ಸಮಯ ಎಷ್ಟು ಬೇಗ ಹಾರುತ್ತೆ!!!!ಇವತ್ತು ಮಾಲವಿಕ ಳ 20 ನೆ ಹುಟ್ಟು ಹಬ್ಬ.
ಅವಳು ಹುಟ್ಟಿದ ದಿನ ಇನ್ನೂ ನಿನ್ನೆ ಮೊನ್ನೆಯ ಹಾಗೆ ಕಣ್ಮುಂದೆ ಸುಳಿದುಹೋಗುತ್ತದೆ. ಬೆಚ್ಚನೆಯ spot ನಿಂದ ಹೊರಗೆ ಬಂದಿದ್ದಕ್ಕೆ ಇದ್ದ ಬಲ ಎಲ್ಲ ಹಾಕಿ ಕಿರುಚಿಕೊಂಡಿದ್ದಳು ಅವಳು, ಆಗಸ್ಟ್ 3, 1990, ಶುಕ್ರವಾರ ಸಂಜೆ 4.37 ಸಮಯ. ಆ ದಿನ ವರಮಹಾಲಕ್ಷ್ಮಿ ಹಬ್ಬ.ಕೂಡಲೆ ತನ್ನಷ್ಟಕ್ಕೆ ಸಮಾಧಾನ ಪಟ್ಟು ಎಲ್ಲರನ್ನೂ ಪಿಳಿ ಪಿಳಿ ಕಣ್ಣು ಬಿಟ್ಟು ನೋಡುತ್ತ ಇದ್ದಳು. ಒಂದು ಚೂರು ಮಲಗ್ಲೇ ಇಲ್ಲ ಅವಳು. ತುಂಬ ಸಮಾಧಾನಿ ಮಗು. ತಂಟೆ ಇಲ್ಲ ತಕರಾರಿಲ್ಲ. ಒಂದು ಚೂರು ನಗು ಸಹ ಒಲ್ಲ. ಘನ ಗಾಂಬೀರ್ಯ.ತಂಟೆ ತಕರಾರೆಲ್ಲ ಈಗ. ಮತ್ತೀಗ ನಗಲು ಕಾರಣವೇ ಬೇಕಿಲ್ಲ, ನಾನೇ ಕೆಲವೊಮ್ಮೆ ಅವಳಿಗೆ ಬಯ್ಯುವುದು. ಸ್ವಲ್ಪ ನಾದ್ರೂ ಗಂಭೀರವಾಗಿರೆ ಅಂತ.
ಅವಳು ಹುಟ್ಟಿದಾಗ ನನಗೆ 20 ವರ್ಷ ವಯಸ್ಸು. ಅವಳ ಜತೆ compare ಮಾಡಿದ್ರೆ, ಆಗಲೇ ನಾನು ಮನೆ, ನನ್ನ ಓದು,ಮಗು ಎಲ್ಲ ಸಂಭಾಳಿಸ್ತಾ ಇದ್ದೆ, ಅವಳು ಎಷ್ಟು carefree.
ಇನ್ನೊಂದು ಗಮ್ಮತ್ತಿನ ವಿಷಯ, ಇವತ್ತು ನನ್ನ family ಯಲ್ಲಿ ಮಾಲವಿಕನ್ನೂ ಸೇರಿಸಿ ನಾಲ್ಕು ಜನರ ಹುಟ್ಟಿದ ಹಬ್ಬ
ನನ್ನ ಅಮ್ಮ = 60 years
ದೀಪಾ (ನನ್ನ ಮೊದಲ್ನೇ ತಮ್ಮನ ಹೆಂಡತಿ) =32 years
ಪದ್ಮ (ನನ್ನ ಎರಡನೇ ತಮ್ಮನ ಹೆಂಡತಿ) =29 years
ನನ್ನ plan ಪ್ರಕಾರ ಅಮ್ಮನ 60 ನೇ ಹುಟ್ಟು ಹಬ್ಬ ಗ್ರಾಂಡ ಮಾಡುವ ಅಂತ ಇತ್ತು. ಮತ್ತೆ ನನ್ನ ತಮ್ಮ ನಂ 1,ಹೆಸರು ಕೃಷ್ಣಾನಂದ, ಫ್ಯಾಮಿಲಿ ಕರೆದುಕೊಂಡು ದೂರದ ದುಬ್ಯಾ ಗೆ ಹೋಗುತ್ತಿದ್ದಾನೆ ಕೆಲಸದ ನಿಮಿತ್ತ. ಇನ್ನು ಎರಡು ವರ್ಷ ಇಲ್ಲಿಗೆ ಬರುವ ಹಾಗಿಲ್ಲವಂತೆ...ನಾವೆಲ್ಲರೂ ಅಮ್ಮನ ಮನೆಯಲ್ಲಿ ಸೇರುವುದಿತ್ತು. ನಾನೇ ಇವತ್ತಿನ ದಿನದ ಎಲ್ಲ plan ಹಾಕಿದ್ದು. ಆದರೆ ಶ್ರೀಕಾಂತ ಇನ್ನೂ ಚೇತರಿಸಿಕೊಳ್ಳುತ್ತಿದ್ದಾರೆ ಆದ್ದರಿಂದ ನಾವು ಹೋಗುವುದು cancel ಆಯ್ತು. ಉಳಿದ ಪ್ಲಾನ್ ನಂತೆ ಅಲ್ಲಿ , ನಮ್ಮನ್ನು ಬಿಟ್ಟು ಎಲ್ಲರೂ ಸೇರಿದ್ದಾರೆ.ಇವತ್ತು ದೊಡ್ಡ cake ಮೇಲೆ ನಾಲ್ಕು ಜನರ ಹೆಸರು, ಇವತ್ತು ಸಂಜೆ ಅಲ್ಲಿ ಅವರು ಕೇಕ್ ಕಟ್ ಮಾಡ್ತಾರೆ. ಇಲ್ಲಿ ಮಾಲವಿಕ ಬೆಳಿಗ್ಗೆ ಕೇಕ್ ಕಟ್ ಮಾಡಿ ಅವಳ ಕಾಲೇಜು ಫ್ರೆಂಡ್ಸ್ ಗೆ ಅಂತ ಕೇಕ್ ತೆಗೆದುಕೊಂಡು ಹೋಗಿದ್ದಾಳೆ.
:-)
yummy Strawberry cake from Sweet Chariot. Next best to my favorite Mongini's cakes -Mumbai
9 comments:
Happy Birthday malavika..
Sweet family pic:-)
Happy Birthday to Malavika...........
Happy Birthday to all 4!
-Sandeep Kamath
huttu habbada shubhashayagaLu....
aha!! what a coincidence :) Belated Happy B'day to all!!
Ohh!! elrigoo nandoo ondu happy birthday!
ellarigoo belated Happy Birthday
ಎಲ್ಲರಿಗು ತಡವಾಗಿ ಹುಟ್ಟುಹಬ್ಬದ ಸಂದೇಶ: ಸಂತಸದ ದಿನಗಳು ನುರಾರಾಗಿ ಮರಳಲಿ. ಹುಟ್ಟುಹಬ್ಬದ ಶುಭಾಶಯಗಳು.
Happy birthday Malavika...and there is a big team celebrating with you,,,,hahaha...kind of Savings to your dear Mom Mala-T.
Sorry Mala-T nimma blog natta ee madhye barlillaa...
Post a Comment