May 19, 2013

ಚುಕ್ಕುಬುಕ್ಕು- ಇದು ಓದಿನ ಬಂಡಿ

ನವೆಂಬರ್ 1, 2012 ರಂದು ಹಸಿರು ನಿಶಾನೆ ಪಡೆಯಿತು ಚುಕ್ಕುಬುಕ್ಕು ಕನ್ನಡದ ವೆಬ್ ತಾಣ. ಎಲ್ಲ ಪುಸ್ತಕ ಪ್ರಿಯರನ್ನು ಒಂದು ಗೂಡಿಸುವ ಪ್ಲ್ಯಾಟ್ ಫಾರ್ಮ್. ಮಿತ್ರ ರಘು ಅಪಾರ, ಸೌಮ್ಯಾ ಕಲ್ಯಾಣಕರ್ ಮತ್ತು ಸಿದ್ಧಾರ್ಥ ಕಲ್ಯಾಣಕರ್ ಈ ರೈಲಿನ whole and ’soul” operators.
ಪ್ರತೀಸಲ ನನ್ನ sensitive sensible ಮಿತ್ರ ರಘು  ಫೋನ್ ಮಾಡಿದಾಗಲೆಲ್ಲ  ಏನಾದರೂ ಮಾಡಬೇಕೆಂಬ ಕಳಕಳಿ ವ್ಯಕ್ತಪಡಿಸುತ್ತಾರೆ,      ಹಲವಾರು ಯೋಜನೆ ಯೋಚನೆ , ಶೇರ್ ಮಾಡುತ್ತಿರುತ್ತಾರೆ ಅದರಲ್ಲಿ ಈ ಯೋಜನೆ ಕ್ಲಿಕ್ ಆಗಿದ್ದು - ಅವರ ಐಡಿಯಾಗಳಿಗೆಲ್ಲ  ಕಿವಿಗೊಡುವ ಕೆಲಸ ಮಾಡುತ್ತಿರುವ/ sounding board ಆದ- ನನಗೆ ಅತ್ಯಂತ ಸಂತಸದ ಸಂಗತಿ.. ರಘು ಮತ್ತು ನನ್ನ ಪರಿಚಯ ಹಲವಾರು ವರ್ಷದ್ದು ( ಅದು ಒಂದು ಮಿನಿ ಧಾರಾವಾಹಿಯಾಗಬಹುದು..ಅದರಲ್ಲಿ ಪುಟ್ಟ ರಿಯಾ, ಅವಧಿ, ಮದ್ಯಸಾರ, ವಸುಧೇಂದ್ರ ಮುಂತಾದ ಪಾತ್ರಗಳು ಹರಿಯುತ್ತವೆ. ಮುಂದೊಂದು ದಿನ ನಿಮ್ಮ ಜತೆ ಶೇರ್ ಮಾಡ್ತೀನಿ.ಅಷ್ಟೆ ಅಲ್ಲ ಈ ನನ್ನ ಬ್ಲಾಗ್ ಶುರು ಮಾಡಲು ಕೂಡ ಅವರೇ ಕಾರಣ) ಅವರ ಮೂಲಕ ಸೌಮ್ಯ ಅವರ ಪರಿಚಯ ವಾದ್ರೂ ಅವರನ್ನು ನಾನು ಹೆಚ್ಚು ಅರ್ಥೈಸಿ ಕೊಂಡಿದ್ದು ಫೇಸ್ ಬುಕ್ ನ ಅಂತ:ಪುರ ಪೇಜ್ ನಲ್ಲಿ. ಮನತಟ್ಟುವ ಸೂಕ್ಷ್ಮತೆಯಿಂದ ಕೂಡಿದ ಬರಹಗಳು, ಚುಟುಕು ಪದ್ಯಗಳು, ಚಂದ ಚಂದ ಚಿತ್ರಗಳು, ಬ್ಲಾಗ್ ಬರಹಗಾರ್ತಿ, ಮುಖಪುಟ ವಿನ್ಯಾಸಗಾರ್ತಿ, ಒಳ್ಳೆಯ ಫೊಟೋಗ್ರಾಫರ್ ಆಗಿರುವ ಬಗ್ಗೆ ಅಲ್ಲಿ ತಿಳಿಯಿತು.
ಚುಕ್ಕುಬುಕ್ಕುವಿನ creative part ನ ಹೊಣೆ ರಘು ಅವರದ್ದಾದರೆ, ಅದರ technicalities ಸಿದ್ದಾರ್ಥ ಅವರದ್ದು. ಈ ಬಂಡಿಯ  engine ಸೌಮ್ಯ.
ಕೆಲ ಸಮಯದ ಹಿಂದೆ ಅಮ್ಮ ಹೊರದೇಶಕ್ಕೆ ಹೋಗಿದ್ದಾಗ ನಾನು ತಂದೆಯ ಬಳಿ ಇರಲು ಹೋಗಿದ್ದೆ. ಅಲ್ಲಿ ಇಂಟೆರ್ ನೆಟ್ ನಿಂದ ದೂರ ಉಳಿದಿದ್ದೆ. ಅದಕ್ಕೆ ಕಾರಣ ಎಂದರೆ- ಒಂದು, ತಮ್ಮನ ಆಫಿಸ್ ಗೆ ಹೋಗಿ ಕಂಪ್ಯೂಟರ್ ಉಪಯೋಗಿಸಬೇಕು, ಅಷ್ಟಲ್ಲದೇ ಅವನ ಸಿಸ್ಟಮ್ ನಲ್ಲಿ ಕನ್ನಡ ಬರಹ ಇಲ್ಲ. ಡೌನ್ ಲೋಡ್ ಮಾಡಕ್ಕೆ ಅವನು ಬಿಡಲ್ಲ್ಲ. 'ಇಲ್ಲಿ ಬಂದಾಗ ಆಫಿಸ್, ಬ್ಲಾಗ್, ಫೇಸ್ ಬುಕ್, ಮೈಲ್ ಎಲ್ಲ ಬೇಡ , ಆರಾಮ ಆಗಿರು' ಅಂತ ಅವನ ಹೇಳಿಕೆ, ಮತ್ತೆ ಅಮ್ಮನ ಬಾಲ್ಕನಿ ಗಾರ್ಡನ್, ಅಪ್ಪನ ಜತೆ ಕ್ರೈಮ್ ಪೇಟ್ರೋಲ್ನ ರೀ ರನ್ಸ್ ನೋಡೋದು, ತಮ್ಮನ ಮಗಳು ಸ್ಯಾಮಿ ಜತೆ ಆಟ ಜಗಳ ಮುದ್ದು...ಇವುಗಳ ಮಧ್ಯೆ ನನಗೆ ಸಮಯ ಹೋಗಿದ್ದೆ ಗೊತ್ತಾಗಲ್ಲ.  ಇಲ್ಲಿಗೆ ಬಂದ ಮೇಲೆ inbox ನಲ್ಲಿ ಹೀಗೊಂದು ಮೈಲ್ ಇತ್ತು
Dear Malathi
I have been following your blog for quite sometime now. I am too lazy to comment. This is the first time i am interacting with you. First thing i do after coming to the office is to check your blog for updates. If there are no new ones i read the older ones. It refreshes me. Life has not dealt with me kindly. whenever you mention 'blog break' i am distressed....
reagrds
xyz........

Dear Madam 'G'
ನನ್ನ ಬ್ಲಾಗ್ ನಿಂದ ನಿಮಗೆ ಸಾಂತ್ವನ ಸಿಗುತ್ತಿದ್ದರೆ ಅದಕ್ಕಿಂತ ಆನಂದದ ವಿಷಯ ನನಗೇನಿದೆ? ಈ ಪೋಸ್ಟ್ ನಿಮಗಾಗಿ. ಯಾಕೆಂದರೆ ಈಗ ಪುನ:  ಬ್ಲಾಗ್ ಗೆ ಬ್ರೇಕ್. ಈ ಕೆಳಗಿನ ಕೊಂಡಿಯಲ್ಲಿದೆ ಚುಕ್ಕು ಬುಕ್ಕು ತಾಣ. ಸೋ ನೀವು ಇನ್ನು distress ಆಗಬೇಡಿ. ಬೇಕೆಂದಾಗ ಈ ಕೊಂಡಿಯನ್ನು ಒತ್ತಿ, ಬಂಡಿಯಲ್ಲಿ ಕೂತು ಎಂಜಾಯ್ ಮಾಡಿ, ಸಮಯ ಹೋದದ್ದೆ ತಿಳಿಯಲ್ಲ. ಅವರಿಗೆ ಪ್ರೋತ್ಸಾಹ ನೀಡಿ. ಅವರ ವೆಬ್ ತಾಣ ತುಂಬಾ ಚೆನ್ನಾಗಿದೆ ಅಂತ ನನ್ನ ಬ್ಲಾಗ್ ಗೆ ಬರುವುದನ್ನು ತಪ್ಪಿಸಬೇಡಿ ಮತ್ತೆ. ನನಗೆ ಹೊಟ್ಟೆಕಿಚ್ಚಾಗುತ್ತೆ, ನಿಜ...:-)
ಇತ್ತಿಚಿಗೆ ನಾನು ಬೇಗ ಬೇಗ ಪೋಸ್ಟ್ ಗಳನ್ನು ಹಾಕುತ್ತಿದ್ದರೆ ಅದು ನಿಮಗೋಸ್ಕರನೇ
ನಿಮಗೆ ಈ ಪೋಸ್ಟ್ ನಲ್ಲಿ ಉತ್ತರಿಸಲು ಕಾರಣ ಎಲ್ಲರಿಗೂ ಈ ಚಂದದ , ಪುಸ್ತಕಗಳ ಕುರಿತು ಮಾಹಿತಿಪೂರ್ಣ  ವೆಬ್ ಸೈಟ್ ನ ಪರಿಚಯ ಆಗಲಿ ಎಂದು.
ಇಲ್ಲಿದೆ ಚುಕ್ಕುಬುಕ್ಕುವಿನ ಕೊಂಡಿ. 

http://www.chukkubukku.com/

ನಾನೇನೂ ಹೆಚ್ಚಿನ ಮಾಹಿತಿ ನೀಡಲ್ಲ. ಅಲ್ಲಿ ಹೋಗಿ ನೋಡಿ. user friendly ಆಗಿದೆ. ನಿಮ್ಮ ಇಷ್ಟದ ಪುಸ್ತಕ/ ಬರಹಗಾರರನ್ನು ನೋಡ ಬಹುದು, ಆಕರ್ಷಣೀಯ ವೀಡಿಯೋ ತುಣುಕುಗಳನ್ನು ವೀಕ್ಷಿಸಬಹುದು...etc etc.. ವೆಬ್ ಸೈಟ್ ಇಂಟೆರೆಸ್ಟಿಂಗ್ ಆಗಿಡಲು ರಘು ಮತ್ತು ಟೀಮ್ ,ನವ ನವೀನ್ ಐಡಿಯಾಗಳನ್ನು regularly ಅಳವಡಿಸುತ್ತಿರುತ್ತಾರೆ. It is unique website in Kannada as per my knowledge. ಒಂದು ಸಲ ಭೇಟಿ ನೀಡಿ ಪುನ: ಪುನ: ಅಲ್ಲಿಗೆ ವಿಸಿಟ್ ನೀಡದಿದ್ದರೆ ನನ್ನ ಹೆಸರನ್ನು ..........:-)


ಮೊನ್ನೆ The Hindu ಪತ್ರಿಕೆಯಲ್ಲಿ ಚುಕ್ಕುಬುಕ್ಕುವಿನ ಬಗ್ಗೆ ಬರಹ ಬಂದಿದೆ..ಓದಿ


chukkubukku in The Hindu page 4 (continued)

ನೀವು ಚುಕ್ಕು ಬುಕ್ಕು ಚೆಕ್ ಮಾಡುವಷ್ಟರಲ್ಲಿ ನಾವು ಒಂದು ಗಾಡಿ bookಇಸಿ ಒಂದು ರೌಂಡ್ ಹಾsssಗೆ ಹೋಗಿ, ಹೀಗೆ ಬಂದು ಬಿಡ್ತಿವಿ. ಏನು ಎತ್ತ ಅಂತ ಬಂದ ಮೇಲೆ ಇಲ್ಲಿ ಬರೀತಿನಿ. ಈಗಲ್ಲ ಜುಲೈ ನಲ್ಲಿ

ಅಲ್ಲಿ ತನಕ ನಿಮಗೂ happy journey!! ದೇಶದ ಉದ್ದಗಲ ಈ ಓದಿನ ಬಂಡಿ  ಯಶಸ್ವಿಯಾಗಿ ಓಡಾಡಲಿ/ಇದರ ಕೀರ್ತಿ ಹಬ್ಬಲಿ ಅಂತ ಹಾರೈಸುತ್ತಾ....

ಸಾಯೊನಾರಾ......
:-)

May 15, 2013

'ಹೇಳತೇವ ಕೇಳ'....continued.....


ಮುಂಬೈನಲ್ಲಿ ಬೆಳೆದರೂ ನನಗೆಲ್ಲೂ ಹೊರಗಡೆ ಇಂತಹ ದುಷ್ಟ ಕೃತ್ಯಗಳ ಬಗ್ಗೆ ಅನುಭವ ಆಗಿಲ್ಲ. ನಾನು ಕಲಿತದ್ದು ಹೆಣ್ಣು ಮಕ್ಕಳ ಕಾನ್ ವೆಂಟ್. P T ಸರ್ ಒಬ್ರು ಬಿಟ್ರೆ ನಮಗೆ ಕಲಿಸಲಿಕ್ಕೆ ಇದ್ದದ್ದು ಎಲ್ಲ ಲೇಡಿ ಟೀಚರ್ ಗಳೆ.  ಆದರೆ P T ಸರ್ ಗೆ ಒಂದು ಕೆಟ್ಟ ಚಾಳಿ ಇತ್ತು. ಮೊದಲ ಪೀರಿಯಡ್ ಏ PT. ಶಾಲೆಗೆ ಲೇಟಾಗಿ ಬಂದ, ಸ್ವಲ್ಪ ದಪ್ಪಗಿನ ಮಕ್ಕಳನ್ನು ಸುಮ್ಮ ಸುಮ್ಮನೆ ಶಾಲೆಯ ಗ್ರೌಂಡ್ಸ್ ನ್ ಎರಡು ಸುತ್ತು ಹಾಕಿಸುವುದು ಮತ್ತು ತದೇಕಚಿತ್ತದಿಂದ ಅವರ ಎದೆಯ ಭಾಗವನ್ನು ಅವಲೋಕಿಸುವುದು. ಯಾರೂ ಪ್ರಿನ್ಸಿ ಗೆ ಕಂಪ್ಲೈಂಟ್ ಕೊಟ್ಟಿರಲಿಲ್ಲ. ನಮ್ಮಷ್ಟಕ್ಕೆ ನಾವೇ ಅವರ ಬಗ್ಗೆ ಮಾತಾಡಿಕೊಳ್ಳುತ್ತಿದ್ದೆವು.  If eyes had any  power his looks might melt the breasts . ಅಷ್ಟು ಮುಜುಗರ ಆಗುವಂತೆ ಇರುತ್ತಿತ್ತು ಅವರ ನೋಟ

