September 23, 2012

Grilled Sandwich

Need a pound of bread, butter, green chutney and potato Bhaji and a grill like mine (will post pic of sandwich grill at a later time). One of non-messy lunch box idea for kids. My girls are not kids anymore yet they love grilled sandwich to take to work/college
Butter the side of the bread that will come in contact with the grill. On the opposite side spread some green chutney top it up with a table spoon of Bhaji. Spread it evenly over the bread. cover with another piece of bread to which chutney is smeared and grill for 5 min or until it is golden brown. U can open the lid in between to see if it is done..:




last pic on my cell phone...:-))
Its great to carry on picnics too.
For the green chutney: A bunch of coriander leaves, 2 sprigs of Pudina (Mint) Leaves, 2 table spoons of fresh grated coconut, small piece of ginger, two pods of garlic (optional),small piece of tamarind, three green chillies and salt to taste. Grind all this together with just a little bit of water.
Pic from the net!

September 20, 2012

ನಮ್ಮದೊಂದು ಸಡನ್ ಟ್ರಿಪ್ಪು

ಎಲ್ಲರೂ ಈಗ ಹಬ್ಬ ಮುಗಿಸಿ ಸುಧಾರಿಸುತ್ತಿರಬಹುದು. ಇದೋ ನಿಮಗಿಲ್ಲಿದೆ ನಮ್ಮ ಗೌರಿ-ಗಣಪನ ಚಿತ್ರ.
I really thought this pic got deleted. Imagine my joy when i found this saved in my ofc photos. 

ಮೊನ್ನೆ ಶನಿವಾರ ಸಂಜೆ ನಾನು ವಾಕ್ ಮುಗಿಸಿ ಬರುವಾಗ ಶ್ರೀಕಾಂತ , 'ನಾಳೆ ರವಿ ಗೆ ಹೇಳಿದ್ದೀನಿ. ಬೆಳಿಗ್ಗೆ 7 ಗಂಟೆಗೆಲ್ಲ ಮನೆಯಿಂದ ಹೊರ ಬೀಳುವಾ ಅಂದ್ರು. ಹಲವಾರು ತಿಂಗಳಿನಿಂದ ನಾವು ಎಲ್ಲೂ ಹೋಗಿರಲಿಲ್ಲ. ನನಗೂ ಬೆಂಗಳೂರಿನಿಂದ ಒಂದು ಬ್ರೇಕ್ ಬೇಕಿತ್ತು. ನನಗೇ ಜೋರು ನೆಗಡಿಯಾಗಿ -ಸುಮಾರು 5 ವರ್ಷಗಳ ನಂತರ ನನಗೆ ನೆಗಡಿಯಾಗಿದ್ದು. ತಲೆ ಭಾರ, ಒಂದು ಕಿವಿ ಡಮಾರ್...ಆದ್ರೂ ಎಲ್ಲಾದ್ರೂ ಹೀಗೇss ಹೋಗುವ ಅಂದ ಕೂಡಲೆ i perked up. ನಾನೋ Developmental Farmer ನಾರಾಯಣ ರೆಡ್ಡಿಯವರ ಫಾರ್ಮ್ ಗೆ ಏನೋ ಅಂದುಕೊಂಡಿದ್ದೆ. ಹಲವಾರು ತಿಂಗಳುಗಳಿಂದ ಅಲ್ಲಿಗೆ ಹೋಗುವ ಪ್ಲ್ಯಾನ್ಸ್ ಇತ್ತು. ನಾನು ಏನೂ ಕೇಳಲಿಲ್ಲ, ಸರಿ ಅಂತ ಅಷ್ಟೆ ಹೇಳಿದೆ. ಸ್ವಲ್ಪ ಸಮಯದ ನಂತರ ನೀಹಾ ಶ್ರೀಕಾಂತ ಮಾತನಾಡುವಾಗ ಮೇಕೆ ದಾಟು ಎನ್ನುವ ಹೆಸರು ಕೆಳಿಸಿತು. ಓ ನಾವು ಅಲ್ಲಿಗಾ ಹೋಗ್ತಾ ಇರೋದು? ನನಗಂತೂ ಎಲ್ಲಿ ಹೋದ್ರೂ ನಡೀತಿತ್ತು. ಮಾಲವಿಕಾಳಿಗೆ ಎಸ್ ಎಮ್ ಎಸ್ ಮಾಡಿದೆ ರಜಾ ಹಾಕಕ್ಕೆ ಬರುತ್ತಾ ಅಂತ, ಅವಳು mommy are you joking? ಸಂಡೆ ನನಗೆ ರಜೆ ಕೊಡಲ್ಲಲ್ವಾ> ನೀವೆಲ್ಲ ಹೋಗಿ ಬನ್ನಿ. ಈ ಕೆಲಸದಲ್ಲಿ ಒಂದು ವರ್ಷ ಮುಗಿಲಿಕ್ಕೆ ಬಂತು. ಮುಂದಿನ ತಿಂಗಳು ನನಗೆ ಒಂದು ವಾರ ಪೈಡ್ ಲೀವ್  ಕೊಡ್ತಾರೆ ಆವಾಗ ನಾಲ್ಕೂ ಜನ ಎಲ್ಲಾದರೂ ಹೋಗುವಾ, ನಾಳೆ ನೀವು ಮೂರು ಜನ ಹೋಗಿ ಬನ್ನಿ ಅಂದ್ಲು. ಸರಿ ಅಂದೆ.
ಬೆಳಿಗ್ಗೆ ಮಾಲವಿಕ ಅವಳ ಕೆಲಸಕ್ಕೆ ಹೊರಟು ಹೋದ ಮೇಲೆ ನಾವು ಹೊರಟಿದ್ದು. ಸಾಧಾರಣ ಏಳು ಗಂಟೆ ಆಗಿತ್ತು. ಗಟ್ಟಿ ಯಾಗಿ ಅಕ್ಕಿ ಕಡಬು ಕಬಳಿಸಿ ಹೊರಟಿದ್ದು. ನನ್ನ ಎರಡೂ ಕಿವಿ ಕೆಪ್ಪ್ ಆಗಿತ್ತು. ಒಂದು ಮೂಗು ಕಟ್ಟಿಹೋಗಿ ಉಸಿರಾಟಕ್ಕೆ ಕಿರಿಕಿರಿ ಅನ್ನಿಸ್ತಿತ್ತು. 20 ವಿಕ್ಸ್ ಕಿ ಗೋಲಿ ಪ್ಯಾಕ್ ಮಾಡಿಸಿಕೊಂಡು ಹೊರಟಿದ್ದೆ. ರವಿಗೆ ಮೇಕೆದಾಟು ಅಂದಾಗ ಅವನು ಮೇಕೆದಾಟಲ್ಲಿ ನೋಡುವಂತದ್ದು ಏನಿಲ್ಲ ಅಂತ ಅದರ ಕತೆ ಹೇಳಿದ
ಯಾವಾಗ್ಲೋ ಒಂದು ಸಲ ಕನಕಪುರದ ಬಳಿ ಒಂದು ವ್ಯಾಘ್ರ ಒಂದು ಮೇಕೆಯನ್ನು ಅಟ್ಟಿಸಿಕೊಂಡು ಬಂತಂತೆ. ಮೇಕೆ ಓಡ್ತಾ ಓಡ್ತಾ ನದಿ ಹತ್ತಿರ ತಲುಪಿತಂತೆ. ಇನ್ನೊಂದು ದಡಕ್ಕೆ ಹೋಗಲಿಕ್ಕೆ ಸ್ವಲ್ಪ ಹೆಚ್ಚೆ ದೂರ ಇತ್ತಂತೆ. ಆದ್ರೆ ಪ್ರಾಣ ಭಯದಿಂದ ಮೇಕೆ ಈ ದಡದಿಂದ ಆ ದಡಕ್ಕೆ ಜಂಪ್ ಹೊಡಿತಂತೆ ಅದರ ಪುಣ್ಯಕ್ಕೆ ಅದು ಸೇಫ್ ಆಗಿ ಆ ಕಡೆ ತಲುಪ್ತಂತೆ. ಏನಿಲ್ಲ ಮೇಡಂ ಆಗ ಮೇಕೆ ಜಂಪ್ ಹೊಡಿಯುವಷ್ಟು ಜಾಗ ಇತ್ತು . ವರ್ಷ ಕಳೆದಂತೆ ಮಳೆನೀರಿನ ಹಾಗೂ ನದಿ ನೀರಿನಿಂದ ಕೊರೆತಕ್ಕೊಳಗಾಗಿ ಎರಡು ದಡಗಳ ಮಧ್ಯ ಹೆಚ್ಚು ಅಂತರ ಉಂಟಾಗಿದೆ ಅಷ್ಟೆ. ನೋಡುವಂತದ್ದು ಏನಿಲ್ಲ. ಅದರ ಬದಲಿಗೆ ನಾವು ಭರಚುಕ್ಕಿ-ಗಗನಚುಕ್ಕಿ ಫಾಲ್ಸ್ ಮತ್ತು ತಲಕಾಡು..ಇಲ್ಲಿಗೆ ಹೋಗುವ ಅಂದ...ನಾವು ಸರಿ ಎಲ್ಲಿ ಕರೆದುಕೊಂಡು ಹೋಗ್ತೀರಿ ಹೋಗುವಾ ಅಂದ್ವಿ.
ಮೊದಲಿಗೆ ರವಿ ನಮಗೆ (ನನಗೆ ದೇವಸ್ಥಾನಗಳಿಗೆ ಹೋಗುವುದೆಂದರೆ ಆಗಲ್ಲ ಅಂತ ರವಿಗೆ ಗೊತ್ತು) ಅದಕ್ಕೆ ಅವರು ನಯವಾಗಿ ಈ ಒಂದು ದೇವಸ್ಥಾನ ನೋಡಿಬಿಡಿ ಅಂತ ಮಾಳೂರ್ (ಮಳ್ಳೂರು-ಚನ್ನಪಟ್ಟಣಕ್ಕೆ ಹೋಗುವ ದಾರಿಯಲ್ಲಿದೆ) ನಲ್ಲಿರುವ ಅಪ್ರಮೇಯ ದೇವಸ್ಥಾನಕ್ಕೆ ಕರೆದುಕೊಂಡು ಹೋದರು.ದ್ರಾವಿಡ ಶೈಲಿಯಲ್ಲಿ ಕಟ್ಟಿದ ಈ ದೇವಸ್ಥಾನ ಒಳಗಡೆ ತುಂಬ ಸುಂದರವಾಗಿದೆ. ಕ್ಲೀನ್ ಆಗಿ ಇಟ್ಕಂಡಿದ್ದಾರೆ.





