November 30, 2009

ನಾಯಿ ಇಸ್ಸಿ/ಇಶ್ಶಿ

ಇತ್ತೀಚಿಗೆ ರಸ್ತೆ ಅಗಲೀಕರಣ/ನವೀಕರಣ ಅಂತ ರಸ್ತೆ ಪಕ್ಕದಲ್ಲಿ ಒಂದು ಚೂರು ಜಾಗ ಬಿಡದೆ ಡಾಂಬರ್ ಹಾಕಿಟ್ಟಿದ್ದಾರೆ. ಮಳೆ ಬಂದಾಗ ಮೊದಲು ಮಣ್ಣಿನ ಪರಿಮಳ ಬರುತ್ತಿತ್ತು ಈಗ ಬರೀ ನಾಯಿ ಇಸ್ಸಿ (dog crap, poop, shit..whatever!!) ವಾಸನೆ. ನಾವು ನೆಟ್ಟಿದ ಬೇವಿನ ಮರ ಹಾಗೂ ಹೊಂಗೆ ಮರ ಸಹ ತೆಗೆದು ಬಿಟ್ಟಿದ್ದರು. ಹೊಸ technology ಅಂತೆ ಬೆಳಿಗ್ಗೆ ಶುರು ಮಾಡಿ ಸಂಜೆ ಒಳಗೆ ರಸ್ತೆ ರೆಡಿ. ಮರುದಿನ ಬಳಕೆಗೂ ರಡಿ.

ಆದರೆ ನಾಯಿ ಇದ್ದ ಮನೆಯವರು ಅವರ ಮನೆ ಬಿಟ್ಟು ಬೇರೆಯವರ ಮನೆಯ...ಅದೂ ಗೇಟ್ ಎದುರುಗಡೆ ಇಸ್ಸಿ ಮಾಡಿಸುವುದು ಯಾಕೇಂತ ಗೊತ್ತಾಗಲಿಲ್ಲಪ್ಪ. ಎಷ್ಟೆ ಹೇಳಿದರೂ ಕೆಲವರು ಕೋಳೊಲ್ಲ. ನಮ್ಮ ಮನೆಯ ಗೇಟ್ ಎದುರು ಈ ತರಹ ಸುಮಾರು ಸಲ ಆಯಿತು. ಅವರು ಯಾರಂತಲೂ ನನಗೊತ್ತಿತ್ತು. ಬೆಳಿಗ್ಗೆ 4 ಗಂಟೆಗೆ ನಾನು ಝೂಲಾ ಮೇಲೆ ಚಹಾ ಕುಡಿಯುತ್ತ ಇರುವಾಗ ಅಲ್ಲಿ ಇಸ್ಸಿ ಮಾಡಿಸಿಕೊಂಡು ಹೋಗುತ್ತಿದ್ದರು. ನನಗಂತೂ ಬೆಳಿಗ್ಗೆ ಬೆಳಿಗ್ಗೆ ಯಾರ ಜತೆನೂ ವಾದ ಮಾಡಲಿಕ್ಕೆ ಇಷ್ಟ ಆಗಲ್ಲ.

