February 20, 2018

ಜಗತ್ತು ಅಷ್ಟೊಂದು ಬದಲಾಗಿಲ್ಲ

ನಾನು ಸಂಜೆ ದಿನಾ ಮನೆ ಬಳಿಯ ಉದ್ಯಾನವನಕ್ಕೆ ವಾಕ್ ಹೋಗುತ್ತೇನೆ. ಅಲ್ಲಿ ದಿನಾ ಆಕೆಯನ್ನು ನೋಡುತ್ತಿದ್ದರೂ  ನಾನು ಮಾತಾಡಿಸಿರಲಿಲ್ಲ. ಮುಖ ಪರಿಚಯ ಇತ್ತು ಅಷ್ಟೆ. ಆ ದಿನ ಏನಾಯ್ತೆಂದರೆ ಆಕೆ ಗಾರ್ಡನ್ ನ  ಟೈಲ್ ಸ ನ ಬಿರುಕಲ್ಲಿ ಚಪ್ಪಲಿ ಸಿಕ್ಕಿಹಾಕಿಕೊಂಡು ಮುಗ್ಗ್ರಿಸುವುದರಲ್ಲಿ ಇದ್ಲು . ನಾನು ಅವರನ್ನು ನಿಧಾನ ಅಂತ ಹೇಳಿ ಅವರ ಕೈ  ಹಿಡಿದುಕೊಂಡೆ. ಥ್ಯಾಂಕ್ಸ್ ಹೇಳಿ ನಗು ವಿನಿಮಯ ಮಾಡಿಕೊಂಡ್ವಿ. ಮರುದಿನ ನನ್ನ ವಾಕ್ ಮುಗಿಸಿ ಖಾಲಿ ಇರುವ ಬೆಂಚ್ ಮೇಲೆ ಕೂತಿದ್ದೆ. ಬೇರೆಲ್ಲೂ ಜಾಗ ಇರದೇ ಆಕೆ ನನ್ನ ಬಳಿ  ಬಂದು ಕೂತಳು. ಚಿಕ್ಕ ವಯಸ್ಸು. ಹೆಸರು, ಏನು ಮಾಡ್ತಾ ಇದ್ದೀರಾ ವಗೈರೆ ಕೇಳಿದೆ. ಅವರು ಹಿಂದೂಸ್ಥಾನಿ  ಸಂಗೀತದ ಪಾಠ ಹೇಳುತ್ತಾರಂದಾಗ ನನ್ನ ಕಿವಿ ಚುರುಕಾಯಿತು. ನನ್ನ ನಿಹಾರಿಕಾ ಹಿಂದೂಸ್ಥಾನಿ ಸಂಗೀತ ಕಲಿತಿದ್ದಾಳೆ ಅಂದೆ. ಇವರು ಪಾಠ ಕಲಿಸುವ ಜಾಗ ಹತ್ತಿರವಿದ್ದಲ್ಲಿ ನಿಹಾ ಗೆ ಅಲ್ಲಿ ಹೋಗಲು ಹೇಳುವ ಅಂದಾಜು  ನನ್ನದು,ಯಾಕೆಂದರೆ ಈಗಾಗಲೇ ಕಲಿಯುತ್ತಿರುವ ಟೀಚರ್ ಇನ್ನು ಸ್ವಲ್ಪ ದಿನದಲ್ಲಿ ಹೆರಿಗೆಗೆ ಅವರ ತವರು ಮನೆಗೆ ತೆರಳುವವರಿದ್ದರು. 
"ಇಲ್ಲ ಮ್ಯಾಡಂ ನನಗೆ ಮನೆಯಲ್ಲಿ ಪಾಠ ಹೇಳಿ ಕೊಡುವ ಪರ್ಮಿಶನ್ ಇಲ್ಲ ಅಂದ್ರು. ನಾನು ಸರಿ, ಹೋಗ್ಲಿ ಬಿಡಿ ಅಂತ ಸುಮ್ಮನಾದೆ. ಅವರೇ ಮುಂದುವರೆಸಿ , ನನ್ನ ನೋಡಿದರೆ ನನ್ನನ್ನು  ಖ್ಯಾತ ಹಿಂದೂಸ್ಥಾನಿ ಗಾಯಕಿ ************ ಅವರ ತಂಗಿ ತರಹ ಕಾಣ್ತೀನಾ  ಅಂತ ಕೇಳಿ . ಅವಳ ಅಕ್ಕನ  ಹೆಸರು ಕೇಳಿ ನನ್ನ ಹುಬ್ಬು ಹಣೆಗೆ ಅಂಟಿ ಕೂರಲಿಲ್ಲ ಸಧ್ಯ . ಅಷ್ಟೊಂದು ಅವಾಕ್ಕಾಗಿ 'ಹೌದಾ  ssssss' ಅಂತ ರಾಗ ಎಳೆದೆ. 
