August 29, 2016

ಪಾತ್ತೊಳಿ (ಅರಸಿನ ಎಲೆ ಕಡುಬು)

ನನ್ನ ಮಗಳು ಕೊಂಕಣಿ ಅಡುಗೆಗಳನ್ನು ರೆಕಾರ್ಡ್ ಮಾಡುತ್ತಾಳಂತೆ. ವಿಡಿಯೋ ಕೊಂಕಣಿಯಲ್ಲಿದ್ದರು ಅದಕ್ಕೆ ಇಂಗ್ಲಿಷ್ ಸಬ ಸ್ಕ್ರಿಪ್ಟ್ ಇದೆ. ಆದ್ದರಿಂದ ಈ ತಿಂಡಿಗಳನ್ನು ಯಾರೇ  ಮಾಡಲು ಪ್ರಯತ್ನ ಪಡಬಬಹುದು.   ಮೊದಲನೆಯ ಪ್ರಯತ್ನ.
ಕೆಳಗಿನ  ಕೊಂಡಿಯನ್ನು ಕ್ಲಿಕ್ಕಿಸಿ
patholi

:-)

August 16, 2016

ಮಾಡಿದುಣ್ಣೋ ಮಾಹಾರಾಯ / what goes round comes round

ಒಬ್ಬನಿದ್ದ ಬಡವ. ಬೆಣ್ಣೆ ಮಾರಿ ಜೀವನ ನಡೆಸುತ್ತಿದ್ದ. ಅವನು ಒಂದು ಅಂಗಡಿಗೆ ಮಾತ್ರ ಬೆಣ್ಣೆ ಮಾರುತ್ತಿದ್ದ. ಒಂದು ಕೆ ಜಿ ಬೆಣ್ಣೆ ಮಾರಿ ಅದರ ದುಡ್ಡು ಇಸಕೊಂಡು ಮನೆಗೆ ಹೋಗುವುದು. ಇದು ಅವನ ದಿನಚರಿ ಒಂದು ಸಲ ಆ ಬೆಣ್ಣೆ ಕೊಂಡುಕೊಳ್ಳುವ  ಧಣಿ ಗೆ ಬೆಣ್ಣೆ  ಯನ್ನು ತೂಕ ಮಾಡುವ ಹುಕ್ಕಿ ಬಂತು. ಅರೆ ಇದೇನು ೯೦೦ ಗ್ರಾಮ್ ಮಾತ್ರ ಇದೆ. ಬರಲಿ ಅಂವ ಮಾಡ್ತೀನಿ ಇವತ್ತು ಅಂತ ಅವನಿಗೆ ಕಾಯ್ತಾ ಇದ್ದ.
ಬೆಣ್ಣೆ ಮಾರುವವ ಬಂದೊಡನೆ "ಏನಂತ ತಿಳಕಂಡಿದ್ದೀಯಾ. ಇಷ್ಟು ದಿನ ಮೋಸ ಮಾಡಿದೀಯಾ. ಇನ್ನೇ೦ದು ನನ್ನ ಅಂಗಡಿಗೆ ಬೆಣ್ಣೆ ಮಾರಲು ಬರಬೇಡಾ"ಅಂತ ಆವಾಜ್ ಹಾಕಿದ.
ಬೆಣ್ಣೆ ಮಾರುವವ: ಧಣಿಗಳೇ ಹಾಗೆ ಮಾಡ ಬೇಡಿ. ಈ ಬಡವನ ಹೊಟ್ಟೆ ಮೇಲೆ ಹೊಡಿಬೇಡಿ. ನೀವು ಪ್ರತಿ ದಿನ ಕೊಡುವ ದುಡ್ಡಿನಿಂದಲೇ ನನ್ನ ಜೀವನ. ಎಷ್ಟು ಬಡವನೆಂದರೆ ಬೆಣ್ಣೆ ತೂಕ ಮಾಡಲು ನನ್ನ ಬಳಿ ಒಂದು ಕೆ ಜಿ ತೂಕದ ತಕ್ಕಡಿ  ಕಲ್ಲೇ ಇಲ್ಲ. ನೀವು ಕೊಟ್ಟ ಒಂದು ಕೆ ಜಿ ಸಕ್ಕರೆ ಗೆ ಸಮ ಪ್ರಮಾಣದಲ್ಲಿ ಬೆಣ್ಣೆ ತೂಕ ಮಾಡಿ  ಕೊಡುವವ ನಾನು .....
ಧಣಿ = ಇಂಗು  ತಿಂದ  ಮಂಗ
ವಾಟ್ಸ್ಯಾಪ್ ನಲ್ಲಿ ಬಂದಿದ್ದು.