ನೆನಪಿದೆ ನನಗೆ ಆ ದಿನ. ಶನಿವಾರ. ನಮಗೆಲ್ಲ ಸ್ಪೋರ್ಟ್ಸ್ ಯುನಿಫಾರ್ಮ್ , ಅಂದ್ರೆ ಡಿವೈಡಡ್ ಸ್ಕರ್ಟ್ ಮತ್ತು ಕೆಟ್ಟದಾಗಿ ಕಾಣುವ ಟಿ ಶರ್ಟ್. well endowed ಹುಡುಗಿಯರಾದ್ರೆ ಅದು ಇನ್ನೂ ಕೆಟ್ಟದಾಗಿ ಕಾಣುವಂತದ್ದು. ತುಂಬಾ ಮುಜುಗರದವರು ಪಾಪ ಆ ಸೆಕೆಯಲ್ಲೂ ಅದರ ಮೇಲೆ ಕೋಟ್/ ಸ್ವೆಟರ್ ಮುಂತಾದೆಲ್ಲ ಹಾಕುವರು. ಸರ್ ನಮಗೆ  ಎಕ್ಸರ್ ಸೈಜ್ ಮಾಡಿಸೋ  ಮುಂಚೆ  ಕೋಟ್, ಓವರ್ ಕೋಟ್ ಗಳನ್ನೆಲ್ಲ compulsorily ತೆಗೆಸಿಸುತ್ತಿದ್ದರು.  ಅದಕ್ಕೆ ನಾವು ಸ್ಪೋರ್ಟ್ ಯುನಿಫಾರ್ಮ್ ಅನ್ನು ಶಾಲೆಗೆ ಹೋಗಿ  ನಮ್ಮ ಕಾಮನ್ ರೂಮ ಅಂತ ಒಂದು ಇರುತ್ತೆ, ಅಲ್ಲಿ ಹೋಗಿ ಚೆಂಜ್ ಮಾಡ್ತಿದ್ದೆವು. ಸ್ಪೋರ್ಟ್ಸ್ ಪೀರಿಯಡ್ ಮುಗಿಸಿ ಕ್ಲಾಸ್ ಗೆ ಬಂದು ಪುನ: ನಮ್ಮ ಡೈಲಿ/regular ಯೂನಿಫಾರ್ಮ್ ಹಾಕಿಕೊಳ್ಳುತ್ತಿದ್ದೆವು. ನಾನಂತೂ ಕಡ್ಡಿಗೂ ನಾಚಿಸುವಷ್ಟು ತೆಳ್ಳಗಿದ್ದೆ, ಆದ್ದರಿಂದ ಸ್ಪೋರ್ಟ್ಸ್ ಯುನಿಫಾರ್ಮ್ ಮೇಲೆ ನೆ ರೆಗುಲರ್ ಯುನಿಫರ್ಮ್ ಹಾಕಿಕೊಳ್ಳುತ್ತಿದ್ದೆ. :-) ಲೇಟ್ ಆಗಿ ಬಂದ ಹುಡುಗಿಗೆ ಆ ದಿನ ಮುಟ್ಟಿನ ನೋವು ಬೇರೆ. ಸರ್ ಗೆ ರಿಕ್ವೆಸ್ಟ್ ಮಾಡಿದಳು. ಪ್ಲೀಸ್ ಸರ್ ಇವತ್ತೊಂದಿನ ಮಾಫ್ ಮಾಡಿ. ನನಗೆ ಹುಷಾರಿಲ್ಲ ಅಂತ. ಆದರೂ ಅವಳನ್ನು ಓಡಿಸಿ ಅರ್ಧ ಸುತ್ತು ಓಡುತ್ತಿರಬೇಕಾದ್ರೆ ಅವಳು ಬಿದ್ದು ಬಿಟ್ಟಳು. ನನಗೆ ಆ ದಿನ ಅಸಾಧ್ಯ ಕೋಪ. ನೇರವಾಗಿ ಸರ್ ಬಳಿ ನಡೆದು ನಿಮ್ಮ ಬಗ್ಗೆ ಕಂಪ್ಲೈನ್ ಕೊಡ್ತೇನೆ ಪ್ರಿನ್ಸಿಗೆ ಅಂದೆ. ಕ್ಯಾ ತು ಕಂಪ್ಲೈನ್ ಕರೆಗಿ? ಅಂತ ನನ್ನ ಟಿ-ಶರ್ಟ್ ಹಿಡಿದೆಳೆದ. ನನಗೆ ಏನಾಯ್ತೂ ಅಂತ್ಲೆ ಗೊತ್ತಾಗಲಿಲ್ಲ. ಸಡನ್ ಆಗಿ ಅವನ ಮುಂದೆ ನಿಂತು, ಇನ್ನೊಂದು ಸಲ touch me and i will kill you' ಅಂದೆ. ಯಾವಾಗಲೂ meek ಆಗಿರುವ ಈಕೆಗೆ ಏನಾಯ್ತು ಅಂತ ಎಲ್ಲರಿಗೂ ಶಾಕ್' ಧಿಸ್ ಇಸ್ ದ ಲಾಸ್ಟ್ ಟೈಮ್ ಯು ಮೇಕ್ ದ ಗರ್ಲ್ಸ್ ರನ್, ಬಿವೇರ್ ಅಂದೆ.
 'ಗರ್ಲ್ ವ್ಹಾಟ್ ಇಸ್ ಯುವರ್ ನೇಮ್' 
'ಮಾಲತಿ ಪೈ'
Don't you have manners? don't you know how to talk to your teacher, respect your teacher??
I know everything. but respect automatically goes to to those who deserve it' in this respect you definitely don't deserve any respect ಅಂತ ಕೆರಳಿದ ಸರ್ಪಿಣಿಯಂತೆ ಉತ್ತರಿಸಿದೆ ಅಂತ ಅಲ್ಲಿ ಸೇರಿದ ಕ್ಲಾಸ್ಮೇಟ್ಸ್ ಹೇಳಿದರು. ಆ ಮೇಲೆ ಸರ್ ನನ್ನ ಬಗ್ಗೆ ಕಂಪ್ಲೈನ್ ಕೊಟ್ಟರು. ನಾನು ಅಂಜದೆ ಪ್ರಿನ್ಸಿ ಗೆ ಎಲ್ಲ ಹೇಳಿದೆ.  ಬೇರೆ ಹುಡುಗಿಯರಿಗೂ ಕೇಳಿ, ನನ್ನ ಧೈರ್ಯ ನೋಡಿ ಸಾಕಷ್ಟು ಜನರು ಅವರ ವಿರುದ್ಧ ಕಂಪ್ಲೈಂಟ್ ಕೊಟ್ಟಿದ್ದರಿಂದ ಆ ಸರ್ ಗೆ ನಮ್ಮ ಶಾಲೆಯಿಂದ್ ಗೇಟ್ ಪಾಸ್ ನೀಡಿ ಒಬ್ಬ ಲೇಡಿ physical training ಟೀಚರ್ ನ್ನು ನೇಮಕ ಮಾಡಲಾಯಿತು. ಇದು ನಡೆದದ್ದು  ಹೈಸ್ಕೂಲಿನಲ್ಲಿದ್ದಾಗ.

ನಾನು ಹನ್ನೊಂದನೆ ತರಗತಿಗೆ ಬಂದಾಗ ನಮ್ಮ ಬಿಲ್ಡಿಂಗ್ ನಲ್ಲಿ xyz ಮಾಮ ಮತ್ತು ಕುಟುಂಬ ಬಂದಿಳಿದರು. ಕೊಂಕಣಿಯೆಂದ ಮೇಲೆ ಬಾದರಾಯಣ ಸಂಬಂಧ, ಮಾಮಾ ಮಾಯಿ ಎನ್ನುವ ಬಳಕೆ ನಮ್ಮಲ್ಲಿ ಕಾಮನ್. ನಮ್ಮ ಬಿಲ್ಡಿಂಗ್ ನಲ್ಲಿ A wing ಮತ್ತು B ವಿಂಗ್ ಅಂತ ವಿಂಗಡಣೆ. A ವಿಂಗ ನಲ್ಲಿ 15 ಅಪಾರ್ಟಮೆಂಟ್ B ವಿಂಗ್ ನಲ್ಲಿ 17. ನಮ್ಮದು B ವಿಂಗ್ ನಲ್ಲಿ ಮೂರನೆ ಮಹಡಿ. ನಾಲ್ಕು ಕುಟುಂಬಗಳು ಬಿಟ್ರೆ ಎಲ್ಲ ಕೊಂಕಣಿಯವರೆ. ಆ xyz ಮಾಮ ಇದ್ದಿದ್ದು A ವಿಂಗ್ ನ 5 ನೇ ಮಹಡಿಯಲ್ಲಿ. ಪರಿಚಯ ಆದ ಮೇಲೆ ಆಂಟಿ ನಮ್ಮ ಮನೆಗೆ ಬರೋದು ಹೋಗೋದು ಇದ್ದೇ ಇರುತ್ತಿತ್ತು. ಆಂಟಿ ನೇ ಗೊಂಬೆ ತರಹ, ಗಿಡ್ಡ ಬಿಳಿ ಬಿಳಿ ಬಣ್ಣ, ಕಂದು ಬಣ್ಣದ ಕಣ್ಣುಗಳು, ಗಟ್ಟಿಯಾದ ನಗು ಮಾತು ಮತ್ತು ಮುದ್ದು ಗೊಂಬೆ ತರಹ ಪುಟಾಣಿ ಮಕ್ಕಳು. ನಮ್ಮ ಮನೆಗೆ ಬಂದಾಗ ಮಕ್ಕಳಿಗೆ ಮದರಂಗಿ ಹಚ್ಚುವುದು, ನೈಲ್ ಪಾಲಿಷ್ ಹಚ್ಚುವುದು, ಹೊಸ ಹೊಸ ವಿನ್ಯಾಸದಲ್ಲಿ ಕೂದಲು ಹೆಣೆಯುವುದು ಮುಂತಾದ್ದು ಮಾಡುತ್ತಿದ್ದೆ. ಮಕ್ಕಳೂ ನನ್ನನ್ನು ಹಚ್ಚಿಕೊಂಡಿದ್ದರು. ಆದರೆ ಯಾವಾಗಲೂ ನಾನಾಯಿತು ನನ್ನ ಕೆಲಸ ಆಯಿತು ಅಂದ್ರೆ ಓದು, ಅಮ್ಮನಿಗೆ ಮನೆ ಕೆಲಸಗಳಿಗೆ ಸಹಾಯ ಮಾಡುವುದು ಇಂತದ್ದರಲ್ಲೆ ನಾ ಇರುತ್ತಿದ್ದರಿಂದ ನಾನು ಯಾರ ಜೊತೆನೂ ಅತೀಯಾದ ಸಲಿಗೆ ಅಥವಾ ಯಾರ ಮನೆಗೂ ಹೋಗೋದು ಬರೋದು ಮುಂತಾದ್ದೆಲ್ಲ ಇರಲಿಲ್ಲ. ಆಂಟಿ ನನಗೆ ಅವರ ಜತೆ ತರಕಾರಿ, ದಿನಸಿ ತರಲು ಹೋಗುವಾಗ ನನ್ನನ್ನು ಜತೆ ಗೆ ಕರೆದುಕೊಂಡು ಹೋಗುತ್ತಿದ್ದರು.ಅವರ ಪುಟ್ಟ ಮಕ್ಕಳನ್ನು ಅಮ್ಮ ನೋಡಿಕೊಳ್ಳುತ್ತಿದ್ದರು. ತುಂಬಾ ಸಾಮಾನುಗಳಿದ್ದರೆ ನಾನು ಅವನ್ನು ಹೊರಲು ಹೆಲ್ಪ್ ಮಾಡಿ ಅವರ ಮನೆ ತನಕ ಕೊಟ್ಟು ಬರುತ್ತಿದ್ದೆ. ಹೀಗೆ ಒಂದು ದಿನ ಅವರ ಜತೆ ಸಾಮಾನು ತೆಗೆದುಕೊಂಡು ಹೋದಾಗ ಮಾಮ ಮನೆಯಲ್ಲಿದ್ದರು. ಆಂಟಿ ತರಕಾರಿ ಚೀಲ ಎತ್ತಿಕೊಂಡು ಅಡಿಗೆ ಮನೆಗೆ ನಡೆದರು. ಮಾಮ ಮನೆಯಲ್ಲಿದ್ದರಿಂದ ಪ್ಲಸ್ ನನಗೆ ಗಂಡಸರ ಜತೆ  ಮಾತು ಆಡಲು ಮುಜುಗರ ಆದ್ದರಿಂದ, ನಾನು ಕಾರಿಡಾರ್ ನಲ್ಲೇ ಆಂಟಿಗಾಗಿ ಕಾಯ್ತಾ ಇದ್ದೆ. ಅಷ್ಟರಲ್ಲಿ ಮಾಮ ಬಂದು ನನ್ನ ಕೈನಲ್ಲಿದ್ದ ಇನ್ನೊಂದು ಚೀಲ ತೆಗೆಯುವ ನೆವದಲ್ಲಿ ಕೈ ನೇವರಿಸಿ ಚೀಲ ಎತ್ತಿಕೊಂಡರು. ನನಗಾಗ ಅಷ್ಟೊಂದು ತಲೆಗೆ ಹೋಗಲಿಲ್ಲ. ಮಾಮ ಅದೂ ಮದುವೆಯಾದ ಮಾಮ, ಮಕ್ಕಳೊಂದಿಗಂವ ಆದುದರಿಂದ respectable ಅಂತ ನನ್ನ 16 ನೇ ವಯಸ್ಸಿನ ತಲೆಗೆ.
ಒಂದು ದಿನ ಅವರ ಮನೆಗೆ ಟಿ.ವಿ. ಬಂತು. ಆಂಟಿ ಹೇಳಿದ ಪ್ರಕಾರ she hailed from a very rich and reputed transport business family from Mangalore. ಮಂಗಳೂರಿನಿಂದ ಮುಂಬೈಗೆ ಅವರ ಟ್ರಕ್ ಯಾವುದೇ ಕೆಲಸ ಮೇಲೆ ಬಂದ್ರೂ ಇವರ ಮನೆಗೆ ತೊಗ್ರಿ , ಕಾಳು, ಬೇಳೆ, ಅಕ್ಕಿ, ತೆಂಗಿನಕಾಯಿ, ಊರಿನ ವಿಶೇಷ ಹಣ್ಣು ಕಾಯಿ ಪಲ್ಲೆ ಮುಂತಾದವು ಬಂದು ಬೀಳುತ್ತಿದ್ದವು. ಅಷ್ಟೇನೂ ಚೆನ್ನಾಗಿ ಅಡಿಗೆ ಗೊತ್ತಿಲ್ಲದ ಆಂಟಿ ಅಡಿಗೆ ಸಹಾಯ ಎಲ್ಲ ಬೇಕಾದಾಗ ಮಕ್ಕಳನ್ನು ಕರೆದುಕೊಂಡು ನಮ್ಮನೆಗೆ ಹಾಜರ್. ಅಮ್ಮನಿಂದ ಹೇಳಿಸಿಕೊಂಡು ಅದನ್ನು ಬರೆದುಕೊಳ್ಳುವುದು ಅಥವ ಅಮ್ಮ ಮಾಡುವಾಗ ಬಂದು ನೋಡಿ ಕಲಿಯುವುದು ಮುಂತಾದನ್ನು ಮಾಡುವುದಲ್ಲದೇ ಧಾರಾಳವಾಗಿ ಅವರಿಗೆ ಮನೆಯಿಂದ ಸರಬರಾಜಾದ ವಸ್ತುಗಳನ್ನು ನಮ್ಮೊಂದಿಗೆ ಶೇರ್‍ ಮಾಡುತ್ತಿದ್ದರು.
ಒಂದು ದಿನಾ ಆಂಟಿಯ ತಂದೆ ಬಂದವರೇ ಅವರ ಮನೆಗೆ ಒಂದು ಟಿ ವಿ ಅದೂ ಬಣ್ಣದ್ದು ತಂದು ಹಾಕಿದರು. ಆಗ ನಮ್ಮ ಮನೆಯಲ್ಲಿ ಇನ್ನೂ black and white ಟಿ ವಿ ಕೂಡ ಬಂದಿರಲಿಲ್ಲ. ಆಂಟಿಗೆ ಅವರ ಟಿ ವಿ ಯನ್ನು ನನಗೆ ತೋರಿಸುವ ಉಮ್ಮೇದು. ಬಿಲ್ಡಿಂಗ್ ನಲ್ಲಿರುವವರೆಲ್ಲ ಒಂದು ರೌಂಡ್ ಅವರ ಮನೆಗೆ ಹೋಗಿ ಬಂದಾಗಿತ್ತು. ನನ್ನ ಹಾಡು ಕೇಳುವ ಗೀಳನ್ನು ಅರಿತ ಆಂಟಿ ಸೋಮವಾರ ಬರುವ ಚಿತ್ರಮಾಲಾ, ಬುಧವಾರದ ಚಿತ್ರಹಾರ ಶುಕ್ರವಾರದ ಛಾಯಾಗೀತ್ ನ್ನೆಲ್ಲ ರಸವತ್ತಾಗಿ ಬಣ್ಣಿಸಿದಾಗಲೂ ನನಗೆ ಅವರ ಮನೆಗೆ ಹೋಗಿ ಟಿ ವಿ ನೋಡಬೇಕೆಂಬ ಆಸೆ ಆಗಲಿಲ್ಲ.
ಆದರೆ ಅಮ್ಮ ನನಗೆ ಒಂದು ದಿನ ಜಬರದಸ್ತಿನಿಂದ ಅವರ ಮನೆಗೆ ಕಳುಹಿಸಿದಳು 'ನಿನ್ನ ನಖರೆಗಳು ಜಾಸ್ತಿಯಾಯ್ತು, ಅವರೆಷ್ಟು ಕರೆಯುತ್ತಾರೆ. ನಿನಗೆ ಒಂದು ಹಾಡು ಕೇಳಿ ಬರಲಿಕ್ಕೆ ಏನದು ಅಹಂಕಾರ ಎಂದು. ಅಜ್ಜನ ಬಳಿ ಬೆಳೆದ ನಾನು ಅಮ್ಮನಿಗೆ ತುಂಬ ಹೆದರುತ್ತಿದ್ದೆ. ಆದುದರಿಂದ ಸುಮ್ಮನೆ ಅಲ್ಲಿಗೆ ಹೋದೆ. ಮೇಲೆ ಹೇಳಿದ ಮೂರೂ ಹಾಡಿನ ಕಾರ್ಯ್ರಕ್ರಮ ರಾತ್ರಿ  8 ರ ನಂತರದ್ದು. ನಮ್ಮ ತಂದೆಯಂತು ಯಾವ ವಿಷಯಕ್ಕೂ ತಲೆ ಹಾಕುತ್ತಿರಲಿಲ್ಲ ಮತ್ತು ನನಗೂ ಅಪ್ಪನ ಬಳಿ ಮಾತನಾಡಿ ರೂಢಿಯಿರಲಿಲ್ಲ. (ಈಗಲೂ ಇಲ್ಲ ನಾನು 8 ನೇ ತರಗತಿ ತನಕ ಅಜ್ಜನ ಬಳಿಯಿದ್ದೆ. ಆಮೇಲೆ ಅಜ್ಜಿಗೆ ಕ್ಯಾನ್ಸ್ ರ್ ಆದ ನಂತರ ನನಗೆ ಪುನ: ನನ್ನ ತಂದೆ ತಾಯಿ ಬಳಿಗೆ ಕಳುಹಿಸಲಾಗಿ ನನಗೆ ತಂದೆ ತಾಯಿ ಜತೆ ಸಲಿಗೆಯಿಂದ ಸ್ನೇಹದಿಂದ ಇರಲಾಗಲಿಲ್ಲ. ಅಷ್ಟೆ ಅಲ್ಲ ನಾನು ಬೇರೆಯವರೊಂದಿಗೆ ಮಾತಾಡಲಿಕ್ಕೆ ಶುರು ಮಾಡಿದ್ದೆ ಮದುವೆಯಾದ ಮೇಲೆ. ಶ್ರೀಕಾಂತ ತುಂಬ ಸೋಷಿಯಲ್, ತುಂಬ ಜನ ಫ್ರೆಂಡ್ಸ್...ಈಗಲೂ ಕೆಲವು ಬೆರಳಣಿಕೆಯ ಮಿತ್ರರು ಸಂಬಂಧಿಕರ ಜತೆ ಬಿಟ್ಟರೆ ನನ್ನ ಮಾತು ನಿಲ್. ನನ್ನ ಇ ಮೈಲ್, ಬ್ಲಾಗ್ ಎಲ್ಲ ಓದುವವರೆಲ್ಲ ನಾನು ತುಂಬ ಫ್ರೆಂಡ್ಲೀ ಸೋಷಿಯಲ್ ಅಂತೆಲ್ಲ ಅಂದುಕೊಂಡಿದ್ದಾರೆ. ಹಾಂ ನನ್ನ ಮನೆಯಲ್ಲಿ ವಟ ವಟಾ ಅಂತಿರುತ್ತೇನೆ...)
ಸರಿ ಕಾಲೆಳೆದುಕೊಂಡು ಹೋದೆ. ಆಂಟಿ ಮುಖ ಅಂತೂ ಸಂತಸದಿಂದ ಹಿಗ್ಗಿದ ಹೀರೆಕಾಯಿ ತರಹ ಆಗಿ ಹೋಯ್ತು. ಟಿ.ವಿ ಮುಂದೆ ಮಾಮ ನೂ ಪವಡಿಸಿದ್ದರು. 'ಬಾಮ್ಮಾ ಕೂತ್ಕೋ ಅಂತ ಅವರ ಬಳಿ ಸೋಫಾದ ಕಡೆ ತಟ್ಟಿ ಹೇಳಿದರು. ಆಂಟಿ ನಮ್ಮೊಡನೆ ಇರುತ್ತಾರೆಂಬ ಧೈರ್ಯದಿಂದ ಕೂತುಕೊಂಡೆ. ಹಾಡಿನ ಮಧ್ಯ Advertisement ವಿರಾಮ. ಆಂಟಿ ಅಡಿಗೆ ಮನೆಗೆ ಹೋದರು. ಶುರುವಾಯ್ತು ಅವರ ಕೈ ನನ್ನ ಬೆನ್ನು ಸವರುವುದು, ಬೆರಳು ಒತ್ತುವುದು ವಗೈರೆ. ಆಂಟಿ ಬಂದ ಕೂಡಲೆ ಪುನ: ಸಭ್ಯಸ್ಥನ ಪೋಸ್. ಪುಟ್ಟ ಮಕ್ಕಳೆದುರಿಗೆ ಇವೆಲ್ಲ ನಡೆಯುತ್ತಿತ್ತು. ಅವರು ಅಮ್ಮನ ಬಳಿ ಇದೆಲ್ಲವನ್ನು ವರದಿ ಮಾಡುತ್ತಿರಲಿಲ್ಲವೇ?
ಮುಂದೊಂದು ದಿನ ಅಮ್ಮ, ಆ ದಿನ ಭಾನುವಾರ ಬೇರೆ, ನನಗೆ ನಮ್ಮ ಮನೆಯಲ್ಲಿ ಮಾಡಿದ ತಿಂಡಿಯೊಂದನ್ನು ಕೊಟ್ಟು ಬರಲು ಹೇಳಿದಳು. ನಾನು ಖಡಾಖಂಡಿತವಾಗಿ ನಿರಾಕರಿಸಿದೆ, ಏನಾದರಾಗಲಿ ಎಂದು
'ಯಾಕೆ ಹೋಗಲ್ಲ'
'ನನಗೆ ಮಾಮನ ಕಂಡರೆ ಒಂದು ತರಹ'
ಏನು ಅದು ಒಂದು ತರಹ ಅಂದ್ರೆ? ಎಷ್ಟು ಪ್ರೀತಿ ವಿಶ್ವಾಸದಿಂದ ವಿನಯದಿಂದ ನಮ್ಮನ್ನೆಲ್ಲ ಮಾತನಾಡಿಸ್ತಾರೆ!'
'ಇಲ್ಲ ಅಮ್ಮ ಅವರು ಸುಮ್ಮ ಸುಮ್ಮನೆ ಮುಟ್ಟುವುದು ಅಂತದೆಲ್ಲ ಮಾಡ್ತಾರೆ
ಅಂದಾಗ ಅಮ್ಮ ಸಿಟ್ಟಿನಿಂದ:
ಎಷ್ಟು ಆಚ್ಛೆ  ,ಪ್ರೀತಿ ಮಾಡ್ತಾರೆ ನಿನ್ನನ್ನ.ಇಲ್ಲಮ್ಮ ಅಂತ ಎಷ್ಟೋ explanation ಕೊಡಲು ಪ್ರಯತ್ನ ಮಾಡಿದೆ.. ನಿನಗೆ ಎಲ್ಲೋ ಭ್ರಮೆ ಎಂದಾಗ ನನಗೆ ಹೇಗಾಗಿರಬೇಡ?
'ಸುಮ್ಮನೆ ಅದನ್ನು ಕೊಟ್ಟು ಬಾ ಅಂದರು'
ಪುನ: ಕಾಲೆಳೆದು ಹೋದೆ. ಬಾಗಿಲು ತೆಗೆದದ್ದು ಮಾಮ. ಆಂಟಿ ಆ ದಿನ ಮನೆಯಲ್ಲಿರಲಿಲ್ಲ. ಮಾಮ 'ಬಾ ಬಾ ನೋಡು ಮಗು ಆವಾಗ್ಲಿಂದ ಅಳ್ತಾ ಇದೆ ಮಾಲತಿ ಅಕ್ಕ ಬೇಕು ಅಂತ' ಒಳಗೆ ಬಾ ಅವಳನ್ನ್ನು ಸಮಾಧಾನ ಮಾಡು ಅಂತ. ಅಷ್ಟರೊಳಗೆ ಪುಟ್ಟಿ ಹೊರಗೆ ಬಂದಳು. ಅವಳನ್ನು ಎತ್ತಿಕೊಂಡು ಬಲವಂತವಾಗಿ ಅವಳನ್ನು ನನ್ನ ಕೈಗೆ ತುರುಕುವ ನೆವದಲ್ಲಿ ಅವರ ಕೈ ನನ್ನ ಎದೆ ಭಾಗಕ್ಕೆ ಇನ್ನೇನೂ ಸ್ಪರ್ಶಿಸಬೇಕು ನಾನು ದೂರ ಸರಿದೆ, ಮಾಮ, ನಾನು ಅಮ್ಮ ಹೊರಗಡೆ ಹೋಗ್ತಾ ಇದ್ದೀವಿ , ಅಮ್ಮ ಗ್ರೌಂಡ್ ಫ್ಲೋರ್ ನಲ್ಲಿ ನನಗೆ ಕಾಯ್ತಿದ್ದಾರೆ ಅಂತೆ ಹೇಳಿ ಹಿಂತಿರುಗಿ ನೋಡದೆ, ಲಿಫ್ಟ್ ಗೂ ಕಾಯದೆ ಮನೆಗೆ ಧಾವಿಸಿ ಬಂದೆ. ಅಮ್ಮ ಆಗಲೇ ಗೆಳತಿಯೊಂದಿಗೆ ವಾಕ್ ಹೋಗಿಯಾಗಿತ್ತು. ನನ್ನ ಎದೆಯ ಡವ ಡವ ನಿಲ್ಲಬೇಕಾದ್ರೆ ಎಷ್ಟು ಸಮಯ ಬೇಕಾಯ್ತು ನನಗೆ.
ಹೀಗಿದ್ದಾಗ ಒಂದು ದಿನ ಮೇಲಿನ ಫ್ಲೋರ್ ನ 'ಅ' ಹೆದರಿ ಕೊಂಡು ನನ್ನ ಬಳಿ ಬಂದು ಮಾಲ್ತೀ, if you don't mind please accompany me to 'xyz's house. i don't like to go there alone ಅಂದ್ಲು.
why
because he touches me in my private places
ಪಾಪದ ಹುಡುಗಿ ನನಗಿಂತ ಎರಡು ವರ್ಷ ಚಿಕ್ಕವಳು. ಆದರೆ ಮೈ ಕೈ ತುಂಬಿಕೊಂಡು ನನಗಿಂತ ದೊಡ್ಡವಳ ತರಹ ಕಾಣುತ್ತಿದ್ದಳು. ಚಂದದ ಹುಡುಗಿ. ತುಂಬಾ ಮಾತು ನಗೆ..ಗುಳಿ ಬೀಳುವ ಕೆನ್ನೆ ಅವಳಿಗಂತೂ ನನಗಿಂತ ಜಾಸ್ತಿ ಕಿರುಕುಳ ಕೊಟ್ಟಿದ್ದ ಆ ಮಾಮ
'why dont you tell your mother'
ಅವಳು ಅಮ್ಮನಿಗೆ ಈ ಬಗ್ಗೆ ಹೇಳಿದಾಗ ನೀನೇ ಚೆಲ್ಲು ಚೆಲ್ಲಾಗಿ ಆಡ್ತೀಯಾ ಅದಕ್ಕೆ ಅವರು ಹಾಗೆಲ್ಲಾ ಮಾಡ್ತಾರೆ ಅಂದ್ರಂತೆ..:-(
ಆಕೆಯ ಅಮ್ಮ ನನ್ನ ಅಮ್ಮ best friends.ಆದರೆ ನನಗೆ ಅವಳಿಗೆ ಸ್ಕೂಲ್ ನ ಸಮಯ ಮ್ಯಾಚ್ ಆಗದೆ ನನಗೂ ಅವಳಿಗೂ ಹೇಳಿಕೊಳ್ಳುವಂತಹ ಗೆಳೆತನ ಇರಲಿಲ್ಲ. ಅವಳು ಮಾಮ ನ ಮನೆಗೆ ಹೋದಾಗ, ಮಾಮ ಒಳಗಡೆ ಏನೂ ಹಾಕಿಕೊಳ್ಳದೆ , ಆಂಟಿ ಅಡುಗೆ ಮನೆ ಕಡೆ ಹೋದ ಕೂಡಲೆ ಲುಂಗಿಯ ಸಂದಿನಿಂದ ಅವರ private part ತೋರಿಸುತ್ತಿದ್ದರಂತೆ.
ಹೇಳಿಕೊಳ್ಳಲು ಬ್ಯಾಂಕ್ ನ ಉನ್ನತ ಅಧಿಕಾರಿ ಮಾಡೋದು ಥರ್ಡ್ ಕ್ಲಾಸ್ ಕೆಲಸ
ಆಮೇಲೆ ನಾನು ಅವಳಿಗೆ ಹೇಳಿದೆ, ನಾವು ಮನೆಯಲ್ಲಿ ಏನೂ ಹೇಳದೆ ಸುಮ್ಮನಿರುತ್ತೇವಂತ ಅವರಿಗೆ ಆ ಧೈರ್ಯ. ಇನ್ಮುಂದೆ ಆದಷ್ಟು  ಅವರ ಮನೆಗೆ ಹೋಗುವುದನ್ನು avoid ಮಾಡುವ. ಹೋಗಲೇ ಬೇಕೆನಿಸಿದ್ದಲ್ಲಿ ಒಟ್ಟಿಗೆ ಹೋಗುವ, but let us scare him.
ಒಂದು ಸಲ ನಾವಿಬ್ಬರೂ ಹೋದಾಗ ಅವರು ಇನ್ನೇನು ಮಂಗ ಚೇಷ್ಟೆ ಮಾಡಬೇಕೆನ್ನುವಷ್ಟರಲ್ಲಿ ನಾನು 'ಅರೆ ಆಂಟಿ' ಅಂದೆ. ಅವರ ಮುಖದ ಮೇಲಿನ ಭಯ ನೋಡಬೇಕಿತ್ತು. ನಾನು ಹೊಸದಾಗಿ ಕಲಿತ ಪದ 'ಲೆಚರ್/lecher ಅನ್ನು ಅವರ ಮೇಲೆ ಪ್ರಯೋಗಿಸಿ ಲುಕ್ ಇಟ್ ಅಪ್ ಇನ್ ದ ಡಿಕ್ಷ್ನನರಿ ಎಂದೆ' ಎರಡು ವರ್ಷದ ನಂತರ ಅವರಿಗೆ ಬೇರೆ ಕಡೆ ವರ್ಗವಾಗಿ ಮನೆ ಬಿಟ್ಟು ಹೋದ ಮೇಲೆ ನಮಗೆ ನಿರಾಳ. ಅವರು ಮನೆ ಬಿಟ್ಟು ಹೋದ ಮೇಲೆ ಒಂದೊಂದಾಗಿ ಅಮ್ಮನ ಕಿವಿಗೆ ಅವರ ರಾಸಲೀಲೆಗಳ ಬಗ್ಗೆ, ಮೊದಲು ಅವರ ಮನೆಗೆ ಕೆಲಸಕ್ಕಿದ್ದ ಹುಡುಗಿಯಿಂದ ಮತ್ತು ಅವರಿವರಿಂದ ಗೊತ್ತಾಯಿತು. ಇತ್ತೀಚಿಗಿನ ವರ್ಷಗಳಲ್ಲಿ ನಾನು ಅಮ್ಮನಿಗೆ ಕೇಳಿಯೂ ಇದ್ದೆ' ಅಮ್ಮ ನಾನು ಹೇಳಿದ್ದು ನೀನು ನಂಬಲಿಲ್ಲ ಯಾಕೆ' ಅಂತ ಅಮ್ಮನ ಉತ್ತರ'ನಿನ್ನಷ್ಟು ನನಗೆ ಓದು ಬರಹ ಇಲ್ಲವಲ್ಲ ಮತ್ತು ಅವರು ಎಷ್ಟು ಸಭ್ಯತೆಯಿಂದ ನಮ್ಮೊಂದಿಗೆ ವರ್ತಿಸುತ್ತಿದ್ದರು, ನಿನಗೂ ಮಗಳೆ ಅಂತ ಸಂಭೋಧಿಸುತ್ತಿದರು..ಅಂತ ಹೇಳಿದ್ದಳು. ಅದಕ್ಕೆ ನಾನು ಅಂದೆ' ಇಂತಹ ವಿಷಯಕ್ಕೆ ಕಲಿಕೆ ಮಾತ್ರ ಬೇಕಾ ನನ್ನ ದ್ವನಿಯಲ್ಲಿನ ನೋವು ಹತಾಶೆ ಭಯ  ನಿನಗರ್ಥವಾಗಲೆ ಇಲ್ಲವಲ್ಲ ಅಂತ ಹನಿಗಣ್ಣಾಗಿದ್ದೆ. ಆದರೆ ನನ್ನ ತಂಗಿ ಗೆ ನಾನೇ ಅಮ್ಮನ ಸ್ಥಾನದಲ್ಲಿ ನಿಂತು ಎನು ಮಾಡಬೇಕು, ಇಂತಹ ಗಂಡಸರೇನಾದರೂ ಸಿಕ್ಕಿದ್ದಲ್ಲಿ ಮುಲಾಜಿಲ್ಲದೇ ಗಲಾಟೆ ಮಾಡು, ಕಚ್ಚು, ಪಿನ್ ನಿಂದ ಚುಚ್ಚು ಆದರೆ ಸುಮ್ಮನೆ ನೋವು, ಅವರು ನೀಡುವ ಕಿರುಕುಳ ಅನುಭವಿಸಬೇಡ ಅಂತ ಅಮ್ಮನ ಎದ್ರಿಗೇ ಧೈರ್ಯವಾಗಿ ಅಂದಿದ್ದೆ.
 ಆ ದೆಹಲಿಯ ರೇಪ್ ಪ್ರಕರಣದ ಬಳಿಕ ನಾನು ಮತ್ತು 'ಅ' ಫೇಸ್ ಬುಕ್ ಮೆಸೆಜ್ ನಲ್ಲಿ ಚ್ಯಾಟ್ ಮಾಡುವಾಗ ಹಳೆಯದನ್ನೆಲ್ಲ ನೆನಪಿಸಿಕೊಂಡಿದ್ವಿ. ಆ ಮಾಮನ ಇಬ್ಬರ ಮಕ್ಕಳು ಕೂಡ ನನ್ನ ಫೇಸ್ ಬುಕ್ ಫ್ರೆಂಡ್ಸ್. ನಾನು ಮತ್ತು
ಅ' ಇಬ್ಬರೂ ಸೇರಿ ಪುನ: ಆ ಮಾಮನನ್ನು ಭೇಟಿ ಮಾಡಿ ಯಾಕೆ ಅವರು ಹಾಗೆ ಮಾಡುತಿದ್ದದ್ದು ಅಂತ ಕೇಳ ಬೇಕೆಂದು ಕೊಂಡಿದ್ವಿ. ಚಂದದ ಮಡದಿ ಮುದ್ದಾದ ಮಕ್ಕಳು, ಅದಲ್ಲದೇ ಸಿಕ್ಕಿ ಬೀಳುವೆ ಅನ್ನುವ ಭಯ ಇದ್ದರೂ ಕೂಡ ಯಾಕೆ ಹಾಗೆ ಬಿಹೇವ್ ಮಾಡುತ್ತಿದ್ದರು, ಹೆಣ್ಣು ಮಕ್ಕಳಿಬ್ಬರೂ ವಯಸ್ಸಿಗೆ ಬಂದಾಗ ಅವರ ವರ್ತನೆ ಹೇಗಿತ್ತು ಮುಂತಾದದ್ದು ತಿಳಿದು ಕೊಳ್ಳುವ ಕುತೂಹಲ. ಆದರೆ ಅವರ ಕಿರಿಯ ಮಗಳಿಂದ' ಅಮ್ಮ ಎರಡು ವರ್ಷದ ಹಿಂದೆ ಹಿರಿಯ ಮಗಳ ಮದುವೆಯ ದಿನದ ರಾತ್ರಿ  ಹೃದಯಾಘಾತಕ್ಕೆ ಗುರಿಯಾಗಿದ್ದರು ಮತ್ತು ಅಪ್ಪನಿಗೆ ಪಾರ್ಕಿನ್ ಸನ್ಸ್ ತಗುಲಿದೆ ಅಂತ ಗೊತ್ತಾಗಿ ನಿಟ್ಟುಸಿರಿಟ್ಟೆ.
ಇನ್ನೊಂದು ಘಟನೆ:
ನಮ್ಮ ಮನೆಯ ಮೇಲಿನ ಫ್ಲ್ಯಾಟ್ ನಲ್ಲಿ ಬಿಜಾಪೂರದಿಂದ ಒಂದು ಕುಟುಂಬ transfer ಆಗಿ ಬಂದಿತ್ತು. ಗಂಡ ಟಿಪ್ ಟಾಪ್ ಡ್ರೆಸ್ ಮಾಡಿಕೊಂಡಿರುವ, ಸೆಂಟು ಪೂಸಿ ಓಡಾಡಿಕೊಂಡಿರುವ ಚೆಲುವ. ಆಕೆ ಪಕ್ಕಾ ಹಳ್ಳಿ ಹೆಂಗಸಿನ ಗೆಟ್ ಅಪ್. ಅಷ್ಟೆ ಅಲ್ಲ 6.2 ಫೂಟ್ ಉದ್ದ. ಅವನೋ ಕುಳ್ಳಗಿನ ಆಸಾಮಿ. ಅದಾಗಲೇ ಮೂರು ಜನ ಗಂಡು ಮಕ್ಕಳು. ಅವಳೋ ಹಳ್ಳಿಯ ಕಾಟನ್ ಸೀರೆ ಮೈತುಂಬ ಹೊದ್ದು ತಲೆಗೆ ಸೆರಗು ಹಾಕಿಕೊಂಡು ಓಡಾಡುವಳು. ಅದೂ ಅವಳ ಉದ್ದನೆಯ ಗಾತ್ರದಿಂದ ಸೀರೆ ಕಾಲ ತನಕ ಬರುತ್ತಲೇ ಇರಲಿಲ್ಲ. ಗಂಡನಿಗೆ ಆಕೆಯೊಂದಿಗೆ ಹೊರಗೆ ಹೋಗಲು ಮುಜುಗರ. ವಿಚಿತ್ರ ರೀತಿಯ ಹಿಂದಿ ಮಾತನಾಡುತ್ತಿದ್ದರಿಂದ ನಮ್ಮ ಮನೆಗೆ ಹೋಗಿ ಬರುವುದು ಎಲ್ಲ ಮಾಡುತ್ತಿದ್ದಳು. ಗಂಡನ ಬಗ್ಗೆ complaints ಸಾಕಷ್ಟು ಇರುತ್ತಿದ್ದವು. ಅದಕ್ಕೆ ಅಮ್ಮ ಮಾಡರ್ನ್ ಡೇ ಪ್ರೋ Higgins  ಮತ್ತು ಅಕೆ ಎಲೀಜಾ ಡುಲಿಟ್ಲ್ ಎಂಬಂತೆ ಅವಳ ಸೌಂದರ್ಯದ ಬಗ್ಗೆ ಗಮನ ಹರಿಸಲು ಶುರು ಮಾಡಿದಳು. ಸೀರೆಗೆ ಮೇಲಿಂದ ಒಂದು ಬಟ್ಟೆ ಕೊಟ್ಟು ಹೊಲಿಸಿ ಆಕೆಯ ಪಾದದ ತನಕ ಬರುವಂತೆ ಮಾಡಿದ್ದು, ಅವಳ ಪೊದೆ ಹುಬ್ಬನ್ನು ಬಿಲ್ಲಿನಾಕಾರ ಮಾಡಿಸಿದ್ದು, change of hair style, ಮಾತಿನಲ್ಲಿ ನಯ ನಾಜೂಕು, ಹಿಂದಿ ಹಾಗೂ ಇಂಗ್ಲಿಷ್ ಪಾಠ ಮುಂತಾದವು. ಆಕೇನೂ ಬೇಗ ಬೇಗ ಕಲಿತುಕೊಂಡಳು .ಹೀಗಿದ್ದರೂ ಹೈಟ್ ವಿಷಯದಲ್ಲಿ ಮಾತ್ರ ಯಾವುದೇ ರಾಜಿ ಮಾಡಲಾಗಲಿಲ್ಲ. ಅವನು ಎಷ್ಟೆ ಹೀಲ್ ಶೂ ಧರಿಸಿದರು ಅವಳಿಗಿಂತ ಉದ್ದ ಆಗುವ ಹಾಗೆಯೆ ಇರಲಿಲ್ಲ. ತೊಟ್ಟಿಲ ಮದುವೆ ಯಂತೆ ಅವರದ್ದು. ಹೆಂಗಸು ಉದ್ದಕ್ಕೆ ಬೆಳೆದರೆ ಗಂಡು ಗಿಡ್ಡನಾಗಿ ಉಳಿದು ಬಿಟ್ಟ
ಒಂದು ದಿನ ಆಕೆ ದಿದಿ ದಿದಿ ಅಂತ ಓಡೋಡಿ ಬಂದ್ಲು.
'ಏನಾಯ್ತು'- ಅಮ್ಮ
ದೀದೀ ವೊ ಸಾಮ್ನೆ ವಾಲಾ ಲಡ್ಕಾ ಅಪ್ನಾ ನಿಕ್ಕರ್ ಖೋಲ್ ಕೆ ಉಸ್ಕಾ ವೋ ದಿಖಾ ರಹಾ ಹೈ
ಮೇಲಿನ ಮನೆ ಆಂಟಿಯ (ಆ ವಿಂಗ್ ನ ಎಲ್ಲ ಮನೆಯ )ಅಡಿಗೆ ಮನೆ ಯನ್ನು ಎದುರಿನ ಬಿಲ್ಡಿಂಗ್ ನವರು ಚೆನ್ನಾಗಿ ಕಾಣಬಹುದಿತ್ತು. ಬಹುತೇಕ ಜನರು ಅಡಿಗೆ ಮನೆ ಕಿಟಕಿ ಹಾಕಿ ನೆ ಅಡಿಗೆ ಮಾಡುವವರು. ಅಕ್ಟೋಬರ್ ನಲ್ಲಿ ಅಸಾಧ್ಯ ಸೆಕೆ, ಅದೂ ನಮ್ಮದು ಬೀಚ್ ಬಳಿ ಮನೆ. ಅಡಿಗೆ ಮನೆ ತುಂಬ ಕಾದಿರುತ್ತಿತ್ತು. ನಾವೆಲ್ಲ ಬೆಳಿಗ್ಗೆ ಮುಂಚೆನೆ ಅಡಿಗೆ ಮಾಡಿ ಇಡುವ ಪರಿಪಾಠದವರು. ಆಕೆ ಕೂಡ ಅಡಿಗೆ ಬೇಗ ಮಾಡಿಡುತ್ತಿದ್ದಳಾದರೂ ಮಕ್ಕಳು ಶಾಲೆಯಿಂದ ಬರುವಾಗ ಬಿಸಿ ಬಿಸಿ ರೊಟ್ಟಿ ತಟ್ಟಿ ಕೊಡುತ್ತಿದ್ದಳು. ಈ ದಿನ ಕೂಡ ರೊಟ್ಟಿ ತಟ್ಟುವಾಗ ಆ ದೃಶ್ಯ ನೋಡಿ ಓಡೋಡಿ ಬಂದಳು. ಹಲವಾರು ದಿನದಿಂದ ಆತ ಕಿರುಕುಳ ಕೊಡುತ್ತಿದ್ದರೂ ಇವತ್ತು ಅದು ವಿಕೋಪಕ್ಕೆ ಹೋಗಿತ್ತು. ಅವನು ಕನ್ನಡಿ ಬಿಸಿಲಿಗೆ ಹಿಡಿದು , ಅಂಟಿ ಕೆಲಸ ಮಾಡುವ ಕಡೆ ಅದನ್ನು ಬಿಂಬಿಸುತ್ತಿದ್ದ. ಆ ಬೆಳಕು ಇವರ ಕಣ್ಣಿಗೆ ಬಿದ್ದು reflex ನಲ್ಲಿ ಕಣ್ಣು ಮೇಲಕ್ಕೆ ಹೋಗಿತ್ತು. ಇವರು ನೋಡುತ್ತಿದ್ದಂತೆ ಅವನು ಚಡ್ಡಿ ಬಿಚ್ಚಿ ಅವನ ಅದನ್ನು ತೋರಿಸಿದ್ದ.

