June 26, 2011

ಉಪ್ಪಿಟ್ಟು ಮತ್ತೊಂದಿಷ್ಟು potpourri



ನನ್ನ ’ladies only' ಪೋಸ್ಟ್ ನಲ್ಲಿ ನೈನಿತಾಲಗೆ ಹೋಗುತ್ತಿರುವುದನ್ನು ಬರೆದಿದ್ದೆನಷ್ಟೆ?? ಆದರೆ  ಮೂರು ಕಾರಣಗಳಿಂದ ಅದು ರದ್ದಾಯಿತು. ಒಂದು ತಂಗಿ ಹಾಗೂ ಮಕ್ಕಳ ಜೆಟ್ ಲ್ಯಾಗ್ ಹೋಗಿರಲಿಲ್ಲ, ನಿಹಾರಿಕ IIT-madras ನ entrance ಕ್ಲಿಯರ್ ಮಾಡದೆ ಇದ್ದರಿಂದ,ಅವಳ ಇನ್ನೊಂದು option ಆದ NMKRV ಕಾಲೇಜು ಸೇರಿದಳು. ಅದು ಜೂನ್ 6 ಕ್ಕೆ ಶುರು ಆಗುವುದರಲ್ಲಿತ್ತು ಮತ್ತು ಮಾಲವಿಕ 15 ನೇ ತಾರೀಕಿಗೆ ಕೆಲಸಕ್ಕೆ ಸೇರ ಬೇಕಾದವಳಿಗೆ 5 ನೇ ತಾರಿಕಿಗೆ ಜಾಯಿನ್ ಆಗಲು ತಿಳಿಸಿದ್ದರು. ಮಾಲವಿಕ ನಿಹಾರಿಕ ರನ್ನು ಬಿಟ್ಟು ನನಗೆ ತಂಗಿಗೆ ನೈನಿತಾಲ್ ಗೆ ಹೋಗುವ ಮನಸ್ಸು ಬರಲಿಲ್ಲ. ಹಾಗಾಗಿ ladies only ಗಳುweekend ನಲ್ಲಿ ಹತ್ತಿರದ ಕೆಲವು ಪ್ರೇಕ್ಷಣಿಯ ಸ್ಥಳಗಳು ಹಾಗು ವಂಡರ್ ಲಾ ಹಾಗೂ ಆದಷ್ಟು ಸುಮಾರು ಹೋಟಲ್ ಗಳಿಗೆ ಭೆಟ್ಟಿ  ನೀಡಿದೆವು. ಶ್ರೀಕಾಂತ ಹೈದರಾಬಾದ್, ಪಟ್ನಾ ಗೆ ಟೂರ್ ಹೋಗಿದ್ದರು. ತಂಗಿ ಆಗಷ್ಟ ಎರಡನೆ ವಾರ ವಾಪಸ್ ಯು ಎಸ್ ಗೆ ಹೋಗೋದು, ಮತ್ತು ನನ್ನ ತಮ್ಮ UAE ನಿಂದ ಜುಲೈ ಎರಡನೇ ವಾರ   ಬರುತ್ತಿದ್ದಾನೆ.ಇನ್ನಷ್ಟು ಚಿಕ್ಕ ಪುಟ್ಟ ಪ್ಲಾನ್ ಗಳಿವೆ ಸುತ್ತಾಡುವುದು. ಸೊ ಇನ್ನಷ್ಟು fun on its way :-)
*****************************************************************************************************************************************
ಇತ್ತೀಚೆಗೆ ನ್ಯು ಯಾರ್ಕ್ ನಲ್ಲಿ ನಡೆದ ಅಡಿಗೆ contest ನಲ್ಲಿ ಉಪ್ಪಿಟ್ಟಿಗೆ $ 100,000 ಬಂದಿದ್ದು ಓದಿದಿರಷ್ಟೆ.
