April 18, 2012

ವೃಶಂಖ - ನನ್ನ ಪುಟ್ಟ ಮಿತ್ರ

ವೃಶಾಂಖ ಮತ್ತು ಅವನ ಅಮ್ಮನನ್ನು ದಿನ ಸಂಜೆ ನಾನು ಝೂಲಾ ಮೇಲೆ ಕೂತು ಟೀ ಕುಡೀತಾ, ಅವರು ವಾಕ್ ಹೋಗುವಾಗ ನಾನು ನೋಡುತ್ತಿದ್ದೆ. ನನಗೆ ಗಂಡು ಮಕ್ಕಳು ಅಂದರೆ ಸ್ವಲ್ಪ ಅಷ್ಟಕ್ಕಷ್ಟೆ, ನಾನು ಅವರ ಉಸಾಬರಿಗೆ ಹೋಗುವುದಿಲ್ಲ.

ಒಂದು ದಿನ ಪಕ್ಕದ ಮನೆ ಡಾ. ಪಾರ್ವತಿ ’ಮಾಲ್ತಿ embroideried ಸ್ವಿಸ್ ಕಾಟನ್ ರೆಡಿಮೇಡ್ ಬಟ್ಟೆಗಳ exhibition ನಡೆಸ್ತಿದ್ದಾಳೆ ನನ್ನ ಪ್ರೆಂಡ್, ಸಂಜೆ ಹೋಗುವಾ, ಬರ್ತೀರಾ?’ ಅಂತ ಕೇಳಿದ್ರು. ಮೊದಲು ಇಲ್ಲ ಅಂತ ಹೇಳುವಾ ಅಂದ್ರೂ, ಆಮೇಲೆ ಯು ಎಸ್ ನಿಂದ ಬರುವ ನನ್ನ ತಂಗಿ ಮಕ್ಕಳಿಗೆ ಏನಾದರೂ ಚೆಂದದ ಡ್ರೆಸ್ ಸಿಗಬಹುದೆಂದು, ಆಯ್ತು ಅಂದೆ. ಸಂಜೆ ರಾಮ್ -ಪಾರ್ವತಿಯ ಗಂಡ- ಬಂದ ಮೇಲೆ ಅವರ ಕಾರ್ ನಲ್ಲಿ ಹೊರಟೆವು. ನಾನು ಗೇಟ್ ಹಾಕುವಾಗ ವೃಶಾಂಖ ಮತ್ತು ಅವನ ಅಮ್ಮ ಆಗಷ್ಟೆ ನಮ್ಮ ಮನೆ ದಾಟಿ ಹೋಗುವುದನ್ನು ನೋಡಿದೆ. ನಾವು ಕಾರ ನಲ್ಲಿ ಒಂದು ತಿರುವು ಬರುವುದೊರಳಗೆ ವೃಶಾಂಖ ನ ಅಮ್ಮ, ವೃಶಾಂಖ ನನ್ನು ಎರಡು ಕೈಯಲಿ ಅಡ್ಡಡ್ಡ ಹಿಡಿದುಕೊಂಡು please save my baby ಅಂತ ಗಟ್ಟಿ ಅಳುತ್ತ ನಮ್ಮ ಕಾರ ಬಳಿ ಓಡುತ್ತಾ  ಬರುವುದು ಕಾಣಿಸಿತು. ಕಾರ್ ನಿಲ್ಲಿಸಿ ನಾನು, ಡಾ. ಪಾರ್ವತಿ ಕೂಡಲೆ ಇಳಿದೆವು. ವೃಶಾಂಖ ಉಸಿರುಗಟ್ಟಿಸಿಕೊಂಡು ಅವನ ಕಣ್ಣುಗುಡ್ಡೆಗಳು ಮೇಲೆಕ್ಕೆ ಹೋಗಿದ್ದವು. ಡಾ. ಪಾರ್ವತಿ ಕೂಡಲೆ ಮಗುವನ್ನು ಎತ್ತಿಕೊಂಡು ಪಕ್ಕದ ಗಾರ್ಡನ್ ನ ಸೀಟ್ ಮೇಲೆ ಮಲಗಿಸಿ ಅವನಿಗೆ ಬೇಕಾದ ತುರ್ತು ಚಿಕಿತ್ಸೆ ನೀಡುವಲ್ಲಿ ನಿರತರಾದರು. ಗಟ್ಟಿಯಾಗಿ ಅಳುತ್ತಿದ ಅವನ ಅಮ್ಮನ ಕೈಯನ್ನು ನಾನು ಹಿಡಿದುಕೊಂಡಿದ್ದೆ ತಡ, ಅವರು ನನ್ನ ಕೈಯನ್ನು ಗಟ್ಟಿಯಾಗಿ ಅದುಮಿ, ಏನಾಯ್ತು ನನ್ನ ಮಗುವಿಗೆ ಅಂತ ಅತ್ತು ತನ್ನಷ್ಟಕ್ಕೆ ತಾನೇ ಮಾತನಾಡಲು ಶುರುಮಾಡಿದಳು. ನಾನು ಇನ್ನೊಂದು ಬೆಂಚ್ ಮೇಲೆ ಅವರನ್ನು ಕೂರಿಸಿ ಸಮಾಧಾನ ಹೇಳಿದೆ, ’he is just choked on his saliva' ಏನೂ ಆಗಲ್ಲ, ಡಾ. ಇದ್ದಾರಲ್ಲವಾ ಹೇಗೂ?’ ಅಷ್ಟರಲ್ಲಿ ವೃಶಾಂಖ ಸುಧಾರಿಸಿಕೊಂಡಿದ್ದ, ಸುತ್ತು ನಿಂತಿರುವ ಜನ, ಹಾಗೂ ತನ್ನ ಅಮ್ಮನನ್ನು ಕಾಣದೆ ಜೋರಾಗಿ ಅಳಲು ಶುರುಮಾಡಿದಾಗ ಅವನ ಅಮ್ಮ ಅವನ ಬಳಿಗೆ ಓಡಿ ಹೋದಳು. ಮಗುವಿಗೆ ಅಷ್ಟೆ ಆಗಿದ್ದು, ಉಗುಳು ನುಂಗಿ, ನೆತ್ತಿಗೆ ಹತ್ತಿ, ಉಸಿರಾಡಲು ಗೊತ್ತಾಗದೆ ಹಿಂಸೆ ಯಾಗಿತ್ತು. ಆ ಮೇಲೆ ನಾನು ಪಾರ್ವತಿಗೆ ವೃಶಾಂಖ ಮತ್ತು ಅವನ ಅಮ್ಮನನ್ನು ಅವನ ಮನೆಗೆ ಕಳುಹಿಸಿ ಬರಲು ಹೇಳಿ, exhibition ಗೆ ನಾಳೆ ಹೋಗುವಾ ಅಂತ ನಾನು ಮನೆಗೆ ವಾಪಸ್ ಆದೆ.

ರಾತ್ರಿ ಪಾರ್ವತಿ ಫೋನ್ ಮಾಡಿ, ’ಶಲ್ ವಿ ಗೋ ಟುಮೋರೋ ಮಾರ್ನಿಂಗ್ after Sri leaves for school'? we will go on my scooter' ಅಂದಾಗ ನಾನು ಹೂಂ ಅಂದೆ. (ಈ Sri = Srikamakshi, ಅವರ ಮಗಳು). ಬೆಳಿಗ್ಗೆ ನನ್ನ ಎಲ್ಲ ಕೆಲಸಗಳನ್ನು ಮುಗಿಸಿ ಮನೆಗೆ ಬೀಗ ಹಾಕಿ ಡಾ. ಪಾರ್ವತಿ ಮನೆಗೆ ಹೋದೆ. ಅವರು ಫೋನ್ ನಲ್ಲಿ ಮಾತಾಡ್ತಾ ಇದ್ದರಿಂದ, ಸನ್ನೆಯಲ್ಲೆ ನನ್ನನ್ನು ಕೂರಲಿಕ್ಕೆ ಹೇಳಿದರು. ನಾನು ಕುಳಿತುಕೊಂಡು ಅಲ್ಲೇ ಹತ್ತಿರವಿದ್ದ ಮೆಡಿಕಲ್ ಜರ್ನಲ್ ನ ಪುಟಗಳನ್ನು ತಿರುವಿಹಾಕುವಾಗ ಪುನ: ಗೇಟ್ ಸದ್ದಾಯಿತು. ನೋಡಿದರೆ ವೃಶಾಂಖ ಹಾಗೂ ಅವನ ಅಮ್ಮ. ಒಳಗೆ ಬಂದ ವೃಶಾಂಖ ನ ಅಮ್ಮ ಮೊದಲಿಗೆ ಥ್ಯಾಂಕ್ಸ್ ಹೇಳಿದ್ದು ನನಗೆ, ’sorry aunty i could not thank you properly' ನಾನು ’hey dont make an issue out of it' ಅಂದೆ. ಪುಟ್ಟ ಪುಟ್ಟ ಹೆಜ್ಜೆಯಿಟ್ಟ ವೃಶಾಂಖ ನನ್ನ ಬಳಿ ಬಂದ, ಎರಡು ಕೈ ಯನ್ನು ನನ್ನನ್ನು ಎತ್ತಿ ಕೋ ಅನ್ನುವ ಮಾದರಿಯಲ್ಲಿ ಹಿಡಿದ. overweight ಮಗುವನ್ನು ಕಷ್ಟಪಟ್ಟು ಎತ್ತಿ ನನ್ನ ಕಾಲಮೇಲೆ ಕೂರಿಸಿದೆ. ಅವನು ನಿದಾನಕ್ಕೆ ಎದ್ದು ನನ್ನ ಗಲ್ಲ ನೇವರಿಸಿದ, ಆ ಮೇಲೆ ಗಲ್ಲವನ್ನು ನೆಕ್ಕಿದ, ಹಾಗೇ ಹಗುರಕ್ಕೆ ಕಚ್ಚಿಬಿಟ್ಟ, ಅದನ್ನು ನಿರೀಕ್ಷಿಸದ ನಾನು ’ಹಾsss' ಅಂದೆ. ಅವನು ಗಟ್ಟಿಯಾಗಿ ನಗಲು ಶುರು ಮಾಡಿದೆ. ಆವತ್ತು ಶುರು ಆಯ್ತು ನನ್ನ ಮತ್ತು ವೃಶಾಂಖ ನ love affair. :-)ಮತ್ತು ಆ ದಿನ ನೆ ಅವನ ಹೆಸರು’ ವೃಶಾಂಖ’ ಮತ್ತು ಅವನ ಅಮ್ಮ ’ಅನು’ ಅಂತ ಗೊತ್ತಾಗಿದ್ದು. ನಿನ್ನ ಹೆಸರೇನು ಅಂತ ಮಗುವಿಗೆ  ಕೇಳಿದಾಗ ಅವನು ಹೆಸರನ್ನು ಸರಿ ಹೇಳಲು ಬಾರದೆ ’ವುಕಾಂಕ್ ’ ಅಂದಿದ್ದ. ಅವನ ಅಮ್ಮನ ಬಳಿ ನಾನು ಪುನ: ಕೇಳಬೇಕಾಯಿತು ಅವನ ಹೆಸರು ಏನೆಂದು..ಮತ್ತೆ ಅವನ ಮೊದಲ ಹುಟ್ಟು ಹಬ್ಬ ಆಗಿ ಎರಡು ದಿನ ಅಷ್ಟೆ ಕಳೆದಿತ್ತಂತೆ.

ಅವನ ಅಮ್ಮ ಅನು ನನಗೆ ’ಆಂಟಿ’ ಅಂದರೆ ವೃಶಾಂಖ ಮಾತ್ರ ಅವನ ಹಕ್ಕೇನೋ ಎಂಬಂತೆ ’ಮಾಲ್ತಿsss”* ಅಂತ ಕರೀತಿದ್ದ. ಮಾಲ್ತಿ, ಚೊಕ್ಕಿ ಕೊಡು, ಬಿಕ್ಕಿ ಕೊಡು. ಮ್ಯಾಂಗೋ ಕೊಡು, ಬನಾನ ಕೊಡು. ಸಖತ್ vocabulary ಒಂದು ವರ್ಷದ ಹುಡುಗನಿಗೆ. ಮನೆಯಲ್ಲಿ ಶ್ರೀಕಾಂತ ಏನಾದರೂ ಇದ್ದು, ಯಾರೋ ಅದು ನನ್ನ ಹೆಂಡತಿನ ಹೆಸರು ಹಿಡಿದು ಕರೆಯೋದು ಅಂದ್ರೆ ಮುದ್ದು ಮುದ್ದಾಗಿ ’ಅಂಕಲ್ ಜತೆ ಟೂ ಬಿಡ್ತಿದ್ದ. ನಾನು ಅವನಿಗೋಸ್ಕರ ವಿಧ ವಿಧವಾದ ಚಾಕೋಲೇಟು, ಬಿಸ್ಕಿಟ್ ಗಳ stock ಇಟ್ಟುಕೊಂಡಿರುತ್ತಿದೆ. ಅವನು ಕೇಳುತ್ತಿದ್ದುದ್ದು ಒಂದು ಚಾಕಲೇಟ್ ಅಥವ ಎರಡು ಬಿಸ್ಕಿಟ್ ಅಷ್ಟೆ. ಅವನು ಝೂಲಾ ಮೇಲೆ ಕೂತುಕೊಳ್ಳುವುದು ನಾನು ಅವನನ್ನು ತಿನ್ನಿಸುವುದು.ಒಂದು ಪುಟ್ಟ ಲೋಟದಲ್ಲಿ ನೀರು ಕುಡಿಸುವುದು. ನಾನು ಮನೆಯಲ್ಲಿ ಇಲ್ಲದಿದ್ದರೆ ತುಂಬಾ ಬೇಜಾರು ಮಾಡಿಕೊಂಡು ವಾಪಸ್ ಹೋಗುತ್ತಿದ್ದನಂತೆ ಮಕ್ಕಳು, ಶ್ರೀಕಾಂತ ಹೇಳುತ್ತಿದ್ದರು. ಮತ್ತು ಮರುದಿನ ಅವನು ನನಗೆ ತರಾಟೆಗೆ ತೆಗೆದುಕೊಳ್ಳುತ್ತಿದ್ದ, ’ಮಾಲ್ತಿ, ನನ್ನನ್ನು ಬಿಟ್ಟು ಎಲ್ಲಿ ಹೋಗಿದ್ದೆ’ ಅಂತ

ಹೀಗೆ ಒಂದು ಸಲ ನಾನು ಆಫಿಸ್ ನಿಂದ ಮನೆಗೆ ಬಂದಿದ್ದಷ್ಟೆ. ವೃಶಾಂಖ ಕೂಡ ಬಂದ. ನಮ್ಮ ಮನೆಯ ಟಿವಿ ಬಟನ್ ಮೇಲೆ ಆಡುತ್ತಿದ್ದ.ಯಾಕೋ ಅರ್ಥಿಂಗ್ ಸರಿಯಿಲ್ಲದೆ ಟಿವಿ, ಫ್ರಿಡ್ಜ, ಮತ್ತು ಕಂಪ್ಯೂಟರ್ ಗೆ ಸಣ್ಣಕ್ಕೆ ಶಾಕ್ ಹೊಡೆಯುತ್ತಿತ್ತು ’ಅದನ್ನು ಮುಟ್ಟ ಬೇಡ, ಶಾಕ್ ಹೊಡೆಯುತ್ತೆ ಅಬ್ಬು ಆಗುತ್ತೆ ಅನ್ನುತ್ತಿರಬೇಕಾದರೆ ಅವನು ಹೋಗಿ ಮುಟ್ಟಿ ಸ್ವಲ್ಪ ಶಾಕ್ ತಗುಲಿಸಿಕೊಂಡ, ಅಲ್ಲೆ ಪಕ್ಕದಲ್ಲಿ ಕೂತಿದ್ದ ಅನು ಅವನಿಗೆ ಚೆನ್ನಾಗಿ ಬೆನ್ನ ಮೇಲೆ ಬಾರಿಸಿದಳು. ಅವನು ಅಳಲಿಕ್ಕೆ ಶುರು ಮಾಡಿದ. ನಾನು ಅವನನ್ನು ತಬ್ಬಿ ಮುದ್ದು ಮಾಡ್ತ ’ಹೇಳಿದ್ದು ಕೇಳಿಸ್ಕೋಬೇಕಲ್ವಾ ವೃಶಾಂಖ ಆಗ ಅಮ್ಮ  ಹೊಡೆಯಲ್ಲ’ ಅಂದೆ. ಅವನು ಬಿಕ್ಕಿ ಬಿಕ್ಕಿ ಅಳುತ್ತ ನನ್ನ ಸೀರೆ ಮುಟ್ಟಿ, ’ಮಾಲ್ತಿ ನಿನ್ನ ಚೀರೆ ಚೆನ್ನಾಗಿದೆ, ನಿನಗೆ ಚೆನ್ನಾಗಿ ಕಾಣುತ್ತೆ’ ಅಂದಾಗ ಮಾತ್ರ ನಗು ತಡೆದುಕೊಳ್ಳಲಾಗಲಿಲ್ಲ. ಎಷ್ಟೆಲ್ಲ ದೇವರ ನಾಮ, nursery rhymes, ನಂಬರ್, ಕಲರ್ ಎಲ್ಲ ಪಟ ಪಟಾ ಹೇಳುತ್ತಿದ್ದ.