(ಆ ಹುಡುಗನ್ನ ಯಾಲ್ ಗಾರ್ ಎನ್ನುವ  flop ಸಿನಿಮಾದಲ್ಲಿ ಕಾಣಬಹುದು. ಅವನ ಹೆಸರು ಜೈ ದೀಪ್. ಒಂದು ಸಿನಿಮಾ ಮಾಡಿದ್ದಕ್ಕೆ ಅವನಿಗೆ ಅಷ್ಟೊಂದು ಜೋಶ್.)

ಮುಂಬೈನಲ್ಲಿ ಹೆಚ್ಚಾಗಿ ನಾವು ಟ್ರೈನ್ ಬಸ್ ನಲ್ಲಿ ಓಡಾಡುತ್ತಿದ್ದರೂ public space ನಲ್ಲಿ ಯಾವತ್ತೂ ಇಂತಹ ಘಟನೆ ನನ್ನ  ಜತೆ ನಡೆದಿಲ್ಲ ,  ಆದರೆ ಬೆಂಗಳೂರಿನಲ್ಲಿ ಆಫಿಸ್ ಗೆ ಹೋಗ್ತಾ ಇಂತಹ ಸುಮಾರು ಘಟನೆಗಳು ನಡೆದಿವೆ
1.ಕಂಡಕ್ಟರ್ ಸುಮ್ಮ ಸುಮ್ಮನೆ ತಳ್ಳಿಕೊಂಡು ಹೋಗುವುದು

2. ಇನ್ನೊಂದು ಸಲ ನನ್ನ ಫ್ರೆಂಡ್ ಬಸ್ ನಲ್ಲಿ ಮಲಗಿ ಬಿಟ್ಟಿದ್ದಳು, ನಾನು ಪುಸ್ತಕ ಓದ್ತಾ ಇದ್ದೆ. ಸಡನ್ ಆಗಿ ನನ್ನ ಫ್ರೆಂಡ್ 'ಮಾಲ್ತಿ ನೋಡಿ ಹೆಂಗೆ ಮಾಡ್ತಿದಾರೆ ' ಅಂದ್ಲು. ಸೀಟ್ ಪಕ್ಕ ನಿಂತ ಗಂಡಸು ಬೆರಳಿನಿಂದ ಅವರ ಕುತ್ತಿಗೆಯನ್ನು ಗಿಟಾರ್ ನಂತೆ ಮೀಟಿಸುತ್ತಿದ್ದ. ನನ್ನ ಬಳಿ ಕೊಡೆ ಇತ್ತು ಅದರಿಂದಲೇ ಅವನ ಕೈ ಗೆ ಬಡಿದೆ. ಅಲ್ಲಿಂದ ಹೋಗಿ ಬಿಟ್ಟ. ನನ್ನ ಫ್ರೆಂಡ್ ತಾನಾಗಿ ಅವನಿಗೆ ನಾಲ್ಕು ಚಚ್ಚಬಹುದಿತ್ತು.

3. ಸಾಧಾರಣವಾಗಿ ಹೆಂಗಸರ ಸೈಡ್ ಗೆ ಗಂಡಸರು ಬಂದು ನಿಂತರೆ ನಾನು politely 'please ಹಿಂದೆ ಹೋಗಿ' ಅಂತ ಹೇಳತೇನೆ. ಹೆಚ್ಚಿನವರು ಹೋಗ್ತಾರೆ, ಕೆಲವರು ಕೇಳಿಸಲೇ ಇಲ್ಲೆಂಬಂತೆ ನಿಂತರೆ ನಾನು ಕಂಡಕ್ಟರ್ ಗೆ ಹೇಳ್ತೇನೆ. ಆ ದಿನ ಬಸ್ಸಿನ ಎದುರುಗಡೆಯಿಂದ ಹತ್ತಿದ ಮುದುಕ- ಹಣ್ಣು ಹಣ್ಣು ಮುದುಕ, ಬಾಯಲ್ಲಿ ಒಂದೂ ಹಲ್ಲಿರಲಿಲ್ಲ.ಎದುರಿನ ಲೇಡೀಸ್ ಸೀಟ್ ಪಕ್ಕನೆ ನಿಂತ. ನಾನೂ ಮುದುಕ ಅಂತ ಸುಮ್ಮನಿದ್ದೆ. ಕೆಲ ಸಮಯದ ನಂತರ ನನ್ನ ಎದುರಿಗಿನ ಹುಡುಗಿಯರು ಅಜ್ಜನನ್ನು ನೋಡ್ತಾ ಗುಸು ಗುಸು ಮಾಡುವುದನ್ನು ನೋಡಿದೆ. ಸುಮ್ನೆ ಒಬ್ಸರ್ವ್ ಮಾಡಿದಾಗ ಕಂಡಿದ್ದು ಏನು ಗೊತ್ತ, ಬಸ್ ಬ್ರೇಕ್ ಹಾಕಿದಾಗಲೆಲ್ಲ ಅವನ ಹೆಬ್ಬೆಟ್ಟನ್ನು ಹುಡುಗಿಯರ private part ಗೆ ಚುಚ್ಚುತ್ತಿದ್ದ. ನೀರಿನ ಬಾಟಲಿ ಫುಲ್ ಇತ್ತು ಆ ದಿನ. ಅದರಿಂದಲೇ ಸರೀ ಏಟು ಕೊಟ್ಟೆ ಬೆರಳು ಮುರಿ ಬೇಕು ಹಾಗೆ...ನನ್ನ ಬಾಟಲ್ ಕ್ಯ್ರಾಕ್ ಆಯ್ತು. ಸ್ಟಾಪ್ ಬಂದ ತಕ್ಷಣ ಮುದಿಯ ಇಳಿದು ಹೋದ. ಹುಡುಗಿಯರಿಗೂ ಸರೀ ಗದರಿಸಿದೆ. ಕಂಡಕ್ಟರ್ ಏನು ಏನು ಅಂತ ಕೇಳಿದಳು ಆ ದಿನ ಲೇಡಿ ಕಂಡಕ್ಟರ್..ಹೀಗೆ ಅಂತ ಹೇಳಿದೆ, 'ಸರೀ ಉಗಿ ಬೇಕಿತ್ತು ಮುಖಕ್ಕೆ' ಅಂದ್ಲು

ಇನ್ನು ಏನೇನು ನಡೆಯುತ್ತವೋ ಏನೋ??

ಮಾಲವಿಕಾ ನಿಹಾರಿಕಾ ನೆ ಕೇಳುತ್ತಿರುತ್ತೇನೆ ಕಾಲೇಜು/ ಕೆಲಸಕ್ಕೆ ಅವರೂ ಬಸ್ಸ್ ನಲ್ಲೇ ಓಡಾಡುವುದು. ನಿಹಾ ಗೆ ಆ ತರಹ ಅನುಭವ ಆಗಿಲ್ಲ ಅಂತೆ, ಮತ್ತು ಮಾಲವಿಕ ಳ ಬಳಿ ಯಾವತ್ತೂ ಒಂದು ಪೆನ್ knife ಬ್ಯಾಕ್ ಪ್ಯಾಕ್ ನ ಎದುರಿನ ಜಿಪ್ ನಲ್ಲಿರುತ್ತಂತೆ...ರಶ್ ಇದ್ದಾಗ ಅವಳ ಕೈ ಆ pen knife ಸುತ್ತನೇ ಇರುತ್ತಂತೆ.
ಹೇಳತೇವ ಓದಿ ರೋಷ ಉಕ್ಕಿ ಬಂತು. ಇದಕ್ಕೆಲ್ಲ ಎಂದು ಕೊನೆ??ಇಷ್ಟೆಲ್ಲ ನ್ಯೂಸ್ ಪೇಪರ್/ಜಾಹಿರಾತುಗಳಲ್ಲಿ ಇಂತವರ ಬಗ್ಗೆ ಬರುತ್ತಿದ್ದರೂ ಈ ಕಿರುಕುಳಗಳು ಏನೇನೂ ಕಮ್ಮಿಯಾಗಿಲ್ಲವೆಂಬುದು ದು:ಖದ ಸಂಗತಿ..
Avadhi Mag ನಲ್ಲಿ  ಹೇಮಾ ಹೆಬ್ಬಗೋಡು ಅವರ ಕಳವಳ: ಕೆಳಗಿನ ಕೊಂಡಿಯಲ್ಲಿ

ಕೊರಳುಬ್ಬಿಬಂತು 'ಹೇಳತೇವ ಕೇಳಿ' ಓದಿ

:-(


May 9, 2013

ಹಲಸಿನಕಾಯಿಯ ಕಟ್ ಲೆಟ್

ಮಳೆಯಿಲ್ಲದಿದ್ದರೂ ಹಲುಸಾಗಿ ಸಿಗುತ್ತಿದೆ ಹಲಸಿನ ಬೆಳೆ. ತೋಟದಿಂದ ಹಲಸಿನಕಾಯಿಗಳು ಬಂದಾಗಲೆಲ್ಲ ಏನಾದರೂ ಹೊಸತನ್ನು ಮಾಡುತ್ತೇನೆ ಇತ್ತೀಚಿಗೆ. ಇದಕ್ಕೆ ಹೊಸ ಸೇರ್ಪಡೆ ಹಲಸಿನಕಾಯಿಯ ಕಟ್ ಲೆಟ್. ತುಂಬ ಸುಲಭ.

