ಗೋವಾದಲ್ಲಿ ಚಾಂಡೋರ್ ಎಂಬ ಚೆಂದದ ಊರು. ಅಲಿ ಶ್ರೀಕಾಂತ ಬ್ಯಾಂಕ್ ಫ್ರೆನ್ಡ್ ಮಿಲಿಂದ್ ಸರದೇಸಾಯಿ ಯವರ ಮನೆ. ಗೋವಾ ಟೂರ್ ಹೋದಾಗ ಒಂದಿನ ಅವರ ಮನೇಲಿ ಅತಿಥಿ ಸತ್ಕಾರ. ಅವರ ಹೆಂಡತಿಗೆ ಅಷ್ಟೊಂದು ಆರಾಮ್ ಇಲ್ಲದಿದ್ದರೂ ನಮಗೋಸ್ಕರ ಹಲವಾರು ನಾನ್ ವೆಜ್ ಅಡಿಗೆ ಮಾಡಿದ್ದಲ್ಲದೆ, ಮಾಳವಿಕಾ ಗೋಸ್ಕರ ವೆಜಿಟೇರಿಯನ್ ಅಡಿಗೆ ಮಾಡಿಟ್ಟಿದ್ದರು ಪಾಪ. ಈ ಎಲ್ಲ ಅಡಿಗೆಗೂ ಪಾವ್ ಬೇಕೇ ಬೇಕಿತ್ತು. ಹಾಗಾಗಿ ನಾವು ಬ್ರಗಾಂಜ ಪ್ಯಾಲೇಸ್ ಮ್ಯೂಸೆಯಂ ಗೆ ಹೋಗಿ ವಾಪಸ್ ಮನೆಗೆ ಬರುವಾಗ ಪಾವ್ ಮಾಡುವ ಜೋಕಿಮ್ (Joaquim) ಡಿಸೋಜಾ ಅವರ ಬೇಕರಿಗೆ ಭೇಟಿ ನೀಡಿದೆವು, ಅವರ ಹೆಂಡತಿ ಮತ್ತು ಇಬ್ಬರು ಮಕ್ಕಳು ಈ ಬೇಕರಿ ನಡೆಸಲು ಸಹಾಯ ಮಾಡುತ್ತಾರಂತೆ.
ಇಲ್ಲಿವೆ ಕೆಲವು ಚಿತ್ರಗಳು. ತಾಜಾ ಪಾವ್ ಗಳಿಗೆ ಇವರಿಗೆ ತುಂಬಾ ಡಿಮಾಂಡ್, ಈಗಲೂ ಮರದ ಕಟ್ಟಿಗೆ ಬಳಸಿ ಪಾವ್ ಮಾಡುವ ಕೆಲವೇ ಕೆಲವು ಬೇಕರಿಗಳಲ್ಲಿ ಡಿಸೋಜಾ ಅವರದ್ದು ಒಂದು. ಹಿಟ್ಟು ಹುದುಗಿ ಬರಲು ೬-೮ ಗಂಟೆ ಇಡ್ತಾರಂತೆ. ಬೆಳಿಗ್ಗೆ ೬ ಗಂಟೆಗೆ ಪಾವ್ ಮಾಡಲು ಶುರು ಮಾಡ್ತಾರಂತೆ. ನಮಗೆ ಬಿಸಿ ಬಿಸಿ ಪಾವ್ ಕೊಟ್ಟರು ತಿನ್ನಲು. ಎಷ್ಟು ರುಚಿಯಾಗಿತ್ತು. ಆದರೆ ಅವರು ಅವರ ಪಾವ್ ನ ರ್ರೀಇಪಿ ಹೇಳಲು ನಗು ನಗುತ್ತಾ ನಿರಾಕರಿಸಿದರು. :-)
ಇದಕ್ಕೆ ಬೇಕಾಗುವ ಹುಣಸೆ ಕಟ್ಟಿಗೆ ಇವರು ಕರ್ನಾಟಕದಿಂದ ತರಿಸುವುದಂತೆ. ಒಂದು ಟ್ರಕ್ ಲೋಡ್ ಗೆ ೩೦ ಸಾವಿರ ಅವರಿಗೆ ೬ ತಿಂಗಳಿಗೆ ಸಾಕಾಗುವುದಂತೆ. ಹುಣಸೆ ಕಟ್ಟಿಗೆಯ ಶಾಖ ಬಹಳ ಹೊತ್ತು ಇರುತ್ತದೆ ಅಂತ ಹೇಳಿದರು.
No comments:
Post a Comment