ಅವನು ರಸ್ತೆ ಮೇಲೆ ವಾಕ ಮಾಡ್ತಾ ನಾನು ಆಫಿಸ್ ನಿಂದ ಬರುವಾಗ ಏನಾದರೂ ನನ್ನನ್ನು ನೋಡಿದರೆ ಅಷ್ಟು ದೂರದಿಂದ ಮಾಲ್ತಿssssss ಅಂತ ಕಿರುಚಿಕೊಂಡು, ಎರಡು ಕೈ ಗಳನ್ನು ಅಗಲಿಸಿ ಓಡಿ ಬರುತ್ತಿದ್ದ, ನಾನು ಅವನ ಸೈಜ್ (size) ಆಗಲು ರಸ್ತೆ ಮೇಲೆ ಕುಕ್ಕರುಗಾಲಲ್ಲಿ ಕುಳಿತುಕೊಳ್ಳುತ್ತಿದೆ, ಅವನ ಮುದ್ದು ಮೃದು ಕೈಗಳ ಮಾಲೆ ನನ್ನ ಕೊರಳ ಸುತ್ತ, ಹಾಗೂ ಅವನು ಓಡಿ ಬಂದ ರಭಸ ಹಾಗೂ ಅವನ overweight ನಿಂದಾಗಿ ನಾವಿಬ್ಬರೂ ರಸ್ತೆ ಮೇಲೆ, ಆಮೇಲೆ ಒಂದು ಒದ್ದೆ ಮುತ್ತು ನನ್ನ ಮೂಗಿಗೆ. ಆ ಪುಟ್ಟ ಕೈಗಳ ಮಾಲೆ ಯಾವ ಹೂವಿನ ಮಾಲೆಗೂ ಕಡಿಮೆಯಲ್ಲ.

ಮತ್ತು ನನ್ನ ಅವನ special flying kiss ಕೂಡ ಇತ್ತು. ನನ್ನ ಎರಡನೆ ಮೂರನೆ ಬೆರಳನ್ನು ನಾನು ನನ್ನ ತುಟಿಗೆ ತಾಗಿಸಿ ಆ ಬೆರಳುಗಳನ್ನು ಓಡುವಂತೆ ಮಾಡಿ ಅದನ್ನು ಅವನ ತುಟಿಗೆ ತಾಗಿಸುತ್ತಿದ್ದೆ. ಅವನು ಮನೆಗೆ ಹೋಗುವಾಗ ನಾನು ಮರೆತರೆ ಅವನು ಮಾತ್ರ ಮರೆಯುತ್ತಿರಲಿಲ್ಲ.’ ಮಾಲ್ತೀ ಫ್ಲೈಯಿಂಗ್ ಕಿಚ್ ಕೊಡು’ ಅನ್ನುತ್ತಿದ್ದ

ಕೊನೆಗೆ ಕಾರಣಾಂತರಗಳಿಂದ ಅವನ ಅಪ್ಪ ಅಮ್ಮ ವಿಚ್ಛೆದನ ಪಡೆದುಕೊಂಡು ಬೇರೆ ಬೇರೆ ಯಾಗಿ ಅನು ಈಗ ಅವಳ ತಂದೆ ತಾಯಿ ಜತೆ ಇರಲು ಹೋದಳು. ಅವರ ಮನೆಮುಂದೆ ಹಾಯುವಾಗ ಅವರ ಮನೆ ಹೆಸರು ’ವೃಶಂಖ’ (ಅವನ ಅಪ್ಪ, ಅಜ್ಜ, ಅಜ್ಜಿ ಆ ಮನೆಯಲ್ಲೇ ಇರುವುದು) ನೋಡಿದಾಗಲೆಲ್ಲ ವೃಶಾಂಖ ನೆನಪಾಗುತ್ತಾನೆ. ಅವನಿಗೆ ನನ್ನ ನೆನಪು ಇರಬಹುದೇ? ಈಗ ಅವನಿಗೆ 5 ವರ್ಷ. ಸ್ಕೂಲ್ ಗೆ ಹೋಗುತ್ತಿರಬಹುದು.

ಅವರು ಮನೆ ಬಿಟ್ಟು ಹೋಗುವ ಮುನ್ನ ಅನು ಮತ್ತು ವೃಶಾಂಖ ನನಗೆ ಬೈ ಹೇಳಲು ಬಂದಿದ್ದರು. ನಾನು ಬೇಜಾರಲ್ಲಿ ಇದ್ದೆ, ವೃಶಾಂಖ ಮಾತ್ರ ಮರೆಯದೇ ಅವನ flying kiss ಪಡೆದುಕೊಂಡು ಹೋದ. ಅದೇ ಲಾಸ್ಟ್.
miss you Vrushank.

(ಮಾಲ್ತಿ* : ಮಾಲವಿಕ ಮಾತು ಕಲಿತ ಮೇಲೆ ನನಗೆ ಮಾಲತೀ ಮತ್ತು ಶ್ರೀಕಾಂತ ಗೆ ಚಿಕ್ಕಾಂತ್ ಅಂತ ಕರೆಯುತ್ತಿದ್ದಳು.

ಈಗಿನ ಮನೆಯ 'ಮೇಲಿನ ಮನೆ ಪುಟ್ಟು' ದಿಶಾಂತ ಗೆ ಹುಶಾರು ತಪ್ಪಿದಾಗ ನಮ್ಮ ಮನೆಗೆ ಬಂದಿರುತ್ತಾನೆ, ಆಗ ಅವನು ನನಗೆ ಆಂಟಿ ಅನ್ನದೇ ’ಮಾಲ್ತಿ, ಬಾ ನನ್ನ ಹತ್ತಿರ ಕೂತ್ಕೋ’ ಅಂತಾನೆ...ಹೊಯ್ ಯಾರೋ ಅದು ಆಂಟಿನ ಹೆಸರು ಹಿಡಿದು ಕರೆಯೋದು ಅಂದ್ರೆ ಅವನ ಹುಳುಕಾದ ಹಲ್ಲುಗಳನ್ನೆಲ್ಲ ಬಿಟ್ಟು (calcium deficiency) ಗಟ್ಟಿಯಾಗಿ ನಗುತ್ತಾನೆ. ಅವನು ಯಾವಾಗಲಾದರೊಮ್ಮೆ ಮುಗುಳು ನಗುತ್ತಾನೆ, ಆದರೆ ಗಟ್ಟಿ ನಗುವುದು ಅಪರೂಪ. ಅದನ್ನು ಕೇಳಲು ಹಲವು ಜನುಮ ಸಾಲದೇನೋ

ನನ್ನ ತಮ್ಮನ ಮಗಳು ಸ್ಯಾಮಿ , ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಹಗೂರಕ್ಕೆ ’ಮಾಲತೀsss' ಅಂತಾಳೆ, ನಾನು ಹುಬ್ಬು ಮೇಲೇರಿಸಿ ’ಹಾಂ’ ಅಂದಾಗ ಆ ನಗುವಿನ ಅಲೆಯಲ್ಲಿ ನಾನು ತೇಲಿ ತೇಲಿ...............)
:-)

April 16, 2012

ಟೋಮ್ಯಾಟೋ ಭಾತ remake ಆಗಿ ರವಾ ರೊಟ್ಟಿ

ನಿನ್ನೆ ಮಾಲವಿಕಳಿಗೆ ರಜೆ. ನಾನು  ಟೊಮ್ಯಾಟೊ  ಭಾತ್ ಮಾಡಿದ್ದೆ. ಡಯಟ್ ನಲ್ಲಿ  ಟೊಮ್ಯಾಟೊ  ಅಳವಡಿಸಿದರೆ ದೇಹದ ತೂಕ ಕಡಿಮೆಯಾಗುತ್ತದಂತೆ. ಥ್ಯಾಟ್ಸ್ ಕನ್ನಡ ಡಾಟ್ ಕಾಮ್ ನಲ್ಲಿ ಓದಿದ್ದ ನೆನಪು. tomato ಭಾತ ಜಾಸ್ತಿನೆ ಆಗಿತ್ತು. ಆದರೆ ಮಾಲವಿಕ ಳಿಗೆ ಪಾವ್ ಭಾಜಿ ತಿನ್ನಬೇಕನ್ನಿಸಿದ್ದರಿಂದ ಅದನ್ನೂ ಮಾಡಿದೆ. ಬ್ರೇಕ್ ಫಾಸ್ಟ್ ಡಬಲ್ ಧಮಾಕಾ. ಆದರೆ ಟೊಮ್ಯಾಟೊ ಭಾತ್ ಉಳಿದು ಬಿಡ್ತು. ಅದನ್ನು ಫ್ರಿಜ್ ನಲ್ಲಿ ಹಾಕಿಟ್ಟೆ. ಇವತ್ತು ಉಳಿದಿದ್ದ ಭಾತ್ ಗೆ ಮೊಸರು, ಗೋದಿ ಹಿಟ್ಟು, ಸಣ್ಣಕ್ಕೆ ಕತ್ತರಿಸಿದ ನೀರುಳ್ಳಿ ಬೆರೆಸಿ, ಬಾಳೆ ಎಲೆಯಲ್ಲಿ ತಟ್ಟಿ ರೊಟ್ಟಿ ಮಾಡಿದೆ. ಚೆನ್ನಾಗಿತ್ತು ರುಚಿ ಬಿಸಿ ಬಿಸಿ ರೊಟ್ಟಿ ವಿದ್ ಮನೆಯಲ್ಲೇ ಮಾಡಿದ ತುಪ್ಪ. 





ಬಾಳೆ ಎಲೆ ಅಂದಾಗ ಒಂದು ಪ್ರಸಂಗ ನೆನಪಿಗೆ ಬಂತು.

ನಮ್ಮ ಹಳೆ ಮನೆ ಬಳಿ ಒಬ್ಬ ತರಕಾರಿ ಮಾರುವವ ಬಾಳೆ ಎಲೆ ಕೂಡ ಮಾರುತ್ತಿದ್ದ. ಹೆಚ್ಚಿನದಾಗಿ ತರಕಾರಿಯವರೆಲ್ಲ ಬಾಳೆ ಎಲೆ ಮಾರಲ್ಲ ಅದರಲ್ಲಿ ತುಂಬ wear and tear ಪ್ರಾಬ್ಲಂ ಇದ್ದು ಅದರಲ್ಲಿ ನಷ್ಟ ಹೆಚ್ಚು ಅಂತ ನಮ್ಮ ಮನೆಯ ಬಳಿ ಇರುವ ಉಳಿದ ತರಕಾರಿ ಅಂಗಡಿಯವರು ಬಾಳೆ ಎಲೆ ಮಾರುತ್ತಿರಲಿಲ್ಲ. ಹಾಗಾಗಿ ಈ particular ಅಂಗಡಿಯಲ್ಲಿ ಸಿಕ್ಕುತ್ತಿದ್ದು ನನಗೆ ಖುಶಿಯ ವಿಷಯ. ಮನೆಗೆ ನನಗೆ ಬಾಳೆ ಎಲೆ ಬಳಕೆ ಸ್ವಲ್ಪ ಹೆಚ್ಚು. ನೆಂಟರು ಬಂದಾಗ ಅಥವಾ ಕಡಬು,ಅಕ್ಕಿ ರೊಟ್ಟಿ, ರವೆ ರೊಟ್ಟಿ ತಟ್ಟಲು, ಶ್ಯಾವಿಗೆ, ಸೌತೆಕಾಯಿ ಮುದ್ದೆ ಮಾಡಲು  ಹೀಗೆ...


ಈ ತರಕಾರಿಯವನ ಮುಖದಲ್ಲಿ ನಾನು ಯಾವತ್ತೂ ಒಂದು ನಗು ಕಂಡಿಲ್ಲ. ಶ್ರೀಕಾಂತ ಅವನಿಗೆ ಉಗ್ರಪ್ಪ, ಏನೂ customer relationship ಇಲ್ಲ ಅನ್ನುತ್ತಿದ್ದರೂ ನಾನು ಮಾತ್ರ ’ಏನಕ್ಕೆ ನಗ ಬೇಕು ಆತ, ನಾವು ತರಕಾರಿ ತೆಗೊಳ್ಳೋದು ದುಡ್ಡು ಕೊಡೋದು ಅಷ್ಟೆ ತಾನೆ ಬೇಕಾಗಿರುವುದು’ ಅನ್ನುತ್ತಿದ್ದೆ.

ಬಾಳೆ ಎಲೆಯವ ನನಗೆ 2 ರೂ ಗೆ 4 ಎಲೆಗಳನ್ನು ಕೊಡುವುದು. ಒಂದು ದಿನ ಶ್ರೀಕಾಂತ ಆಫಿಸ್ ನಿಂದ ಮನೆಗೆ ಬರಬೇಕಾದರೆ ಎರಡು ರೂಪಾಯಿಯ ಬಾಳೆ ಎಲೆ ತರಲು ಹೇಳಿದೆ. ಅವರು ಎರಡು ಬಾಳೆ ಎಲೆ ತಂದರು. "ಇದೇನಿದು ನಾಲ್ಕು ಬಾಳೆ ಎಲೆ ಕೊಡಲಿಲ್ಲವಾ ಅವನು" ಅಂತ ಕೇಳಿದೆ. 'ಇಲ್ಲ , ಅವನು ಎರಡು ರೂ ಎರಡೇ ಬಾಳೆ ಎಲೆ ಅಂತ ಹೇಳಿದ" ಅಂತ ಶ್ರೀಕಾಂತ ಹೇಳಿದರು. ಬಹುಶ: ಬೆಲೆ ಜಾಸ್ತಿಯಾಗಿರಬಹುದು ಅಂತಂದುಕೊಂಡೆ.