ಹೌದು ಮ್ಯಾಡಂ . ತಂದೆ ತಾಯಿ ನಮಗಿಬ್ಬರಿಗೂ ಒಂದೆ ತರಹ ಕಲೀಸಿದ್ದು. ಈಗ ಆಕೆಯನ್ನು ನೋಡಿ. ದೇಶ ವಿದೇಶಕ್ಕೆಲ ಹೋಗಿ ಕನ್ಸರ್ಟ್ ಕೊಟ್ಟು ಬರುತ್ತಾಳೆ. ಒಂದು ದಿನಾ ನೂ ಫ್ರೀ ಇರಲ್ಲ.  ಮನೆಯಲ್ಲೂ ಸಪೋರ್ಟ್ ಕೂಡ. ನಮ್ಮವರು ಶಾಲೆಯಲ್ಲಿ ಆರ್ಟ್ಸ್ ಟೀಚರ್. ಆವಾಗಾವಾಗ ಪೈಟಿಂಗ್ಸ್ ಎಲ್ಲ ಮಾಡಿ ಮಾರ್ತಾರೆ. ಮನೆಯಲ್ಲಿ ಅತ್ತೆ ಮಾವ. ನನಗಿಬ್ಬರು ಪುಟ್ಟ   ಮಕ್ಕಳು. ಹಣಕಾಸಿನ ಸ್ಥಿತಿ ಅಷ್ಟೊಂದು ಚೆನ್ನಾಗಿಲ್ಲ. ನಾನು ಸಂಗೀತದ ಪಾಠ ಹೇಳಿ ಸ್ವಲ್ಪ ಹೆಚ್ಚಿಗೆ ದುಡಿಯಬಹುದು. ಅಕ್ಕ ನನಗೆ ನನ್ನ ಸ್ವಂತ ಮ್ಯುಸಿಕ್ ಕ್ಲಾಸ್ ಮಾಡಿಸಿಕೊಡಲು ರೆಡಿ ಯಿದ್ದಾಳೆ.  ಆದರೆ ಸಂಜೆ ಆ ಮ್ಯೂಸಿಕ್ ಕ್ಲಾಸ್ ಗೆ ಹೋಗಿ , ಅದೂ ವಾರದಲ್ಲಿ ಮೂರು ದಿನ ಮಾತ್ರ ಸಂಗೀತದ ಪಾಠ ಹೇಳಲು ನನಗೆ ಪರ್ಮಿಶನ್. . ಅದಕ್ಕೂ ಕಂಡೀಶನ್. ನಾನು ಮನೆ ಕೆಲಸ ಎಲ್ಲ ಮುಗಿಸಿ, ಮಕ್ಕಳನ್ನೂ ಕರೆದು  ಕೊಂಡು ಹೋಗ ಬೇಕು . ಮಕ್ಕಳನ್ನು ಅವರು ನೋಡಿಕೊಳ್ಳುವುದಿಲ್ಲವಂತೆ. ಹಾಗಾಗಿ ಬೇರೆಯವರ ಮನೆಗೆ ಹೋಗಿ ಸಂಗೀತದ ಪಾಠ ಹೇಳಲೂ ಬರುವುದಿಲ್ಲ. ತುಂಬಾ ಚಿಕ್ಕ ಮಕ್ಕಳು ನನಗೆ, ಅಂತ ಅಲ್ಲೇ ಮರಳಲ್ಲಿ ಇತರ ಮಕ್ಕಳ ಜತೆ ಆಟ ಆಡುವ ಆಕೆಯ ಮಕ್ಕಳನ್ನು ತೋರಿಸಿದಳು.  ಅತ್ತೆ ಮಾವ ತುಂಬಾ ವಯಸ್ಸಾದವರಾ? ಅಂತ ಕೇಳಿದೆ. "ಇಲ್ಲ ಮೇಡಂ ಗಟ್ಟಿ ಮುಟ್ಟಾಗಿದ್ದಾರೆ ಅಂದ್ಲು. ಮತ್ತು ಅಕ್ಕನ ಸಂಗೀತ ಕಚೇರಿಗೂ ಹೋಗಲೂ ಅಷ್ಟಾಗಿ ಪರ್ಮಿಶನ್ ಇಲ್ಲ."
ಜಗತ್ತು ಎಷ್ಟೇ ಮುಂದುವರೆದ್ರೂ ಕೆಲವು ಸಂಕುಚಿತ ಮನೋಭಾವಗಳು ಬದಲಾಗಲ್ಲ   ಅನ್ನಿಸ್ತು. 
ಇರಲಿ ಬಿಡಿ ಮುಂದೆ ಮಕ್ಕಳು ದೊಡ್ಡವರಾದ ಮೇಲೆ ಹೆಚ್ಚಿನ ಪಾಠ ಮಾಡಿ. ಮತ್ತು ಅಷ್ಟು ನಿರಾಸೆಯಿಂದ   ಮಾತನಾಡಬೇಡಿ. ಯಾಕೆಂದರೆ ನೀವು ಹೋಗುವ ಮ್ಯುಸಿಕ್ ಕ್ಲಾಸಿನ ಮಾಲೀಕರು ಒಳ್ಳೆಯವರಲ್ಲವೇ?  ಅವರು  ನಿಮ್ಮ ಜತೆ ಮಕ್ಕಳನ್ನು ಕರೆತರುವುದಕ್ಕೆ ಬೇಡ  ಅಂದಿಲ್ಲವಲ್ಲ. ಮುಂದೆ  ಒಳ್ಳೆಯದಾಗುತ್ತೆ ಅಂತ ಹೇಳಿ ಕಳಿಸಿದೆ. 
ಆದರೆ ಅವರ ಅಕ್ಕನ ಬಗ್ಗೆ ಕೇಳಿ ಮಾತ್ರ  ತಲೆ ಗಿರ್ರ್ರ್ ಅಂದಿದ್ದು ಸುಳ್ಳಲ್ಲ. 