ಅಪ್ರಮೇಯ ಶ್ರೀ ವಿಷ್ಣುವಿನ ಇನ್ನೊಂದು ಹೆಸರು. ಅಲ್ಲಿನ ಪುರೋಹಿತರ ಪ್ರಕಾರ ಈ ದೇವಸ್ಥಾನ 3000 ವರ್ಷ ಹಳೆಯದಂತೆ. ನಾವು ದೇವರ ಮುಂದೆ ಉಪಸ್ಥಿತರಾದ ನಂತರ ಪುರೋಹಿತರು ಗರ್ಭಗುಡಿಯಲ್ಲಿ ವಿದ್ಯುಚಕ್ತಿ ಬೆಳಕನ್ನು ಹಾಕಿದ್ದರಿಂದ ದೇವರ ಮೂರ್ತಿ ನಿಚ್ಚಳವಾಗಿ ಕಾಣಿಸಿತು. ಸಾಲಿಗ್ರಾಮ ಶಿಲೆಯಿಂದ ಮಾಡಿರುವ ಸುಂದರ ಮೂರ್ತಿ. ಫೋಟೊ ತೆಗೆಯುವುದು ನಿಶಿದ್ದವಾಗಿತ್ತು. ಮೊದಲೆಲ್ಲ ದೇವರ ಮುಂದೆ ಹಚ್ಚಿಟ್ಟ ದೀಪದ ಬೆಳಕಲ್ಲಿ ದೇವರ ಮೂರ್ತಿಯನ್ನು ನೋಡುವುದಿತ್ತು. ಅದೇ ಚೆಂದ. ಈ electric light ನಿಂದ ಒಂದು ತರಹ artificial atmosphere.(ಇನ್ನೂ ಏನೇನೋ ಇದೆ ದೇವಸ್ಥಾನದಲ್ಲಿ ನಾನು ಹೇಳಲ್ಲ ನೀವೆಲ್ಲ ಹೋಗಿ ನೋಡಿ..its worth it..
ಇಲ್ಲಿಂದ ನೇರವಾಗಿ ನಾವು ಗಗನಚುಕ್ಕಿ ಜಲಪಾತಕ್ಕೆ ಹೋದೆವು. ಮಂಡ್ಯ ಜಿಲ್ಲೆಯ ಶಿವನಸಮುದ್ರದಲ್ಲಿ ಕಾವೇರಿ ರಭಸವಾಗಿ   ಬಂಡೆ ಮತ್ತು ಕೊರಕಲು ಪ್ರದೇಶದಲ್ಲಿ ಹರಿದು ಈ ಹೆಸರು ಪಡೆದಿದ್ದಾಳೆ. ಮಾಮೂಲಿ ಅಲ್ಲಿಗೆ ಹೋಗುವ ದಾರಿ ದುರಸ್ತಿಯಲ್ಲಿದ್ದುದರಿಂದ ನಾವು ಊರ ಹೊರಗಿನಿಂದ ಬಂದು ಸ್ವಲ್ಪ detour ತೆಗೆದುಕೊಳ್ಳಬೇಕಾಯಿತು.
ಕೆಳಗಿವೆ ಕೆಲ ಚಿತ್ರಗಳು:
ಇದು ನಾನು ತೆಗೆದ ಚಿತ್ರ



ಇದೂ ನಾನೆ ತೆಗೆದದ್ದು

ನಾನು ನಿಹಾ

ಇದು ನಿಹಾ ತೆಗೆದ ಚಿತ್ರ
ಗಗನಚುಕ್ಕಿಯಲ್ಲಿ pay & use toilet ಉಸ್ತುವಾರಿ ನೋಡಿಕೊಳ್ಳುವ ನಾಗಮ್ಮ. ಇವರ ಜಮೀನಿನಲ್ಲಿ ಟಾಯ್ಲೆಟ್ ಹಾಕಿಸಿಕೊಂಡಿದ್ದಾರೆ. ಮಲೇರಿಯ ಜ್ವರದಿಂದ ಕಂಪಿಸುತ್ತಾ , ಅಲ್ಲೇ ಕಟ್ಟೆಯ ಮೇಲೆ ಮಲಗಿದ್ದರು. ಯಾಕಮ್ಮ ಹುಷಾರಿಲ್ಲವಾ ಅಂತ ಶ್ರೀಕಾಂತ ಮಾತನಾಡಿಸಿದ್ದಾಗ, "ಮೊನ್ನೆ ತನಕ ಆಸ್ಪತ್ರೆಯಲ್ಲೇ ಇದ್ದೆ. ಅಲ್ಲಿ ಮಲಗಿಲಿಕ್ಕೆ ಬೇಜಾರಾಗತ್ತೆ ಅಂತ ಇಲ್ಲಿ ಮಲಗ್ತಾ ಇದ್ದೀನೀ' ಅಂದ್ಲು. ನಿಮ್ಮ ಹಟ್ಟಿ ನೋಡಬಹುದಾ ಅಂದಿದಕ್ಕೆ,' ಅಲ್ಲೇನಿದೆ ನೋಡುವಂತದ್ದು ಅಂತ ಕೇಳುತ್ತ ಅವರ ಮನೆ ನೋಡಲು ಅನುಮತಿ ಇತ್ತರು. ಒಂದು ಏಕರೆ ಜಾಗದಲ್ಲಿ ಪುಟ್ಟ ಹಟ್ಟಿ, ಒಂದು ಹಸು ಕಟ್ಟುವ makeshift ದೊಡ್ಡಿ, ಪೇರಲೆ, ಸೀತಾಫಲ, ನುಗ್ಗೆಕಾಯಿ, ರಾಜನೆಲ್ಲಿಕಾಯಿ ಮರಗಳನ್ನು ಬೆಳೆಸಿದ್ದಾರೆ. ಮನೆ ಒಳಗೆ ಹಾಗೂ ಆವರಣ ಅತ್ಯಂತ ಸ್ವಚ್ಛವಾಗಿ ಇಟ್ಟಿದ್ದು ನೋಡಿ ನಾನಂತು ಫುಲ್ impressed.
ತೋಟವನ್ನು ಇನ್ನಷ್ಟು ಚೆನ್ನಾಗಿ ಮಾಡಲು ಶ್ರೀಕಾಂತ ರಿಂದ ಸಲಹೆ ಪಡೆದುಕೊಳ್ಳುತ್ತಿರುವುದು

ಅವರ ಮನೆ. loved this place. it has too much positive vibes

ನೆಲ್ಲಿಕಾಯಿ ಮರ.