ಎರಡು ದಿನಗಳ ಬಳಿಕ ಪುನಃ ನನಗೆ ಬಾಳೆ ಎಲೆ ಬೇಕಾಯ್ತು. ನಾನೆ ಹೋದೆ. ಆವತ್ತೂ ಅವನು ನನಗೆ ಎರಡು ರೂ. ಗೆ ನಾಲ್ಕು ಬಾಳೆ ಎಲೆ ಕೊಟ್ಟ. ಅದರ ಮರುದಿನ ನಾನು ಶ್ರೀಕಾಂತ ಅವನ ಬಳಿ ಏನೋ ತರಕಾರಿ ತರಲು ಹೋದೆವು, ಆಗ ನಾನು ಬಾಳೆ ಎಲೆ ರೇಟ್ ಬಗ್ಗೆ ಕೇಳಿದೆ. ಎರಡು ರೂಪಾಯಿಗೆ ನಾಲ್ಕು ಬಾಳೆ ಎಲೆ ಅಂದ...ಆಗ ಶ್ರೀಕಾಂತ ಅದೇನು ಹಾಗೆ, ನನಗೆ ನೀವು ಎರಡು ರೂಪಾಯಿಗೆ ಎರಡು ಬಾಳೆ ಎಲೆ ಕೊಡೋದು?ನನ್ನ ಹೆಂಡತಿಗೆ ಅದೇ ಬೆಲೆಗೆ ನಾಲ್ಕು ಕೊಡುವುದು? ನಾನೆ ಮುಂದಾಗಿ ಇವರು ನನ್ನ ಮನೆಯವರು ಅಂದೆ..ಅದಕ್ಕೆ ಆ ಭೂಪ ಏನೆಂದ ಗೊತ್ತೇ? ನನ್ನ ಅಂಗಡಿ, ನನಗೆ ಬೇಕಾದ ಜನರಿಗೆ, ನನಗೆ ಬೇಕಾದ ಬೆಲೆಗೆ ಮಾರ್ತೀನಿ, ಏನೀಗ ಅಂತ ಅನ್ನುವುದೇ? ಅದಾದ ಮೇಲೆ ನಮಗೆ ಅವನ ಅಂಗಡಿಗೆ ಹೋಗುವ ಪ್ರಮೇಯ ಬರಲಿಲ್ಲ ಯಾಕಂದರೆ ನಾವು ಬೇರೆ ಬಾಡಿಗೆ ಮನೆಗೆ shift ಆದೆವು.:-)

ಈ ಮನೆ ಹತ್ತಿರ ಬಾಳೆ ಎಲೆ ಸಿಗಲ್ಲ. ನಾನು ನವರಂಗ್ ಸರ್ಕಲ್ ಅಥವ ಶಂಕರಮಠ ದೇವಸ್ಥಾನದ ಬಳಿಯಿಂದ ತರಬೇಕು. ಶಂಕರಮಠದ ಪುಟ್ಟ ಹುಡುಗನಿಗೆ ನನಗೆ ಯಾವ ತರಹದ ಬಾಳೆ ಎಲೆ ಬೇಕೆಂದು ಗೊತ್ತು. ನನಗೆ ಬೇಕಾದ ಚಚೌಕ ಆಕಾರದಲ್ಲಿ   ಬಾಳೆ ಎಲೆ ಕತ್ತರಿಸಿ ಕೊಡುತ್ತಾನೆ. 3 ರೂ. ಗೆ ನನಗೆ ಒಂದು ವಾರಕ್ಕೆ ಆಗುವಷ್ಟು ಬಾಳೆ ಎಲೆ ತುಂಡುಗಳು ಸಿಗುತ್ತವೆ. ತುಂಬ tender ಎಲೆಗಳು ಒಂದು ವಾರ ಏನೂ ಆಗದೆ ಉಳಿಯುತ್ತವೆ. ರೊಟ್ಟಿ ತಟ್ಟಿ ಉಳಿದದ್ದನ್ನು ನಾನು ಬ್ರೇಕ್ ಫಾಸ್ಟ್ ಗೆ ಪ್ಲೇಟ್ ಗೆ ಬದಲಿಯಾಗಿ ಉಪಯೋಗಿಸುತ್ತೇನೆ. ತಟ್ಟೆ ತೊಳೆಯುವ ಕೆಲಸ ಉಳಿಯಿತು. ಉಪಯೋಗಿಸಿದ ಎಲೆ ನಮ್ಮ ಮನೆಯ ಹಿಂದೆ ನಾವು ಮಾಡಿಕೊಂಡಿರುವ ಕಾಂಪೋಸ್ಟ್ ಗುಂಡಿಗೆ ಸೇರುತ್ತೆ.

ಅಂದ ಹಾಗೆ ನಮ್ಮೂರಲ್ಲಿ ನೀರಿಲ್ಲದೇ ಬಾಳೆ ಗಿಡಗಳು ಬಳಲಿ ಬೆಂಡಾಗಿದ್ದರೂ ಸುಮಾರು ಬಾಳೆ ಗೊನೆ ನಮಗೆ ಕೊಡುತ್ತಿದೆ. ಅದರಲ್ಲಿ ಒಂದು ಗೊನೆ ಶ್ರೀಕಾಂತ ದೇವಸ್ಥಾನಕ್ಕೆ, ಎರಡು ನಮ್ಮ ತೋಟ ನೋಡಿಕೊಳ್ಳುವ ಕುಟುಂಬಗಳಿಗೆ, ಒಂದು ಅಲ್ಲೇ ಬಳಿಯಲ್ಲಿರುವ ಒಡ್ಡರ ಕಾಲೋನಿ ಜನರಿಗೆ, ಒಂದು ಅವರ ಅಕ್ಕನಿಗೆ, ಒಂದು ನಾನು ತೆಗೆದುಕೊಂಡು ಬಂದಿದ್ದೇನೆ..ಉಳಿದದ್ದನ್ನು ಮಾರುಕಟ್ಟೆಗೆ..
:-)

April 7, 2012

ಛಂದಪುಸ್ತಕಬಿಡುಗಡೋಪಖ್ಯಾನ ಮಾಲತಿ ishtyle


ಬೋಳುವಾರ ಮಾಮನ ಪುಸ್ತಕ ’ಸ್ವಾತಂತ್ಯ್ರದ ಓಟ’ ಪುಸ್ತಕದ ಬಿಡುಗಡೆ ದಿನ ರವೀಂದ್ರ ಕಲಾಕ್ಷೇತ್ರದಲ್ಲಿ ವಸುಧೇಂದ್ರ ಸಿಕ್ಕಿದರು. ಇನ್ವಿಟೇಶನ್ ಕೊಡುತ್ತ ’different ' ಆಗಿರತ್ತೆ ಮಾಲ್ತೀ ಬನ್ನಿ ಅಂದ್ರು. ನಾನು ಹೂಂ ಅಂದೆ. ಪುನ: ಯುಗಾದಿ ದಿನ ನಮ್ಮ ಮನೆಗೆ ಊಟಕ್ಕೆ ಕರೆದಿದ್ದಾಗ ಮತ್ತೊಮ್ಮೆ ನೆನಪಿಸಿದರು.

ವಸುಧೇಂದ್ರ ಅವರ ಪರಿಚಯ ಹೇಗಾಯ್ತು ಅಂತ ಹೇಳೊಕ್ಕೆ ಸ್ವಲ್ಪ flash back mode (ಆಹಾ ಆಜಾದ್ ಭೈಯಾ ಅವರ ’ಪದಾರ್ಥ ಚಿಂತಾಮಣಿ’ ಗೆ flash back ಪದ ಕಳುಹಿಸಬೇಕು) ಹೋಗಬೇಕಾಗುತ್ತದೆ.

ವಿಜಯಕರ್ನಾಟಕದ ಸಾಪ್ತಾಹಿಕ ಪುರವಣಿಯಲ್ಲಿ ವಸುಧೇಂದ್ರರ ಒಂದು ಸಣ್ಣ ಕತೆ ಬಂದಿತ್ತಂತೆ. ಶ್ರೀಕಾಂತ ಅದನ್ನು ಓದಿ  ಮಾಲ್ತಿ ನಿನಗಿಷ್ಟ ಆಗಬಹುದು ಎಂದು ನನಗೋಸ್ಕರ ಆ ಪತ್ರಿಕೆಯನ್ನು ಬದಿಗೆ ಇಟ್ಟಿದ್ದರು. ಮೂರು ನಾಲ್ಕು ಸಲ ಓದಿದ್ಯಾ ಅಂತ ಕೇಳಿದರು ಸಹಾ..ನಾನು ಇಲ್ಲ ಇಲ್ಲ ಅಂತ, ಆಮೇಲೆ ಮನೆಗೆ ಅಮ್ಮ ತಮ್ಮ ಎಲ್ಲ ಬಂದು ಕೊನೆಗೆ ಕಣ್ತಪ್ಪಿನಿಂದ ಆ ಪತ್ರಿಕೆ ರದ್ದಿಯಲ್ಲಿ ಹೋಗಿ ಬಿಡ್ತು. ಶ್ರೀಕಾಂತ ಗೆ ಆ ಕತೆ ಎಷ್ಟು ಇಷ್ಟ ಆಗಿತ್ತೆಂದರೆ ಅವರು ಸಪ್ನಾ ಗೆ ಹೋಗಿ ಅವರು ಬರೆದಿದ್ದ ನಮ್ಮಮ್ಮ ಅಂದ್ರೆ ನಂಗಿಷ್ಟ ’ಪುಸ್ತಕ ತೆಗೆದುಕೊಂಡು ಬಂದ್ರು. ಅಲ್ಲೆ ಕಂಪ್ಯೂಟರ್ ಪಕ್ಕನೆ ಇಟ್ಟು ಬಿಟ್ಟಿದ್ದರು.ಒಂದು ದಿನ ಕೂಡ ನಾನು ಅದನ್ನು ಮುಟ್ಟಲಿಕ್ಕೆ ಹೋಗಿರಲಿಲ್ಲ. ಒಂದು ದಿನ ಆಫಿಸ್ ಕೆಲಸ ಮಾಡಿ ಬೋರ್ ಆಗಿ, ತಂಗಿ ಜತೆ ಚ್ಯಾಟ್ ಮಾಡ್ತಾ ಇದ್ದೆ. ಅವಳಿಗೆ ಫೋನ್ ಬಂದಿದ್ದರಿಂದ ನಮ್ಮ ಚ್ಯಾಟ್ ಗೆ ಸ್ವಲ್ಪ ವಿರಾಮ ಸಿಕ್ಕಿತು, ಕೈಗೆ ಹತ್ತಿದ ಪುಸ್ತಕವನ್ನು ಎತ್ತಿ ಕೊಂಡೆ. ಸುಮ್ಮನೆ ನಾಲ್ಕು ಲೈನ್ ಓದ್ತಾ ಇದ್ದವಳಿಗೆ ಆ ಕತೆ ಯಾವಾಗ ಮುಗಿದು ಯಾವಾಗ ಅಳಲಿಕ್ಕೆ ಶುರು ಮಾಡಿದೆ ಅಂತ ಗೊತ್ತಿಲ್ಲ. ಶ್ರೀಕಾಂತ, ನಿಹಾ ಬಳಿ ಬಂದು, ’ಮಾಲತೀ ಕಸ್ಸಲ್ ಜಾಲ್ಲೆ..ಮತ್ತು ನಿಹಾ ಅಮ್ಮಾ ಅಂತ ತಬ್ಬಿಕೊಂಡಾಗ ಗೊತ್ತಾಯಿತು ನಾನು ಕೀ ಬೋರ್ಡ್ ಮೇಲೆ ತಲೆ ಇಟ್ಟು ಭೋರ್ ಅಂತ ಅಳ್ತಾ ಇದ್ದಿದ್ದು."ಈಗ ಸರಿಯಾಗೆ ಇದ್ದೆ, ಇದ್ದಕ್ಕಿದ್ದ ಹಾಗೆ ಏನಾಯಿತು" ಅಂತ ಇಬ್ಬರೂ ಗಾಬರಿ ಪಟ್ಟರು..ಯಾಕೆ ಅಂದ್ರೆ ನಾನು ಅಳುವ/emotional ಆಗುವ ಪ್ರಾಣಿಯಲ್ಲ. ನನಗೆ ಮಾತು ಬರದೆ ಪುಸ್ತಕದ ಕಡೆ ಬೆರಳು ಮಾಡಿದೆ..ಶ್ರೀಕಾಂತ ’ಹುಚ್ಚು ಹುಡುಗಿ’ ಅಂದ್ರು..ನಿಹಾ ’ಓಹ್ mommy' ಅಂದು ನಗಲು ಶುರು ಮಾಡಿದ್ರು.

ಇದರಕ್ಕಿಂತ ಮುಂಚೆ ನಾನತ್ತಿದ್ದು ಒಂದೇ ಸಲ ನೋ ನೋ ಮದುವೆಯಾಗಿ ಅಮ್ಮನ ಬಿಟ್ಟು ಬರುವಾಗ ಖಂಡಿತ ಅಳಲಿಲ್ಲ..:-). ಆದರೆ ಕೊಪ್ಪದಲ್ಲಿ ನಾವು ಬಾಡಿಗೆ ಮನೆಗೆ ಬಂದ ಮೊದಲ ಭಾನುವಾರ ನಾನು,  ಶ್ರೀಕಾಂತ ಶಟಲ್ ಆಡಲು ಹೋಗುವಾಗ, ’ಇವತ್ತು ಮಸಾಲೆ ದೋಸೆ’ ಅಂತ style ಆಗಿ ಹೇಳಿದ್ದೆ. ನನ್ನ ಜೀವನದ ಮೊದಲನೇ ಸಲ ಮಾಡಿದಂತಹ ಮಸಾಲೆ ದೋಸೆ. ಶ್ರೀಕಾಂತ ರಾಯರು ಅವರು ಮೂರು ನಾಲ್ಕು ಗೆಳೆಯರನ್ನು ಕರೆದುಕೊಂಡು ಬರುವುದೇ?? ನನಗೆ ಅಡಿಗೆಯ ’ಅ’ ಅಕ್ಷರ ನೂ ಸರಿ ಗೊತ್ತಿರಲಿಲ್ಲ. ಅಮ್ಮನ ಬಳಿ ಹೇಳಿಸಿಕೊಂಡು ಒಂದು ಹಳೆಯ ಕ್ಯಾನರಾ ಬ್ಯಾಂಕ್ ಡೈರಿಯಲ್ಲಿ 
for 1 glass udad daal add three glasses of rice and 1/4 cup of poha...ಅಂತ ಬರೆದುಕೊಂಡಿದ್ದನ್ನು ಚಾಚೂ ತಪ್ಪದೆ, ಪ್ರೀತಿಯಿಂದ ದೊಡ್ಡ ಭೈಯಾ ಖರೀಧಿಸಿ ಕೊಟ್ಟ ರುಬ್ಬುವ ಕಲ್ಲಲ್ಲಿ ರುಬ್ಬಿ ಹಿಟ್ಟೇನೋ ರೆಡಿ ಮಾಡಿಟ್ಟೆ. ಮರುದಿನ ಶ್ರೀಕಾಂತ ಆಡಲು ಹೋದ ತಕ್ಷಣ , ಅಮ್ಮ ಮಾಡುವ ಆಲು ಭಾಜಿಯನ್ನು ನೆನಪಿಸಿಕೊಂಡು ಅಂದಾಜಿನಲ್ಲೇ ಆಲೂಗಡ್ಡೆ ಪಲ್ಯ, ಮತ್ತು ಕೆಂಪು ಚಟ್ನಿ ರೆಡಿ ಮಾಡಿಟ್ಟೆ...ಶ್ರೀಕಾಂತ ಅವರ ಸ್ನೇಹಿತರನ್ನೆಲ್ಲ ಪರಿಚಯಮಾಡಿಸಿದರು. ಒಬ್ಬರಂತೂ ಬಾಂಬೆಯಲ್ಲಿ ಮಸಾಲೆ ಚಾ ಮಾಡ್ತಾರಂತಲ್ಲವಾ?? ನಮಗೆ ಮಸಾಲಾ ಚಾ ನೆ ಮಾಡಿ ಅಂದ್ರು. ಚಾ ಅಂತೂ ನನಗೆ ಮಾಡಿ ರೂಢಿಯಿತ್ತು.