February 16, 2018

ಒಂದು ಬೊಂಡದ ಕತೆ


ಟೂರ್ ಎಲ್ಲ ಹೋಗಿ ಬಂದ್ವಿ. ನಮ್ಮ ಮಿತ್ರರು ಹಾಗು ಕಲೀಗ್ ಸಾಲಿಮಠರ ಮಗನ ಮದುವೆ ಇತ್ತು.  ಟೂರ್ ಹೋಗಿ ಬಂದ  ಮೇಲೆ ಯೂರಿನರಿ ಇನ್ಫೆಕ್ಷನ್ ಆಯ್ತು. ಅದಕ್ಕೆ ಎಳನೀರು ಕುಡಿಯಲು ಹೋಗಿದ್ದೆ. ಹಲವಾರು ವರ್ಷದ ಹಿಂದೆ ನಡೆದ ಈ ಘಟನೆ ನೆನಪಾಯ್ತು. 

ಆಗ ನಾವು ಮಹಾಲಕ್ಷ್ಮಿಪುರಂ ನಲ್ಲಿ ಬಾಡಿಗೆ ಮನೆಯಲ್ಲಿಇದ್ವಿ. ಮೋದಿ ಕಣ್ಣಿನ ಆಸ್ಪತ್ರೆ ಬಳಿ ವಾಕ್ ಹೋಗಿದ್ವಿ. ಅಲ್ಲಿ ಒಬ್ಬ ಎಳನೀರು ಮಾರುವವನಿದ್ದ. ಶ್ರೀಕಾಂತ ಅಲ್ಲಿ ಯಾವಾಗ್ಲೂ ಎಳನೀರು ಕುಡಿತಿದ್ರು. ಆ ದಿನ ಹಾಗೆಯೇ ವಾಕ್ ಹೋಗಿ ಎಳನೀರಿನವನ ಬಳಿ ಹೋದ್ವಿ. ತುಂಬಾ ರಶ್ ಇತ್ತು. ಅವನು ಒಂದು ಎಳನೀರು ಕಟ್ ಮಾಡಬೇಕಾದ್ರೆ ಕಾಯಿ ಜಾರಿ ಅವನ ಹೆಬ್ಬೆರಳ  ಸುಮಾರು ಭಾಗ ಕೆತ್ತಿ  ಹೋಯ್ತು. ಸ್ವಲ್ಪ ಹೊತ್ತು ಒತ್ತಿ ಹಿಡಿದ್ರು ರಕ್ತಸ್ರಾವ ನಿಲ್ಲಲಿಲ್ಲ. ನಾನು ಅವನಿಗೆ 'ನೀವು ಡಾಕ್ಟರ್ ಗೆ ತೋರಿಸಿ, ಟೆಟಾನಸ್ , ಹೋಲಿಗೆ ಬ್ಯಾಂಡೇಜ್ ಹಾಕಿಸಿಕೊಂಡು  ಬನ್ನಿ ' ನಾವು ಇಲ್ಲಿ ಕಾಯುತ್ತೇವೆ  ಅಂದೆ.  ಅಲ್ಲೇ  ಹಲವಾರು ಡಾಕ್ಟರ್  ಶಾಪ್ ಗಳಿವೆ. ಅವನು ಆಯ್ತು  ಅಂತ ಹೋದ. ನಾನು ಶ್ರೀಕಾಂತ್ ಆ ಹುಡುಗ ಬರುವ ತನಕ ಎಳನೀರು ವ್ಯಪಾರ ಮಾಡಿದ್ವಿ. ಸುಮಾರುಹೊತ್ತು ಆಯ್ತು ಅವನಿಗೆ ಡಾಕ್ಟರ್ ಬಳಿ. ಅವನು ಬರುವಷ್ಟರಲ್ಲಿ ಸುಮಾರು ವ್ಯಾಪಾರ ಮಾಡಿದ್ವಿ. :-)