ಭರಚುಕ್ಕಿಗೆ ಹೋಗುವ ದಾರಿಯಲ್ಲಿ



ಎಂಥ ಮನೋಹರ ದೃಶ್ಯ!!!ನೇಜಿ ಮಾಡುತ್ತಿರುವುದು. ಮೇಲಿನ ಮೂರು ಚಿತ್ರ ನಮ್ಮ ರಾಯರ ಕ್ಯಾಮೆರಾ ಕಣ್ಣಲ್ಲಿ:-)

ಇಲ್ಲಿಂದ ರವಿ ನಮಗೆ ಇನ್ನೊಂದು ದೇವಸ್ಥಾನಕ್ಕೆ ಕರೆದುಕೊಂಡು ಹೋದರು. ಗಗನಚುಕ್ಕಿ-ಭರಚುಕ್ಕಿ- ರಂಗನಾಥಸ್ವಾಮಿ ದೇವಾಲಯ ಒಂದೇ ದಿನ ನೋಡಿದರೆ ಪುಣ್ಯವಂತೆ...:-))
ಈ ದೇವಸ್ಥಾನದ ಒಳಗಡೆ ನೆಲಕ್ಕೆ ಮಾರ್ಬಲ್ಲ್ಲ ಟೈಲ್ಸ್ ಹಾಕಿದ್ದರು

ಗಾರ್ಡನ್ ಮತ್ತು ಇತರೇ ರಿಪೇರಿ ಕೆಲಸಗಳು ನಡೆಯುತ್ತಿದ್ದವು. ಲೈಟ್ ಕಂಬ ಈ ಚಿತ್ರಕ್ಕೆ ಅಡ್ಡಿ ಬಂದಿದೆ. ನಿಹಾಳನ್ನು ಕ್ಲಿಕ್ ಮಾಡಿದ್ದು ನಾನು
ಹಳೆಗನ್ನಡದಲ್ಲಿರುವ ಫಲಕ. ಎಡಬದಿಗೆ ಪೋಲಿಸ್ ರು ಕಾಣಿಸುತ್ತಾರಾ? ಯಾರೋ ವಿ ವಿ ಐ ಪಿ ಗಳ ಜತೆ ಬಂದವರೇನೋ ಅಂದುಕೊಂಡಿದ್ವಿ. ನಾವು ಭರಚುಕ್ಕಿ ಜಲಪಾತವನ್ನೆಲ್ಲ ನೋಡಿಬಂದ ಮೇಲೆ ನಮಗೆ ಬೇಸರದ ಸಂಗತಿಯೊಂದು ಕಾದಿತ್ತು. ಹಿಂದಿನ ದಿನ ಅಂದ್ರೆ ಶನಿವಾರ ಬೆಂಗಳೂರಿನ ಐದು ಜನ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಭರಚುಕ್ಕಿಗೆ ಬಂದಿದ್ದರಂತೆ. ಅದರಲ್ಲೊಬ್ಬ ಕಾಲು ಜಾರಿ ಬಿದ್ದು ಅವನ ಶವ ಭಾನುವಾರ ಸಿಕ್ಕಿದ್ದು. ಅವನ ಜತೆಯಲ್ಲಿನ ಹುಡುಗರು ಆಲ್ಲೆ ಗುಂಪುಕಟ್ಟಿಕೊಂಡು ಸೋತಮುಖದಲ್ಲಿ ಕೂತಿದ್ದರು. ನಾನು ಲೊಚಗುಟ್ಟುತ್ತಿರುವಾಗಲೇ ರವಿ ನನಗೆ ಗಿಡಗಂಟಿಗಳ ಎಡೆಯಿದ್ದಡೆ ಕೈ ತೋರಿಸಿ, 'ನೋಡಿ ಮೇಡಂ ಪೋಸ್ಟ್ ಮಾರ್ಟಮ್ ಮಾಡ್ತಿರೋದು ಅಂತ' ಇನ್ನಷ್ಟು ನೋವು ಅನುಭವಿಸುತ್ತಿರುವಾಗಲೇ ಹುಡುಗನನ್ನ್ನು ಬಿಳಿಬಟ್ಟೆಯಲ್ಲಿ ಕಟ್ಟಿ ತೆಗೆದುಕೊಂಡು ಅಲ್ಲಿಂದ ಹೊರಗೆ ಬಂದರು. ಅವನನ್ನು ಹಿಡಿದುಕೊಂಡು ಬಂದವರು ಮೂಗನ್ನು ಮುಚ್ಚಿಕೊಂಡಿದ್ದರು. ಶವ ತುಂಬ ಕೊಳೆತುಹೋದ ಸ್ಥಿತಿಯಲ್ಲಿತ್ತಂತೆ. ಅದನ್ನು ಅಲ್ಲೇ ಪಾರ್ಕ್ ಮಾಡಿದ ಟೆಂಪೋ ಟ್ರಾಕ್ಸ್ ನಲ್ಲಿ ಹಾಕಿದರು, ಇನ್ನು  ನೋಡಕ್ಕೆ ಆಗದೆ ನಾವು ಅಲ್ಲಿಂದ ಹೊರಟ್ವಿ.
ಪಾಪ ಅಪ್ಪ ಅಮ್ಮ ಮಕ್ಕಳು ಕಲಿಯಲೀ ಅಂತ ಎಲ್ಲೆಲ್ಲಿಗೋ ಕಳಿಸ್ತಾರೆ. ಭರಚುಕ್ಕಿಯಲ್ಲಿ ಇಳಿಯುವಾಗಲೇ ದೊಡ್ಡ ಬೋರ್ಡ್ ನಲ್ಲಿ ವಾರ್ನಿಂಗ್ ಸೈನ್ ಹಾಕಿದ್ದಾರೆ. ಎಲ್ಲೆಲ್ಲಿ ಹೋಗಕೂಡದೆಂದು/ಇಳಿಯಕೂಡದೆಂದು. ಈ ಹುಡುಗ ನಾರ್ಥ್ ನಿಂದ ಬಂದವನಂತೆ. :-((ಕೆಲ ಹುಡಗರು ಅದರಲ್ಲೂ ಅವರ ಜತೆ ಹೆಣ್ಣುಮಕ್ಕಳು ಇದ್ದರಂತೂ ಯಾವ ರೀತಿ ಮಂಗ ಚೇಷ್ಟೆ ಮಾಡುತ್ತಾರೆಂದು  ಆ ದಿನಾನೇ ಕಣ್ಣಾರೆ ನೋಡಿದ್ದೇನೆ.
ಭರಚುಕ್ಕಿಯ ಚಿತ್ರಗಳು:


 for my sister jyothi pai :-)))))))))))))