ಸರಿ ಭೈಯಾ ನೆ ಕೊಡಿಸಿದ ಹೊಸ ಮಿರಿ ಮಿರಿ ಮಿಂಚುವ ಕಾವಲಿ ಗ್ಯಾಸ್ ಮೇಲಿಟ್ಟೆ, ತುಂಬ confidence ನಲ್ಲಿ ದೋಸೆ ಹುಯ್ದೆ...correct ಉರುಟಾಗಲಿಲ್ಲ, but it was ok-ish. ಚೆಂದದ ಕೆಂಪಾಗಿ ಬಿಡ್ತು ದೊಸೆ. ಸುಟ್ಟುಗದಿಂದ ತೆಗಿಲಿಕ್ಕೆ ನೋಡಿದ್ರೆ ಜಪ್ಪಯ್ಯ ಅಂದ್ರು ದೋಸೆ ಕಾವಲಿ ಮೇಲಿಂದ ಮೇಲೆ ಬಂದ್ರೆ ಹೇಳಿ...ನನಗೋ ’ಛೆ! ಶ್ರೀಕಾಂತ ಎಷ್ಟು ಪ್ರಿತಿಯಿಂದ ಅವರ ಮಿತ್ರರನ್ನೆಲ್ಲ ಕರೆದುಕೊಂಡು ಬಂದಿದ್ದಾರೆ, ಅವರ shape-out ಆಗುತ್ತಲ್ಲವಾ ಅಂತ ಅಂದುಕೊಂಡು ಅಲ್ಲಿ ಅಳ್ತಾ ನಿಂತೆ. 5 ನಿಮಿಷ ಆಯ್ತು, 10 ನಿಮಿಷ ಆಯ್ತು . ಮಸಾಲ ಬಿಡಿ, ಸಾದಾ ದೋಸೆದೂ ಸದ್ದಿಲ್ಲದ್ದೆ ಹೋದಾಗ ಶ್ರೀಕಾಂತ ನಿಧಾನಕ್ಕೆ ಅಡಿಗೆ ಮನೆಗೆ ಬಂದ್ರು. ನಾನು ಅವರನ್ನು ತಬ್ಬಿಕೊಂಡು ಅಳಲಿಕ್ಕೆ ಶುರು ಮಾಡಿದೆ. ಅವರು ಏನಾಯ್ತು ಅಂದ್ರು, ನಾನು , ದೋಸೆ ಏಳ್ತಾ ಇಲ್ಲ ಅಂದೆ’ ಅವರು ಅಷ್ಟೇನಾ?? ಅಂತ ಹೇಳಿ ಹಾಲ್ ನಲ್ಲಿರುವ ಸ್ನೇಹಿತರನ್ನೆಲ್ಲ ಅಡಿಗೆ ಮನೆಗೆ ತಾಗಿರುವಂತೆ ಇರುವ ಡೈನಿಂಗ್ ಟೇಬಲ್ ಗೆ ಕರೆದು, ಮಾತಾಡ್ತಾ, ನನ್ನ ಕಾವಲಿ ಸುಟ್ಟುಗದಿಂದ ಕೇರಿ ಕೇರಿ ಕ್ಲೀನ್ ಮಾಡಿದರು. ಆ ಮೇಲೆ ಕಾವಲಿ ಮೇಲೆ ಒಳ್ಳೆ professional cook ತರಹ ಚೋಂಯ್ಯ ಅಂತ ನೀರು ಸಿಂಪಡಿಸಿ ಆಮೇಲೆ ದೋಸೆ ಹೋಯ್ದರು. ಅಹಾ ಎಷ್ಟು ಸಲೀಸಾಗಿ ದೋಸೆ ಮಾಡಿದರು. ಎರಡು ದೋಸೆ ಮಾಡಿದ ಮೇಲೆ ಉಳಿದಿದ್ದ ದೋಸೆ ನಾನೆ ಹುಯ್ದು ಮಸಾಲೆ ಟೀ ಮಾಡಿ ಅವರ ಸ್ನೇಹಿತರ ಕಡೆ ಭೇಶ್ ಅನ್ನಿಸಿಕೊಂಡೆ...ಅ ಮೇಲೆ ನಾನು ಅತ್ತಿದ್ದು ವಸುಧೇಂದ್ರರ ಕತೆ ಓದಿ...

ಅವರಿಗೊಂದು ಮೈಲ್ ಕಳುಹಿಸಿದೆ, ಅವರು ಪ್ರತಿಕ್ರಯಿಸಿ, ಅವರ ಪುಸ್ತಕದ ಲಿಸ್ಟ್ ನ್ನೆ ಕಳುಹಿಸಿದರು.

ಮಿತ್ರ ಅಪಾರರ ಬ್ಲಾಗ್ ನಲ್ಲಿ ವಸುಧೇಂದ್ರರ ಇನ್ನೊಂದು ಕತೆ ಹಾಕಿದ್ದರು. ಅದನ್ನು ಓದುತ್ತಾ ಎಷ್ಟು ತನ್ಮಯಳಾದೆ ಅಂದರೆ  background ನಲ್ಲಿ ಹಾಲು ಸುಟ್ಟ ವಾಸನೆ ಮೂಗಿಗೆ ಬಡೀತಿದ್ರೆ, "ಛೆ ಯಾರೊ ಹಾಲು ಗ್ಯಾಸ್ ಮೇಲಿಟ್ಟು ಮರೆತಿದ್ದಾರೆ, ತಲೆಇಲ್ಲದವರು’ ಅಂದುಕೊಳ್ಳತ್ತಾ , ಕತೆ ಓದಿ ಮುಗಿದ ಮೇಲೆ ನನಗೆ ಹಾಲು ಸುಟ್ಟ ವಾಸನೆ ನಮ್ಮ ಮನೇದೆ ಅಂತ ಗೊತ್ತಾಗಿದ್ದು..ಪಾತ್ರೆ ಸರಿ ಪಡಿಸೋ ಸ್ಥಿತಿಯಲ್ಲಿ ಇರಲಿಲ್ಲ. ವಸುಧೇಂದ್ರ ಅವರಿಗೆ blame ಮಾಡಿ ಇನ್ನೊಂದು ಉದ್ದ ಮೈಲ್ ಹಾಕ್ದೆ..ಆ ಮೇಲೆ ಸಪ್ನಾ ಗೆ ಹೋಗಿ ಅವರು ಬರೆದ ಎಲ್ಲ ಪುಸ್ತಕಗಳನ್ನು ತಂದು ಇನ್ನೆರಡು ಟೀ ಪಾತ್ರೆಗಳನ್ನು ಸುಟ್ಟು ನಾನು ಅವರ ಬರಹದ ಕಂಡಾಪಟ್ಟೆ ಫ್ಯಾನ್ ಆಗಿ, ಅವರ ಒಂದೆರಡು ಪುಸ್ತಕ ಬಿಡುಗಡೆ ಕಾರ್ಯಕ್ರಮಗಳಿಗೆ attendance ಹಾಕಿ, (ಹೋ ವಸುಧೇಂದ್ರರ ಎಲ್ಲ ಕಾರ್ಯಕ್ರಮಕ್ಕೆ ನಿಮಗೆ ಹೋಗಕ್ಕೆ ಆಗುತ್ತೆ, ನಮ್ಮ ಒಂದೂ ಕಾರ್ಯಕ್ರಮಕ್ಕೆ ನೀವು ಬರುವುದಿಲ್ಲ ಅಂತ ’ಅವಿರತ ಸತೀಶ ’  ಅವರ ಕೋಪವನ್ನು ಸಹಿಸಿಕೊಂಡು) ಎಲ್ಲರಿಗೂ ಅವರು ನನ್ನ ಫ್ರೆಂಡ್ ಅಂತ ಹೇಳ್ತಾ ಇದ್ದೆ. ಮತ್ತೆ ಯಾರಾದರೂ ’ಮಾಲತಿ ನಿಮ್ಮ ಫ್ರೆಂಡಾ, ಅಂತ ಕೇಳಿದವರಿಗೆ ಸುಮ್ಮನೆ ಹೂಂ ಅನ್ನಿ’ ಅನ್ನುವ ಬೆದರಿಕೆ ಕೂಡ ಅವರಿಗೆ ಕೊಟ್ಟಿದ್ದೇನೆ ಹಲವು ಬಾರಿ ಎಸ್ ಎಮ್ ಎಸ್ ಮೂಲಕ. ಅವರು ನನ್ನನ್ನು ಫ್ರೆಂಡ್ ಅಂತ consider ಮಾಡ್ತಾರಾ, ನಿಜಕ್ಕೂ ಗೊತ್ತಿಲ್ಲ.
end of flash back..)

e-ಮೈಲ್ ನಲ್ಲಿ ಅವರು ಕಳುಹಿಸಿದ ಆಮಂತ್ರಣ ಪತ್ರ ಬಂದ ಮೇಲೆ...ಶ್ರೀಕಾಂತ ಬಳಿ ಜೇನಿಗಿಂತ ಸಿಹಿಯಾಗಿ ’ಶ್ರೀsssಕಾಂssss ತ್ ಗುಡ್ ಫ್ರೈಡೆ ದಿನ ಏನು ಪ್ರೋಗ್ರಾಮ್ ಅಂದಾಗ ಅವರೋ ಮಹಾ ಚಾಲಾಕಿನ ಆಸಾಮಿ i am busy on that day ಅಂದು ,ಏನಿದೆ ಆವತ್ತು ಅಂತ ಕೇಳಿದ್ರು. ವಸುಧೇಂದ್ರರ ಪುಸ್ತಕ ಬಿಡುಗಡೆ ಅಂದೆ. ನಿನಗೊಬ್ಬಳಿಗೆ ಹೋಗಲಿಕ್ಕೆ ಏನಾಗುತ್ತೆ ಅಂತ ಸೇರಿಸಿದರು. ರಾತ್ರಿ ಅಕ್ಕ ಬಂದ ಮೇಲೆ ’ಅಕ್ಕಾssss ಈ ವಾರ ಗುಡ್ ಫ್ರೈಡೆ ದಿನ ರಜೆ ಹಾಕೆ..ನನ್ನ ಜತೆ ವಸುಧೇಂದ್ರ ಮಾಮನ book release ಗೆ ಬಾ ಅಂದೆ...ಅವಳು ನಕ್ಕು i love you mommy, but i cannot take leave...my christian colleagues are on leave on that day ಅಂದ್ಲು. ನಿಹಾ ಗೆ ಕೇಳೋ ಹಾಗೆ ಇರಲಿಲ್ಲ. ಯಾಕಂದ್ರೆ ಪುಸ್ತಕ ಬಿಡುಗಡೆ ಮರುದಿನ ಅವಳಿಗೆ ಪರೀಕ್ಷೆ ಇದೆ ಅಂತ ಗೊತ್ತಿತ್ತು.

ನನ್ನ ಸ್ನೇಹಿತೆಯರಾದ ವೇದಾ ಹಾಗೂ ಜ್ಯೋತಿ ಗೆ ಬರುತ್ತೀರಾ, ಒಂದು ದಿನ ಇಡಿ ಒಟ್ಟಿಗೆ ಟೈಮ್ ಸ್ಪೆಂಡ್ ಮಾಡುವಾ, ಹೇಗೂ ಆಮೇಲೆರಡು ದಿನ ನಿಮಗೆ ರಜೆ ಇರುತ್ತೆ ಅಂದಾಗ ಜ್ಯೋತಿ ಅವರ ಹೈದರಾಬಾದ ಟ್ರಿಪ್ ಬಗ್ಗೆ ಹೇಳಿದ್ರು. ವೇದ, ’ಕಾರ್ಯಕ್ರಮದ ಹಿಂದಿನ ದಿನ ಹೇಳ್ತೇನೆ ಮಾಲ್ತಿ’ ಅಂದ್ರು.

ಕಾರ್ಯಕ್ರಮದ ಹಿಂದಿನ ದಿನ ನಾನು ವೇದಾ ಅವರಿಗೆ ಬರುತ್ತೀರಾ ಅಂತ ಕೇಳಲಿಲ್ಲ...’ನಾಳೆ ನೀವು ಬರುತ್ತೀರಿ’ ಅಂತ ಎಸ್ ಎಮ್ ಎಸ್ ಮಾಡಿ..ನಿಮಗೋಸ್ಕರ ಶಶಿ ದೇಶಪಾಂಡೆ ಹಾಗೂ ಇನ್ನಿತರ ಬುಕ್ಸ್ ತರುತ್ತೇನೆ ಎನ್ನುವ ಆಮೀಶ ತೋರಿಸಿದೆ. ಅವರು ಕೂಡಲೇ ಮರು ಎಸ್ ಎಮ್ ಎಸ್ ಮಾಡಿ..’I am coming ' ಅಂದದ್ದಲ್ಲದ್ದೆ.. ಅವರು ಆಫಿಸ್ ನಿಂದ ಸಂಜೆ ಮನೆಗೆ ಹೋಗುವಾಗ ಫೋನ್ ನಲ್ಲೂ ಮರುದಿನ ಭೇಟಿ ಯಾಗುವ ಬಗ್ಗೆ ಹೇಳಿದರು.ರಾತ್ರಿ ನಾನು ನನ್ನ ಕಾಟನ್ ಸೀರೆಗೆ ಇಸ್ತ್ರೀ ಹಾಕ್ತಾ ಇದ್ದ್ದಾಗ ನಿಹಾ ನಗ್ತಾ, ’ಅಮ್ಮ ನಾಡಿದ್ದು  ನನಗೆ ಪರೀಕ್ಷೆ ಇಲ್ಲ..ಸೀದಾ ಮಂಡೆ (monday) ನೆ. time table ಈಗ ನೋಡ್ದೆ. ನಾನು ಬರುತ್ತೇನೆ ನಿನ್ನ ಜತೆ ಅಂದಾಗ ನಾನು ಕುಣಿಯೊದೊಂದೇ ಬಾಕಿ.the more the merrier ಅಂತ.

ಸರಿ ಬೆಳಿಗ್ಗೆ ಬೇಗ ಎದ್ದು, ಟಿಫನ್, ಶ್ರೀಕಾಂತ ರಾಯರಿಗೆ ಅಡಿಗೆ ಎಲ್ಲ ಮಾಡಿಟ್ಟು ಮೊದಲನೇ ಸಲ ಸರಿಯಾದ ಟೈಮ್(ಎಲ್ಲ ಫಂಕ್ಷನ್ ಗಳಿಗೂ ನಮ್ಮದು ಲೇಟ್ ಎಂಟ್ರಿ) ನಾವು ಎ.ಡಿ.ಎ ರಂಗಮಂದಿರ ತಲುಪಿದೆವು. ಮೆಟ್ಟಿಲ ಮೇಲೇರ ಬೇಕಾದ್ರೆ ಆ ದಿನ ಬೆಳಿಗ್ಗೆ ಬೆಳಿಗ್ಗೆ ಫೇಸ್ ಬುಕ್ ಪ್ರೆಂಡ್ ರಿಕ್ವೆಶ್ಟ್ ಕಳುಹಿಸಿದ ಮತ್ತು ನಾನು accept ಮಾಡಿದ.. ಉಮೇಶ ದೇಸಾಯಿ (ಅವರ ಬ್ಲಾಗ್ ಓದಿದ್ದೇನೆ, ಅವರು ಕೆಲವೊಮ್ಮೆ ನನ್ನ ಬ್ಲಾಗ್ ಗೆ ಬರುತ್ತಾರೆ ಹಾಗಾಗಿ ಅವರು ಗೊತ್ತು) ಯವರನ್ನು ಕಂಡೆ...but ಅವರು ಸೆಲ್ ಫೋನ್ ನಲ್ಲಿ ಮಾತಾನಾಡುವುದರಲ್ಲಿ ಎಂಗೇಜಡ್ ಆಗಿದ್ದರು. ಮತ್ತು ಅವರೇ ಇವರಾ ಅನ್ನುವ ಸಣ್ಣ doubt ಕೂಡ ಇತ್ತು.

