ನಿನ್ನೆ ರಾತ್ರಿ ಬಾಯಾರಿಕೆಯಾಗಿತ್ತು. ಆದರೆ ಸೋಮಾರಿತನದ ಅಡಿಗೆ ಮನೆ ತನಕ ಯಾರು ಹೋಗ್ತಾರೆ ಅಂತ ಸುಮ್ಮನಾದೆ. ಬೆಳಿಗ್ಗೆ ತಿಂಡಿ ತಿನ್ನುವಾಗ- (ಇವತ್ತು ಬನ್ಸ್ & ತೊವ್ವೆ* .) ನಾನಿ ನಾನು ಚಿಕ್ಕಂದಿನಲ್ಲಿ ಹೇಳಿದ್ದ ಈ ಕತೆ ಮನೆಯವರೊಂದಿಗೆ ಶೇರ್ ಮಾಡಿದೆ. ಅವರಿಗೆ ಇಷ್ಟ ಆಯ್ತು so sharing ನಿಮ್ಜತೆ
ಒಬ್ಬ ಮನುಷ್ಯನಿಗೆ ಮಧ್ಯರಾತ್ರಿ ನಂತರ ಬಾಯಾರಿಕೆಯಾಗಿ ಎಚ್ಚರ ಆಯಿತಂತೆ. ಸೋಮಾರಿತನ, ಏಳದೇ ಅಲ್ಲೇ ಪುನ: ನಿದ್ದೆ ಹೋದನಂತೆ. ಆದರೆ ಅವನ ಪ್ರಾಣ/ಜೀವ ಬಾಯಾರಿಕೆ ತಾಳಲಾಗದೆ ಅವನ ದೇಹವನ್ನು ಬಿಟ್ಟು ನೀರಿನ ಜಾಡನ್ನು ಹುಡುಕಿ ಹೋಗುತ್ತಂತೆ. ಒಂದಾದ ಮೇಲೆ ಒಂದು ಮನೆ ಒಳ ಹೊಕ್ಕು , ಎಲ್ಲೂ ನೀರು ಸಿಗದೆ ಸುಮಾರು ದೂರ ಇರುವ ಒಂದು ಮನೆ ತಲುಪುತ್ತಂತೆ. ಕಡೆಗೆ ಒಂದು ಮನೆಗೆ ಹೋಗಲಿಕ್ಕೂ ಅಲ್ಲಿನ ಒಬ್ಬ ಹೆಂಗಸು ಗಡಿಗೆಯ ಮುಚ್ಚಳ ತೆಗೆದು ನೀರು ಕುಡಿಯುತ್ತಿದ್ದಾಗ ಈ ಮನುಷ್ಯನ ಪ್ರಾಣ ಆ ಗಡಿಗೆ ಯೊಳಗೆ ಹೊಕ್ಕಿತು. ಹೊಕ್ಕ್ಕಿದ ತಕ್ಷಣ ಈ ಹೆಂಗಸು,ಅವಳು ನೀರು ಕುಡಿದು ಮುಗಿದಿದ್ದರಿಂದ ಆ ಗಡಿಗೆಗೆ ಮುಚ್ಚಳ ಹಾಕಿ ಬಿಟ್ಟಳು. ಪ್ರಾಣ ಒಳಗಡೆ.