ರವಿ


ರವಿ ಕ್ಲಿಕ್ಸ್
ಇಲ್ಲಿಂದ ನಾವು ಮಲೇ ಮಾದೇಶ್ವರ ಬೆಟ್ಟಕ್ಕೆ ಹೋದೆವು. ತಲಕಾಡು ಕ್ಯಾನ್ಸಲ್ಡ್....ಮಲೇ ಮಾದೇಶ್ವರ ಅಂದರೆ ಗುಡ್ಡದ ಮೇಲೆ ದೇವಸ್ಥಾನ ಅಂದುಕೊಂಡಿದ್ದೆ. ಇದು ನೋಡಿದರೆ ಬೆಟ್ಟ ಹತ್ತಿ ಇಳಿದ ಮೇಲೆ ಸಿಗುವ ದೇವಸ್ಥಾನ. ಆ ದಿನ ಅಮವಾಸ್ಯೆಯಂತೆ. ಅದಕ್ಕೆ ಅಲ್ಲಿ ಜಾತ್ರೆ-ಗೌಜು-ಗದ್ದಲ..ಅದರ ಚಿತ್ರಗಳನ್ನು ಇನ್ನೊಂದು ಪೋಸ್ಟ್ ನಲ್ಲಿ. ಕೊಳ್ಳೇಗಾಲ ಮಾರ್ಗವಾಗಿ ಹೋಗಿದ್ದು ತುಂಬ ಇಷ್ಟವಾಯ್ತು ನನಗೆ ಆ ಊರು. ರಸ್ತೆಯ ಉದ್ದಕ್ಕೆ ಕೆರೆ. ಮಳವಳ್ಳಿ, ಮಧುಪುರ ದಲ್ಲೆಲ್ಲ ಹಳೆಯ ಕೆಲವು ಕಂಬದ ಮನೆಯ ನೋಡುವ ಭಾಗ್ಯ ಸಿಕ್ಕಿತು.
ರಾತ್ರಿ 10.45 ಗೆ ಮನೆ ತಲುಪಿದೆವು. ರಾತ್ರಿ ಊಟ ರಾಮನಗರದ ಕಾಮತ್ ಹೋಟಲ್ ನಲ್ಲಿ.
sorry ಎಲ್ಲರೂ ಗೌರಿ ಗಣಪನ ಫೋಟೊ ಹುಡುಕ್ತಿದ್ದೀರಾ? ಚೆನ್ನಾಗಿ ಬಂದಿಲ್ಲ ಅಂತ ಶ್ರೀಕಾಂತ ಅದನ್ನು ಡಿಲೀಟ್ ಮಾಡಿದ್ದಾರೆ...
ಯಾಕೋ ವಿಸರ್ಜನೆ ಮುಂಚೆ ಒಂದೆರಡು ಫೋಟೊ ತೆಗೆದಿದ್ದೆ ನನ್ನ ಮುದ್ದು ಗಣಪಂದು..ಇಗೋ ಇಲ್ಲಿದೆ ನಿಮಗಾಗಿ
 ನಮ್ಮ eco-friendly ಮಣ್ಣಿನ ಗಣಪ

ಗಮ್ಮತಂದ್ರೆ ನಮ್ಮ ಗಣಪನ ಇಲಿ ಸಖತ್ ದೊಡ್ಡದಾಗಿದೆ.. :-)
:-)

September 14, 2012

ಪರಿಚಯ ಸ್ನೇಹ ಸಲಹೆ- ಸುಖಾಂತ್ಯ??

ನನಗೆ 'ಸಿ' ಪರಿಚಯ ಫೇಸ್ ಬುಕ್ ಮೂಲಕ ಆಗಿದ್ದು. ಆವಾಗಿನ್ನೂ ನನಗೆ ಪ್ರೈವಸಿ ಸೆಟ್ಟಿಂಗ್ಸ್ ಬಗ್ಗೆ ತಿಳಿದಿರಲಿಲ್ಲ. ಅವರು ಕಳುಹಿಸಿದ್ದ ಪ್ರೆಂಡ್ ರಿಕ್ವೆಸ್ಟ್ ನಾನು ಅಂಗೀಕರಿಸಿರಲಿಲ್ಲ. ಏನಾದರು thoughts to brighten up your day ಮೆಸೆಜ್ ಅವರಿಂದ ನನ್ನ ಇನ್ ಬಾಕ್ಸ್ನ್ ನಲ್ಲಿರುತ್ತಿತ್ತು. ಒಂದು ದಿನ ಅವರ ಪ್ರೊಫೈಲ್ ಗೆ ಹೋಗಿ ಅವರ ವಿವರಗಳನ್ನು ಓದಿಕೊಂಡೆ. ನಮ್ಮಿಬ್ಬರ ಮಧ್ಯೆ ಯಾವುದೇ ಕಾಮನ್ ಫ್ರೆಂಡ್ ಇರಲಿಲ್ಲ. ಅದಕ್ಕೆ ನಾನು ಅವರಲ್ಲಿ ನನಗೆ ಫ್ರೆಂಡ್ ರಿಕ್ವೆಸ್ಟ್ ಕಳಿಸಿದ್ದರ ಬಗ್ಗೆ ಕೇಳಿದೆ. ಅದಕ್ಕೆ ಅವರು 'ಯಾರಾದರೂ ಮೊದಲ ಸಲ ಫೇಸ್ ಬುಕ್ ಜಾಯಿನ್ ಆಗಿದಾಗ ಫೇಸ್ ಬುಕ್ ಸಜೆಸ್ಟ್ ಮಾಡುತ್ತದಂತೆ. 'malathi shenoy has no friends yet, please suggest friends to her ಅಂತ'..:-) ಅದಕ್ಕೆ ನಮ್ಮ ಕ್ಲಾಸ್ ನಲ್ಲಿ ಒಬ್ಬ ಮಾಲತಿ ಅಂತ ಇದ್ರು. ಅದು ನೀವೆ ಅಂದುಕೊಂಡು ನಿಮಗೆ ಫ್ರೆಂಡ್ ರಿಕ್ವೆಸ್ಟ್ ಕಳಿಸಿದೆ ಅಂದ್ರು. ಮಾಲವಿಕ ಳಿಗೆ ಇದೆಲ್ಲ ಹೇಳಿದಾಗ ಅವಳು, ಅಮ್ಮ ಇದಕ್ಕೆಲ್ಲ ಫಿಶಿಂಗ್ ಅಂತಾರೆ, ಅಂದ್ರೆ ಗಾಳ ಹಾಕೋದು ಅಂತ ಹೇಳಿದ್ಲು. ಕೆಲದಿನಗಳಾದ ಮೇಲೆ ಅವರು ಅವರ ಆರನೆ ಕ್ಲಾಸ್ ನ ಫೋಟೊ ಕಳಿಸಿದ್ರು. ಮೇಲ್ಗಡೆ ಮೌಂಟ್ ನಲ್ಲಿ ಫೋಟೊ ಇದ್ರೆ ಕೆಳಗಡೆ ಎಲ್ಲರ ಹೆಸರುಗಳು ಇದ್ವು. ಹೈದರಾಬಾದಿನ ಸ್ಕೂಲ್. ಅದರಲ್ಲಿ ಮಾಲತಿ ಅನ್ನುವ ಹುಡುಗಿಯ ಹೆಸರು ಕೂಡ ಇತ್ತು. ಆಗ ಅವರ ಪ್ರೊಫೈಲ್ ಗೆ ಪುನ: ಭೇಟಿ ನೀಡಿದೆ. ಅವರು ಬೆಂಗಳೂರಿನ ಹೈ ಫಂಡಾ ಬುಕ್ ಹೌಸ್ ನ ಎಕೌಂಟ್ಸ್ ನಿರ್ವಹಿಸತ್ತಾ ಇದ್ರು. ಆ ಹೆಸರು ಓದಿ ಗಟ್ಟಿಯಾಗಿ ವೌ ಎಂದಿದ್ದು ಈಗಲೂ ನೆನಪಿಗೆ ಬರ್ತದೆ.

ಅವರು ಇನ್ ಬಾಕ್ಸ್ ನಲ್ಲಿ ಏನಾದರೂ thoughts for the day ಮೆಸೇಜ್ ಕಳಿಸ್ತಾ ಇದ್ರು, ಅಥವಾ ಅವರೇ ಬರಿದಿದ್ದ ಇಂಗ್ಲೀಷ್ ಪದ್ಯಗಳು ಕೂಡ... ತುಂಬ ಇಷ್ಟ ಆದ್ರೆ ನಾನು ಅದಕ್ಕೆ ಪ್ರತಿಕ್ರಿಯಿಸ್ತಾ ಇದ್ದೆ. ಆಗಲೇ ಒಂದು ದಿನ ನಮ್ಮ ಸಂಸ್ಥೆಗೆ ಒಂದು ಪುಸ್ತಕ ಬೇಕಾಗಿ ಬಂತು. ಅದು ಎಲ್ಲೂ ಸಿಗಲಿಲ್ಲ. ಆಗ ನನಗೆ 'ಸಿ' ನೆನಪಾಗಿ ಅವರಿಗೊಂದು ಮೆಸೇಜ್ ಕಳಿಸಿದ್ದೆ, ಹಾಗೆ ನನ್ನ ಇ ಮೈಲ್ ಐಡಿ ಕೂಡ ಕೊಟ್ಟೆ.. ಸುಮಾರು ದಿನಗಳು ಅವರಿಂದ ರೆಸ್ಪಾನ್ಸ್ ಇರಲಿಲ್ಲ. ಅಂತೂ ಮರೆತು ಬಿಟ್ರು ಅನ್ನಿಸುತ್ತೆ ಅಂತ ನಾನು ಸುಮ್ಮನಾದೆ.