ಒಳಗಡೆ ಎಂಟರ್ ಆದ ಕೂಡಲೇ ಫ್ಲೆಕ್ಸ್ ನಲ್ಲಿ ಮೂಡಿದ ಮಕ್ಕಳ ಬ್ಲ್ಯಾಕ್ & ವ್ಹೈಟ್ ಚಿತ್ರ ಹಾಗೂ ಆಕರ್ಷಕ ರಂಗೋಲಿ ನಮ್ಮನ್ನು ಎದುರುಗೊಂಡವು..ಸೈಡ್ ನಿಂದ ವಸುಧೇಂದ್ರ ಫಾಸ್ಟ್ ಆಗಿ ನಡೀತಾ ಇದ್ರು..ನಾನು ಕೈ ಎತ್ತಿ ಗ್ರೀಟ್ ಮಾಡಿ Rangoli is nice ಅಂದೆ, ಅವರು ಬನ್ನಿ ಬನ್ನಿ, ಚೆನ್ನಾಗಿದೆಯಲ್ಲವಾ?? ಬೇಗ ಬೇಗ ಕಾಫಿ ಕುಡೀರಿ, ಕಾರ್ಯಕ್ರಮ ಶುರು ಮಾಡುವ ಅಂದ್ರು. ರಂಗೋಲಿಯನ್ನು ಸ್ವಲ್ಪ ಹೊತ್ತು admire ಮಾಡಿ, ಮುಂದಕ್ಕೆ ಹೋದಾಗ ರಘು ಅಪಾರ ಕಾಣಿಸಿದ್ರು..ಅವರ ಬಳಿ ಹೋಗಿ ,’ನೀಹಾ ನಿಮಗೇನೋ ಕೇಳಬೇಕಂತೆ’ ಅಂತಂದೆ...ನೀಹಾ ನನಗೆ ’ಅಮ್ಮ direct ಹಾಗಾ ಹೇಳೋದು, ಒಂದು ಹಾಯ್ ಹೆಲ್ಲೋ ಹೇಳ್ದೆ’ ಅನ್ನುವಷ್ಟರಲಿ ರಘು ನಮ್ಮ ಬಳಿ ಬಂದಾಯಿತು. ಅವರು ಮಾತಾಡ್ತಿರ ಬೇಕಾದ್ರೆ ನನಗೆ ಬೋಳುವಾರ ಮಾಮ ಕಂಡ್ರು...ನಾನು ಅವರ ಬಳಿ ಹೋದೆ

"ನಮಸ್ಕಾರ, ನಾನು ಮಾಲತಿ, ಶ್ರೀಕಾಂತ ಶಣೈ ಹೆಂಡತಿ. ನಿಮ್ಮ ಬಳಿ ನಾನು complaint ಮಾಡ ಬೇಕಿದೆ." ಬೋಳುವಾರ ಮಾಮ ಸ್ವಲ್ಪ tense ಆದ ಹಾಗೆ ಕಂಡಿತು. ನಾನು ಮುಂದುವರೆಸಿದೆ, "ಮೊದಲೆ ಕೆಲಸದ ಒತ್ತಡ ಅಂತ ನನ್ನ ಬಳಿ ಸರಿ ಮಾತು ಕತೆ ಆಡುತ್ತಿಲ್ಲ’ ಈಗ ಸಿಕ್ಕಿದಷ್ಟು ಸಮಯದಲ್ಲಿ ನಿಮ್ಮ ’ಸ್ವಾತಂತ್ರ್ಯದ ಓಟ’ ಓದುತ್ತಾ ಕೂರ್ತಾರೆ. ಈಗ ಫಂಕ್ಷನ್ ಬರುವ ಮುಂಚೆ ಐದು ಸಲ ’ಬೈ’ ಹೇಳಿ ಆರನೇ ಸಲ ಬೈಯೋ ಧಾಟಿಯಲ್ಲಿ ಬೈ ಹೇಳಿದ ಮೇಲೆ ಒಂದು ಸಣ್ಣಕ್ಕೆ ಬೈ ಹೇಳಿ ಕಳುಹಿಸಿದಾರೆ. ಬಾಗಿಲಿಗೆ ಚಿಲ್ಕ ಹಾಕಿದ್ದಾರೋ ಇಲ್ಲವೋ ಗೊತ್ತಿಲ್ಲ. ಪುಸ್ತಕದ ಕೊನೆ ನಾಲ್ಕು ಪುಟಗಳು ಮಾತ್ರ ಉಳಿದಿತ್ತು ನಾವು ಹೊರಡುವಾಗ ಅಂದೆ’ . ಬೋಳುವಾರ ಮಾಮ ’ನಿಜಕ್ಕೂ ಅಷ್ಟೊಂದು ಕುತೂಹಲದಿಂದ ಓದುತ್ತಿದ್ದಾರಾ ಅಂತ ಕೇಳಿದ್ರು..ನಾನು ಅಷ್ಟು ದೊಡ್ಡ dialogue ಹೋಡೆದು ಸುಸ್ತಾಗಿದ್ದೆ, ಸುಮ್ಮನೆ ಗೋಣು ಅಲ್ಲಾಡಿಸಿದೆ.

(ಹಾಗೇನೆ , ಬೋಳುವಾರ ಮಾಮ ಏನಾದರೂ ಸಿಕ್ಕರೆ ನಿಮ್ಮ ಬಗ್ಗೆ complain ಮಾಡ್ತೀನಿ ಅಂತ ಕೂಡ ಸೇರಿಸಿದ್ದೆ ಬೆಳಿಗ್ಗೆ ಹೊರಡುವ ಮುನ್ನ)

(ಇದರ ಮಧ್ಯೆ ಒಂದು ಗಮ್ಮತ್ತಿನ ಸಂಗತಿ ನಡೆದಿದೆ. ನಾವು ಮನೆಯಿಂದ ಹೊರಟು ಹತ್ತು ನಿಮಿಷ ಆದ ಮೇಲೆ ಶ್ರೀಕಾಂತ ಫೋನ್ ’ನಿಹಾರಿಕಾ ಎಲ್ಲಿ?? ಮನೆಯಲ್ಲಿ ಕಾಣ್ತಾ ಇಲ್ಲ’ ಅಂತ ನಾನು ಹೋ ಸರಿಯಾಯ್ತು..ಬೆಳಿಗ್ಗೆ ತಿಂಡಿ ತಿನ್ನುವಾಗ ನಿಹಾ ನನ್ನ ಜತೆ ಬರುತ್ತಾಳೆ, ಅಡಿಗೆ ಏನೇನು ಮಾಡಿದ್ದೇನೆ, ಯಾವುದನ್ನು ಬಿಸಿ ಮಾಡಬೇಕು ಅನ್ನುವ ನನ್ನ instructions ಗೆಲ್ಲ..ಎಲ್ಲಕ್ಕೂ ಹೂಂ ಹೂಂ’ ಅಂದಿದ್ರು..ಸ್ವಲ್ಪ ಕೀಟಲೆ ಮಾಡುವ ಅಂದುಕೊಂಡೆ, ಬೇಡ ಪಾಪ ಅಂತ ಸುಮ್ಮನಾಗಿದ್ದೆ)
"ನೀವು ಓದಿದ್ರಾ"- ಬೋಳುವಾರ ಮಾಮ
"not yet..ನನ್ನ ಓದು ಸ್ವಲ್ಪ ಸ್ಲೋ’..ನಾನು ನಿಧಾನಕ್ಕೆ ಓದ್ತೀನಿ ಅಂದು...ಅವರಿಗೆ ಬೈ ಹೇಳಿ...ವೇದಾಗೆ ಕಾಯ್ತಾ entrance ಬಳಿ ನಿಂತೆ.

ಅಷ್ಟರಲ್ಲಿ ನನ್ನ ಬ್ಲಾಗ್ ತಮ್ಮ/ಮಿತ್ರ ಸುಶ್ರುತ ದೊಡ್ಡೇರಿ ಬಂದ್ರು. ’ಎನ್ರೀ, ಒಬ್ರೆ ಬಂದಿದ್ದೀರಾ, ಎಲ್ಲಿ ದಿವ್ಯಾ ಅಂತ ಕೇಳಿದ್ರೆ ಮಹಾ ಸ್ಟೈಲ್ ಅಲ್ಲಿ ನನಗೆ ಇವತ್ತು ರಜೆ, ಅವಳಿಗೆ ರಜೆ ಇಲ್ಲ..ಅಂತ ಅವರು ಬರೆಯುವ ಕವನದ ಧಾಟಿಯಲ್ಲೇ ಹೇಳಿದ್ರು, ನಾನು ಅವರಿಗೆ ಬೇಗ ಬೇಗ ಕಾಫಿ ಕುಡಿದು ಒಳಗೆ ಹೋಗಿ ಅಂದೆ, ಮಹಾ ನನ್ನ ಕಾರ್ಯಕ್ರಮದ ತರಹ. (ದಿವ್ಯಾ ಹೆಗ್ಡೆ ಮತ್ತು  ಸುಶ್ರುತ  ದೊಡ್ಡೇರಿ ಇಬ್ಬರೂ ನನ್ನ ಆತ್ಮೀಯರು..ಅವರಿಬ್ಬರೂ ಮದುವೆ ಆಗುತ್ತಿದ್ದಾರೆ ಅಂದಾಗ ನಾನೆಷ್ಟು ಸಂಭ್ರಮ ಪಟ್ಟೇ ಅಂತ ನಮ್ಮ ಮನೆಗೆ ಬಂದು ನೀವು ಕೇಳಬೇಕು):-)

 ವೇದಾ ಬಂದ್ರು...ಸೆಟ್ ಡಿಸೈನ್ ಮಾಡಿದ ಪ್ರದೀಪ್ ಕಂಬತ್ತಳ್ಳಿ ಯವರನ್ನು ಪರಿಚಯಿಸಿದರು.


ನಾವು ಒಳಗೆ ಹೋಗುವಾಗ ಸ್ಟೇಜ್ ಮೇಲೆ ಗಿರೀಶ ಕಾಸರವಳ್ಳಿ , ರಹಮತ್ ತೆರಿಕೇರೆ ಯವರು ಆಗಲೇ ಕೂತಿದ್ದರು. ಗಿರೀಶ ಕಾಸರವಳ್ಳಿಯವರ ಫೋಟೊಗಳನ್ನು ನೋಡಿದ್ದೆ, ಅವರ ’ಗುಲಾಬಿ ಟಾಕಿಸ್ ’ ಇತ್ತೀಚಿಗೆ ನೋಡಿದ್ದು ಬಿಟ್ಟರೆ ಅವರ ಬಗ್ಗೆ ಹೆಚ್ಚಿಗೇನೂ ತಿಳಿದಿಲ್ಲ.  ಸುಮಾರು ವರ್ಷಗಳ ಹಿಂದೆ ನಾನು ತೀರ್ಥಹಳ್ಳಿಯಿಂದ ಉಡುಪಿಗೆ ಹೋಗುವಾಗ ಇಬ್ಬರು ಮಹಿಳೆಯರು ನನ್ನನ್ನೆ ಸ್ವಲ್ಪ ಹೊತ್ತು ಕುತೂಹಲದಿಂದ ನೋಡ್ತಾ, ನಾನು ನನಗಿದ್ದ ಉದ್ದಕೂದಲನ್ನು ನೆನೆಸಿಕೊಂಡು, ಈಗ step cut ಗಾಗಿ ಗಿಡ್ಡ ಆಗಿರುವ ನನ್ನ ಕೂದಲಿನ ಬಗ್ಗೆ ಕಸಿವಿಸಿಗೊಳ್ಳುತ್ತಿರಬೇಕಾದ್ರೆ ’ನೀವು ಕಾಸರವಳ್ಳಿ ಫ್ಯಾಮಿಲಿಯವರಾ ಅಂತ ಅವರು ನನಗೆ ಕೇಳಿ, ನನ್ನ ಒಟ್ಟಿಗೆ ಇದ್ದ ನನ್ನ ಅಕ್ಕ .’ಅಲ್ಲ’ ಅಂತ ಹೇಳಿದ ಮೇಲೆ, ಅವರಿಬ್ಬರೂ ಅವರಲ್ಲೇ ನಾನು ಯಾರನ್ನೋ ಹೂ ಬ ಹೂ ಹೋಲುತ್ತೇನೆ ಅಂತ ಮಾತನಾಡಿಕೊಳ್ಳುತ್ತಿದ್ದರಂತೆ.ಇದನ್ನೂ ಅಕ್ಕ ಹೇಳಿದರು. ಆ ಮೇಲೆ ಎರಡು ಮೂರು ಸಲ ಹೀಗೆ ಕಾಸರವಳ್ಳಿ ಕುಟುಂಬದವರಾ ಅಂತ ಕೇಳಿದವರು ಇದ್ದರು. ಅದಕ್ಕೆ ಸ್ವಲ್ಪ ಕುತೂಹಲದಿಂದ ಅವರ ಕಡೆ ನೋಡಿದೆ. ರಹಮತ್ ತರೀಕೆರೆಯವರ ಬರಹಗಳನ್ನು ನಾನು ಪ್ರಜಾವಾಣಿ ಸಾಪ್ತಾಹಿಕದಲ್ಲಿ ಓದ್ದಿದ್ದೇನೆ.

ಗಾರ್ಗಿ ಪಂಚಾಂಗಂ ತುಂಬ ಸುಶ್ರ್ಯಾವ್ಯವಾಗಿ ಕಗ್ಗವನ್ನು ಹಾಡಿದರು. ಶ್ರೀಕಾಂತ ಮೂಡ್ ಬಂದಾಗ ಕಗ್ಗದಲ್ಲಿನ ಸಾಲುಗಳನ್ನು ಉರುಳಿಸ್ತಾ ಇರ್ತಾರೆ. ಆದರೆ ಇಂಪಾಗಿ ಇದನ್ನು ಹಾಡಬಹುದು ಅಂತ ತಿಳಿದಿದ್ದು ಇದೇ ಮೊದಲು. ಖುಶಿಯಾಯ್ತು.


ಸುಧನ್ವಾ ದೇರಾಜೆ ಅವರ ನಿರೂಪಣೆ. ಆಮೇಲೆ ಸ್ಕ್ರೀನ್ ಮೇಲೆ ಕನ್ನಡ ಹಿರಿಯ ಕಿರಿಯ ಸಾಹಿತಿಗಳಿಂದ ಸ್ಟೇಜ್ ಮೇಲಿದ್ದವರ, ಪುಸ್ತಕ ಪ್ರಕಟವಾಗುತ್ತಿದವರ ಬಗ್ಗೆ ನಾಲ್ಕು ಒಳ್ಳೆ ಮಾತುಗಳನ್ನು ಆಡಿದರು.(:-)) ನನಗೇ ಈ style ತುಂಬ ಹಿಡಿಸಿತು.
ಆ ಮೇಲೆ ಪುಸ್ತ್ಕಕ ಬಿಡುಗಡೆ. ಬಸವಣ್ಣೆಪ್ಪಾ ಕಂಬಾರರು, ನಾಗರಾಜ ವಸ್ತಾರೆಯವರು ಹಾಗೂ  ಪ್ರಶಾಂತ ಆಡೂರ ಅವರು ನಾಲ್ಕೇ ನಾಲ್ಕು ಮಾತಾಡಿದರು.  ಪ್ರಶಾಂತ ಆಡೂರ ರವರು ನಗಿಸಬಹುದು ಎಂದು ನಾನು ನಗಲೂ ಸಜಾಗಿದ್ದೆ. ಅವರು disappoint ಮಾಡಿದರು. ಎಲ್ಲರು ಚುಟುಕಾಗಿ ಮಾತನಾಡಿದರು.

