ದೇವರ ಕೋಣೆ. ಬಲಬದಿಗೆಸ್ವರ್ಣ ಗೌರಿ. ನಾವು ಜುಟ್ಟು ಇರುವ ತೆಂಗಿನ ಕಾಯಿಗೆ ಕಾಡಿಗೆ ಯಿಂದ ಕಣ್ಣು, ಮತ್ತು ಅರಿಶಿನ, ಕುಂಕುಮ, ಸಿಂಧೂರ ಹಚ್ಚಿ ಗೌರಿಯ ರೂಪ ಕೊಟ್ಟು ಪೂಜಿಸುವುದು. ಹೊಸ ಬಂಗಾರದ ಆಭರಣ ಇಲ್ಲದಿದ್ದರೆ, ಹಳೆಯ ಬಂಗಾರದ ಆಭರಣ ತೊಳೆದು ಗೌರಿಗೆ ಹಾಕುತ್ತೇವೆ. ವಿಸರ್ಜನಾ ಪೂಜೆ ಮುಗಿದ ನಂತರ (ಒಂದೆರಡು ದಿನ ಬಿಟ್ಟು)ಈ ಕಾಯಿಯಿಂದ ಹೋಳಿಗೆ ಅಥವಾ ಕೊಬ್ಬರಿ ಮಿಠಾಯಿ ಮಾಡುತ್ತೇವೆ. ಗೌರಿಗೆ ನೈವೇದ್ಯವಾಗಿ ಅರಿಶಿನ ಎಲೆ ಕಡುಬು ಮಾಡುತ್ತೇವೆ. ಬಿಸಿ ಬಿಸಿ ಕಡುಬಿನ ಮೇಲೆ ತುಪ್ಪ ಹಾಕ್ಕೊಂಡು ತಿಂದರೆ....................
ಅರಿಸಿನ ಎಲೆ ಕಡುಬಿಗೆ ಕೊಂಕಣಿಯಲ್ಲಿ ಪಾತ್ತೋಳಿ ಅನ್ನುತ್ತೇವೆ
ಅಕ್ಕಿ ಒಂದು ಗ್ಲಾಸ್, ಒಂದು ಟೇಬಲ್ ಚಮಚ ನೆನೆಸಿದ ಅವಲಕ್ಕಿ, ಎರಡು ಟೇಬಲ್ ಸ್ಪೂನ್ ತಾಜಾ ತೆಂಗಿನ ತುರಿ, ಚಿಟಿಕೆ ಉಪ್ಪು ಇವಷ್ಟನ್ನೂ ರುಬ್ಬಿ ಕೊಳ್ಳುವುದು
ಅರಿಶಿನ ಎಲೆಯನ್ನು ಚೆನ್ನಾಗಿ ತೊಳೆದು ಒರೆಸಿ ಅದರ ಮೇಲೆ ಈ ಹಿಟ್ಟನ್ನು ಸಮಾನವಾಗಿ ಹರಡಿ. ಚಿತ್ರದಲ್ಲಿದ್ದಹಾಗೆ.
ಹೂರಣಕ್ಕೆ (ಚೂರ್ಣ) ಬೆಲ್ಲವನ್ನು ಪಾಕ ಬರುವ ತನಕ ಇಟ್ಟು ಅದಕ್ಕೆ ತೆಂಗಿನ ತುರಿ ಬೆರೆಸಿ. ಅದು ಗಟ್ಟಿಯಾಗಿ ಉದುರು ಉದುರು ಆಗುತ್ತಿದ್ದ ಹಾಗೆ ಒಲೆಯಿಂದ ಕೆಳಗಿಳಿಸಿ ಏಲಕ್ಕಿ ಪುಡಿ ಬೆರೆಸಿ.
ಅಕ್ಕಿ ಒಂದು ಗ್ಲಾಸ್, ಒಂದು ಟೇಬಲ್ ಚಮಚ ನೆನೆಸಿದ ಅವಲಕ್ಕಿ, ಎರಡು ಟೇಬಲ್ ಸ್ಪೂನ್ ತಾಜಾ ತೆಂಗಿನ ತುರಿ, ಚಿಟಿಕೆ ಉಪ್ಪು ಇವಷ್ಟನ್ನೂ ರುಬ್ಬಿ ಕೊಳ್ಳುವುದು
ಅರಿಶಿನ ಎಲೆಯನ್ನು ಚೆನ್ನಾಗಿ ತೊಳೆದು ಒರೆಸಿ ಅದರ ಮೇಲೆ ಈ ಹಿಟ್ಟನ್ನು ಸಮಾನವಾಗಿ ಹರಡಿ. ಚಿತ್ರದಲ್ಲಿದ್ದಹಾಗೆ.
