October 29, 2013

ಮನೆಯಲ್ಲಿ ಬೇಕ್ ಮಾಡಿದ ಪಾವ್ ಮತ್ತು ಭಾಜಿ

ತಂಗಿ ಅಮೇರಿಕಾದಿಂದ ಬಂದಾಗಲೆಲ್ಲ ಒಂದು ದಿನ ನಾವು ಬೇಕಿಂಗ್ ಗೆ ಅಂತಲೇ ಇಡುತ್ತೇವೆ. ಆ ದಿನ ತರಹವಾರಿ ಕೇಕ್, ಬ್ರೆಡ್, ಕುಕ್ಕೀಸ್, ಡೋ ನಟ್ಸ್ ಗೆ ಮೀಸಲು.
ನಾನು, ತಮ್ಮಂದಿರು & ತಂಗಿ ಸ್ಟುಡಿಯೋ ಗೆ ಹೋಗಿ ತೆಗೆದ ಫೋಟೊ

ಹಲವಾರು ವರ್ಷಗಳ ಹಿಂದೆ, ನಮ್ಮ ತಂದೆ ಕೆಲಸ ಮಾಡುತ್ತಿರುವ ಬ್ಯಾಂಕ್ ಇನ್ನೊಂದು ಲಾಸ್ ನಲ್ಲಿರುವ ಬ್ಯಾಂಕ್ ಒಂದನ್ನು ಟೇಕ್ ಓವರ್ ಮಾಡಿತ್ತು. ಅದು ಜೈಪುರ್-ರಾಜಸ್ಥಾನ್ ದಲ್ಲಿತ್ತು. ಮುಂಬೈ ನಲ್ಲಿರುವ ಕ್ವಾರ್ಟರ್ಸ್ ಮಾತ್ರವಲ್ಲದೇ ಜೈಪುರ್ ನಲ್ಲೂ ಒಂದು ಮನೆ ಮಾಡುವ ಸೌಲಭ್ಯವಿದ್ದುದರಿಂದ  ನಮ್ಮ ತಂದೆ ಆ option ನಿಂದ ಅಲ್ಲಿಗೆ ಹೋದರು. ಆಗ ಡಿಸೆಂಬರ್ ಜನವರಿ ತಿಂಗಳು. ಅಲ್ಲಿಗೆ  ಬಿಡಾರ ಶಿಫ್ಟ್ ಮಾಡಿದಿದ್ರೆ ನಮ್ಮ ಶಾಲೆ ಕಾಲೇಜ್ ಗೆ ತೊಂದರೆ ಆಗುತ್ತಿತ್ತು.
ಅಮ್ಮ ,ಅಪ್ಪನ ಜತೆ ಜೈಪುರ್ ನ ಮನೆ ಹೊಂದಿಸಿಕೊಡಲಿಕ್ಕೆ ಅಂತ ಒಂದು ವಾರದ ಕಾಲ ಹೋಗಿರುವುದು ಅಂತಾಯಿತು. ಮನೆ ಮತ್ತು ತಮ್ಮ, ತಂಗಿಯರ ಜವಾಬ್ದಾರಿ ನನ್ನ ಮೇಲೆ. ಆದರೆ ಅಲ್ಲಿ ಹೋದದ್ದೆ ಅಮ್ಮನಿಗೆ ಸ್ಕಿನ್ ಇನ್ಫೆಕ್ಷನ್ ಆಗಿ, ಜ್ವರ ಎಲ್ಲ ಬಂದು ಅಮ್ಮ ಬರುವಾಗ ಒಂದು ತಿಂಗಳು ಕಳೆದು ಹೋಗಿತ್ತು. ಈ ಮಧ್ಯೆ ನನ್ನ ತಂಗಿಯ ಹುಟ್ಟು ಹಬ್ಬ. ಅವಳು ಮುಖ ಚಿಕ್ಕದು ಮಾಡಿ ತಿರುಗುವಾಗ ನನಗೆ ಕೆಟ್ಟದೆನಿಸಿತು. ನನಗೆ ಬೆಳಿಗ್ಗೆ ಸ್ಕೂಲ್ ಆದ್ರೆ ಅವಳಿಗೆ ಮಧ್ಯಾಹ್ನದ ಶಿಫ್ಟ್. 
ನಾನು ಮತ್ತು ನನ್ನ ತಮ್ಮ ಕೃಷ್ಣ ಅವಳಿಗೋಸ್ಕರ ಸರ್ಪ್ರೈಸ್ ಬರ್ತಡೆ ಪಾರ್ಟಿ ಮಾಡುವ ಯೋಜನೆ ಹಾಕಿಕೊಂಡೆವು. ಅವಳ ಹುಟ್ಟುಹಬ್ಬದ ದಿನ ಅವಳಿಗೆ ಶಾಲೆಯಲ್ಲಿ ಡಿಸ್ಟ್ರೂಬ್ಯೂಟ್ ಮಾಡಲು ಚಾಕೋಲೇಟ್ ತೆಗೆಸಿಕೊಟ್ಟೆ. ನಾವು ಆದಷ್ಟು ತಿಂಡಿಗಳನ್ನು ಮನೆಯಲ್ಲೇ ಮಾಡುತ್ತಿದ್ದ ದಿನಗಳವು. ಅಮ್ಮ ಯಾವುದೇ ತಿಂಡಿ ಮಾಡುವಾಗ ಅಮ್ಮನಿಗೆ ಸಹಾಯ ಮಾಡುತ್ತಿದ್ದರಿಂದ ಅಡುಗೆ ತಿಂಡಿ ಮಾಡುವ ಸಾಧಾರಣ ಅಂದಾಜಿತ್ತು.