ಆ ಮೇಲೆ ಕಾಸರವಳ್ಳಿಯವರ ಹಾಗೂ ತರೀಕೆರೆಯವರ ಜುಗಲ್ ಬಂದಿ ಶುರು ಆಯ್ತು. ಸ್ವಲ್ಪ ಹೊತ್ತು ಕೇಳಿದೆ, ಆ ಮೇಲೆ ನನ್ನ ಮನಸ್ಸು drift ಆಗಲಿಕ್ಕೆ ಶುರು ಆಯ್ತು.
this photo from HP Nadig Face book album

ಎದುರಿಗೆ ಕೂತುಕೊಂಡಿದ್ದ ಸುಶ್ರುತ ದೊಡ್ಡೇರಿ ಯನ್ನು ನೋಡಿ ದಿವ್ಯಾ ಹೆಗ್ಡೆ ಗೆ ಒಂದು ಕೀಟಲೇ ಮೆಸೆಜ್ ಕಳಿಸಿದೆ. ನಿಹಾ ಕುತೂಹಲದಿಂದ ಜುಗಲಬಂದಿಯನ್ನು ಆಲಿಸ್ತಾ  ಇದ್ದಳು. ವೇದಾ ಕಡೆ ಬಗ್ಗಿ ಇಂಟರೆಸ್ಟಿಂಗ್ ಇದೆಯಾ? ಅವರಿಬ್ಬರೂ ವೈರಿಯಾದರೆ ’ಜಗಳಬಂದಿ’ ಬಾಯಿಂದ ತುಂಬ ಉಗುಳು ಬರ್ತಾ ಇದ್ರೆ.’ಉಗುಳಬಂದಿ’ ಅಂತೆಲ್ಲ ಪನ್ನ್ ಮಾಡಿ ನಕ್ಕು ಎದುರಿಗೆ ಕೂತವರು ನಮ್ಮನ್ನು ಗುರಾಯಿಸಿಕೊಂಡು ನೋಡಿದರೆ , ನೀಹಾ ’ಮೋಮಿ’ ಅಂತ warning look ಒಂದನ್ನು ಎಸೆದಳು. ಪುನ: ಸ್ವಲ್ಪ ಹೊತ್ತು ಗಮನವಿಟ್ಟು ಕೇಳ್ದೆ. the  bicycle thief ನ ಒಂದು ಸೀನ್ ಎಷ್ಟು ಚೆನ್ನಾಗಿ explain ಮಾಡಿದ್ರು ಅಂದ್ರೆ, ಹೌದಲ್ಲವೇ ನನಗಿದು ಹೋಳಿಲೇ ಇಲ್ಲ ಅಂತ ಅನ್ನಿಸ್ತು. ಅಷ್ಟರಲ್ಲಿ  ಕನ್ನಡದ ಒಳ್ಳೆ ಕತೆಗಾರರು ಅಂತ ಅಮರೇಶ ನುಗಡೋಣಿ, ವೈದೇಹಿ ಮುಂತಾದ ಇನ್ನೂ ಕೆಲವು ಹೆಸರನ್ನು ಹೇಳುತ್ತಿರಬೇಕಾದ್ರೆ, ನಾನು ವೇದ ಕಡೆ ಬಗ್ಗೆ ಛೆ! 'ಮಾಲತಿ ಶೆಣೈ’ ಹೆಸರೆ ಹೇಳಲಿಲ್ಲ ಅಂದಾಗ, ವೇದ ಒಂದು ಕ್ಷಣ ದಕ್ಕಾಗಿ, ಅವರು why not malathi' ಅಂದಾಗ ನಕ್ಕು ನಾವಿಬ್ಬರೂ ಪುನ: ಕೆಂಗಣ್ಣಿಗೆ ಗುರಿ + ನಿಹಾರಿಕಾಳ..’mommy' part-2 ಗೆ ಈಡಾಗಬೇಕಾಯ್ತು...ಇನ್ನೊಮ್ಮೆ ಸದ್ದು ಗಿದ್ದು ಮಾಡಿದ್ರೆ ಅವಳು ನಮ್ಮ ಬಳಿಯಿಂದ ಎದ್ದು ಬೇರೆ ಕಡೆಗೆ ಹೋಗಿ ಕೂರುತ್ತಾಳೆಂದು ಸ್ವಲ್ಪ ಡೀಸೆಂಟ್ ಆಗಿ ಕೂತುಕೊಂಡ ಮೇಲೆ ಒಂದು ಪುಟ್ಟ ಬ್ರೇಕ್ ಕೊಟ್ಟರು.
photo from Prashanth Addoor Face book album 
ಈ ಸಲದ ಛಂದ ಬಹುಮಾನ ವಿಜೇತರಾದ  ಬಸವಣ್ಣೆಪ್ಪಾ  ಕಂಬಾರ..ಎರಡು ಮಾತುಗಳನ್ನಾಡುತ್ತಿರುವುದು

ಆಮೇಲೂ 20 ನಿಮಿಷ ಜುಗಲ್ ಬಂದಿ ಇದೆಯೆಂದಾಗ ನಿಧಾನವಾಗಿ disappearing act ಮಾಡುವ ಅಂದುಕೊಂಡ್ವಿ, ನಾನು ವೇದಾ. ಆದರೆ ನಿಹಾ ನನಗೆ ಕೇಳಬೇಕು, ನೀವಿಬ್ಬರೂ ಬೇಕಾದ್ರೆ ಹೋಗಿ ಅಂದಳು. ಆದರೆ ವೇದ, ’ಪಾಪ ಹುಡುಗಿ ಕುತೂಹಲದಿಂದ ಕೇಳ್ತಾ ಇದ್ದಾಳೆ, ನಾವು ಕೂರುವಾ’ ಅಂದ್ರು. ನಾನು ನನ್ನ ಫೇಸ್ ಬುಕ್ ಮಿತ್ರರನ್ನು ಗುರುತಿಸ್ತಾ ಇದ್ದೆ. ನಿಹಾರಿಕ ಜುಗಲ್ ಬಂದಿ ಎಲ್ಲ ಕೇಳಿಸಿಕೊಂಡು ನಾನೂ ಒಂದು ದಿನ ಚಂದದ ಫಿಲ್ಮ್ ಮಾಡ್ತೀನಿ ಅಂದಳು.

ಕಾರ್ಯಕ್ರಮ ಮುಗಿದ ಮೇಲೆ ಲಘು ಊಟದ ಮುಂಚೆ ನನ್ನ-ವೇದಾಳ ಫೋಟೊ ಸೆಶನ್ ಆಯ್ತು ಕೇರ್ ಆಫ್ ನಿಹಾರಿಕಾ...ಅ ಮೇಲೆ ರಂಗೋಲಿಯನ್ನು ಇನ್ನಷ್ಟು ಡೀಟೈಲ್ ಆಗಿ ನೋಡಿದೆವು. ಸುಶ್ರುತ ನಮ್ಮ ಬಳಿಗೆ ಬಂದು, ಮಾಲತಿಯಕ್ಕ ಸ್ವಲ್ಪ ಕಾರ್ನರ್ ನಲ್ಲಿ ನಿಲ್ಲಿ, ಅಂತ ಹೇಳಿ ನನಗೆ ಅವರ ಮದುವೆ ಆಮಂತ್ರಣ ಪತ್ರಿಕೆ ಕೊಟ್ಟರು. ಮುಂದಿನ ತಿಂಗಳು ಮದುವೆ, ಎರಡು ದಿನ ನೀವಿರಬೇಕು..ಅಂತ...Invitation card ತುಂಬ ಚೆಂದ ಇದೆ, ಒಳಗಿನ ಒಕ್ಕಣೆ ಕೂಡ...after all poet ಮಂದಿ..

ಫಕ್ಕನೆ ನನ್ನ ಕಣ್ಣು ಒಬ್ಬರನ್ನು ಸಂಧಿಸಿತು, ಅರೇ ಶ್ರೀನಿಧಿ ಡಿ.ಎಸ್ ಅಂದುಕೊಳ್ಳಬೇಕಾದ್ರೆ ಅವರು ಕೈ ಎತ್ತಿದರು, ನಾನು reflex ನಲ್ಲಿ ಕೈ ಎತ್ತಿ, ನಾಚಿಕೊಂಡು ನನ್ನ ಹಿಂದೆಗಡೆ ನಿಂತವರಿಗೆ ಅವರು ಕೈ ಮಾಡಿದ್ದಿರಬೇಕೆಂದು ಹಿಂದೆ ನೋಡ್ತಿರಬೇಕಾದ್ರೆ, ಅವರು ಅಲ್ಲಿಂದಲೇ’ನಿಮಗೆ’ ಅಂತ ಹೇಳಿ ಹತ್ತಿರ ಬಂದಾಗ ನಾನೇ ಶ್ರೀನಿಧಿ ಡಿ.ಏಸ್. ಅಂದೆ...ಮತ್ತೇನು ವಿಶೇಷ ಅಂದಾಗ ವಿಶೇಷ ಸುಶ್ರುತ ಅವರದ್ದು ಮದುವೆ ಅಂದೆ, ನೀವು ಅವರ ಕಸಿನ್ ಆ ಅಂತಲೂ ಕೇಳಿದೆ..ಅದಕ್ಕೆ ಇಲ್ಲ ಒಂದೆ ಊರು, (ಸ್ಕೂಲು, ರೂಮ್ ಮೇಟ್ .ಅಂತೆಲ್ಲ ಕೇಳಿಸ್ತು..) ಬಟ್ ಅವರು ಒಂದೇ ಊರವರು ಮಾತ್ರ , ಸಾಹಿತ್ಯಿಕ ಫ್ರೆಂಡ್ ಅಂತೆ ಸುಶ್ರುತ post ಓದಿದ ಮೇಲೆ ಹೇಳಿದರು).ಅಷ್ಟರಲ್ಲಿ ನಿಹಾ, ಅಮ್ಮ, ನಿನ್ನನ್ನು ಮನು ಸರ್ ಗೆ ಪರಿಚಯ ಮಾಡಿಕೊಡ್ತೇನೆ ಅಂದ್ಲು. ನನಗೂ ಕುತೂಹಲ. ಮನೆಯಲ್ಲಿ ಅವಳು ’ನಮ್ಮ ಮನು ಸರ್ ಹಾಗೆ, ನಮ್ಮ ಮನು ಸರ್ ಹೀಗೆ ಎಂದಾಗಲೆಲ್ಲ ನನಗೆ ಹೊಟ್ಟೆಕಿಚ್ಚಾಗ್ತಿತ್ತು. ಯಾಕಂದ್ರೆ ಅವಳು ಯಾರ ಬಗ್ಗೇನು ಅಷ್ಟು ಪ್ರೀತಿಯಿಂದ  ಆತ್ಮೀಯತೆಯಿಂದ  ಮಾತಾಡಲ್ಲ. ನಮ್ಮದು ಹಲ್ಲೋ ನಮಸ್ಕಾರಗಳ ವಿನಿಮಯ ಆಯ್ತು.

ಆ ಮೇಲೆ ಪುಸ್ತ್ತಕ ಕೊಳ್ಳಲು ಹೋದೆವು. ಪುಸ್ತಕಕ್ಕಿಂತ ಪೇಪರ್ ಬ್ಯಾಗ್ ಮೇಲಿನ ಬ್ಲರ್ಬ್ ತುಂಬ ಇಷ್ಟ ಆಗಿ ನಾನು ವೇದಾ ಓದಿ ನಗ್ತಾ ಇದ್ವಿ.
(ಬ್ರಾಕೆಟ್ ಒಳಗಿದ್ದನ್ನು ಓದಿ)
 ಆ ಮೇಲೆ ಊಟ, ವಸುಧೇಂದ್ರ ಅವರಿಗೆ ಬೈ ಹೇಳಿ, ಲಾಸ್ಟ್ ನಲ್ಲಿ ಮಾಲವಿಕ ಹೆಸರೂ ಅವರ ಸ್ಕ್ರಾಲ್ ನಲ್ಲಿ ಸೇರಿಸಿದಕ್ಕೆ ಥ್ಯಾಂಕ್ಸ್ ಹೇಳಿ...it was a nice gesture on his part...ರಾತ್ರಿ ಮಾಲವಿಕ ಮನೆಗೆ ಬಂದ ಮೇಲೆ ಅವಳಿಗೆ ಹೇಳಿದೆ...’ಅಮ್ಮ ನಾನು ಕ್ರಿಸ್ಟಲ್ ನ ಅಂಗಡಿಯ ಎಡ್ರಸ್/ಫೋನ್ ನಂ ಎಸ್ ಎಮ್ ಎಸ್ ಮಾಡಿದ್ದು ಬಿಟ್ರೆ ಏನೂ ಮಾಡಿಲ್ಲ, how sweet of him ಅಂದಳು.

ಎದುರಿಗೆ ಸಿಕ್ಕ ಪ್ರಶಾಂತ ಆಡೂರ ರವರ ಹಸ್ತಾಕ್ಷರವನ್ನು ವೇದಾ ಅವರ ಪುಸ್ತ್ಕಕದ ಮೇಲೆ ಹಾಕಿಸಿ, ನಾನು ’ಮಾಲತಿ ಶೆಣೈ, ನಿಮ್ಮ ಫೇಸ್ ಬುಕ್ ಫ್ರೆಂಡ್ ’ ಅಂತ ನನ್ನನ್ನು ನಾನೆ  ಪರಿಚಯಿಸಿಕೊಂಡೆ. ಅಪಾರ ರಘು ಗೆ ಬೈ ಹೇಳಿ ನಾವು ಮೂರು ಜನ ಕಬ್ಬನ್ ಪಾರ್ಕ್ ನಲ್ಲಿ ಸ್ವಲ್ಪ ಗಂಟೆಗಳನ್ನು ಸ್ಪೆಂಡ್ ಮಾಡಿ, ವೇದ ಕೊಡಿಸಿದ ಐಸ್ ಕ್ರೀಮ್ ತಿಂದು, ತುಂಬ ತುಂಬ ಮಾತಾಡಿ (ಮಾತಾಡಿದ್ದು ನಾನೆ ಜಾಸ್ತಿ :-(...)

ಕಬ್ಬನ ಪಾರ್ಕ್ ಹೋಗ್ತಾ ಸಿಗ್ನಲ್ ನಲ್ಲಿ

ಎಂಜಾಯ ಮಾಡಿದೆ ನಿನ್ನೆ ದಿನ.

ಮನೆಗೆ ಬಂದು ಕುಟ್ಟವಲಕ್ಕಿ ಹಿಡಿದು ಕೂತೆ.ನನ್ನ ಅಕ್ಕ ಒಂದು ಸಲ ಕುಟ್ಟವಲಕ್ಕಿ ಮಾಡಿದ್ರು. ಅದನ್ನು ತಿನ್ನುವುದು ಹೇಗೆ ಅಂತ ಗೊತ್ತಿಲ್ಲದೆ, ಅದನ್ನು ಒಂದೆ ಸಲಕ್ಕ ಬಾಯಲ್ಲಿ ಮುಕ್ಕಿ, ಕೆಮ್ಮಿ, ಸೀನಿ, ಕಣ್ಣು ಮೂಗುಗಳಿಂದ ನೀರು ಸುರಿಸಿದ್ದು, ಶ್ರೀಕಾಂತ ಅದನ್ನು ಹೇಗೆ ತಿನ್ನುವುದು ಅಂತ ಹೇಳಿಕೊಟ್ಟಿದ್ದು ಎಲ್ಲ ನೆನಪಾಯಿತು. ಕುಟ್ಟ್ವವಲಕ್ಕಿಯನ್ನು (ಇದು ನಗಿಸಿ ನಗಿಸಿ ಕಣ್ಣಿಂದ ಮೂಗಿಂದ ನೀರು ಬರೆಸುತ್ತದೆ) ಮುಗಿಸಿ , ಆ ಮೇಲೆ ಆಫಿಸಿನ ಕೆಲವು ತುರ್ತು ಕೆಲಸಗಳನ್ನು ಮುಗಿಸಿ, ಆಮೇಲೆ ಫೇಸ್ ಬುಕ್ ಮೇಲೆ ಕಣ್ಣು ಹಾಯಿಸಿ.....ಆಮೇಲೆ....

ಹಾಂ, ನಾವು ಮನೆ ತಲುಪಿದ ಕೂಡಲೆ ಶ್ರೀಕಾಂತ ಕೇಳಿದ ಮೊದಲ ಪ್ರಶ್ನೆ...ಹೇಗಿತ್ತು ಫಂಕ್ಷನ್? ಬೋಳುವಾರ ಮಾಮ ಸಿಕ್ಕಿದ್ದರಾ?
ನಾನು programme was nice, ಹೌದು ಸಿಕ್ಕಿದ್ದರು. ನಿಮ್ಮ ಬಗ್ಗೆ ಕಂಪ್ಲೈನ್ ಮಾಡ್ದೆ..ಅಂದಾಗ ಹಾಹಾಹಾ ಹೊ ಹೊ ಹೊ..ನೀನು?? ಹೋಗಿ ಮಾತಾಡ್ಸೋದಾ?? ಸಾಧ್ಯಾನೆ ಇಲ್ಲ ಅಂದ್ರು...ಹತ್ತೆ ನಿಮಿಷ..ಬೋಳುವಾರ ಮಾಮ ಖುದ್ದು ಫೋನ್ ಮಾಡಿದ್ರು :-))))))))))))))))))))))))))))))))))))

ತಾರೀಕೂ 06.04.2012 ರಂದು ಛಂದ ಪ್ರಕಾಶನದಿಂದ ಬಿಡುಗಡೆಯಾದ ಪುಸ್ತಕಗಳು
1. ಕುಟ್ಟವಲಕ್ಕಿ - ಪ್ರಶಾಂತ ಆಡೂರ
2. ಆಟಿಕೆ - ಬಸವಣ್ಣೆಪ್ಪ ಕಂಬಾರ
3. ನಿರವಯವ - ನಾಗಾರಾಜ ವಸ್ತಾರೆ
:-)

April 6, 2012

ನೂತನ ಕಲಿಕಾ ವಿಧಾನ- ನನಗೀ ಪರಿಕಲ್ಪನೆ ಇಷ್ಟ ಆಯ್ತು

ನನಗೀ ಆಟದಿಂದ ಪಾಠದ ಪರಿಕಲ್ಪನೆ ತುಂಬ ಹಿಡಿಸಿತು. ಮೊದಲಿಗೆ ನನ್ನ ತಂಗಿಯ ಮಗಳು  8 ವರ್ಷ ವಯಸ್ಸಿನ ಶ್ರೇಯ ಕಳುಹಿಸಿದ ಅಂಚೆ ಲಕೋಟೆ ನೋಡಿ. ಇದನ್ನು ಅವಳು ಅವಳ ಶಾಲೆಯಿಂದ ಕಳುಹಿಸಿದ್ದು.
ಪೂರ್ತಿ 15 ದಿನದ ನಂತರ ಈ ಪತ್ರ ನನಗೆ ತಲುಪಿದೆ!!