ಇಲ್ಲಿ ಮರುದಿನ ಬೆಳಿಗ್ಗೆ ಆ ಮನುಷ್ಯನ ಮನೆಯವರು ಅವನು ಎಷ್ಟು ಹೊತ್ತಾದರೂ ಏಳದೆ ಇದ್ದದ್ದು ನೋಡಿ ಬಳಿ ಬಂದು ನೋಡಿದರೆ ಅವನು ಉಸಿರಾಡ್ತಾ ಇರಲಿಲ್ಲ. ಅಳುತ್ತ ಅವನ ಅಂತ್ಯಕ್ರಿಯೆಗೆ ಸಜ್ಜಾದರು. ಇನ್ನೇನೂ ಸ್ಮಶಾನ ತಲುಪಬೇಕು, ಅನ್ನುವಷ್ಟರಲ್ಲಿ , ಆ ಹೆಂಗಸಿನ ಮನೆಯವರು ನೀರಿನ ಗಡಿಗೆಯ ಮುಚ್ಚಳ ತೆಗೆದಿದ್ದರಿಂದ, ಆ ಪ್ರಾಣ ಬೇಗ ನೀರಿಂದ ಹೊರ ಬಂದು ಈ ಮನುಷ್ಯನ ದೇಹ ಸೇರಿಕೊಂಡಿತು. ಚಟ್ಟದಲ್ಲಿ ಒಯ್ಯುತ್ತಿದ ಅವನನ್ನು, ದಢಕ್ಕೆಂದು ಅವನು ಎದ್ದ ರಭಸಕ್ಕೆ, ಹೊತ್ತೊಯ್ಯುವವರು ಚಟ್ಟವನ್ನು ಅಲ್ಲೇ ಬಿಸಾಕಿ ಓಡಿ ಹೋದರಂತೆ
ಇಷ್ಟೆ ಕತೆ. ಸೊ ಯಾರಿಗಾದ್ರೂ ರಾತ್ರಿ ನೀರಡಿಕೆಯಾದ್ರೆ ದಯವಿಟ್ಟು ನೀರು ಕುಡಿಯಿರಿ
:-)
ಬನ್ಸ್ ಮತ್ತು ತೊವ್ವೆ: ನಾನು ಬನ್ಸ್ ರೆಡಿ ಮಾಡಬೇಕಾದ್ರೆ ನೀಹಾ ಅಡಿಗಡಿಗೆ ಅಡಿಗೆ ಮನೆಗೆ ಬಂದು 'ಅಮ್ಮ ಖಾನಾ 'ಬನ್' ಗಯಾ ಕ್ಯಾ ಅಂತ ಪನ್ನಾಡ್ತಾ ಇದ್ಲು.
ಹಾಗೇ ನಿನ್ನೆ ಕ್ಯಾರಟ್ ಹಲ್ವಾ ಮಾಡಿದ್ದೆ. ನಿಹಾ ನನಗೆ ಕ್ಯಾರೆಟ್ ತುರಿದು ಕೊಟ್ಟಳು, ಆಮೇಲೆ ಥ್ಯಾಂಕ್ಸ್ ಹೇಳಬಾರದು, ಬೇರೇನೋ ಹೇಳಬೇಕು ಅಂದ್ಲು .ನನಗೆ ಅರ್ಥ ಆಗಲಿಲ್ಲ . ಮಲವಿಕಾಗೆ ಅರ್ಥವಾಯ್ತು .I am 'grate'ful to you ಅನ್ನಬೇಕಿತ್ತಂತೆ. ಸೋ ಇವು ನಮ್ಮ ಅಡಿಗೆ ಮನೆ ಪನ್ ಗಳು..
ಅದ್ಸರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೋಟಲ್ ಗಳಲ್ಲಿ ಬನ್ಸ್ ಸಿಗುತ್ವೆ. ನಾವು ಆರ್ಡರ್ ಮಾಡುವಾಗ ಒಂದು ಪ್ಲೇಟ್ ಬನ್ಸ್ ಅಂತೇವಲ್ಲ ಅವರು ಕೊಡೋದು ಪ್ಲೇಟ್ ನಲ್ಲಿ ಒಂದೆ ಬನ್... ತಮ್ಮ ಫೋನ್ ಮಾಡಿ ಏನ್ ಮಾಡ್ತಾ ಇದ್ದೀಯಾ ಅಂದ್ರೆ 'ಬನ್ಸ್' ತಿನ್ನುತ್ತಾ ಇದ್ದೀನಿ ಅಂತೇನಲ್ಲ when i am eating 'a' bun- ಸೋ ಈ ಬನ್ಸ್in plural ಫಂಡಾ ಅರ್ಥ ಆಗಲಿಲ್ಲ...:-)