ಸಾಧಾರಣ 15 ದಿನಗಳ ನಂತರ ನನಗೆ ಜಿ ಮೈಲ್ ಗೆ ಅವರು ಪತ್ರ ಬರೆದರು. ಟ್ರೈನಿಂಗ್ ಅಂತ ಹೊರಗೆ ಎಲ್ಲೋ ಹೋಗಿದ್ದು ಮತ್ತು ಆ ಪುಸ್ತಕಗಳು ಅವರಲ್ಲಿ ಇದ್ದುದಾಗಿಯೂ ಬರೆದರು. ಅಷ್ಟರಲ್ಲೇ ನಮ್ಮ ಸಂಸ್ಥೆಯಿಂದ ಒಂದು ಟಾಕ್ ಪ್ರೋಗ್ರಾಮ್ followed by dinner ಹಮ್ಮಿಕೊಂಡಿದ್ದೆವು. ಅವರಿಗೆ ಅಲ್ಲಿಗೆ ಬರಲು ಹೇಳಿದ್ದೆ. ಅವರು ಪುಸ್ತಕ ತೆಗೆದುಕೊಂಡು ಬಂದರು. ಅವರು ಯಾವಾಗಲೂ ನನಗೆ 'ಮಾಲ್ತಿ' ಅಂತ ಸಂಭೋಧಿಸುತ್ತಿದ್ದರಿಂದ ನನಷ್ಟೆ ಅಥವ ನನಗಿಂತ ದೊಡ್ಡವರೇನೋ ಅಂದುಕೊಂಡಿದ್ದೆ. ನೋಡಿದರೆ ನನಗಿಂತ ಅವರು ಹಲವು ವರ್ಷ ಕಿರಿಯರಾಗಿದ್ದರು. ನನ್ನನ್ನು ನೋಡಿಯಾದ ಮೇಲೆ, ನನ್ನ ಹಲವಾರು ಮಿತ್ರರ ತರಹ ಅಕ್ಕ, ಅಮ್ಮ, ಮೇಡಂ ಅಂತಾರೇನೋ ಅಂದುಕೊಂಡಿದ್ದೆ, ಆದರೆ ಅವರು 'ಮಾಲತಿ' ಸಂಭೋದನೆ ಮುಂದುವರೆಸಿದ್ರು. ನನಗೂ ಒಂದು ತರಹ ಖುಶಿ.ಆದ್ರೂ ಈ ಬಗ್ಗೆ ಅವರಲ್ಲಿ ಕೇಳಿದೆ. ಅದಕ್ಕೆ ಅವರು 'ಅರೇ ಮಿತ್ರರೆಂದರೆ ಮಿತ್ರರು ಅದರಲ್ಲಿ ವಯಸ್ಸು ಯಾಕೆ ಅಡ್ಡ ಬರಬೇಕು?' ಅಂತ. ನನ್ನ ಬ್ಲಾಗ್ ಓದುಗರಲ್ಲಿ ರಾಧಿಕ ಕೂಡ ನನಗಿಂತ ವಯಸ್ಸಿನಲ್ಲಿ ತುಂಬ ಕಿರಿಯರಾದರೂ ನನ್ನ ಹೆಸರು ಹಿಡಿದೇ ಕರೆಯೋದು.:-) ಊಟ ಮಾಡ್ತಾ ಅವರ ಬಗ್ಗೆ ಇನ್ನಷ್ಟು ತಿಳಿಕೊಂಡೆ. ಶ್ರೀಕಾಂತ ಹತ್ತಿರ ಕೂಡ ಮಾತನಾಡಿದರು. ನಮಗೆ ಬೇಕಾಗಿರುವ ಒಂದು ಸಾಫ್ಟ್ ವೇರ್ ತಯಾರಿಕೆಗೆ ಸಹಕರಿಸಲು ಒಪ್ಪಿಕೊಂಡರು. ಹಾಗೆ ಪರಿಚಯ ಇನ್ನಷ್ಟು ಬೆಳೆಯಿತು.

ದಿನಾ ಅವರ HR ಡಿಪಾರ್ಟ್ ಮೆಂಟ್ ನಿಂದ ಬರುವ ಮೈಲ್ ಗಳನ್ನು ನನಗೆ ಫಾರ್ರ್ವಡ್ ಮಾಡುತ್ತಿದ್ದರು. ಪುನ: ಸ್ವಲ್ಪ ದಿನ ಮೌನವಾಗಿದ್ದರು. ಎಲ್ಲಾದರೂ ಟ್ರೈನಿಂಗ್ ಕಳುಸಿದ್ದಾರೇನೋ ಅಂದುಕೊಂಡೆ. ಆದರೆ ಐದು ದಿನದ ನಂತರ ಬಂದ ಪತ್ರಗಳು ತುಂಬ depressive ಆಗಲಿಕ್ಕೆ ಶುರು ಆದವು. ಅವರ ತಂದೆ ತಾಯಿ, ಅಣ್ಣ ತಂಗಿಯರ ಕಂಪ್ಲೈನ್ ಗಳು. ಕೆಳಗಡೆ ಸ್ಥೂಲವಾಗಿ ಅದನ್ನು ಹೇಳುತ್ತೇನೆ.

'ಸಿ' ,ಮೂಲತಃ ಆಂಧ್ರಾ ದಲ್ಲಿನ ಹಳ್ಳಿಯವರು. ಅವರ ತಂದೆ ಅವಕಾಶ ಹುಡುಕಿ ಮೊದಲಿಗೆ ಹೈದರಾಬಾದ್ ನಂತರ ಬೆಂಗಳೂರಿಗೆ ಬಂದವರು. ಮಕ್ಕಳೆಲ್ಲ (ಮೂವರು) ಚಿಕ್ಕವರಾಗಿದ್ದಾಗಲೇ ಬೆಂಗಳೂರಿನಲ್ಲಿ ಸೆಟ್ಟಲ್ ಆಗಿದ್ದರು. ಅವರದ್ದು ಪ್ರೈವೆಟ್ ಫರ್ಮ್ ನಲ್ಲಿ ಚಿಕ್ಕ ಕೆಲಸ. ಅತ್ಯಂತ ಕಡಿಮೆ ಸಂಬಳ. ಅದರಿಂದಲೇ ಇಡಿ ಕುಟುಂಬದ ನಿರ್ವಹಣೆ ಆಗಬೇಕಿತ್ತು. ಅಂತಹದ್ದರಲ್ಲಿ ಹಿರಿಮಗನಿಗೆ ಸಾಲ ಸೋಲ ಮಾಡಿ ಇಂಜಿನಿಯರಿಂಗ್ ಕಲಿಸಿದ್ದರು. ಕಲಿತು ಒಳ್ಳೆ ಕೆಲಸ ಸಿಕ್ಕಿದ ಎರಡೇ ತಿಂಗಳಿಗೆ, ಇನ್ನೇನು  ಸಾಲವನ್ನು ತೀರಿಸಲು ಸಹಾಯ ಮಾಡಬಹುದು ಅಂದುಕೊಳ್ಳುವಾಗಲೇ, ಅವನು ಅನ್ಯಜಾತಿಯವಳೊಂದಿಗೆ ಮದುವೆ ಮಾಡಿಕೊಂಡು, ಅವಳು ಇವರ ಮನೆಯಲ್ಲಿರಲು ಒಪ್ಪಿಕೊಳ್ಳದೆ ಅವನು ಬೇರೆ ಮನೆ ಮಾಡಿ ಇರಲಾರಂಭಿಸಿದ.ಅಷ್ಟಲ್ಲದೇ ಸಂಬಳ ಕೂಡ ಅವನು ತನ್ನ ತಂದೆಗೆ  ಕೊಡದಂತೆ ನೋಡಿಕೊಳ್ಳುತ್ತಿದ್ದಳಂತೆ ಇವರ ಅತ್ತಿಗೆ. ಕೆಲವು ತಿಂಗಳಲ್ಲೇ 'ಸಿ' ತಂದೆಗೆ ಕೆಲಸದಿಂದ ನಿವೃತ್ತಿ ಆಯಿತು. ಅವರಿಗೆ ಸಿಕ್ಕ ಪಿ ಎಫ್ ಎಲ್ಲ ಸಾಲಕ್ಕೆ ಹೋಯಿತು. ಮನೆಯೆನೋ ಸ್ವಂತದಿತ್ತು.ಆದರೆ ಅದರ ಮೇಲೆ ಕೂಡ ಸಾಲ ತೆಗೆದಿದ್ದರು.'ಸಿ' ಹಾಗೂ ಅವರ ಅಣ್ಣನ ಮಧ್ಯೆ 6 ವರ್ಷದ difference. 'ಸಿ' ಗೆ ಮುಂದಕ್ಕೆ ಓದಿಸಲಾಗದೆ, ಅವರು ಕೆಲ್ಸಕ್ಕೆ ಸೇರಿಕೊಂಡರು. ಮನೆ ಈಗ ಅವರ ಖರ್ಚಿನಲ್ಲೆ ನಡೆಯಲಾರಂಭಿಸಿತು. ಅವರ ಆಫಿಸ್ ನವರು ಒಳ್ಳೆಯವರಾದ್ದರಿಂದ ಅವರಿಗೆ  ಓದು ಪೂರ್ಣಗೊಳಿಸಲು ಆರ್ಥಿಕ ಸಹಾಯ ನೀಡಿ ಅವರು ಓದು ಪೊರೈಸಿದ ಮೇಲೆ ಈಗ ಸಾಕಷ್ಟು ಒಳ್ಳೆ ಸಂಬಳದಲ್ಲಿ ಇದ್ದಾರೆ. ಈ ಸಂಗತಿಗಳು ನಡೆದು. 7 ವರ್ಷಗಳೆ ಕಳೆದುಹೋಗಿವೆ. ಮನೆ ಮೇಲೆ ಅವರ ತಂದೆ ತೆಗೆದ ಸಾಲ ಎಲ್ಲ ತೀರಿಸಿದ್ದಾರೆ. ಆರ್ಥಿಕವಾಗಿ ಚೆನ್ನಾಗಿದ್ದು ಈಗ 'ಸಿ' ಬಳಿ ಚಂದದ ಕಾರ್ ಕೂಡ ಇದೆ.