ಕುಟುಂಬದ ಮಿತ್ರ ಶ್ರೀ ಪಡ್ರೆ ಯವರು ಹಲಸಿನ ಜಾಡನ್ನು ಹಿಡಿದು ದೇಶ ವಿದೇಶದಲ್ಲೆಲ್ಲ ಸಂಚರಿಸಿ ಹಲಸಿಗೆ ಒಂದು ರೆಸ್ಪೆಕ್ತೇಬಲ್ ಸ್ಟೇಟಸ್ ಸಿಗುವಲ್ಲಿ/ ಅದನ್ನು ವಾಣಿಜ್ಯ ಬೆಳೆಯನ್ನಾಗಿ ಪರಿವರ್ತಿಸುವಲ್ಲಿ ಶ್ರಮಿಸುತ್ತಿದ್ದಾರೆ. ಅದರ ಬಗ್ಗೆ ಅಧ್ಯಯನ ನಡೆಸಿ ಹಲವಾರು ಮಾಹಿತಿಗಳನ್ನು ಕಲೆಹಾಕಿ, , ಸಿವಿಲ್ ಸೊಸೈಟಿ ಮತ್ತು ಅಡಿಕೆ ಪತ್ರಿಕೆಗಳಲ್ಲಿನ ಬರಹದ ಮುಖಾಂತರ ಓದುಗರಲ್ಲಿ ಕೃಷಿಕರಲ್ಲಿ ಈ ಮಾಹಿತಿಗಳನ್ನು ಹಂಚಿಕೊಳ್ಳುತ್ತಿದ್ದಾರೆ.so much so that ಈಗ ಹಲಸು ಇಸ್ synonymous with ಶ್ರೀ ಪಡ್ರೆ..:-) ನಿಮಗೊಂದು ಹ್ಯಾಟ್ಸ್ ಆಫ್ ಪಡ್ರೆಯವರೆ....ಹಾಗೆ ಹಲಸನ್ನು ಬಳಸಿ ಹೊಸ ತಿಂಡಿ ತಿನಿಸುಗಳನ್ನು ಮಾಡಿದಾಗಲೂ ಅವರನ್ನು ನೆನೆಸ್ತೇವೆ.. ಮೊನ್ನೆ ಮಾಲ್ ಒಂದರಲ್ಲಿ 400 ಗ್ರಾಮ್ ಬಿಡಿಸಿದ ಹಣ್ಣಾದ ಹಲಸಿನ ತೊಳೆಗೆ 60 ರೂ ಗಳನ್ನು ಕೊಟ್ಟು ಒಬ್ಬ ಹಿರಿಯರು ಖರೀದಿಸಿದ್ದರು. Styrofoam tray ನಲ್ಲಿ ಈ ತೊಳೆಗಳನ್ನು ನೀಟಾಗಿ ಜೋಡಿಸಿ ಅದಕ್ಕೆ ಮೇಲಿನಿಂದ ಗಾಳಿ ಸೋಕದಂತೆ ಕ್ಲಿಂಗ್ ವ್ರ್ಯಾಪ್ (cling wrap)ನಿಂದ ಸುತ್ತಲಾಗಿತ್ತು ಅದರಲ್ಲಿ ಲೆಕ್ಕ ಮಾಡಿ ನಾಲ್ಕು ಹಲಸಿನ ತೊಳೆಗಳಿದ್ದವು. :-)

ಹಲಸಿನ ಕಾಯಿಯ ಹೋಳನ್ನು ಉಪ್ಪು  ಮತ್ತು ಸ್ವಲ್ಪವೆ ನೀರು ಸಿಂಪಡಿಸಿ ಬೇಯಿಸಿ. ಆ ಮೇಲೆ ನೀರು ಸಂಪುರ್ಣ ವಾಗಿ ಬಸಿದು ಬಿಡಿ. ಇದಕ್ಕೆ ಬೇಯಿಸಿದ ಕ್ಯಾರೆಟ್ ಬಟಾಣಿ ಕಾಳು, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಜೀರಿಗೆ-ಕೊತ್ತಂಬರಿ ಪುಡಿ, ಸಣ್ಣಗೆ ಕತ್ತರಿಸಿದ ನೀರುಳ್ಳಿ, ಆಮ್ ಚೂರ್ ಪುಡ /.ಅಥ್ವಾ ಹುಣಸೆ ಹಣ್ಣಿನ ಪೇಸ್ಟ್, ಸಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು- ಬೆರೆಸಿ. ಚೆನ್ನಾಗಿ ಮಿಕ್ಸ್ ಮಾಡಿ. ಕೆಳಗಿನ ಆಕಾರದಲ್ಲಿ ಮಾಡಿ ಇಡಿ.  ಇವನ್ನು ಅಕ್ಕಿ ಹಿಟ್ಟು/ ಬ್ರೆಡ್ ಕ್ರಂಬ್ಸ್ ನಲ್ಲಿ ಮುಳುಗಿಸಿ/ಹೊರಳಿಸಿ (i am not getting that word in Kannada) ಕಾವಲಿ ಮೇಲೆ ಸ್ವಲ್ಪವೇ ಎಣ್ಣೆ ಹಾಕಿ shallow fry ಅಥವ ಎಣ್ಣೆಯಲ್ಲಿ ಡೀಪ್ ಫ್ರೈ ಮಾಡಿ ಟೊಮೇಟೊ ಕೆಚ್ ಅಪ್ ನೊಂದಿಗೆ ಸರ್ವ್ ಮಾಡಿ
ತವಾ ಫ್ರೈ

Deep Fry

Steam the raw jackfruit pieces with salt and little water till soft. drain the excess water. Add boiled peas and carrot, garlic-ginger paste, cumin-coriander seed powder, finely chopped onions, raw mango powder or tamarind paste, chopped coriander leaves- mix well. roll into balls and flatten.Coat these balls in rice flour or  bread crumbs and either shallow fry on a griddle or deep fry in oil and serve with Tomato ketchup.
This is a filling and nutritious food.

May 5, 2013

'ಹೇಳತೇವ ಕೇಳ' ಓದಿದ ಮೇಲೆ

ನಾನು ಮಹಿಳಾ ಸ್ವ ಉದ್ಯೋಗ ಮಾರ್ಗದರ್ಶನ ಕೇಂದ್ರದಲ್ಲಿ ಕೆಲಸ ಮಾಡ್ತಾ ಇದ್ದಾಗ ನಡೆದಿದ್ದು. ನಮ್ಮ ಆಫಿಸ್ ಪಕ್ಕದಲ್ಲಿ ಒಂದು ಫ್ಯಾಮಿಲಿ ಕೌಂನ್ಸೆಲ್ಲಿಂಗ್ ಸೆಂಟರ್ ಇತ್ತು. ನಮ್ಮ ಆಫಿಸ್ ಗೆ ನಾನೇ ಮೊದಲು ಹೋಗಿ ಬಾಗಿಲು ತೆಗಿತಿದ್ದೆ. ಅ ಒಂದು ದಿನ ಬೇಗ ಬೇಗ ಬಸ್ ಸಿಕ್ಕಿದ್ದು ನಾನು ಎಂದಿನಕ್ಕಿಂತ ಬೇಗನೆ ತಲುಪಿದೆ. ಪಕ್ಕದ ಕೌಂನ್ಸೆಲ್ಲಿಂಗ್ ಸೆಂಟರ್ ನ ಬಾಗಿಲು ಇನ್ನೂ ತೆರೆದಿರಲಿಲ್ಲ. ಒಂದು  ಮುದ್ದಾದ ದನಿ ’ನಾನು ಇಲ್ಲಿ ಒಳಗೆ ಬಂದು ಕೂರಬಹುದಾ ಮೇಡಂ ಅಂತ ಕೇಳಿತು. ಸಾಧಾರಣ 28-30 ವರ್ಷದ ಮಹಿಳೆ. ನಾನು ಏನು ಎತ್ತ ಕೇಳಿಕೊಂಡು, ಒಳಗಡೆ ಕೂರಲು ಅನುಮತಿಯಿತ್ತೆ. ಹೀಗೆ ಪರಿಚಯ ಆಗಿ ಅವಳು ಪ್ರತೀ ಸಲ ಪಕ್ಕದ ಆಫಿಸ್ ಗೆ ಬಂದಾಗಲೆಲ್ಲ ನನ್ನನ್ನು ಮಾತನಾಡಿಸಿ ಹೋಗುತ್ತಿದ್ದಳು. ನಮ್ಮ ಸಂಸ್ಥೆಯಿಂದ  ಒಂದು ಪೇಪರ್ ಬ್ಯಾಗ್ ಮೇಕಿಂಗ್ ಕೋರ್ಸ್ ಹಮ್ಮಿಕೊಂಡಾಗ ಆಕೆಗೂ ಹೆಳಿದೆ. ಅದನ್ನು ಎಟೆಂಡ್ ಮಾಡಿದ್ದಳು.

ಒಂದು ದಿನ ಹೀಗೆ ಮಾತಿಗೆ ಮಾತು ಬಂದು ಆಕೆಗೆ 'ಯು ಆರ್ ಸೋ ಕ್ಯೂಟ್' ಅಂದೆ. ತಕ್ಷಣ ಆಕೆಯ ಮುಖ ಬಾಡಿ ಹೋಯ್ತು. ನನ್ನ ಕತೆ ಕೇಳಿದ್ರೆ ಯು ವೋಂಟ್ ಥಿಂಕ್ ಮಿ ಕ್ಯೂಟ್, ನೀವು ನನ್ನ ಜತೆ ಮಾತು ಆಡಲ್ಲ ಅಂದು ಬಿಟ್ಲು. ನಾನು ತಮಾಷೆಯಾಗಿ ನೀನು ಕೊಲೆ ಮಾಡಿದ್ರೂ ಐ ವಿಲ್ ಟಾಕ್ ಟು ಯು ಅಂದೆ.


ಇದು ನೀಹಾ ಬರೆದ ಚಿತ್ರ. :-( (ಪುಟ್ಟ ಮಕ್ಕಳ ರೇಪ್ ಬಗ್ಗೆ ಓದಿ ಇದನ್ನು ಬರೆದಿದ್ದು. ಅವಳ ಪ್ರಶ್ನೆ: ದೊಡ್ಡವರಾದ್ರೆ ಸರಿಯಾಗಿ ಡ್ರೆಸ್ ಮಾಡಲ್ಲ,  ಅದು ಇದೂ ಅಂತ ಕಾರಣ ಕೊಡ್ತಾರೆ ರೇಪಿಸ್ಟ್ ಗಳು ಆದರೆ ಆ ಪುಟ್ಟ ಮಕ್ಕಳನ್ನು ಯಾಕೆ ರೇಪ್  ಮಾಡ್ತಾರೆ ಅಂತ? its so sick)