July 29, 2016

ಕಿರುಗತೆ - a very short story

ಆ ಮನೆಯಲ್ಲಿ ಗದ್ದಲವೋ ಗದ್ದಲ. ಅಲ್ಲಿ ಒಂದು ಮರಣ ಘಟಿಸಿತ್ತು. ತಾಯಿ ತನ್ನ ಮಗನ ಕಳೇಬರವನ್ನು ನೆಟ್ಟ ನೋಟದಲ್ಲಿ ನೋಡುತ್ತಿದ್ದಳು. ಮುಖದಲ್ಲಿ ಯಾವುದೇ ವಿಕಾರವು ಇರದೇ. ಕಣ್ಣಲ್ಲಿ ನೀರಿನ ಪಸೆ ಕೂಡ ಇರಲಿಲ್ಲ. ಆಕೆಯ ಅತ್ತೆ ಆಕೆಗೆ ತಿವಿದು, 'ಏನಾದರೂ ಉಸುರು, ಅತ್ತು ಬಿಡು , ಹೀಗೆ ಸುಮ್ಮನೆ ಮಾತ್ರ ಇರಬೇಡ' ಅಂತ ಒಂದುಕಡೆ ಹೇಳುತ್ತಲೂ, ಇನ್ನೊಂದು ಕಡೆ ಎದೆ ಬಡಿದು ಅಳುತ್ತಿದ್ದಳು. ಮಗನ ತಂದೆಯಂತೂ ಮೂರ್ಛೆ ಹೋಗಿ ಸಂಬಂಧಿಕರು ಗಾಳಿ ಹಾಕಿ ಮುಖದ ಮೇಲೆ ನೀರು ಚಿಮುಕಿಸುತ್ತಿದ್ದರು .

ಅತ್ತೆ ಇನ್ನೊಮ್ಮೆ ಆಕೆಯನ್ನು ತಿವಿದಾಗ, ಆಕೆ ರುದ್ರಾವತಾರ ತಾಳಿ , ಅತ್ತೆಯನ್ನು ದೂರ ನೂಕಿ 'ಯಾಕಳಬೇಕು  ನಾನು? ಅದೂ  ಪ್ರೀತಿ ಮಾಡಿದವಳು ಸಿಗಲಿಲ್ಲವೆಂದು ಸತ್ತವನಿಗೋಸ್ಕರ?. ಅಷ್ಟೇಯಾ ಜೀವನ ಅಂದ್ರೆ? 

ಅಳಬೇಕಾದವರು ನೀವು. ಮೊದಲನೇಯದು ಹೆಣ್ಣು ಮಗುವಾಯ್ತು ಯಾಕೋ ಸುಮ್ಮನಿದ್ರಿ. ಆದರೆ ನನ್ನ ನನ್ನ ಆರೋಗ್ಯ ಕೆಟ್ಟು hOgiddaroo ಎರಡು ಮೂರೂ ನಾಲ್ಕು ಹೆಣ್ಣು ಭ್ರೂಣಗಳನ್ನು , ಗಂಡು ಮಗು ಹೆರುವ ತನಕ , ,ನಿಮ್ಮಿಂದಾಗಿ ಸಾಯಿಸಲಿಲ್ಲವೇ? ಅದರ ಪಾಪ ನಿಮಗೆ ತಗುಲಿದೆ. ಗಂಡು ಮಗು ಎಂದು ನೀವು , ಅವನ ತಂದೆ ಸೇರಿ ತಲೆ ಮೇಲೆ ಏರಿಸಿ ಕುರಿಸಿದ್ರಿ. ಕೇಳಿದ್ದನ್ನೆಲ್ಲ ಕೊಡಿಸಿದ್ರಿ. ಈಗ ಹುಡುಗಿಯೊಬ್ಬಳ ಪ್ರೀತಿ ಸಿಗಲಿಲ್ಲ ವೆಂದು ಆತ್ಮಹತ್ಯೆ ಮಾಡಿದವನಿಗೋಸ್ಕರ ನಾ ಖಂಡಿತ ಅಳಲಾರೆ. 

ಅಲ್ಲೇ ಇದ್ದ ಮಗಳು 'ಬಾ ಅಮ್ಮ ನನ್ನ ಜತೆ ' ಅಂದಾಗ ಅವಳ ಆಸರೆ ಪಡೆದು ಆಚೆ ನಡೆದಳಾಕೆ. 


July 27, 2016

The Guiding Factor (TGF)

Niha my daughter does the script for these videos. do have a look and share with your friends who would like to visit BangaLuru, This will help them to make their stay enjoyable

ನಿಹಾರಿಕಾ 'ದ  ಗೈಡ್ಇಂಗ್ ಫ್ಯಾಕ್ಟರ್ ' ಎಂಬ ವಿಡಿಯೋ ಗಳಿಗೆ ಸಂಭಾಷಣೆಗಳನ್ನು ಬರೆಯುತ್ತಾಳೆ. ಬೆಂಗಳೂರಿಗೆ ಭೆಟ್ಟಿ ನೀಡುವ ಹೊಸಬರಿಗೆ ಇದರಿಂದ ತುಂಬಾ ಅನುಕೂಲವಾಗುತ್ತದೆ .
ಯಾವುದಾದರೂ ಒಂದು ಕೊಂಡಿಯನ್ನು ಕ್ಲಿಕ್ಕಿಸಿದರೆ ಉಳಿದ ವಿಡಿಯೋಗಳು ಕಾಣಸಿಗುತ್ತವೆ

