August 15, 2010

one year over

ನಾನು ಬ್ಲಾಗ್ ಶುರು ಮಾಡಿ ಆಗಲೇ ಒಂದು ವರ್ಷ ಆಗೇ ಬಿಡ್ತು ಗೊತ್ತೆ ಆಗಲಿಲ್ಲ :-) (August  5)not bad
ಎಲ್ಲರಿಗೂ ಸ್ವಾತಂತ್ರ್ಯೋತ್ಸವದ ಶುಭಾಶಯಗಳು
ಸಬ್ಬಕ್ಕಿ/ಸೀಮೆ ಅಕ್ಕಿ/ಸಾಬುದಾಣಾ (ಮರಾಠಿಯಲ್ಲಿ) ಉಸ್ಲಿ/KichDi
ಇದನ್ನೊಮ್ಮೆ ಮಾಡಿ ನೋಡಿ. US ನಲ್ಲಿರುವ ಶ್ರೀಕಾಂತ್ Bedathur ಅವರು ಈ recipe ಕೇಳಿದ್ರು.. ಅದಕ್ಕೆ

1 ಗ್ಲಾಸ್ ಸಬ್ಬಕ್ಕಿ
2 ಹಸಿ ಮೆಣಸಿನಕಾಯಿ chopped
2 ಟೀ  ಸ್ಪೂನ್ ಎಣ್ಣೆ
ಒಗ್ಗರಣೆಗೆ- ಸಾಸಿವೆ, ಕರಿಬೇವು, ಜೀರಿಗೆ, ಹಿಂಗು ಪುಡಿ (asafoetida)
1 ಟೇಬಲ್ ಸ್ಪೂನ್ -ಹುರಿದು, ಸಿಪ್ಪೆ ತೆಗೆದು, ಕುಟ್ಟಿ ದ (coarsely pounded) ಶೇಂಗಾ
ಉಪ್ಪು/ಸಕ್ಕರೆ, ಕೊತ್ತಂಬರಿ ಸೊಪ್ಪು ಮತ್ತು ನಿಂಬೆ ಹುಳಿ

ಸಬ್ಬಕ್ಕಿಯನ್ನು ಎರಡು ಗಂಟೆ ನೀರಲ್ಲಿ ನೆನೆಸಿಡಿ. ಆಮೇಲೆ ನೀರು ಬಸಿದು ಹೋಗುವಂತೆ  ಜಾಲರಿ ಪಾತ್ರೆಯಲ್ಲಿ (colander)ಹಾಕಿಡಿ.
ಎಣ್ಣೆ ಬಿಸಿ ಮಾಡಿ, ಸಾಸಿವೆ, ಜೀರಿಗೆ, ಕರಿಬೇವು ಮತ್ತು ಹಿಂಗಿನ ಪುಡಿಯ ಒಗ್ಗರಣೆ ಹಾಕಿ. ಅದಕ್ಕೆ ಹಸಿಮೆಣಸಿನಕಾಯಿ ಹಾಕಿ ಸ್ವಲ್ಪ ಹುರಿಯಿರಿ. ನೀರು ಬಸಿದ ಸಬ್ಬಕ್ಕಿ, ಉಪ್ಪು, ಸಕ್ಕರೆ ಬೆರೆಸಿ ಐದು ನಿಮಿಷ ಹಾಗೇ ಮುಚ್ಚಿ ಇಡಿ. ಬಡಿಸುವ ಮುನ್ನ ಕೊತ್ತಂಬರಿ ಸೊಪ್ಪು ಮತ್ತು ಕುಟ್ಟಿದ ಶೇಂಗಾ ಹಾಕಿ. ಬೇಕಾದಲ್ಲಿ ನಿಂಬೆ ಹುಳಿ ಹಿಂಡಿ.
ಬಿಸಿ ಬಿಸಿ ಉಸ್ಲಿ , ಅದೂ ಮಳೆಗಾಲದಲ್ಲಿ, ಟೀ ಜತೆ.........
* ಮಹಾರಾಷ್ಟ್ರದಲ್ಲಿ ಸಬ್ಬಕ್ಕಿಯನ್ನು ಉಪವಾಸದಂದು ಬಳಸುತ್ತಾರೆ. its made from tapioca. tapioca ಗೆ ಕನ್ನಡದಲ್ಲಿ ಏನನ್ನುತ್ತಾರೆ?? ಗೊತ್ತಿದ್ದವರು ತಿಳಿಸಿ ಪ್ಲೀssssಸ್.
ಸಬ್ಬಕ್ಕಿ ಪಾಯಸ, ವಡೆ. ದೋಸೆ /ರೊಟ್ಟಿ ಕೂಡ ಮಾಡಬಹುದು

ಪುರುಸೊತ್ತು ಇದ್ರೆ ಇದನ್ನೂ ಓದಿ

http://malathisanchiyinda.blogspot.com/2009/08/blog-post_17.html
:-)
preparation and Photo : T.V. Malavika Shenoy

16 comments:

ಮನಸು said...

thnq... upavasa iruva ee adige madi try madteeni..