ಮೊನ್ನೆ ಇದನ್ನೆಲ್ಲಾ ನೆನೆದು ,ಇದರ ಬಗ್ಗೆ ಬರೀತೀನಿ, ಫೋಟೋ ಗೆ ಪೋಸ್ ಕೊಡು ಅಂತ ನಿಹಾ ಳ ಫೋಟೋ ತೆಗೆದೆ . ನಂಬುತ್ತೀರಾ ಇಲ್ಲವಾ, ಅವನೂ  ಕೈಗೆ ಗಾಯ ಮಾಡಿಕೊಂಡ. ಆದರೆ ಅವಂಗೆ ಸಹಾಯಕರಿದ್ದರು ಹಾಗಾಗಿ ನಾವು ವ್ಯಾಪಾರ ಮಾಡುವ ಪ್ರಮೇಯ ಬರಲಿಲ್ಲ. 

ನಮ್ಮ ಮನೆಯಿಂದ ಫೋರಂ ಮಾಲ್ ಗೆ ನಡೆದುಕೊಂಡು ಹೋಗ ಬಹುದು. ಕೆಲವೊಮ್ಮೆ ರಿಕ್ಷಾ ದವರು ಮಿನಿಮಮ್ ಅಂತ ಬರೋದೇ ಇಲ್ಲ. ಆದಿನ ಹಾಗೆ ಆಯ್ತು. ಕೇಕ್ಗೆ  ಬೇಕಾಗುವ ಸಾಮಗ್ರಿ ತರಲು ಹೋಗಿದ್ವಿ. ರಿಕ್ಷಾ ದವರು ಬರಲಿಲ್ಲ. ನಿಧಾನವಾಗಿ ನಡೆದುಕೊಂಡು ಬರ್ತಾ ಇದ್ವಿ. ನಾನು ನೀರಿನ ಬಾಟಲ್ ತರಲು ಮರೆತಿದ್ದೆ. ಸೆಕೆ ಬೇರೆ. ಹಾಗಾಗಿ ಒಂದು ಎಳನೀರು ಕುಡಿದ್ವಿ. ಅದರಲ್ಲಿ ತುಂಬಾ ಗಂಜಿ ಇತ್ತು. ತಿನ್ನೋದು ಬೇಡ ವಾಗಿತ್ತು ಹಾಗಾಗಿ 'ಹಾಗೆ ಕೊಡಿ ಮನೆಗೆ ಹೋಗಿ ಕಟ್ ಮಾಡ್ತೇನೆ/ ಅಂದೆ. ನಿಮಗೆ ಕಟ್ ಮಾಡಕ್ಕೆ ಬರುತ್ತಾ ಅಂತ ಕೇಳಿದ ಎಳನೀರು ಮಾರುವವ. ನಿಹಾ 'ಹೌದು , ನಮ್ಮಮ್ಮನಿಗೆ ಎಲ್ಲಾ ಬರುತ್ತೆ 'ಅಂದ್ಲು. ಅವನು ನಗುತ್ತಾ ' ಎಷ್ಟು ಖುಷಿಯಾಯ್ತು ಮೇಡಂ ಕೇಳಿ, ಗಂಡಸರೇ ಇಂತಾ ಮಾತು ಹೇಳಲ್ಲಾ ' ಅಂದ  ನಾನು ಇಲ್ಲದ ಮೀಸೆಯಡಿ ನಗುತ್ತಾ ಮನೆಗೆ ವಾಪಸ್ ಆದೆ. 
:-)  


February 9, 2018

Niha's illustrations

The book with Niharika's illustration is finally out. I am so very proud iof her!!






January 26, 2018

ಗಣರಾಜ್ಯೋತ್ಸವ 2018

ಎಲ್ಲರಿಗೂ ಗಣರಾಜ್ಯೋತ್ಸವದ.ಶುಭಾಶಯಗಳು

ಮೊನ್ನೆ ಬ್ರಿಟಿಷ್ ಲೈಬ್ರರಯಿಂದ ಬಸ್ ನಲ್ಲಿ .ವಾಪಸ್ ಮನೆಗೆ ಬರಬೇಕಾದರೆ ಕಂಡಕ್ಟರ್ ' ಟಿಕೆಟ್ ಕೇಳಿಸ್ಕೊಳ್ಳಿ, ಟಿಕೆಟ್  ಕೇಳಿಸ್ಕೊಳ್ಳಿ ' ಅನ್ನುತ್ತಿದ್ದ. 
ಅರ್ಥ ಆಗಲಿ ಕ್ಕೆ  ಸಮಯ ಹಿಡಿಯಿತು.
'ಚೆಕಿಂಗ್ ಬರ್ತಾರೆ ಟಿಕೆಟ್ ಕೇಳಿಸ್ಕೊಳ್ಳಿ '
ಕೇಳಿಸ್ಕೊಳ್ಳಿ =ಕೇಳಿ + ಇಸ್ಕೊಳ್ಳಿ
☺☺☺
ನಮ್ಮ ಮನೆಯ ಇವತ್ತು ಪೊಂಗಲ್ ಹೀಗೆ ಸಜ್ಜಾಯಿತು
ಕೊನೆಗೆ ಫೊಟೊ ಮೊಬೈಲ್ ನಿಂದ ಬ್ಲಾಗ್ ಗೆ ರವಾನಿಸಿವುದನ್ನು ಕಲಿತೆ. ಹಾಗಾಗಿ ಈ ಪುಟ್ಟ ಬರಹ 