ಹೂರಣಕ್ಕೆ (ಚೂರ್ಣ) ಬೆಲ್ಲವನ್ನು ಪಾಕ ಬರುವ ತನಕ ಇಟ್ಟು ಅದಕ್ಕೆ ತೆಂಗಿನ ತುರಿ ಬೆರೆಸಿ. ಅದು ಗಟ್ಟಿಯಾಗಿ ಉದುರು ಉದುರು ಆಗುತ್ತಿದ್ದ ಹಾಗೆ ಒಲೆಯಿಂದ ಕೆಳಗಿಳಿಸಿ ಏಲಕ್ಕಿ ಪುಡಿ ಬೆರೆಸಿ.
ಎಲೆಯ ಮಧ್ಯದಲ್ಲಿ ಹೂರಣವನ್ನು ಹೀಗೆ ಹರಡಿ ಉದ್ದಕ್ಕೆ ಮಡಚಿ.
ಹಬ್ಬಕ್ಕೆ ಮಾಡದೆ ಸುಮ್ಮನೆ ಹೀಗೆ ತಿನ್ನುವ ಮನಸ್ಸುಆದಾಗ (ಮಕ್ಕಳ ಸ್ನೇಹಿತರಿಗೋಸ್ಕರ ಮಾಡುತ್ತೇನೆ) ಮಕ್ಕಳು ಒಲೆ ಮುಂದೆನೆ ಕಾದು ಹಬೆ ಪಾತ್ರೆ ಮುಚ್ಚಳ ತೆಗೆದ ಕೂಡಲೆ ತಿನ್ನಕ್ಕೆ ತಯಾರು :-) ಅದು ಬೇಯುವಾಗ ಮನೆ ತುಂಬ ಘಮ ಘಮ
ನಾಗರಪಂಚಮಿಗೂ ಪಾತ್ತೋಳಿ ಮಾಡುತ್ತೇವೆ. ಚೌತಿ ಸಮಯದಲ್ಲಿ ಅರಿಶಿನ ಎಲೆ ತುಂಬ ಸಿಗುತ್ತದೆ. ಸುಮ್ಮನೆ ಮನೆಯ ಹಿಂದೆ ಅಥವ ಮುಂದೆ ಜಾಗ ಇದ್ದಲ್ಲಿ ಒಂದು ಸಣ್ಣ ಅರಿಶಿನದ ಗಡ್ಡೆಯನ್ನು ಹೂ ಕುಂಡದಲ್ಲಿ ಹಾಕಿಡಿ. ಹಬ್ಬದ ಸಮಯಕ್ಕೆ ಸಾಧಾರಣ 10-12 ಎಲೆಗಳು ಆಗುತ್ತವೆ
ಅರಸಿನ ಎಲೆಗಳಲ್ಲಿ ಔಷಧೀಯ ಗುಣಗಳು ಅಪಾರ
@ (ಅನಾಮಿಕ) ಅಜಯ : ಈ ಸಲ ಆಂಗ್ಲ ಪದಗಳನ್ನು ಬಳಸದೇ ಕನ್ನಡದಲ್ಲೇ ಬರೆದಿದ್ದೇನೆ, . ಅಭಿನಂದಿಸುತ್ತೀರಿ ತಾನೆ??
:-)

13 comments:
ಆಂಗ್ಲ ಪದಗಳನ್ನು ಬಳಸದೇ ಅಪ್ಪಟ ಕನ್ನಡದಲ್ಲೇ ಬರೆದಿದ್ದಕ್ಕಾಗಿ ಮೊದಲು ಅಭಿನಂದನೆಗಳು ಮಾಲತಿಯವರೇ, ಪಾತ್ತೋಳಿ ನಮಗೆ ಹೊಸ ರುಚಿ. ಮಾಡಲು ಪ್ರಯತ್ನಿಸುತ್ತೇನೆ . ಬೆ೦ಡೆಕಾಯಿ ಸ್ಟಪ್ ಎಲ್ಲರಿಗೂ ಬಹಳ ಇಷ್ಟವಾಯ್ತು. ೨ಸಲ ಮಾಡಿದೆವು! ಧನ್ಯವಾದಗಳು.
ಧನ್ಯವಾದಗಳು ಪ್ರಭಾಮಣಿಯವರೆ!!