Happy Independence Day..!!!!

ಸವಿಗನಸು said...

ವರುಷ ತುಂಬಿದ ಸಂಚಿಗೆ ಶುಭಾಶಯಗಳು.....
ಹೀಗೆ ಸಾಗುತ್ತಲಿರಲಿ....
ನನ್ನ ಬ್ಲಾಗ್ ಸಹ ನನಗರಿಯದೆ ವರ್ಷ ತುಂಬಿದೆ.....

prabhamani nagaraja said...

ಬ್ಲಾಗ್ ನಮೊದಲ ವಾರ್ಷಿಕೋತ್ಸವದ ಶುಭಾಶಯಗಳು.ನನ್ನ ಬ್ಲಾಗ್ ಗೆ ಒಮ್ಮೆ ಭೇಟಿ ನೀಡಿ.

ದೀಪಸ್ಮಿತಾ said...

ಸ್ವಾತಂತ್ರ್ಯ ದಿನದ ಶುಭಾಷಯಗಳು. ಮತ್ತು ಎರಡನೆ ವರ್ಷಕ್ಕೆ ಕಾಲಿಟ್ಟಿದ್ದಕ್ಕೆ ಅಭಿನಂದನೆಗಳು. Tapiocaಗೆ ಕನ್ನಡದಲ್ಲಿ 'ಕೊಲ್ಲಿ(ಳ್ಳಿ)' ಎನ್ನುತ್ತಾರೆ ಎಂದು ವಿಕಿಪೀಡಿಯಾದಲ್ಲಿದೆ

L'Étranger said...

ಒಂದು ವರ್ಷ ತುಂಬಿದ್ದಕ್ಕೆ ಅಭಿನಂದನೆಗಳು! ಯಾವುದೇ ಆಡಂಬರವಿಲ್ಲದೆ, ಆರ್ಭಟವಿಲ್ಲದೆ ನಿಮ್ಮ ಮನಸ್ಸಿನಲ್ಲಿರುವುದನ್ನು ಸುಂದರವಾಗಿ ಹಿಡಿದಿಡುತ್ತಾ ಬಂದಿರುವ ನಿಮ್ಮ ಬ್ಲಾಗ್ ಸ್ವಲ್ಪ ಅಪರೂಪದ್ದು. ಹಾಗಾಗಿ ಓದಲು ಇನ್ನೂ ಚೆನ್ನ!

ಸಾಬೂದಾಣಾ ಖಿಚಡಿ ರೆಸಿಪಿ-ಗೆ thanks! :-)

Actually, this is exactly how I do it. But it flops big time every time! :D I am told the consistency of tapioca is a huge factor. ನೀರಿನಲ್ಲಿ ತುಂಬಾ ಹೊತ್ತು ನೆನಸಿದರೆ ಪೂರ್ತಿ ಅಂಟಂಟಾಗಿಬಿಡತ್ತೆ. ಕಡಿಮೆ ನೆನಸಿದರೆ ಕಾಳುಕಾಳಾಗಿ ಇರತ್ತೆ. "1 hour" ಅನ್ನೋದು ಬಹುಶಃ ಸಬ್ಬಕ್ಕಿ (ಅದೇ ನನಗೆ ಗೊತ್ತಿರುವ ಕನ್ನಡ ಪದ -- ನೀವು ಕೂಡಾ ಅದನ್ನೇ ಉಪಯೋಗಿಸಿದ್ದೀರಿ!) ಹೇಗಿದೆ ಅನ್ನುವುದರ ಮೇಲೆ ಹೋಗತ್ತೆ ಅನ್ಸತ್ತೆ.

Well, now that you have reignited it, I will try my luck again! Thanks! :-)

(Malavika: You should eat before you take pictures. Otherwise you lose focus! ;) )

ವನಿತಾ / Vanitha said...

ಶುಭಾಶಯಗಳು..:) ಸಂಚಿಯಿಂದ ಒಳ್ಳೆಯ ನೆನಪುಗಳನ್ನು ನಮಗೆ ಹೀಗೆ ಕೊಡುತ್ತ ಇರಿ..
ನಾವು tapioca plantಗೆ 'ಮರಗೆಣಸು' ಅಂತೀವಿ..Hope I am correct!!

