November 23, 2009

ರವೆ ರೊಟ್ಟಿ

ಬನ್ಸಿ ರವಾ - 2 ಕಪ್
ಮೊಸರು - 1 ಕಪ್
ರುಚಿಗೆ ಉಪ್ಪು ಮತ್ತು ಚಿಟಿಕೆ ಸಕ್ಕರೆ
ಹಸಿ ಮೆಣಸಿನಕಾಯಿ ಮತ್ತು ಶುಂಠಿ ಸಣ್ಣಗೆ ಕತ್ತರಿಸಿ ಹಾಕಿ. 1 ಟೇಬಲ್ ಚಮಚ ತಾಜಾ ತೆಂಗಿನ ತುರಿ. ತುರಿದ ಕ್ಯಾರೆಟ್. ಸಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು
ಒಗ್ಗರಣೆಗೆ ಸಾಸಿವೆ ಮತ್ತು ಕರಿಬೇವು.

ಸ್ವಲ್ಪ ನೀರು ಬಳಸಿ ಎಲ್ಲವನ್ನು ಮಿಕ್ಸ್ ಮಾಡಿ, ಹೀಗೆ



ಅದಕ್ಕೆ ಒಗ್ಗರಣೆ ಕೊಡಿ, ಹೀಗೆ...

ಒಗ್ಗರಣೆಯನ್ನು ಮಿಕ್ಸ್ ಮಾಡಿ. ಬಿಸಿ ಕಾವಲಿ ಮೇಲೆ ಹಾಕಿ (ಅಕ್ಕಿ ರೊಟ್ಟಿ ಮಾಡಿದ ಹಾಗೆ: ಹಳೆಯ ಪೋಸ್ಟ್) ಒದ್ದೆ ಬೆರಳಿನಿಂದ , ಎಷ್ಟು ತೆಳು ಬೇಕೋ ಅಷ್ಟು ತಟ್ಟಿ. ಎರಡು ಬದಿ ಕೆಂಪಾಗುವಂತೆ ಕಾಯಿಸಿ.



ಬಿಸಿ ಬಿಸಿ ಇದ್ದಾಗಲೇ, ತುಪ್ಪದೊಂದಿಗೆ ತಿನ್ನಿ :-) ಇತ್ತೀಚಿಗೆ ಅಮ್ಮ ನನ್ನಲ್ಲಿ ಬಂದಾಗ ನನಗೆ ಮಾಡಿ ಕೊಟ್ಟಿದ್ದರು. ನಮಗೆಲ್ಲ ತುಂಬ ಇಷ್ಟ ಆಯ್ತು. ನೀವು ಮಾಡಿ taste ಹೇಗಿತ್ತು ಅಂತ ಹೇಳಿ

:-)

5 comments:

ದಿವ್ಯಾ ಮಲ್ಯ ಕಾಮತ್ said...

ಆಹಾ! ನಿಮ್ಮ ಬ್ಲಾಗ್ ನಲ್ಲಿಯ ರೆಸಿಪಿ ನೋಡುತ್ತಿದ್ದರೆ ಅಡುಗೆ ಇಷ್ಟು ಸುಲಭವೇ ಎಂದೆನೆಸಿಬಿಡುತ್ತೆ:) (ಮಾಕ್ಕಾ ಕಸನೆ ಗೊತ್ನಾ ಕೊರ್ಚಾಕ್ :( may be coz of that:) ) Keep posting..

Raghu said...

ಮ್ ಸ್, :)
ಬ್ಲಾಗ್ ದುನಿಯಾದಲ್ಲಿ ನಂಗೆ ಯಾವಾಗಲು ಹಳ್ಳಿ-ತಿಂಡಿಯ ನೆನಪು ಮಾಡೋದು ನೀವೇ... ಮತ್ತೆ ಹಳ್ಳಿ-ತಿಂಡಿ ನಂಗೆ ತುಂಬಾ ಇಷ್ಟವಾದ ಹೋಟೆಲ್...ಅಕ್ಕಿ ರೊಟ್ಟಿ .. ಇಗ ರವೆ ರೊಟ್ಟಿ.. ಮಾಡೋದು ಎಷ್ಟು ಸುಲಭ ಅಂತ ಅನ್ಸ್ಥ ಇದೆ.. ಅದರೂ ತುಂಬಾ ಟೈಮ್ ಬೇಕಾಗುತ್ತೆ ಅಲ್ವ.. ನಾನ್ ಮಾಡ್ಲಿಕ್ಕೆ ಹೊರಟರೆ ಹೊಸ ರಾಮಾಯಣ ಗ್ಯಾರಂಟೀ.. :) ಅದ್ರು ಟ್ರೈ ಮಾಡ್ತೀನಿ..
ನಿಮ್ಮವ.
ರಾಘು,

Ittigecement said...

ಒಳ್ಳೆ ಬಾಯಲ್ಲಿ ನೀರು ತರಿಸುವ ರುಚಿಗಳು...

ನಿಮ್ಮ ವಿವರಣೆಗಳು ತುಂಬಾ ಸರಳವಾಗಿವೆ..
ಮಡದಿ ತವರಿಗೆ ಹೋದಾಗ ನಾನೇ ಖಂಡಿತ ಮಾಡಿನೋಡಿಬಿಡುವೆ...

ಇದನ್ನು ಸಧ್ಯದಲ್ಲೇ ಮಾಡಿಸುವೆ...

ಇಂಥಹ ತಿನಿಸುಗಳು ಇನ್ನಷ್ಟು ಬರಲಿ....

ಸವಿಗನಸು said...

ವಿವರಣೆಯೊಂದಿಗೆ ಫೋಟೋ ಸಹ ಹಾಕಿ ಬಾಯಲ್ಲಿ ನೀರು ಬರುವ ಹಾಗೆ ಮಾಡಿದ್ದೀರಿ.....
ಈ weekend 3 ದಿನ ರಜೆ ಇದೆ...ಮಾಡಲು ಹೇಳುವೆ...
ಇನ್ನಷ್ಟು ಬರಲಿ....

Anonymous said...

Your readers have said it all in understatements !

-- Shee Kar