ಈಗ  'ಸಿ' ತಲೆನೋವೇನೆಂದರೆ, ಇತ್ತೀಚಿಗೆ, ಅಂದ್ರೆ ಇವರ ಆರ್ಥಿಕ ಮಟ್ಟ ಸುಧಾರಿಸಿದ ಮೇಲೆ, ಆಗಾಗ ಶನಿವಾರ ಭಾನುವಾರ ಮನೆಗೆ ಆಗಮಿಸುವ ಅಣ್ಣ ಮತ್ತು ಅವನಿಗೆ ರಾಜೋಪಚಾರ ಮಾಡುವ  ಅಮ್ಮ.ಅವನು ವಾಪಸ್ ಅವನ ಮನೆಗೆ ಹೋದ ಮೇಲೆ 'ಸಿ' ಅಮ್ಮ ಕಣ್ಣೀರು ಹಾಕುವುದು, ಕೆಲ ಮಾತಿನಿಂದ 'ಸಿ' ಗೆ ಕೀಳರಿಮೆ ಮೂಡಿಸುವುದು ಇಂತಹುದನ್ನೆಲ್ಲ ಮಾಡುತ್ತಿದ್ದಾರೆ ಅಂತ 'ಸಿ' ಗೆ ತುಂಬ ನೋವಾಗಿದೆ. 'ಸಿ' ಗೆ ಮೂವತ್ತೆರಡು ವರ್ಷ ವಯಸ್ಸು. ಅವರ ತಂಗಿಗೆ ಮೂವತ್ತು. ತಂಗಿಗೆ epilepsy ಕಾಯಿಲೆ ಆದ್ದರಿಂದ ಇನ್ನೂ ಮದುವೆ ಆಗಿಲ್ಲ.ಅವಳು ಮನಸ್ಸಿದ್ದರೆ ಸರಿಯಾಗಿ ಇರುತ್ತಿದ್ದಳಂತೆ ಇಲ್ಲದಿದ್ದರೆ ಮೌನವಾಗಿ ಒಂದು ಮೂಲೆಯಲ್ಲಿ ಕೂತಿರುತ್ತಿರುತ್ತಾಳಂತೆ. ಅಮ್ಮ ಅವಳಿಗೂ ಹೀಯಾಳಿಸುತ್ತಿದ್ದರಂತೆ. ಮತ್ತು ಇತ್ತೀಚೆಗೆ 'ಸಿ' ಅಣ್ಣನಿಗೆ ಗಂಡು ಮಗು ಹುಟ್ಟಿದೆ. ಅತ್ತಿಗೆನೂ ಈಗ ಕೆಲವು ಸಲ special appearance ಹಾಕುತ್ತಾರಂತೆ ಇವರ ಮನೆಯಲ್ಲಿ.

'ಸಿ' ಗೆ ಕಿರಿಕಿರಿಯೆಂದರೆ ಅವನ ಅಣ್ಣ ಇವರ ಮನೆಗೆ ಬರಕೂಡದೆಂದು.ಅವನು ಬಂದು ಹೋದ ಮೇಲೆ 'ಸಿ' ಅಮ್ಮನ  behaviour ಬದಲಾಗುತ್ತದಂತೆ. ಕಷ್ಟದಲ್ಲಿದ್ದಾಗ ತಿರುಗಿ ಕೂಡ ನೋಡದವ, ಈಗ ನಾವು ಚೆನ್ನಾಗಿದ್ದೇವೆ ಅಂತ, ಒಂದು ಚೂರು ಪಾಪಪ್ರಜ್ಞೆ ಕೂಡ ಇಲ್ಲದವ,ಈಗ ಪದೇ ಪದೇ ಮನೆಗೆ ಬರುತ್ತಾನೆ'. ಸೂಕ್ಷ್ಮವಾಗಿ ಅವನು ಅಣ್ಣನಿಗೆ ಹೀಗೆ ಹೇಳುವಾಗ ಅಮ್ಮ ಕೇಳಿಸಿಕೊಂಡು ಇವನಿಗೆ ಛಿ ಮಾರಿ ಹಾಕಿದ್ದರಂತೆ. ಅಣ್ಣನಿಗೆ ಇಷ್ಟವಾಗುವ ಅಡಿಗೆಯನ್ನು ಮಾಡುವುದು, ಅವನನ್ನು, ಅವನ ಕೆಲಸವನ್ನು ಸಿಕ್ಕಾಪಟ್ಟೇ ಹೊಗಳುವುದು 'ಸಿ' ಗೆ ಕಿರಿಕಿರಿಯೆನಿಸಿದೆ. ಸಿಗುವ ವಾರ್ಯಾಂತದಲ್ಲಿ ಅವನ ಅಣ್ಣನೂ ಇವರ ಮನೆಯಲ್ಲೆ ಇರುವುದು ಅವನಿಗೆ ಬೇಡವಾಗಿದೆ. ಅವನು ಬಂದು ಹೋದ ಮೇಲೆ ಅವನ ತಂಗಿ ಇನ್ನಷ್ಟು ಖಿನ್ನಳಾಗುತ್ತಿದ್ದಳಂತೆ. ಯಾಕೆಂದರೆ ಅವಳಿಗೆ ಅಪಸ್ಮಾರ ಇರುವುದರಿಂದ (ಔಷಧಿಯಿಂದ ಅದು ಹಿಡಿತದಲ್ಲಿದ್ದರೂ) ಮಗುವನ್ನು ಮುಟ್ಟಲು ಬಿಡುತ್ತಿರಲಿಲ್ಲವಂತೆ.