THE GUIDING FACTOR

July 25, 2016

ಕನ್ನಡ ಪ್ರಭ -ಕಾಡುವ ನೆನಪು - ನಗುವಾಗ ನೆನಪಾಗುವಳು ವಿನ್ನಿ




ಚಿಕ್ಕಂದಿನಲ್ಲಿ ಅಜ್ಜನ ಹದ್ದುಬಸ್ತಿನಲ್ಲಿ ಬೆಳೆದೆ. ಅಜ್ಜ ಇಂಜಿನಿಯರ್. ಹಾಗಾಗಿ ಮನೆಗೆ  ಬರುವವರ ಸಂಖ್ಯೆ ದೊಡ್ಡದು. ಅವರ ಕ್ಲಯಂಟ್ಸ್  ಬಂದಾಗ ನಾನು ಹೊರಗಡೆ ಹಾಲ್  ಗೆ  ಬರೋದು ಅವರಿಗೆ ಇಷ್ಟ ಆಗ್ತಿರಲಿಲ್ಲ. ನನ್ನ ಕೋಣೆಯಲ್ಲಿ ಇರಬೇಕು. ನನ್ನ ಕೋಣೆಯಲ್ಲಿ ಪುಸ್ತಕ ಬೊಂಬೆಗಳು ಹಲವಾರು. ಅಜ್ಜ ತುಂಬಾ ಅನೂಕೂಲವಂತರು. ಆದ್ದರಿಂದ ನಾನು ಕೇಳಿದ್ದನ್ನೆಲ್ಲ ಕೊಡಿಸುತ್ತಿದ್ದರು. ಆದರೆ ಬೇರೆ ಯವರ ಸಂಪರ್ಕದಲ್ಲಿ ಇರಗೊಡುತ್ತಿರಲಿಲ್ಲ. ಹಾಗಾಗಿ ನಾನು ಮೌನಿ . ಯಾರ ಜತೆನೂ ಹೆಚ್ಚು ಮಾತು ಕತೆ ನಗು ಇವೆಲ್ಲ ಇರಲಿಲ್ಲ. ನಾನಿ (ಅಜ್ಜಿ)ಗೆ ಕ್ಯಾನ್ಸರ್  ಆದಾಗ ನನಗೆ ನನ್ನ ಅಪ್ಪ ಅಮ್ಮನ ಮನೆಗೆ ರವಾನಿಸಲಾಯಿತು. ಅಜ್ಜನ ಮನೆಯಲ್ಲಿ ರಾಣಿಯ ಹಾಗೆ ಬೆಳೆದ ನನಗೆ, ನನ್ನ ಉಳಿದ ಮೂವರು ತಮ್ಮ ತಂಗಿಯಂದಿಯರೊಂದಿಗೆ ಹೇಗೆ ಇರಬೇಕು ಅಂತ ಗೊತ್ತಾಗುತ್ತಿರಲಿಲ್ಲ. ಅವರ ಜಗಳಗಳನ್ನು ಬಿಟ್ಟ ಬಾಯಿಯಿಂದ ನೋಡೋದಷ್ಟೇ ನನ್ನ ಕೆಲಸ . ಹತ್ತನೆಯ ತರಗತಿಯಲ್ಲಿದ್ದಾಗ ನಂದಿನಿ ಅಂತ ಹುಡುಗಿ ನನ್ನ ಕ್ಲಾಸ್ ಜಾಯಿನ್ ಆದಳು. ನಾನು ಸುಮ್ಮನಿರುತ್ತಿದ್ದರಿಂದಲೋ ಏನೋ ಕೀಟಲೆ ಮಾಡಿ ನನ್ನನ್ನು ನಗಿಸುವ ಪ್ರಯತ್ನದಲ್ಲೇ ಇರುತ್ತಿದ್ದಳು. ಆಗ ನಗಲು   ಕಲಿತವಳು ನಾನು. ಅದೂ ಶಾಲೆಗೆ  ಮಾತ್ರ ಸೀಮಿತ ವಾಗಿತ್ತು.  ಸಿನಿಮಾ ನೋಡಿ ಅದರ ಕತೆಯನ್ನು ರಸವತ್ತಾಗಿ ವಿವರಿಸೋದು, ಟೀಚರ್ ಗಳನ್ನು ಅಣಕಿಸೋದು ಇಂತವೆಲ್ಲ ಮಾಡಿ ನಾನು ನಗುವಂತೆ ಮಾಡುತ್ತಿದ್ದಳು. ಆದರೆ ಅದು ಒಂದೆ ವರ್ಷ . ಆಮೇಲೆ ನಾವು ದೂರ ದೂರ.  