವುದಿಲ್ಲ. we will not add to the pollution ಅಂದಿದ್ದರು. ಆದರೆ ಬೈಕ್ ನಲ್ಲಿ esp ಬುಲ್ಲೆಟ್ ಬೈಕ್ ನಲ್ಲಿ ಮಜ್ಜಾ ಮಾಡಿದ್ದೇವೆ, friends ಒಟ್ಟಿಗೆ. organic lifestyle ಈಗ ಒಂದು ತರಹ ಫ್ಯಾಷನ್ ಮಾದರಿಯಲ್ಲಿ ನಡೆಸುತ್ತಿದ್ದಾರೆ...ಇಲ ಇಲ್ಲ i ಆಮ್ not against ಇಟ್,.... ಆದರೆ ನಾವು 37 ವರ್ಷಗಳಿಂದ ನಮ್ಮದು ಸಾವಯವ ಜೀವನ ಶೈಲಿ.ಶ್ರೀಕಾಂತ್ ಬ್ಯಾಂಕ್ ನಲ್ಲಿ ಕೆಲಸಕ್ಕಿದ್ದಾಗ, ಬೇರೆ ಬೇರೆ ಊರುಗಳಲ್ಲಿ ಇದ್ದಾಗ,, ಅದೂ independent ಮನೆಗಳಲ್ಲಿ ಬಾಡಿಗೆಗೆ ಇದ್ದಾಗ , ತರಕಾರಿ, ಬೇಳೆ ಹಣ್ಣು ತೊಳೆದ ನೀರಿನಿಂದ ಗಿಡಗಳ ಬೆಳವಣಿಗೆ..ಇದಕ್ಕೆ ತೀರ್ಥಹಳ್ಳಿಯ ದಿ. ಶ್ರೀ ಪುರುಷೋತ್ತಮ ರಾಯರಿಗೆ ಎಷ್ಟೇ ಧನ್ಯವಾದಗಳು ಸಲ್ಲಿಸಿದರೂ ಕಡಿಮೆ. ...ಅಲಸಂದೇ, ಬೆಂಡೆ, ಮೂಲಂಗಿ, ಬೂದುಗುಂಬಳ, ತೊಂಡೆಕಾಯಿ ಏನು ರುಚಿ ಅಂತೀರಾ...ಬೆಂಗಳೂರಿಗೆ ಬಂದ ಮೇಲೆ ತರಕಾರಿ ಎಲ್ಲ ಸಾಧ್ಯವಾಗುತ್ತಿಲ್ಲ, ಕೆಲವು ಹೂ, ಅಲಂಕಾರಿಕ ಗಿಡಗಳು ಮಾತ್ರ....ಪ್ಲಾಟ್ ನ space constraint...ಆದರೂ ಕಾಂಪೋಸ್ಟ್ ಖಂಬ ಇಟ್ಟಿದ್ದೇನೆ. ಜಾಸ್ತಿ compost ಬೆಳಗಾವಿಯ ಅಮ್ಮನ ತಾರಸಿ ಗಾರ್ಡನ್ ಗೆ ಹೋಗುತ್ತೆ...
ಈಗ ತೀರಾ ಸಾವಯವ ಜೀವನ ಶೈಲಿ ಸಾಧ್ಯವಾಗುತ್ತಿಲ್ಲ, ಆದಷ್ಟು ಪ್ರಯತ್ನವಂತೂ ಮಾಡುತ್ತೇವೆ ನಾವು ನಾಲಕ್ಕೂ ಜನ 🙏🙏❤️
ನಮ್ಮ ಸ್ವಂತ ಮನೆಗೆ ಬಸ್, ಮೆಟ್ರೋ ಸೌಕರ್ಯ ಇದ್ದಾಗ ಕಾರ್ ತೆಗೊಂಡಿದ್ದು ನನಗೆ ಆಶ್ಚರ್ಯ.. 🤔🤔
anyways ನೆಟ್ಟಕಲ್ಲಪ್ಪ ವೃತ್ತ ಗಣಪತಿ ದೇವಸ್ಥಾನದ ಪುರೋಹಿತರು ಚೆಂದದ ಪೂಜೆ ಮಾಡಿ ಕೊಟ್ಟರು. 🙏🙏
ಆದರೆ ವಿಷಯ ಅದಲ್ಲ. ಪೂಜೆಗೆ ಆಫಿಸ್ ಹತ್ತಿರ ಬನ್ನಿ. ಬನಶಂಕರಿ ಮೆಟ್ರೋ ಬಳಿಯಿಂದ ಹೂ, ನಿಂಬೆ ಹಣ್ಣು ತೆಗೊಂಡು ಬನ್ನಿ ಅಂದಿದ್ರು ಶ್ರೀಕಾಂತ್..ಹಾಗೆ ಹೂ ತೆಗೊಂಡು ಸುಮಾರು ಮುಂದೆ ಬಂದ ಮೇಲೆ ಹಿಂದ ಗಡೆಯಿಂದ ಸುಮಾರು ಜನರು ಆವಾಜ್ ಹಾಕಲು ಶುರುಮಾಡಿದರು. ಮ್ಯಾಡಮ್ ಮ್ಯಾಡಮ್ ಅಂತ....ನಾನು, 'ಮಾಲವಿಕಾ ಬ್ಯಾಗ್ ಬಿಟ್ಟು ಬಂದಿರ ಬೇಕೆಂದು ಕೊಂಡೆ' ಅವಳು ಪುನಃ ಅಲ್ಲಿ ಹೋದಾಗ ಹೂವಿನವಳು ಒಂದು ಮೊಳ ಮಲ್ಲಿಗೆ ಕೊಟ್ಟು, ಅಮ್ಮನಿಗೆ ಈಗಲೇ ಮುಡಿದುಕೊಳ್ಳಲು ಹೇಳು' ಅಂದಳಂತೆ...ಇದರ ಬಗ್ಗೆ ಪೋಸ್ಟ್ ಮಾಡು ಅಂತ ಮಾಲವಿಕ ಫೋಟೋ ತೆಗೆದಾಗ...
ಹೂವಿಗೆ ಏನು ಘಮ ಅಂತೀರಾ...ಮ್ಮ್ಮ್ಮ್ಮ್
ನನಗೆ ಗಾಡಿಗಿಂತ ,ಗಿಫ್ಟ್ ಅಂತ ಕೊಟ್ಟ ಈ ಮಗ್ ಮತ್ತು ಪುಟ್ಟ ಗಿಡ ಹೆಚ್ಚು ಇಷ್ಟ ಆದವು ❤️❤️😁😁
Happy World Environment Day ❤️❤️





No comments:
Post a Comment