ತೀರ್ಥಹಳ್ಳಿಯಿಂದ ಶ್ರೀಕಾಂತ್ ಫೋನ್ ಮಾಡಿ ನಮ್ಮ ತೋಟದ ಎಳೆ ಗೇರು ಬೀಜ / ಬಿಬ್ಬೊ ತರತಿದ್ದೀನಿ ಎಂದಾಗ ತುಂಬಾ ಖುಷಿ ಪಟ್ಟೆ . ಎಳೆ ಗೇರು ಬೀಜದ ರುಚಿಯೇ ಬೇರೆ. ಏನೆಲ್ಲಾ ಅಡಿಗೆ ಮಾಡಬಹುದು ಅಂತ ಕನಸು ಕಾಣಲು ಶುರುವಿಟ್ಟೆ
ಮರುದಿನ ಅವರು ತಂದದ್ದು ಸಿಪ್ಪೆ ಸಮೇತ ಗೇರು ಕಾಯಿ. ಅದನ್ನು ಬಿಡಿಸಿಯೇ ಗೊತ್ತಿರಲಿಲ್ಲ. ಏನಕ್ಕೂ ನೋಡೇ ಬಿಡುವ ಅಂತ ಚಾಕುವಿನಿಂದ ಮಧ್ಯಕ್ಕೆ ಕತ್ತರಿಸಿದೆ. ಸುಲಭವಾಗಿ ಬಂತು. ಖುಷಿಯಿಂದ ಒಂದೊಂದೇ ಬಿಡಿಸುತ್ತಾ ಹೋದೆ.
ಫ್ರೆಶ್ ಆಗಿ ಬರಲು ವಾಷ್ ರೂಮಿಗೆ ಹೋದ ಶ್ರೀಕಾಂತ್ ಬಂದ ಕೂಡಲೇ ಕಿರುಚಿದರು. ಎನ್ ಮಾಡ್ತಿದ್ದೀರಾ? ಅದನ್ನು ಬರಿ ಕೈನಿಂದ ಯಾರಾದರು ಮುಟ್ಟುತ್ತಾರಾ? ಬೆರಳಿನ ಸಿಪ್ಪೆ ಹೋಗಿ ನಾಳೆ ಬೊಂಬ್ಡಾ ಹೊಡೀತೀರಾ ಅಂದ್ರು. ಅಷ್ಟರಲ್ಲೇ 15 ಗೇರು ಬೀಜ ಬಿಡಿಸಿಯಾಗಿತ್ತು. ಕೊನೆ ಪಕ್ಷ ಕೈಗೆ ಎಣ್ಣೆನಾದ್ರೂ ಹಚ್ಚಿದ್ದೀರಾ, ಇಲ್ಲ...ನನಗೆ ಗೇರು ಎಣ್ಣೆಯಿಂದ ಬಟ್ಟೆ ಬರೆ ಕಲೆಯಾಗೋದು ಗೊತ್ತಿತ್ತು. ...ನಾನಂತು i am the malathi, one & only ನನಗೇನೂ ಆಗಲ್ಲ ಅಂತ ಹಾಡ್ತಾ ಇನ್ನೊಂದೆರಡು ಗೇರು ಬೀಜ ಸುಲಿದೆ. ಇನ್ನೊಂದಪ ಆವಾಜ್ ಹಾಕಿ ಕೆಲಸ ನಿಲ್ಲಿಸ್ತಿಯಾ ಹೇಗೆ ಅಂದಾಗ ಸುಮ್ಮನಾದೆ. ಎಲ್ಲಿಂದಲೋ ಕೈ ಗವಸ ಹುಡಿಕಿ ಕೊಟ್ಟು ಈಗ ಸುಲಿ ಅಂದ್ರು. ಸ್ವಲ್ಪ ಕಿರಿ ಕಿರಿ ಅನ್ನಿಸಿದ್ರು ಅದು ಅಭ್ಯಾಸ ಆಯ್ತು. ನಾನು ಅಕ್ಕ ಮಾತಾಡ್ತಾ, ಹಾಡ್ತಾ ಸುಮಾರು 150 ಕ್ಕೂ ಹೆಚ್ಚು ಗೇರು ಬೀಜ ಸುಲಿದ್ವಿ. ಮಧ್ಯದಲ್ಲಿ ಗೇರಿನ ರಸ ಕಣ್ಣೊಳಗೆ ಸಿಡಿದು ಶ್ರೀಕಾಂತ್ ಗು ಅಕ್ಕಂಗೂ ಫುಲ್ tension. ಎರಡೂ ಕೈಗಳಿಗೆ ಗೇರು ಎಣ್ಣೆ ತಾಗಿದ್ದರಿಂದ ಹೇಗೆ ಕಣ್ಣು ತೊಳೆಯೋದು ತೋಚಲಿಲ್ಲ. ಕಣ್ಣು ಚೆನ್ನಾಗಿ ಉರಿತು. ಕಣ್ಣೀರಿನಿಂದ ಎಣ್ಣೆ ತಾನೇ ತಾನಾಗಿ ಹೋಯಿತು ಅನ್ನಿಸುತ್ತೆ. ಕಣ್ಣುರಿ ಹೋಯ್ತು. ಶ್ರೀಕಾಂತ್ ನನ್ನ ಹಳೆ ಚಸ್ಮಾ ಹುಡುಕಿ ತಂದು ಕೊಟ್ಟು ಉಳಿದ ಕೆಲಸ ಚಸ್ಮಾ ಹಾಕಿಕೊಂಡು ಮಾಡಿದೆ. 🙂🙂 ಆಮೇಲೆ ಕೂತು ಕೂತು ಕಾಲು ನೋವಾಯಿತು. ಉಳಿದದ್ದು ಮರು ದಿನ ಸುಲಿದರಾಯ್ತು ಅಂದುಕೊಂಡ್ವಿ.
ಮರುದಿನ ಪೂರಿಗೆ ಗೇರು ಬೀಜದ ಪಲ್ಯ, ಮಧ್ಯಾಹ್ನಕ್ಕೆ ತೊಂಡೆಕಾಯಿ ಗೇರು ಬೀಜದ ಪಲ್ಯ. ಏನ್ ರುಚಿ, ಬೆಣ್ಣೆಯಂತೆ soft ಆಗಿತ್ತು. ನಿಹಾ ಗೆ, ಕುಟುಂಬದವರಿಗೆ whatsapp ನಲ್ಲಿ ಚಿತ್ರ ಕಳುಹಿಸಿ ಹೊಟ್ಟೆ ಕಿಚ್ಚು ಪಡುವಂತೆ ಮಾಡಿದ್ವಿ.
ಸಂಜೆ ಶ್ರೀಕಾಂತ್, ತಂಗಿಯ ಮಗಳು & ಅಳಿಯ ಮತ್ತು ಮೊಮ್ಮಗ ಅವರನ್ನು ಗೇರು ಬೀಜದ ಪಲ್ಯ ತಿನ್ನಲು ಆಹ್ವಾನಿಸಿದರು. ಮಧ್ಯಾಹ್ನ ಊಟದ ನಂತರ ಉಳಿದ 200 ಗೇರು ಬೀಜಗಳನ್ನು ಸುಲಿದು, ಸಂಜೆ ಅದರ ಪಲ್ಯ ಮಾಡಿದೆ ....
ಇಲ್ಲಿಗೆ ಎಳೆ ಗೇರುಬೀಜ ಸುಲಿತದ ಕತೆ ಸಮಾಪ್ತ...... ಕೈಗಳೆರಡೂ ಕಣ್ಣು ಸರಿಯಾಗಿವೆ, thank you 😆😆❤️
ಇನ್ನು ಹಳ್ಳಿ ಜೀವನ ನಡೆಸಲು ಯಾವ certificate ಕೂಡ ಬೇಡ...,👍👍🙂 ಏನಂತೀರಾ???
ಇನ್ನು ಹಳ್ಳಿ ಜೀವನ ನಡೆಸಲು ಯಾವ certificate ಕೂಡ ಬೇಡ...,👍👍🙂 ಏನಂತೀರಾ???





2 comments:
ತುಂಬಾ ಚೆನ್ನಾಗಿ ಇತ್ತು.. ಈ ವರ್ಷದ ಮೊದಲ ಗೇರು ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು.. ಸುಧನ್ವಾ ತುಂಬಾ ಖುಷಿಯಲ್ಲಿ ಇದ್ದಾನೆ..
thank you Sudarshan. 🙏🙏
Post a Comment