ಈ ಪತ್ರ ಅವಳ ಟೀಚರ್ ದು. ಮೊದಲು ಇದನ್ನು ಓದಿ.

  ಸ್ಟ್ಯಾನ್ಲೀ ಚಪ್ಪಟೆ ಹೇಗಾದನೆಂದು  ಕತೆ ಹೇಳುತ್ತೆ, ಮತ್ತು ಅವನ ಪ್ರವಾಸದ ಕುರಿತು ಅವರ ಟೀಚರ್ ಏನು ಹೇಳುತ್ತಾರೆ ಅಂತ ಓದಿ..self explanatory



Meet Mr. Flat Stanley,   ಶಿಕಾಗೋ ದಿಂದ ಭಾರತಕ್ಕೆ, ನನ್ನ ಮನೆಗೆ ಬಂದಿಳಿದಿದ್ದಾನೆ.





ಮ್ಹಾವೆ ಅಂದರೆ ದೊಡ್ಡಮ್ಮ...mmmmuah love you too/three/four much ಶ್ರೇಯು ಮಣಿ



Flat Stanley in Indian Attire, Mundu,/VesTi, top/Vest, anga vastram and mysore peta... ಹೆಂಗೆ?? ಶ್ರೇಯ ಗಿಂತ ನಾನೇ ಹೆಚ್ಚು ಎಗ್ಸೈಟ್ ಆಗಿ...ಒಳ್ಳೆ ಮಗು ತರಹ ಆಡ್ತೀಯ ಅನ್ನಿಸಿಕೊಂಡೆ!!ಭಾರತದ ದಿರಿಸಿನಲ್ಲಿ ಹೇಗೆ ಕಾಣುತ್ತಾನೆ ಸ್ಟ್ಯಾನ್ಲೀ??
ಶ್ರೇಯಾ ಗೆ ನಾನು ಬರೆದ ಪತ್ರ....



ಚೆನ್ನಾಗಿದೆಯಲ್ಲವಾ ಈ ಕಾನ್ಸೆಪ್ಟ್?ಸ್ಟ್ಯಾನ್ಲೀ ಶಿಕಾಗೊ ತಲುಪಿದ ಮೇಲೆ ಏಪ್ರಿಲ್ 9 ರಂದು ಅವನಿಗೆ ಹೋಮ್ ಕಮಿಂಗ್. ಆ ದಿನ ಅವರ ಕ್ಲಾಸ್ ಟೀಚರ್ ಬೋರ್ಡ್ ಮೇಲೆ ಇಡೀ ವಿಶ್ವದ ನಕ್ಷೆ ಇಟ್ಟು..ಮಕ್ಕಳಿಂದ , ಚಿಕಾಗೋ ದಿಂದ ಬೇರೆ ಬೇರೆ ದೇಶಕ್ಕೆ ಸಂಚಾರಕ್ಕೆ ಹೋಗಿ ಬಂದ ಸ್ಟ್ಯಾನ್ಲೀ,  ದಾರ ಕಟ್ಟಿ (for eg the teacher will fix a spot India on the world map and then tie a string from Chicago to India) ಎಷ್ಟು ದೂರ ಪ್ರಾಯಾಣ ಮಾಡಿದಾರೆಂದು, ಹಾಗೂ ಆಯಾ ದೇಶದ ವಿಶಿಷ್ಟತೆಗಳನ್ನು ಓದಿಸುತ್ತಾರಂತೆ...


Stanley's account of his stay in India



ನನ್ನ ತಂಗಿ ಅವರ ಶಾಲೆ ಹೋಗಿ ಟೀಚರ್ ಪರ್ಮಿಶನ್ ತೆಗೊಂಡು ಅಲ್ಲಿನ bulletin board ನ ಚಿತ್ರ ಕಳುಹಿಸುತ್ತಾಳಂತೆ.
i enjoyed a lot. ನೀವು?? ಈ ತರಹದ ಕಲಿಕೆಯಿಂದ ಮಕ್ಕಳ ಮನಸ್ಸಿನಲಿ ಅವರು ಕಲಿತದ್ದು ಹೆಚ್ಚು ಸಮಯ ಉಳಿಯುತ್ತೆ ಅಲ್ಲ್ವವ?
:-)

April 1, 2012

ಉಪ್ಪಿಗೆ ಹಾಕಿಟ್ಟ ಹಲಸಿನ ತೊಳೆ / ಸೊಳೆ ಪಲ್ಯ, ರಾಮನವಮಿ

Raw jackfruit in Brine.
ಬಲಿತ ಹಲಸಿನಕಾಯಿಯನ್ನು ಬಿಡಿಸಿ, ಅದರ ತೊಳೆಗಳಿಂದ ಬೀಜ ಬೇರ್ಪಡಿಸಿ ತೊಳೆಗಳನ್ನು ಉಪ್ಪಿಗೆ ಹಾಕಿಡುವದರಿಂದ ಅದು ಸುಮಾರು 5-6 ವರ್ಷ ಕೆಡದೆ ಇರಿಸಬಹುದು. ಅದರಿಂದ ಪಲ್ಯ, ದೋಸೆ, ಆಂಬೋಡೆ ಮುಂತಾದವುಗಳನ್ನು ಮಾಡಬಹುದು. ಇವೆಲ್ಲ ಮಳೆಗಾಲದ ವಿಶೇಷ ತಿನಿಸಿಗಳು. ಗಂಜಿ ಜತೆಗೆ sooper!!
ಉಪ್ಪಿನಲಿ ಹಾಕಿಡುವ ವಿಧಾನ:
ಮೊದಲಿಗೆ ಒಂದು layer (ಲೇಯರ್) ಹರಳುಪ್ಪು, ಅದರ ಮೇಲೆ ಬಿಡಿಸಿದ ತೊಳೆ..ಪುನ: ಅದರ ಮೇಲೆ ಹರಳುಪ್ಪು. ಕೊನೆಯಲ್ಲಿ ಎರಡು ಮೂರು ಲೇಯರ್ ಹರಳುಪ್ಪು ಹಾಕಿ, ಕೈ ನಿಂದ ಸ್ವಲ್ಪ ಒತ್ತಿ ಗಾಳಿ ಸೋಕದಂತೆ ಬರಣಿ ಅಥವಾ ಗಾಜಿನ ಬಾಟಲಿಯಲ್ಲಿ ಹಾಕಿಡಿ. ಕೆಲ ದಿನಗಳ ನಂತರ ಉಪ್ಪೆಲ್ಲ ಕರಗಿ ನೀರಾಗುತ್ತದೆ. Salt is the best preservative.



ಹಲಸಿನ ಕಾಯಿ ತಂದ ದಿನ ನಮ್ಮ ಅಡಿಗೆ ಮನೆ ಹೀಗೆ. ಪಾತ್ರೆ ಯಲ್ಲಿರುವುದು ಇಡೀ ತೊಳೆ. ಆಮೇಲೆ ಅದರಿಂದ ಬೀಜ ಹಾಗೂ  fibre ಬೇರ್ಪಡಿಸಬೇಕು. ಅಂದಹಾಗೆ ಬೀಜಗಳನ್ನೂ ನಾವು ಅಡಿಗೆಯಲ್ಲಿ ಬಳಸುತ್ತೇವೆ..especially with tender bamboo shoots (:-) ಏನೆಲ್ಲ ತಿನ್ತಾರಪ್ಪ ಕೊಂಕಣಿಗಳು ಅಂದುಕೊಳ್ಳತಾ ಇದ್ದೀರಾ???)

ಪಲ್ಯ ಮಾಡುವ ದಿನ ಕೆಲವು ತೊಳೆಗಳನ್ನು ಸ್ವಚ್ಛವಾದ ನೀರಿನಲ್ಲಿ ಹಾಕಿಡಿ. ಇದರಿಂದ ತೊಳೆಗಳಲ್ಲಿ ಇದ್ದಂತಹ ಹೆಚ್ಚಿನ ಉಪ್ಪಿನಂಶ ತೆಗೆದ ಹಾಗಾಗುತ್ತದೆ.
ಉಪ್ಪು ನೀರಿನಿಂದ ತೆಗೆದಿಟ್ಟ ತೊಳೆಗಳು

ಆ ಮೇಲೆ ಹೀಗೆ ಚಿಕ್ಕ ಚಿಕ್ಕದಾಗಿ ಕತ್ತರಿಸಿ ಪುನಃ ನೀರಿನಲ್ಲಿ ಹಾಕಿಡಿ.ನಾನು ಮೂರು ನಾಲ್ಕು ಗಂಟೆ ನೀರಿನಲ್ಲಿ ಹಾಕಿಡುತ್ತೇನೆ.

ಒಗ್ಗರಣೆಗೆ : ಎಣ್ಣೆ, ಸಾಸಿವೆ, ಹಿಂಗು ನೀರು, ಕೆಂಪು ಒಣ ಮೆಣಸಿನಕಾಯಿ...ಉಪ್ಪು ಹಾಕಬೇಡಿ.ಒಗ್ಗರಣೆ ರೆಡಿಯಾದ ಮೇಲೆ ನೀರಿನಲ್ಲಿ ಹಾಕಿಟ್ಟ ಕತ್ತರಿಸಿದ ತೊಳೆಗಳನ್ನು ಗಟ್ಟಿಯಾಗಿ ಹಿಂಡಿ ಒಗ್ಗರಣೆಯಲ್ಲಿ ಹಾಕಿ.  ಸ್ವಲ್ಪ ನೀರು ಹಾಕಿ ಬೇಯಿಸಿ. ಕೊನೆಯಲ್ಲಿ ಬೇಕಿದ್ದಲ್ಲಿ ಕಾಯಿ ತುರಿ ಬೆರೆಸಬಹುದು. ಕೊಂಕಣಿಗಳ fav dish. ದಾಳಿತೊವ್ವೆ ಜತೆ terrific ಕೊಂಬಿನೇಶನ್ ಮಾಲವಿಕ ಳ ಪ್ರಕಾರ.

ಪಲ್ಯ ಇನ್ನೊಂದು ರೀತಿ:
ಎಣ್ಣೆ, ನಾಲ್ಕೈದು ಜಜ್ಜಿದ ಬೆಳ್ಳುಳ್ಳಿ ಎಸಳು, ಕೆಂಪು ಮೆಣಸಿನಕಾಯಿ..ಉಳಿದ method ಮೇಲಿನ ಹಾಗೆ. ಕಾಯಿ ಹಾಕಬೇಕಾಗಿಲ್ಲ. ಹೊರಗೆ ಧೋ ಅಂತ ಮಳೆ ಸುರೀತಿದ್ರೆ, ಕೆಂಪಕ್ಕಿ (ಕುಚ್ಚಲಕ್ಕಿ) ಅನ್ನದ ಗಂಜಿ + ತುಪ್ಪ + ಹಲಸಿನ ತೊಳೆ ಪಲ್ಯ...ಯಾರಿಗುಂಟು ಯಾರಿಗಿಲ್ಲ??

ಅಂದ ಹಾಗೆ ಪಲ್ಯದ ಚಿತ್ರ ಎಲ್ಲಿ ಅಂದ್ರಾ?? ಅದು ತಿಂದು ಖಾಲಿಯಾದ ಮೇಲೆ ಫೋಟೊ ತೆಗಿಲಿಲ್ಲ ಅಂತ ನೆನಪಾಯ್ತು. ಇಲ್ಲಿ ಹಾಕಿದ ಚಿತ್ರ ನನ್ನಲ್ಲಿದ್ದ ಕೊನೆಯ stock!! ನಾವು ಈ ಪಲ್ಯ ಮಾಲವಿಕ/ನಿಹಾ ಗೆ ತಿನ್ನುವ ಮೂಡ್ ಬಂದಾಗಲೆಲ್ಲ ಮಾಡುತ್ತಿರುತ್ತೇವೆ...ಮಳೆಗಾಲಕ್ಕೆ ಕಾಯಲ್ಲ...ಮುಂದಿನ ಸಲ ನೆನಪಿನಿಂದ ಫೋಟೊ ಹಾಕುತ್ತೇನೆ.
(this photo added here on August 09, 2012) :-)


ಇಲ್ಲಿದೆ ಉಪ್ಪಿಗೆ ಹಾಕಿಟ್ಟ ಮಾವಿನಕಾಯಿ..ಇದರ recipe ಮುಂದಿನ ಸಲ .ಈ ಗಾಜಿನ ಭರಣಿಯಲ್ಲಿ ಮೊದಲಿದ್ದುದ್ದು ಹಲಸಿನ ತೊಳೆಗಳು. ಅದಕ್ಕೆ ಈ ಚಿತ್ರ ಹಾಕಿದ್ದೇನೆ

ಈಗ ಸ್ವಲ್ಪ ಸೀರಿಯಸ್ ವಿಷಯಕ್ಕೆ ತೆರಳುವಾ?? ನಮ್ಮ ಹಲಸಿನ ಪ್ರೀತಿ ಅದನ್ನು ಮಾಡಿ ತಿನ್ನುವದಕ್ಕಷ್ಟೆ ಸೀಮಿತ. ಆದರೆ ನಮ್ಮ ಆಪ್ತ ಮಿತ್ರ ’ ಶ್ರೀ ಪಡ್ರೆ”ಯವರು ಹಲಸಿನ ಬಗ್ಗೆ ವಿಶೇಷವಾದ ಪ್ರೀತಿ ಮತ್ತು ಕಾಳಜಿ ಹೊಂದಿದ್ದಾರೆ. ದೇಶ ವಿದೇಶದಲ್ಲೆಲ್ಲ ಸಂಚರಿಸಿ , ಹಲಸು, ಅದರ ವಿವಿಧ ತಳಿಗಳು, ಅದರ propagation, ಸಂಸ್ಕರಣೆ, ಮೌಲ್ಯವರ್ಧನೆ, ಅದನ್ನು ಅಡುಗೆಯಲ್ಲಿ ಬಳಸುವ ರೀತಿ ಎಲ್ಲವನ್ನೂ war footing ನಲ್ಲಿ ನಿರ್ವಹಿಸುತ್ತಾ...ಕಲೆ ಹಾಕಿರುವ ಮಾಹಿತಿಯನ್ನು ಅಡಿಕೆ ಪತ್ರಿಕೆ ಮತ್ತು civil Society magazine ಮುಖಾಂತರ ಜನಸಾಮಾನ್ಯರಿಗೂ ಒದಗಿಸುತ್ತಿದ್ದಾರೆ. ರೈತರಿಗೆ ಜೀವನಾಧಾರ. ಭಾರತದಲ್ಲಿರುವ ಹಸಿವೆಯ - ಪೌಸ್ಟಿಕಾಂಶದ(hunger/malnutrition)ಕೊರತೆಯನ್ನು ಹಲಸು ನೀಗಿಸಬಹುದೇ? ಇದರ ಬಗ್ಗೆ ಜನರಿಗೆ ಹೆಚ್ಚಿನ ಮಾಹಿತಿಯ ಕೊರತೆಯಿದೆ. ಭಾರತದಲ್ಲಿ ಸುಲಭವಾಗಿ ಬೆಳೆಸಬಹುದಾದ ಒಂದು crop ಇದು. ತರಕಾರಿ ಹಾಗೂ ಹಣ್ಣುಗಳ ರೂಪದಲ್ಲಿ ಇದರ ಸೇವನೆ.  carbohydrate, ಪ್ರೋಟೀನ್, ಪೊಟ್ಯಾಶಿಯಮ್ ಮತ್ತು ವಿಟಾಮಿನ್ ಹೆಚ್ಚಿನ ಪ್ರಮಾಣದಲ್ಲಿ ಹಲಸಲ್ಲಿ ಸಿಗುತ್ತದೆ. Nutritional facts in Jackfruit ಅಂತ ಗೂಗಲಿಸಿದರೆ ಹಲವಾರು ಜಾಲತಾಣಗಳು ತೆರೆದುಕೊಳ್ಳುತ್ತವೆ.