ಅವಳು ಶಾಲೆಗೆ ಹೋದ ಮೇಲೆ ನಾನು ತಮ್ಮ ಸೇರಿ ಕೇಕ್, ಅದೂ ತ್ರೀ ಕಲರ್ ಕೇಕ್ ಮಾಡಿ ಇಟ್ಟು, ಬಟಾಟಾ ವಡಾ, ಸ್ವಲ್ಪ ಅವಲಕ್ಕಿ ಚೂಡಾ ಎಲ್ಲ ಮಾಡಿದೆವು.ಬಿಲ್ಡಿಂಗ್ ನ ಮಕ್ಕಳಿಗೆಲ್ಲ ಹೋಗಿ ಆಹ್ವಾನ ನೀಡಿದ್ದು ನನ್ನ ಇನ್ನೊಬ್ಬ ತಮ್ಮ ಪಾಂಡು. ಸಂಜೆ ಅವಳ ಖುಶಿ ನೋಡಿ ನಾವು ಮಾಡಿದ್ದು ಸಾರ್ಥಕವೆನಿಸಿದ್ದು ಮಾತ್ರವಲ್ಲ ಕೇಕ್ perfect professional ತರಹಾನೆ ಆಗಿತ್ತು. ನಾನು ಐಸಿಂಗ್ ಶುಗರ್ ಎಲ್ಲ ಹಾಕಿ ಅವಳ ಹೆಸರು ಬರೆದಿದ್ದೆ. 
ಸುಮಾರು ದೊಡ್ಡವಳಾದ ಮೇಲೆ ಅವಳು ಹೇಳಿದ್ದು "ನನ್ನ ಹುಟ್ಟುಹಬ್ಬದ ಹಿಂದಿನ ರಾತ್ರಿಯೆಲ್ಲ ನಾನು ಅತ್ತಿದ್ದೆ. ನನ್ನ ಬರ್ಥ್ ಡೇ ಮಾಡಿ ಫ್ರೆಂಡ್ಸ್ ಗೆಲ್ಲ ಕರೀಬೇಕು ಅಂತ ಇತ್ತು. ಅಮ್ಮನನ್ನು ನೆನೆಸಿಕೊಂಡು ತುಂಬಾ ಅತ್ತಿದೆ. that is one day in my life that i will never forget ಅಂತ.
ಈಗ ಅವಳು ಭಾರತಕ್ಕೆ ಬಂದಾಗಲೆಲ್ಲ ಈ ಕತೆ ಎಷ್ಟೊಂದು ಸಲ ರಿಪೀಟ್ ಆಗಿದ್ರೂ ಮಕ್ಕಳಿಗೆ ಅದನ್ನು ಕೇಳುವುದರಲ್ಲಿ ಖುಶಿ. i am so glad i made her day all those years ago. :-)
ಮನೆಯಲ್ಲಿ ಕೇಕ್, ಬ್ರೆಡ್ ಎಲ್ಲ ತಯಾರಾಗುವಾಗ ಏನು ಘಮ ವಾವ್. ನನಗೆ ತುಂಬ ಇಷ್ಟ. ಮನೆಯಲ್ಲಿ ಮೈಕ್ರೋವೇವ್ ಬಂದ ಮೇಲೆ ನಮ್ಮ ಮನೆಯಲ್ಲಿ ಮೂಡ ಬಂದಾಗಲೆಲ್ಲ ಬ್ರೆಡ್ ಪಾವ್ ಮಾಡುತ್ತಿರುತ್ತೇವೆ. ಕೆಳಗಡೆ ಕೊಟ್ಟ ರೆಸಿಪಿಯಿಂದ ಬ್ರೆಡ್ ಅಥ್ವಾ ಪಾವ್ ಎರಡೂ ತಯಾರಿಸಬಹುದು. ಬ್ರೆಡ್ ತಯಾರಿಸಲು ಅದರ ಅಚ್ಚು (container or mould) ತರಬೇಕಾಗುತ್ತೆ. ಆ ಕಂಟೈನರ್ ನಲ್ಲಿ ಅರ್ಧದಷ್ಟೆ ತುಂಬಿಸಿ ಅದು ಬೇಕ್ ಆಗಿ ಆ ಕಂಟೈನರ್ ತುಂಬ ಉಬ್ಬುತ್ತೆ.