ನಮ್ಮ ಮನೆಯಲ್ಲಿ ಶ್ರೀಕಾಂತ್ ಹಾಗೂ ಮಾಲವಿಕ ಉಪ್ಪಿಟ್ಟು ಪ್ರಿಯರು. ನನ್ನ ಆಸಕ್ತಿ ಅದನ್ನು ಮಾಡಿ ಬಡಿಸುವದರಲ್ಲಿ ಮಾತ್ರ ಸೀಮಿತ. ತಿಂದರೆ ತಿಂದೆ ಇಲ್ಲದಿದ್ದರೆ ಇಲ್ಲ. ಅದು ತಿನ್ನಲೂ ಬೇರೆ ಬೇರೆ style ಗಳಿವೆ. ನಮ್ಮ ಮನೆಯಲ್ಲಿ ಎಲ್ಲರೂ ಅಡಿಗೆ ಮನೆಯಲ್ಲಿ ವಿರಾಜಮಾನರಾದ ಮೇಲೆ ನೆ ನಾನು ಹುರಿದಿಟ್ಟ ಉಪ್ಪಿಟ್ಟಿಗೆ ನೀರು ಹಾಕಿ ರೆಡಿ ಮಾಡುವುದು. ಬಾಣಲೆ ಒಲೆಮೇಲಿಂದ ಇಳಿದ ಕೂಡಲೆ ಬಿಸಿ ಬಿಸಿಯಾದ ಉಪ್ಪಿಟ್ಟನ್ನು ತಿನ್ನಲು ಮಾಲವಿಕ ಇಷ್ಟ ಪಡುತ್ತಾಳೆ. ಕೆಲವೊಮ್ಮೆ ಹಬೆಯಾಡುವ ಉಪ್ಪಿಟ್ಟಿಗೆ ತುಪ್ಪಹಾಕಿ ತಿನ್ನುತ್ತಾಳೆ. ಇಲ್ಲದಿದ್ದಲಿ ಮಿಕ್ಸರ್(ಚೂಡಾ) ಜತೆ, ಇಲ್ಲದಿದ್ದರೆ ಕರಿಬೇವಿನ ಚಟ್ನೀ ಪುಡಿ ಮತ್ತು ಮೊಸರು. ನಾನು ಗೋಡಂಬಿ ಹಾಕಿದರೆ ಅದು deluxe ಅಥವ a-classಉಪ್ಪಿಟ್ಟ್ ಆಗಿ ರೂಪಾಂತರ ಗೊಳ್ಳುತ್ತೆ. ಶ್ರೀಕಾಂತ ಗೆ ಉಪ್ಪಿಟ್ಟಿನ ಜತೆ ಕಲಿಸಿದ ಅವಲಕ್ಕಿ ಇದ್ದರೆ ಸಂತೋಷ- ಅದನ್ನು ಸಿಮೆಂಟ್-ಕಾಂಕ್ರೀಟ್ ಅನ್ನುವ ಬಿರುದು ಬೇರೆ. ಉಪ್ಪಿಟ್ಟಿನ ಜತೆ ಅವಲಕ್ಕಿ ತಿಂದರೆ ಬೇಗ ಹಸಿವೆ ಯಾಗುವುದಿಲ್ಲ ಅಂತ ಅವರೇನೋ ಅನ್ನುತ್ತಾರೆ, ಆದರೆ ನನಗಂತೂ ಉಪ್ಪಿಟ್ಟು ಮಾಡಿದ ದಿನ ಜಾಸ್ತಿ ಹಸಿವು.  ಕೆಲವೊಮ್ಮ ಉಪ್ಪಿಟ್ಟಿಗೆ side dish ಆಗೆ ಪೈನ್ ಆಪಲ್ ಪುಡ್ಡಿಂಗ್ ಅಥ್ವಾ ಶಿರಾ  ಮಾಡುತ್ತೇನೆ. ಅಂತೂ ನಮ್ಮ ಮನೆಯಲ್ಲಿ ವಾರಕ್ಕೆರಡು ದಿನ ಉಪ್ಪಿಟ್ಟು ಕಟ್ಟಿಟ್ಟ ಬುತ್ತಿ :-)
ಅಮ್ಮ ಕೆಲ ಸಮಯದ ಹಿಂದೆ 6 ತಿಂಗಳ ಮಟ್ಟಿಗೆ ನನ್ನ ತಂಗಿಯ ಬಳಿಗೆ ಅಮೆರಿಕ ಕ್ಕೆ ಹೋಗಿದ್ದರು. ಆಗ ತಂದೆಯವರನ್ನು ನಾನು ಬೆಂಗಳೂರಿಗೆ ಮತ್ತು ನನ್ನ ತಮ್ಮ ಮುಂಬೈಗೆ ಕರೆದರೂ ಅವರು ಎಲ್ಲೂ ಬರಲು ಒಪ್ಪಲಿಲ್ಲ. ನಮ್ಮ ತಂದೆಗಂತು ಅಡಿಗೆ ಮನೆಗೆ ಹೋಗಿ ಗೊತ್ತೇ ಇರಲಿಲ್ಲ. ಅಮ್ಮ ಕೆಲದಿನಗಳಿಗಾಗುವಷ್ಟು ಪಲ್ಯ ಸಾಂಬಾರ ರೆಡಿ ಮಾಡಿ ಫ್ರಿಜ್ ನಲ್ಲಿ ಹಾಕಿಟ್ಟಿದ್ದರೂ ಅದು ಎಷ್ಟು ದಿನ ನಡೆಯುತ್ತೆ. ಅವರಿರೋದು ಬೆಳಗಾವಿಯಲ್ಲಿ.  ಯಾವಾಗ ನೋಡಿದರೂ ಪವರ್ ಕಟ್. ಮನೆಯ ರೂಮು ಗಳಿಗೆ ಇನ್ವರ್ಟರ್  ಸೌಲಭ್ಯವಿದ್ದರು,  ಫ್ರೀಜ್ ಗೆ , ಮಿಕ್ಸಿಗೆ ಅದನ್ನು ಅಳವಡಿಸಿರಲಿಲ್ಲ.  