ಕಳೆದ ಮೂರು ನಾಲ್ಕು ವರ್ಷ ರಾಜ್ಯದ ನಾನಾ ಭಾಗಗಳಲ್ಲಿ ಹಲಸು ಮೇಳ ನಡೆಯುತ್ತಿವೆ.

ಈಗಂತು RTC ,ರೆಡಿ ಟು ಈsಟ ಹಲಸಿನ ಖಾದ್ಯಗಳೂ ಮಾರುಕಟ್ಟೆಯಲ್ಲಿ ದಾಳಿ ಯಿಟ್ಟಿವೆ . (ಆರ್ ಟಿ ಸಿ (RTC) = Ready to Cook)

ಶ್ರೀಕಾಂತ ಹಿಂದಿನ ತಿಂಗಳು ಕುವಾಲಾಲಂಪುರ್- ಇಂಡೋನೇಶಿಯ- ಬಾಂಡುಂಗ್ ಗೆ ಹೋಗಿದ್ದರು.ಅವರು ಹೊರಡುವ ಹಿಂದಿನ ದಿನ ನನಗೆ ಶ್ರೀ ಪಡ್ರೆಯವರು skype ನಲ್ಲಿ ಚ್ಯಾಟ್ ಗೆ ಸಿಕ್ಕಿದ್ದರು.ಶ್ರೀಕಾಂತ ರಾಯರು ಪರ ಊರಿಗೆ ಹೊರಟಿದ್ದರಿಂದ ಬಿಸಿ ಅಂದಾಕ್ಷಣ..ಯಾವ ಊರು, ಏನು ಕತೆ ಎಲ್ಲ ತಿಳಿದುಕೊಂಡು ಹತ್ತೆ ನಿಮಿಷದಲ್ಲಿ  e-ಮೈಲ್ ಗಳ ಸರಮಾಲೆ. ಅದರಲ್ಲಿ ಇಂಡೋನೇಶಿಯದಲ್ಲಿ ಅವರಿಗೆ ಪರಿಚಯ ಆಗಿದ್ದವರ ಹೆಸರು, ವಿಳಾಸ ಹಾಗೂ ಫೋನ್ ನಂ ಮತ್ತು ಹಲಸಿನ ಬಗ್ಗೆ ಹೊಸ ಮಾಹಿತಿ ಏನಾದರೂ ಸಿಗಬಹುದೇ...ಸಿಕ್ಕಿದ್ದರೆ ಫೋಟೊ ಸಮೇತ ಅದರ ಬಗ್ಗೆ ವರದಿ ಕೊಡಬಹುದೆ..ಮುಂತಾದವು..
ಬಾಂಡುಂಗ್ ನಲ್ಲಿ ಶ್ರೀಕಾಂತ ಮತ್ತು ಟೀಮ್ ತಂಗಿದ್ದ ಹೋಟಲ್ ನಲ್ಲಿ ಹಲಸಿನ ಹಣ್ಣಿನ ಕ್ರೊಯ್ಸೋ (croissant) ತಿನ್ನಲ್ಲಿಕ್ಕೆ ಸಿಕ್ಕಿದು ವಿಶೇಷ...

ಕುವಾಲಾಲಂಪುರ್ ನಿಂದ ತಂದ ಒಂದು ವಿಶೇಷ ತಳಿಯ ಹಲಸಿನ (ತುಳುವೆ) ಬೀಜಗಳಿಗೆ ಮೊಳಕೆ ಬಂದಿದೆ.ಕೇಸರಿ ಮತ್ತು ತೆಳು ಹಳದಿ ಬಣ್ಣದ ತೊಳೆ, ಉರುಟಾದ ಬೀಜ. ಮೂರು ದಿನ suitcase ನಲ್ಲಿದ್ದಿದ್ದಕೋ ಏನೋ ಅದರ ರುಚಿ ಸರಿಯಾಗಿ ಗೊತ್ತಾಗಲಿಲ್ಲ. :-) ಮುಂದಿನ ವಾರ ಅದನ್ನು ತೀರ್ಥಹಳ್ಳಿಯ ತೋಟದಲ್ಲಿ ನೆಡಬೇಕಾಗಿದೆ.




ಇವತ್ತು ರಾಮನವಮಿ. ಇದು ತೀರ್ಥಹಳ್ಳಿಯ ಕೋದಂಡರಾಮ ದೇವುಳ. ಚಿತ್ರದಲ್ಲಿರುವವರು ಶ್ರೀ ನಾಗೇಶ ಭಟ್ಟ ಮಾಮ. ಒಳ್ಳೆ ಫೋಟೊಗ್ರಾಫರ್, ಚಿತ್ರಕಾರರು, ಪ್ರಗತೀಪರ ಕೃಷಿಕರು ಮತ್ತೀಗ ಅವರು ಔಷಧೀಯ ಸಸ್ಯಗಳನ್ನು ಬೆಳೆಸುತ್ತಿದ್ದಾರೆ

ಈ ದಿನ ಅಲ್ಲಿ ಪಲ್ಲಕ್ಕಿ ಉತ್ಸವ ನಡೆಯುತ್ತದೆ. ಮುಂಚೆ ನಮ್ಮ ಅಂಗಡಿಯಲ್ಲಿ ರಾಮನವಮಿ ದಿನ ದೊಡ್ಡ ದೊಡ್ಡ ಪಾತ್ರೆಯಲ್ಲಿ ಪಾನಕ ಕೋಸಂಬರಿ ಮಾಡಿಟ್ಟು ಅದನ್ನು ಅಂಗಡಿಯಲ್ಲಿ ಇಡುತ್ತಿದ್ದರಂತೆ, ಅಂಗಡಿಗೆ ಬಂದವರಿಗೆಲ್ಲ ಪ್ರಸಾದದ ರೂಪದಲ್ಲಿ ಇವನ್ನು ವಿತರಿಸಲಾಗುತ್ತಿತ್ತು.  ನಾನು ಮದುವೆಯಾಗಿ ಅಲ್ಲಿಗೆ ಹೋದಾಗ ಕೇವಲ ಪಾನಕ ಮಾತ್ರ ಮಾಡಿಡುತ್ತಿದ್ದರು. ಏಕಾದಶಿಯ ದಿನ ಒಮ್ಮೆ ನನ್ನ ಅಕ್ಕ ನನ್ನನ್ನು ಸಂಜೆಯ ಫಲಾಹಾರಕ್ಕೆ ಶ್ರೀ ಕೋದಂಡರಾಮ ದೇವಸ್ಥಾನಕ್ಕೆ ಕರೆದೊಯ್ದಿದ್ದರು, ಅಲ್ಲಿ ಬಡಿಸಿದ ಕಲಿಸಿದ ಅವಲಕ್ಕಿ, ಚಣಾ ಉಸ್ಲಿ ಮತ್ತು ಪಾನಕದ ರುಚಿ ಇನ್ನೂ ಮರೆಯಲಾಗಿಲ್ಲ.


ಎಲ್ಲರಿಗೂ ರಾಮನವಮಿಯ ಶುಭಾಶಯಗಳು. ಎಲ್ಲರೂ ಕೋಸಂಬರಿ ಪಾನಕದ ಜತೆ sunday enjoy ಮಾಡಿ. ನಮ್ಮ ಮನೆಯಲ್ಲಿ ಶ್ರೀಕಾಂತ ಆಫಿಸ್ ಕೆಲಸ ಮೇಲೆ ಹಳ್ಳಿಗೆ, ಮಾಲವಿಕ ಕೆಲಸಕ್ಕೆ ...so ನಮ್ಮ ಮನೆಯಲ್ಲಿ ಮಾವಿನಕಾಯಿ ಕೋಸಂಬರಿ, ಪಾನಕ ಸಮಾರಾಧನೆ ರಾತ್ರಿ ಅವರಿಬ್ಬರೂ ಬಂದ ಮೇಲೆ. ಅಡಿಗೆ ಮನೆಯ ಪಕ್ಕದಲ್ಲಿರುವ ರಾಮ ಮಂದಿರದಿಂದ ಅಗರ ಬತ್ತಿ, ಹೋಮ ಹವನದ ಪರಿಮಳ, ಗಳಿಗೆಗೊಂದಾವರ್ತಿ ಗಂಟೆಯ ನಾದ, ಸಣ್ಣಕ್ಕೆ ಹಾಕಿದ ಪ್ರವೀಣ ಗೋಡಖಿಂಡಿ ಅವರ ಕೊಳಲ  ಸಂಗೀತ..ಅಲ್ಲಿ ಹೋದರೂ  ಕೋಸಂಬರಿ ಸಿಕ್ಕೇ ಸಿಕ್ಕುತ್ತೆ....

Photo of panaka + kosambri and Jackfruit saplings by niha
:-)

March 27, 2012

ಪುಟ್ಟು ಪ್ರಹಸನ ಇನ್ನಷ್ಟು...

ನನ್ನ ಪುಟ್ಟನ ಇನ್ನಷ್ಟು ಸಂಭಾಷಣೆಗಳು (ಪುಟ್ಟು ನನ್ನ ಮನೇ ಮಾಲೀಕರ 4 ವರ್ಷದ  ಮೊಮ್ಮಗ)
"ಪುಟ್ಟು,ಗಗನ್ ಈಗ ಮಾತಾಡ್ತಾನಾ?" (ಮೊನ್ನೆ ದಿನಾ ಇಡಿ ಗಗನ್, ’ಅಕ್ಕ’ ಅನ್ನುವ ಪದವನ್ನು ಅಕ್ಕ್, ಅಕ್ಕಾ, ಅಕ್ಕಾssss, ಅಕ್ಕಕ್ಕಾ..........ಅಂತೆಲ್ಲ ಹೇಗೆಲ್ಲ ಸಾಧ್ಯ ಹಾಗೆಲ್ಲ ನಾಲಿಗೆ ಮೇಲೆ ಹೊರಳಿಸ್ತಾ ಇದ್ದ)
"ಮಾತಾಡೋದಾ ಆಂಟಿ, ಬೈಗಳನ್ನೆಲ್ಲ ಕಲಿತು, ನನಗೆ ಬೈತಾನೆ ಅವನು" :-))) (ಗಗನ್ ಮೊನ್ನೆ ಒಂದು ವರ್ಷದ ಹುಟ್ಟು ಹಬ್ಬ ಆಚರಿಸಿದ)

ರಜೆ ಶುರು ಆಗುವ ಮುನ್ನ  ಶಾಲೆಯಲ್ಲಿ ಸರಸ್ವತಿ ಪೂಜೆ ದಿನ ಹೊಸ ಡ್ರೆಸ್ ಹಾಕ್ಕೊಂಡು ’ಆಂಟಿ, ಚೆನ್ನಾಗಿದೆಯಾ?’ ಅಂತ  ಕೇಳಿದ. ಫೋಟೊ ತೆಗೀಲಾ ಪುಟ್ಟ ಅಂದಾಗ ಹೂಂ ಆಂಟಿ ಅಂದ...ನಿಹಾ ಇರಲಿಲ್ಲ...ನಾನೆ ತೆಗೆದದ್ದು :-)


"ಐ ಲವ್ ಯು ಕಣೋ ಪು......"
"ಐ ಲವ್ ಯು ಟೂ ಆಂಟಿ" (ನಾನು ಪೂರ್ತಿ ಒಂದು ವಾಕ್ಯ ಪೊರೈಸುವ ಮೊದಲೆ ಅವನು ಉತ್ತರಿಸಿ ಆಗಿರುತ್ತೆ)

"ಆಂಟಿ, ನೀವು ನನಗೂ ಪುಟ್ಟೂ, ಗಗ್ನಿ (his pet name for his younger brother Gagan) ಗೂ ಪುಟ್ಟು ಅಂತೀರಾ..ನನಗೆ confuse ಆಗತ್ತೆ.".:-)

"ಆಂಟಿ ನೆನ್ನೆ ಪೀಸ್ ಮಾರ್ ಖಾನ್ ಪಿಚ್ಚರ್ ನೋಡೋಕೆ ಹೋಗಿದ್ವಿ"
"ಹೋಯ್ ಪುಟ್ಟಣ್ಣ, ಅದು ಪೀಸ್ ಮಾರ್ ಖಾನ್ ಅಲ್ಲ...ತೀಸ್ ಮಾರ್ ಖಾನ್’
"ಎಂತದ್ದೋ ಒಂದು, ಅಮ್ಮನಿಗೆ ಅಕ್ಷಯ ಕುಮಾರ್ ಇಷ್ಟ ಅಂತೆ ಅದಕ್ಕೆ"
"ಚೆನ್ನಾಗಿತ್ತ" ನಾನು ಕೇಳಿದೆ
"ಅಯ್ಯೋ ಡಬ್ಬ ಪಿಚ್ಚರ್ ಆಂಟಿ" ನನಗೆ ಶಿವರಾಜಕುಮಾರ್ ಪಿಚ್ಚರೇ ಇಷ್ಟ. ಜೋಗಿ ಪಿಚ್ಚರ್ ಮೂರು ಸಲ ನೋಡ್ದೆ.
'ಬೇಡುವೆನು ವರವನ್ನು ಅಂತ  ಒಂದು ಹಾಡು ಹೇಳಿ ತೋರಿಸಿದ..( ಆ ಸಿನಿಮಾದ ಹಾಡಾ ನನಗಂತೂ ಗೊತ್ತಿಲ್ಲ.:-)
:-)

March 22, 2012

ನಂದನ ಸಂವತ್ಸರ- ಯುಗಾದಿ ಹಬ್ಬದ ಶುಭಾಶಯಗಳು


ಶುಭಾಶಯ ಪತ್ರಿ,  ಶ್ರೀಕಾಂತ ನನಗೋಸ್ಕರ ಮಾಡಿಕೊಟ್ಟಿದ್ದು. ಚಿತ್ರದಲ್ಲಿರುವ ಲ್ಯಾಂಪ್ ನನ್ನದು. ಫೋಟೊ ತೆಗೆದಿದ್ದು as usual ನಿಹಾರಿಕಾ.
ಈ ದೀಪ special ದೀಪ.  usually ಎಲ್ಲರೂ ಮೆಟ್ಟಿಲ ಮೇಲೆ ಜೋಡಿ ದೀಪ ಬೆಳಗಿಸಿದರೆ ನಾನು ಒಂಟಿ ದೀಪ ಬೆಳಗಿಸುವುದು. ಎಲ್ಲರೂ ಯಾಕೆ ಎಂದು ಕೇಳುತ್ತಾರೆ. ಆದರೆ ನನ್ನ ಬಳಿ ಇದಕ್ಕೆ ಉತ್ತರವಿಲ್ಲ. ಪ್ರತಿ ಸಲ ಈ ದೀಪವನ್ನು ನಾನು ಮೆಟ್ಟಿಲ ಬಲಬದಿಗೆ ಇಡುವಾಗ ನಾನು ಉದ್ದ ಲೈಟ್ ಹೌಸ್ (ಹೂಂ ಗೊತ್ತು ನಾನು ಬರೇ 5' 2" ಆದ್ರೂ)  ಎನೋ ಎಂಬಂತೆ ಭಾಸವಾಗುತ್ತೆ. ಲೈಟ್ ಹೌಸ್ ಎಲ್ಲರಿಗೂ ಗೊತ್ತಿರಬಹುದು ಎಂದು ನನ್ನ ಅನಿಸಿಕೆ.ಹಿಂದಿನ ಕಾಲದಲ್ಲಿ ಹಡಗುಗಳಿಗೆ ದಾರಿ ದೀಪವೆಂಬಂತೆ  ಬೆಳಗಿಸುತ್ತಿದ್ದರು. 
ನನ್ನ ಈ ದೀಪ ಗಾಳಿ, ಮಳೆ , ಚಳಿಗೆ ಒಂದೆ ತರಹ ಬೆಳಗುತ್ತದೆ (ಎಣ್ಣೆ ಖಾಲಿ ಯಾಗುವ ತನಕ)
love you dear lamp......
ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು
:-)