ಯಾವತ್ತಿನ ಹಾಗೆ ಇನ್ನೊಂದು unplanned visit. ಈ ಸಲ ಮೇಲುಕೋಟೆಗೆ.
ಮಂಡ್ಯ ಜಿಲ್ಲೆಯ, ಪಾಂಡವಪುರ ತಾಲೂಕಿನ ಹೋಬಳಿ.ಮೇಲುಕೋಟೆ 3589’ ಎತ್ತರದ ತಾಲೂಕಿನ ಅತಿ ಎತ್ತರದ ಗುಡ್ಡ ಪ್ರದೇಶ. ಗ್ರಾನೈಟ್ ಶಿಲೆಗಳಿಂದ ಕೂಡಿದ ಸಮೃದ್ಧ ಬೆಟ್ಟ. ಬೆಂಗಳೂರಿನಿಂದ ಸಾಧಾರಣ 130 ಕಿ.ಮಿ
ಚೆಲುವನಾರಾಯಣ ಸ್ವಾಮಿ ದೇವಾಲಯ ಮೇಲುಕೋಟೆಯ ಮುಖ್ಯ ದೇವಾಲಯ. ಚಚೌಕಾಕಾರದ ವಿಸ್ತಾರವಾದ ಕಟ್ಟಡ. ಸುತ್ತಲೂ ಕೈ ಸಾಲೆ, ಚಿಕ್ಕ ಗುಡಿಗಳು, ಯjnya ಶಾಲೆಗಳಿವೆ.
ದೇವಸ್ಥಾನದ ಬೀದಿಯಲ್ಲೆಲ್ಲ ಸುತ್ತ ಮುತ್ತ ಹಲವಾರು ಗುಡಿ, ಮಂಟಪ ಹಾಗೂ ಕೊಳಗಳಿವೆ. this is one of the unfinished manTapa
ಯೋಗಾನರಸಿಂಹ ಸ್ವಾಮಿ ದೇವಸ್ಥಾನದ ಗೋಪುರ
ಮೇಲಕ್ಕೇರುವ ಮೆಟ್ಟಿಲು ಪ್ರದೇಶ
ಶ್ರೀಕಾಂತ್ ಅರಸಿನ ಬಣ್ಣದ ದಾರದಲ್ಲಿ ಕಟ್ಟಿದ ಒಂದು ತಾಯಿತ ಕೊಂಡು ಕೊರಳಿಗೆ ಹಾಕ್ಕೊಂಡ್ರು, ಕಾಣಿಸುತ್ತ? :-)
ಬೆಳಿಗ್ಗೆ ದೋಸೆ ತಿಂದು 8.30 ಗೆಲ್ಲ ಮನೆ ಬಿಟ್ಟಿದ್ದು.ಅಡಿಗೆ ಮಾಡಕ್ಕೆ ಪುರುಸೊತ್ತು ಇರಲಿಲ್ಲ. ಮೇಲುಕೋಟೆಯಲ್ಲಿ ಪುಷ್ಕಳವಾಗಿ ಸಿಗುವ ಮಸಾಲಾ ನೀರು ಮಜ್ಜಿಗೆ ಕುಡಿದೆವು, ತುಂಬ ಚೆನ್ನಾಗಿತ್ತು ಬಿಸಿಲಿಗೆ! ಮಧ್ಯಾನ್ಹ ಅಲ್ಲಿ ಪ್ರಸಾದ ಭೋಜನ ಎಂದು ಬೋರ್ಡ್ ನೋಡಿ ಅಲ್ಲಿಗೆ ಹೋದೆವು.
we had our afternoon lunch in that pink structure!
20ರೂ ನ ಟಿಕೆಟ್ ಪಡೆದು (ಅಂದರೆ ಕೇವಲ ನಲವತ್ತು ಜನರಿಗಾಗಿ)ಊಟ ಮಾಡುವ ವ್ಯವಸ್ಥೆ.ಮೊದಲು ಟಿಕೆಟ್ ಖಾಲಿಯಾಗಿದೆ ಅಂದರೂ, ನಾಲ್ಕೆ ಜನ ತಾನೆ?? ಸಾರು ಪಲ್ಯ adjust ಮಾಡ್ತೀರಾ ಅಂತ ಕೇಳಿ ನಮಗೆ ಪಕ್ಕದ ಬಾಗಿಲಿನಿಂದ ಒಳಗೆ ಬಿಟ್ಟರು. ಆಗಲೇ ಹಾಲ್ ಭರ್ತಿಯಾಗಿತ್ತು. ಅನ್ನ,ಬಿಸಿ ಬಿಸಿ ಸಾರು, ಸೀಮೆ ಬದನೆ ಪಲ್ಯ ಹಸಿದ ಹೊಟ್ಟೆಗೆ ಸಖತ್ ಆಗಿತ್ತು. adjust ಮಾಡುವ ಪ್ರಮೇಯ ಬರಲೇ ಇಲ್ಲ. ಹೊಟ್ಟೆ ತುಂಬ ಊಟ ಬಡಸಿದರು. ನಮ್ಮ ತಟ್ಟೆ ನಾವೆ ಎತ್ತಿಕೊಂಡು ಹೊರಗಿಡವ ವ್ಯವಸ್ಥೆ. ನಮಗೆ ಟಿಕೆಟ್ ಇಲ್ಲದೇ ಊಟ ಬಡಿಸಿದರು ಅದಕ್ಕೆ ಶ್ರೀಕಾಂತ್ ಅವರಿಗೆ ೨೫ ಕೆ.ಜಿ ಅಕ್ಕಿಗೆ ಆಗುವಷ್ಟು ಹಣ ದೇಣಿಗೆಯ ರೂಪದಲ್ಲಿ ಕೊಟ್ಟರು.