ಮೈದಾ ಹಿಟ್ಟು - 200 ಗ್ರಾಂ (ನಾವು ಅರ್ಧ ಮೈದ ಅರ್ಧ ಗೋದಿ ಹಿಟ್ಟು ಹಾಕುವುದು)
ಯೀಸ್ಟ್ - 6 ಗ್ರಾಂ  (ಫ್ರೆಶ್ ಇದ್ದಷ್ಟು  ಒಳ್ಳೇದು)
ಉಪ್ಪು - 4ಗ್ರಾಂ
ಸಕ್ಕರೆ - 10 ಗ್ರಾಂ
ಬೆಣ್ಣೆ - 10 ಗ್ರಾಂ
ಓಲಿವ್ ಎಣ್ಣೆ - 5 ಮಿ ಲಿ (ಅಥವಾ ರಿಫೈನ್ಡ್ ಎಣ್ಣೆ ಕೂಡ ಆಗುತ್ತೆ)
(ಮೆಶರಿಂಗ್ ಕಪ್ ಇದ್ದರೆ ಒಳ್ಳೆಯದು)

ಯೀಸ್ಟ್ ಅನ್ನು ಉಗುರು ಬೆಚ್ಚಗಿನ ನೀರಿನಲ್ಲಿ ಹಾಕಿ. ಅದು ನೊರೆನೊರೆಯಾಗುತ್ತೆ. ಉಳಿದ ಎಲ್ಲ ಪದಾರ್ಥಗಳನ್ನು ಯೀಸ್ಟ್ ಗೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಬೇಕಾದಷ್ಟು ನೀರು ಹಾಕಿ ಅತ್ಯಂತ ಮೃದುವಾದ ಕಣಕ ತಯಾರಿಸಿ. ಈ ಕಣಕಕ್ಕೆ ಎಣ್ಣೆ ಸವರಿ ಒಂದು ಗಂಟೆ ಇಡಿ. ಕಣಕ ಉಬ್ಬಿ ದುಪ್ಪಟ್ಟು ಆಗುತ್ತೆ.
ಇದು ದುಪ್ಪಟ್ಟು ಆಗಿರುವ ಹಿಟ್ಟು. ಕಲಸಿದ ಕೂಡಲೇ ಫೋಟಿ ತೆಗೀಲಿಕ್ಕೆ ಮರೆತು ಹೋಯಿತು.

 ಈಗ ನಿಮಗೆ ಬೇಕಾದ ಆಕಾರ ಸೈಜ್ ನ ಪಾವ್ ತಯಾರಿಸಿ.
ಹೀಗೆ ಒಮ್ದರ ಬಳಿ ಒಂದು ಹಿಟ್ಟಿನ ಉಂಡೆ ಇಡಿ. ಸ್ವಲ್ಪ ಹೊತ್ತಿನ ಬಳಿಕ ಅದು ಕೆಳಗಿನ ಚಿತ್ರದಲ್ಲಿದ್ದಂತೆ ಆಗುತ್ತೆ.