ಅಮ್ಮ ಅವರಿಗೆ ಕುಕ್ಕರ್ ನಲ್ಲಿ ಅನ್ನ ಬೇಯಿಸುವುದನ್ನು ಕಲಿಸಿ ಕೊಟ್ಟರು. ಮೈಕ್ರೋ ವೇವ್ ನಲ್ಲಿ ಅಡಿಗೆ ಬಿಸಿ ಮಾಡುವುದನ್ನು ಹೇಳಿ ಕೊಟ್ಟರು. ಬೆಳಿಗ್ಗೆ ಅಪ್ಪ ದಿನಾ ಬ್ರೆಡ್ ತಿನ್ನುತ್ತಿದ್ದರು. ಅಮ್ಮನ ಪಲ್ಯ ಸಾಂಬಾರ್ ಮುಗಿದ ಮೇಲೆ ಅಪ್ಪ ಅನ್ನ ಬೇಯಿಸಿ ಅದಕ್ಕೆ ಹಾಲು ಹಾಕ್ಕೊಂಡು ಉಣ್ಣುತ್ತಿದ್ದರು. ಮದ್ಯ ಮಧ್ಯ ಪುರುಸೊತ್ತು ಮಾಡಿಕೊಂಡು ನಾನು ಹೋಗಿ ಬರುತಿದ್ದೆ. ಆಗ ನನಗೆ ಉಪ್ಪಿಟ್ಟಿನ ರಡಿ ಮಿಕ್ಸ್ ಮಾಡಿ ಕೊಡುವ idea ಹೋಳೀತು. ಎಣ್ಣೆಯಲ್ಲಿ ಸಾಸಿವೆ, ಕರಿಬೇವು, ಸಣ್ಣಕ್ಕೆ ಕತ್ತರಿಸಿದ ಹಸಿಮೆಣಸಿನಕಾಯಿ, ಗೋಡಂಬಿ ಚೂರು ಒಗ್ಗರಣೆಗಿಟ್ಟು, ಅದರಲ್ಲಿ ಬಾಂಬೆರವೆಯನ್ನು ಹಾಕಿ, ಸಣ್ಣ ಉರಿ ಮೇಲೆ ಹುರಿದು, ಅದು ಗಮ್ಮೆನ್ನುವ ಪರಿಮಳ ಬೀರಿದಾಗ ಉಪ್ಪು ಸಕ್ಕರೆ ಕೊತ್ತಂಬರಿ ಸೊಪ್ಪು ಹಾಕಿ ಇನ್ನೂ ಸ್ವಲ್ಪ ಹೊತ್ತು ಬಾಣಲೆಯಲ್ಲಿ ಹುರಿದೆ. ಪೂರ್ತಿ ತಣ್ಣಗಾದ ಮೇಲೆ ಅದನ್ನು ಡಬ್ಬಿಯೊಳಗೆ ಹಾಕಿಟ್ಟು. ಅಪ್ಪನಿಗೆ ಒಂದು ಗ್ಲಾಸ್ ಉಪ್ಪಿಟ್ಟಿನ ರೆಡಿ ಮಿಕ್ಸ್ ಗೆ ಮೂರು ಗ್ಲಾಸ್ ನೀರು ಕುದಿಸಿ ಹಾಕಲು ಹೇಳಿದೆ. ಅಪ್ಪನಿಗಂತೂ ತುಂಬ ಖುಶಿ. ಎರಡು ದಿನಕ್ಕೊಂದು ಸಲ ಅದನ್ನೆ ಮಾಡಿ ತಿನ್ನುತ್ತಿದ್ದರು. ನನಗೆ ಬೇಜಾರು ಬಂತು. ಅಮ್ಮ ಸೀಸನ್ ನಲ್ಲಿ ಬಟಾಣಿ ಕಾಳನ್ನು (green peas) ನ್ನು freeze ಮಾಡಿಡುತ್ತಾರೆ. ಸ್ವಲ್ಪ ನೀರುಳ್ಳಿ ಟೊಮೇಟೊ, ತುರಿದ ಕ್ಯಾರೆಟ್ ಹಾಕಿ vegetable ಉಪ್ಪಿಟ್ಟು ಹೇಳಿಕೊಟ್ಟೆ. ಅದಾದ ಮೇಲೆ ರೆಡಿ ಮಿಕ್ಸ್ ಗೆ ತರಕಾರಿ ಚೂರು ಬೆರೆಸಿ, ಮೊಸರನ್ನು ಬೆರೆಸಿ, ಒಂಚೂರು ಸೋಡಾ ಪುಡಿ ಬೆರೆಸಿ ರವಾ ಇಡ್ಲಿ ಮಾಡಲು ಕಲಿಸಿದೆ. ಮುಂದೊಮ್ಮೆ ಹೋದಾಗ ಉದ್ದು ಮೈದಾ ದೋಸೆ ಹಿಟ್ಟು ಮಾಡಿ ಕೊಂಡು ಹೋದೆ. ಆ ದೋಸೆ ಬಗ್ಗೆ ಅಂತೂ ಅಪ್ಪ totally mesmerized. ಪೇಪರ್ ತರಹ ತೆಳುವಾದ crisp ದೋಸೆ ಹುಯ್ಯಬಹುದು. ಹಿಂಗಿನ ಚಟ್ನಿ ಇದ್ದರಂತೂ........