ಪುನ: ನಾನು ನಗುವುದನ್ನು ಮರೆತೆ.  ನನಗೆ ಬೇಗ ಮದುವೆಯಾಯಿತು. ಆಗ ಪರಿಚಯವಾಗಿದ್ದು. ವಿನುತಾ. ವಿನುತಾ ನನ್ನ ಗಂಡನ ಆಪ್ತ ಸ್ನೇಹಿತರ ಹೆಂಡತಿ. ಸದಾ ನಗು ಮುಖ. ಆಮೇಲೆ ನಗಿಸುವುದು ಅವಳ ಜವಾಬ್ದಾರಿ. ಎರಡುವರೆ ವರ್ಷಗಳ ನಮ್ಮ ಒಡನಾಟದಲ್ಲಿ ಅವಳ ಜತೆ ನಕ್ಕಿದಷ್ಟು ನಾನು ಈವರೆಗೂ ನಕ್ಕಿದ್ದಿಲ್ಲ.  . ಅವಳು ಸ್ವಾಭಿಮಾನಿ. ತನ್ನ ಕಾಲಲ್ಲೇ ನಿಲ್ಲಬೇಕೆನ್ನುವ ಹಂಬಲ. ತನ್ನದೇ ಸ್ವಂತ ಉದ್ದಿಮೆ ಹಾಕುವ ನಿಟ್ಟಿನಲ್ಲಿ ಕಾರ್ಯಗತಳಾಗಿದ್ದಳು. ಇದರ ಮಧ್ಯ ಅವಳಿಗೊಂದು ಪುಟಾಣಿ ಮಗಳು ಹುಟ್ಟಿದಳು, ಮನೆಯಲ್ಲಿ ಅವಳ ಅಮ್ಮ ಹಾಗೂ  ಕೆಲಸದ ಪುಟ್ಟ ಹುಡುಗಿಯೊಂದಿಗೆ ಮಗುವನ್ನು ಬಿಟ್ಟು ಟ್ರೈನಿಂಗ್ ಅದು ಇದು ಅಂತ ಮನೆಯಿಂದ ಹೊರಗಿರುತ್ತಿದ್ದಳು. ಪುಟ್ಟ ಮಗುವನ್ನು ಬಿಟ್ಟು ಹೋಗಲು ಸಂಕಟವಾಗುತ್ತೆ, ಆದರೆ ಅವಕಾಶ ಬಂದಾಗ ಅದನ್ನು ಬಾಚಿಕೊಳ್ಳಬೇಕು ಅನ್ನುತ್ತಿದ್ದಳು ನನಗೆ. ಅವಳನ್ನು ನೋಡಿದರೆ ತುಂಬ ಖುಶಿ ನನಗೆ. ನಾವು ಆಗ ಇದ್ದದ್ದು ಕೊಪ್ಪ ದಲ್ಲಿ. ಪ್ರತಿ ಎರಡು ತಿಂಗಳಿಗೊಮ್ಮೆ  ಅವಳಿದ್ದ ಊರಿಗೆ ಹೋಗಿ ನಾಲ್ಕೈದು ದಿನ ನಮ್ಮ ಝಾಂಡಾ. ಹೊಸ  ಅಡುಗೆಗಳನ್ನು ಕಲಿಯೋದು, ಅದು ಸರಿಯಾಗದಿದ್ದಲ್ಲಿ ಅದಕ್ಕೆ ಎನೋ ಹೆಸರು ಇಟ್ಟು ನಗೋದು, ಟಿ ವಿಯಲ್ಲಿ ಬರುವ ಜಾಹೀರಾತುಗಳನ್ನು ಕೊಂಕಣಿಕರಿಸಿ ಹಾಡಿ, ಬೊಬ್ಬೆ ಹಾಕಿ ನಗುವುದು, ನನಗೆ ಏನೇನೋ  ಮೇಕ್ ಅಪ್ ಮಾಡುವುದು,  ಇಂತಹುದೇ ಎಲ್ಲಾ ಮಾಡುತ್ತಿದ್ದೆವು. ಒಂದು ದಿನ ಊರಲ್ಲಿದ್ದಾಗ ನಮಗೆ  ಟೆಲಿಗ್ರಾಮ್. ಅವಳ ಪುಟ್ಟ ಕಂದ ನಿದ್ದೆಯಲ್ಲೇ ಇಹ ಲೋಕ ತ್ಯಜಿಸಿತ್ತು. ಹುಟ್ಟುವಾಗಲೇ ಇದ್ದ ಹೃದಯದ ರಂದ್ರ ಆ ಪುಟಾಣಿಯನ್ನು  ಬಲಿ  ತೆಗೆದುಕೊಂಡಿತು.  