 ಈ ಪಾವ್ ಗಳು ಪುನ: ದುಪ್ಪಟ್ಟು ಸೈಜ್ ಆಗಿ ಉಬ್ಬುತ್ತವೆ. ಆಗ ಓವನ್ ನಲ್ಲಿ 250*C ಯಲ್ಲಿಟ್ಟು ಮೇಲಿನ ಪದರ ಹೊಂಬಣ್ಣಕ್ಕೆ ಬರುವ ತನಕ ಬೇಕ್ ಮಾಡಿ.

ಮನೆಯಲ್ಲಿ ಮೂರು ನಾಲ್ಕು ಬಾರಿ ಈ ಪಾವ್ ನ್ನು ಮಾಡಿ ಆಯ್ತು. ಮೇಲಿನ ಅಳತೆ ಪರ್ಫೆಕ್ಟ್ ಆಗಿದೆ. ಪಾವ್ ತಯಾರಾಗುವಾಗಿನ ಘಮ..ಆಆಆಆಹ್!!! :-)
ಪಾವ್ ಜತೆ ಭಾಜಿ ಮಾಡುವ ವಿಧಾನ ಕೂಡ ಹೇಳಿ ಬಿಡುತ್ತೇನೆ
ಬೇಯಿಸಿದ ತರಕಾರಿ = ಕ್ಯಾರೆಟ್, ಆಲೂಗಡ್ಡೆ, ಬಟಾಣಿ (ಫ್ರೆಶ್ ಬಟಾಣಿ ಇಲ್ಲದಿದ್ದಲ್ಲಿ , ಕಾಳುಗಳನ್ನು ರಾತ್ರಿ ನೆ ನೀರಲ್ಲಿ ನೆನೆಹಾಕಿ. ಬೆಳಿಗ್ಗೆ ಎಲ್ಲವನ್ನು ಚೆನ್ನಾಗಿ ಬೇಯಿಸಿ, ಮ್ಯಾಶ್ ಮಾಡಿಡಿ.
ನೀರುಳ್ಳಿ - ಹದ ಗಾತ್ರದ್ದು 4
ಬೆಳ್ಳುಳ್ಳಿ- 15
ಟೋಮೇಟೊ - ತುಂಬಾ ಮಾಗಿದ್ದು ಒಂದು
ಕೆಂಪು ಮೆಣಸಿನ ಪುಡಿ - 2 ಟೀ ಸ್ಫೂನ್
ಎವರೆಸ್ಟ್ ಪಾವ್ ಭಾಜಿ ಮಸಾಲಾ - ಎರಡು ದೊಡ್ಡ ಟೇಬಲ್ ಸ್ಪೂನ್
ಕೊತ್ತಂಬರಿ ಸೊಪ್ಪು, ಸಣ್ಣಕ್ಕೆ ಕತ್ತರಿಸಿದ ನೀರುಳ್ಳಿ, ಲಿಂಬೆ ಹಣ್ಣಿನ ಸ್ಲೈಸ್ ಮೇಲೆ ಉದುರಿಸಲು. ಸ್ವಲ್ಪ ಬೆಣ್ಣೆ.


ಮೊದಲಿಗೆ ನೀರುಳ್ಳಿ, ಬೆಳ್ಳುಳ್ಳಿಯನ್ನು ಯನ್ನು ಚಿಕ್ಕದಾಗಿ ಕತ್ತರಿಸಿಡಿ. ಸ್ವಲ್ಪ ಹೆಚ್ಚೆ ಎಣ್ಣೆ ಬಿಸಿಮಾಡಲು ಇಡಿ. ಎಣ್ಣೆ ಬಿಸಿಯಾದ ನಂತರ ಇದಾಕೆ ನೀರುಳ್ಳಿ ಬೆರೆಸಿ ಪಿಂಕ್ ಬಣ್ಣ ಆಗುವ ತನಕ ಹುರಿಯಿರಿ. ಇದಕ್ಕೆ ಬೆಳ್ಳುಳ್ಳು ಬೆರೆಸಿ. ಎರಡು ನಿಮಿಷ ಹುರಿದು ಕ್ರಮವಾಗಿ ಮೆಣಸಿನ ಪುಡಿ, ಪಾವ್ ಭಾಜಿ ಮಸಾಲಾ ನಂತರ ಟೋಮೇಟೋ ಬೆರೆಸಿ. ಎಣ್ಣೆ ಬಿಡುವ ಹಂತಕ್ಕೆ ಬಂದಾಗ ಮ್ಯಾಶ್ ಮಾಡಿಟ್ಟ ತರಕಾರಿ ಬೆರೆಸಿ. ಎಷ್ಟು ಬೇಕೋ ಅಷ್ಟು ನೀರು ಸೇರೆಸಿ. ಉಪ್ಪು ಚಿಟಿಕೆ ಸಕ್ಕರೆ ಬೆರೆಸಿ.  ಚೆನ್ನಾಗಿ ಕುದಿ ಬಂದ ನಂತರ ಒಂದು ಸ್ಪೂನ್ ಬೆಣ್ಣೆ, ಕೊತ್ತಂಬರಿ ಸೊಪ್ಪು ಮೇಲಿನಿಂದ ಭಾಜಿಗೆ ಹಾಕಿ.
ಸರ್ವ್ ಮಾಡುವ ಮುನ್ನ ಪಾವ್ ಅನ್ನು ಮಧ್ಯಕ್ಕೆ ಕತ್ತರಿಸಿ ಬೆಣ್ಣೆ ಹಚ್ಚಿ ಕಾವಲಿ ಮೇಲೆ ಬಿಸಿ ಮಾಡಿ, ಭಾಜಿ, ನೀರುಳ್ಳಿ ಕೊತ್ತಂಬರಿ ಸೊಪ್ಪು, ನಿಂಬೆ ಹಣ್ಣಿನ ಜತೆ ಬಡಿಸಿ.