ಪುಷ್ಕರಣಿ/ಕಲ್ಯಾಣಿ ಬಳಿ ಸ್ವಲ್ಪ ಸಮಯ spend ಮಾಡಿ,ಮೂರು ಗಂಟೆಯ ಹೊತ್ತಿಗೆ ನಾವು ಶ್ರೀ ಸುರೇಂದ್ರ ಕೌಲಗಿಯವರನ್ನು ಭೇಟಿ ಮಾಡಲು ಹೋದೆವು. prior appointment ಏನೂ ತೆಗೆದುಕೊಂಡಿರಲಿಲ್ಲ, ಹಾಗೂ ಹಿರಿಯ ಜೀವ ಊಟದ ನಂತರ ವಿಶ್ರಮಿಸುತ್ತಿರಬಹುದೆಂದು ಕೊಂಡು ಅವರ ಮನೆ ಬಾಗಿಲಿನ ತನಕ ಹೋದೆವು. ಬಾಗಿಲು ತೆರೆದೇ ಇತ್ತು. ಸಣ್ಣಕ್ಕೆ ಬಾಗಿಲಿನ ಸದ್ದು ಮಾಡಿದಾಗ ಅವರ ಮಗ ಬಂದರು. ನಮಗೆ ಒಳಗೆ ಕರೆದು, ನಾವು ಬಂದ ವಿಚಾರ ಕೇಳಿದರು. ಅವರ ತಂದೆ ಏಳುವ ಹೊತ್ತಾಯಿತೆಂದು ಕೂತುಕೊಳ್ಳಲಿಕ್ಕೆ ಹೇಳಿದರು. ಹಿರಿಯ ಕೌಲಗಿಯವರು ತಮ್ಮ ಸಂಸ್ಥೆ ಜನಪದ ಸೇವಾ ಟ್ರಸ್ಟ್ ಬಗ್ಗೆ ಹೇಳಿದರು, ನಮ್ಮ ಸಂಸ್ಥೆಗಳ ಬಗ್ಗೆ ತುಂಬ ಆಸ್ಥೆಯಿಂದ ಕೇಳಿಸಿಕೊಂಡರು.
ಹಿರಿಯ ಗಾಂಧಿವಾದಿ,(who follows the sarvodaya way of life)ಜಾನಪದ ಸೇವಾ ಟ್ರಸ್ಟ್ ನ ರುವಾರಿ ಶ್ರೀ ಸುರೇಂದ್ರ ಕೌಲಗಿಯವರ ಮನೆಯಲ್ಲಿ.
ಅವರ ಮನೆಯಲ್ಲಿನ ಹೆಂಗಸರು ಯಾವುದೋ ಕಾರ್ಯಕ್ರಮಕ್ಕೆ ಹೋಗಿದ್ದರಿಂದ, ಶ್ರೀ ಕೌಲಗಿ ಅವರ ಮಗ, ಎಷ್ಟು ಬೇಡವೆಂದರೂ ಸಕ್ಕರೆ ಹಾಕಿದ ಬಿಸಿ ಹಾಲು , ಬಾಳೆ ಹಣ್ಣು ತಂದು ಕೊಟ್ಟರು. ಹಾಲು ಬಿಸಿಯಾಗುತ್ತಿದ್ದ ಹಾಗೆ ನಾವು ಅವರ ಬಳಿಯಿದ್ದ ದೊಡ್ಡ ಅಲ್ಬಂ ನಲ್ಲಿ ಶ್ರೀ ಕೌಲಗಿಯವರು ದೇಶ ವಿದೇಶದ ಗಣ್ಯರೊಂದಿಗಿನ ಹಳೆಯ ಕಪ್ಪು-ಬಿಳುಪಿನ ಫೋಟೊ ಗಳನ್ನು ನೋಡುತ್ತ ,ಸಮಯ ಸರಿದಿದ್ದೆ ತಿಳಿಯಲಿಲ್ಲ. ಅವರ ಮನೆಯ ಹಿಂಬದಿಯಲ್ಲಿ ಪುಟ್ಟ ಕೈತೋಟವಿದ್ದು, ಅಲ್ಲಿ ಹೂವು ತರಕಾರಿ ಬೆಳೆಸಿದ್ದಾರೆ. ಮನೆಯೊಳಗಡೆ ತುಂಬ ತಂಪಾಗಿತ್ತು.ಮೊಮ್ಮಗ ಹುಟ್ಟಿದ ಸಂಭ್ರಮದಲ್ಲಿದ್ದರವರು. ನಾವು ಅವರಿಗೋಸ್ಕರ ನಮ್ಮ ಊರಿನ (ತೀರ್ಥಹಳ್ಳಿಯ)ಕೆಂಪು ಅಕ್ಕಿ ತೆಗೆದುಕೊಂಡು ಹೋಗಿದ್ದೆವು.
ಸುರೇಂದ್ರ ಕೌಲಗಿ ಹಾಗೂ ಅವರ ಮಗ ಸಂತೋಷ ಅವರೊಂದಿಗೆ ನಾವು
:-)