ಆಗ  ನಾನು ಹೆಚ್ಚು  ಹೆಚ್ಚು ಅವಳ ಬಳಿ ಹೋಗಿ ಇರುತ್ತಿದ್ದೆ. ನಗು ಎಲ್ಲ ಮಾಯ, ಟೈಮ್ ಟ್ಟೈಮ್ ಗೆ ಮಶೀನ್ ತರಹ ಅಡುಗೆ ತಿಂಡಿ ಮಾಡಿ ಹಾಕಿ ಸುಮ್ಮನೆ ಹಾಲ್ ನ  ಸೋಫಾದಲ್ಲಿ ದೃಷ್ಟಿ ಎಲ್ಲೋ ನೆಟ್ಟು ಕುಳಿತುಕೊಳ್ಳುತ್ತಿದಳು. ನಾನು ಅವಳ ಜತೆ  ಸುಮ್ಮನೆ ಕುಳಿತುಕೊಳ್ಳುತ್ತಿದೆ.  ಅಷ್ಟರಲ್ಲೇ ನಾನು ತಾಯಿಯಾಗುವ ಮುನ್ಸೂಚನೆ. ಅಮ್ಮನ ಮನೆಗೆ ಹೋಗಿದ್ದೆ. ಅದೊಂದು ದಿನ ಯಾಕೋ ಸಂಕಟ. ಊಟ ಬೇಡ ನೀರು ಬೇಡ . ಅಮ್ಮ ಬೈದು ನನಗೆ ತಿನ್ನಿಸಿದ್ದರು ಆ ದಿನ, ವಿನ್ನಿಯ ನೆನಪು ತುಂಬಾ ಕಾಡುತ್ತಿತ್ತು. ಈಗಿನ ಹಾಗೆ ಆಗ  ಬೇಗ ಯಾರನ್ನೂ ಸಂಪರ್ಕಿಸಲು ಸಾಧ್ಯವಿರಲಿಲ್ಲ. ಟ್ರಂಕ್ ಕಾಲ್ ಬುಕ್ ಮಾಡಿ ಆಮೇಲೆ ಯಾವಾಗಲೋ ಮಾತು. ಕೊನೆಗೆ ನಾನು ಕೇಳ ಬಾರದ ಸುದ್ದಿಯನ್ನು ಹೊತ್ತು ತಂದಿತ್ತು ಇನ್ನೊಂದು ಟೆಲಿಗ್ರಾಮ್ , ವಿನ್ನಿ ಆತ್ಮ ಹತ್ಯೆ ಮಾಡಿ ಕೊಂಡಿದ್ದಳು.ಕಂದನ ಸಾವು ಅವಳು ತಡಕೊಳ್ಳಲಾಗಲಿಲ್ಲ. ಯಾವಾಗಲೋ ನನ್ನ ಜತೆ ಶೇರ್ ಮಾಡಿಕೊಂಡಿದ್ದಳು ' ನನ್ನ ಅಲಕ್ಷ  ದಿಂದ ಮಗು ಹೋಯಿತು' 
 ಅಂತ. ಆದಷ್ಟು ಸಮಾಧಾನ ಮಾಡಲು ಪ್ರಯತ್ನಿಸಿದೆ, ಅದು ವಂಶವಾಹಿ ಕಾಯಿಲೆ, ನೀನೇನು ಮಾಡುವ ಹಾಗಿರಲಿಲ್ಲ ಅಂತ. ಅವಳ ಸಾವನ್ನು ನನ್ನಿಂದ ಮುಚ್ಚಿಡುವ ಪ್ರಯತ್ನ ಮಾಡಿದರು ಎಲ್ಲರೂ. ಆದರೆ ನನಗೆ ಗೊತ್ತಾಯಿತು. ಕೆಲ ಹೊತ್ತು ಗೋಳಾಡಿ  ಅತ್ತೆ. ಆಮೇಲೆ ಪುನ: ಮೌನಿ ಯಾದೆ. ನಗುವುದನ್ನು ಮರೆತೇ, ನನ್ನ ಪುಟ್ಟ ಮಗಳು ನಿಹಾ ಹುಟ್ಟುವವರೆಗೆ. ಮೂವತ್ತು  ವರ್ಷಗಳೇ ಕಳೆದು ಹೋದವು ಈ ಘಟನೆಗೆ. ಈಗ ನಗಿಸುವ ಜಾವಾಬ್ದಾರಿ ನನ್ನ ಮಗಳದ್ದು. ಈಗ ಜೋರಾಗಿ ನಗುವಾಗಲೆಲ್ಲ , ತುಂಬಾ ಖುಷಿಯಾಗಿದಾಗ ವಿನ್ನಿಯನ್ನು  ನೆನೆಸಿಕೊಳ್ಳುತ್ತೇನೆ. 