ಅದಕ್ಕೆ ಶ್ರೀಕಾಂತ್ ಒಂದು ದಿನ ಬೇಗನೆ ಎದ್ದು ಕಾಯುತ್ತ ಇದ್ದರು. ಅವರು ನಮ್ಮ ಮನೆ ಬಳಿ ಬಂದ ಕೂಡಲೆ..’ಹಲ್ಲೋ, ನಿಮ್ಮ ನಾಯಿ ಮುದ್ದಾಗಿದೆ, ಏನು ಹೆಸರು?’ ಅದಕ್ಕೆ ಅವರು ಮಹಾ ಜಂಬದಿಂದ ಅದರ ಬ್ರೀಡ್(ಲ್ಯಾಬ್ರಾಡೋರ್), ಮತ್ತೆ ನಾಯಿಯ ಹೆಸರು ’ರೋವರ” ಅಂತ ಹೇಳಿದರು. ಶ್ರಿಕಾಂತ್ ಉವಾಚ್- ನಿಮಗೆ ನಾಯಿ ಅಷ್ಟು ಪ್ರೀತಿಯಾದರೆ ಅದರ ಇಸ್ಸಿಯನ್ನು ಪ್ಯಾಕ್ ಮಾಡಿಕೊಂಡು ಫ್ರಿಡ್ಜ್ ನಲ್ಲಿಡಬಹುದಲ್ಲವಾ ಅಂದರು ಕೂಲಾಗಿ. ಅವರು ಕಕ್ಕಾಬಿಕ್ಕಿ. ಮುಖ ನೋಡಬೇಕಿತ್ತು. ಅಷ್ಟರೊಳಗೆ ನಾಯಿ ಒಂದು ಗುಡ್ಡೇ ಇಸ್ಸಿ ಮಾಡಿಯಾಗಿತ್ತು.

ಅಮೇರಿಕೆಯಲ್ಲಿರುವ ನನ್ನ ತಂಗಿ 5 ವರ್ಷ ಆದಮೇಲೆ ನನ್ನ ಮನೆಗೆ -ಬೆಂಗಳೂರಿಗೆ ಬಂದಿದ್ದಳು. ಅವರು ಬರುವ ಹೊತ್ತಿನಲ್ಲಿ ನಾನು ಅಡಿಗೆ ಮನೆಯಲ್ಲಿದ್ದೆ. ಗಾಡಿ ಬಂದ ಸದ್ದಾಗಿ ಗ್ಯಾಸ್ ಆಫ್ ಮಾಡಿ ಬರುವಷ್ಟರಲ್ಲಿ ನನ್ನ ತಂಗಿ ಗಟ್ಟಿ ದನಿಯಲ್ಲಿ ’ಏನೇ ಇದು? ಐದು ವರ್ಷ ಆದ ಮೇಲೆ ಬರ್ತಾ ಇದ್ದೇನೆ. ಪೂರ್ಣ ಕುಂಭ ಸ್ವಾಗತ ಇರ್ಲಿ, ತುಪ್ಪದ ಆರತಿ ಬಿಟ್ಟು. ಹೀಗಾ ಸ್ವಾಗತಿಸುವುದು? ಎನಪ್ಪ ಇವಳ ಗಲಾಟೆ ಅಂತ ಹೋಗಿ ನೋಡಿದ್ರೆ, ಗಾಡಿಯ ಬಾಗಿಲ ತೆಗೆದ ಕೂಡಲೇ, ಗೇಟ್ ಎದುರಿಗೇನೆ ಅವಳಿಗೆ ಕಂಡಿದ್ದು -dog crap- ಹಿ ಹಿ ಹಿ. ಮತ್ತೆ ಗಾಡಿ ಸ್ವಲ್ಪ ಮುಂದೆ ಮಾಡಿ ಅವಳ ದೊಡ್ಡ ದೊಡ್ಡ suitcase ಗಳನ್ನು ಒಳಗೆ ಸಾಗಿಸ ಬೇಕಾದರೆ ಶ್ರೀಕಾಂತ್ ಮತ್ತು ನನ್ನ ತಮ್ಮನಿಗೆ ಬೆವರು...ಯಕೆಂದರೆ ನಾವು ಹೊರಗೆ ನಿಂತು---ಇಸ್ಸಿ ಮೇಲೆ ಕಾಲು, ಬ್ಯಾಗ್ ತಾಗದ ಹಾಗೆ watch it watch it ಅಂತ ಕೂಗಾಡ್ತಾ ಇದ್ವಿ.ಶ್ರೀಕಾಂತ ’ಥೂ ನಾಯಿ’ ಅನ್ನಬೇಕಾದರೆ ನಾನು ಹೇಳಿದೆ..ನಾಯಿಗಳನ್ನು ಬೈ ಬೇಡಿ. ಅವಕ್ಕೇನು ಗೊತ್ತಾಗುತ್ತೆ, ನಾಯಿ ಮಾಲಿಕರಿಗೆ ಫೈನ್ ಹಾಕಿಸ ಬೇಕು ಅಂತ’ ಸಧ್ಯ ನನ್ನ ಮಕ್ಕಳಿಬ್ಬರು ಸ್ಕೂಲು-ಕಾಲೀಜಿಗೆ ಹೋಗಿದ್ರು. ಇಲ್ಲದಿದ್ದರೆ ಇನ್ನಷ್ಟು ಗಮ್ಮತ್ತು. ತಂಗಿಯ ಪುಟಾಣಿ ಮಕ್ಕಳಿಗೆ ಅಂತೂ ಇದು ಮೋಜಿನ ವಿಷಯವಾಗಿತ್ತು.