"ಎರಡು ವರ್ಷದ ಹಿಂದೆ ನನಗೆ 5 ಜನ ರೇಪ್ ಮಾಡಿದ್ರು. ನನ್ನ ಕಾಲೇಜ್ ನ ಒಬ್ಬ ಹುಡುಗನ ಮುಖದ ಹಾಗೆ ಒಬ್ಬನ ಮುಖ ನನಗೆ ಕಾಣಿಸಿದರು ಕತ್ತಲೆಯಲ್ಲಿ ಐ ವಾಸ್ ನಾಟ್ ಶೂರ್. ಆ ದಿನ ಕರೆಂಟ್ ಹೋಗಿ ನಮ್ಮ ಮನೆ ಇರೋದು ಸ್ವಲ್ಪ ನಿರ್ಜನ ಪ್ರದೇಶ. ಅಂದ್ರೆ ಟೌನ್ ಶಿಪ್ ಅಂತ ಇದ್ರೂ, ನಮ್ಮ ಮನೆಯೆ ಅಲ್ಲಿ ಮೊದಲಿಗೆ ಕಟ್ಟಿದ್ದು. ಉಳಿದ ನಿವೇಶನಗಳಲ್ಲಿ ಅರ್ಧ / ಮುಕ್ಕಾಲು ಕಟ್ಟಿದ ಮನೆಗಳು ಮಾತ್ರ ಅಲ್ಲಿದ್ದದ್ದು. ಕರೆಂಟ್ ಹೋದ ದಿನ ಚಂದ್ರ ಕೂಡ ಇರಲಿಲ್ಲ ಅಷ್ಟು ಕತ್ತಲು. ಎಲ್ಲಿಂದ ಬಂದು ಎರಗಿದರು ಅರ್ಥವೇ ಆಗಲಿಲ್ಲ. ಅಲ್ಲೆ ಅರ್ಧ ಕಟ್ಟಿದ ಮನೆ ಒಂದಕ್ಕೆ ನನ್ನನ್ನು ದೂಡಿಕೊಂಡು ಹೋದರು. ಆಗ ಮೊಬೈಲ್ ಎಲ್ಲ ಇರಲಿಲ್ಲ ನಮ್ಮ ಬಳಿ. ಸಿಗರೇಟ್ ಹಚ್ಚುವಾಗ ಆ ಬೆಳಕಿನಲ್ಲಿ ಒಬ್ಬನ ಮುಖ ಕಾಣಿಸಿತು ಅಷ್ಟೆ. ಅವನು ನನ್ನ ಕಾಲೀಜಿನವ ಅಂತ ನನ್ನ ಅನುಮಾನ. 5 ಜನ ನನ್ನ ಮೇಲೆ ಪಶುಗಳಂತೆ ಒಂದಾದ ಮೇಲೆ ಒಂದರಂತೆ ಬಂದೆರಗಿದರು. ನನಗೆ ಕಿರುಚಿಕೊಳ್ಳಲಾಗದಂತೆ ಬಾಯಿ ಒತ್ತಿ ಹಿಡಿದಿದ್ದರು. ಯಾವಾಗ ಪ್ರಜ್ಝೆ ತಪ್ಪಿತೋ ಗೊತ್ತಾಗಲಿಲ್ಲ. ಪ್ರಜ್ಞೆ ಮರುಕಳಿಸಿದಾಗ ಕರೆಂಟ್ ಬಂದಿತ್ತು. ಕಷ್ಟ ಪಟ್ಟು ಎದ್ದೆ. ಆದಷ್ಟು ಬಟ್ಟೆ ಬರೆ ಸರಿಮಾಡಿಕೊಂಡೆ. ತಲೆ ಕೂದಲು ಕಣ್ಣಲೆಲ್ಲ ಮರಳು. ಮನೆ ಬಳಿ ಅಮ್ಮ ನನಗೋಸ್ಕರ ಕಾಯ್ತಾ ಇದ್ದಳು. ನಾನು ಎಲ್ಲ ಹೇಳಿದೆ. ಅಮ್ಮ ನನ್ನನ್ನು ಕ್ರಿಮಿಯನ್ನು ನೋಡಿದ ಹಾಗೆ ನೋಡಿ, ಮೊದಲು ಸ್ನಾನ ಮಾಡು ನಡಿಯೇ ಅಂದ್ರು, ಪೋಲಿಸ್ ಅಂದಿದ್ದಕ್ಕೆ ನಮ್ಮ ಮಾನಾನೆ ಹೋಗೋದು ಅಂದ್ಳು. ನಾನು ಉಜ್ಜಿ ಉಜ್ಜಿ ಮೈ ಎಲ್ಲ ಗಾಯಗಳಿದ್ದರು, ಲೂಫಾದಿಂದ ಚರ್ಮ ಸುಲಿದುಹೋಗುವಷ್ಟು ಹೊತ್ತು ಸ್ನಾನ ಮಾಡಿದೆ. ಹೊರಗೆ ಬಂದಾಗ ಅಪ್ಪ ಅಮ್ಮ ಗುಸು ಗುಸು ಮಾತಾಡ್ತಿದ್ದರು. ಅವರಿಬ್ಬರೂ ನನ್ನ ಜತೆ ಮಾತು ಕಡಿಮೆ ಮಾಡಿದರು. ನನ್ನ ತಪ್ಪೇನೂ ಇಲ್ಲ ಅಂದ್ರೂ ನನ್ನನ್ನೆ ತಪ್ಪಿತಸ್ಥಳನ್ನಾಗಿ ಮಾಡಿದರು. ನಾನು ಮಂಕಾದೆ. ನನಗೂ ಕಾಲೇಜ ನಲ್ಲಿ ಬ್ಯೂಟಿ ಕ್ವೀನ್, ಸ್ವೀಟಿ, ಕ್ಯೂಟಿ ಅಂತೆಲ್ಲ ಹೇಳ್ತಿದ್ದರು. ಆತ್ಮ ಹತ್ಯೆ ಮಾಡುವ ಅಂದ್ರೆ ಧೈರ್ಯ ಬರಲಿಲ್ಲ. ಆಮೇಲೆ ನನಗೆ ಟ್ರೀಟ್ ಮಾಡಿದ ಲೇಡಿ ಡಾಕ್ಟರ್ ನನಗೆ psychiatrist ನ್ನು ಕಾಣಲು ಹೇಳಿದರು. ನನ್ನ ತಂದೆ ದೊಡ್ಡ ಪೋಸ್ಟ್ ನಲ್ಲಿದ್ದವರು. ಅವರಿಗೆ ಅವರ ಮರ್ಯಾದೆ ಮುಖ್ಯ ಆಗಿತ್ತು. ಹಾಗಾಗಿ ನಾವು ಆ ಮನೆ ಮಾರಿ ಇಲ್ಲಿಗೆ ಬಂದೆವು. 
ನನ್ನ psycho-therapy session ನಲ್ಲಿ ನನ್ನ ಕತೆ ಕೇಳಿದ ಒಬ್ಬ ನನ್ನನ್ನು ಮದುವೆಯಾಗಲು ಬಂದ. ಅವನೂ ಯಾವುದೋ ಮಾನಸಿಕ ಕ್ಷೋಭೆಗೆ ತುತ್ತಾಗಿ ಟ್ರೀಟ್ ಮೆಂಟ್ ಗೆಂದೆ ಬರುತ್ತಿದ್ದರಿಂದ ಅವನನ್ನು ಮದುವೆಯಾಗೋದು ನನಗಿಷ್ಟ ಇರಲಿಲ್ಲ. ಆದರೆ ಅಪ್ಪ ಅಮ್ಮನ ಸಿಟ್ಟು ಸೆಡವು ಇನ್ಸಲ್ಟ್ ಬ್ಲ್ಯಾಕ್ ಮೈಲ್ ಬೈಗುಳು  ಕೇಳಿ ಕೊನೆಗೂ ಹೂಂ ಅಂದೆ. ಅಪ್ಪ ವರದಕ್ಷಿಣೆ ನೆವದಲ್ಲಿ ಒಂದು ದೊಡ್ಡ ಮೊತ್ತ ಹಾಗೂ ಒಂದು ಕಂಪಿನಿಯಲ್ಲಿ ಅವನಿಗೆ ಕೆಲಸ ಕೊಡಿಸಿದರು. ಮೊದಲೆರಡು ವರ್ಷ ಎಲ್ಲ ಚೆನ್ನಾಗಿತ್ತು. ಆದರೂ ಕೆಲವೊಮ್ಮೆ ಅಪರೂಪಕ್ಕೆ ಅವರ ಫ್ರೆಂಡ್ಸ್ ನಮ್ಮ ಮನೆಗೆ ಊಟಕ್ಕೆ ಬಂದಾಗ ಎಲ್ಲರಿಗೂ ಇವಳು ರೇಪ್ ಗೆ ತುತ್ತಾದವಳು ಅಂತ ಪರಿಚಯಿಸ್ತಿದ್ದ, ತಾನೇನೋ ನನ್ನನ್ನು ಮದುವೆಯಾಗಿ ಮಹತ್ ಸಾಧನೆ ಮಾಡಿದ ಪೋಸ್ ಕೊಡುತ್ತಿದ್ದ. ಮುಜುಗರ ಆದ್ರೂ ತಡೆದುಕೊಳ್ಳುತ್ತಿದ್ದೆ . ಒಂದೆರಡು ಸಲ ಸೂಕ್ಷ್ಮವಾಗಿ ತಿಳಿಸಿದರೂ 'ನನಗೆ ಅವರೆಲ್ಲರ respect ಬೇಕು, ಮತ್ತು ನಿಜ ತಾನೆ ನಾನು ಹೇಳೋದು ಏನು ತಪ್ಪು ಇದರಲ್ಲಿ ಅಂತ ನನಗೆ ಸುಮ್ಮನಾಗಿಸವರು. ಇತ್ತೀಚಿಗೆ ಅವರ ಮಿತ್ರರೊಬ್ಬರು ಇವರು ಆಫಿಸ್ ಹೋದಾಗ ಏನೋ ನೆವ ಮಾಡಿಕೊಂಡು ಮನೆಗೆ ಬಂದು ನನ್ನನ್ನು ಮುಟ್ಟಲು ಬಂದರು. ನಾನು ಬೈದಿದಕ್ಕೆ 'ನಾಯಿ ಮುಟ್ಟಿದ ಮಡಕೆ' ಅಂತ ಹೇಳಿ ಹೊರತು ಹೋದರು. ನನಗೆ ನಾಚಿಕೆಯಿಂದ ತಲೆ ಎತ್ತಲಾಗಲಿಲ್ಲ. ಇದೇ ವರ್ತನೆ ಬೇರೆ ಇನ್ನಿಬ್ಬರಿಂದ ಪುನರಾವರ್ತಿಸಿದಾಗ ಇವರಿಗೆ ಹೇಳಿದೆ, ಆಮೇಲೆ ಗೊತ್ತಾದದ್ದು ನನ್ನನ್ನು ಮದುವೆಯಾದವನೆ ಅವರನ್ನು ಇಲ್ಲಿಗೆ ಕಳುಹಿಸಿದಾನೆಂದು. ಆ ಮೇಲೆ ನಾನು ಪ್ರೆಗ್ನೆಂಟ್ ಆದೆ. ಖುಶಿ ಪಡಲು ಆಗಲಿಲ್ಲ ನನ್ನಿಂದ ಯಾಕಂದರೆ ನನ್ನ ಗಂಡ ನನಗೆ ಕೇಳಿದ ಮೊದಲ ಪ್ರಶ್ನೆ 'ಯಾವನಿಂದ' ಪ್ರೆಗ್ನೆಂಟ್ ಆದೆ ಅಂತ. ಕೊನೆಗೊಂದು ದಿನ ಅವನ ಅಮ್ಮ ನಮ್ಮ ಜತೆ ಇರಲು ಬಂದಳು. ಆಗಲೆ ನನಗೆ ನಾಲ್ಕನೆ ತಿಂಗಳು ನಡೆಯುತ್ತಿತ್ತು. ಅತ್ತೆಗೆ ನನ್ನ ಬಗ್ಗೆ ಹೆಚ್ಚ್ಚೇನೂ ಹೇಳಿರಲಿಲ್ಲ ಮಹಾನುಭಾವ ಆದ್ದರಿಂದ ಆಕೆ ಚೆನ್ನಾಗೆ ನನ್ನನ್ನು ನೋಡಿ ಕೊಂಡಳು. ಆದರೆ ಗಂಡನ ಮಿತ್ರರಿಂದ ನನ್ನ ರೇಪ್ ಬಗ್ಗೆ ಗೊತ್ತಾಗಿ ಒಂದು ದಿನ  ಮಾತಿಗೆ ಮಾತು ಬಂದು, ಸಿಟ್ಟಿನ ಭರದಲ್ಲಿ ನನ್ನನ್ನು ಮೆಟ್ಟಿಲ ಮೇಲಿನಿಂದ ದೂಡಿ ಬಿಟ್ಟರು. ತಲೆಗೆ ಪೆಟ್ಟಾಗಿ ಆಸ್ಪತ್ರೆ ಸೇರಿದೆ. ನಾನು ನನ್ನ ತಂದೆ ತಾಯಿ ಜತೆಗೆ ಯಾವುದೇ ಸಂಪರ್ಕ ಇಟ್ಟುಕೊಂಡಿಲ್ಲ.   ಆಸ್ಪತ್ರೆಯಲ್ಲಿನ ಸಿಬ್ಬಂಧಿ ಸಹಾಯದಿಂದ ನಾನು xyz ಸೇವಾಶ್ರಮ ಸೇರಿಕೊಂಡೆ. ಆದರೆ ನನಗೆ ಗರ್ಭಪಾತ ವಾಯಿತು.  ಅಲ್ಲಿ ನನಗೆ ಹೊಲಿಗೆ, ಕ್ಯಾಂಡಲ್ ಗ್ರೀಟಿಂಗ್ ಕಾರ್ಡ್ ಎಲ್ಲ ಮಾಡೋದನ್ನು ಹೇಳಿ ಕೊಡುತ್ತಿದ್ದಾರೆ. ನಿಮ್ಮ ಸಂಸ್ಥೆಯಿಂದ ಪಡೆದ ಟ್ರೈನಿಂಗ್ ನಿಂದ ನನಗಿನ್ನೂ ಸಹಾಯ ಆಗಿದೆ. ನ್ಯೂಸ್ ಪೇಪರ್ ಬ್ಯಾಗ್ ಗೆ ಒಳ್ಳೆ ಡಿಮಾಂಡ್ ಇದೆ. ನನಗೆ  ಕಮಾಯಿ ಯಿದೆ. ಚೆನ್ನಾಗಿ ನೋಡಿಕೊಳ್ತಾರೆ ಮಾತ್ರವಲ್ಲ ಅಲ್ಲಿನ Administrative ಕೆಲಸಗಳನ್ನು ಒಂದೊಂದಾಗಿ ನನಗೆ ಹಚ್ಚಿ ಸಂಬಳ ಅಂತ ನನ್ನ account ಗೆ ಜಮಾ ಆಗ್ತದೆ.
ನನಗಂತು ನಿಜಕ್ಕೂ 4-5 ನಿಮಿಷ ಮಾತೇ ಹೊರಡಲಿಲ್ಲ. ಆ ಮೇಲೆ ಕೆಲ ದಿನ ನಮ್ಮ ಆಫಿಸ್ ಕಡೆ ಬರಲಿಲ್ಲ ಆಕೆ. ಅವಳು ಕೊಟ್ಟ ನಂಬರ್ ನಾಟ್ ವ್ಯಾಲಿಡ್ ಅಂತ ಬರುತ್ತಾ ಇತ್ತು. ಕಡೆಗೆ 4-5 ತಿಂಗಳು ಬಿಟ್ಟು ಖುಶಿ ಖುಶಿಯಿಂದ ಬಂದ್ಲು. ಇನ್ನೊಂದು ಮದುವೆಯಾಗಿ ಹೊರ ದೇಶಕ್ಕೆ ಹೋಗಲಿಕ್ಕೆ ತಯಾರ್ ಆಗಿದ್ದಳು. ಡಿವೋರ್ಸ್ ಅದು ಇದು ಅಂತ ಬಿಸಿ ಇದ್ದೆ. ನನ್ನ ನಂಬರ್ ಚೇಂಜ್ ಆಗಿದೆ ಅಂದ್ಲು. ಹೊರ ದೇಶಕ್ಕೆ ಹೋದ ಮೇಲೆ ನಾವು ಮೈಲ್ ನಲ್ಲಿ ಸಂಪರ್ಕ ಇಟ್ಟು  ಕೊಂಡಿದ್ದೇವೆ.ಅವಳೀಗ ಹೆಸರು ಬದಲಾಯಿಸಿಕೊಂಡಿದ್ದಾಳೆ. ಎರಡು ಪುಟಾಣಿ ಮಕ್ಕಳ ತಾಯಿ. ಅಲ್ಲಿ ಅವಳ ಗಂಡ ರಾಂಚ್ (Ranch) ಒಂದರಲ್ಲಿ ಮ್ಯಾನೆಜರ್. ಇವಳು ತರಕಾರಿ ಮಾರುವ ಸೂಪರ್ ಸ್ಟೋರ್ ಇಟ್ಟುಕೊಂಡಿದ್ದಾಳೆ  ’ಹೇಳತೇವ ಕೇಳ’ ದ ಬಗ್ಗೆ ಸ್ಥೂಲವಾಗಿ ಹೇಳಿದ್ದೆ. ನನ್ನ ಕತೆ ಕೂಡ ಬರೀಬಹುದು ಅಂದ ಮೇಲೆ ಬರೀತಾ ಇದ್ದೀನಿ. ಇಲ್ಲದಿದ್ದರೆ let sleeping dogs lie ಅಂತ ಸುಮ್ಮನಿದ್ದೆ. ಅವಳು ಅಲ್ಲಿ ನೊಂದ ಮಹಿಳೆಯರಿಗಾಗಿ ರೂಪಿಸಿರುವ ವಿಶೇಷ ಸಂಸ್ಥೆಯಲ್ಲಿ ವಾರದಲ್ಲಿ ಮೂರು ಗಂಟೆ ಮೀಸಲಿಡುತ್ತಾಳಂತೆ. ತನ್ನ ಕತೆ ಅಲ್ಲಿ ಯಾವುದೇ ನಿರ್ಭೀಡೆ ಇಲ್ಲದೆ ಶೇರ್ ಮಾಡ್ತಾಳಂತೆ.
ಅವಧಿ ಅಂತರ್ಜಾಲ ಪತ್ರಿಕೆ ದೆಹಲಿಯಲ್ಲಿ ಜರುಗಿದ ದೌರ್ಜನ್ಯವನ್ನು ವಿರೋಧಿಸಿ ಲೇಖನಗಳನ್ನು ಕಳುಹಿಸಲು ಕೇಳಿದಾಗ ಫೇಸ್ ಬುಕ್ ನಲ್ಲಿರುವ ಸಖೀಯರು ಹಲವಾರು ಲೇಖನಗಳನ್ನು-ಸ್ವಾನುಭವ, ಅಕ್ಕ ಪಕ್ಕ ದಲ್ಲಿ ನಡೆದಿರುವಂತದ್ದು etc... ಬರೆದಿದ್ದರು..ನಾನು ಕೆಲವು ದಿನ ಊರಲ್ಲಿರಲಿಲ್ಲ. ಆಗ ನನಗೆರಡು ಎಸ್ ಎಮ್ ಎಸ್ ಬಂದಿತ್ತು: ನೀವು ಅವಧಿಗೆ ಬರೆಯುದಿಲ್ಲವಾ ಅಂತ' ಆಗ ನನಗೆ ಏನು ಅಂತ ಅರ್ಥವಾಗಿರಲಿಲ್ಲ. ಹಾಗೂ ನಾನು ಕೆಲ ದಿನ ಮೈಲ್/ಫೇಸ್ ಬುಕ್ ನಿಂದ ದೂರ ಇದ್ದೆ. ಬಂದ ಮೇಲೆ ಸಖೀಯರ ಕೆಲ ಲೇಖನಗಳನ್ನು ಅವಧಿಯಲ್ಲಿ ಓದಿ,  ನನ್ನ ಪ್ರೆಂಡ್ ಗೆ ಪ್ರಾಮಿಸ್ ಮಾಡಿದ್ದೆ, ಖಂಡಿತ ಬರೀತೀನಿ ಅಂತ. ಆಮೇಲೆ ಅದನ್ನು ಹಾಗೆ ಬಿಟ್ಟು ಬಿಟ್ಟೆ. ಈಗ ಪುಸ್ತಕ ಓದಿದ ಮೇಲೆ ಹಾಗೂ ಆಕೆ go ahead ಅಂದಮೇಲೆ   ನಿಮ್ಮ ಮುಂದೆ ಈ ವಿಷಯ ಬಹಿರಂಗ ಪಡೆಸಿದ್ದೇನೆ. ಇಲ್ಲಿ ಒಂದು special feature ಅಂದ್ರೆ ಸುಖಾಂತ್ಯ ದಲ್ಲಿ ಕೊನೆಗೊಂಡಿದ್ದು.
ಅಭಿನವ ಪ್ರಕಾಶನದ ನ. ರವಿಕುಮಾರ್ ಅವಧಿಯ ಆ ಲೇಖನಗಳನ್ನೆಲ್ಲ ಒಟ್ಟುಗೂಡಿಸಿ 'ಹೇಳತೇವ ಕೇಳ' ಎಂಬ ಶಿರ್ಷಿಕೆಯಡಿ ಪುಸ್ತಕ ರೂಪದಲ್ಲಿ ಹೊರ ತಂದಿದ್ದಾರೆ.




ಪುಸ್ತಕದ ಹೆಸರು: ಹೇಳತೇವ ಕೇಳ- ಬೆಲೆ: Rs 100/--:  ಅಭಿನವ ಪ್ರಕಾಶನ, ಮುಖಪುಟ ವಿನ್ಯಾಸ: ಎಂ. ಆರ್. ಗುರುಪ್ರಸಾದ್
:-(
-- 
:

April 25, 2013

ಅಜ್ಜ ಹೇಳಿದ ಕತೆ

ಒಂದು ಸಲ ಒಬ್ಬ ರಾಜ ಅವನ ಸೈನ್ಯದ ತುಕಡಿಯಿಂದ ಬೇರ್ಪಡುತ್ತಾನೆ. ನಡೆಯುತ್ತ ನಡೆಯುತ್ತ ನಡೆಯುತ್ತ ನಡೆಯುತ್ತ (ಆಜೋಬಾ ಎಷ್ಟು ಸಲ 'ನಡೆಯುತ್ತ' ಅಂತ ಹೇಳ್ತೀಯಾ ಅಂದ್ರೆ ಅವನು ಅಷ್ಟು ದೂssssssssssರ ನಡೆದಿದ್ದಾನಲ್ವಾ ಅದಕ್ಕೆ ಅನ್ನುತ್ತಿದ್ದರು. miss u ajoba) ಒಂದು ಅಡವಿಯಲ್ಲಿ ದಾರಿ ತಪ್ಪುತ್ತಾನೆ. ಅವನಿಗೆ ಜೋರು ಹಸಿವೆಯಾಗಿರುತ್ತೆ. ಒಂದು ಗುಡಿಸಲಿನ ಬಳಿ ತಲುಪಿ, ಯಾರಿದ್ದೀರಿ ನನಗೆ ಹಸಿವೆಯಾಗಿದೆ, ತಿನ್ನಲು ಏನಾದರೂ ಕೊಡಿ' ಅಂತ ಕೇಳಿದ. ಅಲ್ಲಿ ಇದ್ದದ್ದು ಒಬ್ಬ ಒಂಟಿ ಹಣ್ಣು ಹಣ್ಣು ಮುದುಕಿ.'ಮಗ ನನ್ನ ಬಳಿ ತಿನ್ನಲಿಕ್ಕೆ ಏನಿಲ್ಲ' ನನ್ನ ಜತೆ ಬಾ ದೇವಸ್ಥಾನದಲ್ಲಿ ಹಣ್ಣು ಕಾಯಿ ಏನಿದ್ದರೂ ನೀನು ತಿನ್ನ ಬಹುದು ಅಂತ ಅವನನ್ನು  ಗುಡಿಸಲಿನ ಹತ್ತಿರದಲ್ಲಿ ಇರುವ ದೇವಸ್ಥಾನಕ್ಕೆ ಕರೆದುಕೊಂಡು ಹೋಗುತ್ತಾಳೆ. ರಾಜನ ದುರದೃಷ್ಟಕ್ಕೆ ಅಲ್ಲಿ ಹಣ್ಣು ಕಾಯಿ ಮುಂತಾದ್ದು ಏನೂ ಇರಲಿಲ್ಲ. ದೇವಸ್ಥಾನದ ಹೊರ ಜಗುಲಿಯ ಮೇಲೆ ಒಂದು ತವಡು (Bran)ತುಂಬಿದ  ಚೀಲವಿತ್ತು. ಬಹುಶ: ಕುದುರೆಗೆ ಅಂತ ತಂದಿದ್ದು, ದಾರಿಹೋಕರು ಬಿಟ್ಟು ಹೋಗಿದ್ದಿರಬಹುದು. ರಾಜನ ಕಂಗಾಲಾದ ಮುಖನೋಡಿ ಮುದುಕಿ ನಾನು ನಿನಗೆ ತವಡಿನಿಂದ ರೊಟ್ಟಿ ಮಾಡಿ ಕೊಡುತ್ತೇನೆ, ತಿನ್ನುತ್ತಿಯಾ ಅಂತ ಕೇಳಿದಳು. ಹಸಿವೆಯಿಂದ ಪ್ರಾಣ ಹೋಗ್ತಾ ಇದೆ ಬೆ ಮುದುಕಿ ಅಂದ ರಾಜ. ಮುದುಕಿ ದೇವರ  ಹಚ್ಚಿ ರಾಜನಿಗೆ ತವಡಿನ ರೊಟ್ಟಿಗಳನ್ನು ದೀಪದ ಎಣ್ಣೆ ಹಾಕಿ ಬೇಯಿಸಿ ಕೊಡುತ್ತಾಳೆ. ರಾಜ ಹೊಟ್ಟೆ ತುಂಬ ತಿಂದ. ಆಮೇಲೆ ಅವನಿಗೆ ನಾಚಿಕೆಯಾಯಿತು. ಛಿ ನಾನು ರಾಜ ಹೀಗೆ ತವಡಿನ ರೊಟ್ಟಿ ತಿಂದಿದ್ದೇನೆಂದರೆ ಎಲ್ಲರೂ ಗೇಲಿ ಮಾಡಿಯಾರು, ನನ್ನ ಮರ್ಯಾದೆ ಪ್ರಶ್ನೆ, ಅಂತ ಮುದುಕಿಗೆ ತನ್ನ ಕುತ್ತಿಗೆಯಲ್ಲಿನ ಮುತ್ತಿನ ಸರ ಕೊಟ್ಟು. ನಾ ಪರ ಊರಿನ ರಾಜ, ಯಾರಿಗೂ ನಾನು ತವಡಿನ ರೊಟ್ಟಿ ತಿಂದದ್ದು ಹೇಳಬೇಡ ಅಂತ. ಮುದುಕಿ ಹೂಂ ಅಂದಳು
ಆದರೆ ಅವಳಿಗೆ ಈ ಗುಟ್ಟು ಅರಗಿಸಕೊಳ್ಳಲಾಗಲಿಲ್ಲ. ಹೊಟ್ಟೆಯಲ್ಲಿ ಗುಟ್ಟು ಇಟ್ಟುಕೊಂಡು ಅವಳಿಗೆ ಹೊಟ್ಟೆ ನೋವು ಶುರು ಆಯಿತು. ಅವಳು ದೇವಸ್ಥಾನದ ಬಳಿ ಬಂದು ಅಲ್ಲಿ ಒಂದು ಹೊಂಡ ತೋಡಿ, ಅದರಲ್ಲಿ ತನ್ನಲ್ಲಿರುವ ಗುಟ್ಟನ್ನು- 'ರಾಜಾ ತವಡು ತಿಂದ'  ಅಂತ ನಿಧಾನಕ್ಕೆ ಉಸುರಿದಳು.ಅದರ ಮೇಲೆ ಮಣ್ಣು ಮುಚ್ಚಿ ಹೊರಟು ಹೋದಳು. ಅವಳ ಹೊಟ್ಟೆ ನೋವು ಮಾಯವಾಯಿತು. ಅಲ್ಲಿ ಫ್ರೆಶ್ ಆಗಿ ಹೊಂಡ ತೋಡಿ ಅದರ ಮೇಲೆ ತೆಳುವಾಗಿ ಮಣ್ಣು ಮುಚ್ಚಿದ್ದು ನೋಡಿ ದೇವಸ್ಥಾನದ ಅರ್ಚಕ ಅಲ್ಲೊಂದು ಗಾಳಿ ಮರದ ಬೀಜವನ್ನು ಬಿತ್ತಿದ. ಆ ಬೀಜ ಚಿಗುರೊಡೆದು, ಬೃಹದ್ ಗಾತ್ರದ ಮರವಾಗಿ ಬೆಳೆಯಿತು.
ಗಾಳಿ ಬೀಸಿದಾಗಲೆಲ್ಲ ಆ ಮರ ಓಲಾಡುತ್ತ 'ರಾಜಾ ತವಡು ತಿಂದ' ಎಂಬ ಸದ್ದು ಹೊರಡಿಸಲಾರಂಭಿಸಿತು. ಒಂದು ದಿನ ಆ ದಾರಿಯಲ್ಲಿ ಹೋಗುವ carpenter ಈ ದಪ್ಪ ಗಾತ್ರದ ಮರ ನೋಡಿ ಅದನ್ನು ಮೃದಂಗ ಮಾಡಲೋಸುಗ ಅದನ್ನು ಕತ್ತರಿಸಿ ಅದರಿಂದ ಮೃದಂಗ ತಯಾರಿಸಿದ. ಈ ಮೃದಂಗವನ್ನು ಒಬ್ಬ ಸಂಗೀತಗಾರ ಖರೀದಿಸಿದ. ಅವನಿಗೆ ಅದೇ ರಾಜನ ಆಸ್ಥಾನದಲ್ಲಿ ಸಂಗೀತ ಕಾರ್ಯಕ್ರಮಕ್ಕೆ ಸಾಥ್ ನೀಡಲು ಆಮಂತ್ರಣ ಬಂದಿತು. ಆಸ್ಥಾನನಲ್ಲಿ ಮೃದಂಗ ಬಾರಿಸುವಾಗ ಅದರಿಂದ 'ರಾಜಾ ತೌಡು ತಿಂದ ಧೂಮ್ ತನನನನನ...ರಾಜಾ ತವಡು ತಿಂದ ಧೂಮ್ ತನನನನನ' ಅನ್ನುವ ಸದ್ದು ಹೊರಡಿಸಿತಂತೆ...
ಹೀಗೆ  ರಾಜನು ತವಡು ತಿಂದ ವಿಷಯ ಎಲ್ಲರಿಗೂ ಗೊತ್ತಾಯಿತು..ಆಮೇಲೆನಾಯ್ತು? ನಿಮಗೇನಾದರೂ ಗೊತ್ತಿದ್ದಲ್ಲಿ ಶೇರ್ ಮಾಡಿ. ನನಗೆ ನೆನಪಿರೋದು ಇಷ್ಟೆ...
:-)
ತವಡು ಅಂದ್ರೆ bran ಧಾನ್ಯಗಳ ಹೊರಗಿನ ಕವಚ . ಈಗಂತೂ rice bran ಎಣ್ಣೆಗೆ ಸಿಕ್ಕಾಪಟ್ಟೆ ಪ್ರಚಾರ ಸಿಗುತ್ತಿದೆ. ತವಡಿನಲ್ಲಿ ಹೈ ಫೈಬರ್ (ಕನ್ನಡದಲ್ಲಿ??) ಅಂಶ ಇರುವುದರಿಂದ ಅದು ಮನುಷ್ಯರ ದೇಹಕ್ಕೆ ಒಳ್ಳೆಯದು. ಯು ಎಸ್ ನಲ್ಲಿರುವ ತಂಗಿ ಅಲ್ಲಿ ಬ್ರ್ಯಾನ್ ಕೇಕ್/ಮಫಿನ್ಸ್ ಎಲ್ಲ  ಲಭ್ಯ ಅನ್ನುತ್ತಿದ್ದಳು. ಈಗ ಆ ರಾಜನೇನಾದರೂ ಇದ್ದಲ್ಲಿ ತವಡು ತಿಂದಿದ್ದು ಜಂಬದಲ್ಲಿ I am health conscious king ಅಂತ ಹೇಳಿಕೊಳ್ಳುತ್ತಿದ್ದನೋ ಏನೋ....:-)
ಇವತ್ತು ಸಿಕ್ಕಾಪಟ್ಟೆ ಸೆಕೆಯಂತ ಊರಿಂದ ತಂದ ಕೆಂಪಕ್ಕಿ ಗಂಜಿ ಮಾಡಿದ್ದೆ ಬೆಳಿಗ್ಗೆ ಬ್ರೇಕ್ ಫಾಸ್ಟ್ ಗೆ. ಊಟ ಮಾಡ್ತ ಇದನ್ನ ನನ್ನ ಮಕ್ಕಳ ಜತೆ ಶೇರ್ ಮಾಡಿದೆ. ಈಗ ನಿಮ್ಮೊಂದಿಗೆ. ನೀವು ನಿಮ್ಮ ಮಕ್ಕಳೊಂದಿಗೆ ಶೇರ್‍ ಮಾಡಬಹುದು
(ಓಕೆ ಇನ್ನು ಸಧ್ಯಕ್ಕೆ  ನಿಮಗೆ ಬ್ರೇಕ್. ಇನ್ನು ಮೇ ಅಥವಾ ಜೂನ್ ಸೆಕೆಂಡ್ ಹಾಫ್ ನಲ್ಲಿ ಸಿಗುವ. till then love you all...
:-) :-)

April 22, 2013

ಹೀಗೊಂದು walk ಪ್ರಹಸನ

ದಿನಾ ನಾನು ಸಂಜೆ ಮಕ್ಕಳೊಂದಿಗೆ ವಾಕ್ ಮಾಡ್ತೇನೆ. ನಿಹಾ ಗೆ ಸ್ಟಡಿ ಹಾಲಿಡೆ ಮತ್ತು ಮಾಲವಿಕ ಅವಳ ಎಮ್ ಬಿ ಎ ಗೆ ತಯಾರಿ ನಡೆಸ್ತಿದ್ದಾಳೆ. ಹಾಗಾಗಿ ಸಂಜೆ ಅವರೂ ನನ್ನ ಜತೆ ವಾಕ್. ಮೊನ್ನೆ ರಾಯರು ಬೀಗದ ಕೈ ಮರೆತಿದ್ದರು. ಅದಕ್ಕೆ ಗಾರ್ಡನ್ ಗೆ ಬಂದು ಬೀಗದ ಕೈ ಒಯ್ದು, - ' ವಾಕ್ ಮಾಡ್ತಾ ಇರಿ ನಾನು ಲ್ಯಾಪ್ ಟಾಪ್ ಬ್ಯಾಗ್ ಮನೆಯೊಳಗಿಟ್ಟು ಫ್ರೆಶ್ ಆಗಿ ಬರ್ತೇನೆ'. 'ಸ್ವಲ್ಪ ಹೊತ್ತು ನಾನೂ ನಿಮ್ಮ ಜತೆ ವಾಕ್ ಮಾಡಿ ನಂತರ ನಿಮಗೆ 'ಮಾಮಾ ಮಿಯಾ' ಗೆ ಕರೆದುಕೊಂಡು ಹೋಗ್ತೇನೆ.' ಅವರು ಮನೆಯಿಂದ ಬರುವಷ್ಟರಲ್ಲಿ ನನ್ನ ವಾಕ್ ಮುಗಿದು ಸುಸ್ತಾಗಿ ಕೂತಿದ್ದೆ. ಮಕ್ಕಳು ವಾಕ್ ಮುಂದುವರೆಸಿದ್ರು. ಶ್ರೀಕಾಂತ ಬಂದು ಏನೇ ಸೋಂಬೇರಿ ಇಷ್ಟೇನಾ ನಿನ್ನ ವಾಕ್ ಅಂದ್ರು. ನನ್ನ ಕೈ ಯಲ್ಲಿ ಅಷ್ಟೆ ಆಗೋದು (ಗೊತ್ತು ಕಾಲಲ್ಲಿ ವಾಕ್ ಮಾಡೋದು ಅಂತ, ಸುಮ್ನೆ ಈಗ ಪನ್ ನೆನಸ್ಕೋಬೇಡಿ ಪ್ಲೀಸ್). 
"ಇದೆಂತಾ ವಾಕ್ ನಾಳೆ ಲಾಲ್ ಬಾಗ್ ಗೆ ಹೋಗುವಾ ಬೆಳಿಗ್ಗೆ' ಅಂದ್ರು
ನಾನು ಹೂಂ ಅಂದ್ರೂ ಬೆಳಿಗ್ಗೆ ಎದ್ದರೆ  ತಾನೆ ವಾಕ್ ಹೋಗೋದು ಅಂತ (ಮನಸ್ಸಲ್ಲೇ ಹಾ ಹಾ ಹಾ ಅಂತ evil laughterಇಸಿದೆ)
ಈ ವಾಕ್ ಫಂಡಾ ಎಲ್ಲ ನನಗೋಸ್ಕರ. ಆಫಿಸ್ ಗೆ ಹೋಗೋದು ಬಿಟ್ಟ ಮೇಲೆ , ನನ್ನ ಮನೆ ಕೆಲಸ ಎಲ್ಲ ಮುಗಿಸ್ಕೊಂ,ಡು ಇಲ್ಲ  ಕುರುಂ ತಿಂಡಿ ಮೆಲ್ತಾ ಮಲಕ್ಕೊಂಡು ಪುಸ್ತಕ ಓದೋದು, ಇಲ್ಲದಿದ್ದರೆ ಕಂಪ್ಯೂಟರ್ ಬಳಿ ಕೂತು ಫಿಲ್ಮ್/ you tube ಹಾಕ್ಕೊಂಡು ಕುರೋದು ಅಷ್ಟೆ ಅಲ್ಲ ತಿಂಡಿ-ತೀರ್ಥ (ತೀರ್ಥ = ಟೀ ಟೀ ಅನ್ದ್ ಟೀ) ಎಲ್ಲ ಸಿಸ್ಟಮ್ ಎದುರುಗಡೆ. ಪೊಗದಸ್ತಾಗಿ ತಿನ್ನ ಬೇಕಪ್ಪ ನಂಗೆ. ಮನೆದೂ as well as ಹೊರಗಿನದ್ದು :-(. ಸೋ ಸಿಕ್ಕಾಪಟ್ಟೆ ವೈಟ್ ಜಾಸ್ತಿ ಆಗೋಗಿದೆ.
ಬೆಳಿಗ್ಗೆ ಅವರೆಲ್ಲ ಎದ್ದಿದ್ದೆ 6.30 ಗೆ ಇನ್ನು ಯಾರು ವಾಕ್ ಹೋಗ್ತಾರೆ ಅಂತ ನಾನು ದೋಸೆಗೆ ರೆಡಿ ಮಾಡ್ತಾ ಇದ್ದೆ. ಇಲ್ಲ ರಿಕ್ಷಾದಲ್ಲಿ ಲಾಲ್ ಬಾಗ್ ಗೆ ಹೋಗೋದು ಅಂತ ಆಯ್ತು. ರೆಡಿಯಾಗಿ ಹೋದ್ವಿ. ಅರ್ಧ ರೌಂಡ್ ಆದ ಕೂಡಲೆ ನನ್ನ ಗಾಡಿ ಸ್ಲೋ. ನಾಲಕ್ಕು ಜನ ನಾಲ್ಕು ದಿಕ್ಕು. ಅಂತದರಲ್ಲಿ ನಿಹಾ ಸೆಲ್ ಫೋನ್ ತಂದಿರಲಿಲ್ಲ. ಎಲ್ಲರನ್ನೂ ಹುಡುಕಿ ನಿಹಾ ಕೆಲವು ಫೋಟೊ ತೆಗೆದು ಮನೆಗೆ ಹೋಗುವಾ ಅಂದ್ರೆ, ಶ್ರೀಕಾಂತ ಇಷ್ಟು ದೂರ ಬಂದು MTR ಗೆ ಹೋಗದಿದ್ರೆ ಹೇಗೆ ಅಂದ್ರು??
MTR ಸೇರಿ ಶ್ರೀಕಾಂತ ಹೆಸರು ಕೊಟ್ಟಾಗ 15 ನಿಮಿಷ ವೈಟಿಂಗ್ ಅಂದ್ರು. ಹಾಗೂ ಕ್ರೆಡಿಟ್ ಕಾರ್ಡ್ ತೆಗೆದುಕೊಳ್ಳಲ್ಲ ಅಂದಿದ್ದಕ್ಕೆ ರಾಯರು ದುಡ್ಡು ಡ್ರಾ ಮಾಡಲು ಹೋದರು. ಅವರು ಲಾಲ್ ಬಾಗ್ ಗೇಟ್ ಬಳಿ ಅಂಜೀರ ಹಣ್ಣನ್ನು ಕೊಂಡುಕೊಂಡಿದ್ದರು. ಅದನ್ನು ತಿನ್ನುತ್ತ ಅಲ್ಲಿ ನೆರೆದ ಜನರನ್ನು ನೋಡ್ತಾ ಅವರ ಸಂಭಾಷಣೆ ಕೇಳ್ತಾ, ಒಟ್ಟು ಮೂರು ಮರಾಠಿ ಮಾತನಾಡುವ ಕುಟುಂಬದವರ ಮಾತು ಕೇಳಲು ಖುಶಿ ಅನ್ನಿಸ್ತು. MTR ಎಷ್ಟು ದೊಡ್ಡದಿದೆ ಅಂತ ಮೊನ್ನೆನೆ ಗೊತ್ತಾಗಿದ್ದ್ದು.ಬಹುಶಃ week end ಗೆ ಅಷ್ಟೊಂದು ರೂಮ್ ಗಳನ್ನು ತೆರವು ಮಾಡ್ತಾರೋ ಏನೋ...ನಮ್ಗೆ ಸುತ್ತು ಹಾಕಿಸ್ತಾ ಹಾಕಿಸ್ತಾ ಒಳssssಗಡೆ ಒಂದು ರೂಮಿಗೆ ಕರೆದುಕೊಂಡು ಹೋದ್ರು. ನಮ್ಮ ಜತೆ ಒಂದು ಮರಾಠಿ ಫ್ಯಾಮಿಲಿ, ಇನ್ನೊಂದು ಯಾವುದೋ ಕಾರ್ಯಕ್ರಮದ delegates ಇರಾನ್, ಫ್ರಾಂಸ್, ಜಪಾನ್ ದೇಶದವರೆಲ್ಲ ಇದ್ರು. ಒಟ್ಟು 15 ಜನ ಆರಾಮಾಗಿ ಕೂರುವಂತಹ ಜಾಗ. 
ನಾ ವಾಕ್ ಮಾಡಿ ಏನು ಪ್ರಯೋಜನ? ನಾನು ಏನು ತಿನ್ನಲ್ಲ, only coffee for me ಅಂದೆ. ಛೆ ಅದು ಹೇಗೆ ನಾವು ತಿನ್ನುವಾಗ ನೀ ಸುಮ್ಮನಿದ್ದರೆ ನಮಗೆ ಸರಿಯಾಗಲ್ಲ ಅಂದ್ರು.ನೀವು ತಿನ್ನಿ ನಾನು ನಿಮ್ಮ ತಲೆ ತಿನ್ತೀನಿ ಅಂದ್ರೂ ಕೇಳಲಿಲ್ಲ. 
 ಆಯ್ತು ಇನ್ನು ಅಲ್ಲಿ ಕೂತು ವಾದ ಮಾಡೋದು ಬೇಡ ಅಂತ ಖಾರ ಭಾತ್ ಹೇಳಿದೆ, ಸರ್ವರ್ 'ಮ್ಯಾಡಂ ಬಿಸಿ ಬಿಸಿ ರವೆ ಇಡ್ಲಿ ಇದೆ ಟೇಸ್ಟ್ ನೋಡಿ ಅಂದ
"ಬೇಡ'
"ತರ್ತೀನಿ ಮ್ಯಾಡಂ, ಸ್ಯಾಂಪಲ್ ಅಷ್ಟೆ' ಅಂದ
ನಾನು ಎರಡು ಸಲ ಬೇಡ ಅಂದ್ರು ಮೂರನೆ ಸಲ ನೂ ಅದೇ ರಿಪೀಟ್ ಮಾಡಿದಾಗ ಶ್ರೀಕಾಂತ್ ಸರಿ ಅಂದ್ರು
ಬಿಸಿ ಬಿಸಿ ರವೆ ಇಡ್ಲಿ, ಅದಕ್ಕೆ ಆಲೂ ಗಡ್ಡೆ ಪಲ್ಯ ಚಿಕ್ಕ ವಾಟಿಯಲ್ಲಿ ತುಪ್ಪ, ಅಲ್ಲದೇ ತಟ್ಟೆ straight ನನ್ನ ಮೂಗಿನಡಿ.. ಎಲ್ಲಿತ್ತೋ ಹಸಿವು ಗಬ ಗಬನೆ ತಿಂದು ಮುಗಿಸಿದೆ, ಮ್ಮ್ಮ್ಮ್ yummy. ಅದರೊಂದಿಗೆ ಮಸಾಲೆ ದೋಸೆ, ಅವರು ಮೂರು ಜನರ ತಟ್ಟೆಯಲ್ಲಿನ ತಿಂಡಿಯ ಸ್ಯಾಂಪಲ್, extra strong ಕಾಫಿ ಕೂಡ. ಆಹಾ ವಾಕ್ ಮಾಡಿದ್ದು ಸಾರ್ಥಕ ಆಯ್ತು. ನಿಹಾ ಮತ್ತು ಶ್ರೀಕಾಂತ 'ನೀನು ಮಾಡಿದ ಕಾಫಿ ನೆ ಬೆಸ್ಟ್' ಅಂದಾಗ ಜಂಬದಿಂದ ಗಾಳಿಯಲ್ಲಿ ಹಾರಾಡಲಿಕ್ಕೆ ಆಗದಷ್ಟು ವೈಟ್ ಬಂದಿದೆ ಕಣ್ರೀ....:-(
ನನ್ನ ವಾಕ್ ಪ್ರವರ ಸ್ವಲ್ಪ ಜಾಸ್ತಿ ಆಯ್ತು.  
:-( ಇದು ಒಂದೇ ನನ್ನ ಕ್ಲಿಕ್. ಇಲ್ಲೊಂದು ಕೊಳ ಇತ್ತು. ಮಳೆ ಇಲ್ಲದೆ ಒಣಗಿದೆ. ನಿಕೊನ್ ಕ್ಯಾಮರ ಮತ್ತು ನನಗೆ ಕೂಡಿ ಬರೋದೆ ಇಲ್ಲ. ಅದಕ್ಕೆ camera ನಿಹಾ ಗೇ ರವಾನಿಸಿದೆ.