ಅಪ್ಪ ನನಗೆ ಫೋನ್ ಮಾಡಿ ಅದನ್ನು ಮಾಡುವ ವಿಧಾನದ ಬಗ್ಗೆ ಕೇಳಿ ತಿಳಿದುಕೊಂಡರು. (ಅದು ನನ್ನ top secret recipe) ಅದರ ರೆಸಿಪಿ ಇಲ್ಲಿ ಬರೆಯಲ್ಲ. ಮುಂದೊಮ್ಮೆ ನಾನು ಮಾಲವಿಕ ಸೇರಿ ಒಂದು restaurant ತೆರೆಯುವವರಿದ್ದೇವೆ. ಆಗ ನೀವೆಲ್ಲ ಬಂದು ಆ ದೋಸೆಯನ್ನು ಸವಿಯಬಹುದು.) ನನ್ನ ಅಮ್ಮ ಮಾಡುವುದಕ್ಕಿಂತ ಚೆನ್ನಾಗಾಗುತ್ತದೆಂದು ಅಪ್ಪನ ಶಿಫಾರಸ್ಸು ಬೇರೆ ಇದೆ ಈ ದೋಸೆಗೆ).ಹೀಗೆ ಆರು ತಿಂಗಳು ಅಪ್ಪನದು ಮಿಕ್ಸ್ ಅನ್ಡ್ ಮ್ಯಾಚ್ ಅಡುಗೆ.
ಅಕ್ಕನ (ಮಾಲವಿಕ) ಕಾಲೇಜು ಮೇಟ್ ಗಳು ಹೆಚ್ಚಾಗಿ northies. ಗೌರವ್ ಮತ್ತು ಹರ್ಷ್ ,  ಒಂದು ಸಂಜೆ ಹಸಿವೆಯಾದಾಗ ಹೋಟೆಲ್ ಗೆ ಹೋಗಿ ಮೆನ್ಯು ನಲ್ಲಿದ್ದ ಚೌ ಚೌ ಭಾತ್ ಗೆ ಆರ್ಡರ್ ಕೊಟ್ಟರಂತೆ. ನಂತರ ಮಾಲವಿಕನಿಗೆ ಫೋನ್ ಮಾಡಿ ’ಕ್ಯಾ ಯಾರ್! ಹಮ್ ನೆ ಸಮಝಾ ಚೌ ಚೌ ಭಾತ್ ಯಾನೆ ಕೊಯಿ ಚೈನೀಸ್ ಡಿಶ್ ಮಿಲೆಗಾ ಖಾನೆ ಕೆ ಲಿಯೆ, ಯೆ ಕ್ಯಾ ಯೆ ತೊ ಉಪ್ಮಾ, ಸುಜಿ ಕಾ ಸ್ವೀಟ್ ಔರ್ ಮಿಕ್ಸರ್ ದಿಯಾ ಹೈ...
*****************************************************************************************************************************************
ತಂಗಿಗೆ ಮನೆಯಲ್ಲಿದ್ದಾಗಲೆಲ್ಲ ಅವಳ ಇಷ್ಟವಾದ ಅಪರೂಪದ ಅಡುಗೆಗಳನ್ನು ಮಾಡಿ ಕೊಡುತ್ತಿದ್ದೆ.
ಅದರಲ್ಲಿ ,ಮಾವಿನಹಣ್ಣಿನ ಹುಮ್ಮಣ (a konkani Recipe) ಒಂದು. ಅದರ ಚಿತ್ರ ಕೆಳಗಿದೆ
ಸಿಪ್ಪೆ ಸುಲಿದ 4-5 ಸಿಹಿ ಹುಳಿ ಜಾತಿಯ ಚಿಕ್ಕ ಮಾವಿನ ಹಣ್ಣು, ಹಸಿ ಮೆಣಸು, ಬೇಯಿಸಲು ನೀರು , ಉಪ್ಪು , ಬೆಲ್ಲ. ಚೆನ್ನಾಗಿ ಕುದಿ ಬಂದ ನಂತರ ಅರ್ಧ ಟೀ ಸ್ಪೂನ್ ಮೈದಾವನ್ನುಕಾಲು ಗ್ಲಾಸ್ ನೀರಿನಲ್ಲಿ ಕದಡಿ, ಗುಳ್ಳೆಗಳಾಗದಂತೆ ತಯಾರಿಸಿ, ಕುದಿಯುತ್ತಿರುವ ಮಿಶ್ರಣಕ್ಕೆ ಹಾಕಿ. ಇನ್ನೊಂದು ಕುದಿ ಬಂದ ನಂತರ ಒಲೆಯಿಂದ ಕೆಳಗಿಳಿಸಿ, ಉದ್ದು ಸಾಸಿವೆ,ಕರಿಬೇವು, ಹಿಂಗು, ಒಣ ಮೆಣಸಿನ ಒಗ್ಗರಣೆ ಕೊಡಿ. ಈಗಂತೂ ಅದರ ಸೀಸನ್ ಮುಗೀತು. ಚಿತ್ರ ನೋಡಿ ಯೆಂಜಾಯ್ ಮಾಡಿ  :-)