ಈಗ ನಾವು ಬೇರೆ ಮನೆಯಲ್ಲಿರುವುದು. ಇಲ್ಲಿ ಹತ್ತಿರದಲ್ಲಿ ಯಾರ ಮನೆಯಲ್ಲೂ ನಾಯಿಗಳನ್ನು ಸಾಕಿಲ್ಲ. ಆದರೆ 7 ಬೀದಿ ನಾಯಿಗಳಿದ್ದಾವೆ. ತುಂಬ ಒಳ್ಳೆಯವು. ಹೊಸಬರನ್ನು ಕಂಡರೆ ತುಂಬಾ ಬೊಗಳುತ್ತವೆ...ನಾವು ’ಸುಮ್ಮನಿರಿ. ಇವರು ನಮ್ಮವರು’ ಅನ್ನುವ ತನಕ. ಆದರೆ ಯಾವತ್ತು ಯಾರ ಮನೆಯ ಎದುರಿಗೂ ಇಸ್ಸಿ ಮಾಡಿಲ್ಲ. ನಾನು ಅವರ ಜತೆ ಕೊಂಕಣಿಯಲ್ಲಿ ಸಂಬಾಷಿಸುತ್ತೇನೆ. ನಾನು ಎಲ್ಲಿಗಾದರೂ ಹೊರಟರೆ, ಬಾಲ ಅಲ್ಲಾಡಿಸಿ ನನಗೆ ಒಂದಷ್ಟು ದೂರ ಕಂಪನಿ ಕೊಟ್ಟು ವಾಪಸ್ ನಮ್ಮ ಬೀದಿಗೆ ಬಂದು ವಿರಮಿಸುತ್ತವೆ. ನಮ್ಮ ಮನೆಯ ಎದುರುಗಡೆ ಸಾಲಿನ ಮನೆಯವರು ಅವರ ಊಟ ತಿಂಡಿ ಬಗ್ಗೆ ನೋಡಿಕೊಳ್ಳುತ್ತಾರೆ. ಅವರು ಆಕಸ್ಮಾತ್ ಊರಲಿಲ್ಲ ಅಂದರೆ ಬೇರೆಯವರಿಗೆ ಹೇಳಿ ಹೋಗುತ್ತಾರೆ. ಯಾರಾದರೊಬ್ಬರು ಅದರ ದೇಖಿ ರೇಖಿ ಮಾಡಿತ್ತಾರೆ. ಎಲ್ಲರೂ ಊಟ ಹಾಕುವುದು, ಅಥವಾ ಉಳಿದಿದೆ ಅಂತ ಊಟ ಹಾಕುವುದು ಇದೆಲ್ಲ ನಾವ್ಯಾರೂ ಮಾಡುವುದಿಲ್ಲ.
ಮತ್ತೆ ಮುನಿಸಿಪಾಲಿಟಿಯವರು ನಾಯಿ ಹಿಡಿಯಲು ಬಂದರೆ ಅವಕ್ಕೆ ಗೊತ್ತಾಗಿ ಅವರು ಚಪ್ಪಡಿ ಇರುವ ಚರಂಡಿಯೊಳಗೆ ಅವಿತುಕೊಳ್ಳುತ್ತವೆ. ನಾವ್ಯಾರೂ ಅವರಿಗೆ ಹೇಳಲು ಹೋಗುವುದಿಲ್ಲ.
:-)

6 comments:

ಜಲನಯನ said...