July 13, 2016

ಕೇರಳದ ವಾಯ್ನಾಡ್ ನ ಸುಲ್ತಾನ್ ಬತ್ತೇರಿ

ನಾನು  ಮುಂಬೈನಲ್ಲಿ ಹುಟ್ಟಿ ಬೆಳೆದರು ಏಕಾಂತ ಬಯಸುವವಳು. ಬೆಂಗಳೂರು ನನಗಿಷ್ಟ ಆದರೂ ಆಗಾಗ ಬೆಂಗಳೂರಿನಿಂದ ಎಲ್ಲಾದರೂ ಹೊರಗೆ ಹೋಗಲು ಬಯಸುತ್ತೇನೆ.
ಹಿಂದಿನ ತಿಂಗಳು ನಿಹಾರಿಕಾಗೆ ಕೇರಳದ ಸುಲ್ತಾನ್ ಬತ್ತೇರಿಯ ಹೊಸ ಹೊಲಿಡೇ ಹೋಮ್ ನ ಫೋಟೋ ಶೂಟ್ ಒಂದರಲ್ಲಿ ಅಸ್ಸಿಸ್ಟ೦ಟ್ ಆಗಿ ಬರಲು ಆಹ್ವಾನವಿತ್ತು. ಕೊನೆ ಕ್ಷಣದಲ್ಲಿ 'ಅಮ್ಮ ನೀನು ಬರುತ್ತೀಯಾ' ಸುಮ್ಮನೆ ಕೂತು ಓದಬಬಹುದು ಎಂದಳು. ಯಾಕಾಗಬಾರದು ಎಂದು ಕೂಡಲೇ ಬಟ್ಟೆ ಬರೇ ತಿನಿಸುಗಳನ್ನು ಪ್ಯಾಕ್ ಮಾಡಿದೆ. ಮಧ್ಯಾಹ್ನ ಸರಿಯಾಗಿ ೩. ೩೦ ಗೆ ಬಸ್ ಕೆಂಗೇರಿ ಬಸ್ ನಿಲ್ದಾಣದಿಂದ ಹೊರಟಿತು. ಮೈಸೂರಿನಲ್ಲಿ ಒಂದು ಸ್ಟಾಪ್ ಬಿಟ್ಟರೆ ಸೀದಾ ಗುಂಡ್ಲುಪೇಟೆ ಗೆ ಸಂಜೆಯ ಚಹಾ ಗೆ ನಿಲ್ಲಿಸಿದರು. ಕತ್ತಲೆ ಯಲ್ಲಿ ಅರಣ್ಯದ ರಸ್ತೆಯಲ್ಲಿ ಹಜ್ಜೆಗೊಂದರಂತೆ ಸ್ಪೀಡ್ ಬ್ರೇಕರ್ ಗಳು. ಒಂದು ಆನೆಯ ಹಿಂಡು ನಮಗೆ ಕಾಣ ಸಿಕ್ಕಿತು. ಸಣ್ಣಕ್ಕೆ ಮಳೆ ಹನಿತಾ ಇದ್ದದರಿಂದ ವಾತಾವರಣ ತಂಪಾಗಿತ್ತು. ರಾತ್ರಿ ೮.೩೦ ಗೆ ನಾವು ಸುಲ್ತಾನ ಬತ್ತೇರಿ ತಲುಪಿದೆವು. ಹೊಲಿಡೇ ಹೋಮ್ ನ  ಮ್ಯಾನೇಜರ್ ಅಜೀಶ್ ನಮ್ಮನ್ನು ಕರೆದೊಯ್ಯಲು ಬಂದಿದ್ದರು. ಕಾರ್ ನಲ್ಲಿ ಸುಮಾರು ಹೊತ್ತು ಪ್ರಯಾಣ ಮಾಡಿದ ಹಾಗಾಯಿತು. ಏನಪ್ಪಾ ಇಷ್ಟು ಕತ್ತಲು ಹತ್ತಿರದಲ್ಲಿ ಯಾವ ಮನೆ ಬಿಡಿ, ಮನುಷ್ಯರು ಕಾಣ ಸಿಗಲಿಲ್ಲ.
ಚಿಕ್ಕ ಚೊಕ್ಕದಾದ ತ್ರೀ  ರೂಟ್ ಸ್  ಹೋಲಿಡೇ ಹೋಮ ತಲುಪಿದೆವು. ಹಸಿವೆಯಿಂದ ಹೊಟ್ಟೆ ತಾಳ ಹಾಕಲಾರಂಭಿಸಿತು. ಬೇಗ ಬೇಗನೆ ಒಂದು ಸುತ್ತು ಇಡೀ ಹೋಮ್ ನ ನೋಡಿ ಬಂದೆವು. ಬಿಸಿ ಬಿಸಿ ಅನ್ನ ಸಾಂಬಾರ್ , ಹಪ್ಪಳ ಉಪ್ಪಿನಕಾಯಿಯ ಊಟ ತುಂಬಾನೇ ಚೆನ್ನಾಗಿತ್ತು. ರಾತ್ರಿ ಮೆತ್ತನೆಯ ಹಾಸಿನ ಮೇಲೆ ಮಲಗಿದ್ದೆ, ನಿದ್ದೆ, ಬೆಳಿಗ್ಗೆ ಹಕ್ಕಿಗಳ ಕಲರವಕ್ಕೆ ಎಚ್ಚರವಾಯಿತು. ನಿಹಾ ಫೋಟೋ ಶೂಟ್ ಗೆ ತಯಾರು ಮಾಡುತ್ತಿದ್ದ ಹಾಗೆ ನಾನು ಒಂದು ರೌಂಡ್ ವಾಕ್ ಅಂತ ಹೊರಟೆ. ಐದೇ  ನಿಮಿಷದಲ್ಲಿ ನಾವು ಹಿಂದಿನ ದಿನ ರಾತ್ರಿ ಇಳಿದ ಬಸ್ ಸ್ತ್ಯಾಂಡ್ ಸಿಕ್ಕಿತು. ಅಲ್ಲಿಂದ ಮುಂದೆ ಪೇಟೆ. ಅಷ್ಟೇ ಅಲ್ಲ ಅಲ್ಲೆಲ್ಲ ಹಲವಾರು ಮನೆಗಳಿದ್ದವು. ನಗು ಮುಖದ ಹಲವು ಜನರು ಸಿಕ್ಕಿದರು. ಹಾಲಿನವ, ಮೀನು ಮಾರುವವ, ಇತ್ಯಾದಿ.
ಹಸಿರಿನಿಂದ ಕುಡಿದ ಸುಲ್ತಾನ ಬತ್ತೇರಿ ನಿಜಕ್ಕೂ ಒಂದು ಸುಂದರ ಆಹ್ಲಾದಕರ ವಾತಾವರಣದ ತಾಣ. ಜಿಂಕೆ ಗಳು ಭಯ ಭೀತಿಯಿಲ್ಲದೇ  ನಮಗೆ ಸೊಪ್ಪು ಹಾಕದೆ ತಮ್ಮದೇ ಲೋಕದಲ್ಲಿ ಇರುತ್ತಾರೆ.