January 22, 2018

Goodbye to Sri Prakash Rao maam

He was a great fan of Malavika's Biscoot Factory and encouraged such enterprise. Charismatic and charming he was our mentor our father figure when we began our Organisation 17 years ago. With a heavy heart i say goodbye to  a gentle, humble and knowlegdeable soul

ನಮ್ಮ ಸಂಸ್ಥೆಯ ಅಧ್ಯಕ್ಷರು ಶ್ರೀ ಕೆ.ಎಸ್. ಪ್ರಕಾಶ್ ರಾವ್ ಇಂದು ಬೆಳಿಗ್ಗೆ ದೈವಾಧಿನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸೋಣ.

ಅವರು ಸಿಂಡಿಕೇಟ್ ಬ್ಯಾಂಕಿನ ಅತಿ ಹೆಚ್ಚು ಪ್ರೀತಿಯ ಜನಾನುರಾಗಿ ಮಹಾ ಪ್ರಭಂದಕರಾಗಿದ್ದರು. ಅವರ ತಂದೆ ಶ್ರೀ ಸಂಜೀವರಾವ್ ಸ್ವಾತಂತ್ರ ಹೋರಾಟಗಾರರಾಗಿದ್ದರು. ಅವರ ಸ್ಮಾರಕಾರ್ಥ  ತಮ್ಮ ಹುಟ್ಟೂರು ಕುಂದಾಪುರದ ಕಂಭದಕೋಣೆಯಲ್ಲಿ 'ಸಂದೀಪನ' ಶೈಕ್ಷಣಿಕ ಸಂಸ್ಥೆಯನ್ನು ಸ್ಥಾಪಿಸಿ ಗ್ರಾಮೀಣ ಸಮುದಾಯಕ್ಕೆ ಗುಣ ಮಟ್ಟದ ಶೈಕ್ಷಣಿಕ ಸೇವೆ ನೀಡುತ್ತಿದ್ದರು.

ಬೆಂಗಳೂರಿನ ಬಿ.ಟಿ.ಎಮ್. ಪ್ರದೇಶದಲ್ಲಿ ಬ್ಯಾಂಕ್ ಆಫಿಸರ್ಸ್ ಕೋ ಆಪರೇಟಿವ್ ಹೌಸಿಂಗ್ ಸೊಸೈಟಿ ಲಿ. ಸ್ಥಾಪಿಸಿ ಬ್ಯಾಂಕ ಸಿಬ್ಬಂದಿಗಳಿಗೆ ನೆಲೆ ನಿಲ್ಲುವಂತಹ ಅವಕಾಶವನ್ನು ಇತರೇ ಮಿತ್ರರೊಂದಿಗೆ ರೂಪಿಸಿದ್ದರು.


ಒಂ ಶಾಂತಿ.


With deep regrets we inform you that Sri K.S. Prakash Rao, Chairman of the Board of Trustees of IDF left us today. May his soul rest in peace.

He was one of the few very popular General Manager of Syndicate Bank for his humane approach in administration. In memory of his father Sri Sanjeev Rao, who was a freedom fighter, he had established and nurtured ‘Sandeepan’ educational institution at Kambadakone village in Kundapur taluk giving access to quality education to rural community.

He took the lead in establishing housing layout to bank staff and is President of Bank Officers Cooperative Housing Society Ltd without which the common bank staff would not have the opportunity to find a roof in an unaffordable Bangalore.

We miss you Sir.
Om Shanthi

( copy pasted the condolence message from Srikanth Shenoy)


January 10, 2018

ಮರವಾಯಿ/ಖುಬ್ಬೊ/clams ಸುಕ್ಕಾ

ಮಗಳು ಮರವಾಯಿ/ಖುಬ್ಬೊ/clams ಸುಕ್ಕಾ ತಯಾರಿಸುವ ವಿಡೀಯೊ. ಆಶ್ಚರ್ಯ ಅಂದರೆ ಅವಳು ಮೀನು ಮಾಂಸ ತಿನ್ನಲ್ಲ.  ಆದರೂ ಈ ಅಡುಗೆ ಮಾಡಿದ್ದಾಳೆ. ನಾವೆಲ್ಲ ತಿಂದ್ವಿ . ರುಚಿಯಾಗಿತ್ತು.