ವಂಡರ್ ಲಾ ಗೆ ಹೋದಾಗ ಒಂದು ದೊಡ್ಡ ಮುಸ್ಲಿಮ್ ಕುಟುಂಬ ಬಂದಿತ್ತು. ವೇವ್ ಪೂಲ್ ಅನ್ನುವ ಆಟ ಒಂದಿದೆ. ಅಲ್ಲಿ ಕೃತಕವಾಗಿ ಸಮುದ್ರ ದ ಅಲೆಗಳನ್ನು ನಿರ್ಮಿಸಲಾಗಿದೆ. ಎಲ್ಲ ಮುಸ್ಲಿಮ್ ಹೆಣ್ಣುಮಕ್ಕಳು, ಬುರ್ಖಾ ಹಾಕಿಕೊಂಡೆ enjoy ಮಾಡಿದರು. ನಾನು ನೀರಿಗಿಳಿದಿರಲಿಲ್ಲ. ಅವರನ್ನು ನೋಡಿ ನಾನೂ ಖುಶಿ ಪಟ್ಟೆ.

****************************************************************************************************************************************
ಶ್ರವಣಬೆಳಗೊಳ
ಕಷ್ಟಪಟ್ಟು ಹತ್ತುತ್ತಿರುವ ನಾನು