ನೀವು ಅಡಿಗೆಯಲ್ಲಿ ನೀರುಳ್ಳಿ ಬೆಳ್ಳುಳ್ಳಿ ಬಳಸುವಿರಾದರೆ: ಬೆಳ್ಳುಳ್ಳಿ ಶುಂಠಿ ಪೇಸ್ಟ್ ಮತ್ತು ಸಣ್ಣಗೆ ಕತ್ತರಿಸಿದ ನೀರುಳ್ಳಿ ಮಿಶ್ರಣಕ್ಕೆ ಬೆರೆಸಿ. ಇದರ ರುಚಿ ನೂ ಚೆನ್ನಾಗಿರುತ್ತೆ!!
ಪಾತ್ತೋಳಿ ಮಾಡಿ ರುಚಿ ನೋಡಿ ಹೇಳುವಿರಲ್ಲಾ?
:-)
ಮಾಲತಿ ಎಸ್.
ಕನ್ನಡದಲ್ಲೇ ಬರೆದಿದ್ದಕ್ಕೆ ಮೊದಲು ಅಭಿನಂದನೆಗಳು.
ಪಾತ್ತೋಳಿಯ ಹೊಸ ರುಚಿ ನಮಗೆ ಗೊತ್ತಿಲ್ಲದ ಕಾರಣ ನೀವೇ ಒಂದಿಷ್ಟು ಪಾತ್ತೋಳಿಯನ್ನು ಮಾಡಿ ನಮಗೆಲ್ಲ ಕಳಿಸಿಕೊಡಿ, ಆಮೇಲೆ ಅದರ ರುಚಿ ನೋಡಿ ಹೇಳುತ್ತೇವೆ!!!!!
@ Praveen!!(ಮನದಾಳದಿಂದ)
ತೀರ್ಥಹಳ್ಳಿಯಲ್ಲಿ ನಿಮಗೆ ಕೊಂಕಣಿ ಮಿತ್ರರು ಇರಲಿಲ್ಲವಾ??
ಮಳೆಗಾಲ ಕಳೆದ ನಂತರ ನಮ್ಮ ತೀರ್ಥಹಳ್ಳಿಯ ತೋಟದಲ್ಲಿ ನಮ್ಮ ಮನೆ ಕಟ್ಟಿಸುತ್ತಿದ್ದೇವೆ. ಊರಿಗೆ ಬಂದಾಗ ನಮ್ಮ ಮನೆಗೆ ಬನ್ನಿ.
:-)
ಮಾಲತಿ ಎಸ್
Tumba chennagide! Pics are nice.
So I have a home to stay when I visit Tirthahalli next time :-) After Ananth maam left I have not visited Tirthahalli. I was always thinking 'Tirthahalli-ka gellari kai raabche?'
Regards,
Naveen.
:-)
thanks naveen. khavche gaDbiDintu finished product (patholi) che photo kaaDu visarrle, LOL. photos by my nymphs.
Sure first visit us here. always welcome to teerthahalli. hey btw do u install gaNapathi?? Sri said so. otherwise i wanted to invite u all.
take care
:-)
malathi S
ಪರಿಸರ ಪ್ರೇಮಿ ಗಣೇಶ ಬಲೇ ಮುದ್ದಾಗಿದ್ದಾನೆ ಮಾಲತಿಯವರೇ.
ಪಾತ್ತೋಳಿ ಎಸ್.ಎಮ್.ಎಸ್ ಮಾಡಿದರೇ ಚಂದಿತ್ತು!
Mai,
Amgele gharantu Ganesha-ka davartachi.
By the way, I too have a plan to settle down in Tirthahalli, after Amogh finishes his studies and settles down with a job. I have a dream of buying a small farm or at least a site somewhere nearby the town and build a small and sweet house. So need to see, sakkad Devaa-le ichhe.
Regards,
Naveen.
Malathi, liked the idea of growing turmeric at home. 1-2 years ago, we had many turmeric plants in our terrace garden. But never used the leaves. Need to grow again to try the delicacy :-)
@ Radhika!!
thank you. Love the turmeric flowers very much. try this sweet and tell me
:-)
ms
ಅಭಿನಂದನೆಗಳು. ಖುಷಿಯಾಯಿತು. ಹೀಗೇ ಬರೆಯುತ್ತಿರಿ.
ಧನ್ಯವಾದಗಳು ಅಜಯ!!
ತುಂಬ ಖುಶಿಯಾಯ್ತು.
:-)
ಮಾಲತಿ ಎಸ್.
Kannada pareekshe thongondre adaralli noorakke thombattu baruvudantu nija.Jai kannadambe.
Odi patholi thindashte kushiyaythu.
Veda
Post a Comment