ಮಾಲ್ತಿ, ಈ ದಿನ ನ್ಯೂಸ್ ನಲ್ಲೂ ನಾಯಿಗಳದ್ದೇ ಸುಮಾರು ೨೦ ಸೆಕೆಂಡ್ ನ್ಯೂಸ್, ೧೦-೧೨ ಜನಾನ ಕಚ್ಚಿ ಗಾಬರಿ ಹುಟ್ಟಿಸಿದ ಬೀದಿ ನಾಯಿಗಳದ್ದು..ಇನ್ನು BBMP, ತಮಗೇನೂ ಕಚ್ಚಿಲ್ಲ ಅನ್ನೋ ತರಹ ಇರೋ ವಿಷಯ... ಬೀದಿನಾಯಿ...no asker no teller Ok.. ನಿಮ್ಮ ಸಾಮ್ನೆ ವಾಲಿ ಖಿಡಕಿಯೋರಿಗೆ ಏನಂತೆ...?? ಧಾಡಿ....ತಮ್ಮ ವಿದೇಶಿ ತಳಿಯ ನಾಯಿಯ ಸ್ವದೇಶೀ ಕ್ರಿಯೆ ನಿಯಂತ್ರಿಸೋಕೆ....??

ಸವಿಗನಸು said...

ಮಾಲತಿ ಮೇಡಮ್,
ಒಳ್ಳೆ ವಿಷಯದ ಬಗೆ ಬರೆದಿದ್ದೀರ....ಇದನ್ನು ಆ ನಾಯಿ ಮಾಲೀಕರು ಓದಿದರೆ ತಿದ್ದಿಕೊಳ್ಳುತ್ತಾರೆ......
ಪಾಪ ನಾಯಿಗಳೂ ಎನೂ ಮಾಡ್ತಾವೆ...ಮಾಲೀಕರಿಗೆ ಬುದ್ದಿ ಇರಬೇಕು....

ಜಲನಯನ said...

ಮಹೇಶ್..ಇದನ್ನು ಓದಿ ಮಾಲೀಕರು ತಿದ್ದಿಕೋತಾರೋ ಇಲ್ಲವೋ ಗೊತ್ತಿಲ್ಲ...ಆದ್ರೆ ಸಮಸ್ಯೆ....ಅದಲ್ಲ...ನಾಯಿಗಳು ಓದೊಲ್ವೇ ಈ ಬ್ಲಾಗನ್ನ..ಅಂದ್ರೆ..ಮಾಲೀಕರಿಗೆ ಬ್ಲಾಗ್ ಓದೇ ತಿದ್ಕೋಬೇಕು ಅಂತೇನಿಲ್ಲ...ನಾಯಿಗೆ ತಿಳುವಳಿಕೆ ಬರೋಕೆ...ಅದು ಬ್ಲಾಗ್ ಓದೋಕೆ ಸಾಧ್ಯವಿಲ್ಲ..ಹಾಗಾಗಿ...ಮಕ್ಕಳಾಟ ಗೊತ್ತಲ್ಲ..ಯಾಮ್ ರೈಟ್..ಯಾಮ್ ರೈಟೋ...ಜೂಟೋ..ಅಂತ ಹೆಳ್ಕೊಂಡು ಮಾಲ್ತಿ ಅಂಡ ಕೋ..ನಾಯಿ ಲದ್ದಿ ತಪ್ಪಿಸ್ಕೋಂಡು ಕಾಲಿಡೋದು ತಪ್ಪಿದ್ದಲ್ಲ...ಹಹಹಹ

ದಿವ್ಯಾ ಮಲ್ಯ ಕಾಮತ್ said...