                  red squirrel, ಕೆಂಪು ಅಳಿಲು
ಕೇರಳದ ವಿಶೇಷ ತಿಂಡಿ ಪುಟ್ಟು ಮತ್ತು ಕಡಲ್ ಕರಿ, ಪುರಿ , ಅವಿಯಲ್ ಮುಂತಾದ ಅಡಿಗೆಗಳನ್ನು ತಂಗಮ್ಮ ಅವರು ಮಾಡಿ ಬಡಿಸಿ ನಾವು  ಸವಿಯುವ ಅವಕಾಶವಾಯಿತು

ಹತ್ತಿರದಲ್ಲಿ ಟೂರಿಸ್ಟ್ ಜಾಗಗಳು ಹಲವು. ತ್ರೀ ರೂಟ್ಸ್ ನವರ ಹಲವಾರು ಟೂರ್ ಪ್ಯಾಕೇಜ್ ಗಳಿವೇ.

ನೀವು ಏಕಾಂತ ಬಯಸುವವರಾದರೆ, ಅಥವಾ ಏಕಾಂತದಲ್ಲಿ ಓದು ಬರಹ ಮಾಡುವುದಾದರೆ, ಹನಿಮೂನ್ ಗೆ  ಈ ಹೋಲಿಡೆ ಹೋಮ್ ಪ್ರಶಸ್ತವಾಗಿದೆ.
ಇಲ್ಲಿವೆ ಕೆಲವು ಸುಂದರ ಚಿತ್ರಗಳು. ಈ ಚಿತ್ರಗಳನ್ನು ಬ್ಲಾಗ್ ಬರಹಗಾರರ ಅನುಮತಿಯ ಮೇರೆಗೆ ನನ್ನ ಬ್ಲಾಗ್ ನಲ್ಲಿ ಬಳಸಿಕೊಂಡಿದ್ದೇನೆ. . ಹಾಗೆಯೇ ಅವರ ಬ್ಲಾಗ್ ಕೊಂಡಿಯನ್ನು ನೀಡುತ್ತೇನೆ.
LOYSNOISE

ಸೋ ಬೆಂಗಳೂರಿನಿಂದ ಬ್ರೇಕ್ ಬೇಕೆನಿಸಿದರೆ ತ್ರೀ ರೂಟ್ಸ್ ಹೋಲಿಡೇ ಹೋಮ್ ಸಂಪರ್ಕಿಸಿ.

Three roots: contact person Ajeesh/Sandhya
+91 9947697651
+91 9946 225455
Email: threerootsstay@gmail.com
ಕೇರಳದ ವಾಯ್ನಾಡ್ ನ ಸುಲ್ತಾನ್ ಬತ್ತೇರಿ 