ಮೊದಲ ಸಲ ಪಾವ್ ಮಾಡಿದಾಗ ಶ್ರೀಕಾಂತ್ ರ್ ಪ್ರೆಂಡ್ ಒಬ್ಬರು ಮಡಿಕೇರಿಯಿಂದ ಬಂದಿದ್ದರು. ಕಾಫಿ ಕುಡಿಯುವ ಅಂತ ಅವರು ಬಂದಿದ್ದು.. ಅದರೊಂದಿಗೆ ಬಿಸಿ ಪಾವ್ ಮತ್ತು ಅಮುಲ್ ಬಟರ್ ಕೂಡ ಸೆರ್ವ್ ಮಾಡಿದ್ದು ಅವರಿಗೆ ಸಿಕ್ಕಾಪಟ್ಟೆ ಖುಶಿ ಆಗಿತ್ತು. ಅದೂ ಮನೆಯಲ್ಲೇ ಮಾಡಿದ, ಮೊಟ್ಟೆಯಿಲ್ಲದ ಪಾವ್ ಅಂತ. ಈಗಲೂ ಸಿಕ್ಕಾಗಲೆಲ್ಲ ಅದರ ಬಗ್ಗೆ ಮೆನ್ಷನ್ ಮಾಡ್ತಾರೆ.
ನಮ್ಮ ಮುಂದಿನ ಪ್ರಯೋಗ ರಾಗಿಯಿಂದ ಬ್ರೆಡ್/ಪಾವ್ ತಾಯಾರಿಸುವುದು
:-)



Maida -  200 gms
Yeast - 6 gms
Salt - 4 gms
Sugar - 10 gms
Butter - 10 gms
Olive Oil - 5ml
Dissolve yeast in warm water. Mix all the ingredients and knead to form a soft dough. Cover with oil and let it rise, for one hour.
Divide into 8 portions and shaped into pavs. wait until it doubles and bake at 250 degree C till  the top is golden brown.
The above recipe can be used for both bread as well as pav.
This bread we experimented with whole wheat floor. 



Home made pav  & bhaji

5 comments:

Unknown said...

Breads r looking yummy.Did u bake them in an OTG or microwave oven(convection type)?Malthekka...
Regards,
Geeta

nenapina sanchy inda said...

Geeta!
Microwave oven!
thanks for dropping by
:-)
malathi S

Radhika said...

Such a lovely sister you are! It must be a wonderful surprise for your sister.
Never knew making bread at home could be so easy!

Unknown said...

ನೆನಪಿನ ಸಂಚಿಯಿಂದ ನೀವು ಆಯ್ದು ತೆಗೆದ ನಿಮ್ಮ ಬಾಲ್ಯದ ಭಾವಚಿತ್ರ ಚೆನ್ನಾಗಿದೆ.ನೀವು ಮಾಡಿಟ್ಟಿದ್ದ ತಿಂಡಿಗಳು ಬಾಯಲ್ಲಿ ನೀರೂರಿಸುತ್ತಿದೆ.

nenapina sanchy inda said...

Thank you Radhika and Chandrashekar!!
:-)