ನಾನು, "ಏನ್ರೀ, ಯಾವಾಗಲೂ ನನ್ನ ಬಳಿ ಕಂಪ್ಲೈನ್ ಮಾಡುವುದು ಬಿಟ್ಟು ಏನಾದರೂ ಉಪಾಯ ನೀವೇ ಕಂಡುಕೊಳ್ಳಬಹುದಲ್ಲ. ವಾರ್ಯಾಂತದಲ್ಲಿ ನೀವು ಫ್ರೆಂಡ್ಸ್ ಜತೆ ಎಲ್ಲಾದರೂ ಹೋಗಿ ಮನೆಯಲ್ಲಿರಬೇಡಿ. ಹಾಗೇ ಅಮ್ಮ ಪುನ: ಕಿರಿಕಿರಿ ಮಾಡಿದ್ರೆ ಅಣ್ಣನ ಮನೆಗೆ ಹೋಗಿ ಇರಲು ಸ್ವಲ್ಪ ಗಟ್ಟಿದನಿಯಲ್ಲಿ ಹೇಳಿ. ಅಷ್ಟಕ್ಕೂ ನಮ್ಮ ಮನೆಯಂದ್ರೆ, 'ನಾನು ಬೇರೆ ಮನೆ ಮಾಡಿರ್ತೀನಿ' ಅನ್ನಿ ಮುಂತಾದ ಬಿಟ್ಟಿ ಸಲಹೆ ಕೊಡಲಾರಂಭಿಸಿದೆ. ಅಷ್ಟೆ ಅಲ್ಲ ಒಂದು ತಿಂಗಳು ಟ್ರೈ ಮಾಡಿ ಅಂತ ಕೂಡ ಸೇರಿಸಿದೆ. ಮತ್ತೆ ಅಣ್ಣ ಬಂದಾಗ ತಂಗಿಯನ್ನು ಕಾರ್ ನಲ್ಲಿ  ಎಲ್ಲಾದರೂ  ಕರೆದುಕೊಂಡು ಹೋಗಿ ಬನ್ನಿ, ಮಾಲ್(mall), ಶಾಪಿಂಗ್, ಏನಾದರೂ ಕೊಡಿಸಿ, ಅವಳ ಮದುವೆಗೆ ಪ್ರಯತ್ನ ಮಾಡಿ...ಅಮ್ಮನೊಂದಿಗೆ ಮಾತನ್ನು ಕಡಿಮೆಮಾಡಿ. ಮುದ್ದುಗರೆಯಬೇಡಿ. ಎಷ್ಟು ಬೇಕು ಅಷ್ಟೆ ಮಾತಾಡಿ (ಸಿ ಗೆ ಕಂಡಾಪಟ್ಟೆ ಮಾತಾಡಬೇಕು:-)) this will definitely work out., ಅಂದೆ.'ಸಿ' ಪ್ರಾಬ್ಲಮ್ ಸಾಲ್ವ್ ಮಾಡುವಲ್ಲಿ ನನಗೇನೋ ಹುಮ್ಮಸ್ಸು, ಒಂದು challenge. ಯಾಕಂದ್ರೆ 'ಸಿ' ಒಬ್ಬ ಒಳ್ಳೆ ವ್ಯಕ್ತಿ. ಅವರ ಮನಸ್ಸಿನಲ್ಲಿ ಅವರ ಅಣ್ಣನ ಬಗೆಗಿರುವ ವೈಷಮ್ಯ ಕೂಡ ತೆಗೆದುಹಾಕಬೇಕೆಂದಿತ್ತು ನನಗೆ..

ಇನ್ನೊಂದು ಮೈಲ್ ನ ಒಕ್ಕಣೆ ಹೀಗಿತ್ತು, 'ಅಪ್ಪ ಅಮ್ಮ ನಿಗೆ ಬಿಪಿ ಶುಗರ್. ಡಾಕ್ಟರ್ ಹತ್ತ್ತಿರಕ್ಕೆ ಒಯ್ಯಲು ನಾನು. ನನ್ನ ಅಣ್ಣ ಕೂಡ ಮಾಡಬಹುದಲ್ವಾ ?"
ಅದಕ್ಕೆ ನನ್ನ ಉತ್ತರ " come on 'C' dont be mean. What if you did not have any brother. Then you would have done it naa?' stop complaining'
"if your brother wants to make amends and rejoin the family don't thwart him." ಅಂತ ಒಂದು ಸಲ ಹೇಳಿದ್ದೆ. ಅದರ ಮುಂದಿನ ಸಲ ಮನೆಗೆ ಬಂದಾಗ ಏನು ಮಾಡಬೇಕೆಂದು ಈ ಸಲಹೆ ಇತ್ತೆ. 'ಈ ಸಲ ಅಣ್ಣ ಬಂದಾಗ ಪ್ರೀತಿಯಿಂದ ಒಂದೆರಡು ಮಾತಾಡಿ, ಅತ್ತಿಗೆಗೆ ಹಾಯ್ ಅನ್ನಿ,  ಕಷ್ಟ ಅನ್ನಿಸಬಹುದು, ಆದರೆ ಸ್ವಲ್ಪ acting ಮಾಡಿ...(ಬಿಟ್ಟಿ ಸಲಹೆಗೆ ಏನಿದೆ ಬಿಡಿ)..:-)ಹಾಡು ಗುನುಗುನಿಸ್ತಾ ತಂಗಿಯನ್ನು ಕರೆದುಕೊಂಡು ಹೊರಗೆ ಹೋಗಿ. ಅಂತ. ಆ ಒಂದು ಭಾನುವಾರ ಅವರು, ತಂಗಿಯನ್ನು ಕಂಠಿರವ ಇಂಡೋರ್ ಸ್ಟೆಡಿಯಮ್ ನಲ್ಲಿದ ಲೈಫ್ ಸ್ಟೈಲ್ ಎಕ್ಸಿಭಿಷನ್ ಗೆ ಕರೆದುಕೊಂಡು ಹೋಗಿ, ತಂಗಿ ಮನೆಗೆ ಬಂದು ಅದರ ಬಗ್ಗೆ ಎಷ್ಟು ಮಾತನಾಡಿದಳಂದ್ರೆ, 'ಸಿ' ಅಮ್ಮನಿಗೂ ಅದರ ಬಗ್ಗೆ ಕುತೂಹಲ ಬೆಳೆಯಿತಂತೆ. ಆಗ 'ಸಿ' 'ಅಮ್ಮನಿಗೆ, ಮುಂದಿನ ಭಾನುವಾರ 'ನಾವೆಲ್ಲರೂ ಹೋಗೋಣ' ಹಾಗೇ ಹೊರಗಡೆ ಎಲ್ಲಾದರೂ ಊಟ ಮಾಡಿಕೊಂಡು ಸಂಜೆ ವಾಪಸ್ ಬರುವಾ ಅಂದನಂತೆ. ಅಮ್ಮ್ನನಿಗೆ ಸಂಬ್ರಮವೋ ಸಂಭ್ರಮ. (ಹೊಸದಾಗಿ ಖರೀದಿಸಿದ ಕಾರ್ ನಲ್ಲಿ ಅವರನ್ನೆಲ್ಲ 'ಸಿ' ಇನ್ನೂ ಎಲ್ಲೂ ಕರೆದುಕೊಂಡು ಹೋಗಿರಲಿಲ್ಲವಂತೆ')
ಕೆಲದಿನಗಳಾದ ಮೇಲೆ ಅವರ ಮೈಲ್ ಹೀಗಿತ್ತು:
ಮಾಲ್ತಿ, ಗೊತ್ತಾ ಪದೇ ಪದೇ ಅಣ್ಣ ಅತ್ತಿಗೆ ಯೇನಕ್ಕೆ ಬರ್ತಿದ್ರು ಅಂತ?? ಅಪ್ಪ ಮನೇನ ಅವರ ಹೆಸರಿಗೆ ಮಾಡಬೇಕಂತೆ' ಸಾಲ ಎಲ್ಲ ತೀರಿಸಿದೋನು ನಾನು. ಆದ್ರೂ ತಂದೆಗೆ ಅವನ ಮೇಲೆ soft corner ಇದೇಯೇನೋ ಎಂಬ ಗುಮಾನಿ'
ಅದಕ್ಕೆ ನಾನು, 'ಖಂಡಿತ ಅದಕ್ಕೆ ಅವಕಾಶ ಕೊಡಬೇಡಿ. ಮನೆಯನ್ನು ತಂಗಿ ಹೆಸರಿಗೆ ಮಾಡಲು ತಂದೆಗೆ ಸಲಹೆ ಕೊಡಿ' ಮತ್ತು ಅಪ್ಪ ಮನೆಯೇನಾದ್ರೂ ನಿಮ್ಮ ಅಣ್ಣನ ಹೆಸರಿಗೆ ಮಾಡಿದ್ರೆ, ನೀವು ಕಟ್ಟಿದ ಸಾಲದ ಹಣ ನಿಮ್ಮ ಅಣ್ಣ ನಿಮಗೆ ಕೊಡಬೇಕು' ಅಂತಂದೆ..ಕೊನೆಗೆ ತಂದೆ ಮಗಳ ಹೆಸರಿಗೆ ಮನೆ ಮಾಡುವುದೆಂದು, ಅವರ ಬಿಲ್ಡಿಂಗ್ ನಲ್ಲೇ ಇನ್ನೊಂದು ಫ್ಲ್ಯಾಟ್ ಸೇಲ್ ಗೆ ಬಂದಾಗ 'ಸಿ' ಅದನ್ನು ಬ್ಯಾಂಕ್ ಲೋನ್ ಪಡೆದುಕೊಂಡು ಅದನ್ನು ಖರೀದಿಸಿದ್ದಾರೆ. ಮದುವೆ ಆದ ಮೇಲೆ ಅಲ್ಲಿರುತ್ತಾರಂತೆ, ಸಧ್ಯಕ್ಕೆ ಬಾಡಿಗೆಗೆ ಕೊಟ್ಟಿದ್ದಾರೆ.