Sushrutha Dodderi said...

wov.. ondu varsha aagiddakke shubhashaya akka..

Ittigecement said...

ಬಾಯಲ್ಲಿ ನೀರು ತರಿಸಿ ಬಿಟ್ರಿ..
ಮನೆಯಲ್ಲಿ ಮಾಡಿದಲೇ ಬೇಕಾಯ್ತು...

ನಿಮಗೂ ಶುಭಾಶಯಗಳು..

ಸೀತಾರಾಮ. ಕೆ. / SITARAM.K said...

ಒಂದು ವರ್ಷ ತುಂಬಿದ ಬ್ಲಾಗ್-ಗೆ ಹುಟ್ಟು ಹಬ್ಬದ ಶುಭಾಶಯಗಳು.
ನನ್ನ ಇಂದಿನ ರಾತ್ರಿ ಉತ ಇದೆ-ಸಬ್ಬಕ್ಕಿ ಖಿಚಿಡಿ. ಯಾಕೆಂದ್ರೆ ಸುಲಭವಿದೆ ಮೈಗಳ್ಳ ನನ್ನಂಥವರಿಗೆ.

ಅನಂತ್ ರಾಜ್ said...

ವಾರ್ಷಿಕೋತ್ಸವದ ಸ೦ದರ್ಭದಲ್ಲಿ ಶುಭಾಶಯಗಳು, ಜೊತೆಗೆ ಸಾಬೂದಾಣಿಯ ಖಿಚಡಿ ರೆಸಿಪಿ-ಯ ನಿರೂಪಣೆ ಕೂಡ ತು೦ಬ ಉಪಯುಕ್ತ.

ಧನ್ಯವಾದಗಳು
ಅನ೦ತ್

ಸುಮ said...

ವರುಷ ತುಂಬಿದ ಸಂಚಿಗೆ ಶುಭಾಶಯಗಳು ಅಕ್ಕ .ಹೀಗೆ ನಿಮ್ಮ ಸಂಚಿಯಿಂದ ಹೊಸ ಹೊಸ ವಿಚಾರಗಳು ಹೊರಬರುತ್ತಿರಲಿ.
ನಾನು ಒಮ್ಮೆ ಈ ಸಬ್ಬಕ್ಕಿ ಖಿಚಡಿ ಮಾಡಲು ಹೋಗಿ ಗಮ್ ತರಹ ಆಗಿಬಿಟ್ಟಿತ್ತು. I will try now.

ಮನಸಿನ ಮಾತುಗಳು said...

Congrats Malatakka .... :-) All the best for second year... :-)

ಸಾಗರದಾಚೆಯ ಇಂಚರ said...

ಒಂದು ವರ್ಷ ತುಂಬಿದ ಬ್ಲಾಗ್-ಗೆ ಹುಟ್ಟು ಹಬ್ಬದ ಶುಭಾಶಯಗಳು.

nenapina sanchy inda said...

ಶುಭ ಹಾರೈಸಿದ ಎಲ್ಲರಿಗೂ ಧನ್ಯವಾದಗಳು
ವನಿತಾ!! ನಾನು ಪೋಸ್ಟ್ ಹಾಕುವಾಗ ಶ್ರೀಕಾಂತ್ ಊರಿನಲ್ಲಿರಲಿಲ್ಲ. ’ಮರಗೆಣಸು’ ಸರಿಯಾಗಿ ಹೇಳಿದಿರಿ, ಥ್ಯಾಂಕ್ಸ್.tapioca pearls, couscous ಅಂತಲೂ ಹೇಳುತ್ತಾರೆ.
ಶ್ರೀಕಾಂತ್ (L'Etranger)ನೀರು ಬಸಿದು ಹೋಗಿ, ಕಾಳು ಬಿಡಿ ಬಿಡಿ ಯಾಗುತ್ತಲ್ಲವಾ?? ಆಗ ಅದನ್ನು ಒಗ್ಗರಣೆಗೆ ಸೇರಿಸಬೇಕು. ಇದರ ಜತೆ ಆಲೂ ಕೂಡ use ಮಾಡಬಹುದು!!
:-)
ಮಾಲತಿ ಎಸ್

ಶಿವಪ್ರಕಾಶ್ said...

Happy Birthday to your blog :)

Chaithrika said...

tapioca ಅಂದರೆ ಮರಗೆಣಸು ಇರಬೇಕು.