ಚೆನ್ನಾಗಿದೆ ಬರಹ :-) ಕೊನೆಯ ಪಾರಾ ಅಂತೂ ತುಂಬಾ ಆಪ್ತವಾಗಿದೆ..

L'Étranger said...

ನಾಯಿಗಳಿಗೆ ತಿಳಿಯಲ್ಲ ಅಂತೇನಿಲ್ಲ. ಎಲ್ಲಿ ಮಾಡಬಹುದು, ಎಲ್ಲಿ ಮಾಡಬಾರದು ಅನ್ನುವುದನ್ನು ಹೇಳಿಕೊಟ್ಟರೆ ಖಂಡಿತ ಪಾಲಿಸುತ್ತವೆ. ಅದನ್ನು ಹೇಳಿಕೊಡುವ ಆಸ್ಥೆ ಮಾಲೀಕರಿಗಿರಬೇಕು.

ಪ್ರಶ್ನೆ ನಾಯಿಗಳದ್ದಾಗಲೀ, ನಾಯಿಯ ಇಸ್ಸಿಗಳದ್ದಾಗಲೀ ಅಲ್ಲ. ನಮ್ಮ ಸುತ್ತಲಿನ ಪರಿಸರ ನಮಗೆ ಸೇರಿದ್ದು, ಅದರ ಸ್ವಚ್ಛತೆಯನ್ನು ಕಾಪಾಡುವ ಜವಾಬ್ದಾರಿ ನಮ್ಮೆಲ್ಲರದು ಅನ್ನುವ ಪರಿವೆ ನಮ್ಮ ಜನಕ್ಕಿಲ್ಲ. ಸಿಕ್ಕಸಿಕ್ಕಲ್ಲಿ ಕಸ ಹಾಕುವುದು, ಉಗಿಯುವುದು, ರಸ್ತೆ - ಗೋಡೆಗಳನ್ನು ಧ್ವಂಸ ಮಾಡೋದು, ಅಷ್ಟೇಕೆ, ಸಿಕ್ಕ ಸಿಕ್ಕ ಗೋಡೆ ಮರಗಳ ಮೇಲೆ ಜನ ಮೂತ್ರ ವಿಸರ್ಜಿಸುವುದನ್ನು ಎಷ್ಟು ನೋಡಿಲ್ಲ ನಾವು? ತಾವೇ ಮಾಡಿದ ಗಲೀಜಿನ ನಡುವೆ ಸುಖವಾಗಿ ಬದುಕುವ ನಮ್ಮ ಜನಕ್ಕೆ ನಾಯಿಯ ನಿತ್ಯಕರ್ಮದ ಶುಚಿಯ ಬಗ್ಗೆ ತಿಳಿಹೇಳಲು ಹೇಗೆ ಸಾಧ್ಯ?

ಅಶುಚಿಯಾಗಿ ಬದುಕುವುದು ನಮ್ಮ ಜನರ ಮಾನಸಿಕ ದಾರಿದ್ರ್ಯಗಳಲ್ಲೊಂದು.

Raghu said...

ಹ್ಹೆ ಹ್ಹೆ ಹ್ಹೆ ಹ್ಹ ಹ್ಹ ಹ್ಹ... ಸೂಪರ್ !! ನಿಮ್ಮ ಹೇಳಿದ ಸನ್ನಿವೇಶ ಕೇಳಿ ತುಂಬಾ ನಗು ಬಂತು... ಸರಿ, ಒಮ್ಮೆ ಅದಕ್ಕೆ ತಿಂಡಿ ಹಾಕಿದ್ರೆ ಸಾಕು... ಅದಕ್ಕೆ ಫುಲ್ ನೆನಪು ಇರುತ್ತೆ... ನಾಯಿ ನಿಷ್ಟೆಗೆ ಹೆಸರುವಾಸಿ ಅಲ್ವ...
ನಿಮ್ಮವ,
ರಾಘು.