ಹಿಂದಿನ ವರ್ಷ ದೀಪಾವಳಿ ಸಮಯಕ್ಕೆ, ಒಂದು ಸಂಜೆ ನಾವು ಶಾಪಿಂಗ್ ಹೋಗಿ, ಇನ್ನೇನೂ ಹೋಟಲ್ ಗೆ ನುಗ್ಗಬೇಕು ಅನ್ನುವಷ್ಟರಲ್ಲಿ ಒಂದು ಎಸ್ ಎಮ್ ಎಸ್ ಬಂತು. 'ಮಾಲ್ತಿ ಸಿಗ್ನಲ್ ನಲ್ಲಿ ಕ್ರಾಸ್ ಮಾಡಲಿಕ್ಕೆ ನಿಂತ ನೀವು ನಾಲ್ಕೂ ಜನರನ್ನು ನೋಡಿದೆ. ನಿಮ್ಮನ್ನು ಮಾತನಾಡಿಸುವ ಅಂತ ನಾನು, ನನ್ನ ತಂಗಿ ಕ್ರಾಸ್ ಮಾಡಲಿಕ್ಕೆ ನಿಂತಿದ್ದೆವು. ಅಷ್ಟರೊಳಗೆ ನಿಮ್ಮಲ್ಲಿ ಯಾರೋ ಏನೋ ಅಂದಿದ್ದಕ್ಕೆ ನೀವು ನಾಲ್ಕು ಜನ ನಗ್ತಾ ಇದ್ರಿ, ಎದುರುಗಡೆಯಿಂದ ಬಂದ ವಾಹನದ ಬೆಳಕು ನಿಮ್ಮೆಲ್ಲರ ಮುಖದ ಮೇಲೆ ಪ್ರತಿಫಲಿಸಿ,  ಅದು ಒಂದು ಸುಂದರ ಚಿತ್ರದ ತರಹ ಕಾಣಿಸಿತು. ಅದೇ ದೀಪಾವಳಿ ಹಬ್ಬ ಅನ್ನಿಸಿ ಎಷ್ಟು ಖುಶಿಯಾಯ್ತಂದರೆ, ಕಣ್ಣಲ್ಲೆ ನಿಮ್ಮ ಭಾವಚಿತ್ರವನ್ನು ತೆಗೆದು ನನ್ನ ಹೃದಯದಲ್ಲಿ ಇರಿಸಿಕೊಂಡೆ' it was a divine moment' ಅಂತ ಬರೆದಿದ್ದರು.(ಹೂಂ poet ಗಳು  ಅವರಿಗೆ ಏನೇನು ಅನ್ನಿಸುತ್ತವೋ) "ಬನ್ನಿ ನಮ್ಮ ಜತೆ ಊಟಕ್ಕೆ".ಅಂತ ಮರು ಉತ್ತರ ಕಳಿಸಿದೆ. 'carry on malathi, i dont want to intrude in your family moment' ಅಂತ ಅವರಿಂದ ಮರು ಉತ್ತರ ಬಂದಿತ್ತು.

ಸರಿ ಈಗ ಇದನ್ನು ಹಂಚಿಕೊಳ್ಳಲ್ಲು ಕಾರಣ ಅವರ ಮೈಲ್. ಅವರಿಗೆ ಮದುವೆಯಾಗಿ ಮಗು ಕೂಡ ಆಗಿದೆ. ಒಂದು  ಇಂಡಿಪೆಂಡೆಂಟ್ ಮನೆ ಖರೀದಿಸಿದ್ದಾರೆ. ಅಪ್ಪ, ಅಮ್ಮ, ತಂಗಿ (ಮದುವೆ ಮಾಡಿಕೊಳ್ಳುವುದಿಲ್ಲವಂತೆ) ಎಲ್ಲರೂ ಸೇರಿ ಇರುವಂತಹ ಮನೆ. ಗ್ರಹ ಪವೇಶಕ್ಕೆ invitation ಕಳಿಸಿದ್ದಾರೆ. ಹೆಂಡತಿ ಕೂಡ ಕೆಲಸಕ್ಕೆ ಹೋಗುತ್ತಿದ್ದಾರೆ. ಆಗ ಮಗುವನ್ನು ಸಂಭಾಳಿಸುವ ಕೆಲಸ ಅವರ ತಂಗಿ ಮಾಡುತ್ತಾರಂತೆ. ಹಾಗೇ ಅಣ್ಣನ ಮಗ ಈಗ pre schooler. ಅರ್ಧ ದಿನ ಶಾಲೆ ಮುಗಿಸಿಕೊಂಡು ಇವರ ಮನೆಗೆ ಬರೋದು. ಸಂಜೆ ಅಪ್ಪ ಅಥವ ಅಮ್ಮ ಬಂದು ಕರೆದುಕೊಂಡು ಹೋಗೋದಂತೆ. ಅವರು (ಅಣ್ಣ) ಕೂಡ ಅಲ್ಲೇ ಹತ್ತಿರದಲ್ಲಿ ಮನೆ ಖರೀದಿಸಿದ್ದಾರಂತೆ.

ಹಾಗೆ ಇನ್ನೊಂದು ಬಿಟ್ಟಿ ಸಲಹೆ ಕೊಡಲು ಮಾಲತಿ ಅಕ್ಕ ಮರೀಲಿಲ್ಲ...ತಂಗಿ ಹೆಸರಲ್ಲಿ ಎಕೌಂಟ್ ತೆರೆದು ಅವಳ ಖರ್ಚಿಗೆ ಅಂತ  ಇಬ್ಬರೂ ಅಣ್ಣಂದಿರು ಸ್ವಲ್ಪ  ದುಡ್ಡು ಹಾಕ್ತಾ ಇದ್ದರೆ ಅವಳಿಗೂ ನೆಮ್ಮದಿಯಲ್ಲವಾ ಅಂತ'

????All's well that ends well....
:-)
ಎಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು.


September 12, 2012

Fire ART & BBQ

I always thought fire interested only me, when Niha started taking pictures i found out that she is enamored of the dancing flames as much as me! I can stare at Fire, rain and fishes for hours at an end.
Just observe this dancers pose! I think this post will take up one entire blog page. downloaded the pictures as is......

bhoooooth!!

rise -up and rise -up








beauty of fire with the lights - off (rabbit with one ear saying Hiii there!!)

















Dervish

looks like a witch searching for her broom

lady walking out of the fire?

Malavika getting ready her Barbeque paraphernalia 













My favorite shape..looks like champaka flowers?

flames die out making way for embers

looks like a fairy on flight naa? Now it is just right for the barbeque



Chilli powder, vinegar, garlic-ginger paste and salt...vegetables used are capscicum, tomato, diced Onion  along with cottage cheese (Paneer) and mushrooms

i never throw away the coconut kernels. did i hear 'ah konkani's?? Yes Konkani's are a resourceful lot. Once in a fortnight we have barbeque sessions c/o malavika on her off day... it is also giving her a new job idea...Keep guessing folks...LOL
Photos: Niharika
Barbeque : Malavika
Guests of Honor: Malathi & Srikanth...
:-)