ಖುಬ್ಬೊ ಮರವಾಯಿ.shellfish ಸುಕ್ಕಾ

January 4, 2018

ರಂಗಶಂಕರದಲ್ಲಿ ನಿನ್ನೆ


ನಿನ್ನೆ ಆಫಿಸ್ ಸ್ಟಾಫ್ ಎಲ್ಲಾ ಜೆ ಪಿ ನಗರದಲ್ಲಿರುವ 24th Main ರೆಸ್ಟಾರಂಟ್ ಗೆ ಹೊಸ ವರ್ಷದ ಪಾರ್ಟಿ ಅಂತ ಹೋಗಿದ್ದರು. ಅಲ್ಲಿಂದ ಬರ್ತಾ ಶ್ರೀಕಾಂತ ಮತ್ತು ಸಾಲಿಮಠರು ರಂಗಶಂಕರಕ್ಕೆ ಹೋಗಿದ್ದರು. ಹೋಗಿ ಅಲ್ಲಿಂದ ನನಗೆ ಫೋನ್ ಮಾಡಿ 'ಇವತ್ತು ಸಂಜೆ ೭,೩೦ ಗೆ 'ಸಾಹೇಬರು ಬರುತ್ತಾರೆ ' ನಾಟಕ ಇದೆ. ಚೆನ್ನಾಗಿದೆಯಂತೆ ಟಿಕೆಟ್ ಬುಕ್ ಮಾಡಲಾ ' ಅಂತ ಫೋನ್ ಮಾಡಿದರು. ನನಗೆ ಕಳೆದ ಎರಡು ರಂಗಶಂಕರದ ನಾಟಕಗಳು ತುಂಬಾ ನೀರಸ ಎನ್ನಿಸಿದಿದೆ. ನಾನು ಮಿನ ಮೇಷ ಏಣಿಸ್ತಿರಬೇಕಾದ್ರೆ. ಹೋಗುವ ಟಿಕೆಟ್ ಬುಕ್ ಮಾಡ್ತೇನೆ , ಮೊದಲು ಒಂದು ಸಲ ನೋಡಿದ್ದೇನೆ ಕಾಮೆಡಿ ಅಂದ್ರು. ನಾನು ಸರಿ ಎಂದೇ. 
ನಾನು ೬.೪೫ ಗೆ ಅಲ್ಲಿ ತಲುಪಿದೆ. ಇವರು ಇನ್ನು ಸೌತ್ ಎಂಡ್ ನಲ್ಲಿರೋ ನಮ್ಮ ಆಫಿಸ್ ನಿಂದ ಹೊರಟಿರಲಿಲ್ಲ. ಮತ್ತು ಹಸಿವೆಯಾಗಿದೆ ಏನಾದ್ರೂ ತಿನ್ನುಕೊಂಡು ಬರ್ತೇವೆ ಅಂದ್ರು. 'ಬೇಗ ಬನ್ನಿ ಲೇಟ ಆದ್ರೆ ನಿಮಗೆ ಎಂಟ್ರಿ ಇಲ್ಲ ' ಅಂದೆ. (ಆದ್ರೆ ರಂಗಶಂಕರಾದವರು ನಾಟಕ ಶುರು ಮಾಡುವಲ್ಲಿ ಸ್ವಲ್ಪಾಲೆಟ್ ಮಾಡುವುದು ಕಳೆದ ಹಲವಾರು ಬಾರಿ ಗಮನಿಸಿದ್ದೇನೆ . ಒಂದು ಸಲ ಅಂತೂ ಪ್ರೇಕ್ಷಕರಿಂದ 'ಟೈಮ್ ಆಯ್ತು ಶುರು ಮಾಡಿ 'ಅಂತ ಕೂಗಿದ್ದು ಇದೆ. 

                                     
ರಂಗಶಂಕರದ ಪುಸ್ತಕ  ಒಂದುರೌಂಡ್ ಹಾಕಿದೆ. ಮನೆಯಲ್ಲಿ ಪುಸ್ತಕದ ಕಪಾಟು ಭರ್ತಿಯಾಗಿದೆ.  ಅದಕೆ ಪುಸ್ತಕ ನೋಡಿದ್ದು ಮಾತ್ರ. ಖರೀದಿಸಲಿಲ್ಲ. ಇತ್ತೀಚಿಗೆ ವಸುಧೇಂದ್ರ ರ ವಿಷಮ ಭಿನ್ನ ರಾಶಿ ಪುಸ್ತಕ ಕೊಂಡಿದ್ದು ಬಿಟ್ಟರೆ ನಾನು ಪುಸ್ತಕದ ಅಂಗಡಿ ಕಡೆ ತಲೇನೆ ಹಾಕಿಲ್ಲ. ವಸುಧೇಂದ್ರರ ಪುಸ್ತಕ ತೀರ್ಥಹಳ್ಳಿಯಲ್ಲಿ ಬಿಟ್ಟು ಬಂದಿದ್ದೇನೆ. ಇನ್ನು ಓದಿಲ್ಲ. 