ಮೆಟ್ಟಿಲುಗಳನ್ನು ನೋಡಿ ನಾನಂತು ಹತ್ತಲು ತಯಾರಿರಲಿಲ್ಲ. ಶ್ರೀಕಾಂತ ಮತ್ತೆಲ್ಲರೂ ಗಾಳಿ ಹಾಕಿದ್ದೆ ಹಾಕಿದ್ದು. ’you can do it malathi’ . ಹತ್ತತ್ತೆ ಮೆಟ್ಟಿಲು ಹತ್ತು ಅಮೇಲೆ ರೆಸ್ಟ್, ಅಂಥೇಳಿ ಹತ್ತಿ ಗೊಮ್ಮಟ ಮೂರ್ತಿಯನ್ನು ನೋಡಿದೆ. ಇಳಿಯುವಾಗ ಮಾತ್ರ ಎರಡೆ ನಿಮಿಷಕ್ಕೆ ನಾನು ಕೆಳಗೆ. ಪುಟ್ಟ ಶ್ರೇಯ ತನ್ನ ಅಕ್ಕ ಹಾಗೂ ನಮ್ಮ ಮಾಲವಿಕನ ಜತೆ ಯಾರು ಮೊದಲು ಕೆಳಗೆ ಇಳಿಯುವುದು ಸ್ಪರ್ಧೆಯಲ್ಲಿ, ನನ್ನ ಕೈ ದರದರನೆ ಎಳೆದು ಇಳಿಸಿದಳು. ಇಳಿಯೋದೇನೋ ಮಾಡಿದೆ. ಆದರೆ ಕೆಳಗೆ ಕೂತ ಮೇಲೆ ಕಾಲು ತರತರನೆ ಕಂಪಿಸಿ ಹೊರಡಲು ಮುಷ್ಕರ ಬೀರಿದವು. ಈಗಲು ನನ್ನ ಬಲಗಾಲು ಹೆಜ್ಜೆ ಹಾಕುವಾಗ ಟಕಟಕ ಅನ್ನುತ್ತಿದೆ.