July 12, 2016

ಬೆಳ್ಳಿಯ ಕಾಲ್ಗೆಜ್ಜೆ -2

ಬೆಳ್ಳಿಯ ಕಾಲ್ಗೆಜ್ಜೆ ಎಂಬ ನನ್ನದೊಂದು ಸಣ್ಣ ಲೇಖ ಬಂದಿತ್ತು ಕನ್ನಡಪ್ರಭದಲ್ಲಿ. ಅದರಲ್ಲಿ ಇದನ್ನು ಸೇರಿಸಬೇಕೆಂದಿದ್ದೆ , ಆದರೆ ಸಮಯಾವಕಾಶವಾಗಿರಲಿಲ್ಲ. ಅದಕ್ಕೆ ಒಂದು ಸೆಪೆರೇಟ್ ಪೋಸ್ಟ್. 
ನಿಕಟ ಸಂಬಂಧಿಕರ ಮದುವೆಯಲ್ಲಿ ಪಾಲ್ಗೊಳ್ಲಲು ಬೆಂಗಳೂರಿಗೆ ಬಂದಿದ್ದೆವು. ಆಗ ಆ ಮಾಮನ ಮನೆಯಲ್ಲಿ ಉಳಿದುಕೊಂಡೆವು. ಅವರಿಗೆ ಬಿನ್ನಿ ಮಿಲ್ಸ್ ನಲ್ಲಿ ಕೆಲಸವಿತ್ತು. ಆದರೆ ನಾವು ಹೋದಾಗ ಬಿನ್ನಿ ಮಿಲ್ಸ್ ಮುಷ್ಕರ ನಡೆಯುತಿತ್ತು. ಮಾಮಿ ಮಕ್ಕಳಿಗೆ ಟ್ಯೂಷನ್ಸ್ ಹೇಳಿಕೊಟ್ಟು ಅಲ್ಪ ಸ್ವಲ್ಪ ಸಂಪಾದಿಸುತ್ತಿದ್ದರು. ಶಾಲೆ/ಕಾಲೇಜಿಗೆ ಹೋಗುವ ಮಕ್ಕಳು. ಮನೆಯಲ್ಲಿ ಹಿರಿಯ ಜೀವ ಅವರ ತಾಯಿ . ಮತ್ತು ಬೆಂಗಳೂರು ಅಂದ್ರೆ ಖರ್ಚು ಏನು ಕಡಿಮೆಯೇ? ನಾವು ಶಾಪಿಂಗ್ ಅಂತ ಹೋಗುವಾಗ ಮಾಮಿ 'ಮಾಲವಿಕಳನ್ನು ಕರೆದುಕೊಂಡು ಹೋಗುವುದು ಬೇಡ. ಅವಳು ಇಲ್ಲೇ ಇರಲಿ' ಎಂದರು. ಮಾಲವಿಕ ಯಾರ ಜತೆನಾದ್ರು ಹೊಂದಿಕೊಂಡು ಹೋಗ್ತಿದ್ದಳು. ಹಾಗಾಗಿ ಅವಳನ್ನು ಬಿಟ್ಟು ನಿಹಾಳನ್ನು ಕರೆದುಕೊಂಡು  ಹೋದೆವು. ನಾವು ಪುನಃ: ಮನೆಗೆ ತಲುಪುವಾಗ ಸಂಜೆಯಾಗಿತ್ತು . ನಾವು ತಲುಪಿದ ಕೂಡಲೇ ಮಾಲವಿಕ ಅವಳ ಕಾಲಿಗೆ ಮಾಮ ಕೊಡಿಸಿದ ಕಾಲ್ಗೆಜ್ಜೆ ತೋರಿಸಿದಳು. ಯಾವತ್ತೂ ಹಠ ಹಿಡಿಯದ ನಿಹಾರಿಕಾ ನನಗೂ ಗೆಜ್ಜೆ ಬೇಕೆಂದು ರಂಪ ಮಾಡಿದಳು. ಮಾಮ ಅವಳನ್ನು ಕರೆದುಕೊಂಡು ಹೊರಟರು. ನನಗೋ ಮುಜುಗರ. ಪಾಪ ಮೊದಲೇ ಆರ್ಥಿಕ ಸಂಕಷ್ಟ . ಅಂತದ್ದರಲ್ಲಿ ಮಾಳವಿಕಾ ಮಾತ್ರವಲ್ಲ ಈಗ ನಿಹಾಳಿಗೂ ಗೆಜ್ಜೆ ಅಂದರೆ??!! ಪಾಪ ಸಾಲ ಮಾಡಿ ಕೊಂಡಿರಬೇಕು ಅಂತ. ನೋಡ ನೋಡುತ್ತಿದ್ದಂತೆ ನಿಹಾ ಳಿಗೂ ಕೂಡ ಕಾಲಿಗೆ ಗೆಜ್ಜೆ. 
ನಾನು ಮಾತ್ರ ಮನಸ್ಸು ತುಂಬಿ ಪ್ರಾರ್ಥನೆ ಮಾಡಿದೆ, 'ಬೇಗನೆ ಅವರ ಸಂಕಷ್ಟಗಳೆಲ್ಲ ಕೊನೆಗೊಳ್ಳಲಿ 'ಎಂದು. ಇದ್ದವರು ಕೊಡುವುದು ಬೇರೆ, ಸಂಕಷ್ಟದಲ್ಲಿದ್ದಾಗ ಅನ್ಯರಿಗೆ ಸಹಾಯ ಮಾಡುವವರೇ ದೊಡ್ಡವರು ನನ್ನ ಪ್ರಕಾರ. ಈಗ ಅವರ ಇಬ್ಬರು ಮಕ್ಕಳು ಹಾಗೆ ತುಂಬಾ ಒಳ್ಳೆಯವರು. ಯಾರಿಗಾದರೂ ಸಹಾಯ ಮಾಡಲು ಎತ್ತಿದ ಕೈ.
ಮೊನ್ನೆ ನನ್ನ ಇತ್ತೀಚಿಗಿನ ಬ್ಲಾಗ್ ಪೋಸ್ಟ್ ''ಭಯ' ನನ್ನ ಬ್ಲಾಗ್ ಅನ್ನು ಪರಿಚಯಿಸುವಾಗ ಕನ್ನಡಪ್ರಭ ದ  ಸಹ್ಯಾದ್ರಿ ನಾಗರಾಜ ಅವರು ಹಾಕಿದ್ದಾರೆ. ಇಲ್ಲಿದೆ ಅದ್ರ ಜೆಪೆಗ್ :-) ಅವರಿಗೊಂದು ಥ್ಯಾಂಕ್ಸ್