೭ ಗಂಟೆಗೆ ಜನರೆಲ್ಲಾ ಸರತಿ ಸಾಲಿನಲ್ಲಿ ನಿಲ್ಲಲ್ಲು ಆರಂಭಿಸಿದರು. ಶ್ರೀಕಾಂತ ಮತ್ತು ಸಾಲಿಮಠರು ೭. ೫ ಗೆ ತಲುಪಿದರು. ಸುಮ್ಮನೆ ಬರಲಿಲ್ಲ ನನಗೆ ಅಂತ ಮಿರ್ಚಿ ಬೊಂಡ  ತಂದಿದ್ದರು. ಅದು ಒಂದುಪೇಪರ್ ಪ್ಲೇಟ್ ನಲ್ಲಿ ಸುತ್ತಿ. ಸಾಲಿನಲ್ಲಿ ನಿಂತು ನಾನು ತಿನ್ನುವುದಾ? ಆಗಲೇ ಜನರನ್ನು ಒಳಗೆ ಬಿಡಲು ಆರಂಭಿದ್ದರು. ಒಳ್ಳೆ ಸೈಟ ಸಿಗಲ್ಲ ಅಂತ ನಾವು ಬೇಗ ಬೇಗ ಮೆಟ್ಟಿಲು ಹತ್ತಿ ಒಳಗೆ ಹೋದೆವು.  ನನ್ನ ಬಳಿ ಕವರ್ ಇರಲಿಲ್ಲ. ಅದಕ್ಕೆ ಒಂದು ಟೀಶ್ಯು  ಪೇಪರ್ನಲ್ಲಿ ಬೊಂಡಾಗಳನ್ನು ಸುತ್ತಿ ನನ್ನ ವ್ಯಾನಿಟಿ ಬ್ಯಾಗ್ ನಲ್ಲಿ ಹಾಕ್ಕೊಂಡೆ . ಮಧ್ಯದ ಮೂರನೇ ಸಾಲಿನಲ್ಲಿ ಕೆಲವು ಸೀಟ್ ಖಾಲಿ ಇದ್ದವು , ಅಲ್ಲೇ ಹೋಗಿ ತುರುಕಿಕೊಂಡೆವು. ನಮ್ಮ ಸೈಜ್ ಸ್ವಲ್ಪ ಜಾಸ್ತಿ ಆಗಿದೆ.  ಅದಕೆ ತುರುಕಿಕೊಂಡಿದ್ದು. :-(  ಜ್ಯಾಮ್ ಪ್ಯಾಕ್ ಅಂತಾರಲ್ಲವಾ ಹಾಗೆ. 

ನಾಟಕ ಶುರು ಆದ ಸ್ವಲ್ಪ ಹೊತ್ತಿನಲ್ಲೇ ನನ್ನ ಪಕ್ಕ ಕೂತ  ಹೆಂಗಸು ನನ್ನ ಕಡೆ ಓರೇ ಕಣ್ಣು ಮಾಡಿ ನೋಡಲು ಶುರು ಮಾಡಿದರು.  ಆಮೇಲೆ ನನ್ನ ಪರ್ಸ್ ನೋಡಿದರು .  ಮೊದಮೊದಲು ನನಗೆ ಅರಿವಾಗಲಿಲ್ಲ. ಆಮೇಲೆ ಅವರು ಅಕ್ಕ ಪಕ್ಕ, ತಾವು ಹಾಕಿಕೊಂಡ ಬಟ್ಟೆ ಹಾಗು ಮೆಲ್ಲಗೆ ನನ್ನ ಬಳಿ ಸರಿದು  ಮೂಸಲು ಆರಂಭಿಸಿದರು. ಅವರ ಇನ್ನೊಂದು ಪಕ್ಕ ಕೂತ  ಅವರ ಜತೆ ಬಂದ ಗಂಡಸಿಗೆ 'ಏನು ತಿಂದು ಬಂದ್ಯಾ? ಅಂತ ಕೂಡ ಕೇಳಿದರು .  ಮಾರಾಯ್ರೇ ಆಗ ನನ್ನ ಟ್ಯೂಬಲೈಟ್ ಹತ್ತಿಕೊಂಡಿದ್ದು. ನಮ್ಮ ರಾಯರ ಕರಾಮತೀಯ ಬೋ೦ಡಗಳು.  ತುಂಬಾ ಮುಜುಗರ ಆಯ್ತು. ನಾವು ನೀರಿನ ಬಾಟಲ್, ಮೊಬೈಲ್, ನನ್ನ ವಿಕ್ಸ್ ಕಿ ಗೋಲಿ, ಎಲ್ಲ ಕಾಗಿ ಪರ್ಸ್ ತಡಕಾಡುವಾಗಲೆಲ್ಲ  ಬೋ೦ಡಾದ ಒಂತರಹ ಪರಿಮಳ.  ಪಕ್ಕ ಕೂತವರು ಇನ್ನು ಹಿಂದೆ ಮುಂದೆ ಜರುಗುತ್ತಾ ಮೂಸುವುದನ್ನು  ಆರಂಭಿಸಿದಾಗ ನನಗೆ ಮುಜುಗರ ಕಡಿಮೆಯಾಗಿ ಮಜವೆನಿಸಲು ಆರಂಭವಾಯಿತು. ನನ್ನ ಪುಣ್ಯಕ್ಕೆ ಕಾಮಿಡಿ ನಾಟಕ ಆಗಿದ್ದು ಒಳ್ಳೆ ಆಯ್ತು ಎಲ್ಲರು ನಗುವಾಗ ನಾನು  ನನ್ನ ಪಕ್ಕದವರ   ಚಡಪಡಿಕೆ ನೋಡಿ ಟಾ೦ಯ್ ಅಂತ ಬೊಂಡ ಹೊರಗೆ ತೆಗೆದು ಅವರಿಗೆ ತೋರಿಸಿದರೆ ಅಂದುಕೊಂಡು   ಮುಸಿ ಮುಸಿ ನಗಲಾರಂಭಿಸಿದೆ . ಒಂದು ಸಲ ಸೈಲೆನ್ಸ್ ಇದ್ದಾಗ ಕಿಸಕ್ ಅಂತ ನಕ್ಕೆ. ಶ್ರೀಕಾಂತ್ ನನಗೆ 'ಯಾಕೆ ನಗ್ತಿದ್ದೀಯಾ ಅಂತ ಕೇಳಿದಾಗ ಏನಿಲ್ಲ ಅಂತ ತಲೆ ಅಲ್ಲಾಡಿಸಿದೆ. 
ನಾಟಕ ಸಾಧಾರಣವಾಗಿತ್ತು. ಕೆ.ವಿ. ಸುಬ್ಬಣ್ಣ ಹಾಗು ಕೆ.ವಿ ಅಕ್ಷರ ಅನುವಾದಿಸಿದ್ದ ನಿಕೊಲಾಯ್ ಗೊಗೊಲ್ ಬರೆದ  ರಷಿಯನ್ ನಾಟಕ ,Inspector General. ಅದನ್ನು ಆಧುನಿಕರಿಸಿ ನಾಟಕ ಮಾಡಿದ್ದಾರೆ. ಅದರಲ್ಲಿ ಮೋದಿ, ಪಪ್ಪು, ಇಟಲಿ , Nation wants to know ಎಲ್ಲ ಸಭಿಕರನ್ನು ನಗಿಸುವಲ್ಲಿ ಯಶಸ್ವಿಯಾದವು. 