ಗೊಮ್ಮಟ ಮೂರ್ತಿ
ಅಲ್ಲಿಂದ ಬೇಲೂರು ಹಳೆಬೀಡು ಹೋಗಿದ್ದೆವು. ಅದರ ಬಗ್ಗೆ ಇನ್ನೊಮ್ಮೆ ಬರೆಬಹುದು ಅನ್ನಿಸುತ್ತೆ!!
***************************************************************************************************************************************
ಒಂದು ಗುಡ್ ನ್ಯೂಸ್ : ಪ್ಲ್ಯಾಸ್ಟಿಕ್ ಬಳಕೆ ನಿಜಕ್ಕೂ ಕಡಿಮೆಯಾಗಿದೆ. ತರಕಾರಿ ಅಂಗಡಿಯವರು ಪೇಪರ್ ಬ್ಯಾಗ್ ಗಳನ್ನು ಬಳಸುವಲ್ಲಿ ಬದ್ದರಾಗಿದ್ದಾರೆ. ಪ್ಲ್ಯಾಸ್ಟಿಕ್ ದರ ಜಾಸ್ತಿಯಾಗಿದೆ, ಅಲ್ಲದೆ ಬೇರೆ ಕಡಿಮೆ ದರದ ಪ್ಲ್ಯಾಸ್ಟಿಕ್ ಬಳಸಿದ ನಮ್ಮ ತರಕಾರಿ ಅಂಗಡಿಯವನಿಗೆ ಈಗಾಗಲೇ 1000 ರೂ ನ ದಂಡ ವಿಧಿಸಲಾಗಿದೆ. ನಾನು ಮೊದಲೆಲ್ಲ ಯಾಕ್ರಿ ಗಿರಾಕಿಗಳಿಗೆ ಪ್ಲ್ಯಾಸ್ಟಿಕ್ ಕೊಡ್ತೀರಿ, ಮನೆಯಿಂದ ಚೀಲ ತರಲಿಕ್ಕೆ ಹೇಳಿ ಅಂದರೆ, ಅವನು ಮ್ಯಾಡಂ ನಾನು ಹಾಗಂದ್ರೆ ನನಗೆ ವ್ಯಾಪಾರ ಆಗೋದು ಬೇಡ್ವಾ? ನಾನು ಕೋಡಲ್ಲ ಅಂದ್ರೆ ಅವರು ಬೇರೆ ಅಂಗಡಿಗೆ ಹೋಗ್ತಾರೆ ಅಷ್ಟೆ, ಅಂತ ನನಗೇ ಪ್ರಶ್ನೆ ಹಾಕುತ್ತಿದ್ದ. ಈಗ ನನಗೆ ’ನಿಮ್ಮ ಬಳಿ ಇರುವ ಚೀಲ ಎಲ್ಲಿ ಸಿಗುತ್ತೆ ಮ್ಯಾಡಂ? ನಾನು ಅದನ್ನೆ ಇಲ್ಲಿ ಮಾರುತ್ತೇನೆ ಅಂತಿದ್ದಾನೆ. ಅಂದ ಹಾಗೆ ನನ್ನ ಪುಟ್ಟ foldable ಬಟ್ಟೆ ಚೀಲ ಕೇವಲ 15 ರೂ. 5 ಕೆ.ಜಿಯಷ್ಟು ವಜನ್ ತಾಳುತ್ತದೆ. ಮುಂಬೈನಲ್ಲಿ ಸಿಗುತ್ತದೆ. ವಾಶ್ ಮಾಡಿದ್ರೆ ಬೇಗ ಒಣಗುತ್ತದೆ ಕೂಡ. ಈಗ ಆ ಬ್ಯಾಗ್ ಗೆ ತುಂಬ ಡಿಮಾಂಡ್ ಇದೆ. ಎಲ್ಲರೂ ನನಗೆ ಆ ತರಹ ಬ್ಯಾಗ್ ತಂದು ಕೊಡಿ ಮ್ಯಾಡಂ ಅನ್ನುತ್ತಾರೆ.
ನನಗೆ ವಸುಧೇಂದ್ರರ ಬಗ್ಗೆ ತುಂಬ ಹೆಮ್ಮೆ. ಅವರು ಪುಸ್ತಕ ಬಿಡುಗಡೆಯ ದಿನ ಅವರ ಪುಸ್ತಕಗಳನ್ನು ನೀಟಾಗಿ ಮುದ್ದಾದ, ಅವರ ಛಂದ ಪ್ರಕಾಶನದ ಲೋಗೊ ಇರುವ ಪೇಪರ್  ಬ್ಯಾಗ ನಲ್ಲಿ ಕೊಡುತ್ತಾರೆ. ಎಲ್ಲರೂ ನಮ್ಮ ಪರಿಸರ ಉಳಿಸುವುದಲ್ಲಿ ಚಿಕ್ಕ ಚಿಕ್ಕ ಪ್ರಯತ್ನ ಮಾಡಿದರೆ ನಮ್ಮ ಮುಂದಿನ ಪೀಳಿಗೆಗೆ ಒಳ್ಳೆಯ ಪರಿಸರವನ್ನು(environment) ಒದಗಿಸಬಹುದು. ಜನರು ಎಚ್ಚೆತ್ತುಕೊಳ್ಳಬೇಕಾದ ತುರ್ತು ಅವ್ಶ್ಯಕತೆ ಇದೆ. ಈಗಾಗಲೇ ಮಳೆ ಕಡಿಮೆಯಾಗಿದೆ. ನಾವು ಬೆಂಗಳೂರಿಗೆ ಬಂದ 11  ವರ್ಷದಲ್ಲಿ  ಮಳೆಯ ಪ್ರಮಾಣ ಕಡಿಮೆಯಾಗುತ್ತ ಬಂದಿದೆ. ಅಷ್ಟೆ ಅಲ್ಲ ಇತ್ತೀಚೆಗೆ ನಮಗೆ ಕುಡಿಯುವ ನೀರು ಎರಡು ದಿನಕ್ಕೊಮ್ಮೆ ಬರುತ್ತಿದೆ. ಇವೆಲ್ಲ ಆತಂಕಕಾರಿ ಬೆಳವಣಿಗೆಗಳು. ನಮ್ಮ ಪಕ್ಕದ ಮನೆಯವ environmental engineer ಅಂತೆ. ಆದರೆ ಅವರು ಬಳಸುವಷ್ಟು ಪ್ಲ್ಯಾಸ್ಟಿಕ್, ಅಥ್ವಾ ಕಾರು ತೊಳೆಯಲು ಬಳಸುವ ನೀರನ್ನು ಕಂಡು ಅಥವಾ ದೀಪವಾಳಿಗೆ ಅವನು ಸುಡುವ ಪಟಾಕಿಗಳನ್ನು ಕಂಡರೆ ನನಗೆ ನಿಜಕ್ಕೂ ಸೋಜಿಗ.
ಇಷ್ಟೆಲ್ಲದರ ನಡುವೆ ದೇಶಕಾಲ -25 ಓದಿ ಮುಗಿಸಿದೆ. V.S. Ramachandran ಅವರ ’ಟೆಲ್ ಟೇಲ್ ಬ್ರೈನ್’ ಇನ್ನು ಓದಲು ಶುರು ಮಾಡಬೇಕಷ್ಟೆ.
ಇಲ್ಲಿಗೆ ನನ್ನ potpourri ಪ್ರವರ ನಿಲ್ಲಿಸುತ್ತೇನೆ.

