ತಲಶೇರಿಯಲ್ಲಿ ನಮ್ಮ ಮಿತ್ರರ ಮಗಳ ಮದುವೆಯಿತ್ತು.
ಮದುವೆಯ ಕಾರ್ಯಕಲಾಪಗಳು ಒಂದೇ ಗಂಟೆಯಲ್ಲಿ ಮುಕ್ತಾಯವಾದವು. ರೆಸ್ಟ್ ತೆಗೆದುಕೊಂಡು ಸ್ವಲ್ಪ ಊರು ಸುತ್ತಿದೆವು
ಇಷ್ಟನ್ನೂ ಖಾಲಿ ಮಾಡಿ ಎರಡು ಬಗೆ ಪಾಯಸ ಕೂಡ ಗುಳುಂ ಮಾಡಿದೆ. 😆

ಬೀಚ್, ದೇವಸ್ಥಾನ, ತರಕಾರಿ ಮಾರುಕಟ್ಟೆಗೆ ಭೇಟಿ ಕೊಟ್ಟೆವು.
ಹತ್ತಿಯ ಮುಂಡು ತುಂಬಾ ಕಡಿಮೆ ದರಕ್ಕೆ ಸಿಕ್ಕಿತು
ಹಾಗೆ ನೇಂದ್ರ ಬಾಳೆ ಹಣ್ಣು, ಉತ್ತಮ ಗುಣ ಮಟ್ಟದ ಪರಿಮಳಯುಕ್ತ ಅಡಿಗೆಗೆ ಬಳಸುವ ತೆಂಗಿನಕಾಯಿ ಎಣ್ಣೆ , ಒಂದು ಕತ್ತಿ etc etc 😆
ಈ ಚೆಂದದ ರಾಮ ದೇವಸ್ಥಾನಕ್ಕೆ 3000 ವರ್ಷದ ಇತಿಹಾಸ ಇದೆಯಂತೆ. ಗರ್ಭಗುಡಿಯಲ್ಲಿ ಇತ್ತೀಚೀನ ಹಾಗೆ ಕರೆಂಟ್ ಹಾಕಿಸಿಲ್ಲ. ದೇವರ ನಂದಾದೀಪದ ಬೆಳಕು.
ಒಳಗಡೆ ರಂಗಮಂಟಪದ ಮೇಲ್ಭಾಗದಲ್ಲಿ ಚೆಂದದ ಮರದ ಕೆತ್ತನೆಗಳು. ಫೋಟೋ ತೆಗೆಯಲು ಅವಕಾಶವಿರಲಿಲ್ಲ. ವಿಶಾಲವಾದ ಪುಷ್ಕರಣಿಯು ಇತ್ತು
ಕೆಲವು ಚಿತ್ರಗಳು
ಹಾಗೆ ಹೋಗಿ ಹೀಗೆ ಕೇರಳಕ್ಕೆ ಹೋಗಿ ಬಂದ್ಬಿಟ್ವಿ 😆😆














No comments:
Post a Comment