ದೊಡ್ಡ ಹುದ್ದೆಯಲ್ಲಿರುವ ಆಫಿಸರ್ ಒಬ್ಬರು ಬರುತ್ತಾರೆಂದು ತಯಾರಾಗುವ ಸರಕಾರೀ ಕಾರಕೂನರು, ಮೇಯರ್ ಅವರ ನೇತೃತ್ವದಲ್ಲಿ ಬೇರೊಬ್ಬ ಸಾಧಾರಣ ಮನುಷ್ಯನನ್ನು ದೊಡ್ಡ  ಆಫಿಸರ್ ಎಂದು ಭಾವಿಸಿ ಅವನನ್ನು ಮಸ್ಕಾ ಹೊಡೆದು. , ಆ ವ್ಯಕ್ತಿ ಕೂಡ ಇವರನ್ನು ಮಂಕುಬೂದಿ ಎರಚುತ್ತಾ , ಎಲ್ಲರು ಕೊನೆಗೆ ಇಂಗು ತಿಂದ ಮಂಗನಂತಾಗಿ ಒಬ್ಬರನ್ನೊಬ್ಬರು ಆರೋಪಿಸುತ್ತ,ಅವರವರ ಕಪಟ ಮುಖವಾಡಗಳನ್ನು ತೆರೆಯುತ್ತಾ,  ನಾಟಕ ಕೊನೆಗೊಳ್ಳುತ್ತದೆ 
ಹಲವಾರು ವರ್ಷಗಳ ಹಿಂದೆ ನಾವು ಕಾಲಜಿನಲ್ಲಿ ಈ ನಾಟಕ ಮಾಡಿದ್ದ ನೆನಪು. ಅದು ಇದ್ದಕ್ಕಿಂತ ಚೆನ್ನಾಗಿತ್ತು ಅನ್ನಿಸ್ತು. ನಿನ್ನೆಯ ನಾಟಕ ಸೆಪ್ಪೆಯಾಗಿತ್ತು.

ಮನೆಗೆ ಬಂದು ಮೈಕ್ರೋವೇವ್ ನಲ್ಲಿ ಬೋ೦ದಗಳನ್ನು ಬಿಸಿಮಾಡಿ, ನಾಟಕದಲ್ಲಿ ನಮ್ಮ ಕಾಮೆಡಿ ಬಗ್ಗೆ ಮಕ್ಕಳೊಂದಿಗೆ ಶೇರ್ ಮಾಡ್ತಾ  ಗುಳುಂ  ಮಾಡಿದ್ವಿ.