:-)

7 comments:

ಸವಿಗನಸು said...

eshtondu vishya ee saari....chennagittu....

Badarinath Palavalli said...

Malathi avare,
You have given too many subjects in single post.
Hence, I have commented number wise.
1. I think summer is better period to visit Nainital .
2. Aha Aha Secret recipe? What will be the restaurant name? ex., “Malshree”
3. We will try Mango Hummata, but u shall have mentioned is it a starter or can be used with chapati?
4. Wonderla is a wonderful place. I had chance to shoot number of episodes of Top 10 for E Tv Kannada. Even I never tried waters.
5. 3 years back we shot a program near Shravana Belagola called “ooruru oota”, the village name was Kothanagatta. One day we decided to climb the hill. In the climbing competition I was 16th one. (We were 16 people in total!)
6. We have personally stopped usage of plastic bags. We are carrying cloth bags to the provision stores. Where can we get the foldable bag you have mentioned here?
7. Which category book is “Desha kala -25”.

nenapina sanchy inda said...

Badari!!!
tumbaa thanks step by step commentge..aadre uppiT bagge enu baredillaa. u like uppiT or not?? Restaurant hesaru will be totally special since there r three creative genius minds at home(naanallaa) :-)
Nainital eega yaakendre malavika kelasakke serO munna ondu break avaLige antaa
Mango hummaNa is a stand alone dish. u can have it at the beginning or the end of ooTaa. :-)
I did not get down into water this time because i was carrying the kids (sisters') medicine bag with me. They r allergic to many things.
shravana belagola: i was the last one to ascend but the first to descend
Desha kaala is cute little literary magazine. u should read it. its already in the sixth year of publication
haha was my comment bit longer than yours hanh????
:-)
ms

nenapina sanchy inda said...

thank you Mahesh!!
:-)

ಸವಿಗನಸು said...

malathi....
namma manelu bisi uppit andre ellarigu ishta...nimma tips na try madtiwi

Anonymous said...

WAH ESHTELLA VICHARAGALANNU, ONDHE POTNALLI HAKI POUR MADIDDIRA.
1.UPPITTU ADHOO GODAMBI+THARKARI HAKI ,YARADRU MADKOTRE NANGU TUMBA ISHTA(ADRE NANE MADIDRE TINNODU KASHTA). MANEYALLI NANE KONEYAVLADRINDA, INTAHA READY MIXGALELLA DARALVAGI BARTITTU, AYYO PAPA IVULU MANE,GANDA+ KELSA ELLANU HEGE NIBAYISTHALO ANNO ANUKAMPADINDA?? NANDU ONDERADU BHAYANKARA RECIPE SECRETES IDE, NEEVU RESTAURA SHURU MADIDAGA TILISTINI.
2. INNU HUMMANADA SOGASADA CHITRA KALSI DUMMANNAGALA HOTTE URISTHIRALLA IDU NYAYANA?
3.WONDERLAW IS AN ENJOYABLE PLACE. WE HAD BEEN THERE ONCE.ODI HALE NENAPUGUALU MARUKALISIBIDTHU-----
4.NANU SHRAVANABELAGOLA NODILLA.YES ITS TRUe MELAKKE HATTODU TUMBA KASHTA ADRE ILYODU TUMBA SULABA!!
5.HOWDU PLASTIC BALAKE KAMMI AGIDHE. SUMARU ANGADIYAVRU PLATIC CHEELA KELIDRE 2RS CHARGE MADTHARE. I USUALLY CARRY BATTE BAG WITH ME .
veda

Nivedita Thadani said...

HI Malathi
thanks for visiting my blog and for the comments. Sorry for delayed reply.I am still on break. I think the word Caste has been replaced with Cast when I was doing spelling check, you can see that I have written Caste in labels.
Thanks again for informing me..
Keep visiting. whats your opinion about the caste system?