ಕೆಳಗಿದೆ ನೀಹಾ ಕ್ಲಿಕ್ಕಿಸಿದ ಚಿತ್ರಗಳು.



ಬೋಗನ್ ವಿಲ್ಲ

ಗುಲ್ ಮೊಹರ್ ಗರ್ ತುಮ್ಹಾರಾ ನಾಮ್ ಹೋಗಾsss ಹಾಡು ನೆನಪಾಯಿತು.

trees - Niha's pet subject



ಹತ್ತಿ ಮರ..ಅಲ್ಲ. ಮರ ಹತ್ತಲಿಕ್ಕೆ ಅಲ್ಲ ಹೇಳಿದ್ದು ಮಾರಾಯ್ರೆ..silk cotton tree ಅಂತ

ನನ್ನ fav ಚಿತ್ರ

ಬಾತು ಕೋಳಿ
ಯಪ್ಪಾ ಎಂತ ಸೆಕೆ ನನಗೂ ನೀರಡಿಕೆ!!










parrot
ನೋಡಿ ಹೇಗೆ ಫೋಟೊ ಗೆ ಪೋಸ್ ಕೊಡುತ್ತೆ ತೋತಾರಾಮ್??
ಎಳೆ ಬಿಸಿಲಿಗೆ ನೀವೆಲ್ಲ ವಾಕ್ ಮಾಡಿ. ನನಗೋ ಸುಖದ ನಿದ್ರೆ!! ಒಂದೆರಡು ಒಳ್ಳೆ ಕನಸು :-)

ತನ್ನ ತಂದೆ ಜತೆ ಬಂದ ಪುಟ್ಟ್ ಪುಟಾಣಿ
ನಮ್ಮ ಜತೆ ರಸ್ತೆ ಕ್ರಾಸ್ ಮಾಡಲು ಕಾಯುತ್ತಿದ್ದ ಬೀಟಲ್. ಆಹಾ ಬಣ್ಣ ನೋಡಿ. amazing nature's amazing creatures. ನಿಹಾ ಫೋಟೊ ತೆಗೆಯುವಾಗ ಮಹಾ ಪೋಸ್ ಬೇರೆ ಕೊಡ್ತು. :-)
up close
15 minutes to tindi please..:-)

ತಿಂಡಿ ತಿಂದು ಆದ ಮೇಲೆ ಪ್ಲೇಟ್ ಮಾತ್ರ ಉಳಿದಿದೆ (ಮಳೆ ನಿಂತು ಹೋದ ಮೇಲೆ...ಹಾಡಿನ style ನಲ್ಲಿ. ಸಧ್ಯ ಜಯಂತ್ ಕಾಯ್ಕಿಣಿಯವರು ನನ್ನ ಬ್ಲಾಗ್ ಓದಲ್ಲ ಅದಕ್ಕೆ ಬಚಾವ್ ಆದೆ)
ವಾಪಸ್ ಮನೆಗೆ ನಾವು ಬಸ್ ನಲ್ಲಿ ಬರುವುದೆಂದು ಅಲ್ಲಿ ನಿಂತಿದ್ದ ಒಬ್ಬರಿಗೆ ಮೆಜೆಸ್ಟಿಕ್ ಗೆ ಇಲ್ಲಿ ಬಸ್ ಸಿಗುತ್ತ ಅಂತ ಕೇಳಿದ್ರೆ , ಈ ರೋಡ್ ನಲ್ಲಿ ಸ್ತ್ರೈಟ್ ಹೋಗಿ, ಅಲ್ಲಿ ಸಿಗ್ನಲ್ ಬಳಿ ಮೆಜೆಸ್ಟಿಕ್ ಗೆ ಹೋಗಲು 'ಬೇಜಾನ್' ಬಸ್ ಸಿಗುತ್ತೆ ಅಂದಾಗ ನನಗೆ ಅವರ ಬೇಜಾನ್ ಪದ ಪ್ರಯೋಗ ಖುಶಿ ಅನ್ನಿಸ್ತು.
ನಾವು ರೋಡ್ ಕ್ರಾಸ್ ಮಾಡಲು ನಿಂತಾಗ ನನ್ನ ಇಷ್ಟದ ಬರಹಗಾರರು ನನ್ನನ್ನು ನೋಡಿದರಂತೆ. ಈ ದಿನ ಹೀಗೆ ಮೈಲ್ ಹಾಕಿದರು.
Dear Malathi,
Were you near Lalbag yesterday morning? I was passing by in a car and I thought I saw you waiting to cross the road. It happened so suddenly and unexpectedly that there was no time to reconfirm or stop the car.
How are you? Hope all wll with you and family.
xxxxxxxx

ಈ ಮೈಲ್ ಓದಿ ಮಕ್ಕಳಿಗೆ ನಾನು ಕೇಳಿದ ಮೊದಲ ಪ್ರಶ್ನೆ 'ಹೆ guys was i on my best behavior' ಅಂತ,ಯಾಕಂದರೆ ನಾವು ನಾಲ್ಕು ಜನ ಒಟ್ಟಿಗಿದ್ದಾಗ ಅದು ಬೇರೇನೆ ಲೋಕ.  ಆದರೆ ಮಕ್ಕಳು ಹಾ ಹಾ ಹಾ ಅಂತ evil laughter ನಿಂದ ಉತ್ತರಿಸಿದರು..:-( 
:-)

April 18, 2013

ಸಂಚಿಯಿಂದ ತೆಗೆದ ನೆನಪು- 10- ನಾನಿ ಹೇಳಿದ ಕತೆ

ನಿನ್ನೆ ರಾತ್ರಿ ಬಾಯಾರಿಕೆಯಾಗಿತ್ತು. ಆದರೆ ಸೋಮಾರಿತನದ ಅಡಿಗೆ ಮನೆ ತನಕ ಯಾರು ಹೋಗ್ತಾರೆ ಅಂತ ಸುಮ್ಮನಾದೆ. ಬೆಳಿಗ್ಗೆ ತಿಂಡಿ ತಿನ್ನುವಾಗ- (ಇವತ್ತು ಬನ್ಸ್ & ತೊವ್ವೆ* .) ನಾನಿ ನಾನು ಚಿಕ್ಕಂದಿನಲ್ಲಿ ಹೇಳಿದ್ದ ಈ ಕತೆ ಮನೆಯವರೊಂದಿಗೆ ಶೇರ್ ಮಾಡಿದೆ. ಅವರಿಗೆ ಇಷ್ಟ ಆಯ್ತು so sharing ನಿಮ್ಜತೆ

ಒಬ್ಬ ಮನುಷ್ಯನಿಗೆ ಮಧ್ಯರಾತ್ರಿ ನಂತರ ಬಾಯಾರಿಕೆಯಾಗಿ ಎಚ್ಚರ ಆಯಿತಂತೆ. ಸೋಮಾರಿತನ, ಏಳದೇ ಅಲ್ಲೇ ಪುನ: ನಿದ್ದೆ ಹೋದನಂತೆ. ಆದರೆ ಅವನ ಪ್ರಾಣ/ಜೀವ ಬಾಯಾರಿಕೆ ತಾಳಲಾಗದೆ ಅವನ ದೇಹವನ್ನು ಬಿಟ್ಟು ನೀರಿನ ಜಾಡನ್ನು ಹುಡುಕಿ ಹೋಗುತ್ತಂತೆ. ಒಂದಾದ ಮೇಲೆ ಒಂದು ಮನೆ ಒಳ ಹೊಕ್ಕು , ಎಲ್ಲೂ ನೀರು ಸಿಗದೆ ಸುಮಾರು ದೂರ ಇರುವ ಒಂದು ಮನೆ ತಲುಪುತ್ತಂತೆ. ಕಡೆಗೆ ಒಂದು ಮನೆಗೆ ಹೋಗಲಿಕ್ಕೂ ಅಲ್ಲಿನ ಒಬ್ಬ ಹೆಂಗಸು ಗಡಿಗೆಯ ಮುಚ್ಚಳ ತೆಗೆದು ನೀರು ಕುಡಿಯುತ್ತಿದ್ದಾಗ ಈ ಮನುಷ್ಯನ ಪ್ರಾಣ ಆ ಗಡಿಗೆ ಯೊಳಗೆ ಹೊಕ್ಕಿತು. ಹೊಕ್ಕ್ಕಿದ ತಕ್ಷಣ ಈ ಹೆಂಗಸು,ಅವಳು ನೀರು ಕುಡಿದು ಮುಗಿದಿದ್ದರಿಂದ ಆ ಗಡಿಗೆಗೆ ಮುಚ್ಚಳ ಹಾಕಿ ಬಿಟ್ಟಳು. ಪ್ರಾಣ ಒಳಗಡೆ.

ಇಲ್ಲಿ ಮರುದಿನ ಬೆಳಿಗ್ಗೆ ಆ ಮನುಷ್ಯನ ಮನೆಯವರು ಅವನು ಎಷ್ಟು ಹೊತ್ತಾದರೂ ಏಳದೆ ಇದ್ದದ್ದು ನೋಡಿ ಬಳಿ ಬಂದು ನೋಡಿದರೆ ಅವನು ಉಸಿರಾಡ್ತಾ ಇರಲಿಲ್ಲ. ಅಳುತ್ತ ಅವನ ಅಂತ್ಯಕ್ರಿಯೆಗೆ ಸಜ್ಜಾದರು. ಇನ್ನೇನೂ ಸ್ಮಶಾನ ತಲುಪಬೇಕು, ಅನ್ನುವಷ್ಟರಲ್ಲಿ , ಆ ಹೆಂಗಸಿನ ಮನೆಯವರು ನೀರಿನ ಗಡಿಗೆಯ ಮುಚ್ಚಳ ತೆಗೆದಿದ್ದರಿಂದ, ಆ ಪ್ರಾಣ ಬೇಗ ನೀರಿಂದ ಹೊರ ಬಂದು ಈ ಮನುಷ್ಯನ ದೇಹ ಸೇರಿಕೊಂಡಿತು. ಚಟ್ಟದಲ್ಲಿ ಒಯ್ಯುತ್ತಿದ ಅವನನ್ನು, ದಢಕ್ಕೆಂದು ಅವನು ಎದ್ದ ರಭಸಕ್ಕೆ, ಹೊತ್ತೊಯ್ಯುವವರು ಚಟ್ಟವನ್ನು ಅಲ್ಲೇ ಬಿಸಾಕಿ ಓಡಿ ಹೋದರಂತೆ
ಇಷ್ಟೆ ಕತೆ. ಸೊ ಯಾರಿಗಾದ್ರೂ ರಾತ್ರಿ ನೀರಡಿಕೆಯಾದ್ರೆ ದಯವಿಟ್ಟು ನೀರು ಕುಡಿಯಿರಿ
:-)

ಬನ್ಸ್ ಮತ್ತು ತೊವ್ವೆ: ನಾನು ಬನ್ಸ್ ರೆಡಿ ಮಾಡಬೇಕಾದ್ರೆ ನೀಹಾ ಅಡಿಗಡಿಗೆ ಅಡಿಗೆ  ಮನೆಗೆ ಬಂದು 'ಅಮ್ಮ ಖಾನಾ 'ಬನ್' ಗಯಾ ಕ್ಯಾ ಅಂತ ಪನ್ನಾಡ್ತಾ ಇದ್ಲು.

ಹಾಗೇ ನಿನ್ನೆ ಕ್ಯಾರಟ್ ಹಲ್ವಾ ಮಾಡಿದ್ದೆ. ನಿಹಾ ನನಗೆ ಕ್ಯಾರೆಟ್ ತುರಿದು ಕೊಟ್ಟಳು, ಆಮೇಲೆ ಥ್ಯಾಂಕ್ಸ್ ಹೇಳಬಾರದು, ಬೇರೇನೋ ಹೇಳಬೇಕು ಅಂದ್ಲು .ನನಗೆ ಅರ್ಥ ಆಗಲಿಲ್ಲ . ಮಲವಿಕಾಗೆ ಅರ್ಥವಾಯ್ತು .I am 'grate'ful to you ಅನ್ನಬೇಕಿತ್ತಂತೆ. ಸೋ ಇವು ನಮ್ಮ ಅಡಿಗೆ ಮನೆ ಪನ್ ಗಳು..
ಅದ್ಸರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೋಟಲ್ ಗಳಲ್ಲಿ ಬನ್ಸ್ ಸಿಗುತ್ವೆ. ನಾವು ಆರ್ಡರ್ ಮಾಡುವಾಗ ಒಂದು ಪ್ಲೇಟ್ ಬನ್ಸ್ ಅಂತೇವಲ್ಲ ಅವರು ಕೊಡೋದು  ಪ್ಲೇಟ್ ನಲ್ಲಿ ಒಂದೆ ಬನ್... ತಮ್ಮ ಫೋನ್ ಮಾಡಿ ಏನ್ ಮಾಡ್ತಾ ಇದ್ದೀಯಾ ಅಂದ್ರೆ 'ಬನ್ಸ್' ತಿನ್ನುತ್ತಾ ಇದ್ದೀನಿ ಅಂತೇನಲ್ಲ when i am eating 'a' bun- ಸೋ ಈ ಬನ್ಸ್in plural ಫಂಡಾ ಅರ್ಥ ಆಗಲಿಲ್ಲ...:-)